ಹಿಂದು ಧರ್ಮ ಎಂದರೆ ಅದು ಮಾನವ ಧರ್ಮ, ಅನಂತ ಸತ್ಯ ಧರ್ಮ, ವಿಶ್ವದ ಪುರಾತನ ಧರ್ಮವಾಗಿದೆ. ಹಿಂದೂ ಧರ್ಮವು ಭಾರತೀಯ ಉಪಖಂಡದ ಪ್ರಧಾನ ಧರ್ಮ ಹಿಂದೂ ಧರ್ಮವು ಅದರ ಅನುಯಾಯಿಗಳಿಂದ ಹಲವುವೇಳೆ, “ಶಾಶ್ವತ ಧರ್ಮ” ಎಂಬ ಅರ್ಥವನ್ನು ಕೊಡುವ ಒಂದು ಸಂಸ್ಕೃತ ಪದಗುಚ್ಛವಾದ, ಸನಾತನ ಧರ್ಮವೆಂದು ನಿರ್ದೇಶಿಸಲ್ಪಡುತ್ತದೆ. ಸಂಕೀರ್ಣ ದೃಷ್ಟಿಗಳ ವೈವಿಧ್ಯಕ್ಕೆ ಸ್ಥಳಮಾಡಿಕೊಡಲು ಪ್ರಯತ್ನಿಸುವ ಹಿಂದೂ ಧರ್ಮದ ಜಾತಿ ವಿಶಿಷ್ಟವಾದ “ಪ್ರಕಾರಗಳು”, ಜಾನಪದ ಮತ್ತು ವೈದಿಕ ಹಿಂದೂ ಧರ್ಮದಿಂದ ವೈಷ್ಣವ ಪಂಥದಲ್ಲಿರುವ ಭಕ್ತಿ ಸಂಪ್ರದಾಯದವರೆಗೆ ವ್ಯಾಪಿಸುತ್ತವೆ. ಯೋಗಿಕ ಸಂಪ್ರದಾಯಗಳು ಮತ್ತು ಕರ್ಮದ ಕಲ್ಪನೆಯನ್ನು ಆಧರಿಸಿದ “ದೈನಿಕ ಸದಾಚಾರ”ದ ವಿಶಾಲವಾದ ವೈವಿಧ್ಯ ಮತ್ತು ಹಿಂದೂ ವಿವಾಹ ಪದ್ಧತಿಗಳಂತಹ ಸಮಾಜದ ಸಂಪ್ರದಾಯಬದ್ಧ ನಡವಳಿಕೆಗಳನ್ನೂ ಹಿಂದೂ ಧರ್ಮವು ಒಳಗೊಳ್ಳುತ್ತದೆ.
ವಿವಾಹ ಎಂಬ ಪದವು ವೈದಿಕ ಸಂಪ್ರದಾಯಗಳ ಪ್ರಕಾರ ಜನರ ಪವಿತ್ರ ಒಕ್ಕೂಟವಾಗಿ ಹುಟ್ಟಿಕೊಂಡಿದೆ, ಅಂದರೆ ಅನೇಕರು ಮದುವೆ ಎಂದು ಕರೆಯುತ್ತಾರೆ, ಆದರೆ ಕಾಸ್ಮಿಕ್ ಕಾನೂನುಗಳು ಮತ್ತು ಮುಂದುವರಿದ ಪ್ರಾಚೀನ ಆಚರಣೆಗಳನ್ನು ಆಧರಿಸಿದೆ. ವೈದಿಕ ಹಿಂದೂ ಸಂಪ್ರದಾಯಗಳ ಅಡಿಯಲ್ಲಿ, ಮದುವೆಯನ್ನು ಸಂಸ್ಕಾರಗಳಲ್ಲಿ ಒಂದಾಗಿ ನೋಡಲಾಗುತ್ತದೆ, ಇದು ಒಬ್ಬ ಹೆಂಡತಿ ಮತ್ತು ಒಬ್ಬ ಗಂಡನ ಆಜೀವ ಬದ್ಧತೆಗಳಾಗಿವೆ. ಭಾರತದಲ್ಲಿ ಮದುವೆಯನ್ನು ಬ್ರಹ್ಮಾಂಡದಿಂದ ವಿನ್ಯಾಸಗೊಳಿಸಲಾಗಿದೆ ಮತ್ತು “ಅಗ್ನಿಯೇ ಸಾಕ್ಷಿಯಾಗಿರುವ ಪವಿತ್ರ ಏಕತೆ” ಎಂದು ಪರಿಗಣಿಸಲಾಗಿದೆ. ಹಿಂದೂ ಕುಟುಂಬಗಳು ಸಾಂಪ್ರದಾಯಿಕವಾಗಿ ಪಿತೃಪ್ರಧಾನವಾಗಿವೆ.
