in

ಬಿಳಿ ಹುಲಿ

ಬಿಳಿ ಹುಲಿ
ಬಿಳಿ ಹುಲಿ

ಬಿಳಿ ಹುಲಿಗಳೆಂದರೆ ಒಂದು ಜಾತಿಯ ಹುಲಿಯಾದರೂ ಸಹ ಅವುಗಳ ಮೈಮೇಲೆ ತುಪ್ಪಳದಂತಹ ಬಿಳಿ ತೊಗಲು ಇರುತ್ತದೆ. ಈ ಬಣ್ಣವು ವಿಶಿಷ್ಟ ತಳಿಯ ಸಂಕರದಿಂದಾಗಿ ಇದು ಬರುತ್ತದೆ. ಏಷ್ಯಾದ ಪೂರ್ವ ಭಾಗಗಳು ಮತ್ತು ಭಾರತ ಚೀನಾಗಳಲ್ಲಿ ಬಿಳಿ ಹುಲಿಗಳು ಕಾಣಸಿಗುತ್ತವೆ. ಆದರೆ ಸದ್ಯ ಬೇಟೆಗಾರರ ದುರಾಸೆಯಿಂದಾಗಿ ಅವುಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಾ ನಡೆದಿದೆ.

ಇತಿವೃತ್ತ ಕಿತ್ತಳೆ ಬಣ್ಣದ ಹುಲಿಗಳಿಗೆ ಹೋಲಿಸಿದರೆ ಬಿಳಿ ವರ್ಣದ ಹುಲಿಗಳು ಜನಿಸುವಾಗ ಮತ್ತು ಪ್ರಾಯಕ್ಕೆ ಬಂದ ಕೂಡಲೇ ಅತಿ ಹೆಚ್ಚು ಅಗಲ, ವಿಶಾಲ ದೇಹ ರಚನೆ ಹೊಂದಿರುತ್ತವೆ. ಈ ಕಾರಣದಿಂದಾಗಿಯೇ ಅವು ಹೆಚ್ಚು ಬಲಿಯಾಗುತ್ತಿವೆ ಎನ್ನಬಹುದು.
ಇದಕ್ಕೆ ಅವುಗಳ ಆಕರ್ಷಕ ಬಣ್ಣವಂತೂ ಮೊದಲ ಕಾರಣವಾಗಿದೆ. ಆದರೆ ಮಿಶ್ರ ತಳಿಯ ಕಿತ್ತಳೆ ಬಣ್ಣದ ಹುಲಿಗಳು ಸಹ ತಮ್ಮ ಅನುವಂಶೀಯ ಸಂಕರದ ಕಾರಣದಿಂದಾಗಿ ಗಾತ್ರದಲ್ಲಿ ದೊಡ್ಡವಾಗಿರುತ್ತವೆ. ಸುಮಾರು 1960ರಲ್ಲಿ ನವದೆಹಲಿಯ ಪ್ರಾಣಿ ಸಂಗ್ರಾಲಯದ ನಿರ್ದೇಶಕರಾಗಿದ್ದ ಕೈಲಾಶ್ ಸಂಖಲಾ ಅವರ ಪ್ರಕಾರ “ಈ ಬಿಳಿ ಹುಲಿ ಸಂತತಿ ನಶಿಸಿಹೋಗದಂತೆ ಮಾಡಲು ಸಾಧ್ಯವಿರುವಷ್ಟು ಮೀಸಲು ಪ್ರಮಾಣವನ್ನು ಕಾಯ್ದುಕೊಳ್ಳಲಾಗುತ್ತದೆ.

“ಇದರ ಅಗತ್ಯಕ್ಕೆ ತಕ್ಕಂತೆ ಕ್ರಮ ಕೈಗೊಳ್ಳಲಾಗುತ್ತದೆ. ಕಪ್ಪು-ಪಟ್ಟೆ ಇರುವ ಹುಲಿಗಳನ್ನು ಬೆಂಗಾಲ್ ಟೈಗರ್ಸ್ ಉಪಾನುವಂಶೀಯ ತಳಿಯನ್ನು ಅಂದರೆ ಇದನ್ನು ರಾಯಲ್ ಬೆಂಗಾಲ್ ಅಥವಾ ಇಂಡಿಯನ್ ಟೈಗರ್ ಎನ್ನಲಾಗುತ್ತದೆ.

