in

ರಾಮ-ಸೀತೆಯ ಪ್ರೇಮದ ಸಂಕೇತ ರಾಮಸೇತುವೆ

ರಾಮಸೇತುವೆ
ರಾಮಸೇತುವೆ

ರಾಮಾಯಣದ ಅವಧಿಯಲ್ಲಿ ಸೀತೆಯನ್ನು ರಕ್ಷಿಸಲು ನಿರ್ಮಿಸಿದ್ದ ರಾಮ ಸೇತುವೆಯನ್ನು ನಾವು ಇಂದಿಗೂ ಕೂಡ ನೋಡಬಹುದು.

ರಾಮನಿಗಿಂತ ಸೀತೆ ಕೇವಲ 2 ವರ್ಷ ಚಿಕ್ಕವಳು. ಆಕೆಗೆ 14 ವರ್ಷಕ್ಕೆ ಮದುವೆಯಾಯಿತು. ಆಗ ರಾಮನಿಗೆ 16 ವರ್ಷ! ಮದುವೆಯಾಗಿ ಇನ್ನೇನು ಯುವರಾಜನಾಗಿ ಪಟ್ಟಾಭಿಷೇಕವಾಗಬೇಕು, ಆಗ ರಾಮ ಕಾಡಿಗೆ ಹೋಗಬೇಕಾದ ಸ್ಥಿತಿ. ಕಾಡಿಗೆ ಹೋಗುವುದು ತನ್ನ ಕರ್ಮ, ನೀನು ಬರಬೇಡ ಎಂದು ರಾಮ ಹೇಳಿದರೂ, ಪತಿಯನ್ನು ಹಿಂಬಾಲಿಸುವುದು ನನ್ನ ಧರ್ಮ ಎಂದು ಸೀತೆ ಜೊತೆಗೆ ನಡೆಯುತ್ತಾಳೆ. ಲಕ್ಷ್ಮಣ, ಇವರಿಬ್ಬರನ್ನು ಹಿಂಬಾಲಿಸುತ್ತಾನೆ. ಇಲ್ಲಿಂದ ಶುರುವಾಗುವ ರಾಮನ ಪ್ರೇಮದ ಯಾನ, ರಾಮಾಯಣದ ಅಂತ್ಯದವರೆಗೂ ಮುನ್ನಡೆಯುತ್ತದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಇಡೀ ರಾಮಾಯಣವೇ ಒಂದು ಪ್ರೇಮಪುರಾಣ. 

ಕಾಡಿನಲ್ಲಿ ಸೀತೆಯ ಅಪಹರಣವಾಯಿತು, ಏಳು ಸಮುದ್ರ ದಾಟಿ ಸೀತೆಯನ್ನು ರಾವಣ ಬಂದಿಯಲ್ಲಿಟ್ಟನು. ಸೀತೆಯನ್ನು ಕರೆತರಲು ರಾಮನು ಚಿಕ್ಕ ಸೈನ್ಯದೊಂದಿಗೆ ರಾಮ ಸೇತುವೆ, ಅಂದರೆ ತೇಲುವ ಕಲ್ಲಿನಿಂದ ಸೇತುವೆಯನ್ನು ನಿರ್ಮಿಸಿ ಸೀತೆಯನ್ನು ಬಂಧಿಸಿಟ್ಟ ಈಗಿನ ಶ್ರೀಲಂಕಾ ಪ್ರದೇಶಕ್ಕೆ ಹೋಗುತ್ತಾರೆ.

ರಾಮ-ಸೀತೆಯ ಪ್ರೇಮದ ಸಂಕೇತ ರಾಮಸೇತುವೆ

ರಾಮನ ಸೈನ್ಯವೆಲ್ಲವೂ ಸಮುದ್ರವನ್ನು ದಾಟಿ, ರಾವಣನೊಡನೆ ಯುದ್ಧಮಾಡಿ ಸೀತೆಯನ್ನು ಅವನಿಂದ ಬಿಡಿಸಿಕೊಂಡು ಬರಲು ಸಹಾಯವಾಗುವಂತೆ ಹನುಮಂತ ಈ ಸೇತುವೆಯನ್ನು ಕಟ್ಟಿಸಿದನೆಂದು ನಂಬಿಕೆ. ಆದ್ದರಿಂದ ಇದಕ್ಕೆ ರಾಮನ ಸೇತುವೆ ಎಂಬ ಹೆಸರಿದೆ.

