in ,

ನೆಲ್ಲಿಕಾಯಿಯ ಜ್ಯೂಸ್ ಕುಡಿಯಿರಿ, ಹಲವು ಲಾಭ ಪಡೆಯಿರಿ

ನೆಲ್ಲಿಕಾಯಿಯ ಜ್ಯೂಸ್
ನೆಲ್ಲಿಕಾಯಿಯ ಜ್ಯೂಸ್

ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಇರುವುದರಿಂದ ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕೆ ಯಾವೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ನೆಲ್ಲಿಕಾಯಿಯನ್ನು ಆಯುರ್ವೇದದಲ್ಲಿ ವಿಶೇಷ ಆಹಾರವೆಂದು ಪರಿಗಣಿಸಲಾಗುತ್ತದೆ. ವಿಟಮಿನ್ ಸಿ ಸಮೃದ್ಧವಾಗಿರುವ ಈ ಹುಳಿ ಹಣ್ಣು ವಿವಿಧ ಪೋಷಕಾಂಶಗಳ ಉಗ್ರಾಣವಾಗಿದೆ. ಇದನ್ನು ಹಲವು ವಿಧಗಳಲ್ಲಿ ಬಳಸಲಾಗುತ್ತದೆ. ಅನೇಕ ಜನರು ಇದನ್ನು ಒಣ ಅಥವಾ ಹಸಿಯಾಗಿ ತಿನ್ನಲು ಇಷ್ಟಪಡುತ್ತಾರೆ, ಆದರೆ ಅನೇಕರು ಅದರ ರಸವನ್ನು ಕುಡಿಯಲು ಇಷ್ಟಪಡುತ್ತಾರೆ.

ನೆಲ್ಲಿಕಾಯಿ ಮಾರ್ಕೆಟ್ ನಲ್ಲಿ ಎಲ್ಲಾ ಕಾಲದಲ್ಲೂ ದೊರೆಯುತ್ತದೆ. ಇದನ್ನು ಪ್ರತಿನಿತ್ಯ ತಿಂದರೆ ದೇಹಕ್ಕೆ ಅಗತ್ಯವಾದ ಪೋಷಕಾಂಶ ದೊರೆಯುತ್ತದೆ, ಕೂದಲು ಉದುರುವ ಸಮಸ್ಯೆ ಕಂಡು ಬರುವುದಿಲ್ಲ. ನೆಲ್ಲಿ ಕಾಯಿಯಿಂದ ಆಮ್ಲ ಜ್ಯೂಸ್ ತಯಾರಿಸಲಾಗುತ್ತದೆ, ಯಾವುದೇ ಆರ್ಯುವೇದ ಅಂಗಡಿಗಳಲ್ಲಿ ಕೇಳಿದರೆ ಈ ಜ್ಯೂಸ್ ದೊರೆಯುತ್ತದೆ. ಇದನ್ನು ಪ್ರತಿನಿತ್ಯ ನಿಗದಿತ ಪ್ರಮಾಣದಲ್ಲಿ ಸೇವಿಸುತ್ತಾ ಬಂದರೆ ಅನೇಕ ಆರೋಗ್ಯಕರ ಗುಣಗಳನ್ನು ಪಡೆಯಬಹುದು.

ನೆಲ್ಲಿಕಾಯಿಯ ಜ್ಯೂಸ್ ಕುಡಿಯಿರಿ, ಹಲವು ಲಾಭ ಪಡೆಯಿರಿ
ದೇಹದಲ್ಲಿರುವ ಅಧಿಕ ಕೊಬ್ಬಿನಂಶ ಕರಗುತ್ತದೆ

ನೆಲ್ಲಿಕಾಯಿ ಜ್ಯೂಸ್ ಅತ್ಯಂತ ಆರೋಗ್ಯಕರವಾಗಿದೆ. ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ವಿಟಮಿನ್ ಸಿ ಯ ಮೂಲಗಳಲ್ಲಿ ಒಂದಾಗಿದೆ. ನೆಲ್ಲಿಕಾಯಿ ನಮ್ಮ ದೇಹಕ್ಕೆ ಅಗತ್ಯವಾದ ಕಬ್ಬಿಣ ಮತ್ತು ಕ್ಯಾಲ್ಸಿಯಂ ಅಂಶವನ್ನು ಒದಗಿಸುತ್ತದೆ. ಚರ್ಮ ಕೂದಲಿಗೆ ಹಾಗೂ ತೂಕ ಇಳಿಕೆಗೂ ನೆಲ್ಲಿಕಾಯಿ ತುಂಬಾ ಪ್ರಯೋಜನಕಾರಿಯಾಗಿದೆ.

