in

ಕಾರ್ಣಿಕ ದೈವ ಕೊರಗಜ್ಜ

ಕಾರ್ಣಿಕ ದೈವ ಕೊರಗಜ್ಜ
ಕಾರ್ಣಿಕ ದೈವ ಕೊರಗಜ್ಜ

ಎಲ್ಲರಿಗೂ ಒಂದು ನಂಬಿಕೆ ಅನ್ನೋದು ಜೀವನದಲ್ಲಿ ಇದೆ. ಋಣಾತ್ಮಕ ಶಕ್ತಿ ಇದ್ದರೆ ಧನಾತ್ಮಕ ಶಕ್ತಿ ಕೂಡ ಇದ್ದೆ ಇರುತ್ತದೆ. ಹೀಗೆ ಒಂದೊಂದು ಊರು, ಒಂದೊಂದು ಜನಾಂಗ, ಒಂದೊಂದು ದೇಶ, ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ಶಕ್ತಿಯನ್ನು ಆರಾಧಿಸುತ್ತಾರೆ. ಆದರೆ ಅಲ್ಲಿ ಇರುವುದು ನಂಬಿಕೆ ಮಾತ್ರ ಸತ್ಯ. ಇಲ್ಲಿ ತಿಳಿಸುವುದು ತುಳುನಾಡಿನ ಒಂದು ನಂಬಿಕೆಯ ಬಗ್ಗೆ.

ತುಳುನಾಡಿನ ಜನ ಅಷ್ಟೇ ಭೂತಾರಾಧನೆಯನ್ನೂ ನಂಬುತ್ತಾರೆ ಮತ್ತು ಅದನ್ನೇ ಬಹಳ ಶ್ರದ್ಧಾ ಭಕ್ತಿಯಿಂದ ಆರಾಧಿಸುತ್ತಾರೆ. ಹಾಗಾಗಿ ಅಲ್ಲಿನ ಬಹುತೇಕರ ಮನೆಯ ಅಂಗಳದಲ್ಲಿ ಇಂದಿಗೂ ಈ ರೀತಿಯ ಅನೇಕ ಸ್ಥಳೀಯ ದೈವಗಳ ಸಣ್ಣ ಸಣ್ಣ ಗುಡಿಗಳನ್ನು ಕಾಣಬಹುದಾಗಿದೆ. ಅಂತಹ ನಂಬಿಕೆಗಳಲ್ಲಿ ಬಹಳ ಪ್ರಸಿದ್ಧವಾಗಿರುವುದೇ ಕೊರಗಜ್ಜ ಎಂಬ ದೈವ. ಇಲ್ಲಿನ ಜನರು ಈ ಕೊರಗಜ್ಜನನ್ನು ಭಾರೀ ಶ್ರದ್ದಾ, ಭಕ್ತಿಗಳಿಂದ ಪೂಜಿಸುವುದಲ್ಲದೇ, ದಕ್ಷಿಣ ಕನ್ನಡಾದ್ಯಂತ ಈ ಕೊರಗಜ್ಜನಿಗೆ ಹಲವಾರು ದೇವಾಲಯಗಳಿವೆ. ಈ ದೇವಾಲಯಗಳಿಗೆ ವಿವಿಧ ಕಡೆಯಿಂದ ಭಕ್ತರು ಆಗಮಿಸಿ, ತಮ್ಮ ಕಷ್ಟ ನಷ್ಟಗಳನ್ನು ಹೇಳಿಕೊಂಡರೆ, ಕೊರಗಜ್ಜನು ಅದನ್ನು ಪರಿಹರಿಸುತ್ತಾನೆ ಎಂಬ ನಂಬಿಕೆಗಳು ಇಲ್ಲಿವೆ ಮತ್ತು ಅದಕ್ಕೆ ಪುಷ್ಟಿ ನೀಡುವಂತೆ ಅನೇಕ ಪವಾಡಗಳು ಇಲ್ಲಿ ಪ್ರತಿನಿತ್ಯವೂ ನೆಡೆಯುತ್ತಲೇ ಬಂದಿರುವುದು ಆ ಭಕ್ತಾದಿಗಳ ನಂಬಿಕೆಯನ್ನು ಮತ್ತಷ್ಟೂ ಧೃಡಪಡಿಸುತ್ತಿದೆ.

