in

ಸುಂದರವಾದ ಗಿರಿಧಾಮ ಊಟಿ

ಊಟಿ
ಊಟಿ

ಊಟಿಯು ನೀಲ ಬೆಟ್ಟಗಳೆಂದೂ ಕರೆಯಲ್ಪಡುವ ನೀಲಗಿರಿ ಬೆಟ್ಟಗಳ ಮಧ್ಯೆ ವಿಶಾಲವಾಗಿ ಚಾಚಿಕೊಂಡಿದೆ. ಈ ಹೆಸರು ಆ ಪ್ರದೇಶದಲ್ಲಿ ಆವರಿಸಿರುವ ನೀಲಗಿರಿ ಮರಗಳಿಂದ ಉಂಟಾದ ನೀಲಿ ಹೊಗೆಯಂಥ ಮುಸುಕಿನಿಂದ ಬಂದಿರಬಹುದೇ ಅಥವಾ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಅರಳುವ ನೀಲಿ ಬಣ್ಣದ ಛಾಯೆಯನ್ನು ನೀಡುವ ಕುರುಂಜಿ ಹೂಗಳಿಂದಾಗಿ ಬಂದಿರಬಹುದೇ ಎಂಬುದು ತಿಳಿದಿಲ್ಲ. ರಾಷ್ಟ್ರದ ಇತರ ಯಾವುದೇ ಪ್ರದೇಶದಂತಿಲ್ಲದೆ, ಊಟಿಯು ಯಾವುದೇ ರಾಜ್ಯದ ಅಥವಾ ಸಾಮ್ರಾಜ್ಯದ ಭಾಗವಾಗಿತ್ತು ಎಂದು ಸೂಚಿಸಲು ಯಾವ ಐತಿಹಾಸಿಕ ಆಧಾರಗಳೂ ಕಂಡುಬಂದಿಲ್ಲ. ಟಿಪ್ಪು ಸುಲ್ತಾನ್ ಅಡಗಿಕೊಳ್ಳುವ ಗುಹೆಯಂಥ ರಚನೆಯನ್ನು ನಿರ್ಮಿಸುವ ಮೂಲಕ ತನ್ನ ಗಡಿಯನ್ನು ವಿಸ್ತರಿಸಿದ ಮೊದಲ ರಾಜನಾಗಿದ್ದಾರೆ. ಅದು ಮೂಲತಃ ಒಂದು ಬುಡಕಟ್ಟು ಪ್ರದೇಶವಾಗಿತ್ತು. ಅಲ್ಲಿ ಟೋಡ ಜನರು ಇತರ ಬುಡಕಟ್ಟು ಪಂಗಡಗಳೊಂದಿಗೆ ವಾಸಿಸುತ್ತಿದ್ದರು, ಅವರು ವಿಶೇಷ ಪಾಂಡಿತ್ಯ ಸಾಧನೆ ಮತ್ತು ವ್ಯಾಪಾರದ ಮೂಲಕ ಸಹಬಾಳ್ವೆ ನಡೆಸುತ್ತಿದ್ದರು. ಬಡಗಗಳು ಬೆಳೆಗಳನ್ನು ಬೆಳೆಸಲು ಮತ್ತು ಟೋಡ ಜನರು ನೀರು ಕೋಣಗಳನ್ನು ಬೆಳೆಸಲು ಹೆಸರುವಾಸಿಯಾಗಿದ್ದರು.

