in

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ

ಗುರು ಅಂದರೆ ಒಂದು ನಿರ್ದಿಷ್ಟ ವಿಭಾಗದಲ್ಲಿ ಹೆಚ್ಚಿನ ಜ್ಞಾನ, ಬುದ್ಧಿವಂತಿಕೆ ಮತ್ತು ನಿಪುಣತೆಯನ್ನು ಹೊಂದಿರುವ, ಮತ್ತು ಇತರರಿಗೆ ನಿರ್ದೇಶನವನ್ನು ನೀಡಲು ಈ ಬುದ್ಧಿವಂತಿಕೆಗಳನ್ನು ಬಳಸುವ ವ್ಯಕ್ತಿಯಾಗಿರುತ್ತಾನೆ. ಸಂಸ್ಕೃತದಲ್ಲಿ ಗುರು ಅಂದರೆ ಅಂಧಕಾರ ಮತ್ತು ಗುರು ಅಂದರೆ ಬೆಳಕು. ಅರಿವಿನ ಅಭಿವೃದ್ಧಿಯ ಒಂದು ಮೂಲತತ್ವವಾಗಿ ಇದು ಕಾಲ್ಪನಿಕತೆಯಿಂದ ನಿಜಸ್ಥಿತಿಯ ನಿರ್ಮಾಣಕ್ಕೆ, ಅಜ್ಞಾನದ ಅಂಧಕಾರದಿಂದ ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುತ್ತದೆ. ಇದರ ಮೂಲರೂಪದಲ್ಲಿ ಈ ’ಗುರು’ ಪರಂಪರೆಯ ತತ್ವವು ಭೂಮಿಯಲ್ಲಿಯ ಒಂದು ದೈವಿಕ ಮೂರ್ತರೂಪ ಅಂದರೆ ಸಾಧು ಎಂದಾಗುತ್ತದೆ. ’ಗುರು’ ಭೂಮಿಯ ಮೇಲಿರುವ ಅತಿಭೌತಿಕ ಹಾಗೂ ಉನ್ನತ ಶಕ್ತಿಯ ಕುರಿತಾದ ಅತ್ಯುನ್ನತ ಜ್ಞಾನವನ್ನು ಹೊಂದಿರುವ ಒಬ್ಬ ವ್ಯಕ್ತಿ ಎಂಬ ಅರ್ಥವನ್ನು ನೀಡುತ್ತದೆ. ತಂದೆ ತಾಯಂದಿರು, ಶಿಕ್ಷಕರು, ಕೆಲವು ಜ್ಞಾನಾರ್ಜನೆಗೆ ಸಹಾಯಕವಾಗುವಂತಹ ವಸ್ತುಗಳು ಉದಾಹರಣೆಗೆ ಪುಸ್ತಕ ಮತ್ತು ಪ್ರತಿ ವ್ಯಕ್ತಿಯಲ್ಲಿರುವ ಬೌದ್ಧಿಕ ಶಿಸ್ತು ಈ ಮೂಲತತ್ವವನ್ನು ಪ್ರತಿಬಿಂಬಿಸುವ ಇತರ ಕೊಂಡಿಗಳು ಎಂದು ಹೇಳಬಹುದಾಗಿದೆ. ಧಾರ್ಮಿಕ ಅರ್ಥದಲ್ಲಿ ಈ ಶಬ್ದವನ್ನು ಸಾಮಾನ್ಯವಾಗಿ ಹಿಂದು ಮತ್ತು ಸಿಖ್ಖ್ ಧರ್ಮದಲ್ಲಿ ಹಾಗೂ ಇನ್ನಿತರ ಕೆಲವು ಭಾರತೀಯ ಧರ್ಮಗಳಲ್ಲಿ ಹಾಗೂ ಕೆಲವು ಹೊಸ ಧಾರ್ಮಿಕ ಪಂಥದ ಚಳುವಳಿಗಳಲ್ಲಿ ಈ ಶಬ್ದವನ್ನು ಬಳಸಲಾಗುತ್ತದೆ. ಒಬ್ಬ ಉತ್ತಮ ಗುರುವನ್ನು ಪಡೆದುಕೊಳ್ಳುವುದು ಆತ್ಮಜ್ಞಾನವನ್ನು ಹೊಂದಲು ಒಂದು ಪೂರ್ವ ತಯಾರಿ ಎಂದು ಹೇಳಲಾಗುತ್ತದೆ. ಗುರು ನಾನಕ್, ಸಿಖ್ ಧರ್ಮದ ಸ್ಥಾಪಕರು ಹೇಳಿದರು. “ಸಾವಿರಾರು ಸೂರ್ಯ ಚಂದ್ರ ಹುಟ್ಟಿ ಬಂದರೂ ಕೂಡ ಹೃದಯದ ಒಳಗಿನ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸುವುದು ಸಾಧ್ಯವಿಲ್ಲ. ಇದನ್ನು ಕೇವಲ ಗುರುವಿನ ಅನುಗ್ರಹದಿಂದ ಮಾತ್ರ ತೊಡೆದುಹಾಕಲ್ಪಡುತ್ತದೆ.”

