in ,

ಮೈಸೂರು ಸಂಸ್ಥಾನ

ಮೈಸೂರ್ ಸಂಸ್ಥಾನ
ಮೈಸೂರ್ ಸಂಸ್ಥಾನ

ಮೈಸೂರ್ ಇವಾಗಲೂ ಒಂದು ಪ್ರೇಕ್ಷಣೀಯ ಸ್ಥಳವಾಗಿದೆ. ಮೈಸೂರ್ ಅರಮನೆಗೊಂದು ಇತಿಹಾಸವಿದೆ.

ಮೈಸೂರು ಸಂಸ್ಥಾನ (೧೩೯೯ – ೧೯೪೭) ದಕ್ಷಿಣ ಭಾರತದಲ್ಲಿ ಆಳ್ವಿಕೆ ನಡೆಸಿದ ಒಂದು ಸಾಮ್ರಾಜ್ಯ. ೧೩೯೯ರಲ್ಲಿ ಯದುರಾಯರಿಂದ ಸ್ಥಾಪಿಸಲಾದ ಈ ಸಂಸ್ಥಾನ, ಒಡೆಯರ್ ರಾಜಮನೆತನದಿಂದ ಆಳಲ್ಪಟ್ಟಿತು. ೧೫೬೫ರವರೆಗೆ ವಿಜಯನಗರ ಸಾಮ್ರ್ಯಾಜ್ಯದ ಸಾಮಂತ ರಾಜ್ಯವಾಗಿದ್ದು, ಮುಂದೆ ಸ್ವತಂತ್ರ ರಾಜ್ಯವಾಯಿತು. ೧೫೬೫ರ ನಂತರ ವಿಜಯನಗರ ಸಾಮ್ರಾಜ್ಯದ ಅಳಿವಿನ ಜೊತೆಯಲ್ಲಿ ಮೈಸೂರು ಸಂಸ್ಥಾನವು ಸ್ವತಂತ್ರ ಸಂಸ್ಥಾನವಾಯಿತು.

ಮೈಸೂರು ಸಂಸ್ಥಾನ
ಒಡೆಯರ್

೧೭ನೇ ಶತಮಾನದಲ್ಲಿ ಸಂಸ್ಥಾನದ ವಿಸ್ತರಣೆ ಸಕ್ರಿಯಯವಾಗಿತ್ತು. ನರಸರಾಜ ಒಡೆಯರ್ ಮತ್ತು ಚಿಕ್ಕ ದೇವರಾಜ ಒಡೆಯರ್ ಆಳ್ವಿಕೆಯಲ್ಲಿ ಹೆಚ್ಚಿನ ವಿಸ್ತರಣೆ ನಡೆದು ಮೈಸೂರು ಸಂಸ್ಥಾನವು ದಕ್ಷಿಣ ಡೆಕ್ಕನ್ ಪ್ರಸ್ತಭೂಮಿಯಲ್ಲಿ ಶಕ್ತಿಯುತ ರಾಜ್ಯಾವಾಗಿ ಬೆಳೆಯಿತು. ಮೈಸೂರು ಸಂಸ್ಥಾನವು ಈಗಿನ ದಕ್ಷಿಣ ಕರ್ನಾಟಕ ಹಾಗು ತಮಿಳುನಾಡಿನ ಕೆಲವು ಜಿಲ್ಲೆಗಳನ್ನು ಹೊಂದಿತ್ತು.
ಹೈದರ್ ಆಲಿ ಹಾಗು ಅವನ ಪುತ್ರ ಟಿಪ್ಪು ಸುಲ್ತಾನರು ೧೮ನೇ ಶತಮಾನದಲ್ಲಿ ಒಡೆಯರರನ್ನು ಗದ್ದುಗೆಯಿಂದ ಇಳಿಸಿ, ಮೈಸೂರು ಸಂಸ್ಥಾನವನ್ನು ತಮ್ಮ ಆಳ್ವಿಕೆಯಲ್ಲಿ ತೆಗೆದುಕೊಂಡರು. ಇವರ ಆಳ್ವಿಕೆಯಲ್ಲಿ ಸಂಸ್ಥಾನವು ತನ್ನ ಸೇನೆಯ ಬಲಾಡ್ಯತೆಯ ತುತ್ತತುದಿ ತಲುಪಿತು. ಇವರ ಆಳ್ವಿಕೆಯ ಸಮಯದಲ್ಲಿ ಸಮರಗಳು ಹೆಚ್ಚಾಗಿ ಸಾಗಿದ್ದವು .