ಅಲ್ಲದೇ ಇವು ಸೈಬೀರಿಯಾದ ಹುಲಿಗಳ ಜೊತೆಯಾದಾಗ ಈ ತಳಿಯ ಉಗಮಕ್ಕೆ ಕಾರಣವಾಯಿತು. ಇವುಗಳಿಗೆ ಪಂತೇರಾ ಟಿಗ್ರಿಸ್ ಅಲ್ಶಿಕಾ, ಇದನ್ನು ಐತಿಹಾಸಿಕವಾಗಿ ಇನ್ನುಳಿದ ಉಪತಳಿಗಳೊಂದಿಗೆ ಸೇರಿಸಲಾಗಿದೆ. ಬಿಳಿತುಪ್ಪಳಗಳುಳ್ಳ ಇದು ಬೆಂಗಾಲ್ ಅಥವಾ ಭಾರತದ ಉಪತಳಿಗೆ ಸಂಬಂದಿಸಿದೆ. ಸದ್ಯ ವಿಶ್ವಾದ್ಯಂತ ನೂರಾರು ಬಿಳಿ ಹುಲಿಗಳು ಆಯಾ ರಕ್ಷಿತ ಪ್ರದೇಶದಲ್ಲಿ ವಶದಲ್ಲಿವೆ. ಇದರಲ್ಲಿ ಸುಮಾರು 100 ಭಾರತದಲ್ಲಿವೆ. ಅದರೂ ಇವುಗಳನ್ನು ರಕ್ಷಿಸಲ್ಪಟ್ಟಿದ್ದರಿಂದ ಇವುಗಳ ಸಂಖ್ಯೆ ಕೊಂಚ ಏರಿಕೆಯಾಗಿದೆ. ಆಧುನಿಕ ಇವುಗಳ ಸಂಖ್ಯಾಬಲವು ಎರಡೂ ಶುದ್ದ ಬೆಂಗಾಲ್ ಗಳು ಮತ್ತು ಹೈಬ್ರಿಡ್ ಬೆಂಗಾಲ್ ಗಳನ್ನು ಒಳಗೊಂಡಿದೆ. ಆದರೆ ಅನುವಂಶೀಯ ಪ್ರಭಾವವು ಎಷ್ಟರ ಮಟ್ಟಿಗೆ ಸೇರಿದೆ ಎಂಬುದನ್ನು ಸ್ಪಷ್ಟವಾಗುವುದಿಲ್ಲ.

ಇವು ಬೆಂಗಾಲ್ ಅಥವಾ ಸೈಬಿರಿಯನ್ ಅನುವಂಶೀಯವೇ ಎಂದು ನಿಖರವಾಗಿ ಹೇಳಲಾಗುವುದಿಲ್ಲ. ಈ ಅಸಹಜ ಮತ್ತು ವಿಸ್ಮಯಕಾರಿ ಬಣ್ಣವು ಅವುಗಳನ್ನು ಪ್ರಾಣಿಸಂಗ್ರಾಲಯ ಮತ್ತು ಪ್ರದರ್ಶನಗಳಲ್ಲಿ ಈ ವಿಶಿಷ್ಟ ಪ್ರಾಣಿಗಳು ಹೆಚ್ಚು ಜನಪ್ರಿಯ ವಾಗಿದೆ. ಈ ವಿಷಯದಲ್ಲಿ ಇಬ್ಬರು ಜಾದೂಗಾರರು ಸಿಜ್ಫ್ರೈಡ್ ಮತ್ತು ರಾಯ್ ತಮ್ಮ ಪ್ರದರ್ಶನ ಆಕರ್ಷಕವಾಗಿ ಮಾಡಲು ಈ ಬಿಳಿ ಹುಲಿಗಳನ್ನು ತರಬೇತಿ ನೀಡಿ ಚೆನ್ನಾಗಿ ಪಳಗಿಸಿದ್ದರು.
ಅವುಗಳನ್ನು “ರಾಯಲ್ ವೈಟ್ ಟೈಗರ್ಸ್ “ಎಂಬ ಹೆಸರಿನಿಂದ ಕರೆದರು ಏಕೆಂದರೆ ಇವು ಬಹುಶ : ರೆವಾ ಮಾಹಾರಾಜಾ ಮನೆತನಕ್ಕೆ ಸೇರಿದ್ದು ಎನ್ನಲಾಗಿದೆ. ಈ ಹುಲಿಗಳ ಪ್ರಭಾವಶಾಲಿ ಪ್ರದರ್ಶನ ನೀಡುತ್ತಿದ್ದ ಮೂವರಲ್ಲಿ ರೊನ್ ಹಾಲಿಡೆ, ಜಾಯ್ ಹಾಲಿಡೈ ಮತ್ತು ಚಕ್ ಲಿಜ್ಜಾ ಇವರು HBO ಗೆ ಕ್ಯಾಟ್ ಡಾನ್ಸರ್ಸ್ ಎಂಬ ಸಾಕ್ಷ್ಯಚಿತ್ರ ಮಾಡಿದ್ದರು, ಇವರು ಬಿಳಿ ಹುಲಿಯೊಂದಿಗೆ ಕೆಲಸ ಮಾಡಿದ್ದಾಗ ಅದರಲ್ಲಿ ಇಬ್ಬರು ಬಲಿಯಾದ ಪ್ರಸಂಗವೂ ಇದೆ.