ಅನಿಯಮಿತ ಹಸಿವು ಬರದಂತೆ ತಡೆಯುತ್ತದೆ. ಜತೆಗೆ ಅನಾರೋಗ್ಯಕರ ಆಹಾರ ಮತ್ತು ಅತಿಯಾಗಿ ತಿನ್ನದಂತೆ ಮಾಡುತ್ತದೆ. ಇದರಿಂದ ಕಡಿಮೆ ಕ್ಯಾಲೊರಿಗಳನ್ನು ಸೇವಿಸುತ್ತೀರಿ ಮತ್ತು ತ್ವರಿತವಾಗಿ ತೂಕವನ್ನು ಕಳೆದುಕೊಳ್ಳಬಹುದು.

ಅಸ್ತಮಾವನ್ನು ಕಮ್ಮಿ ಮಾಡುತ್ತದೆ ಇದನ್ನು ನಿಗದಿತ ಪ್ರಮಾಣದಲ್ಲಿ ಜೇನು ಜೊತೆ ತೆಗೆದುಕೊಳ್ಳುತ್ತಾ ಬಂದರೆ ಅಸ್ತಮಾ ಕಾಯಿಲೆ ಕಡಿಮೆಯಾಗುವುದು. ಉಸಿರಾಟದ ತೊಂದರೆ ಅನುಭವಿಸುತ್ತಿರುವವರೆಗೆ ಇದು ಅತ್ಯುತ್ತಮವಾದ ಔಷಧಿಯಾಗಿದೆ.

ಪ್ರತಿದಿನ ನೆಲ್ಲಿಕಾಯಿ ಜ್ಯೂಸ್ ಸೇವಿಸುವುದರಿಂದ ದೇಹದಿಂದ ಎಲ್ಲಾ ಹಾನಿಕಾರಕ ಜೀವಾಣುಗಳನ್ನು ಹೊರಹಾಕಬಹುದು. ಹಾನಿಕಾರಕ ಜೀವಾಣುಗಳು ಜೀರ್ಣಾಂಗ ವ್ಯವಸ್ಥೆಯಲ್ಲಿ ಸಮಸ್ಯೆ ಉಂಟುಮಾಡುತ್ತವೆ.

ದೀರ್ಘಕಾಲದ ಮಲಬದ್ಧತೆ ಗುಣವಾಗುವುದು ಮಲಬದ್ಧತೆ ಸಮಸ್ಯೆಯಿಂದ ತುಂಬಾ ಕಾಲದಿಂದ ಬಳಲುತ್ತಿರುವವರು ಆಮ್ಲ ಜ್ಯೂಸ್ ಕುಡಿದರೆ ಈ ಸಮಸ್ಯೆ ಗುಣಮುಖವಾಗುವುದು.

ನೆಲ್ಲಿಕಾಯಿಯಲ್ಲಿ ಫೈಬರ್ ಸಮೃದ್ಧವಾಗಿದೆ. ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಹೊಟ್ಟೆ ತುಂಬಾ ಹೊತ್ತು ತುಂಬಿದಂತೆ ಭಾಸವಾಗುತ್ತದೆ. ಇದು ನಿಮಗೆ ಅನಿಯಮಿತ ಹಸಿವು ಬರದಂತೆ ತಡೆಯುತ್ತದೆ. ಜತೆಗೆ ಅನಾರೋಗ್ಯಕರ ಆಹಾರ ಮತ್ತು ಅತಿಯಾಗಿ ತಿನ್ನದಂತೆ ಮಾಡುತ್ತದೆ. ಇದರಿಂದ ಕಡಿಮೆ ಕ್ಯಾಲೊರಿಗಳನ್ನು ಸೇವಿಸುತ್ತೀರಿ ಮತ್ತು ತ್ವರಿತವಾಗಿ ತೂಕವನ್ನು ಕಳೆದುಕೊಳ್ಳಬಹುದು.

ರಕ್ತವನ್ನು ಶುದ್ಧೀಕರಿಸುತ್ತದೆ ತಾಜಾ ಆಮ್ಲ ರಸವನ್ನು ಜೇನು ಜೊತೆ ಮಿಶ್ರಣ ಮಾಡಿ ಕುಡಿದರೆ ಇದು ರಕ್ತವನ್ನು ಶುದ್ಧೀಕರಿಸುತ್ತದೆ.

