ಶ್ರೀ ಲಕ್ಷ್ಮಣ ಸಮೇತ ಸೀತಾ ರಾಮಚಂದ್ರ ಸ್ವಾಮಿ, ಭದ್ರಾಚಲಂ. ಗೋದಾವರಿ ನದಿ ತೀರದತ್ತ ಪಶ್ಚಿಮ ದಿಕ್ಕಿನತ್ತ ಮುಖ್ಯ ದೇವರು ಮುಖ ಮಾಡಿರುವುದು ಈ ದೇವಸ್ಥಾನದ ವಿಶೇಷತೆಯಾಗಿದೆ. ಭದ್ರಾಚಲಂನಲ್ಲಿರುವ ದೇವಸ್ಥಾನವು ಚಿಕ್ಕ ಪರ್ವತದ ಮೇಲೆ ನೆಲೆಸಿದೆ. ಶ್ರೀ ರಾಮನ ವಿಗ್ರಹವು ವಿಶೇಷ ಲಕ್ಷಣಗಳನ್ನು ಹೊಂದಿದೆ. ದೇವರ ಮೂರ್ತಿ ನಾಲ್ಕು ಕೈಗಳೊಂದಿಗೆ ಪದ್ಮಾಸನ ಸ್ಥಿತಿಯಲ್ಲಿದ್ದು, ಬಿಲ್ಲು ಮತ್ತು ಬಾಣವನ್ನು ಮುಂದಿನ ಎರಡು ಕೈಗಳಿಂದ ಮತ್ತು ಶಂಖ ಮತ್ತು ಚಕ್ರವನ್ನು ಹಿಂಬದಿಯ ಕೈಗಳಿಂದ ಹಿಡಿದುಕೊಂಡಿದ್ದಾನೆ. ಶಂಖವನ್ನು ಬಲಗೈಯಲ್ಲಿ ಮತ್ತು ಚಕ್ರವನ್ನು ಎಡಕೈಯಲ್ಲಿ ಹಿಡಿದುಕೊಂಡಿದ್ದು, ಚಕ್ರದ ಮೂಲಕ “ರಾಕ್ಷಸರ” ಸಂಹಾರವನ್ನು ಪೂರ್ಣಗೊಳಿಸಿರುವಂತೆ ಸೂಚಿಸುತ್ತಿದ್ದರೆ, ಶಂಖದ ಮೂಲಕ ದೇವರು ವಿಶ್ವಕ್ಕೆ ಶಾಂತಿ ಮತ್ತು ರಕ್ಷಣೆಯ ಅಭಯವನ್ನು ಸೂಚಿಸುತ್ತಿದ್ದಾರೆ. ಶ್ರೀ ರಾಮನ ಎಡಭಾಗದಲ್ಲಿ ಸೀತೆಯು ನೆಲೆಸಿದ್ದರೆ ಲಕ್ಷ್ಮಣನು ಬಲಭಾಗಕ್ಕಿದ್ದಾನೆ. ಆದರೆ ಉತ್ಸವ ವಿಗ್ರಹದಲ್ಲಿ, ಸೀತೆ ಮತ್ತು ಲಕ್ಷ್ಮಣರು ರಾಮನ ಎರಡೂ ಪಕ್ಕದಲ್ಲಿದ್ದಾರೆ, ರಾಮನನ್ನು “ವೈಕುಂಠ ರಾಮ” ಎಂದೂ ಕರೆಯಲಾಗುತ್ತದೆ.
ಮಹಾಮಂಟಪದ ನಾಲ್ಕು ಸ್ತಂಭಗಳ ಮುಖಗಳು ಅಷ್ಟಲಕ್ಷ್ಮೀ, ಶಿವನ 18 ರೂಪಗಳು, ದಶಾವತಾರ, 12 ಅಶ್ವರಗಳು ಹಾಗೂ ಇತರ ಮನಮೋಹಕ ಕಲಾಕೃತಿಗಳನ್ನು ಒಳಗೊಂಡಿದೆ. ಮಂಟಪದ ಚಾವಣಿಯು ಗ್ರಾನೈಟ್ ಕಲ್ಲಿನ ಒಂದೇ ತುಂಡಿನಿಂದ ಕೆತ್ತಲಾದ ಕಮಲದ ಮೂರು ದಳಗಳ ಚಿತ್ರಗಳನ್ನು ಒಳಗೊಂಡಿದೆ. ಮಹಾಮಂಟಪ ಮತ್ತು ಗರ್ಭ ಗುಡಿಯ ಒಳಭಾಗಗಳು ಅಪ್ಸರೆಯರ ಚಿತ್ರದಿಂದ ಕಂಗೊಳಿಸುತ್ತಿವೆ. ಗರ್ಭ ಗುಡಿಯ ಮೇಲ್ಭಾಗದ ಅಷ್ಟಭುಜಾಕೃತಿಯ-ವಿಮಾನವು ಗ್ರಾನೈಟ್ ಕಲ್ಲಿನೊಂದಿಗೆ ಮೂರು-ಅಂತಸ್ತುಗಳ ನಿರ್ಮಾಣವಾಗಿದೆ. ವಿಮಾನದ ಮತ್ತೊಂದು ಮುಖಭಾಗವು ವಿಷ್ಣುವಿನ 18 ರೂಪಗಳು, ಗರುಡ, ಸಿಂಹ, ಸೋಮಸ್ಕಂದ ಮತ್ತು ದಕ್ಷಿಣಾಮೂರ್ತಿಯನ್ನು ಚಿತ್ರಿಸಿರುವ ಸುಂದರವಾದ ಕಲ್ಲಿನ ಆಕೃತಿಗಳನ್ನು ಒಳಗೊಂಡಿದೆ. ವಿಮಾನದ ಕಿರೀಟವಾಗಿರುವ ಶಿಖರವು ಗರ್ಭಗುಡಿಯಾಗಿದ್ದು ಅದನ್ನು ಗ್ರಾನೈಟ್‌ನ ಒಂದೇ ತುಂಡಿನಿಂದ ಕೆತ್ತಲಾಗಿದ್ದು, ಅದು ಸುಮಾರು 36 ಟನ್ ಭಾರವಿದೆ. ಇದು ಇತ್ತೀಚಿನ ಶತಮಾನಗಳಲ್ಲಿ ಅತೀ ದೊಡ್ಡದಾಗಿದೆ.