ನಮ್ಮ ಹಿಂದೂ ಧರ್ಮದಲ್ಲಿ ಮದುವೆಯ ವೇಳೆ ಅನೇಕ ಆಚರಣೆಗಳನ್ನು ನಡೆಸಲಾಗುತ್ತದೆ. ಈ ಆಚರಣೆಗಳಲ್ಲಿ ಅರಶಿನ ಶಾಸ್ತ್ರ ಕೂಡ ಒಂದು. ವರ ಮತ್ತು ವಧುವಿಗೆ ಈ ಶಾಸ್ತ್ರವನ್ನು ಮಾಡುವುದರ ಹಿಂದೆ ಹಲವು ಕಾರಣಗಳಿವೆ.
ಮದುಮಗ ಮತ್ತು ಮದುಮಗಳಿಗೆ ಕೆಲವೊಂದು ಶಾಸ್ತ್ರಗಳು ತುಂಬಾ ಆಯಾಸವನ್ನು ಉಂಟು ಮಾಡುತ್ತದೆಯಾದರೂ ಮದುವೆಯ ಖುಷಿಯಲ್ಲಿ ಎಲ್ಲವನ್ನು ಮರೆತು ನಗುತ್ತಾ ಇರುತ್ತಾರೆ. ಹಿಂದೂ ಧರ್ಮದಲ್ಲಿರುವ ಅಷ್ಟ ವಿಧದ ವಿವಾಹ ಪದ್ಧತಿಗಳು ಇವೆ.
ಅರಶಿನ ಶಾಸ್ತ್ರ :
*ವೈಜ್ಞಾನಿಕ ಪ್ರಕಾರ ಅರಿಶಿನದಲ್ಲಿ ಹಲವಾರು ರೀತಿಯ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಇದು ದೇಹದಲ್ಲಿ ಸೂಕ್ಷ್ಮ ಜೀವಿಗಳಿಂದ ಆಗುವ ರೋಗಗಳನ್ನು ಗುಣಪಡಿಸುತ್ತದೆ. ದೇಹದಲ್ಲಿನ ವಿಷಕಾರಿ ಅಂಶಗಳನ್ನು ಇದು ಹೊರಹಾಕುತ್ತದೆ. ಮದುವೆಗೆ ಒಂದು ದಿನ ಮೊದಲು ವಧು ಹಾಗೂ ವರನಿಗೆ ಅರಿಶಿನದ ಪೇಸ್ಟ್ ಹಚ್ಚಿ ಹಾಲಿನಿಂದ ಸ್ನಾನ ಮಾಡಿಸಲಾಗುತ್ತದೆ.
*ಅರಶಿನದಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳಿರುವುದರಿಂದ ಇದನ್ನು ದೇಹಕ್ಕೆ ಹಚ್ಚುವುದರಿಂದ ಹಲವು ಚರ್ಮದ ಕಾಯಿಲೆಗಳನ್ನು ತೆಗೆದುಹಾಕಬಹುದು. ಇದರಿಂದ ಮದುವೆ ಸಮಯದಲ್ಲಿ ಯಾವುದೇ ಸೋಂಕು ಹರಡುವುದಿಲ್ಲ.
*ಅರಶಿನದಲ್ಲಿ ಔಷಧೀಯ ಗುಣಗಳಿವೆ. ಇದು ಮುಖದ ಕಲೆಗಳನ್ನು ತೆಗೆದುಹಾಕುತ್ತದೆ. ಇದರಿಂದ ಮಧುಮಕ್ಕಳ ಮುಖ ನೈಸರ್ಗಿಕವಾಗಿ ಹೊಳೆಯುತ್ತದೆ.
*ಬೇಸಿಗೆಯಲ್ಲಿ ಸೂರ್ಯನ ಹಾನಿಕಾರಕ ಕಿರಣಗಳು ಚರ್ಮದ ಮೇಲೆ ಹಾನಿಯನ್ನುಂಟುಮಾಡುತ್ತವೆ. ಹಾಗಾಗಿ ಅರಶಿನ ಹಚ್ಚುವುದರಿಂದ ಈ ಸನ್ ಟ್ಯಾನ್ ನಿವಾರಣೆಯಾಗುತ್ತದೆ.