ಹಿಂದೂಗಳ  ಪಾಲಿಗೆ ಶ್ರೀರಾಮ  ಎಂದೆಂದಿಗೂ ಆರಾಧ್ಯ ದೈವ. ರಾಮ ಕಾಲ್ಪನಿಕ ವ್ಯಕ್ತಿ ಎನ್ನುವವರು ಇದ್ದಾರೆ. ರಾಮ ದೇವರಲ್ಲ  ನಮ್ಮ ನಿಮ್ಮಂತೆ ಸಾಮಾನ್ಯ ವ್ಯಕ್ತಿ ಅಂತ ವಾದಿಸುವವರೂ ಇದ್ದಾರೆ. ರಾಮನೂ ಇದ್ದ, ಅಯೋಧ್ಯೆಯೂ ಇತ್ತು, ರಾಮ ರಾಜ್ಯವೂ ಅಸ್ಥಿತ್ವದಲ್ಲಿ ಇತ್ತು ಎಂಬ ಬಗ್ಗೆ ಸಾಕ್ಷಿ ಸಮೇತ ವಾದಿಸಿದವರೂ ಇದ್ದಾರೆ. ಅವುಗಳೆಲ್ಲ ಏನೇ ಇದ್ದರೂ ಪ್ರತಿಯೊಬ್ಬ ಹಿಂದೂಗಳ ಎದೆಯ ಸಿಂಹಾಸನದಲ್ಲಿ ಶ್ರೀರಾಮ ಪಟ್ಟಾಭಿಷೇಕ ಎಂದೇ ನಡೆದು ಹೋಗಿದೆ.

1400 ಕಿ.ಮೀ ಉದ್ದದ ರಾಮ ಸೇತುವೆಯನ್ನು ಕೇವಲ 5 ದಿನಗಳಲ್ಲಿ ನಿರ್ಮಿಸಲಾಗಿದೆ. ಇದರ ನಿರ್ಮಾಣದ ಯಶಸ್ಸಿಗೆ, ಸ್ವತಃ ಶ್ರೀರಾಮನೇ ಉಪವಾಸ ವ್ರತವನ್ನು ಕೈಗೊಂಡಿದ್ದನು. ಶ್ರೀ ರಾಮನ ಸೈನ್ಯವು ಲಂಕಾಕ್ಕೆ ಹೋಗಲು ನಿರ್ಮಿಸಲಾದ ಈ ಸೇತುವೆ ರಾಮೇಶ್ವರಂ ಅನ್ನು ಶ್ರೀಲಂಕಾದ ಮನ್ನಾರ್‌ಗೆ ಸಂಪರ್ಕಿಸುತ್ತದೆ. 15 ನೇ ಶತಮಾನದವರೆಗೂ ಜನರು ಈ ಸೇತುವೆಯ ಮೇಲೆ ರಾಮೇಶ್ವರದಿಂದ ಮನ್ನಾರ್‌ಗೆ ದೂರದ ಕಾಲ್ನಡಿಗೆಯಲ್ಲಿ ಮತ್ತು ವಾಹನಗಳಲ್ಲಿ ಪ್ರಯಾಣಿಸುತ್ತಿದ್ದರು. ವಿಭೀಷಣನ ಆಜ್ಞೆಯ ಮೇರೆಗೆ ರಾಮ ಸ್ವತಃ ಸೇತುವೆಯನ್ನು ದುರುಪಯೋಗಪಡಿಸಿಕೊಳ್ಳಬಹುದೆಂಬ ಭಯದಿಂದ ಈ ಸೇತುವೆಯನ್ನು ಮುರಿದಿದ್ದಾನೆ ಎಂದು ನಂಬಲಾಗಿದೆ. ರಾಮ ಸೇತು ವಿಶ್ವಾದ್ಯಂತ ಆಡಮ್ಸ್ ಸೇತುವೆ ಎಂದು ಪ್ರಸಿದ್ಧವಾಗಿದೆ. ವಿಜ್ಞಾನವು ಇಂದು ಈ ಸೇತುವೆಯನ್ನು ರಾಮನ ಯುಗದೊಂದಿಗೆ ಸಂಬಂಧಿಸಿದೆ ಎಂದು ಪರಿಗಣಿಸುತ್ತದೆ.