ರಾಮದಾಸ್ ಅವರು ಗೋದಾವರಿಯಿಂದ ಪಡೆದ ಸುದರ್ಶನ ಚಕ್ರದಿಂದ ಶಿಖರವನ್ನು ಮುಕುಟಪ್ರಾಯಗೊಳಿಸಲಾಗಿದೆ. ಸಾವಿರ ಮೂಲೆಗಳೊಂದಿಗೆ ಅಷ್ಟ-ಮುಖದ ಚಕ್ರವು ಸುದರ್ಶನ ಮೂರ್ತಿಯನ್ನು ಒಳಗೊಂಡಿದ್ದು, ಅದನ್ನು ಮಧ್ಯದಲ್ಲಿ ಕೆತ್ತನೆ ಮಾಡಲಾಗಿದೆ. ದೇವಸ್ಥಾನ ಪ್ರಾಂಗಣದ ಸಮೀಪದಲ್ಲೇ ಮೂರು ಸ್ತಂಭಗಳಿವೆ – “ರಾಮಕೋಟಿ ಕ್ರತು ಸ್ತಂಭ”ವು ಶ್ರೀ ರಾಮಾನುಜರ್ ಅವರು ದೇಶದ ಎಂಟು ವಿವಿಧ ತೀರ್ಥಕ್ಷೇತ್ರಗಳಲ್ಲಿ ಸ್ಥಾಪಿಸಿರುವ 108 ಸ್ತಂಭಗಳಲ್ಲಿ ಒಂದಾಗಿದೆ. ಸ್ತಂಭದ ಬದಿಗಳಲ್ಲಿ ದೇವನಾಗರಿ ಲಿಪಿಯಲ್ಲಿ ಸಂಸ್ಕೃತದಲ್ಲಿ ” ಸಂಕ್ಷಿಪ್ತ ರಾಮಾಯಣ” ಬರಹವನ್ನು ಕೆತ್ತಲಾಗಿದೆ. ಒಂದು ಸ್ತಂಭವು ರಾಮದಾಸ್ ಅವರು ಬರೆದ “ದಾಶರಥಿ ಶತಕ” ದ ಪದ್ಯಗಳನ್ನು ಒಳಗೊಂಡಿದ್ದು, ಮುಂಭಾಗದಲ್ಲಿ ಬಿಳಿ ಅಮೃತಶಿಲೆಯಲ್ಲಿ ಅವರ ಚಿತ್ರವಿದೆ.

ಈ ದೇವಾಲಯ ಪಟ್ಟಣದ ಮತ್ತೊಂದು ಅನನ್ಯ ವೈಶಿಷ್ಟ್ಯವೆಂದರೆ, ಮುಖ್ಯ ದೇವಾಲಯಕ್ಕೆ ಎರಡು ಕ್ಷೇತ್ರ ಪಾಲಕರಿದ್ದಾರೆ. ಅವರುಗಳು :
1.ಶ್ರೀ ಯೋಗಾನಂದ ಜ್ವಾಲಾ ಲಕ್ಷ್ಮೀ ನರಸಿಂಹ ಸ್ವಾಮಿ (ಭಗವಾನ್ ನರಸಿಂಹ)
2.ಶ್ರೀ ಅನ್ನಪೂರ್ಣ ಕಾಶಿ ವಿಶ್ವೇಶ್ವರ ಸ್ವಾಮಿ (ಭಗವಾನ್ ಶಿವ)
ಎರಡು ದೇವಾಲಯಗಳಲ್ಲೂ ಸಹ ಮುಖ್ಯ ದೇವರುಗಳು ಗೋದಾವರಿ ನದಿಯತ್ತ ಪಶ್ಚಿಮ ದಿಕ್ಕಿನತ್ತ ದೇವರು ಮುಖ ಮಾಡಿದ್ದಾರೆ. ಈ ಎರಡು ದೇವಾಲಯಗಳು ಸೀತಾ ರಾಮಚಂದ್ರ ಸ್ವಾಮಿ ದೇವಾಲಯಕ್ಕೆ ಉಪ ದೇವಾಲಯಗಳಾಗಿವೆ ಮತ್ತು ಮುಖ್ಯ ದೇವಾಲಯದಷ್ಟೇ ಪ್ರಮುಖವಾಗಿವೆ. ಈ ಎರಡೂ ಉಪ ದೇವಾಲಯಗಳು ಶ್ರೀ ರಾಮ ದೇವಸ್ಥಾನದಂತೆ ಸಣ್ಣ ಬೆಟ್ಟದ ಮೇಲೆ ಸ್ಥಿತಗೊಂಡಿವೆ. ಈ ದೇವಾಲಯಗಳು ಭಗವಾನ್ ಶ್ರೀ ರಾಮನ ಮುಖ್ಯ ದೇವಾಲಯದಷ್ಟೇ ಪ್ರಮುಖವಾಗಿವೆ.
