in ,

ವಿಂಧ್ಯಗಿರಿ ಮೇಲಿನ ಶ್ರವಣಬೆಳಗೊಳ
ಗೊಮ್ಮಟೇಶ್ವರ

ವಿಂಧ್ಯಗಿರಿ ಮೇಲಿನ ಶ್ರವಣಬೆಳಗೊಳ ಗೊಮ್ಮಟೇಶ್ವರ
ವಿಂಧ್ಯಗಿರಿ ಮೇಲಿನ ಶ್ರವಣಬೆಳಗೊಳ ಗೊಮ್ಮಟೇಶ್ವರ

ಶ್ರವಣಬೆಳಗೊಳ ಹಾಸನ ಜಿಲ್ಲೆಯ ಐತಿಹಾಸಿಕ, ಧಾರ್ಮಿಕ, ಪ್ರವಾಸಿ ತಾಣವಾಗಿದೆ. ಶ್ರವಣ ಬೆಳಗೊಳದಲ್ಲಿ ವಿಶ್ವವಿಖ್ಯಾತ ೫೮’೮”(೧೭.೮೮ ಮೀಟರ್ ಅಡಿ ಎತ್ತರದ ಬಾಹುಬಲಿಯ ಮೂರ್ತಿಯಿದೆ. ಜೈನ ಧಾರ್ಮಿಕ ಕೇಂದ್ರವಾಗಿದೆ. ನಾಲ್ಕನೇ ರಾಚಮಲ್ಲನ ಮಂತ್ರಿಯಾಗಿದ್ದ “ಚಾವುಂಡರಯ”ಇದನ್ನು ನಿರ್ಮಿಸಿದನು,ಮತ್ತು “ಚಾವುಂಡರಾಯ ಪುರಾಣ” ರಚಿಸಿದನು.

ಜೈನಧರ್ಮದಲ್ಲಿ ಕೇಳಿ ಬರುವ ಪ್ರಸಿದ್ಧವಾದ ಹೆಸರು ಗೊಮ್ಮಟೇಶ್ವರ. ಚಾವುಂಡರಾಯನು ಶ್ರವಣ ಬೆಳಗೊಳದಲ್ಲಿ ಕೆತ್ತಿಸಿದ 58 ಅಡಿ 8 ಇಂಚು ಎತ್ತರದ ಏಕಶಿಲ ಬಾಹುಬಲಿಯ ಪ್ರತಿಮೆ ಇದೆ. ಇಲ್ಲಿ 12 ವರ್ಷಗಳಿಗೊಮ್ಮೆ ಮಹಮಸ್ತಾಭಿಶೇಕವನ್ನು ನೆರವೆರಿಸಲಾಗುತ್ತದೆ. ಕೊನೆಯಬಾರಿ 2018 ಫೆಬ್ರುವರಿ 8 ರಂದು ನಡೆದಿತ್ತು,ಮುಂದೆ 2030 ರಲ್ಲಿ ನಡೆಯಲಿದೆ.

ಗೊಮ್ಮಟೇಶ್ವರ ಆದಿತೀರ್ಥಾಂಕನಾದ ವೃಷಭನಾಥನ ಕಿರಿಯ ಪುತ್ರ. ವೃಷಭನಾಥನಿಗೆ ಸುನಂದಾ ಮತ್ತು ನಂದಾ ಎಂಬ ಇಬ್ಬರು ಪತ್ನಿಯರು. ವೃಷಭನಾಥನಿಗೆ 101 ಮಕ್ಕಳು ಅದರಲ್ಲಿ ಸುನಂದೇಯ ಮಗನೆ ಗೊಮ್ಮಟೇಶ್ವರ.