ಸುಂದರವಾದ ಗಿರಿಧಾಮ ಊಟಿ
ಊಟಿ

ಫ್ರೆಡೆರಿಕ್ ಪ್ರೈಸ್ ತನ್ನ ಪುಸ್ತಕ ‘ಊಟಕಮಂಡ್‌, ಎ ಹಿಸ್ಟರಿ’ಯಲ್ಲಿ ಈಗ ‘ಹಳೆ ಊಟಿ’ ಎಂದು ಕರೆಯಲ್ಪಡುವ ಪ್ರದೇಶದಲ್ಲಿ ಮೂಲತಃ ಟೋಡ ಜನರು ವಾಸಿಸುತ್ತಿದ್ದರೆಂದು ಹೇಳಿದ್ದಾರೆ. ಟೋಡ ಜನರು ನಂತರ ಆ ಪ್ರದೇಶವನ್ನು ಕೊಯಂಬತ್ತೂರಿನ ಆಗಿನ ಗವರ್ನರ್ ಜಾನ್ ಸುಲ್ಲಿವನ್‌ರಿಗೆ ಒಪ್ಪಿಸಿದರು. ನಂತರ ಅವರು ಆ ನಗರವನ್ನು ಅಭಿವೃದ್ಧಿಪಡಿಸಿದರು ಮತ್ತು ಅಲ್ಲಿ ಚಹಾ, ಚಿಂಕೋನ ಮತ್ತು ತೇಗ ಮರಗಳನ್ನು ಬೆಳೆಸಲು ಪ್ರೋತ್ಸಾಹ ನೀಡಿದರು. ಇತರ ವಸಾಹತುಗಾರರಂತೆ ಸುಲ್ಲಿವನ್ ಕೂಡ ಆ ಬುಡಕಟ್ಟು ಜನರ ಸಹಬಾಳ್ವೆಯಿಂದ ಆಕರ್ಷಿತರಾದರು ಮತ್ತು ಈ ಸಮತೋಲನವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರು. ಅವರು ನಂತರ ಈ ಬುಡಕಟ್ಟು ಜನರಿಗಾಗಿ ಆಸ್ತಿಯ ಹಕ್ಕು ಮತ್ತು ಸಾಂಸ್ಕೃತಿಕ ಮಾನ್ಯತೆಯನ್ನು ದೃಢೀಕರಿಸುವುದಕ್ಕಾಗಿ ತುಂಬಾ ಪ್ರಯತ್ನ ಪಟ್ಟರು. ಆದರೆ ಇದಕ್ಕಾಗಿ ಅವರು ಬ್ರಿಟಿಷ್ ಸರ್ಕಾರದಿಂದ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಶಿಕ್ಷೆಗೆ ಒಳಗಾದರು. ಆ ಬೆಟ್ಟಗಳು ಬ್ರಿಟಿಷ್ ಪ್ರಭುತ್ವದಡಿಯಲ್ಲಿ ಅತಿ ಶೀಘ್ರದಲ್ಲಿ ಅಭಿವೃದ್ಧಿಹೊಂದಿದವು ಏಕೆಂದರೆ ಅವನ್ನು ಹೆಚ್ಚುಕಡಿಮೆ ಸಂಪೂರ್ಣವಾಗಿ ಖಾಸಗಿ ಬ್ರಿಟಿಷ್ ಜನರು ಸ್ವಂತ ಮಾಡಿಕೊಂಡಿದ್ದರು. ಭಾರತದ ಉಳಿದ ಭಾಗಕ್ಕಿಂತ ಭಿನ್ನವಾಗಿ, ಬ್ರಿಟಿಷರು ಊಟಿ ನಗರಕ್ಕೆ ನೆಲೆಗೊಳ್ಳುವುದಕ್ಕಾಗಿ ಬಂದರು ಮತ್ತು ಹಲವಾರು ಪೀಳಿಗೆಯವರೆಗೆ ಅಲ್ಲೇ ವಾಸಿಸಿದರು. ಊಟಿಯು ಹಿಂದೆ ಮದ್ರಾಸ್ ಪ್ರಾಂತ ಮತ್ತು ಇತರ ಸಣ್ಣ ಪ್ರಾಂತ್ಯಗಳ ಬೇಸಿಗೆ ರಾಜಧಾನಿಯಾಗಿತ್ತು. ಬ್ರಿಟಿಷರ ವಸಾಹತು ದಿನಗಳಲ್ಲಿ ಅವರು ಇಲ್ಲಿಗೆ ಹಲವಾರು ಬಾರಿ ಭೇಟಿನೀಡಿದ್ದರು ಮತ್ತು ಇಂದು ಇದೊಂದು ಪ್ರಸಿದ್ಧ ಬೇಸಿಗೆ ಮತ್ತು ವಾರಾಂತ್ಯದ ರೆಸಾರ್ಟ್ ಆಗಿದೆ. ಚೇತರಿಸಿಕೊಳ್ಳುವುದಕ್ಕಾಗಿ ಸಿಪಾಯಿಗಳನ್ನೂ ಇಲ್ಲಿಗೆ ಮತ್ತು ಹತ್ತಿರದ ವೆಲ್ಲಿಂಗ್ಟನ್‌ಗೆ (ಆಗಿನ ಮದ್ರಾಸ್ ರೆಜಿಮೆಂಟ್(ಪಡೆ)ನ ನೆಲೆ) ಕಳುಹಿಸಲಾಗುತ್ತಿತ್ತು. ಊಟಿಯನ್ನು ವಕ್ರವಾದ ಬೆಟ್ಟದ ರಸ್ತೆಗಳ ಮೂಲಕ ಅಥವಾ ಭಾವೋದ್ರಿಕ್ತ ಮತ್ತು ಉದ್ಯಮಶೀಲ ಬ್ರಿಟಿಷ್ ಜನರು ಮದ್ರಾಸ್ ಸರ್ಕಾರದ ಸಾಹಸೋದ್ಯಮ ಬಂಡವಾಳದಿಂದ 1908ರಲ್ಲಿ ನಿರ್ಮಿಸಿದ ಜಟಿಲವಾದ ಹಲ್ಲುಕಂಬಿ ರೈಲುಮಾರ್ಗದ ಮೂಲಕ ತಲುಪಬಹುದು. ಊಟಿಯ ಹೆಚ್ಚಿನ ಭಾಗವು ಸಮುದ್ರ ಮಟ್ಟಕ್ಕಿಂತ ಸುಮಾರು 2,286 ಮೀಟರ್‌ಗಳಷ್ಟು ಎತ್ತರದಲ್ಲಿದೆ. ಇದರ ಅದ್ಭುತ ಸೊಬಗು ಮತ್ತು ಭವ್ಯವಾದ ಹಸಿರು ಆಳ ಕಣಿವೆಗಳು ಬ್ರಿಟಿಷರಿಗೆ ಅದಕ್ಕೆ “ಗಿರಿಧಾಮಗಳ ರಾಣಿ” ಎಂದು ಹೆಸರಿಡುವಂತೆ ಪ್ರೇರೇಪಿಸಿತು.