ಕೊರಗಜ್ಜ ನಂಬಿಕೆ ಶುರುವಾಗಿದ್ದು :

ಕಾರ್ಣಿಕ ದೈವ ಕೊರಗಜ್ಜ
ಕಾರ್ಣಿಕ ದೈವ ಕೊರಗಜ್ಜ

ಕೊರಗ ಎಂಬ ಮೂಲ ನಿವಾಸಿ ಜನಾಂಗವಿದ್ದು ಅವರು ಕೊರಗ ಭಾಷೆಯನ್ನು ಮಾತನಾಡುತ್ತಾರಾದರೂ ಆವರಿಗೂ ಮತ್ತು ಈ ಕೊರಗಜ್ಜನಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಪಣಂಬೂರಿನ ಓಡಿ ಮತ್ತು ಅಚ್ಚು ಮೈರದಿ ಎಂಬ ಕೊರಗ ದಂಪತಿಗಳಿಗೆ ಮುದ್ದಾದ ಮಗು ಜನಿಸಿ ಅದಕ್ಕೆ ತನಿಯ ಕೊರಗ ಎಂದು ಹೆಸರಿಸುತ್ತಾರೆ. ದುರಾದೃಷ್ಟವಷಾತ್ ಬಾಲ್ಯದಲ್ಲಿಯೇ ತಂದೆ ತಾಯಿಯರನ್ನು ಕಳೆದುಕೊಂಡ ಅ ಪುಟ್ಟ ಬಾಲಕ ತನಿಯ ಅನಾಥನಾದಾಗ ಆಲ್ಲಿಯೇ ಇದ್ದ ಭೈದರೆ ಜನಾಂಗದ ಮೈರಕ್ಕ ಬೈದದಿ ಎಂಬ ಮಹಿಳೆ ಆತನನ್ನು ಸಾಕಿ ಸಲಹಿ ದೊಡ್ಡನನ್ನಾಗಿ ಮಾಡುತ್ತಾಳೆ. ಬೈದರೆ ಜನಾಂಗದ ಕುಲ ಕಸುಬು ಸೇಂದಿ ತಯಾರಿಸಿ ಅದನ್ನು ಮಾರುವುದಾಗಿರುತ್ತದೆ. ಹಾಗಾಗಿ ಈ ಕಾಯಕವನ್ನು ತನಿಯ ಬಾಲ್ಯದಿಂದಲೇ ಕರಗತಮಾಡಿಕೊಂಡಿರುತ್ತಾನೆ. ಬಾಲ್ಯದಿಂದಲೂ ಅಸಾಮಾನ್ಯ ವ್ಯಕ್ತಿಯಾಗಿದ್ದ ತನಿಯ ಶಕ್ತಿ ಸಾಮರ್ಧ್ಯಗಳ ಬಗ್ಗೆ ಹಲವಾರು ಕಥೆಗಳಿವೆ ಅದೊ ಒಮ್ಮೆ ಸೇಂದಿ ತುಂಬು ಎಂದಾಗ, ಎಷ್ಟು ತುಂಬಿದರು ಅದು ಖಾಲಿಯಾಗದಿದ್ದಾಗ ಅಂತಿಮವಾಗಿ ಕದ್ರಿ ಮಂಜುನಾಥನಿಗೆ ಹರಕೆ ಹೊತ್ತು ಅಡಕೆ ಎಲೆಯಿಂದ ಪೇಂಣಲಿ(ಕವಚ)ವನ್ನು ಮಾಡಿಸಿ ಹಾಕಿದಾಗ ಆ ಸಮಸ್ಯೆ ನಿವಾರಣೆಯಾಗುತ್ತದೆ. ಇದರಿಂದ ಸಂತೋಷಗೊಂಡ ತನಿಯ ಕದ್ರಿ ಮಂಜುನಾಥನಿಗೆ ಕಂಚಿನ ಪೇಂಣಲಿ ಮಾಡಿಸುತ್ತಾನೆ. ಸುಮಾರು 7-8 ಜನರು ಹೊರಬಹುದಾದ ಆ ಕವಚವನ್ನು ಆ ತರುಣ ತನಿಯನೊಬ್ಬನೇ ಹೊತ್ತುಕೊಂಡು ಅಲ್ಲಿಯ ಜನರಿಗೆ ಅಚ್ಚರಿ ಮೂಡಿಸುತ್ತಾನೆ. ಇಂತಹ ತನಿಯ ಸೇಂದಿ ತಯಾರಿಕೆಗಾಗಿ ಮಾಗಿದ ಹಣ್ಣುಗಳನ್ನು ತರಲು ಹತ್ತಿರದ ಕಾಡಿಗೆ ಹೋಗಿದ್ದಾಗ ಅಚಾನಕ್ಕಾಗಿ ಮಾಯವಾದ ಇಲ್ಲವೇ ಕಲ್ಲಾಗಿ ಹೋದ ಎಂಬ ಪ್ರತೀತಿ ಇದ್ದರೇ ಮತ್ತೊಂದರ ಪ್ರಕಾರ ಹಣ್ಣುಗಳನ್ನು ಕೊಯ್ಯುವ ಸಲುವಾಗಿ ದೇವಾಲಯದ ಮೇಲೆಯೇ ಹತ್ತಿದ್ದನ್ನು ಕಂಡು ಅಲ್ಲಿನ ಅರ್ಚಕರು ಆತನನ್ನು ಬೆದರಿಸುವ ಸಮಯದಲ್ಲಿ ಆತ ಹತನಾದ ಪಾಪ ಪರಿಹಾರ್ಥವಾಗಿ ಆತನನ್ನು ದೈವ ಮಾಡಿದರೆಂಬ ಪ್ರತೀತಿಯೂ ಇದೆ. ಇಲ್ಲಿನ ಅನೇಕರು ಕೊರಗಜ್ಜನನ್ನು ಪರಶಿವನ ಅವತಾರವೆಂದೇ ನಂಬುತ್ತಾರೆ.

