ಸಾವಿತ್ರಿ, ಎಂಬ ಹೆಸರು ಕೇಳಿರಬಹುದು. ಗಂಡನ ಪ್ರಾಣವನ್ನೇ ಯಮನ ಕೈ ಯಿಂದ ತಂದವಳು. ಸಾವಿತ್ರಿ ಹಿಂದೂ ಧರ್ಮದ ಪುರಾಣಗಳಲ್ಲಿನ ಪ್ರಮುಖ ಮಹಿಳೆಗಳಲ್ಲಿ ಒಬ್ಬಳು.
ಸತ್ಯವಾನ್ ಪತ್ನಿಯಾದ ಸಾವಿತ್ರಿ, ತನ್ನ ಪತಿ ಮರಣ ಹೊಂದಿದಾಗ ಯಮನೊಡನೆ ಮಾತಿನಲ್ಲೇ ಹೋರಾಡಿ, ತನ್ನ ಪತಿಯ ಪ್ರಾಣವನ್ನು ಯಮನಿಂದ ಹಿಂದಕ್ಕೆ ಪಡೆಯುತ್ತಾಳೆ .ಅಂದಿನಿಂದ ಸತಿಶ್ರೇಷ್ಠರಲ್ಲಿ ಒಬ್ಬರೆಂದು ಪರಿಗಣಸಲಾಗುವ ಸಾವಿತ್ರಿ, ಸತಿ ಸಾವಿತ್ರಿ ಎಂದೇ ಪ್ರಸಿದ್ಧಿ.

ಸತಿಯ ನೆನೆಯುತ್ತಾ ಪ್ರತಿ ವರ್ಷ ಜ್ಯೇಷ್ಠ ಮಾಸದ ಹುಣ್ಣಿಮೆಯಂದು “ವಟ ಪೂರ್ಣಿಮಾ” ವ್ರತ ಆಚರಿಸಲಾಗುತ್ತದೆ.
ಶಾದ್ವಲ ದೇಶದ ರಾಜ ದ್ಯುಮತ್ಸೇನ ವಿಧಿವಶಾತ್ ಕುರುಡನಾಗುತ್ತಾನೆ. ಇಂಥ ಅವಕಾಶಕ್ಕಾಗೇ ಕಾಯುತ್ತಿದ್ದ ವೈರಿ ಪಡೆಗಳು ಅವನ ರಾಜ್ಯದ ಮೇಲೆ ದಾಳಿ ಮಾಡುತ್ತಾರೆ. ಬೇರೆ ದಾರಿ ಕಾಣದೇ ದ್ಯುಮತ್ಸೇನ ತನ್ನ ಪತ್ನಿ ಹಾಗು ಪುತ್ರನೊಡನೆ ಕಾಡಿನಲ್ಲಿ ವಾಸಿಸತೊಡಗುತ್ತಾನೆ. ಕಾಡಿನ ವಾತಾವರಣದಲ್ಲಿ ಪುತ್ರ ಸತ್ಯವಾನನು ಬೆಳೆಯುತ್ತಾನೆ.
ಮದ್ರ ದೇಶದ ದೊರೆ ಅಶ್ವಪತಿಗೆ ಹೇರಳವಾದ ಧನಧಾನ್ಯ ಸಂಪತ್ತು, ಸುಭಿಕ್ಷವಾದ ರಾಜ್ಯ, ಸುಖಜೀವಿ ಪ್ರಜಾವರ್ಗ -ಹೀಗೆ ಎಲ್ಲವೂ ಚೆನ್ನಾಗಿಯೇ ಇತ್ತು; ಆದರೂ ಅವನನ್ನು ಕಾಡುತ್ತಿದ್ದ ಒಂದೇಒಂದು ಮತ್ತು ಬಹುದೊಡ್ಡ ಚಿಂತೆಯೆಂದರೆ ಸಂತಾನಹೀನನಾಗಿದ್ದುದು. ಅದಕ್ಕಾಗಿ ಅವನು ಹದಿನೆಂಟು ವರ್ಷಗಳ ಕಾಲ ಕಠೋರ ತಪಸ್ಸನ್ನಾಚರಿಸಿದ ಮೇಲೆ ಸರಸ್ವತಿದೇವಿಯ ಅನುಗ್ರಹವಾಗಿ ಅವನ ರಾಣಿಯು ` ಸಾವಿತ್ರಿ’ ಎಂಬ ಮುದ್ದಾದ ಹೆಣ್ಣುಮಗುವಿಗೆ ಜನ್ಮವಿತ್ತಳು. ಅರಮನೆಯ ಅಂದ ಆನಂದಗಳನ್ನು ನೂರುಪಟ್ಟು ಹೆಚ್ಚಿಸಿದ ಬಾಲೆ ಸಾವಿತ್ರಿ, ಆಟವಾಡುತ್ತ ವಿದ್ಯೆಕಲಿಯುತ್ತ ನೋಡುನೋಡುತ್ತಿದ್ದಂತೆ ದೊಡ್ಡವಳಾಗಿಯೇಬಿಟ್ಟಳು, ಅಶ್ವಪತಿಯು ಅವಳ ಸ್ವಯಂವರವನ್ನೂ ಏರ್ಪಡಿಸಿದ. ಪಕ್ಕದರಾಜ್ಯದ ದ್ಯುಮತ್ಸೇನ ಎಂಬ ಅರಸನ ಮಗ ಸ್ಫುರದ್ರೂಪಿ ತರುಣ ಸತ್ಯವಾನನನ್ನು ವರಿಸಿದಳು ಸಾವಿತ್ರಿ.