ಸೇತುವೆ ಭಾರತಕ್ಕೂ ಸಿಲೋನಿಗೂ ಮಧ್ಯೆ ಸುಮಾರು ೩೬ ಕಿ.ಮೀ. ಉದ್ದದ, ಆಳವಿಲ್ಲದ ಸಮುದ್ರದಿಂದ ಸುತ್ತುವರಿಯಲ್ಪಟ್ಟ ಚಿಪ್ಪಿನಂಥ ಮರಳುಗಲ್ಲುಗಳನ್ನೊಳಗೊಂಡಿರುವ ಕಿರಿದಾದ, ಅರ್ಧ ಮುಳುಗಿರುವ ಒಡ್ಡು. ಈ ಪ್ರದೇಶದ ಕೆಲವು ಕಡೆಗಳಲ್ಲಿ ನೀರಿನ ಆಳ ೩೦ ಅಡಿ ಗಳಷ್ಟಿದ್ದು ಅಲ್ಲಲ್ಲೇ ಅನೇಕ ಸಣ್ಣ ಸಣ್ಣ ದ್ವೀಪಗಳೂ ಕಾಣಿಸಿಕೊಂಡಿದೆ.

ರಾಮಸೇತುವನ್ನು ಆಡಮ್ಸ್ ಬ್ರಿಡ್ಜ್ ಎಂದೂ ಕರೆಯುತ್ತಾರೆ, ಇದು ದಕ್ಷಿಣ ಭಾರತದ ರಾಮೇಶ್ವರಂ ಬಳಿಯ ಪಂಬನ್ ದ್ವೀಪದಿಂದ ಶ್ರೀಲಂಕಾದ ಉತ್ತರ ಕರಾವಳಿಯ ಮನ್ನಾರ್ ದ್ವೀಪದವರೆಗೆ ಸಾಗುವ ಸುಣ್ಣದ ಕಲ್ಲುಗಳ ನಿರಂತರ ವಿಸ್ತರಣೆಯಾಗಿದೆ. 1804 ರಲ್ಲಿ ಬ್ರಿಟಿಷ್ ಕಾರ್ಟೋಗ್ರಾಫರ್ ಈ ಪ್ರದೇಶವನ್ನು ಆಡಮ್ಸ್ ಸೇತುವೆ ಎಂದು ಕರೆಯುವ ಆರಂಭಿಕ ನಕ್ಷೆಯನ್ನು ಸಿದ್ಧಪಡಿಸಿದರು. ಹೀಗಾಗಿ ಇದಕ್ಕೆ ಆಡಮ್ ಸೇತುವೆ ಎಂದೂ ಕರೆಯುತ್ತಾರೆ.

