in

ಸಾಮಾನ್ಯವಾಗಿ ಮಕ್ಕಳಲ್ಲಿ ಕಂಡುಬರುವ ಸಿಡುಬು ರೋಗ

ಸಿಡುಬು
ಸಿಡುಬು

ಒಂದು ವರ್ಷದ ಮಕ್ಕಳಿಂದ ಹಿಡಿದು ಹನ್ನೆರಡು ವರ್ಷದ ಮಕ್ಕಳ ತನಕ ರೋಗನಿರೋಧಕ ಶಕ್ತಿ ಹೆಚ್ಚಿಸುವ ಲಸಿಕೆಗಳನ್ನು ಕೊಟ್ಟರೂ ಮಕ್ಕಳಲ್ಲಿ ಕೆಲವೊಂದು ಖಾಯಿಲೆಗಳು ಕಂಡುಬರುತ್ತದೆ.ಇದರಲ್ಲಿ ಒಂದು ಸಿಡುಬು ರೋಗ. ಸೀತಾಳೆ ಸಿಡುಬು ಅಥವಾ ಚಿಕನ್ ಫಾಕ್ಸ್ ತೀವ್ರವಾದ ಸೋಂಕು ರೋಗವಾಗಿರುತ್ತದೆ. ಇದು ಬರಲು ವೈರಸೆಲ್ಲಾ ಜಾಸ್ಟರ್ ಕಾರಣ. ಇದರ ರೋಗ ಲಕ್ಷಣಗಳು ಕೆಲವರಲ್ಲಿ ಸೌಮ್ಯವಾಗಿರಬಹುದು. ಮತ್ತೆ ಕೆಲವರಲ್ಲಿ ಉಗ್ರವಾಗಿರಬಹುದು. ಸೀತಾಳೆ ಸಿಡುಬು ಭಾರತದಲ್ಲಿ ಸಾಮಾನ್ಯವಾದ ರೋಗವಾಗಿರುತ್ತದೆ. ಇದು ಸಾಂಕ್ರಾಮಿಕ ಅಥವಾ ಸ್ಥಾನಿಕ(ಎಂಡೆಮಿಕ್)ವಾಗಿ ಉಂಟಾಗಬಹುದು. ರೋಗ ಲಕ್ಷಣಗಳು ಕೆಲವು ರೋಗಿಗಳಲ್ಲಿ ಕೆಲವು ದದ್ದುಗಳು ಕಂಡುಬಂದು ಮಾಯವಾಗುವುದು. ಸ್ವಲ್ಪ ಜ್ವರವೂ ಇರಬಹುದು. ರೋಗ ಉಗ್ರವಾಗಿದ್ದರೆ
ಹೆಚ್ಚಾಗಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಇದು ಮಾರಕವಾಗಿ ಪರಿಣಮಿಸಿದ್ದು, ಬಡ, ಮಧ್ಯಮ ಜನರ ಪಡಿಪಾಟಲು ಹೇಳತೀರದು. ಪರಿಣಾಮ ಮಕ್ಕಳು ಸಂಕಷ್ಟ ಎದುರಿಸುವಂತಾಗಿದೆ. ಧಾರವಾಡ ಜಿಲ್ಲೆಯ ನೆಹರುನಗರ, ಯಾದವಾಡ, ನರೇಂದ್ರ, ಉಪ್ಪಿನಬೆಟಗೇರಿ, ಮುಮ್ಮಿಗಟ್ಟಿ, ಗಿರಣಿಚಾಳ, ಹಳೇಹುಬ್ಬಳ್ಳಿ, ಅದರಗುಂಚಿ ಸೇರಿದಂತೆ ಬಹುತೇಕ ಕಡೆ ಸೀತಾಳ ಸಿಡುಬು ಹೆಚ್ಚಾಗಿ ಕಂಡುಬರುತ್ತದೆ. ಆದರೂ ಸಿಟಿ ಮಕ್ಕಳಿಗೆ ಬರಲ್ಲ ಅಂತ ಏನೂ ಇಲ್ಲ.