ವಿಂಧ್ಯಗಿರಿ ಮೇಲಿನ ಶ್ರವಣಬೆಳಗೊಳ<br>ಗೊಮ್ಮಟೇಶ್ವರ
ಶ್ರವಣಬೆಳಗೊಳ ಗೊಮ್ಮಟೇಶ್ವರ

ಏಷ್ಯ ಖಂಡದಲ್ಲಿಯೇ ಅತಿ ಎತ್ತರದ ಮತ್ತು ಭಾರತದ ಅತಿ ಎತ್ತರದ ಏಕಶಿಲಾ ವಿಗ್ರಹಗಳಲ್ಲಿಯೇ ದೊಡ್ಡದಾದ ಗೊಮ್ಮಟನ ಶಿಲೆಯಿರುವ ಶ್ರವಣಬೆಳಗೊಳ ಪ್ರಸಿದ್ಧ ಜೈನ ಪುಣ್ಯಕ್ಷೇತ್ರ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಹೋಬಳಿ ಕೇಂದ್ರವು ಬೆಂಗಳೂರಿನಿಂದ 148 ಕಿ.ಮೀಗಳ ದೂರದಲ್ಲಿದೆ. ಶ್ರವಣ ಬೆಳಗೊಳದ ವಿಂಧ್ಯಗಿರಿಯ ಮೇಲೆ ಕಡೆಯಲಾಗಿರುವ ಈ ಮೂರ್ತಿಯನ್ನು ಚಾವುಂಡರಾಯನು ಬೃಹದಾಕಾರದ ವಿಗ್ರಹವನ್ನು ಕ್ರಿ.ಶ.೯೭೩ರಲ್ಲಿ ಕೆತ್ತಿಸಿದನು.ಅರಿಷ್ಟನೇಮಿ ಎಂಬುವ ಶಿಲ್ಪಿ ಕೆತ್ತಿದನೆಂದು ಹೇಳಲಾಗುತ್ತದೆ. ಈ ಶಿಲ್ಪಿಯು ವಿಶ್ವಕರ್ಮ ವರ್ಗಕ್ಕೆ ಸೆರಿದವನಾಗಿದ್ದು, ಪ್ರಸಿದ್ಧ ಶಿಲ್ಪಿ ಜಕಣಚಾರಿಯ ಶಿಷ್ಯನೆಂದು ಹೇಳುತ್ತಾರೆ’.
ಮತ್ತೊಂದೆಡೆ ತುಳುನಾಡಿನ ಪ್ರಸಿದ್ದ ಶಿಲ್ಪಿ “ವೀರ ಶಂಭು ಕಲ್ಕುಡ “ಕೆತ್ತಿದನೆಂದು ಹೇಳಲ್ಪಡುತ್ತದೆ. ವಿಂಧ್ಯಗಿರಿಯ ಬೆಟ್ಟದ ಮೇಲಕ್ಕೆ ಹೋಗಲು ಸುಮಾರು ೭೦೦ ಮೆಟ್ಟಿಲುಗಳನ್ನು ಹತ್ತಬೇಕಾಗುತ್ತದೆ. ಹತ್ತಲಾಗದವರಿಗೆ ಡೋಲಿ ವ್ಯವಸ್ಥೆಯೂ ಲಭ್ಯವಿದೆ. ವಿಂಧ್ಯಗಿರಿಯ ಎದುರಿನಲ್ಲೇ ಚಿಕ್ಕಬೆಟ್ಟ ಅಥವಾ ಚಂದ್ರಗಿರಿ ಬೆಟ್ಟವಿದ್ದು ಇಲ್ಲೂ ಸಹ ಪ್ರಾಚೀನ ಬಸದಿಗಳಿವೆ.