ಸಂಸ್ಕೃತದಲ್ಲಿ “ಗುರು” ಎಂಬ ಪದವನ್ನು ಹಿಂದುತ್ವದಲ್ಲಿ ದೈವಸ್ವರೂಪಿ ವ್ಯಕ್ತಿತ್ವದ ಬೃಹಸ್ಪತಿಗೆ ಹೇಳಲಾಗುತ್ತದೆ. ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ, ಗುರು ಅಥವಾ ಬೃಹಸ್ಪತಿಯು ಕಲಿಕೆಯ ಮೇಲೆ ಪ್ರಭಾವ ಬೀರುತ್ತಾರೆ ಎಂದು ನಂಬಲಾಗಿದೆ. ಆದಾಗ್ಯೂ, ಹಿಂದಿಯಂತಹ ಹಲವಾರು ಭಾರತೀಯ ಭಾಷೆಗಳಲ್ಲಿ, ಪಾಶ್ಚಾತ್ಯರ ಬೃಹಸ್ಪತಿವಾರ ಅಥವಾ ಗುರುವಾರ ವಾರ ಅಂದರೆ ಸಪ್ತಾಹದ ಒಂದು ದಿನ ಎಂದು ಕರೆಯಲ್ಪಡುತ್ತದೆ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ, “ಗುರು” ಎಂಬ ಶಬ್ದವು ವ್ಯಾಪಕವಾಗಿ “ಶಿಕ್ಷಕ” ಎಂಬ ಸಾಮಾನ್ಯ ಅರ್ಥದ ಜೊತೆ ಬಳಸಲ್ಪಡುತ್ತದೆ. ಪಾಶ್ಚಾತ್ಯ ಬಳಕೆಯಲ್ಲಿ, ಗುರು ಎಂಬ ಶಬ್ದದ ಅರ್ಥವು ಅನುಯಾಯಿಗಳನ್ನು ಹೊಂದುವ ಸಾಮರ್ಥ್ಯ ಹೊಂದಿರುವ ಯಾವುದೇ ವ್ಯಕ್ತಿಗೂ ಕೂಡಾ ಬಳಸಬಹುದಾಗಿದೆ. ಅವರು ತತ್ವಶಾಸ್ತ್ರದ ಅಥವಾ ಯಾವುದಾದರೂ ಧಾರ್ಮಿಕ ಪಂಥಕ್ಕೆ ಸೇರಬೇಕೆಂದೇನಿಲ್ಲ.ಇನ್ನೂ ಹೆಚ್ಚಾಗಿ ಪಾಶ್ಚಾತ್ಯರು, ಒಬ್ಬ ವ್ಯಕ್ತಿಯು ಪ್ರಾಪಂಚಿಕವಾದ ವಿಷಯಕ್ಕೆ ಸಂಬಂಧಿಸಿದಂತೆ ಉತ್ತಮ ಜ್ಞಾನ,ನೈಪುಣ್ಯತೆಯನ್ನು ಹೊಂದಿದ್ದರೂ ಕೂಡ ’ಗುರು’ ಎಂಬ ಶಬ್ದವನ್ನು ಬಳಸುತ್ತಾರೆ. ಉದಾಹರಣೆಗೆ ’ವ್ಯವಹಾರ’ ಪ್ರಪಂಚಕ್ಕೆ ಕುರಿತಾದ ಉತ್ತಮ ಜ್ಞಾನ ಹೊಂದಿರುವ ವ್ಯಕ್ತಿಯನ್ನು ’ಗುರು’ ಎಂದು ಕರೆಯಲಾಗುತ್ತದೆ.