ವಿವಾಹದ ತಯಾರಿಗಳೆಲ್ಲ ನಡೆದಿರಲು ಅಲ್ಲಿಗೆ ಬಂದ ತ್ರಿಲೋಕಸಂಚಾರಿ ನಾರದಮಹರ್ಷಿಗಳು ಘೋರವಾದ ಮತ್ತು ಆತಂಕಕಾರಿಯಾದ ಸುದ್ದಿಯೊಂದನ್ನು ಸಾವಿತ್ರಿಯ ಬಳಿ ಹೇಳಿದರು – ಅದೇನೆಂದರೆ, ಮದುವೆಯಾಗಿ ಸರಿಯಾಗಿ ಒಂದು ವರ್ಷ ಪೂರ್ತಿಯಾಗುವ ದಿನವೇ ಸತ್ಯವಾನ ಅಸುನೀಗಲಿದ್ದಾನೆ ಎಂಬುದಾಗಿ. ಇದನ್ನು ಕೇಳಿದ ಅಶ್ವಪತಿಗೋ ದಿಗ್ಭ್ರಮೆ, ಕಳವಳ. ಸತ್ಯವಾನನನ್ನು ಬಿಟ್ಟು ಬೇರೆಯಾರನ್ನಾದರೂ ವರಿಸುವಂತೆ ಸಾವಿತ್ರಿಯನ್ನು ವಿಧವಿಧದಲ್ಲಿ ತಿಳಿಯಹೇಳುವ ಪ್ರಯತ್ನವನ್ನವನು ಮಾಡಿದ, ಆದರೆ ಸಾವಿತ್ರಿಯದು ಅಚಲನಿರ್ಧಾರ. ಏನೇ ಆದರೂ ತಾನು ಸತ್ಯವಾನನನ್ನೇ ಮದುವೆಯಾಗುವವಳು ಎಂಬುದೊಂದೇ ಮಾತು. ಕೊನೆಗೂ ಬೇರೆ ಉಪಾಯವಿಲ್ಲದೆ ಮಗಳ ವಿವಾಹಸಮಾರಂಭವನ್ನು ನೆರವೇರಿಸಿದ ಅಶ್ವಪತಿ ಗಂಡನ ಮನೆಗೆ ಅವಳನ್ನು ಬೀಳ್ಕೊಟ್ಟ. ಪತಿ, ಅತ್ತೆ-ಮಾವರೊಡನೆ ಸಾವಿತ್ರಿ ಅರಣ್ಯವಾಸವನ್ನಾರಂಭಿಸುತ್ತಾಳೆ. ತನ್ನ ಪತಿಗೆ ಅಲ್ಪಾಯುಷ್ಯ ಎಂದು ಗೊತ್ತಾಗಿದ್ದರಿಂದ ಸಾವಿತ್ರಿ ಆತನ ಒಳಿತಿಗಾಗಿ ಅನೇಕ ವ್ರತ ನೇಮಗಳನ್ನ ಆಚರಿಸುತ್ತಾಳೆ.