ಇಪ್ಪತ್ನಾಲ್ಕು ಕಂಬಗಳ ಬಸದಿ
ಕ್ಷೇತ್ರದಲ್ಲಿ ಜೈನ ಮಠವಿದ್ದು, ಮಠದ ಪಕ್ಕದಲ್ಲಿಯೇ ಪ್ರಾಚೀನವಾದ ಭಂಡಾರಿ ಹುಳ್ಳ ಬಸದಿ ಹಾಗೂ ಚಂದ್ರನಾಥ ಸ್ವಾಮಿಯ ಬಸದಿಯಿದೆ. ಜೈನ ಮಠದ ಈಗಿನ ಭಟ್ಟಾರಕರಾದ ಶ್ರೀ ಚಾರುಕೀರ್ತಿ ಸ್ವಾಮೀಜಿಯವರು ವಿದ್ವತ್‌ಪೂರ್ಣರು ಹಾಗೂ ಸಾಕಷ್ಟು ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ.
ಹನ್ನೆರಡು ವರ್ಷಗಳಿಂದ ಕಠಿಣ ವ್ರತದ ಕಾರಣ ಸಂಚಾರಕ್ಕೆ ವಾಹನವನ್ನೂ ಸಹ ಬಳಸದ ಸ್ವಾಮೀಜಿಯವರು ಇತ್ತೀಚೆಗೆ ತಾನೆ ಧರ್ಮಪ್ರಚಾರಕ್ಕೋಸ್ಕರ ಮತ್ತೆ ವಾಹನವನ್ನು ಬಳಸಿ ಧರ್ಮಪ್ರಚಾರ ಕೈಗೊಳ್ಳುತ್ತಿದ್ದಾರೆ. ಶ್ರೀ ಕ್ಷೇತ್ರದ ವತಿಯಿಂದ ನಡೆಸುತ್ತಿರುವ ಶ್ರೀ ಬಾಹುಬಲಿ ಇಂಜಿನಿಯರಿಂಗ್ ಕಾಲೇಜ್ ಸಹ ಇಲ್ಲಿದ್ದು, ಸಾಕಷ್ಟು ಹೊರ ರಾಜ್ಯದ ವಿದ್ಯಾರ್ಥಿಗಳು ಈ ಗ್ರಾಮೀಣ ಪ್ರದೇಶದ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ ಪಾಲಿಟೆಕ್ನಿಕ್, ವಿಜ್ಞಾನ ಕಾಲೇಜು, ಪ್ರೌಢ ಮತ್ತು ಪ್ರಾಥಮಿಕ ಶಾಲೆಯನ್ನೂ ಶ್ರೀಕ್ಷೇತ್ರದ ವತಿಯಿಂದ ನಡೆಸಲಾಗುತ್ತಿದೆ. ಶ್ರವಣಬೆಳಗೊಳ ಜೈನರ ಕಾಶಿ ಎಂದು ಕರೆಯಲ್ಪಡುವ ಸ್ಥಳ.

ವಿಂಧ್ಯಗಿರಿ ಮೇಲಿನ ಶ್ರವಣಬೆಳಗೊಳ<br>ಗೊಮ್ಮಟೇಶ್ವರ
ಚಂದ್ರನಾಥ ಸ್ವಾಮಿಯ ಬಸದಿ

ಮಹಾಮಸ್ತಕಾಭಿಷೇಕ: ಪ್ರತಿ ೧೨ ವರ್ಷಕ್ಕೊಮ್ಮೆ ನಡೆಯುತ್ತದೆ. ಇತ್ತೀಚೆಗೆ 2018 ರಲ್ಲಿ ನಡೆಯಿತು. ಪ್ರವಾಸಿಗಳಿಗೆ ಸಲಕರಣೆಗಳು: ವಿಶೇಷ ಸಲಕರಣೆಗಳು ಏನೂ ಬೇಡ. ವಸತಿ ವ್ಯವಸ್ಥೆ : ಯಾತ್ರಾರ್ಥಿಗಳಿಗೆ ಉಳಿದುಕೊಳ್ಳಲು ಸಾಕಷ್ಟು ಧರ್ಮಶಾಲೆಗಳ ವ್ಯವಸ್ಥೆಯಿದ್ದು, ವಸತಿ ಗೃಹಗಳ ಮುಖ್ಯ ಕಛೇರಿ ಬಸ್ ನಿಲ್ಧಾಣದ ಪಕ್ಕದಲ್ಲಿರುವ ವಿದ್ಯಾನಂದ ನಿಲಯದ ಹಿಂಬದಿಯಲ್ಲಿದೆ.