ಭದ್ರಾಚಲಂ ದೇವಾಲಯದ ಇತಿಹಾಸ
ವಿಶ್ವದಾದ್ಯಂತದ ಲಕ್ಷಾಂತರ ಜನ ಭಕ್ತಾದಿಗಳನ್ನು ಆಕರ್ಷಿಸುವ ಪವಿತ್ರವಾದ ಸ್ಥಳವಾಗಿರುವ ಇದು ಭಗವಾನ್ ರಾಮನ, ಶ್ರೀ ಮಹಾವಿಷ್ಣುವಿನ ಏಳನೇ ಅವತಾರ ನಿವಾಸ ಸ್ಥಾನವಾಗಿದೆ. ದಕ್ಷಿಣಾಭಿಮುಖವಾಗಿ ಹರಿಯುತ್ತಿರುವ ಪವಿತ್ರ ನದಿ ಗೋದಾವರಿಯಿಂದ ಸುತ್ತುವರಿಯಲ್ಪಟ್ಟಿರುವ ಈ ಪರ್ವತ ಸ್ಥಳವೇ ಪ್ರಸಿದ್ಧ ದೇಗುಲ ಸ್ಥಳವಾದ ಭದ್ರಾಚಲಂ ಆಗಿದ್ದು – ಈ ಹೆಸರು ಭದ್ರಗಿರಿ ಭದ್ರನ ಪರ್ವತ – ಮೇರು ಮತ್ತು ಮೇನಕರ ದೈವದತ್ತ ಮಗು ನಿಂದ ಉದ್ಭವವಾಗಿದೆ. ಇತಿಹಾಸಗಳ ಪ್ರಕಾರ, ಈ ದೇಗುಲದ ಪ್ರಾಮುಖ್ಯತೆಯು ರಾಮಾಯಣ ಕಾಲದಿಂದಲೂ ಜಾರಿಯಲ್ಲಿದೆ. ಈ ಸುಸಂಬದ್ಧ ಪರ್ವತ ಸ್ಥಳವು ರಾಮ ಮತ್ತು ಅವನ ಪತ್ನಿ ಸೀತೆ ಮತ್ತು ತಮ್ಮ ಲಕ್ಷ್ಮಣನೊಂದಿಗೆ ವನವಾಸವನ್ನು ಕಳೆದ ರಾಮಾಯಣ ಕಾಲದಲ್ಲಿನ “ದಂಡಕಾರಣ್ಯ” ವು ಅಸ್ತಿತ್ವದಲ್ಲಿದ್ದ ಸ್ಥಳವಾಗಿದೆ ಮತ್ತು ಪರ್ಣಶಾಲೆ ಪ್ರಸಿದ್ಧ ಚಿನ್ನದ ಜಿಂಕೆಗೆ ಸಂಬಂಧಿಸಿದ ಮತ್ತು ರಾವಣನು ಸೀತೆಯನ್ನು ಅಪಹರಿಸಿದ ಸ್ಥಳ ಸಹ ಈ ದೇವಾಲಯ ಸ್ಥಳದ ಸನಿಹದಲ್ಲೇ ಇದೆ. ಹಾಗೆಯೇ, ರಾಮಾವತಾರದ ಬಹು ಕಾಲದ ನಂತರ, ಭಗವಾನ್ ಶ್ರೀ ರಾಮಚಂದ್ರನ ಕೃಪಾಕಟಾಕ್ಷಕ್ಕಾಗಿ ಪ್ರಾರ್ಥಿಸಿ ಯುಗಗಳ ಮೂಲಕ ತಪಸ್ಸನ್ನು ಮುಂದುವರಿಸಿದ ತನ್ನ ಭಕ್ತ ಭದ್ರನಿಗೆ ತನ್ನ ವಾಗ್ಧಾನವನ್ನು ಪೂರ್ಣಗೊಳಿಸಲು ಭಗವಾನ್ ಮಹಾವಿಷ್ಣುವು ತಾನೇ ರಾಮನೆಂದು ಈ ಮಂದಿರದ ಸ್ಥಳದಲ್ಲಿಯೇ ಕಾಣಿಸಿಕೊಂಡನು.

ಅವತಾರ ತಾಳುವಿಕೆಯ ಅವಶ್ಯಕತೆ : ತನ್ನ ಉತ್ಕಟ ಭಕ್ತ ಭದ್ರನ ಬಹುದಿನಗಳ ಇಚ್ಛೆಯನ್ನು ಪೂರೈಸಲು ವೈಕುಂಠ ರಾಮನ ಅವತಾರವನ್ನು ತಾಳುವ ಅಗತ್ಯ ಉಂಟಾಯಿತು ಎಂಬುದನ್ನು ಇತಿಹಾಸ ವರ್ಣಿಸುತ್ತದೆ.
ಮಹರ್ಷಿ ಭದ್ರ : ಭಗವಾನ್ ರಾಮನ ಕೃಪೆಯನ್ನು ಪಡೆಯಲು ಭದ್ರನು ಗೋದಾವರಿ ನದಿ ತೀರದ ಈ “ದಂಡಕಾರಣ್ಯ” ದಲ್ಲಿ ಪ್ರಾಯಶ್ಚಿತ್ತವನ್ನು ಮಾಡಿದನು ಮತ್ತು ಆನಂತರ ಅವನ ಕಡುಪ್ರೇಮದ ದೇವರು ಸಮ್ಮತಿಸಿದನು – ಆನಂದಭರಿತವಾದ “ಋಷಿ” ಯು ರಾಮನಿಗೆ ತನ್ನ ತಲೆಯ ಮೇಲೆ ವಿರಾಜಮಾನರಾಗಲು ಪ್ರಾರ್ಥಿಸಿಕೊಂಡನು. ಆದರೆ ತನ್ನ ಪತ್ನಿ ಸೀತೆಯನ್ನು ಹುಡುಕುತ್ತಲಿದ್ದ ರಾಮನು, ಸೀತೆಯನ್ನು ಹುಡುಕಿದ ಬಳಿಕ ಮತ್ತು ರಾವಣನ್ನು ಸಂಹರಿಸಿ ‘ಧರ್ಮ’ವನ್ನು ಸ್ಥಾಪಿಸುವ ಪ್ರಕ್ರಿಯೆಯನ್ನು ಪೂರೈಸಿ ಮರಳಿ ಬರುವಾಗ ಬೇಡಿಕೆಯನ್ನು ಪೂರೈಸುವೆನೆಂದು ತನ್ನ ಭಕ್ತನಿಗೆ ಭರವಸೆಯನ್ನು ನೀಡಿದನು. ಆದರೆ ರಾಮನು ರಾಮಾವತಾರದಲ್ಲಿ ಭರವಸೆಯನ್ನು ಪೂರೈಸದ ಕಾರಣದಿಂದ ಋಷಿಯು ತನ್ನ ಘೋರ ಪ್ರಾಯಶ್ಚಿತ್ತವನ್ನು ಮುಂದುವರಿಸುತ್ತಿದ್ದನು. ಆಗ, ಶ್ರೀ ಮಹಾವಿಷ್ಣುವು ತಾನೇ ವೈಕುಂಠ ರಾಮನ ರೂಪದಲ್ಲಿ “ಶಂಖು” ವನ್ನು ಊದುತ್ತಾ ತನ್ನ ಆಗಮನವನ್ನು ಸೂಚಿಸಿ, ತನ್ನ ಪತ್ನಿ ಸೀತೆ ಮತ್ತು ತಮ್ಮ ಲಕ್ಷ್ಮಣನ ಜೊತೆಗೂಡಿ, ‘ಗಜೇಂದ್ರ ಮೋಕ್ಷಮ್’ ಅನ್ನು ಹೋಲುವಂತೆ ಭಕ್ತನಾದ ಭದ್ರನ ಬಳಿ ಧಾವಿಸಿದನು – ಆದ್ದರಿಂದ, ರಾಮನ ಮೂರ್ತಿಯು ನಾಲ್ಕು ಕೈಗಳನ್ನು ಹೊಂದಿದ್ದು ಬಲ ಕೈನಲ್ಲಿ ಶಂಖ ಪಾಂಚಜನ್ಯ-ಶಂಖ, ಅವನ ಎಡದಲ್ಲಿ ಸುದರ್ಶನ ಚಕ್ರ ಮತ್ತು ಧನುರ್ಬಾಣ ಉಳಿದ ಎರಡು ಕೈಗಳಲ್ಲಿ ಬಿಲ್ಲು ಮತ್ತು ಬಾಣ, ರಾಮನ ಎಡ ತೊಡೆಯಲ್ಲಿ ಸೀತೆಯು ಅನುಗ್ರಹಿಸುತ್ತಾ ಇದ್ದರೆ, ತಮ್ಮ, ರಾಮನ ಎಡದಲ್ಲಿ ಇರುತ್ತಾರೆ. ದೇವರನ್ನು ಪ್ರತಿಷ್ಠಾಪಿಸಿರುವ ಬೆಟ್ಟದ ಸ್ಥಳವು, ಭದ್ರನ ತಲೆಯ ಭಾಗವಾಗಿತ್ತು ಹಾಗೂ ಅಚಲಮ್ (ಬೆಟ್ಟ), ಆದ್ದರಿಂದ ಈ ದೇಗುಲವು ಭದ್ರಾಚಲಂ ಆಗಿ ಪರಿವರ್ತನೆಯಾಯಿತು.
ವೈಕುಂಠ ರಾಮ, ಲಕ್ಷ್ಮಣ ಮತ್ತು ಸೀತೆಯ ವಿಗ್ರಹಗಳನ್ನು ಪೋಕಲ ಧಮ್ಮಕ್ಕ ಅವರು ಕಂಡುಹಿಡಿದರು. ರಾಮನ ಉತ್ಕಟ ಭಕ್ತೆಯಾದ ಪೋಕಲ ಧಮ್ಮಕ್ಕ ಅವರು 17 ನೇ ಶತಮಾನದಲ್ಲಿ ಜೀವಿಸಿದ್ದರು ಮತ್ತು ಅವರು ಈ ಪವಿತ್ರ ಸ್ಥಳದಿಂದ ಮೈಲು ದೂರದಲ್ಲಿರುವ ಭದ್ರಿರೆಡ್ಡಿಪಾಳೆಮ್‌ನ ನಿವಾಸಿಯಾಗಿದ್ದರು. ಒಂದು ದಿನ ರಾತ್ರಿ, ಅವಳ ಕನಸಿನಲ್ಲಿ ಬಂದ ರಾಮನು ” ಮುನಿಗಳು ಮತ್ತು ಋಷಿಗಳು ಭದ್ರಗಿರಿಯಲ್ಲಿ ನೆಲೆಸಿರುವ ನನ್ನ ಸಶರೀರವಾದ ಮೂರ್ತಿಯನ್ನು ಪೂಜಿಸುತ್ತಿದ್ದಾರೆ” ಎಂದು ಹೇಳಿ ಅವುಗಳನ್ನು ಪತ್ತೆ ಹಚ್ಚಿ, ಪೂಜೆ ಮಾಡುವಂತೆ ಮತ್ತು ಮೋಕ್ಷವನ್ನು ಪಡೆಯುವಂತೆ ಅವಳಿಗೆ ಹೇಳುತ್ತಾನೆ. ಮಾರನೇ ದಿನ ಮುಂಜಾನೆಯಿಂದಲೇ ವಿಗ್ರಹಗಳನ್ನು ಪತ್ತೆ ಹಚ್ಚಲು ಅವಳು ಪ್ರಾರಂಭಿದ ಅವಳು ಇರುವೆಯ ಹುತ್ತವೊಂದರಲ್ಲಿ ಇಣುಕಿದಾಗ ವಿಗ್ರಹಗಳು ಅದರಲ್ಲಿ ಮರೆಯಾಗಿ ಇರುವುದನ್ನು ನೋಡುತ್ತಾಳೆ. ಅವಳು ನೂರಾರು ಕೊಡ ಗೋದಾವರಿ ನೀರನ್ನು ಇರುವೆ-ಹುತ್ತದ ಮೇಲೆ ಸುರಿಯುತ್ತಾಳೆ, ಅದು ನಿಧಾನವಾಗಿ ಕರಗುತ್ತದೆ ಮತ್ತು ಮರೆಯಾಗಿರುವ ವಿಗ್ರಹಗಳು ಕಂಡು ಬರುತ್ತವೆ. ಅಂದಿನಿಂದ, ಅವಳು ಪ್ರತಿನಿತ್ಯ ಪೂಜೆ ಮಾಡಲು ಪ್ರಾರಂಭಿಸುತ್ತಾಳೆ ಮತ್ತು ಹತ್ತಿರದ ತಾಳೆಯ ಮರದಿಂದ ಉದುರಿದ ಹಣ್ಣುಗಳಿಂದ ‘ನೈವೇದ್ಯ’ ವನ್ನು ಅರ್ಪಿಸುತ್ತಾಳೆ. ನಂತರ ಅವಳು ಸ್ಥಳೀಯ ಗ್ರಾಮಸ್ಥರ ಸಹಕಾರದೊಂದಿಗೆ ಹುಲ್ಲಿನ ಗುಡಿಸಲಿನ ಮಂಟಪವನ್ನು ನಿರ್ಮಿಸುತ್ತಾಳೆ. ನಂತರದ ದಿನಗಳಲ್ಲಿ ತನ್ನ ಭಕ್ತನೊಬ್ಬನು ಈ ಸ್ಥಳದಲ್ಲಿ ಮಂದಿರವನ್ನು ನಿರ್ಮಸುವನೆಂದು ಭಗವಾನ್ ರಾಮನು ಧಮ್ಮಕ್ಕನಿಗೆ ತಿಳಿಸುತ್ತಾನೆ. ಧಮ್ಮಕ್ಕನು ತಾಳ್ಮೆಯಿಂದ ಭಕ್ತಾದಿಗೆ ನಿರೀಕ್ಷಿಸುತ್ತಾಳೆ. ಆದರೆ ಆ ಭಕ್ತನು ಭಕ್ತ ರಾಮದಾಸನಾಗಿರುತ್ತಾನೆ.