ಬಿಳಿ ಹುಲಿ
ರಾಯಲ್ ವೈಟ್ ಟೈಗರ್

ಶುದ್ದ ಸೈಬಿರಿಯನ್ ಟೈಗರ್ ಗಳು ಸಿಗುವುದು ಅಪರೂಪವಾಗಿದೆ. ಆಗಾಗ ಬಿಳಿ ಹುಲಿಗಳು ಇಲ್ಲಿ ಕಂಡು ಬಂದರೂ ಅವುಗಳ ತಾಣ ಅಲ್ಲಿಲ್ಲ ಎನ್ನಲಾಗಿದೆ. ಆದರೆ ಬಿಳಿ ಹುಲಿಗಳ ಸಂತತಿಯು ಸೈಬಿರಿಯನ್ ನಲ್ಲಿ ಈ ತಳಿಯ ಹುಲಿಗಳ ಸಂಖ್ಯೆ ಇಲ್ಲದಿದ್ದರೂ ಸೆರೆಯಲ್ಲಿರುವ ಬಿಳಿ ಹುಲಿಗಳ ಮೂಲಕ ಅವುಗಳ ಸಂಖ್ಯಾಬಲವನ್ನು ಹೆಚ್ಚಿಸಲು ಸಾಧ್ಯವಿಲ್ಲ.

ಕಳೆದ ಹಲವಾರು ದಶಕಗಳಿಂದ ಸೈಬಿರಿಯನ್ ತಳಿಗಳ ಅಭಿವೃದ್ಧಿ ನಡೆದರೂ ಅವುಗಳ ನಿಖರ ಮಾಹಿತಿ ಇಲ್ಲದಿರುವುದು ಇಂದಿನ ಫಲಿತಾಂಶವಾಗಿದೆ. ಕಳೆದ 20ನೆಯ ಶತಮಾನದ ಮಧ್ಯಭಾಗದಿಂದಲೂ ಸೈಬಿರಿಯನ್ ತಳಿಗಳು ಕಡಿಮೆಯಾಗುತ್ತಾ ಬಂದಿವೆ. ಇದೇ ಅವಧಿಯಲ್ಲಿ ಬಿಳಿ ಚರ್ಮದ ಹುಲಿಗಳ ಸಾವಿನ ಸಂಖ್ಯೆಯೂ ಹೆಚ್ಚಾಯಿತು. ಆದರೆ ಸೈಬೆರಿಯನ್ ತಳಿ ಸಂಶೋಧನೆಗಳು ನಡೆಯಬೇಕಿದೆ, ಇವುಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ.