ಮರಾಠರ ವಿರುದ್ಧ, ಆಂಗ್ಲರ ವಿರುದ್ಧ ಹಾಗು ಗೋಲ್ಕೊಂಡದ ನಿಝಾಮರ ವಿರುದ್ಧ. ಈ ಸಮಯದಲ್ಲಿ ನಾಲ್ಕು ಆಂಗ್ಲೊ-ಮೈಸೂರು ಸಮರಗಳು ನಡೆದವು. ಮೊದಲೆರಡು ಆಂಗ್ಲೊ-ಮೈಸೂರು ಸಮರಗಳಲ್ಲಿ ಮೈಸೂರು ಜಯಗಳಿಸಿತು ಹಾಗು ಕೊನೆಯೆರಡರಲ್ಲಿ ಸೋಲಪ್ಪಿತು. ೧೭೯೯ರಲ್ಲಿ ನಾಲ್ಕನೇ ಸಮರದಲ್ಲಿ ಟಿಪ್ಪುವಿನ ಸಾವಿನ ನಂತರ ಸಂಸ್ಥಾನದ ಸಿಂಹಪಾಲು ಆಂಗ್ಲರ ಪಾಲಾಯಿತು.

ತದ ನಂತರ ಆಂಗ್ಲರು ಒಡೆಯರನ್ನ ಮೈಸೂರು ಸಂಸ್ಥಾನದ ದೊರೆಗಳನ್ನಾಗಿ ಮಾಡಿದರು. ಒಡೆಯರ ಆಳ್ವಿಕೆಯು ೧೯೪೭ರಲ್ಲಿ ಭಾರತದ ಸ್ವಾತಂತ್ರ್ಯದವರೆಗೂ ಮುಂದುವರೆಯಿತು. ೧೭೯೯- ೧೯೪೭ರ ಅವಧಿಯಲ್ಲಿ ಒಡೆಯರ ಆಳ್ವೆಕಯಲ್ಲಿ ಆಂಗ್ಲರ ರಾಜ್ಯವಾಗಿದ್ದ ಮೈಸೂರು ಆಧುನೀಕರಣಕ್ಕೆ ಪ್ರಖ್ಯಾತಿ ಹೊಂದಿತ್ತು. ಮೈಸೂರು ರಾಜರು ಸಂಗೀತ ಮತ್ತು ಚಿತ್ರಕಲೆಯಲ್ಲಿ ಅತಿಯಾದ ಆಸಕ್ತಿ ಹೊಂದಿದ್ದರಿಂದ ಮೈಸೂರಿನಲ್ಲಿ ಈ ದಿನಕ್ಕೊ ಪ್ರಖ್ಯಾತಿ ಹೊಂದಿರುವ ಚಿತ್ರಕಲೆಗಳು ಮತ್ತು ಸಂಗೀತ ಸಂಸ್ಕೃತಿ ಬೆಳಿಯಿತು.

ಮೈಸೂರು ಸಂಸ್ಥಾನ
ನಾಲ್ವಡಿ ಕೃಷ್ಣರಾಜ ಒಡೆಯರು

ಬ್ರಿಟಿಷರ ತಂತ್ರದಿಂದ ಮುಮ್ಮಡಿ ಕೃಷ್ಣರಾಜ ಒಡೆಯರು ಆಡಳಿತವನ್ನು ಬ್ರಿಟಿಷ್ ಕಮಿಷನರಿಗೆ ಬಿಟ್ಟುಕೊಡಬೇಕಾಯಿತು.
ಚಾಮರಾಜ ಒಡೆಯರು (1881-1902)
ನಾಲ್ವಡಿ ಕೃಷ್ಣರಾಜ ಒಡೆಯರು (1902-1940)
ಜಯಚಾಮರಾಜ ಒಡೆಯರು (1940ರಿಂದ ಪ್ರಜಾತಂತ್ರ ಸ್ಥಾಪನೆಯಾಗುವವರೆಗೆ, ನಂತರವೂ ರಾಜ ಪ್ರಮುಖರಾಗಿ, ರಾಜ್ಯಪಾಲರಾಗಿ ನಾಡಿಗೆ ಸೇವೆ ಸಲ್ಲಿಸಿದರು. ಮದ್ರಾಸು ರಾಜ್ಯದ ರಾಜ್ಯಪಾಲರಾಗಿ ನಿವೃತ್ತರಾದರು.)(ನಂಜರಾಜ ಒಡೆಯರ ಕಾಲಕ್ಕೆ ಹೈದರಾಲಿಯು ಪ್ರಬಲನಾಗಿ ಮೈಸೂರು ಸಂಸ್ಥಾನದ ಆಡಳಿತವನ್ನು ಕೈಗೆ ತೆಗೆದುಕೊಂಡನು, 1782ರಲ್ಲಿ ಅವನು ಮರಣ ಹೊಂದಿದನು. ನಂತರ ಅವನ ಮಗ ಟಿಪ್ಪೂಸುಲ್ತಾನನು ಸಂಸ್ಥಾನದ ಸರ್ವಾಧಿಕಾರಿಯಾಗಿ ಆಡಳಿತ ನಡೆಸುತ್ತಿದ್ದುದರಿಂದ, ನಂಜರಾಜರು, ಬೆಟ್ಟದ ಚಾಮರಾಜರು, ಖಾಸಾ ಚಾಮರಾಜರು ಕೇವಲ ಹೆಸರಿಗೆ ಮಾತ್ರ ರಾಜರಾಗಿದ್ದರು. ಮೈಸೂರು ಸಂಸ್ಥಾನದ ಯದುವಂಶ ವಿಶಿಷ್ಟವಾದ ರಾಜಮನೆತನ. ಭಾರತಕ್ಕೆ ಸ್ವಾಂತಂತ್ರ್ಯ ಬಂದ ನಂತರವೂ ಒಡೆಯರ್ ಅಥವಾ ವಡೀಯಾರ್ ಸರ್ ನೇಮ್ ಬಳಕೆ ರಾಜಮನೆತನದ ಸದಸ್ಯರಲ್ಲೇ ಉಳಿಸಿಕೊಳ್ಳಲಾಗಿತ್ತು.

ಮೈಸೂರು ಸಂಸ್ಥಾನ (1399 – 1947) ದಕ್ಷಿಣ ಭಾರತದಲ್ಲಿ ಆಳ್ವಿಕೆ ನಡೆಸಿದ ಒಂದು ಸಾಮ್ರಾಜ್ಯ. 1399ರಲ್ಲಿ ಯದುರಾಯರಿಂದ ಸ್ಥಾಪಿಸಲಾದ ಈ ಸಂಸ್ಥಾನ, ಒಡೆಯರ್ ರಾಜಮನೆತನದಿಂದ ಆಳಲ್ಪಟ್ಟಿತು. 1565ರವರೆಗೆ ವಿಜಯನಗರ ಸಾಮ್ರ್ಯಾಜ್ಯದ ಸಾಮಂತ ರಾಜ್ಯವಾಗಿದ್ದು, ಮುಂದೆ ಸ್ವತಂತ್ರ ರಾಜ್ಯವಾಯಿತು. 1565ರ ನಂತರ ವಿಜಯನಗರ ಸಾಮ್ರಾಜ್ಯದ ಅಳಿವಿನ ಜೊತೆಯಲ್ಲಿ ಮೈಸೂರು ಸಂಸ್ಥಾನವು ಸ್ವತಂತ್ರ ಸಂಸ್ಥಾನವಾಯಿತು.

ದಕ್ಷಿಣ ಭಾರತದಲ್ಲಿ ಆಳ್ವಿಕೆ ನಡೆಸಿದ ಒಂದು ಸಾಮ್ರಾಜ್ಯ, ಒಡೆಯರ್ ಕುಟುಂಬದಿಂದ ಆಳ್ವಿಕೆಗೆ ಒಳಪಟ್ಟಿದ್ದ ಇವರು ವಿಜಯನಗರ ಸಾಮ್ರಾಜ್ಯಕ್ಕೆ ಸಾಮಂತರಂತೆ ಕಾರ್ಯನಿರ್ವಹಿಸಿದರು.