ಆರಂಭವಾಯಿತೇನೊ ಎನ್ನುವಂತೆ ಸತ್ಯವಾನನ ತಂದೆ ದ್ಯುಮತ್ಸೇನನ ರಾಜ್ಯವನ್ನು ಶತ್ರುಗಳು ವಶಪಡಿಸಿಕೊಂಡರು. ಮೊದಲೆಲ್ಲ ಅಶ್ವಪತಿಯಷ್ಟೇ ಬಲಶಾಲಿ ಮತ್ತು ಪರಾಕ್ರಮಿಯಾಗಿದ್ದವನಾದರೂ ಇದೀಗ ಅವನಿಗೆ ಪ್ರಾಯ ಸಂದಿತ್ತು ಮಾತ್ರವಲ್ಲದೆ ಅಂಧತ್ವವೂ ಇತ್ತು. ರಾಜ್ಯಕಳೆದುಕೊಂಡು ಒಂದು ಕಾಡಿನಲ್ಲಿ ಆ ಮುದಿ ತಂದೆ-ತಾಯಿ ಮತ್ತು ಈ ನವವಿವಾಹಿತ ಜೋಡಿ ಸೇರಿ ಬದುಕನ್ನು ಸಾಗಿಸಬೇಕಾಯಿತು. ಅಷ್ಟಾದರೂ ಸಾವಿತ್ರಿ ಮಾತ್ರ ನಗುಮುಖದಿಂದಲೇ ಗಂಡ ಮತ್ತು ಅತ್ತೆ-ಮಾವಂದಿರ ಸೇವೆ ಮಾಡಿಕೊಂಡು, ಒಂದು ವರ್ಷದಲ್ಲಿ ಗಂಡ ಸಾಯಲಿದ್ದಾನೆ ಎಂಬ ಕಠೋರಸತ್ಯವನ್ನು ತನ್ನ ಹೊಟ್ಟೆಯಲ್ಲಿ ಹಾಕಿಕೊಂಡು ಸಂತೃಪ್ತಭಾವದಿಂದಲೇ ದಿನ ಕಳೆಯುತ್ತಿದ್ದಳು. ದುಗುಡ, ಪಶ್ಚಾತ್ತಾಪಗಳನ್ನೆಂದೂ ಅವಳು ಯಾರೆದುರೂ ತೋರಿಕೊಳ್ಳುತ್ತಿರಲಿಲ್ಲ.
ದಿನಗಳು ಉರುಳಿ ತಿಂಗಳುಗಳು ಕಳೆದು ಇನ್ನೇನು ನಾರದರು ಹೇಳಿದ್ದ ಗಡುವಿಗೆ ಮೂರೇ ದಿನ ಬಾಕಿ ಉಳಿದಿದ್ದುವು. ಆಗಲೂ ಧೃತಿಗೆಡಲಿಲ್ಲ ಸಾವಿತ್ರಿ. ಮೂರು ದಿನವೂ ಅನ್ನಾಹಾರ ನಿದ್ರೆಯಿಲ್ಲದೆ ಕಟ್ಟೆಚ್ಚರದಿಂದ ಸತ್ಯವಾನನ ಜತೆಯಲ್ಲೇ ಇರುತ್ತೇನೆಂದು ಪಣತೊಟ್ಟಳು. ದೇವರ ಮೇಲೆ ಭಾರಹಾಕಿ ಪ್ರಾರ್ಥನೆ ಸಲ್ಲಿಸಿದಳು. ಕೊನೆಗೂ ಬಂದೇ ಬಿಟ್ಟಿತು ಆ ದಿನ. ಸತ್ಯವಾನ ಎಂದಿನಂತೆ ಅವತ್ತೂ ಕಟ್ಟಿಗೆ ತರಲು ಕೊಡಲಿಯನ್ನು ಹಿಡಿದು ಹೊರಟ. ತಾನೂ ಜತೆಯಲ್ಲಿ ಬರುವೆನೆಂದು ಅವನನ್ನು ಹಿಂಬಾಲಿಸಿದಳು ಸಾವಿತ್ರಿ.
ಒಂದಿಷ್ಟು ಕಟ್ಟಿಗೆ ಒಟ್ಟುಮಾಡಿ ಆಗಿತ್ತಷ್ಟೆ, ಆಗಲೇ ಸತ್ಯವಾನ ತನಗೇಕೋ ಸಂಕಟವಾಗುತ್ತಿದೆ, ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಆಮೇಲೆ ಕೆಲಸ ಮುಂದುವರೆಸುತ್ತೇನೆಂದ. ಆ ಸತಿ-ಪತಿಯರು ಆಗ ಒಂದು ದೊಡ್ಡ ಆಲದಮರದ ಕೆಳಗಡೆಗೆ ಬಂದಿದ್ದರು. ಅಲ್ಲೇ ಕುಳಿತ ಸಾವಿತ್ರಿ ತನ್ನ ತೊಡೆಯ ಮೇಲೆ ತಲೆಯನ್ನಿಟ್ಟು ಮಲಗುವಂತೆ ಸತ್ಯವಾನನಿಗೆ ಹೇಳಿದಳು. ಏಕಾಏಕಿ ನಿಸ್ತೇಜನಾದ ಸತ್ಯವಾನ ಒಂದುರೀತಿ ನರಳಲಾರಂಭಿಸಿದ. ನಿಗದಿತ ವೇಳೆಗೆ ಅವನ ಪ್ರಾಣಪಕ್ಷಿ ಹಾರಿಹೋಗುವುದಕ್ಕೂ ಆಗ ಅಲ್ಲೊಂದು ಕರಾಳ ಆಕೃತಿ ಗೋಚರಿಸುವುದಕ್ಕೂ ಸರಿಯಾಯಿತು. ಅದು ಬೇರಾರೂ ಅಲ್ಲ, ಸಾಕ್ಷಾತ್ ಯಮಧರ್ಮರಾಯ.