ಆದರೆ ಪ್ರಸಿದ್ದಿ ಪಡೆದ ವಶದಲ್ಲಿರುವ ಸೈಬಿರಿಯನ್ ಟೈಗರ್ ಗಳ ಸಂತತಿ ಗಮನಿಸಿದರೆ ಇವು ನಿಜವಾದ ಸೈಬಿರಿಯನ್ ವೈಟ್ ಟೈಗರ್ ಗಳಲ್ಲ. ಇವು ಸೈಬಿರಿಯನ್ ಟೈಗರ್ ಗಳು ಬೆಂಗಾಲ್ ಟೈಗರ್ ಗಳ ಸಂಕರದೊಂದಿಗೆ ಜನಿಸಿದ್ದಾಗಿವೆ. ಬೆಂಗಾಲಿ ಬಿಳಿ ಹುಲಿಗಳಲ್ಲಿ ಈ ಶ್ವೇತವರ್ಣ ಸಾಮಾನ್ಯವಾಗಿದ್ದು ಆದರೆ ಇವುಗಳನ್ನು ಅರಣ್ಯದಲ್ಲಿ ಬೆಳೆಸಲು ಅಷ್ಟಾಗಿ ಸಾಧ್ಯವಾಗದು.
ಯಾಕೆಂದರೆ ಇವನ್ನೇ ಆಯ್ಕೆಯ ಮಟ್ಟದಲ್ಲಿ ಅಭಿವೃದ್ದಿಪಡಿಸಲಾಗದು. ದೇಹದಲ್ಲಿನ ಎರಡು ಪಟ್ಟು ತಳಿ ಅನುವಂಶೀಯತೆಯ ಬೆಳವಣಿಗೆಯಿಂದ ಈ ಬಿಳಿ ಹುಲಿಗಳ ಸಂತತಿಯನ್ನು ಪಡೆಯಬಹುದಾಗಿದೆ. ಒಂದು ಅಂದಾಜಿನ ಪ್ರಕಾರ 10,000 ಸಾಮಾನ್ಯ ಹುಲಿಗಳಲ್ಲಿ ಒಂದು ಬಿಳಿ ಹುಲಿ ಜನಿಸುವ ಸಾಧ್ಯತೆ ಇದೆ. ಈ ಹುಲಿಯನ್ನು ಉಪಜಾತಿಯ ತಳಿ ಎಂದು ಕರೆಯಲಾಗುವುದಿಲ್ಲ ಆದರೆ ಅಸ್ತಿತ್ವದಲ್ಲಿರುವ ತಳಿಯ ರೂಪಾಂತರದ ಉಪತಳಿ ಎನ್ನಬಹುದು.

ಒಂದು ಶುದ್ದ ಸೈಬಿರಿಯನ್ ಬಿಳಿ ಹುಲಿ ತಳಿ ಜನಿಸಿದರೂ ಅದನ್ನು ಮುಂದೆ ಹುಲಿ ಸಂಗ್ರಹಾಲಯಗಳಲ್ಲಿ ಅನುಕ್ರಮವಾಗಿ ಬೆಳೆಸಲು ಸಾಧ್ಯವಾಗದು. ವಿಶಿಷ್ಟ ಯೋಜನೆಯಡಿ ಇದನ್ನು ಅಭಿವೃದ್ದಿಪಡಿಸಲು ಸಾಧ್ಯವಾದರೂ ಅದು ಹೆಚ್ಚು ಸೈಬಿರಿಯನ್ ತಳಿಗಳ ಹೆಚ್ಚಳಕ್ಕೆ ಕಾರಣವಾಗದಿರಬಹುದು. ಈ ಬಿಳಿ ಹುಲಿಗಳನ್ನು ಪ್ರಾಣಿ ಸಂಗ್ರಾಹಲಯದಲ್ಲಿಟ್ಟು ಜನರನ್ನು ಆಕರ್ಷಿಸಿ ಇನ್ನುಳಿದ ಹುಲಿಗಲ ಸಂರಕ್ಷಣೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬಹುದು.

ಅರಣ್ಯ ಪ್ರದೇಶದಲ್ಲಿ ಬಿಳಿ ಹುಲಿಗಳ ಸಂತತಿ ಕಡಿಮೆ ಇರುವುದರಿಂದ ವಶದಲ್ಲಿದ್ದುವಗಳ ಮೂಲಕ ವಿಜಾತಿ ಸಂತತಿಗಳನ್ನು ಬೆಳೆಸುವುದು ಕಷ್ಟಕರವಾಗಿದೆ. ಯಾಕೆಂದರೆ ತಳಿ ಅಭಿವೃದ್ಧಿಯ ವಾತಾವರಣವು ಕೂಡ ಸೂಕ್ತವಾಗಿಲ್ಲ ಮತ್ತು ಸೀಮಿತವಾದುದೆಂದು ಹೇಳಲಾಗುತ್ತದೆ. ಕೈಲಾಶ್ ಸಂಖಲಾ ಅವರ ಪ್ರಕಾರ ಸುಮಾರು 1958ರಲ್ಲಿ ಅರಣ್ಯ ಪ್ರದೇಶಗಳಲ್ಲಿ ಕಾಣಿಸಿಕೊಂಡ ಬಿಳಿ ಹುಲಿಯನ್ನು ಗುಂಡಿಟ್ಟು ಸಾಯಿಸಲಾಗಿದೆ. ಇಂದು ಸೆರೆಯಲ್ಲಿದ್ದುವುಗಳ ಅಗಾಧ ಪ್ರಮಾಣದ ಜಾತಿ ಅಥವಾ ತಳಿ ಅಭಿವೃದ್ಧಿ ಅಗತ್ಯವಿರಲಿಲ್ಲ.