ವಿಜಯನಗರ ಸಾಮ್ರಾಜ್ಯ (1565) ಪತನದೊಂದಿಗೆ ಈ ಸಾಮ್ರಾಜ್ಯವು ಸ್ವತಂತ್ರವಾಯಿತು. 17 ನೇ ಶತಮಾನದಲ್ಲಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುತ್ತ, ನರಸರಾಜ ಒಡೆಯರ್-1 ಮತ್ತು ಚಿಕ್ಕ ದೇವರಾಜ ಒಡೆಯರ್ ಅವರ ಆಳ್ವಿಕೆಯಲ್ಲಿ, ದಕ್ಷಿಣ ಕರ್ನಾಟಕ ಮತ್ತು ತಮಿಳುನಾಡಿನ ಭಾಗಗಳನ್ನು ವಶಪಡಿಸಿಕೊಳ್ಳುತ್ತ ಪ್ರಬಲ ರಾಜ್ಯವಾಯಿತು.

ಸಾಮ್ರಾಜ್ಯದ ಇತಿಹಾಸ ಮೂಲಗಳು, ಅನೇಕ ಉಪಲಬ್ಧ ಕಲ್ಲಿನ ಮತ್ತು ತಾಮ್ರದ ತಟ್ಟೆಯ ಶಾಸನಗಳಲ್ಲಿ, ಮೈಸೂರು ಅರಮನೆ ಮತ್ತು ಸಮಕಾಲೀನ ಸಾಹಿತ್ಯ,ಕನ್ನಡ, ಪರ್ಷಿಯನ್ ಮತ್ತು ಇತರ ಭಾಷೆಗಳ ದಾಖಲೆಗಳಲ್ಲಿ ಕಾಣಬಹುದು. ಸಾಂಪ್ರದಾಯಿಕ ದಾಖಲೆಗಳ ಪ್ರಕಾರ, ಮೈಸೂರು ಸಾಮ್ರಾಜ್ಯವು ಒಂದು ಸಣ್ಣ ರಾಜ್ಯವಾಗಿ ಹುಟ್ಟಿಕೊಂಡಿತು ಮತ್ತು ಇಬ್ಬರು ಸಹೋದರರು, ಯದುರಾಯ(ವಿಜಯ ಎಂದೂ ಕರೆಯಲಾಗುತ್ತಿತ್ತು) ಮತ್ತು ಕೃಷ್ಣರಾಯ ಸ್ಥಾಪಿಸಿದರು. ಯದುರಾಯ ಸ್ಥಳೀಯ ರಾಜಕುಮಾರಿ, ಚಿಕ್ಕದೇವರಸಿಯನ್ನು ವಿವಾಹವಾಗಿ, ರಾಜ್ಯವನ್ನು ಉಳಿಸಿ ಒಡೆಯರ್ ಎಂಬ ಬಿರುದನ್ನು ಗಳಿಸಿದರು. ಒಡೆಯರ್ ಕುಟುಂಬದ ಬಗ್ಗೆ ಮೊದಲ ಮಾತುಗಳು ವಿಜಯನಗರದ ರಾಜ ಅಚ್ಯುತ ದೇವ ರಾಯನ ಕಾಲದ (16 ನೆ ಶತಮಾನ) ಕನ್ನಡ ಸಾಹಿತ್ಯದಲ್ಲಿ ಕಂಡು ಬಂದಿದೆ.

ಚಿಕ್ಕ ದೇವರಾಜ ಒಡೆಯರ್ ಅವರು ಬೇರೆ ರಾಜ್ಯಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ದಲ್ಲದೆ ರಾಜ್ಯವನ್ನು ವಿಸ್ತರಿಸಿದರು. ಸಾಮ್ರಾಜ್ಯವು ಶೀಗ್ರದಲ್ಲೇ ಪೂರ್ವದಲ್ಲಿ ಸೇಲಂ ಮತ್ತು ಬೆಂಗಳೂರು, ಪಶ್ಚಿಮದಲ್ಲಿ ಹಾಸನ, ಉತ್ತರಕ್ಕೆ ಚಿಕ್ಕಮಗಳೂರು ಮತ್ತು ತುಮಕೂರು ಮತ್ತು ದಕ್ಷಿಣದ ಉಳಿದ ಭಾಗದಲ್ಲಿ ಕೊಯಮತ್ತುರ್ ವಶಪಡಿಸಿಕೊಂಡಿತು.