ಭಕ್ತ ರಾಮದಾಸ ಮತ್ತು ದೇವಾಲಯದ ನಿರ್ಮಾಣ : ಭದ್ರಾಚಲಂ ದೇವಾಲಯವನ್ನು ಭಕ್ತ ರಾಮದಾಸನೆಂದು ಜನಪ್ರಿಯನಾಗಿದ್ದ ಕಾಂಚರ್ಲ ಗೋಪಣ್ಣ ಅವರು 1647 ಎ.ಡಿ. ಯಲ್ಲಿ ನಿರ್ಮಾಣ ಮಾಡಿದರು. “ಭಕ್ತ ರಾಮದಾಸ” ಎಂದು ಜನಪ್ರಿಯರಾಗಿರುವ ಕಾಂಚರ್ಲ ಗೋಪಣ್ಣ ಅವರು ರಾಮನ ಉತ್ಕಟ ಭಕ್ತರಾಗಿದ್ದು, ಲಿಂಗಣ್ಣ ಮೂರ್ತಿ ಮತ್ತು ಕಾಮಾಂಬ ದಂಪತಿಗಳ ಪುತ್ರರಾಗಿ ಖಮ್ಮಮೇಟ್ ತಾಲ್ಲೂಕಿನ ನೆಲಕೊಂಡಪಲ್ಲಿ ಗ್ರಾಮದಲ್ಲಿ 17 ನೇ ಶತಮಾನ (1620 ಎಡಿ) ದಲ್ಲಿ ಜನಿಸಿದರು. ಇವರು ಗೋಲ್ಕೊಂಡಾದ “ತಾನೇಶಾಹ್” (ಔರಂಗಜೇಬ್ 1687 ಎ.ಡಿ. ಯಲ್ಲಿ ಗೋಲ್ಕೊಂಡವನ್ನು ವಶಪಡಿಸಿಕೊಳ್ಳುವ ಮುನ್ನ ಇವನೇ ಕೊನೆಯ ದೊರೆಯಾಗಿದ್ದನು) ಎಂದೇ ಖ್ಯಾತರಾದ ಕುತುಬ್ ಶಾಹಿ ರಾಜನಾದ ಅಬ್ದುಲ್ ಹುಸನ್‌ನ ನ್ಯಾಯಾಲಯದಲ್ಲಿ ನಿರ್ವಹಣೆಯ ಮುಖ್ಯಸ್ಥರಾಗಿದ್ದ ಅಕ್ಕಣ್ಣನವರ ಸೋದರ ಸಂಬಂಧಿಯಾಗಿದ್ದರು ನಂತರ ಅವರೇ ಗೋಪಣ್ಣ ಅವರನ್ನು “ಪಲ್ವೋಂಚಾ ಪರಗಣ” ದ ತಹಶೀಲ್ದಾರರಾಗಿ ನೇಮಿಸಿದರು. ಆದ್ದರಿಂದ ಅವರು ತಮ್ಮ ದೈನಂದಿನ ಧರ್ಮೋಪದೇಶ -‘ರಾಮನಾಮ’ ದ ಪಠಣ ಮತ್ತು ತಮ್ಮ ಮನೆಯಲ್ಲಿ ಬಡವರಿಗೆ ಭೋಜನ ನೀಡುವುದರ ಜೊತೆಗೆ ಕುತುಬ್ ಶಾಹಿ ರಾಜರ ಕಾರಣದಿಂದ ತಮ್ಮ ಅಧಿಕೃತ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸುತ್ತಿದ್ದು ಕಂದಾಯವನ್ನು ಸಂಗ್ರಹಿಸುತ್ತಿದ್ದರು. ‘ಪಲ್ವೋಂಚಾ ಪರಗಣ’ ದ ಗ್ರಾಮಸ್ಥರು ಭದ್ರಾಚಲಂನಲ್ಲಿ ಜಾತ್ರೆಯನ್ನು ವೀಕ್ಷಿಸಲು ತೆರಳುತ್ತಿದ್ದಾರೆ ಎಂಬ ವಿಷಯವನ್ನು ತಿಳಿದ ರಾಮದಾಸರು, ಆಸಕ್ತಿಯಿಂದ ತಾವೂ ಭದ್ರಾಚಲಂಗೆ ಭೇಟಿ ನೀಡಿದರು. ಅವರಿಗೆ ದೇವರ ಮೂರ್ತಿಗಳು ಭರವಸೆಯನ್ನು ನೀಡಿದರು. ಆ ಪ್ರಕಾರವಾಗಿ, ಕುತುಬ್ ಶಾಹಿ ಕಿಂಗ್ ತಾನೇಶಾಹ್ ಅವರ ಅನುಮತಿಯಿಲ್ಲದೇ ಭೂ ಕಂದಾಯದಿಂದ ಸಂಗ್ರಹವಾಗಿದ್ದ 6 ಲಕ್ಷ ರೂಪಾಯಿಗಳನ್ನು ಬಳಸಿ ರಾಮದಾಸರು ದೇವಾಲಯವನ್ನು ನಿರ್ಮಾಣ ಮಾಡಿದರು.