ಹತ್ತಿರದಲ್ಲಿರುವ ಇತರೆ ಪ್ರವಾಸ ಸ್ಥಳಗಳು ಬೇಲೂರು (ಸುಮಾರು ೮೦ ಕಿಮೀ), ಹಳೇಬೀಡು(ಸುಮಾರು ೬೦ ಕಿಮೀ), ಯಡಿಯೂರು(ಸುಮಾರು ೪೦ ಕಿಮೀ), ಆದಿ ಚುಂಚನಗಿರಿ(ಸುಮಾರು ೨೫ ಕಿಮೀ), ಶೃಂಗೇರಿ (ಸುಮಾರು ೨೦೦ ಕಿಮೀ), ಮೈಸೂರು (ಸುಮಾರು ೮೦ ಕಿಮೀ), ಶ್ರೀರಂಗಪಟ್ಟಣ (ಸುಮಾರು ೬೫ ಕಿಮೀ), ಮೇಲುಕೋಟೆ(ಸುಮಾರು ೫೦ ಕಿಮೀ) ಇತ್ಯಾದಿ.

ಬೆಂಗಳೂರಿನಿಂದ ಬರುವವರಿಗೆ ಬೆಂಗಳೂರಿನಿಂದ ಸದ್ಯಕ್ಕಿರುವುದು ರಸ್ತೆ ಮಾರ್ಗ ಮಾತ್ರ. ಈಗ ರೈಲ್ವೆ ವ್ಯವಸ್ಥೆಯು ಇದೆ.ರಾ. ಹೆ. ೪೮ (N H 48)ಯಲ್ಲಿ ಸಾಗಬೇಕು. ದಾರಿಯಲ್ಲಿ ಸಿಗುವ ಪ್ರಮುಖ ಪಟ್ಟಣಗಳೆಂದರೆ..ನೆಲಮಂಗಲ,ಕುಣಿಗಲ್,ಯಡಿಯೂರು,ಬೆಳ್ಳೂರ್ ಕ್ರಾಸ್,ಕದಬಹಳ್ಳಿ ನಂತರ ಹಿರೀಸಾವೆ. ಹಿರೀಸಾವೆಯಲ್ಲಿ ಎಡಕ್ಕೆ ತಿರುವಿದರೆ ೧೮ ಕಿ ಮೀ ನಂತರ ನೀವು ಶ್ರವಣಬೆಳಗೊಳದಲ್ಲಿ ಇರುತ್ತೀರಿ.
ರಾಜ್ಯ ಸಾರಿಗೆ ಮೂಲಕ ಬರುವಂತವರು ಬೆಂಗಳೂರಿನಿಂದ ಶ್ರವಣಬೆಳಗೊಳಕ್ಕೆ ನೇರ ಬಸ್ ಸಂಪರ್ಕ ತೀರಾ ಕಡಿಮೆ ಇರುವುದರಿಂದ ಹಾಸನ, ಮಂಗಳೂರು ಅಥವಾ ಧರ್ಮಸ್ಥಳಕ್ಕೆ ತೆರಳುವ ಯಾವುದೇ ರಾಜ್ಸ ರಸ್ತೆ ಸಾರಿಗೆ ಬಸ್ಸನ್ನು ಹಿಡಿದು ಚನ್ನರಾಯಪಟ್ಟಣದಲ್ಲಿ ಇಳಿದು, ಅಲ್ಲಿಂದ ೧೨ ಕಿಮೀ ದೂರವಿರುವ ಶ್ರವಣಬೆಳಗೊಳವನ್ನು ತಲುಪಬಹುದು. ಬೆಂಗಳೂರಿನಿಂದ ಸುಮಾರು ೧೫೦ ಕಿ ಮೀ ಇದೆ.
ಮೈಸೂರಿನಿಂದ ಬರುವವರು ಶಿವಮೊಗ್ಗ, ದಾವಣಗೆರೆ ಅಥವಾ ಅರಸೀಕೆರೆ ಕಡೆಗೆ ತೆರಳುವ ಯಾವುದೇ ರಸ್ತೆ ಸಾರಿಗೆ ಬಸ್ಸಿನಲ್ಲಿ ಚನ್ನರಾಯಪಟ್ಟಣಕ್ಕೆ ಬಂದು ಅಲ್ಲಿಂದ ಶ್ರವಣಬೆಳಗೊಳ ತಲುಪಬಹುದು. ಸ್ವಂತ ವಾಹನದಲ್ಲಿ ಬರುವವರು ಮೈಸೂರು- ಚನ್ನರಾಯಪಟ್ಟಣ ಮಾರ್ಗದಲ್ಲಿ ಬರುವ ಕಿಕ್ಕೇರಿಯಲ್ಲಿ ಎಡಕ್ಕೆ ತಿರುಗಿ ನೇರವಾಗಿ ಶ್ರವಣಬೆಳಗೊಳ ತಲುಪಬಹುದು. ಮೈಸೂರಿನಿಂದ ದೂರ ಸುಮಾರು ೧೦೦ ಕಿ ಮೀ.