ಭಾರತಕ್ಕೆ ಸ್ವಾಂತಂತ್ರ್ಯ ಬಂದ ನಂತರವೂ ಒಡೆಯರ್ ಅಥವಾ ವಡೀಯಾರ್ ಸರ್ ನೇಮ್ ಬಳಕೆ ರಾಜಮನೆತನದ ಸದಸ್ಯರಲ್ಲೇ ಉಳಿಸಿಕೊಳ್ಳಲಾಗಿತ್ತು. 1399 ರಿಂದ 1947ರ ತನಕ ರಾಜ್ಯಭಾರ ಮಾಡಿದ ಯದುವಂಶ ಸ್ಥಾಪಕ ಯದುರಾಯ ಅಥವಾ ವಿಜಯ.

ಸೋದರ ಕೃಷ್ಣ ಅಥವಾ ಕೃಷ್ಣರಾಯನೊಂದಿಗೆ ಯದುರಾಯ ದ್ವಾರಕೆಯಿಂದ ತೀರ್ಥಯಾತ್ರೆಗಾಗಿ ಮೈಸೂರಿಗೆ ಬಂದಿದರು. ಮೇಲುಕೋಟೆ ದೇಗುಲಕ್ಕೆ ಭೇಟಿ ಕೊಟ್ಟ ನಂತರ ದೊಡ್ಡಕೆರೆ ಸಮೀಪವಿರುವ ಕೋಡಿ ಬಸವಣ್ಣ ದೇಗುಲದಲ್ಲಿ ಇಬ್ಬರು ನೆಲೆಸಿದ್ದರು. ಪ್ರಾಂತ್ಯದ ರಾಜ ನಿಧನರಾಗಿದ್ದು ನಿಮ್ಮ ಮಗಳನ್ನು ನನಗೆ ಮದುವೆ ಮಾಡಿಕೊಡಿ ಎಂದು ಮಹಾರಾಣಿ ಅವರಿಗೆ ಬೆದರಿಕೆ ಒಡ್ಡಿದ ಪಕ್ಕದ ರಾಜ್ಯ ಕರುಗಹಳ್ಳಿಯ ಮಾರನಾಯಕ ಪೀಡಿಸುತ್ತಿರುತ್ತಾನೆ.

ಈ ಸಂದರ್ಭದಲ್ಲಿ ಯಾತ್ರಾರ್ಥಿಗಳಾಗಿದ್ದ ಯದುರಾಯ ಹಾಗೂ ಕೃಷ್ಣರಾಯರಿಗೆ ಈ ವಿಷಯ ತಿಳಿಯುತ್ತದೆ. ಜಂಗಮ ಸ್ವಾಮಿಗಳೊಬ್ಬರ ನೆರವು ಪಡೆದು ಮಾರನಾಯಕನನ್ನು ಬಗ್ಗು ಬಡಿದು ಮೈಸೂರನ್ನು ಉಳಿಸಿ ಯದುವಂಶ ಸ್ಥಾಪಿಸುತ್ತಾರೆ. ಅಲ್ಲಿಂದ ಇಲ್ಲಿವರೆಗೂ ಸುಮಾರು 25ಕ್ಕೂ ರಾಜರ ರಾಜ್ಯಭಾರ ಮಾಡಿದ್ದಾರೆ. ಸ್ವಾತಂತ್ರ್ಯದ ಬಳಿಕ ಮೈಸೂರು ರಾಜ್ಯ ಭಾರತ ಗಣರಾಜ್ಯಕ್ಕೆ ಸೇರ್ಪಡೆಗೊಳ್ಳುತ್ತದೆ. ಯದುವಂಶದ ಮೈಸೂರು ದೊರೆಗಳನ್ನು ಒಡೆಯರ್(ಒಡೆಯ) ಎಂದು ಗುರುತಿಸಲಾಗುತ್ತದೆ.