ದೇವಾಲಯವು ಇನ್ನೇನು ಪೂರ್ಣಗೊಳ್ಳಲಿರುವಾಗ, ಮುಖ್ಯ ದೇವಾಲಯದ ಶಿಖರದಲ್ಲಿ ‘ಸುದರ್ಶನ ಚಕ್ರ’ ವನ್ನು ಕೂರಿಸುವಲ್ಲಿ ಅವರಿಗೆ ಸಮಸ್ಯೆ ಉಂಟಾಯಿತು. ಅದರಿಂದ ತೀರಾ ವ್ಯಥೆ ಪಟ್ಟ ಅವರು ಅಲ್ಲೇ ನಿದ್ರೆಗೆ ಜಾರಿದರು. ಅದೇ ರಾತ್ರಿ ಅವರ ಕನಸಿನಲ್ಲಿ ಕಾಣಿಸಿಕೊಂಡ ರಾಮನು ಗೋದಾವರಿ ನದಿಯಲ್ಲಿ ಸ್ನಾನ ಮಾಡುವಂತೆ ಹಾಗೂ ಅಲ್ಲಿಯೇ ಅವರಿಗೆ ಅದು ದೊರಕುವುದೆಂದು ತಿಳಿಸುತ್ತಾನೆ. ಮರು ದಿನ ಬೆಳಿಗ್ಗೆ ಅದೇ ರೀತಿ ಗೋಪಣ್ಣನವರು ಮಾಡುತ್ತಾರೆ ಹಾಗೂ ಹೆಚ್ಚು ಕಷ್ಟವಿಲ್ಲದೇ ಪವಿತ್ರ ಸುದರ್ಶನ ಚಕ್ರವನ್ನು ನದಿಯಲ್ಲಿ ಕಾಣುತ್ತಾರೆ. ಅವರ ಪೂಜ್ಯ ರಾಮನ ದೈವಿಕ ಶಕ್ತಿಯಿಂದಲೇ ತನ್ನಷ್ಟಕ್ಕೇ ಸುದರ್ಶನ ಚಕ್ರವು ರೂಪುಗೊಂಡಿದೆ ಎಂದು ಅವರು ಭಾವಿಸುತ್ತಾರೆ. ನಿರ್ಮಾಣದ ತತ್‌ಕ್ಷಣವೇ, ಅವರ ಕಷ್ಟಗಳು ಪ್ರಾರಂಭವಾಗುತ್ತವೆ. ದೇವಾಲಯದ ನಿರ್ಮಾಣಕ್ಕಾಗಿ ಕಂದಾಯದ ಹಣವನ್ನು ದುರುಪಯೋಗಪಡಿಸಿಕೊಂಡ ಕಾರಣಕ್ಕಾಗಿ ಅವರನ್ನು ಸೇವೆಯಿಂದ ವಜಾ ಮಾಡಲಾಗುತ್ತದೆ ಹಾಗೂ ಅವರನ್ನು ಗೋಲ್ಕೊಂಡ ಕೋಟೆಯಲ್ಲಿ ಸುದೀರ್ಘ 12 ವರ್ಷಗಳವರೆಗೆ ಜೈಲಿನಲ್ಲಿರಿಸಿ ಹಿಂಸೆ ನೀಡಲಾಗುತ್ತದೆ. ಕಷ್ಟಗಳನ್ನು ಸಹಿಸಲಾರದ ರಾಮದಾಸರು ರಾಮನನ್ನು ಶ್ಲಾಘಿಸುವ ಮತ್ತು ಭಾವನಾತ್ಮಕ ಗೀತೆಗಳನ್ನು ಹಾಡಿ ತನ್ನನ್ನು ಮುಕ್ತಗೊಳಿಸುವಂತೆ ರಾಮನಲ್ಲಿ ಮೊರೆಯಿಡುತ್ತಾರೆ, ಅವುಗಳು ಭಕ್ತ ರಾಮದಾಸರ ‘ದಾಶರಥಿ ಶತಕಮ್’ ಮತ್ತು ‘ಕೀರ್ತನೆಗಳು’ ಪದ್ಯಗಳಿಂದ ಜನಪ್ರಿಯವಾಯಿತು.
ಗೋಲ್ಕೊಂಡಾದ ಆಗಿನ ದೊರೆಯಾಗಿದ್ದ ಕುತುಬ್ ಶಾಹಿ ರಾಜ ತಾನೇಶಾಹ್ ಅವರು ರಾಮನ ಭಕ್ತರಾಗುತ್ತಾರೆ ಮತ್ತು ರಾಮದಾಸರ ಜೈಲುಶಿಕ್ಷೆಯ ಬಳಿಕ ಅವರ ದೈವಿಕ ಪ್ರವೃತ್ತಿಯನ್ನು ಮನಗಾಣುತ್ತಾರೆ, ಅಲ್ಲದೇ ದೇವಾಲಯದ ಆಡಳಿತವನ್ನು ತಮ್ಮ ಸುಪರ್ದಿಗೆ ಪಡೆದುಕೊಳ್ಳುತ್ತಾರೆ. ಇದು ಹಿಂದೂಗಳು ಮತ್ತು ಮುಸಲ್ಮಾನರ ನಡುವಿನ ಧಾರ್ಮಿಕ ಸಾಮರಸ್ಯತೆಯನ್ನು ತೋರಿಸುತ್ತದೆ. ರಾಮ ಮತ್ತು ಲಕ್ಷ್ಮಣರು ಭಕ್ತ ರಾಮದಾಸರ ಸೇವಕರಾದ ರಾಮೋಜಿ ಮತ್ತು ಲಕ್ಷ್ಮೋಜಿ ಎಂದು ಗುರುತಿಸಿಕೊಂಡು 6 ಲಕ್ಷ ಮೊಹರುಗಳನ್ನು ಮರುಪಾವತಿ ಮಾಡಿ ತಮ್ಮ ಭಕ್ತನನ್ನು ಜೈಲಿನಿಂದ ಬಿಡುಗಡೆಗೊಳಿಸಿದಾಗ, ಕುತುಬ್ ಶಾಹಿ ರಾಜನು ರಾಮದಾಸರ ದೈವಿಕ ಪ್ರವೃತ್ತಿ ಮತ್ತು ರಾಮನ ಬಗೆಗಿರುವ ಅವರ ಸಮರ್ಪಣೆಯನ್ನು ಮನಗಾಣುತ್ತಾರೆ. ಮಧ್ಯರಾತ್ರಿಯಂದು ತಮ್ಮ ಮನೆಯಲ್ಲಿ ಸಂಪರ್ಕಿಸಿದ ಈ ದೈವಿಕ ನೋಟದ ವ್ಯಕ್ತಿಗಳಿಗೆ ತಾನೀಶಾಹ್ ಅವರು ಹಣ ಸಂದಾಯದ ರಶೀತಿಯನ್ನು ನೀಡುತ್ತಾರೆ. ನಂತರ ಆ ವ್ಯಕ್ತಿಗಳು ರಶೀತಿಯನ್ನು ಜೈಲಿನಲ್ಲಿರುವ ಗೋಪಣ್ಣರ ದಿಂಬಿನ ಕೆಳಗೆ ಇಡುತ್ತಾರೆ. ಬೆಳಿಗ್ಗೆ ತನೀಶಾಹ್ ಎಚ್ಚರವಾದಾಗ ಈ ದೈವಿಕ ನೋಟದ ವ್ಯಕ್ತಿಗಳು ಬೇರೆ ಯಾರೂ ಆಗಿಲ್ಲದೇ ರಾಮ ಮತ್ತು ಲಕ್ಷ್ಮಣರಾಗಿದ್ದರು ಎಂಬುದನ್ನು ಮನಗಾಣುತ್ತಾರೆ ಮತ್ತು ಗೋಪಣ್ಣ ಅವರ ಬಿಡುಗಡೆಗೆ ವ್ಯವಸ್ಥೆಯನ್ನು ಮಾಡುವುದಲ್ಲದೇ ರಾತ್ರಿ ಸ್ವೀಕರಿಸಿದ ಎಲ್ಲಾ ಚಿನ್ನದ ಮೊಹರುಗಳನ್ನು ಗೋಪಣ್ಣ ಅವರ ಕಾಲಿನ ಬಳಿ ಇಟ್ಟು ಕ್ಷಮಿಸುವಂತೆ ಪ್ರಾರ್ಥಿಸುತ್ತಾರೆ. ಆದರೆ, ಗೋಪಣ್ಣ ಅವರು ಆ ಮೊಹರುಗಳನ್ನು ತೆಗೆದುಕೊಳ್ಳಲು ನಿರಾಕರಿಸಿ ದೈವಿಕ ಪ್ರಾಮುಖ್ಯತೆಯ ಕಾರಣದಿಂದ ಎರಡು ಮೊಹರುಗಳನ್ನು ಮಾತ್ರ ಸ್ವೀಕರಿಸುತ್ತಾರೆ. ಆ ಎರಡು ಚಿನ್ನದ ನಾಣ್ಯಗಳನ್ನು ಇಂದಿಗೂ ಸಹ ಭದ್ರಾಚಲ ಶ್ರೀ ಸೀತಾ ರಾಮಚಂದ್ರ ಸ್ವಾಮಿ ದೇವಾಲಯದಲ್ಲಿ ಕಾಣಬಹುದು.
