in

ಜೇಡರ ಹುಳು ಮತ್ತು ಅವುಗಳಿಂದ ಆಗುವ ತೊಂದರೆ, ನಿಯಂತ್ರಣ

ಜೇಡರ ಹುಳು
ಜೇಡರ ಹುಳು

ಜೇಡಗಳು ಗಾಳಿಯಿಂದ ಆಮ್ಲಜನಕ ಪಡೆದು ಉಸಿರಾಡುವ ಕೆಲಿಸೆರಾಟಾ ಉಪಸಂತತಿಗ ಸೇರಿರುವ ಎಂಟು ಕಾಲುಗಳನ್ನು ಹೊಂದಿರುವ, ಮತ್ತು ಕಲಿಸರಾಗಳು ವಿಷವನ್ನು ಒಳಹಾಕುವ ವಿಷದ ಹಲ್ಲುಗಳಾಗಿ ಮಾರ್ಪಾಡಾಗಿರುವ ಸಂಧಿಪದಿಗಳು. ಜೇಡಗಳು ವಿಶ್ವಾದ್ಯಂತ ಅಂಟಾರ್ಕ್‌ಟಿಕದ ಹೊರತಾಗಿ ಎಲ್ಲ ಖಂಡಗಳಲ್ಲೂ ಕಂಡುಬರುತ್ತವೆ, ಮತ್ತು ಗಾಳಿ ಹಾಗೂ ಸಾಗರ ವಾಸದ ಹೊರತಾಗಿ ಹೆಚ್ಚುಕಡಮೆ ಪ್ರತಿಯೊಂದು ಜೀವಿ ಪರಿಸ್ಥಿತಿ ಆವರಣದಲ್ಲೂ ನೆಲೆಗೊಂಡಿವೆ. ೨೦೦೮ರ ವೇಳೆಗೆ, ವರ್ಗೀಕರಣ ವಿಜ್ಞಾನಿಗಳಿಂದ ಸುಮಾರು ೪೦,೦೦೦ ಜೇಡ ಜಾತಿಗಳು, ಮತ್ತು ೧೦೯ ಕುಟುಂಬಗಳನ್ನು ದಾಖಲಿಸಲಾಗಿದೆ.

ಎರಡೂ ಜೇಡರ ಹುಳಗಳು ಅಪಾಯಕಾರಿಯಾಗಿದ್ದರೂ ಕೆಣಕದೇ ಕಚ್ಚುವುದಿಲ್ಲ. ಏಕೆಂದರೆ ಈ ವಿಷ ಅವುಗಳಿಗೆ ಅತಿ ಅಮೂಲ್ಯವಾಗಿದ್ದು ಇವನ್ನು ಪ್ರಾಣರಕ್ಷಣೆಯ ಅಂತಿಮ ಅಸ್ತ್ರವಾಗಿಯಲ್ಲದೇ ಇವು ಬಳಸುವುದಿಲ್ಲ. ಸಾಮಾನ್ಯವಾಗಿ ಇವು ನೆರಳು ಮತ್ತು ತಂಪಾಗಿರುವ ಸ್ಥಳಗಳಲ್ಲಿ ವಾಸವಾಗಿರುತ್ತವೆ. ಶೆಡ್ಡು, ಗ್ಯಾರೇಜು, ಸ್ಥಳಾಂತರಿಸದೇ ಇರುವ ಹೂಕುಂಡಗಳು, ತೋಟಗಾರಿಕಾ ವಸ್ತುಗಳು, ಕಟ್ಟಿಗೆ ಸಂಗ್ರಹ ಇರುವ ಸ್ಥಳ ಮೊದಲಾದವುಗಳಲ್ಲಿ ಕತ್ತಲೆಯಲ್ಲಿ ಅಡಗಿರುತ್ತವೆ.

ಒಂದು ವೇಳೆ ಅಕಾಸ್ಮಾತ್ತಾಗಿ ಯಾವುದೇ ಬಗೆಯ ಜೇಡ ಕಚ್ಚಿದರೂ, ಈ ಜೇಡರ ಹುಳವನ್ನು ಸೂಕ್ಷ್ಮವಾಗಿ ಗಮನಿಸುವುದು ಒಳ್ಳೆಯದು. ಕಡಿತದ ಬಳಿಕ ತೀವ್ರ ಉರಿ, ನೋವು, ಹೊಟ್ಟೆಯ ನೋವು ಅಥವಾ ಸೆಡೆತ, ಉಸಿರಾಡುವುದು ಕಷ್ಟಕರವಾಗುವುದು ಅಥವಾ ಗಾಯದ ಭಾಗದಲ್ಲಿ ಅಲ್ಸರ್ ಆಗುವ ಲಕ್ಷಣ ಕಾಣಿಸಿದರೆ ತಕ್ಷಣ ವೈದ್ಯರನ್ನು ಕಾಣಬೇಕು.