ಹೈದರಾಲಿ ನಂತರ ಟಿಪ್ಪು ಸುಲ್ತಾನ್ ಅಧಿಕಾರಕ್ಕೆ ಬಂದರು. ಬ್ರಿಟಿಷರ ಸೇನೆ ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡು, ಟಿಪ್ಪುಯುದ್ಧದಲ್ಲಿ ಹತನಾದದ್ದು ಮೈಸೂರಿನ ಇತಿಹಾಸದಲ್ಲಿ ಪ್ರಮುಖ ಘಟನೆಯಾಗಿದೆ. ಆ ನಂತರ ಒಡೆಯರ್ ವಂಶದ ಐದು ವರ್ಷ ಪ್ರಾಯದ ಬಾಲಕ(ಮುಮ್ಮಡಿ ಕೃಷ್ಣರಾಜ ಒಡೆಯರ್) ಮೈಸೂರಿನ ದೊರೆಯಾಗಿ ಪ್ರತಿಷ್ಠಾಪಿಸಲ್ಪಟ್ಟದ್ದು ಯದುವಂಶದ ಮರುಚಾಲನೆಗೆ ಕಾರಣಕರ್ತೃವಾಯಿತು.

1831ರಲ್ಲಿ ಮುಮ್ಮಡಿಯವರ ಕೈಯಿಂದ ಅಧಿಕಾರ ನಿರ್ವಹಣೆಯನ್ನು ಕಿತ್ತುಕೊಂಡು ಬ್ರಿಟಿಷರೇ ನೇರವಾಗಿ ಆಡಳಿತ ನಡೆಸತೊಡಗಿದರು. 1867ರಲ್ಲಿ ಮೈಸೂರು ರಾಜ್ಯವನ್ನು ಒಡೆಯರಿಗೆ ಹಿಂದಕ್ಕೊಪ್ಪಿಸುವ ತೀರ್ಮಾನ ಕೈಗೊಂಡಿತು.

ಮುಮ್ಮಡಿಯವರ ದತ್ತು ಪುತ್ರ 10ನೆ ಚಾಮರಾಜೇಂದ್ರ ಒಡೆಯರ್ 18 ವರ್ಷದ ಪ್ರಾಯಕ್ಕೆ ಬಂದಾಗ ಬ್ರಿಟಿಷರು 1881ರಲ್ಲಿ ರಾಜ್ಯಾಧಿಕಾರವನ್ನು ಮತ್ತೆ ಹಿಂತಿರುಗಿಸಿದರು. ಚಾಮರಾಜೇಂದ್ರ ಒಡೆಯರ್ 1894ರಲ್ಲಿ ಕೇವಲ 14 ವರ್ಷಗಳ ಆಡಳಿತದ ನಂತರ ಅನಿರೀಕ್ಷಿತವಾಗಿ ಗಂಟಲು ನೋವಿನಿಂದ ನಿಧನರಾದರು.

ನಾಲ್ವಡಿಯವರು ನಿಧನರಾದದ್ದು 3-8-1940ರಂದು. ಅವರಿಗೆ ಪುತ್ರ ಸಂತತಿಯಿರಲಿಲ್ಲ. ಹೀಗಾಗಿ ಅವರ ಸೋದರ ಯುವರಾಜ ಶ್ರೀಕಂಠೀರವ ನರಸಿಂಹರಾಜ ಒಡೆಯರ್ ಅವರ ಪುತ್ರರಾದ ಜಯ ಚಾಮರಾಜ ಒಡೆಯರು ಮಹಾರಾಜರಾಗಿ ಪಟ್ಟಾಭಿಷಿಕ್ತರಾದರು.

ಮೈಸೂರಿನ ಮಹಾರಾಜ ಶ್ರೀಜಯಚಾಮರಾಜೇಂದ್ರ ಒಡೆಯರ್ ಯದುವಂಶದ 25ನೆ ದೊರೆ. ನಿಧನರಾಗಿದ್ದು ಸೆ.22, 1957ರಂದು ಶ್ರೀ ಜಯಚಾಮರಾಜೇಂದ್ರ ಒಡೆಯರ ಪುತ್ರ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಯದುವಂಶದ ಕೊನೆಯ ಕುಡಿಯಾಗಿದ್ದರು. ಡಿ. 10, 2013ರಂದು ಇಹಲೋಕದ ವ್ಯಾಪರ ಮುಗಿಸಿದರು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಯಕ್ಷಗಾನ

ಯಕ್ಷಗಾನ ಕರಾವಳಿ ಕಲೆ ಈಗ ಎಲ್ಲಾ ಕಡೆ ಇದೆ

ಎಳ ನೀರು

ಬೇಸಿಗೆ ಶುರುವಾಯಿತು,ಬೇಸಿಗೆಯಲ್ಲಿ ಸೇವಿಸಬಹುದಾದ ಕೆಲವು ಅಹಾರಗಳು