ತನ್ನ ಕೈಯಲ್ಲಿನ ಪಾಶದಿಂದ ಸತ್ಯವಾನನ ಆತ್ಮವನ್ನು ಎಳೆದುಕೊಂಡು ದಕ್ಷಿಣದಿಕ್ಕಿಗೆ ಹೊರಟೇಬಿಟ್ಟ ಯಮ. ಇದೆಲ್ಲ ಕಣ್ಮುಚ್ಚಿತೆರೆಯುವುದರೊಳಗೆ ಘಟಿಸಿದ ಅನುಭವ ಸಾವಿತ್ರಿಗೆ. ಅವಳು ಎದ್ದುನಿಂತು ಆರ್ತನಾದಗೈಯುತ್ತ ಯಮಧರ್ಮರಾಯನನ್ನೇ ಹಿಂಬಾಲಿಸತೊಡಗಿದಳು. ತನ್ನ ಹಿಂದೆಯೇ ಬರುತ್ತಿರುವ ಈ ನಾರಿಯನ್ನು ಕಂಡು ಯಮನಿಗೆ ಆಶ್ಚರ್ಯ! ` ನೀನು ಬರುವಂತಿಲ್ಲ, ನಿನ್ನ ಪತಿಯ ಪ್ರಾಣವನ್ನಷ್ಟೆ ತೆಗೆದುಕೊಂಡು ಹೋಗಲು ನಾನು ಬಂದವನು, ನೀನು ಹಿಂದಿರುಗು’ ಎಂದು ಅವನು ಸಾವಿತ್ರಿಯನ್ನು ಎಚ್ಚರಿಸಿದ. ಆಕೆ ಅದಾವುದನ್ನೂ ಕಿವಿಗೆಹಾಕಿಕೊಳ್ಳದೆ ಯಮನಿಗೇ ಸವಾಲೆಸೆದಳು, ಒಂದೋ ತನ್ನ ಪತಿಯ ಪ್ರಾಣವನ್ನು ಹಿಂದಿರುಗಿಸು ಇಲ್ಲ ಪತಿಯೊಟ್ಟಿಗೆ ತನ್ನನ್ನೂ ಕರೆದೊಯ್ಯು ಎಂದು. ಅವಳನ್ನು ಅದೆಷ್ಟು ಸಮಾಧಾನಿಸಿದರೂ ಗದರಿಸಿದರೂ ಉಪಯೋಗವಾಗಲಿಲ್ಲ. ಏನೇನೋ ವರಗಳ ಆಮಿಷ ತೋರಿಸಿದರೂ ಸಾವಿತ್ರಿ ಕೇಳುತ್ತಿದ್ದದ್ದು ಒಂದೇ – ಸತ್ಯವಾನ ಮತ್ತೆ ಬದುಕಬೇಕು, ಇಲ್ಲವಾದಲ್ಲಿ ತಾನೂ ಸತ್ತು ಅವನ ಸಹಭಾಗಿಯಾಗಿ ಸ್ವರ್ಗಸೇರಬೇಕು.
ಸಾವಿತ್ರಿಯ ನಿರ್ಮಲ ನಿಸ್ಪೃಹ ನಿರ್ವ್ಯಾಜ ಪತಿಭಕ್ತಿಯೆದುರು ಯಮ ಕುಬ್ಜನಾದ. ಆಕೆಯ ಅಚಲಪ್ರೇಮವನ್ನು ಕಂಡು ಮಮ್ಮಲಮರುಗಿದ. ಯಾವ ಆಲದ ಮರದ ಬುಡದಿಂದ ಸತ್ಯವಾನನ ಪ್ರಾಣವನ್ನು ಕಸಿದುಕೊಂಡುಹೋಗಿದ್ದನೋ ಅಲ್ಲಿಗೇ ಮರಳಿ ಅವನ ಮೃತಶರೀರದಲ್ಲಿ ಮತ್ತೆ ಪ್ರಾಣವಾಯು ಸಂಚರಿಸುವಂತೆ ಮಾಡಿದ. ಪತಿಯೇ ಪರದೈವವೆಂದು ನಂಬಿದ ಸಾವಿತ್ರಿಯನ್ನು ಮನಸಾರೆ ಹರಸಿದ ಯಮ ನೂರುಕಾಲ ಬಾಳುವಂತೆ ಅವರಿಬ್ಬರನ್ನು ಅನುಗ್ರಹಿಸಿ ಅಲ್ಲಿಂದ ಕಣ್ಮರೆಯಾದ.