*ಮದುವೆಯ ಸಮಯದಲ್ಲಿ ಒತ್ತಡ, ಸುಸ್ತು, ನಿದ್ರೆಯ ಕೊರತೆಯಿಂದ ಕಣ್ಣಿನ ಸುತ್ತಲೂ ಡಾರ್ಕ್ ಸರ್ಕಲ್ ಮೂಡುತ್ತದೆ. ಇದರಿಂದ ಮುಖದ ಅಂದ ಕೆಡುತ್ತದೆ. ಇದನ್ನು ಅರಶಿನ ಹಚ್ಚುವುದರಿಂದ ನಿವಾರಿಸಬಹುದು.
ಮದುಮಗಳ ಅಂಗೈಗೆ ಮೆಹಂದಿ ಹಾಕುವುದು :
*ಮದುವೆಯ ಶಾಸ್ತ್ರಗಳು ಆರಂಭವಾಗುವುದೇ ಮೆಹಂದಿಯ ಕಾರ್ಯಕ್ರಮದಿಂದ. ಇದರಲ್ಲಿ ವಧು ಹಾಗೂ ವರ ಇಬ್ಬರು ಭಾಗವಹಿಸುತ್ತಾರೆ. ಇಂದಿನ ದಿನಗಳಲ್ಲಿ ವಿಶೇಷ ವಿನ್ಯಾಸದ ಮೆಹೆಂದಿಯನ್ನು ವಧು ಮತ್ತು ವರನ ಕೈಯಲ್ಲಿ ಬಿಡಸಲಾಗುತ್ತದೆ.
*ಇದು ಕೇವಲ ಸೌಂದರ್ಯಕ್ಕೆ ಅಂಗ್ಯಕ್ಕೆ ವಿನ್ಯಾಸ ಮಾಡಿಕೊಳ್ಳುವುದು ಮಾತ್ರವಲ್ಲದೆ ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಅಡಗಿವೆ. ಇದು ನಮ್ಮ ಮನಸ್ಸನ್ನು ಶಾಂತವಾಗಿರಿಸುತ್ತದೆ. ಮದುವೆ ಸಮಯದಲ್ಲಿ ವರ ಮತ್ತು ವಧು ಎದುರಿಸುವ ಒತ್ತಡ ನಿವಾರಣೆಗೆ ಮೆಹೆಂದಿ ಇಡಲಾಗುತ್ತದೆ. ದೇಹಕ್ಕೆ ತಾಗುವ ಹಲವಾರು ರೀತಿಯ ಸೋಂಕುಗಳನ್ನು ಇದು ನಿವಾರಿಸುತ್ತದೆ.
*ಮೆಹಂದಿ ಬಳಿಕ ನಡೆಯುವ ಮುಂದಿನ ಕಾರ್ಯಕ್ರಮವೇ ಅರಿಶಿನ ಹಚ್ಚುವುದು. ಇದರಲ್ಲಿ ವರ ಹಾಗೂ ವಧುವಿನ ದೇಹಕ್ಕೆ ಅರಿಶಿನದ ಪೇಸ್ಟ್ ನ್ನು ಹಚ್ಚಲಾಗುತ್ತದೆ. ಇದು ಅವರ ತ್ವಚೆಗೆ ಕಾಂತಿಯನ್ನು ತರುವುದು.
ಮಧುವಿನ ಕೈಗಳಿಗೆ ಬಳೆಗಳು :
*ಮದುವೆಗೆ ಮೊದಲು ಮದುಮಗಳಿಗೆ ಕೈಗೆ ಬಳೆಗಳನ್ನು ಹಾಕಿಕೊಳ್ಳಲು ಸೂಚಿಸಲಾಗುತ್ತದೆ. ಮಣಿಕಟ್ಟಿನಲ್ಲಿ ಕೆಲವೊಂದು ಆಕ್ಯೂಪ್ರೆಷರ್ ಕೇಂದ್ರಗಳಿವೆ. ಬಳೆಗಳು ಈ ಕೇಂದ್ರದಲ್ಲಿ ಉಂಟುಮಾಡುವ ಒತ್ತಡವು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇಷ್ಟು ಮಾತ್ರವಲ್ಲದೆ ಚರ್ಮ ಮತ್ತು ಬಳೆಗಳ ನಡುವಿನ ತಿಕ್ಕಾಟವು ರಕ್ತ ಪರಿಚಲನೆಯನ್ನು ಉತ್ತಮಪಡಿಸುವುದು.