ಭಗವಾನ್ ರಾಮನ ಮಹಿಮೆಯಿಂದ ಪ್ರಭಾವಿತರಾಗಿ, ಗೋಲ್ಕೊಂಡ ರಾಜರಾದ ತಾನೇಶಾಹ್, ಪಲ್ವೊಂಚಾ ಪರಗಣದಿಂದ ಉತ್ಪತ್ತಿಯಾದ ಆದಾಯವಾದ ಸುಮಾರು 20,000 ರೂಪಾಯಿಗಳನ್ನು ದೇವಾಲಯದ ನಿರ್ವಹಣೆಗೆ ಮೀಸಲಾಗಿಟ್ಟರು ಮತ್ತು ಇದು ನಂತರದ ಅಸಫ್ ಜಾಹಿಯವರ (ನಿಜಾಮರ) ಕಾಲಾವಧಿಯಲ್ಲೂ ಮುಂದುವರಿಯಿತು. ವಿಶೇಷ ದೂತನ ಮೂಲಕ ಆನೆಯ ಮೇಲೆಕಲ್ಯಾಣ ಮಹೋತ್ಸವದ (ಭಗವಾನ್ ರಾಮ ಮತ್ತು ಸೀತೆಯ ವಿವಾಹ ಸಮಾರಂಭ ಮಂಗಳಕರವಾದ ರಾಮ ನವಮಿಯಂದು ನಡೆಸಲಾಗುವ ದೇವಾಲಯದ ಆಚರಣೆ) ಸಂದರ್ಭದಲ್ಲಿ ದೇವರಿಗೆ ಮುತ್ತುಗಳನ್ನು (ಮುತ್ಯಾಲ ತಾಲಂಬ್ರಾಳು) ಅರ್ಪಿಸುವ ಆಚರಣೆಯು ಕುತುಬ್ ಶಾಹಿ ರಾಜ ತಾನೇಶಾನ್ ಅವರಿಂದ ಪ್ರಾರಂಭಗೊಂಡು ನಂತರ ಅದನ್ನು ಅಸಫ್ ಜಾಹಿಯವರೂ ಸಹ ಅನುಸರಿಸಿದರು. ದೇವರಿಗೆ ಮುತ್ತುಗಳನ್ನು ಕಳುಹಿಸಲು ಪದ್ಧತಿಯನ್ನು ಇಂದಿಗೂ ಸಹ ಪ್ರಸ್ತುತ ರಾಜ್ಯ ಸರ್ಕಾರವು ಅನುಸರಿಸುತ್ತಿದೆ ಮತ್ತು ರಾಜ್ಯ ಸರ್ಕಾರವು ಶ್ರೀ ರಾಮ ನವಮಿ ಉತ್ಸವದ (ಕಲ್ಯಾಣ ಮಹೋತ್ಸವ) ಸಂದರ್ಭದಲ್ಲಿ ಮುತ್ತುಗಳನ್ನು ಅರ್ಪಣೆ ಮಾಡುವುದನ್ನು ಮುಂದುವರಿಸಿದೆ. ರಾಮದಾಸ ಅವರು ಮುಂಜಾನೆ “ಸುಪ್ರಭಾತ ಸೇವೆ” ಯಿಂದ ಹಿಡಿದು ರಾತ್ರಿ ದೇವಸ್ಥಾನವು ಮುಚ್ಚುವ ಮುನ್ನ ಮಾಡುವ “ಪಾವಲಿಂಪು ಸೇವಾ”, ಹೀಗೆ ಎಲ್ಲಾ ನಿತ್ಯ ಪೂಜೆಗಳ ನಿರ್ವಹಣೆಯನ್ನು “ಶಿಲಾಶಾಸನಗಳು” ಎಂಬುದಾಗಿ ಕೆತ್ತಿಸಿದ ಬಳಿಕ ಪಲ್ವೊಂಚಾ ಪರಗಣದ ತಹಶೀಲ್ದಾರರಾದ ತುಮು ನರಸಿಂಹ ದಾಸ ಅವರು ತಮ್ಮ ಸಹಯೋಗಿಯಾದ ವರದ ರಾಮದಾಸರೊಂದಿಗೆ ಗುಂಟೂರಿನಿಂದ ಇಲ್ಲಿಗೆ ಬಂದು ಭದ್ರಾಚಲರಾಮ ದೇವಸ್ಥಾನದ ಅಧಿಕಾರವನ್ನು ವಹಿಸಿಕೊಂಡರು. ಕೆತ್ತಿದ ಬರಹಗಳು ದೈನಂದಿನ ಸೂಕ್ತಿಗಳು ಮತ್ತು ಧಾರ್ಮಿಕ ಅನುಷ್ಠಾನಗಳ ವಿವರಗಳನ್ನೂ ನೀಡುತ್ತದೆ.
ಧನ್ಯವಾದಗಳು.
eos aliquid nihil ea dolorum voluptas vero suscipit iusto provident nemo non magnam quam voluptas rerum aliquid qui velit laboriosam. expedita officia et aut magni eveniet est provident debitis sunt deserunt nobis perferendis rerum quae quia qui in. possimus unde dolore et laudantium perspiciatis aperiam neque repellendus quia quos quod.
est at cupiditate ut. deserunt voluptas sed voluptas beatae atque quisquam nostrum similique quisquam.
Скачайте 1xslots на телефон и получите доступ к слотом и бонусам.
Для удобного доступа к играм скачайте 1xslots на андроид бесплатно и начните игру.
Получите бонус на первую игру с промокод лаки джет.
Скачайте приложение для ставок на спорт на Android и получайте бонусы за регистрацию — скачать легальные БК
Узнайте больше о вывозе строительного мусора в Новосибирске https://gorodpavlodar.kz/News_108009_3.html
Попробуйте свою реакцию в игре ракетка и испытайте настоящую удачу.
Use 888Starz promo code 888LEGAL and take advantage of exclusive rewards.
Con 1xslots codigo promocional obten grandes ventajas en cada apuesta.
скачать приложения онлайн казино https://3dtutorial.net/2024/11/20/kak-ustroeno-onlajn-kazino-v-2024-godu-kak-oni-3/
скачать приложения казино https://territoiressud.org/2024/11/19/r7-casino-oficialnyj-sajt-3/
Загрузите 1xslots apk и наслаждайтесь слотами.
Узнай, как играть в 1xSlots https://aztarna.es/pages/1xslots-casino_15.html
Активируйте 1xslots промокоды для получения фриспинов.