ನಿದ್ದೆಯಿಂದ ಎಚ್ಚರಗೊಂಡವನಂತೆ ಎದ್ದು ಕುಳಿತ ಸತ್ಯವಾನ, ಇದೆಲ್ಲ ತನ್ನ ಕನಸಿನಲ್ಲಿ ನಡೆಯಿತೋ ಎಂದು ಸಾವಿತ್ರಿಯನ್ನು ಕೇಳಿದ. ಮುಸ್ಸಂಜೆ ಕಳೆದು ಹುಣ್ಣಿಮೆಯ ಚಂದಿರ ಪೂರ್ವದಂಚಿನಲ್ಲಿ ಇಣುಕಿ ಈ ಅಪೂರ್ವಚಮತ್ಕಾರಕ್ಕೆ ಮಂಗಳ ಹಾಡಲು ಬಂದಿದ್ದ. ಕಟ್ಟಿಗೆ ಒಯ್ಯುವುದು ತಡವಾಯಿತೆಂದು ಲಗುಬಗೆಯಿಂದ ಮನೆಯತ್ತ ಮರಳಿದ ಸತ್ಯವಾನ-ಸಾವಿತ್ರಿ ಅಲ್ಲಿ ನೋಡುವುದೇನು, ತಂದೆ-ತಾಯಿಯರು ಸಂತಸದಲ್ಲಿದ್ದಾರೆ, ರಾಜ್ಯವನ್ನು ಕಸಿದುಕೊಂಡಿದ್ದ ಶತ್ರುಗಳು ಪರಾರಿಯಾಗಿ ಮತ್ತೆ ರಾಜ್ಯಭಾರಕ್ಕೆ ಬರಬೇಕೆಂದು ಅದಾಗಲೇ ದೂತನೊಬ್ಬ ಅವರನ್ನು ಕರೆದಾಗಿತ್ತು! ಸಾವಿನಮನೆಯನ್ನು ಹೊಕ್ಕು ಮರಳಿದ ಮಗ ಸತ್ಯವಾನ, ಸಾವನ್ನೇ ಜಯಿಸಿದ ಸೊಸೆ ಸಾವಿತ್ರಿ; ದ್ಯುಮತ್ಸೇನನ ಆನಂದಕ್ಕೆ ಪಾರವೇ ಇಲ್ಲ. ಮತ್ತೆ ಎಲ್ಲರೂ ರಾಜ್ಯಕ್ಕೆ ಮರಳಿ ಆನಂದವಾಗಿ ರಾಜ್ಯಭಾರ ಮುಂದುವರೆಸಿದರು.
ಧನ್ಯವಾದಗಳು.
麻雀物語
カジノ 語学
リーチ演出が多彩で、どのタイミングで大当たりが来るかワクワクします。
L ゴールデンカムイ
https://www.k8casino.biz/?ReviewID=922168818.html
定期的に通うことで、常連さんとのつながりが生まれます。コミュニティ感が楽しいです。
ドラゴンが降りる
[url=https://www.k8pachinko.asia/?ArticleID=926539818.html]re4 攻略
[/url]
CR RAVE この世界こそが真実だ
夜蝶飛翔
ミリオンゴッド-神々の凱旋
交響詩篇エウレカセブン 2
https://www.pgslot-casino.com/?ReviewID=923578818.html
大当たり時の演出が特に豪華で、楽しさを感じます。期待感が高まります。
CRぱちんこ仮面ライダーV3 Ver.390(1:2
https://www.k8casinoofficial.jp/?WatchID=927096818.html
お金をかけることに抵抗がある人も、少額から始められるのが魅力です。楽しみ方は多様です。
アナザーゴッドハーデス-奪われたZEUSver
https://www.k8o.jp/?ArticleID=921463818.html
歴史的なキャラクターの個性が豊かで、ストーリーに引き込まれます。感情移入できます。