ಹಣೆಗೆ ಕುಂಕುಮ ಇಡುವುದು :
*ಮದುಮಗಳ ಹಣಿಗೆ ಸಿಂಧೂರವನ್ನು ಇಟ್ಟರೆ ವಧು ಮತ್ತು ವರ ಪತಿ-ಪತ್ನಿಯಾದರು ಎನ್ನುವ ಅರ್ಥವಿದೆ. ಇದು ಹುಡುಗ ಹಾಗೂ ಹುಡುಗನ್ನು ಜವಾಬ್ದಾರಿಯನ್ನು ಹೆಚ್ಚಿಸುವುದು.
*ಆದರೆ ಇದು ಕೇವಲ ಮದುವೆಯ ಸಂಕೇತ ಮಾತ್ರವಲ್ಲ. ಸಿಂಧೂರದಲ್ಲಿ ಅರಿಶಿನ ಮತ್ತು ಲಿಂಬೆ ಇದೆ. ಇದು ವಧುವಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಮನಸ್ಸನ್ನು ಶಾಂತವಾಗಿರಿಸಿ ಆಕೆಯಲ್ಲಿ ಲೈಂಗಿಕ ಆಸಕ್ತಿ ಮೂಡಿಸುವುದು.
ಕಾಲುಂಗುರ ತೊಡಿಸುವುದು :
*ಭಾರತೀಯ ಸಂಪ್ರದಾಯಂತೆ ಮಧುಮಗಳು ಕಾಲಿಗೆ ಬೆಳ್ಳಿಯ ಉಂಗುರವನ್ನು ಹಾಕಿಕೊಳ್ಳುವುದನ್ನು ನಾವು ನೋಡುತ್ತೇವೆ. ಕಾಲಿಗೆ ಉಂಗುರ ಹಾಕಿಕೊಳ್ಳುವುದರ ಹಿಂದೆ ವೈಜ್ಞಾನಿಕ ಕಾರಣಗಳು ಇವೆ. ಇದನ್ನು ಎರಡನೇ ಬೆರಳಿಗೆ ಹಾಕಿಕೊಳ್ಳಲಾಗುತ್ತದೆ.
*ಈ ಬೆರಳಿನ ನರಗಳು ನೇರವಾಗಿ ಗರ್ಭಕೋಶ ಮತ್ತು ಹೃದಯಕ್ಕೆ ಸಂಪರ್ಕವನ್ನು ಹೊಂದಿದೆ. ಕಾಲುಂಗರವು ಮಹಿಳೆಯಲ್ಲಿನ ಮುಟ್ಟನ್ನು ನಿಯಂತ್ರಿಸುತ್ತದೆ. ಕಾಲಿನಲ್ಲಿನ ಉಂಗುರವು ಭೂಮಿಯ ಧ್ರುವನ್ನು ವಿಕಿರಣಗೊಳಿಸಿ ದೇಹದೊಳಗೆ ಪ್ರವೇಶಿಸುವಂತೆ ಮಾಡುತ್ತದೆ.
ಅಗ್ನಿಗೆ ಸುತ್ತು ಬರುವುದು :
ಭಾರತೀಯ ಸಂಪ್ರದಾಯದಲ್ಲಿ ಅಗ್ನಿಯನ್ನು ಪವಿತ್ರವೆನ್ನಲಾಗುತ್ತದೆ. ಅಗ್ನಿಯ ಮುಂದೆ ವಧು ಮತ್ತು ವರ ಮದುವೆಯ ಶಾಸ್ತ್ರ ನಿರ್ವಹಿಸುತ್ತಾರೆ. ಭಾರತೀಯ ಸಂಪ್ರದಾಯದ ಪ್ರಕಾರ ಏಳು ಶಾಸ್ತ್ರಗಳಿವೆ. ಮಂಟಪದ ಸುತ್ತಲಿನ ಗಾಳಿಯನ್ನು ಅಗ್ನಿಯು ಶುದ್ದೀಕರಿಸುತ್ತದೆ. ಇದನ್ನು ಹೊರತುಪಡಿಸಿ ಅಗ್ನಿಕುಂಡಕ್ಕೆ ಹಾಕುವ ಸಾಮಗ್ರಿಗಳು ಸುತ್ತಲು ಇರುವಂತಹ ನಕಾರಾತ್ಮಕ ಅಂಶಗಳನ್ನು ದೂರ ಮಾಡುತ್ತದೆ.
ಧನ್ಯವಾದಗಳು.
GIPHY App Key not set. Please check settings