ಸಾಮಾನ್ಯವಾಗಿ ಮಕ್ಕಳಲ್ಲಿ ಕಂಡುಬರುವ ಸಿಡುಬು ರೋಗ
ಸಿಡುಬು

ಸಾಂಕ್ರಾಮಿಕ ರೋಗವಾದ ಸೀತಾಳ ಸಿಡುಬು ಸಾಮಾನ್ಯವಾಗಿ ಚಳಿಗಾಲದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಆದರೆ, ಈಗ ಬೇಸಿಗೆಯಲ್ಲೂ ಹರಡುತ್ತಿರುವುದು ಆತಂಕ ಮೂಡಿಸಿದೆ. ಇದು ಮಕ್ಕಳ ಜೀವನ, ಆರೋಗ್ಯದ ಮೇಲೆ ದೀರ್ಘಾವಧಿ ಪರಿಣಾಮ ಬೀರುವುದಿಲ್ಲವಾದರೂ, ಸುಮಾರು 15- 20 ದಿನಗಳ ನೋವು ಚಿಕ್ಕ ಮಕ್ಕಳನ್ನು ಪರಿಪರಿಯಾಗಿ ಬಾಧಿಸುತ್ತಿದೆ.

ವಾಯುಗಾಮಿ ಕಣಗಳ ಮೂಲಕ ಹರಡುವ ಜೋಸ್ಟರ್ ವೈರಸ್ ಮಕ್ಕಳ ದೇಹ ಸೇರಿದ 14-16 ದಿನಗಳ ನಂತರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. 21ನೇ ದಿನಕ್ಕೆ ಮಕ್ಕಳಲ್ಲಿ ಕೆಂಪು ಗುಳ್ಳೆ, ಜ್ವರ ಕಾಣಿಸಿಕೊಂಡು ಬಾಧೆ ಹೆಚ್ಚಿಸುತ್ತದೆ. 102 ಡಿಗ್ರಿಯವರೆಗೂ ಜ್ವರ ಕಾಣಿಸಿಕೊಂಡು ಮಕ್ಕಳ ಜೀವಕ್ಕೆ ಆಪತ್ತು ಬರುವ ಸಾಧ್ಯತೆಗಳೂ ಇವೆ. ಎಷ್ಟೋ ಮಕ್ಕಳು ಈ ರೋಗದಿಂದ ಬಳಲುವ ಜತೆಗೆ ಆರೋಗ್ಯದ ಸ್ಥಿತ್ಯಂತರ ಕಳೆದುಕೊಂಡ ನಿದರ್ಶನಗಳೂ ಇವೆ.
ಚಿಕನ್‌ಪಾಕ್ಸ್‌ ಸಾಮಾನ್ಯವಾಗಿ 10 ರಿಂದ 12 ವರ್ಷದ ಮಕ್ಕಳಲ್ಲಿ ಹೆಚ್ಚಾಗಿ ಕಾಣುವ ಕಾಯಿಲೆ, 2 ವರ್ಷದ ಒಳಗಿನ ಮಕ್ಕಳು ಹಾಗೂ 12 ವರ್ಷದ ಮೇಲ್ಪಟ್ಟವರಲ್ಲಿಯೂ ಇದು ತೀವ್ರತರವಾಗಿ ಕಾಣಿಸಿಕೊಳ್ಳಬಹುದು. ಗರ್ಭಿಣಿ ಸ್ತ್ರೀಯರಿಗೆ, ಹದಿಹರೆಯದವರಿಗೆ, ವಯಸ್ಕರಿಗೆ ಮತ್ತು ಕಡಿಮೆ ರೋಗ ನಿರೋಧಕ ಶಕ್ತಿ ಇರುವವರಿಗೆ ಅಂದರೆ ಎಚ್‌ಐವಿ, ಕ್ಯಾನ್ಸರ್, ಕೀಮೋಥೆರಪಿ ಮತ್ತು ಸ್ಟೀರಾಯ್ಡ್‌ ತೆಗೆದುಕೊಳ್ಳುವವರಿಗೆ ಬೇಗನೆ ತಗಲುವ ಸಾಧ್ಯತೆ ಹೆಚ್ಚು. ಜತೆಗೆ ಇವರಲ್ಲಿ ಕಾಯಿಲೆ ಗಂಭೀರ ಸ್ವರೂಪದಲ್ಲಿರುತ್ತದೆ. ಜೀವನದಲ್ಲಿ ಒಮ್ಮೆ ಚಿಕನ್ ಪಾಕ್ಸ್ ಬಂದು ಹೋಗಿದ್ದರೆ ಸಾಮಾನ್ಯವಾಗಿ ವೈರಸ್ ಇನ್ನೊಮ್ಮೆ ಕಾಣಿಸಿಕೊಳ್ಳುವ ಉದಾಹರಣೆ ಬಹಳ ಕಡಿಮೆ.