ಬಿಳಿ ಹುಲಿ
ಬಿಳಿ ಹುಲಿಗಳ ಸಂತತಿ ಕಡಿಮೆ

ಸೆಂಟರ್ ಹಿಲ್ ನಲ್ಲಿ ಜನಿಸಿದ ಅಮುರ್ ಹುಲಿ ತಳಿಯು ಇಂದು ಅಧಿಕ ಅವುಗಳ ವಿಕಾಸಕ್ಕೆ ಕಾರಣವಾಗಿದೆ. ಈ ಎಡ ಭಾಗದಲ್ಲಿ ಚಿತ್ರಿಸಿರುವ ಬಿಳಿ ಹುಲಿಯು ಸೆಂಟರ್ ಹಿಲ್ಲ್ ನಿಂದ ತಂದ ಫ್ರಾನ್ಸನ ಝೂ ಪಾರ್ಕ್ ಡೆ ಬಿಯುವಲ್ ನಲ್ಲಿದೆ. ರಾಬರ್ಟ್ ಬಾಯುಡಿ ಎಂಬಾತ ತನ್ನಲ್ಲಿರುವ ಹುಲಿಯನ್ನು ಇಂಗ್ಲೆಂಡಿನ ಮಾರ್ವೆಲ್ ಮೃಗಾಲಯಕ್ಕೆ ಮಾರಿದಾಗ ಆ ತಳಿಯಲ್ಲಿ ಬಿಳಿ ಅನುವಂಶೀಯ ಗುಣಗಳಿವೆ ಎಂದು ಆತ ಕಂಡುಕೊಂಡ.ಇದರಿಂದಾಗಿ ಮುಂದಿನ ತಳಿ ವಿಕಾಸದಲ್ಲಿ ಬಿಳಿ ಹುಲಿಗಳ ಅಭಿವೃದ್ಧಿ ಕಾಣಲಾರಂಭಿಸಿದೆ. ಟಾಂಪಾದಲ್ಲಿರುವ ದಿ ಲೌರಿ ಪಾರ್ಕ್ ಮೃಗಾಲಯದಲ್ಲಿ ನಾಲ್ಕು ಅಮುರ್ ಹುಲಿಗಳಿವೆ, ಇದು ಬಾಯುಡಿಯ ಸಂಗ್ರಹಾಲಯದಿಂದ ತರಲಾಗಿದೆ.