ನೆಲ್ಲಿಕಾಯಿ ಜ್ಯೂಸ್‌ನಲ್ಲಿ ಸಾಕಷ್ಟು ವಿಟಮಿನ್ ಸಿ ಇದೆ, ಇದು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಶೀತ ಮತ್ತು ಕೆಮ್ಮನ್ನು ಉಂಟುಮಾಡುವ ಬ್ಯಾಕ್ಟೀರಿಯಾದಿಂದ ನಮ್ಮನ್ನು ರಕ್ಷಿಸುತ್ತದೆ.

ಚಯಾಪಚಯವನ್ನು ಹೆಚ್ಚಿಸುತ್ತದೆ ದೇಹಕ್ಕೆ ಉತ್ತಮವಾದ ಚಯಾಪಚಯವು ಹೆಚ್ಚಿನ ಕ್ಯಾಲೊರಿಗಳನ್ನು ಸುಡಲು ಮತ್ತು ಹೆಚ್ಚಿನ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ನೀವು ಚಯಾಪಚಯವನ್ನು ಅತಿ ವೇಗವಾಗಿ ಹೆಚ್ಚಿಸಬಹುದು.

ಸೆಕೆಯಲ್ಲಿ ದೇಹವನ್ನು ತಂಪಾಗಿ ಇಡುತ್ತದೆ ಸೆಕೆಗಾಲದಲ್ಲಿ ದೇಹ ಬೆಂದು ಹೋದ ಅನುಭವ ಉಂಟಾಗುವುದು, ಸೆಕೆಯನ್ನು ತಡೆಯಲು ಪ್ರತೀದಿನ ಸ್ವಲ್ಪ ಆಮ್ಲ ಜ್ಯೂಸ್ ಕುಡಿದರೆ ಇದು ದೇಹವನ್ನು ತಂಪಾಗಿಡುತ್ತದೆ.

ಅಸಿಡಿಟಿ, ಮೊಡವೆ, ಆಯಾಸ, ಮಲಬದ್ಧತೆ, ಹೊಟ್ಟೆ ಉಬ್ಬುವುದು ಅಥವಾ ಇತರ ಯಾವುದೇ ಗ್ಯಾಸ್ಟ್ರಿಕ್ ಸಮಸ್ಯೆಗೆ ಸಹಾಯ ಮಾಡುತ್ತದೆ.

ಮುಟ್ಟಿನ ಸಮಯದಲ್ಲಿ ಒಳ್ಳೆಯದು ಮುಟ್ಟಿನ ಸಮಯದಲ್ಲಿ ತುಂಬಾ ರಕ್ತಸ್ರಾವವಾಗುತ್ತಿದ್ದರೆ ಹಣ್ಣಾದ ಬಾಳೆ ಹಣ್ಣನ್ನು ತಿಂದು ಈ ಆಮ್ಲವನ್ನು ಕುಡಿದರೆ ತುಂಬಾ ರಕ್ತಸ್ರಾವವಾಗುವುದಿಲ್ಲ.

ನೆಲ್ಲಿಕಾಯಿಯ ಜ್ಯೂಸ್ ಕುಡಿಯಿರಿ, ಹಲವು ಲಾಭ ಪಡೆಯಿರಿ
ನೆಲ್ಲಿಕಾಯಿ ಮರ

ಶಕ್ತಿ ತುಂಬುತ್ತದೆ ಆಮ್ಲ ಜ್ಯೂಸ್ ಸ್ನಾಯುಗಳಿಗೆ ಶಕ್ತಿಯನ್ನು ತುಂಬುತ್ತದೆ, ಹೃದಯದ ನರಗಳ ಅರೋಗ್ಯ ಹೆಚ್ಚಿಸಿ, ಹೃದಯ ಸಂಬಂಧಿತ ಸಮಸ್ಯೆ ಬರುವುದನ್ನು ತಡೆಯುತ್ತದೆ.

ಪೈಲ್ಸ್ ರೋಗಿಗಳಿಗೆ ಒಳ್ಳೆಯದು ಪೈಲ್ಸ್ ಅಥವಾ ಮೂಲವ್ಯಾಧಿ ಸಮಸ್ಯೆ ಇರುವವರಿಗೆ ಮಲಬದ್ಧತೆ ಕಂಡು ಬರುವುದು ಸಹಜ. ಈ ಆಮ್ಲ ಜ್ಯೂಸ್ ಕುಡಿದರೆ ಆ ಸಮಸ್ಯೆಯಿಂದ ಪಾರಾಗಬಹುದು.