ಗೊಬ್ಬರ ಸಾಂಕ್ರಾಮಿಕ ರೋಗವಾಗಿದ್ದರಿಂದ ಕುಟುಂಬ ಸದಸ್ಯರಲ್ಲಿ, ಶಾಲಾ ಸಹಪಾಠಿಗಳಲ್ಲಿ ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆಗಳು ಹೆಚ್ಚಿವೆ. ಸೀತಾಳ ಸಿಡುಬು ತಗುಲಿದ ಮಗುವಿನ ಬಟ್ಟೆಯನ್ನು ಮತ್ತೊಂದು ಮಗು ಧರಿಸುವುದರಿಂದ, ಮೈಮೇಲಿನ ಗುಳ್ಳೆಯ ದ್ರವ ಅಂಟಿಕೊಳ್ಳುವುದರಿಂದ ಈ ರೋಗ ಮತ್ತೊಬ್ಬರಿಗೆ ಹರಡುತ್ತದೆ

ಮಗು ಒಂದು ವರ್ಷ ಪೂರ್ಣಗೊಳಿಸಿದಾಗ ಹಾಗೂ ನಾಲ್ಕನೆ ವರ್ಷ ಪೂರೈಸಿದಾಗ ಎರಡು ಸೀತಾಳ ಸಿಡುಬು ಲಸಿಕೆ ಹಾಕಿಸಿದರೆ, ಮಕ್ಕಳಿಗೆ ಜೀವನ ಪರ್ಯಂತ ಗೊಬ್ಬರ, ಗಣಜಲಿಯಂತಹ ಸಾಂಕ್ರಾಮಿಕ ಚರ್ಮರೋಗದಿಂದ ಮುಕ್ತಿ ನೀಡಬಹುದು. ಆದರೆ, ಭಾರತದ ಸರಕಾರಿ ಆಸ್ಪತ್ರೆಯಲ್ಲಿ ಈ ಲಸಿಕೆ ಲಭ್ಯವಿಲ್ಲ. ಆದರೂ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಲಸಿಕೆಯನ್ನು ಮಕ್ಕಳಿಗೆ ನೀಡುವುದು ಉತ್ತಮ.