ಅಂದಿನಿಂದ ಜನರು ಈ ಕೊರಗಜ್ಜನನ್ನು ದೈವವೆಂದು ನಂಬಿ ತಮ್ಮ ಕಷ್ಟ ನಷ್ಟಗಳನ್ನು ತಾವು ಕಳೆದು ಕೊಂಡ ವಸ್ತುಗಳಿಗೆ ಇಲ್ಲವೇ ಯಾವುದೇ ಕಳ್ಳತನವಾದಾಗ ಜನರು ಇದೇ ಕೊರಗಜ್ಜನನ್ನು ಮನದಲ್ಲೇ ನೆನೆದು ಹರಕೆ ಹೊತ್ತುಕೊಂಡರೆ ಅವರ ಹರಕೆ ಈಡೇರುತ್ತದೆ ಎಂಬ ನಂಬಿಕೆ ಇದೆ. ಹಾಗೆ ಅವರ ಅಭೀಷ್ಟೆಗಳು ಈಡೇರಿದಾಗ ಕೊರಗಜ್ಜನ ದೇವಾಲಯಗಳಿಗೆ ಹೋಗಿ. ಹರಕೆಯ ರೂಪದಲ್ಲಿ ಕೊರಗಜ್ಜನಿಗೆ ಪ್ರಿಯವಾದ ಮತ್ತು ಆತ ಸೇವಿಸುತ್ತಿದ್ದ ತಾಂಬೂಲ, ಬೀಡಿ, ಸೇಂದಿ, ಮಧ್ಯವನ್ನು ಅತನಿಗೆ ಶ್ರದ್ಧಾ ಭಕ್ತಿಗಳಿಂದ ಅರ್ಪಿಸಿ ಬರುವ ಸಂಪ್ರದಾಯ ಅನಾದಿಕಾಲದಿಂದಲೂ ರೂಢಿಯಲ್ಲಿದೆ.