ನವದೆಹಲಿ ಪ್ರಾಣಿಸಂಗ್ರಹಾಲದಲ್ಲಿನ ಬಿಳಿ ಹುಲಿ
ಬಿಳಿ ಹುಲಿಗಳ ಸಂತತಿಯನ್ನು ಸಂಬಂಧವಿರದ ಕಿತ್ತಳೆ ಅಬಣ್ಣದ ಕಸಿ ಮೂಲಕ ಅಥವಾ ವಿಜಾತಿ ಸಂಕರದ ಮೂಲಕ ಸಂಖ್ಯೆ ಹೆಚ್ಚಿಸಬಹುದಾಗಿದೆ. ಈ ತಳಿ ಸಂಕರ ಬಳಸಿ ಅಧಿಕ ಬಿಳಿ ಮರಿ ಹುಲಿಮರಿಗಳನ್ನು ಬೆಳೆಸಲಾಗುತ್ತದೆ. ರಂಜಿತ್, ಭರತ್, ಪ್ರಿಯಾ ಮತ್ತು ಭಿಮ್ ಹುಲಿಗಳು ಬಹುತೇಕ ಬೇರೆ ತಳಿಗಳೊಂದಿಗೆ ಕಸಿ ಮಾಡಿದವುಗಳಾಗಿವೆ. ಸ್ಯಾನ್ ಫ್ರಾನ್ಸಿಸ್ಕೊ ಮೃಗಾಲಯದ ಜಾಕ್ ನೊಂದಿಗೆ ಸಂಕರಿಸಿದ ಭರತ್ ಕಿತ್ತಳೆ ಬಣ್ಣದ ಹುಲಿಮರಿ ಕಾಂಚನಾಗೆ ಜನ್ಮ ನೀಡಿದೆ.
ಭರತ್ ಮತ್ತು ಪ್ರಿಯಾ ಕೂಡಾ ಕೂಡಾ ನೊಕ್ಸಿವಿಲ್ಲೆ ಮೃಗಾಲಯದ ಕಿತ್ತಳೆ ಬಣ್ಣದ ಹಿಲಿಗಳ ಸಂಕರವಾಗಿದೆ,ರಂಜಿತ್ ಮತ್ತು ಇತರ ತಳಿಗಳು ಸಹ ಅಲ್ಲಿಯೇ ಬೆಳೆದಿವೆ. ಸಿನ್ಸಿನ್ನತಿ ಮೃಗಾಲಯದಲ್ಲಿ ಕೆಲವು ಹುಲಿಗಳಿಗೆ ಕಿಮನತಿ ತಾಯಿ ಯೆನಿಸಿದರೆ ಭಿಮ್ ತಂದೆಯಾಗಿದೆ. ರಂಜಿತ್ ಗೆ ಒಮಾಹಾ ಮೃಗಾಲಯದಲ್ಲಿ ಹಲವಾರು ಸಹವರ್ತಿಗಳಿದ್ದಾರೆ.

ಬ್ರಿಸ್ಟಲ್ ಮೃಗಾಲಯದಲ್ಲಿರುವ ಬಿಳಿ ಹುಲಿಗಳ ಸಂತತಿ ಕೂಡಾ ಕಿತ್ತಳೆ ಹುಲಿ ಗುಂಪಿನೊಂದಿಗೆ ಕಸಿ ವಿಕಾಸಗೊಳಿಸಿದ ತಳಿಯಾಗಿದೆ. ಇವುಗಳನ್ನು ಪಾಕಿಸ್ತಾನದ ಸೆನೆಟರ್ ಒಬ್ಬರು ತರಿಸಿ ನಂತರ ಪಾಕಿಸ್ತಾನಕ್ಕೆ ಹಡಗಿನ ಮೂಲಕ ರವಾನೆ ಮಾಡಿದರು. ಪ್ರೆಟೊರಿಯಾ ಮೃಗಾಲಯದ ಬಿಳಿ ಹುಲಿ ಕೂಡಾ ಅಲ್ಲಿನ ಮೃಗಾಲಯದಲ್ಲಿನ ಎರಡು ಕಿತ್ತಳೆ ಬಣ್ನದ ಹುಲಿಗಳಿಗೆ ಜನಿಸಿ ಅನಂತರ ಸಿನಿಸಿನ್ನತಿ ಮೃಗಾಲಯದಲ್ಲಿಡಲಾಯಿತು. ಇದೂ ಕೂಡಾ ಎರಡು ಕಿತ್ತಳೆ ಬಣ್ಣದ ಹುಲಿಗಳಿಗೆ ಜನ್ಮ ನೀಡಲೋ ಕಾರಣವಾಯಿತು. ಆದರೆ ವಿಜಾತಿ ತಳಿ ಸಂಕರವು ಕೇವಲ ಬಿಳಿ ಹುಲಿಗಳು ಹುಟ್ಟಿಸಲು ಉದ್ದೇಶವಿಲ್ಲ ಆದರೆ ಜಾತಿಯ ಮರಿಗಳನ್ನು ಹೆಚ್ಕಿಗೆ ಸಂತತಿ ಬೆಳೆಸಲು ಕಾರಣವಾಗುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಮಂಕಿಪಾಕ್ಸ್ ಕಾಯಿಲೆ

ಇತ್ತೀಚಿಗೆ ಎಲ್ಲಾ ಕಡೆ ಸುದ್ಧಿ ಯಾಗಿರುವ ಮಂಕಿಪಾಕ್ಸ್ ಕಾಯಿಲೆಯ ಬಗ್ಗೆ

ಕಸ್ತೂರಿ ಜಾಲಿ ಮತ್ತು ಅರಿಸಿನ ಬೂರುಗ

ಕಸ್ತೂರಿ ಜಾಲಿ ಮತ್ತು ಅರಿಸಿನ ಬೂರುಗ