Что нового в 1xSlots http://cultivodesetas.es/media/pgs/?descargar-1xslots-apk.html
Путеводитель по 1xSlots https://elpulpito.com.ar/pages/1xslots-casino_18.html
Descarga el APK de 1xslots https://antiguedadeselrodeo.com.ar/pages/1xslots-argentina.html
Download CorgiSlot op je smartphone https://www.beachvolleybalschool.nl/new/pgs/corgislot_3.html
Download de CorgiSlot APK https://jointjedraaien.nl/images/pages/?corgislot-casino_4.html
If you read my blog a lot, you might know that I tend to get mascara smudging on my brow bone quite easily due to the shape of my eye. I have definitely found some amazing mascara’s which don’t transfer and I was hoping this would be a winner since Nars do say this is smudge resistant, but unfortunately this one does transfer and smudge onto that brow bone area pretty quickly! If you don’t tend to have this problem due to different eye shapes, you should be fine but it is something to bare in mind! It doesn’t flake at all which is great. Verify your account details Shop Jewellery To Gift One of my favourite series that I do here on Emmie’s Beauty Life is my One Brand Recommendations (weird start, I know, but go with it). And for a while now, I’ve been working on one for Nars Cosmetics. Seeing as they are one of my favourite brands, I figured it would be easy. It was in the process of choosing my picks however that it occurred to me that I, The Mascara Queen of Aussie Instagram, haven’t actually tried a mascara from Nars before.
https://www.cartoonmovement.com/cartoonist/34062/
Privacy StatementGeneral Terms of Use The reviews for this post have been edited for length and clarity. Detailed information can be found in Etsy’s Cookies & Similar Technologies Policy and our Privacy Policy. This variant is currently sold out The reviews for this post have been edited for length and clarity. Material: COTTON Great gift idea for Mothers Day, birthdays, graduations, Valentine’s day, weddings, baby showers, bridesmaids, and much more! Memorial Day Sale! | $19.99 Beach Towels Plus up to 35% off Sitewide! | Use Code: MEMDAY22 | Price as marked | See Details | Shop All Deals Material: COTTON Letters Measurements of the bag are approx. 8.5″L X 6.5″H X 3.5W.This cosmetic pouch is great, it can be used as a toiletry bag, makeup bag, jewelry bag, or even to hold hair products, nail polish, and healthcare items.