ಕೊರಗಜ್ಜನ ಪೂಜಾವಿಧಿವಿಧಾನಗಳು ಸಾಂಪ್ರದಾಯಿಕ ಪೂಜೆಗಿಂತ ಸ್ವಲ್ಪ ವಿಭಿನ್ನವೇ ಆಗಿದೆ. ಕುತ್ತಾರು ಕಟ್ಟೆಯ ಮೂಲ ದೇವರುಗಳಾದ ಪಂಜನ್ದಾಯ ಮತ್ತು ಬಂಟ ದೈವಗಳ ನಡುವೆ ಹೊರಗಿನಿಂದ ಬಂದ ಅರಸು ದೇವತೆಗಳು ಇಟ್ಟಿರುತ್ತಾರೆ, ಆಗ ಮೂಲ ದೇವತೆಗಳು ಕೊರಗಜ್ಜನ ಸಹಾಯ ಬೇಡಿ ಅದಕ್ಕೆ ಪರ್ಯಾಯವಾಗಿ ತಮ್ಮ ಪೂಜಾ ಸ್ಥಾನವನ್ನು ನೀಡುತ್ತಾರೆ. ಕೊರಗಜ್ಜ ದನದ ರಕ್ತವನ್ನು ಚೆಲ್ಲಿ ಅರಸು ದೇವತೆಗಳನ್ನು ಓಡಿಸುತ್ತಾನೆ. ಡೆಕ್ಕಾರು, ಬೊಲ್ಯ,ಸೋಮೇಶ್ವರ, ದೇರಳಕಟ್ಟೆ, ಕುತ್ತಾರು ಸೇರಿ ಹೀಗೆ ಒಟ್ಟು 7 ಕಲ್ಲುಗಳು ಕೋಲ ಸೇವೆಗೆ ಸೇರುತ್ತದೆ. ಮತ್ತು ಸಂಜೆಯ ನಂತರ ಆ ಪ್ರದೇಶಗಳಿಗೆ ಮಹಿಳೆಯರು ಪ್ರವೇಶಿಸುವಂತಿಲ್ಲ ಎಂಬ ನಿಯಮವಿದೆ.

ಅದೇ ರೀತಿ ಕಟ್ಟೆಯ ಬಳಿ ಸಂಜೆಯ ನಂತರ ಯಾವುದೇ ರೀತಿಯ ದೀಪವಾಗಲೀ ಇಲ್ಲವೇ ಬೆಂಕಿ ಕಡ್ಡಿಯನ್ನು ಸಹ ಹೊತ್ತಿಸಬಾರದೆಂಬ ನಿಯಮವಿದ್ದು ಆ ಪ್ರದೇಶ ಸಂಪೂರ್ಣ ಕತ್ತಲು ಮಯವಾಗಿರುತ್ತದೆ. ಹಾಗಾಗಿಯೇ ರಾತ್ರಿಯ ಹೊತ್ತು ಆ ರಸ್ತೆಯಲ್ಲಿ ಬರುವ ಗಾಡಿಗಳು ಸಹಾ ತಮ್ಮ ವಾಹನದ ದೀಪವನ್ನು ಆರಿಸಿಯೇ ಪ್ರಯಾಣಿಸುವ ರೂಢಿ ಇನ್ನೂ ಅಲ್ಲಿ ಚಾಲ್ತಿಯಲ್ಲಿದೆ. ಈ ನಿಯಮವನ್ನು ಅಕಸ್ಮಾತ್ ಯಾರಾದರೂ ಮೀರಿದಲ್ಲಿ ಅವರಿಗೆ ಕೆಡುಕುಂಟಾಗುತ್ತದೆ ಎಂಬ ನಂಬಿಕೆ ಇಲ್ಲಿನ ಜನರಿಗೆ ಇದ್ದು ಅದಕ್ಕೆ ಪುರಾವೆಯಂತೆ ಅನೇಕ ಉದಾಹರಣೆ ಕಣ್ಣ ಮುಂದೆಯೇ ಇದೆ.