ನೆಲ್ಲಿಕಾಯಿ ಜ್ಯೂಸ್ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ನೆಲ್ಲಿಕಾಯಿ ಜ್ಯೂಸ್ ನೀವು ಸೇವಿಸುವ ಆಹಾರದಿಂದ ಎಲ್ಲಾ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಯಲ್ಲಿನ ಈ ಸುಧಾರಣೆಯು ದೇಹವು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲು ಮತ್ತು ತ್ಯಾಜ್ಯವು ದೇಹದಿಂದ ಹೊರಹಾಕಲು ಸಹಾಯ ಮಾಡುತ್ತದೆ.

ಕಣ್ಣಿನ ಆರೋಗ್ಯಕ್ಕೆ ಇದನ್ನು ಕುಡಿಯುವುದರಿಂದ ಕ್ರಮೇಣ ಕಣ್ಣಿನ ಆರೋಗ್ಯ ಹೆಚ್ಚುವುದು.

ನೆರಿಗೆಯನ್ನು ತಡೆಯುತ್ತದೆ ಮುಖದಲ್ಲಿ ಅಕಾಲಿಕ ನೆರಿಗೆಯನ್ನು ತಡೆಗಟ್ಟುತ್ತದೆ, ತ್ವಚೆ ರಕ್ಷಣೆಯನ್ನು ಮಾಡುತ್ತದೆ.

ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ ಆಮ್ಲ ಜ್ಯೂಸ್ ಅನ್ನು ಅರಿಶಿಣ ಹಾಗೂ ಜೇನು ಜೊತೆ ಕುಡಿದರೆ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು.

ಸಮತೂಕ ಇದನ್ನು ಕುಡಿಯುವುದರಿಂದ ದೇಹದಲ್ಲಿರುವ ಅಧಿಕ ಕೊಬ್ಬಿನಂಶ ಕರಗುತ್ತದೆ, ಇದರಿಂದ ನೀವು ಸಮತೂಕವನ್ನು ಪಡೆಯಬಹುದು.

ನೆಲ್ಲಿಕಾಯಿ ಚರ್ಮಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ತೆಗೆದುಹಾಕಲು ಮತ್ತು ಕೂದಲನ್ನು ಬಲಿಷ್ಠ ಮತ್ತು ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ. ಇದರ ಜತೆಗೆ ನೆಲ್ಲಿಕಾಯಿ ದೇಹದ ತೂಕವನ್ನು ಕೂಡ ಕಡಿಮೆ ಮಾಡುತ್ತದೆ.

​ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ಇದು ವಯಸ್ಸಾದ ವಿರೋಧಿ, ಆಂಟಿ-ಆಕ್ಸಿಡೆಂಟ್, ಆಂಟಿಮೈಕ್ರೊಬಿಯಲ್, ಆಂಟಿ-ಎಮೆಟಿಕ್, ಉರಿಯೂತದ, ಮಧುಮೇಹ ವಿರೋಧಿ,ಯಕೃತ್ತಿಗೆ ಒಳ್ಳೆಯದು ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ಆಮ್ಲಾ ಜ್ಯೂಸ್ ಅನ್ನು ಕುಡಿಯುವುದರಿಂದ ಇಡೀ ದಿನಕ್ಕೆ ಬೇಕಾಗುವಷ್ಟು ಪೋಷಣೆ ಮತ್ತು ಶಕ್ತಿಯನ್ನು ನೀಡುತ್ತದೆ. ಆಮ್ಲಾ ಜ್ಯೂಸ್ ಬೆಳಗ್ಗೆ ಕುಡಿಯುವುದರಿಂದ ಅದು ಎನರ್ಜಿ ಬೂಸ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ. ದಿನವಿಡೀ ನಮ್ಮನ್ನು ಫಿಟ್ ಆಗಿರಿಸುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕನಕದಾಸರು

ಕನಕದಾಸ ಜಯಂತಿಯನ್ನು ಈ ದಿನ, ನವೆಂಬರ್​ 11 ರಂದು ನಾಡಿನಲ್ಲಿ ಆಚರಿಸಲಾಗುತ್ತದೆ

ಮುತ್ತತ್ತಿ : ಹನುಮಂತ

ಮುತ್ತತ್ತಿ : ಹನುಮಂತನು ಸೀತಾಮಾತೆಯ ಮುತ್ತಿನ ಮೂಗುತಿಯನ್ನು ತನ್ನ ಬಾಲದಲ್ಲಿ ಹುಡುಕಿ ತೆಗೆದ ಜಾಗ