ಜೇಡರ ಹುಳು ಮತ್ತು ಅವುಗಳಿಂದ ಆಗುವ ತೊಂದರೆ, ನಿಯಂತ್ರಣ
ಜೇಡರ ಹುಳದ ಕಡಿತ

ಜೇಡರ ಹುಳದ ವರ್ಣನೆ ಸ್ಪಷ್ಟವಾಗಿದ್ದಷ್ಟೂ ವೈದ್ಯರಿಗೆ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ. ಸಾಧ್ಯವಾದರೆ, ಕಚ್ಚಿದ ಬಳಿಕ ಅಂತರ್ಜಾಲದಲ್ಲಿ ಜೇಡರ ಹುಳುವಿಗೆ ಹುಡುಕಾಡಿ ನಿಮಗೆ ಕಚ್ಚಿದ ಜೇಡರ ಹುಳದ ಪ್ರಬೇಧವನ್ನು ಗುರುತಿಸಿ ಹೆಸರನ್ನು ಸ್ಪಷ್ಟಪಡಿಸಿದರೆ ವೈದ್ಯರಿಗೆ ಇನ್ನೂ ಸುಲಭವಾಗುತ್ತದೆ.

ಭಾರತದಲ್ಲಿಯೂ ಅಲ್ಲಲ್ಲಿ, ಆಗಾಗ ಜೇಡರ ಹುಳದ ಕಚ್ಚುವಿಕೆಯ ಪ್ರಸಂಗಗಳು ವರದಿಯಾಗುತ್ತಲೇ ಇರುತ್ತವೆ. ಸಾಮಾನ್ಯವಾಗಿ ಈ ಬಗ್ಗೆ ಜನರಲ್ಲಿ ಅರಿವು ಇಲ್ಲದೇ ಇರುವುದು ಹಾಗೂ ಇವು ಅಡಗಿರುವ ಸ್ಥಳಕ್ಕೆ ನೇರವಾಗಿ ಕೈ ಹಾಕುವುದು ಮೊದಲಾದವುಗಳು ಕಚ್ಚುವಿಕೆಗೆ ಕಾರಣವಾಗುತ್ತವೆ.

ಮೊದಲಿಗೆ ಹುಳವು ಯಾವ ಎರಡು ವಸ್ತುಗಳ ನಡುವೆ ಬಲೆಯನ್ನು ಹೆಣೆಯಬೇಕೆಂದು ತೀರ‍್ಮಾನಿಸುತ್ತದೆ.
ಗಾಳಿಯ ಬಿರುಸು ಹೆಚ್ಚಿರುವ ಜಾಗದಲ್ಲಿ ಬಲೆಯನ್ನು ಹೆಣೆಯಲು ತೊಂದರೆ ಆಗುವುದರಿಂದ, ಅದು ತಾನು ಆಯ್ಕೆ ಮಾಡಿಕೊಂಡಿರುವ ಜಾಗದಲ್ಲಿನ ಗಾಳಿಯ ಬಿರುಸನ್ನು ಪರಿಶೀಲಿಸುತ್ತದೆ. ಅದಕ್ಕಾಗಿ ಬಲೆಯನ್ನು ಹೆಣೆಯಲು ಆಯ್ಕೆಮಾಡಿಕೊಂಡಿರುವ ಜಾಗದಲ್ಲಿ ಒಂದು ಕಡೆಗೆ ನೂಲನ್ನು ಕಟ್ಟುತ್ತದೆ. ಈ ನೂಲನ್ನು ಕಟ್ಟುವ ಕೆಲಸವನ್ನು ಹೆಚ್ಚಾಗಿ ಬೆಳಗಿನ ಹೊತ್ತಿನಲ್ಲಿ ಮಾಡುತ್ತದೆ.

ಮನೆಯ ಸಂದುಮೂಲೆಗಳಲ್ಲಿ ಮತ್ತು ಗೋಡೆಯಲ್ಲಿ ಒಡಕುಗಳಿರುವ ಜಾಗದಲ್ಲಿ ವಿನೆಗರ್ ಮತ್ತು ನೀರನ್ನು ಸೇರಿಸಿ ಸ್ಪ್ರೇ ಮಾಡಿ. ಒಂದು ಸ್ಪ್ರೇ ಬಾಟಲಿಯಲ್ಲಿ ಅರ್ಧ ಬಿಳಿ ವಿನೆಗರ್ ಮತ್ತು ಅರ್ಧದಷ್ಟು ನೀರನ್ನು ಸೇರಿಸಿ ತುಂಬಿಸಿ. ನಂತರ ಮನೆಯ ಗೋಡೆ, ಕಿಟಕಿ, ಬಾಗಿಲುಗಳ ಸಂದುಗಳಲ್ಲಿ ಮತ್ತು ಮೂಲೆಮುರುಕುಗಳಲ್ಲಿ ಸ್ಪ್ರೇ ಮಾಡಿ. ಜೇಡಗಳನ್ನು ಮನೆಯಿಂದ ದೂರವಿಡಲು ದಿನಂಪ್ರತಿ ಈ ವಿಧಾನವನ್ನು ಬಳಸಬಹುದು.