ಇಲ್ಲಿನ ಅಗೆಲು ಸೇವೆ ಮತ್ತು ಕೋಲ ಅತ್ಯಂತ ಪ್ರಸಿದ್ಧವಾಗಿದ್ದು ಆ ಅಗೆಲು ಸೇವೆಯಲ್ಲಿ ಹುರುಳಿ, ಬಸಳೆ, ಮೀನು, ಕೋಳಿ, ಉಪ್ಪಿನಕಾಯಿ, ಚಕ್ಕಲಿ, ಸೇಂದಿ, ಮಧ್ಯ, ತಾಂಬೂಲ ಮುಂತಾದವುಗಳು ಕೊರಗಜ್ಜನಿಗೆ ಪ್ರಿಯವೆಂದು ನೈವೇದ್ಯಕ್ಕೆ ಇಟ್ಟು ಅದನ್ನು ಅಜ್ಜನಿಗೆ ಬಡಿಸಲಾಗುತ್ತದೆ.

ಕೊರಗಜ್ಜನ ಅವಹೇಳನ :

ಕಾರ್ಣಿಕ ದೈವ ಕೊರಗಜ್ಜ
ಕಾರ್ಣಿಕ ದೈವ ಕೊರಗಜ್ಜ


ಸಾಮಾಜಿಕ ಜಾಲ ತಾಣಗಳಲ್ಲಿ ಮನೋಜ್ ಪಂಡಿತ್ ಎನ್ನುವ ವ್ಯಕ್ತಿ ಟೀಕೆ ಮಾಡಿ ತನ್ನ ತಾಯಿಗೆ ತೀವ್ರ ಅನಾರೋಗ್ಯ ಸಮಸ್ಯೆ ಉಂಟಾಗಿ ಮತ್ತೆ ಸೇವೆ ಸಲ್ಲಿಸಿ ನಿರಾಳನಾದ. ಈ ರೀತಿಯಾಗಿ, ದೇವಸ್ವ ಅಪಹರಣ, ಅಶ್ಲೀಲ ಪಧಾರ್ಥಗಳನ್ನು ಹುಂಡಿಯಲ್ಲೂ ಹಾಕಿ ಕಷ್ಟಗಳನ್ನು ಅನುಭವಿಸಿದ್ದಾರೆ..!

ಮೈಯೆಲ್ಲಾ ಕಪ್ಪು ಬಣ್ಣ ಬಳೆದು, ಸೊಂಟಕ್ಕೆ ಪೇಂಣಲಿ (ಕವಚ) ಗೆಜ್ಜೆಯ ಸಮೇತ ಕಟ್ಟಿ ಕೈಯಲ್ಲೊಂದು ಬೆತ್ತವನ್ನು ಹಿಡಿದು ಕುಣಿಯುತ್ತಾರೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ರನ್ನಕವಿ

ಕನ್ನಡ ಸಾಹಿತ್ಯದ ಕವಿ ರತ್ನ,ಕವಿಚಕ್ರವರ್ತಿ ರನ್ನ

ಯುಗಾದಿ ಹಬ್ಬ ಆಚರಣೆ

ಯುಗಾದಿ ಹಬ್ಬ ಆಚರಣೆ