ಸಿಡುಬು ರೋಗದ ಲಕ್ಷಣಗಳು ಹೀಗಿವೆ:
ಜ್ವರ ಇರುತ್ತದೆ. ಬೆನ್ನು ನೋವು ಮತ್ತು ಚಳಿ ಇರುತ್ತದೆ. ಮೈ ಕೈಯಲ್ಲಿ ನೋವಿರುವುದು. ಆಯಾಸವಿರುತ್ತದೆ. ತ್ವಚೆ(ಮೈ ಚರ್ಮ)ಯಲ್ಲಿ ದದ್ದುಗಳು ಮೊದಲು ಎದೆಯ ಮೇಲ್ಭಾಗದಲ್ಲಿ ಹಾಗೂ ಹೊಟ್ಟೆಯ ಮೇಲೆ ಕಾಣಿಸಿಕೊಳ್ಳುತ್ತವೆ. ಅನಂತರ ಮುಖದ ಮೇಲೂ ಕಾಣಿಸಿಕೊಳ್ಳುತ್ತವೆ. ಕೊನೆಗೆ ಕೈ-ಕಾಲುಗಳ ಮೇಲೆ ದದ್ದು ಕಂಡುಬರುತ್ತದೆ. ಎದೆ ಹಾಗೂ ಹೊಟ್ಟೆಯ ಮೇಲೂ ಹೆಚ್ಚಾಗಿ ದದ್ದುಗಳು ಮೂಡುತ್ತವೆ. ಕೈ ಕಾಲುಗಳ ಮೇಲೆ ಕಡಿಮೆ ದದ್ದುಗಳು ಇರುತ್ತವೆ. ಸೀತಾಳೆ ಸಿಡುಬು ರೋಗದಲ್ಲಿ ದದ್ದುಗಳು ತುರಿಕೆಯಿಂದ ಕೂಡಿರಬಹುದು. ದದ್ದುಗಳು ಬಹುಬೇಗನೆ ಬದಲಾಗುತ್ತವೆ. ದದ್ದುಗಳು ದೊಡ್ಡದಾಗುತ್ತವೆ. ದದ್ದುಗಳ ಸುತ್ತಲೂ ಕೆಂಪು ಬಣ್ಣ ಕಾಣುತ್ತದೆ. ರೋಗಿಗೆ ಸ್ವಲ್ಪ ಕೆಮ್ಮು ಇರಬಹುದು. ಹಸಿವು ಮಂದವಾಗಿರಬಹುದು. ಕೆಲವೊಮ್ಮೆ ಸೀತಾಳೆ ಸಿಡುಬುನಿಂದ ತೊಡಕು ಗಳು ಉಂಟಾಗಬಹುದು. ವಯಸ್ಕರಲ್ಲಿ ತೊಡಕುಗಳು ಕಾಣುವುದು ಹೆಚ್ಚು.
ಕೆಲವು ಸಲ ರೋಗಿ ನ್ಯೂಮೋನಿಯಾದಿಂದ ನರಳಬಹುದು. ಇದರಿಂದ ಕ-ದಮ್ಮು ಬರಬಹುದು.
ಒಮ್ಮೆ ಸೀತಾಳೆ ಸಿಡುಬು ಬಂದು ಬಳಲಿದ ನಂತರ ರೋಗದಿಂದ ಮುಕ್ತವಾದ ನಂತರ ರೋಗ ನಿರೋಧಕತೆ ಜೀವನಪರ್ಯಂತ ಇರಬಹುದು.

ಸೀತಾಳ ಸಿಡುಬು ದೇವರು ಕೊಟ್ಟ ಶಾಪವಲ್ಲ. ಇದು ಸ್ವಚ್ಛತೆ ಹಾಗೂ ವೈರಸ್‌ಗೆ ಸಂಬಂಧಿಸಿದ್ದು. ಹೀಗಾಗಿ ಈ ರೋಗದಿಂದ ಮುಕ್ತಿ ಪಡೆಯಲು ದ್ಯಾಮವ್ವ, ದುರ್ಗವ್ವ ದೇವರ ಮೊರೆ ಹೋಗದೇ ಮುಂಜಾಗ್ರತೆ ವಹಿಸುವುದು ಅವಶ್ಯ. ಮಕ್ಕಳಿಗೆ ಎರಡು ಬಾರಿ ಧಡಾರ ಲಸಿಕೆ ಹಾಕಿಸುವತ್ತ ಪಾಲಕರು ಗಮನ ಹರಿಸಬೇಕು. ಈ ರೋಗ ಅಂಟಿಕೊಂಡ 5-7 ದಿನಗಳೊಳಗೆ ಕ್ರಮೇಣ ಕಡಿಮೆಯಾಗುವುದು.