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ
ಗುರು

‘ಗುರು’ ಶಬ್ದವು ಗು ಮತ್ತು ರು ಅಕ್ಷರಗಳಿಂದ ರಚಿತವಾಗಲ್ಪಟ್ಟಿದೆ. “ಗುಕಾರೋಂಧಕಾರತ್ವಾತ್ ರುಕಾರೋ ತನ್ನಿವಾರಕಃ” ’ಗು’ ಎಂದರೆ ’ಅಂಧಕಾರ’ ಎಂದರ್ಥವಿದೆ. ’ರು’ ಎಂದರೆ ’ನಾಶಪಡಿಸುವವನು’ ಅಂದರೆ ಅಂಧಕಾರವನ್ನು ನಾಶ ಪಡಿಸುವವನು ಎಂದಾಗುತ್ತದೆ. ಗುರು ಎಂದರೆ ಆತ್ಮಾಂಧಕಾರವನ್ನು ಆಧ್ಯಾತ್ಮಿಕ ಬೆಳಕಿನಿಂದ ತೊಲಗಿಸುವ ವ್ಯಕ್ತಿ ಎಂದು ನಿರೂಪಿಸಲ್ಪಡುತ್ತಾನೆ.

ತರ್ಕಾತೀತ ಜ್ಞಾನವನ್ನು ವಿಧ್ಯೆ ತಿಳಿಸಿಕೊಡುವ ಒಬ್ಬ ಗುರುವನ್ನು ಹುಡುಕುವ ಮಹತ್ವಕ್ಕೆ ಹಿಂದೂಮತದಲ್ಲಿ ಪ್ರಾಧಾನ್ಯ ನೀಡಲಾಗಿದೆ. ಮುಖ್ಯ ಹಿಂದೂ ಪಠ್ಯಗಳಲ್ಲಿ ಒಂದಾದ, ಭಗವದ್ಗೀತೆಯು ದೇವರ ರೂಪದಲ್ಲಿ ಕೃಷ್ಣ ಮತ್ತು ಅವನ ಗೆಳೆಯ ಅರ್ಜುನ, ಒಂದು ದೊಡ್ಡ ಯುದ್ಧಕ್ಕೂ ಮುಂಚಿನ ರಣರಂಗದಲ್ಲಿ ಕೃಷ್ಣನನ್ನು ತನ್ನ ಗುರು ಎಂದುಒಪ್ಪಿಕೊಳ್ಳುವ ಒಬ್ಬ ಕ್ಷತ್ರೀಯ ರಾಜಕುಮಾರರ ನಡುವಿನ ಸಂವಾದವಾಗಿದೆ. ಈ ಸಂವಾದವು ಕೇವಲ ಹಿಂದುತ್ವದ ಆದರ್ಶಗಳನ್ನು ಸ್ಥೂಲ ವಿವರಣೆ ನೀಡುವುದು ಮಾತ್ರವಲ್ಲ, ಆದರೆ ಅವುಗಳ ಸಂಬಂಧವು ಗುರು-ಶಿಷ್ಯ ಪರಂಪರೆಯ ಒಂದು ಮಾದರಿ ಎಂದು ಪರಿಗಣಿಸಲ್ಪಟ್ಟಿದೆ. ಗೀತೆಯಲ್ಲಿ, ಕೃಷ್ಣನು ಒಬ್ಬ ಗುರುವನ್ನು ಹುಡುಕುವ ಮಹತ್ವದ ಕುರಿತು ಅರ್ಜುನನ ಬಳಿ ಮಾತನಾಡುತ್ತಾನೆ:

ಗುರುವಿನ ಪಾತ್ರವು ವೇದಾಂತ, ಯೋಗ, ತಂತ್ರ ಮತ್ತು ಭಕ್ತಿ ಸ್ಕೂಲ್‌ಗಳಂತಹ ಹಿಂದೂ ಸಂಪ್ರದಾಯದ ಶಬ್ದಗಳ ಮೂಲ ಅರ್ಥದಲ್ಲಿ ಮುಂದುವರೆಯುತ್ತ ಹೋಗುತ್ತದೆ. ವಾಸ್ತವವಾಗಿ, ಭೂಮಿಯ ಮೇಲೆ ಒಬ್ಬ ಗುರುವು ಒಬ್ಬ ವ್ಯಕ್ತಿಯ ಆಧ್ಯಾತ್ಮಿಕ ನಿರ್ದೇಶಕ ಎಂಬುದು ಈಗ ಹಿಂದೂಮತದ ಒಂದು ಸಾಮಾನ್ಯ ಭಾಗವಾಗಿದೆ. ಕೆಲವು ಹೆಚ್ಚು ಮೋಡಿಯ ಸಂಪ್ರದಾಯಗಳಲ್ಲಿ ಗುರುವು ತನ್ನ ವಿದ್ಯಾರ್ಥಿಗಳಲ್ಲಿ ಸುಪ್ತ ಆಧ್ಯಾತ್ಮಿಕ ಜ್ಞಾನಗಳನ್ನು ಜಾಗೃತಗೊಳಿಸುತ್ತಾನೆ ಎಂಬುದಾಗಿ ನಂಬಲಾಗಿದೆ. ಈ ರೀತಿಯಾಗಿ ಮಾಡುವ ಕ್ರಿಯೆಯನ್ನು ಶಕ್ತಿಪಥ ಎಂದು ಕರೆಯುತ್ತಾರೆ. ಹಿಂದೂಮತದಲ್ಲಿ, ಗುರುವು ಸಾಧುವಿನ ಗುಣಗಳನ್ನು ಹೊಂದಿರುವ ಗೌರವಾನ್ವಿತ ವ್ಯಕ್ತಿ, ಅವನ ಅಥವಾ ಅವಳ ಅನುಯಾಯಿಗಳ ಮನಸ್ಸನ್ನು ಬೆಳಗಿಸುವ, ಒಬ್ಬ ವ್ಯಕ್ತಿಯು ಯಾರಿಂದ ಮೊದಲಿನ ಮಂತ್ರವನ್ನು ತೆಗೆದುಕೊಳ್ಳುತ್ತಾನೋ ಅಂತಹ ಶಿಕ್ಷಕ, ಮತ್ತು ವಿಧಿವತ್ತಾದ ನಡವಳಿಕೆ ಮತ್ತು ಧಾರ್ಮಿಕ ಅನುಷ್ಥಾನಗಳಲ್ಲಿ ನಿರ್ದೇಶನವನ್ನು ನೀಡುವ ಒಬ್ಬ ವ್ಯಕ್ತಿ ಎಂಬುದಾಗಿ ಪರಿಗಣಿಸಲಾಗಿದೆ. ವಿಷ್ಣು ಸ್ಮೃತಿ ಮತ್ತು ಮನು ಸ್ಮೃತಿಗಳು ಶಿಕ್ಷಕ, ತಾಯಿ ಮತ್ತು ತಂದೆಯನ್ನು ಒಬ್ಬ ವ್ಯಕ್ತಿಯ ಮೇಲೆ ಪ್ರಭಾವವನ್ನು ಬೀರುವ ಅತಿ ಹೆಚ್ಚು ಪೂಜನೀಯ ವ್ಯಕ್ತಿಗಳು ಎಂಬುದಾಗಿ ಪರಿಗಣಿಸುತ್ತವೆ.