ಇದೀಗ ಮಂಗಳೂರಿನಿಂದ ಶ್ರವಣಬೆಳಗೊಳದ ಮುಖಾಂತರ ಬೆಂಗಳೂರನ್ನು ಸಂಪರ್ಕಿಸುವ ರೈಲು ಕಾಮಗಾರಿ ಪ್ರಗತಿಯಲ್ಲಿದ್ದು ಶೀಘ್ರದಲ್ಲಿಯೇ ಮುಕ್ತಾಯಗೊಳ್ಳುವ ವಿಶ್ವಾಸವಿದೆ. ಈಗಾಗಲೇ ಹಾಸನದಿಂದ ಶ್ರವಣಬೆಳಗೊಳವನ್ನು ಸಂಪರ್ಕಿಸುವ ರೈಲು ಮಾರ್ಗ ಮುಕ್ತಾಯಗೊಂಡಿದೆ. ಈ ಕಾಮಗಾರಿಯು ಪೂರ್ಣಗೊಂಡರೆ ಯಾತ್ರಾರ್ಥಿಗಳು ಹೆಚ್ಚು ಸುಲಭವಾಗಿ ಕ್ಷೇತ್ರವನ್ನು ಸಂಪರ್ಕಿಸಬಹುದು.

ಮಕ್ಕಳಿಗೆ ರಜ ಸಿಕ್ಕಾಗ ಇಂತಹ ಐತಿಹಾಸಿಕ ಸ್ಥಳಗಳಿಗೆ ಭೇಟಿ ಕೊಡಿಸಿ, ಮಾಹಿತಿ ಕೊಡಿ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

One Comment

  1. Наша группа искусных специалистов завершена предоставить вам передовые системы, которые не только снабдят надежную оборону от зимы, но и подарят вашему зданию элегантный вид.
    Мы практикуем с самыми современными материалами, подтверждая прочный срок службы эксплуатации и замечательные результирующие показатели. Изолирование наружных поверхностей – это не только сокращение расходов на прогреве, но и заботливость о окружающей природе. Энергоэффективные разработки, какие мы претворяем в жизнь, способствуют не только вашему, но и сохранению природных ресурсов.
    Самое центральное: [url=https://ppu-prof.ru/]Расценки утепления стен фасада[/url] у нас стартует всего от 1250 рублей за квадратный метр! Это бюджетное решение, которое сделает ваш домашний уголок в истинный тепличный угол с минимальными расходами.
    Наши произведения – это не только изолирование, это постройка помещения, в где все аспект отразит ваш личный образ. Мы рассмотрим все ваши запросы, чтобы воплотить ваш дом еще более теплым и привлекательным.
    Подробнее на [url=https://ppu-prof.ru/]http://ppu-prof.ru/[/url]
    Не откладывайте труды о своем помещении на потом! Обращайтесь к спецам, и мы сделаем ваш дом не только теплее, но и стильнее. Заинтересовались? Подробнее о наших проектах вы можете узнать на нашем сайте. Добро пожаловать в мир комфорта и качественного исполнения.

ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಕನ್ನಡ ಸೀರಿಯಲ್ ನ ಮತ್ತೊಂದು ಖ್ಯಾತ ಜೋಡಿ ಯಾರು?

ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಕನ್ನಡ ಸೀರಿಯಲ್ ನ ಮತ್ತೊಂದು ಖ್ಯಾತ ಜೋಡಿ ಯಾರು?

ಕರ್ನಾಟಕದ ಕಾಶ್ಮೀರ ಮಡಿಕೇರಿ

ಕರ್ನಾಟಕದ ಕಾಶ್ಮೀರ ಮಡಿಕೇರಿ