ಆಯುರ್ವೇದದಲ್ಲಿ ಸಿಡುಬಿಗೆ ಉತ್ತಮ ಔಷಧಿ ಇದೆ. ಇದಕ್ಕೆ ಆಯುರ್ವೇದದಲ್ಲಿ ‘ಲಘು ಮಸುರಿಕಾ’ ಎಂದು ಕರೆಯುತ್ತಾರೆ. ಕಹಿಬೇವಿನ ನೀರಿನಲ್ಲಿ ಸ್ನಾನ ಮಾಡುವುದು, ಕಹಿಬೇವು ಸೊಪ್ಪನ್ನು ಅರೆದು ಹಚ್ಚಿದರೆ ಗುಳ್ಳೆಗಳು ಜಾಸ್ತಿ ಆಗುವುದು ತಡೆಯುತ್ತದೆ ಮತ್ತು ತುರಿಕೆ ಆಗುವುದಿಲ್ಲ, ಮೈ ಎಲ್ಲಾ ಹರಡುವುದಿಲ್ಲ.

ಸಾಮಾನ್ಯವಾಗಿ ಮಕ್ಕಳಲ್ಲಿ ಕಂಡುಬರುವ ಸಿಡುಬು ರೋಗ
ಬೇವಿನ ಎಲೆ

ಬೇವಿನ ಎಲೆಗಳನ್ನು ಮತ್ತು ಅರಿಶಿಣವನ್ನು ಸ್ನಾನ ಮಾಡುವ ನೀರಿನಲ್ಲಿ ಹಾಕಿಕೊಂಡರೆ ತುರಿಕೆ ಕಡಿಮೆ ಮಾಡುತ್ತದೆ ಮತ್ತು ಸ್ನಾನದ ಮೊದಲು ಬೇವಿನ ಎಣ್ಣೆಯನ್ನು ಮೈಯೆಲ್ಲಾ ಹಚ್ಚಬೇಕು. ನಂತರ ಮೆತ್ತನೆಯ ಹತ್ತಿ ಬಟ್ಟೆಯಿಂದ ಮೈಯೆಲ್ಲ ಒರೆಸಿಕೊಂಡು ಚಂದನ, ಮಂಜಿಷ್ಠ, ಉಶಿರ ಮುಂತಾದ ಆಯುರ್ವೇದ ಲೇಪಗಳನ್ನು ಹಚ್ಚಿಕೊಂಡರೆ ಗುಳ್ಳೆಗಳ ಉರಿ, ತುರಿಕೆ ಸಾಕಷ್ಟು ಕಡಿಮೆ ಆಗುತ್ತದೆ.

ಸಾಕಷ್ಟು ನೀರು, ಎಳನೀರು, ಬಾರ್ಲಿ, ಧನಿಯಾ, ಕ್ಯಾರೆಟ್ ನೀರು ಅಥವಾ ಯಾವುದೇ ತಂಪಾದ ಪಾನೀಯಗಳನ್ನು ಕುಡಿಯಬೇಕು.

ಕಾಯಿಲೆ ಬಂದು ಮೂರನೇ ದಿನದಿಂದ ಬೇವಿನ ಕಷಾಯ ಕುಡಿಯಬೇಕು. 2 ಲೋಟ ನೀರಿಗೆ ಬೇವಿನ ಚೂರ್ಣವನ್ನು ಹಾಕಿ ಚೆನ್ನಾಗಿ ಕುದಿಸಿ ಅರ್ಧ ಲೋಟಕ್ಕೆ ಇಳಿಸಿ ದಿನದಲ್ಲಿ ಎರಡು ಸಲ ಕುಡಿಯಬೇಕು. ಇದನ್ನು ಒಂದು ತಿಂಗಳವರೆಗೆ ತಪ್ಪದೆ ಕುಡಿಯಬೇಕು. ನಂತರ ಎರಡು ತಿಂಗಳಿಗೊಮ್ಮೆ ಒಂದು ವರ್ಷದವರೆಗೆ ಬೇವಿನ ಕಷಾಯ ಕುಡಿಯುತ್ತಿದ್ದರೆ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುವುದಲ್ಲದೆ ರಕ್ತ ಶುದ್ದಿಯಾಗಲೂ ಸಹಾಯ ಮಾಡುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಕರಿಬೇವು

ಕರಿಬೇವು ಸೊಪ್ಪಿನ ಮಹತ್ವ ತಿಳಿಯಿರಿ

ನಾಡಪ್ರಭು ಕೆಂಪೇಗೌಡರು