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ
ಗುರು ದೀಕ್ಷೆ

ಒಬ್ಬ ಗುರುವು ದೀಕ್ಷೆ ಯ ವಿಧಿಯನ್ನೂ ನೀಡುತ್ತಾನೆ, ದೀಕ್ಷೆ ಅಂದರೆ ಒಬ್ಬ ಗುರುವಿನ ಕೃಪೆಯಿಂದ ಅವನ ಅನುಯಾಯಿಯ ಆಧ್ಯಾತ್ಮಿಕ ಜಾಗೃತಿ ಎಂಬುದಾಗಿದೆ. ದೀಕ್ಷೆಯು ಒಬ್ಬ ಗುರುವಿನ ದೈವಿಕ ಶಕ್ತಿಗಳನ್ನು ಅವನ ಅನುಯಾಯಿಗಳ ಮೇಲೆ ಅನುಗ್ರಹಿಸುವ ಒಂದು ಪದ್ಧತಿ ಎಂಬುದಾಗಿ ಪರಿಗಣಿಸಲಾಗಿದೆ, ಆ ದೀಕ್ಷೆಯ ಮೂಲಕ ಅನುಯಾಯಿಯು ದೈವಿಕತೆಯ ಮಾರ್ಗದಲ್ಲಿ ನಿರಂತರವಾಗಿ ಪ್ರಗತಿಯನ್ನು ಹೊಂದುತ್ತಾನೆ. “ಗುರು” ಎಂಬ ವಿಷಯವು ಅತಿ ಹಳೆಯದಾದ ಉಪನಿಷತ್ತುಗಳ ಕಾಲದಿಂದಲೂ ಇತ್ತು ಎಂಬುದಾಗಿ ಕಂಡುಹಿಡಿಯಲಾಗಿದೆ, ಅಲ್ಲಿ ಭೂಮಿಯ ಮೇಲಿನ ದೈವಿಕತೆಯ ಶಿಕ್ಷಕ ಎಂಬ ಆಲೋಚನೆಯು ಮೊದಲಿನ ಬ್ರಾಹ್ಮಣ ಸಂಘಟನೆಗಳಿಂದ ಅಭಿವ್ಯಕ್ತಿಗೊಳ್ಳಲ್ಪಟ್ಟಿತು. ಗುರು ಎಂಬ ಶಬ್ದವು ಒಬ್ಬ ಸೌಂದರ್ಯದ ಕಲೋಪಾಸಕ ಅಥವಾ ಸೌಂದರ್ಯದ ಬಗೆಗೆ ಶಿಕ್ಷಣವನ್ನು ನೀಡುವ ಒಬ್ಬ ವ್ಯಕ್ತಿ ಎಂಬ ಅರ್ಥವನ್ನೂ ನೀಡುತ್ತದೆ. ಗುರುಗಳು ತಮ್ಮ ಅಧಿಕರಕ್ಕಾಗಿ ಮೂರ್ತಿಪೂಜೆಗೆ ಮೊರೆಹೋಗುವುದಿಲ್ಲ, ಅಥವಾ ಅವರು ದೇವರ ಇಚ್ಛೆಯನ್ನು ಪ್ರಕಟಿಸುವ ಧರ್ಮೋಪದೇಶಕರೂ ಅಲ್ಲ. ವಾಸ್ತವವಾಗಿ, ಹಿಂದೂಮತದ ಕೆಲವು ಪ್ರಕಾರಗಳಲ್ಲಿ ಒಮ್ದು ತಿಳುವಳಿಕೆಯಿದೆ, ಅದೇನೆಂದರೆ ಭಕ್ತರು ಗುರು ಮತ್ತು ದೇವರ ಜೊತೆ ತೋರಿಸಲ್ಪಟ್ಟರೆ, ಮೊದಲಿಗೆ ಭಕ್ತನು ಗುರುವಿಗೆ ಗೌರವವನ್ನು ತೋರಿಸುತ್ತಾನೆ ಏಕೆಂದರೆ ಗುರುವು ಅವನನ್ನು ದೇವರೆಡೆಗೆ ಕರೆದೊಯ್ಯುವ ಒಂದು ಸಾಧನವಾಗಿದ್ದಾನೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಉಪ್ಪಗೆ

ಔಷಧೀಯ ಮರ ಉಪ್ಪಗೆ ಮತ್ತು ಆರೋರೂಟ್ ತಯಾರಿಸುವ ವಿಧಾನ

ಗೌರಿ ಗಣೇಶ ಹಬ್ಬದ ವಿಶೇಷತೆ

ಗೌರಿ ಗಣೇಶ ಹಬ್ಬದ ವಿಶೇಷತೆ