ಸಮುದ್ರವನ್ನು ದಾಟಿ ಲಂಕಾ ತಲುಪುವುದು ಭಗವಾನ್ ರಾಮನ ಸೈನ್ಯಕ್ಕೆ ಸಮಸ್ಯೆಯಾಗಿತ್ತು. ಇದರಲ್ಲಿ ವಿಶ್ವಕರ್ಮರಿಂದ ಶಾಪ ಪಡೆದ ವಾನರ ಪುತ್ರರಾದ ನಳ – ನೀಲರ ಸಹಕಾರ ಸಮಸ್ಯೆಯನ್ನು ದೂರಾಗಿಸಿತು. ಅವರ ತುಂಟತನದ ಸ್ವಭಾವದಿಂದಾಗಿ, ಅವರು ಹೆಚ್ಚಾಗಿ ಋಷಿಮುನಿಗಳ ವಿಗ್ರಹಗಳನ್ನು ನೀರಿನಲ್ಲಿ ಎಸೆಯುತ್ತಿದ್ದರು. ಪರಿಣಾಮವಾಗಿ, ಈ ಕೋತಿಗಳು ಯಾವುದೇ ವಸ್ತುಗಳನ್ನು ನೀರಿಗೆ ಎಸೆದರೂ ಆ ವಸ್ತು ಮುಳುಗುವುದಿಲ್ಲವೆಂದು ಋಷಿ ಮುನಿಗಳು ನಳ – ನೀಲರಿಗೆ ಶಾಪವಿತ್ತರು. ಅವರಿಗೆ ಋಷಿಮುನಿಗಳು ನೀಡಿದ್ದ ಈ ಶಾಪವೇ ರಾಮ ಸೇತುವೆ ನಿರ್ಮಾಣಕ್ಕೆ ಸಹಕಾರಿಯಾಯಿತು ಎಂದು ಹೇಳಲಾಗುತ್ತದೆ.

ಸೇತುವೆಯ ದುರುಪಯೋಗದ ಭೀತಿಯ ಮೇರೆಗೆ ರಾಮನು ರಾವಣನನ್ನು ಕೊಂದ ನಂತರ ಲಂಕಾದಿಂದ ಹಿಂದಿರುಗುವಾಗ ರಾಮ ಸೇತುವೆಯನ್ನು ಸಮುದ್ರದಲ್ಲಿ ಮುಳುಗಿಸಿದ್ದನು. ಕಾಲಾನಂತರದಲ್ಲಿ ಸಮುದ್ರದ ನೀರಿನ ಮಟ್ಟ ಕಡಿಮೆಯಾಗಿ ಮತ್ತೆ ಸೇತುವೆ ಮೇಲಕ್ಕೆ ಬಂದಿತು ಎಂದು ಹೇಳಲಾಗುತ್ತದೆ.

ವೈಜ್ಞಾನಿಕ ವರದಿಗಳ ಪ್ರಕಾರ, ಸೇತುವೆಯು 1480 ರವರೆಗೆ ಸಂಪೂರ್ಣವಾಗಿ ಸಮುದ್ರ ಮಟ್ಟಕ್ಕಿಂತ ಮೇಲಿತ್ತು ಆದರೆ ಈ ಪ್ರದೇಶವನ್ನು ಅಪ್ಪಳಿಸಿದ ಚಂಡಮಾರುತದಿಂದ ಹಾನಿಗೊಳಗಾಯಿತು. ಕಾಲುವೆ ಆಳವಾಗುವವರೆಗೆ ಕಾಲ್ನಡಿಗೆಯಲ್ಲಿ ಸಾಗುತ್ತಿತ್ತು. ಸೇತುವೆಯು ಮೊದಲು ಭಾರತ ಮತ್ತು ಶ್ರೀಲಂಕಾ ನಡುವಿನ ಭೂ ಸಂಪರ್ಕವಾಗಿತ್ತು ಎಂದು ಸಾಬೀತುಪಡಿಸಲು ಭೂವೈಜ್ಞಾನಿಕ ಪುರಾವೆಗಳಿವೆ ಇದೆ ಅಂತಾರೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

2 Comments

ತುಳಸಿ ಗಿಡ ಒಣಗುತ್ತಿದೆ ಅಂದರೆ ಹೀಗೆ ಮಾಡಿ

ತುಳಸಿ ಗಿಡ ಒಣಗುತ್ತಿದೆ ಅಂದರೆ ಹೀಗೆ ಮಾಡಿ ನೋಡಿ 

ಕಂಕುಳ ಕೆಳಗೆ ಕಪ್ಪಾಗುವುದಕ್ಕೆ ಕಾರಣ ಏನು?

ಅಂಡರ್ ಆರ್ಮ್ / ಕಂಕುಳ ಕೆಳಗೆ ಕಪ್ಪಾಗುವುದಕ್ಕೆ ಕಾರಣ ಏನು? ಮತ್ತು ನಿವಾರಣೆಗೆ ಸುಲಭ ಉಪಾಯಗಳು