ಜೇಡರ ಹುಳು ಮತ್ತು ಅವುಗಳಿಂದ ಆಗುವ ತೊಂದರೆ, ನಿಯಂತ್ರಣ
ನಿಂಬೆ ಮತ್ತು ಕಿತ್ತಳೆ ಹಣ್ಣಿನ ಸಿಪ್ಪೆಗಳು ಜೇಡಗಳನ್ನು ಓಡಿಸಲು ಇರುವ ನೈಸರ್ಗಿಕ ಔಷಧಿ

ನಿಂಬೆ ಮತ್ತು ಕಿತ್ತಳೆ ಹಣ್ಣಿನ ಸಿಪ್ಪೆಗಳು ಜೇಡಗಳನ್ನು ಓಡಿಸಲು ಇರುವ ನೈಸರ್ಗಿಕ ಔಷಧಿಗಳು. ಜೇಡಗಳಿಗೆ ವಾಸನೆ ಬರುವಂತೆ ಕಿಟಕಿಯ ಮೂಲೆಗಳಲ್ಲಿ, ಬಾಗಿಲಿನ ಸಂದುಗಳಲ್ಲಿ ಮತ್ತು ಮನೆಯ ಬದಿಗಳಲ್ಲಿ ಈ ಸಿಪ್ಪೆಯನ್ನು ಸುಲಿದು ಉಜ್ಜಿ ನೋಡಿ. ಅಡುಗೆ ಮನೆಯಲ್ಲಿ ಒಂದು ಬೌಲ್ ನಲ್ಲಿ ಸಿಟ್ರಸ್ ಹಣ್ಣಿನ ರಸವನ್ನು ಇಡುವ ಮೂಲಕ ನೀವು ಜೇಡಗಳನ್ನು ಆ ಜಾಗದಿಂದ ದೂರವಿಡುವುದಕ್ಕೆ ಸಾಧ್ಯವಾಗುತ್ತದೆ.

ಮನೆ ಸರಿಯಾಗಿ ಕ್ಲೀನ್‌ ಮಾಡದಿದ್ದರೆ ಜೇಡ ಬಲೆ ಕಟ್ಟಿಕೊಳ್ಳುತ್ತದೆ. ಅಂಥವರ ಮನೆಯಲ್ಲಿ ಲಕ್ಷ್ಮೀ ನೆಲೆಸುವುದಿಲ್ಲ. ಅಲ್ಲಿ ಯಾವಾಗಲೂ ಹಣಕಾಸಿನ ಸಮಸ್ಯೆ ಉಂಟಾಗುತ್ತದೆ ಅನ್ನುತ್ತಾರೆ.

ವಿನೆಗರ್ ಅನ್ನು ನೀವು ದಿನನಿತ್ಯ ಓಡಾಡುವ ನೆಲಕ್ಕೆ ಮತ್ತು ಅಡುಗೆ ಮನೆಯಲ್ಲಿ ಅಪ್ಲೈ ಮಾಡುವಾಗ ಜಾಗೃತೆ ವಹಿಸಿ.

ಜೇಡರ ಬಲೆಯಲ್ಲಿರುವ ಸಣ್ಣ ಸಣ್ಣ ಪಾರ್ಟ್‌ಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಜೇಡರ ಮನೆಯಲ್ಲಿದ್ದರೆ ಸಮಸ್ಯೆ ಎಂದು ಶಾಸ್ತ್ರಗಳೂ ಹೇಳುತ್ತವೆ.

ಒಂದೇ ನಿರ್ದಿಷ್ಟ ಎಣ್ಣೆಗೆ ಜೇಡಗಳು ಒಗ್ಗಿಕೊಳ್ಳುವುದನ್ನು ತಪ್ಪಿಸುವುದಕ್ಕಾಗಿ ನೀವು ಪ್ರತಿ ದಿನ ವಿವಿಧ ಎಸೆನ್ಶಿಯಲ್ ಎಣ್ಣೆಯನ್ನು ಬಳಕೆ ಮಾಡುವುದು ಒಳ್ಳೆಯದು.

ಜೇಡರ ಬಲೆ ಮನೆಯಲ್ಲಿದ್ದರೆ, ಅಲ್ಲಿ ನೆಲೆಸುವ ಜನರ ಯೋಚನಾ ಶಕ್ತಿಯೇ ಕಡಿಮೆಯಾಗುತ್ತದೆ. ಟೆನ್ಷನ್ ಸಹ ಹೆಚ್ಚುತ್ತಂತೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಸಾವಿರ ಕಂಬದ ಬಸದಿ

ಸಾವಿರ ಕಂಬದ ಬಸದಿ

ಸವದತ್ತಿ ಕೋಟೆ

ಸವದತ್ತಿ ಕೋಟೆ