ನೀಲಗಿರಿ ಬೆಟ್ಟಗಳ ನಡುವೆ ನೆಲೆಸಿರುವ ಊಟಿಯನ್ನು ‘ಉದಕಮಂಡಲಂ’ ಎಂದೂ ಕೂಡ ಕರೆಯುತ್ತಾರೆ. ಇದು ತಮಿಳುನಾಡು ರಾಜ್ಯದಲ್ಲಿರುವ ಒಂದು ಸುಂದರವಾದ ಗಿರಿಧಾಮವಾಗಿದೆ. ಭಾರತದ ಪ್ರವಾಸೋದ್ಯಮದಲ್ಲಿ ಊಟಿ ತನ್ನದೇ ಆದ ಸ್ಥಾನವನ್ನು ಮುಡಿಗೇರಿಸಿಕೊಂಡಿದೆ.

ಬೆಟ್ಟಗಳ ರಾಣಿಯು ಒಂದು ಸುಂದರವಾದ ವಿಹಾರ ಸ್ಥಳವಾಗಿದೆ. ಇಲ್ಲಿನ ಪ್ರಶಾಂತವಾದ ವಾತಾವರಣ, ಚಹಾ ತೋಟಗಳು, ಜಲಪಾತಗಳು, ಆಕರ್ಷಕ ವಸಾಹತುಶಾಹಿ ವಾಸ್ತುಶಿಲ್ಪಗಳು ಪರಿಪೂರ್ಣವಾದ ವಿಶ್ರಾಂತಿಗೆ ಇದು ಸೂಕ್ತವಾದ ಸ್ಥಳವಾಗಿದೆ.

ಊಟಿಯ ಸಮೀಪದಲ್ಲಿನ ಪ್ರಸಿದ್ಧವಾದ ಪ್ರವಾಸಿ ತಾಣಗಳಲ್ಲಿ ಈ ದೊಡ್ಡ ಬೆಟ್ಟ ಶಿಖರವು ಒಂದು. ಇದು ನೀಲಗಿರಿಯಲ್ಲೇ ಅತ್ಯಂತ ಹೆಚ್ಚು ಎತ್ತರವಾದ ಶಿಖರವಾಗಿದೆ. ಸುಮಾರು ೨,೬೨೩ ಮೀ ಎತ್ತರದಲ್ಲಿದೆ. ಈ ಪ್ರೇಕ್ಷಣೀಯ ಸ್ಥಳವು ಊಟಿಯಿಂದ ಕೇವಲ ೧೦ ಕಿ.ಮೀ ದೂರದಲ್ಲಿದೆ. ದಟ್ಟವಾದ ಕಾಡುಗಳಿಂದ ಈ ಪ್ರದೇಶವು ಆವೃತವಾಗಿದೆ. ಈ ಭೂದೃಶ್ಯದ ಮನಮೋಹಕವಾದ ನೋಟವನ್ನು ಟಿಟಿಡಿಸಿ ದೂರದರ್ಶಕದ ಸಹಾಯದಿಂದ ವೀಕ್ಷಿಸಬಹುದು.

ಊಟಿಯಲ್ಲಿನ ಚಹಾ ತೋಟಗಳು ಕೂಡ ಆಹ್ಲಾದಕರವಾದ ನೋಟವನ್ನು ಪ್ರವಾಸಿಗರಿಗೆ ಒದಗಿಸುತ್ತದೆ. ಇದು ಪ್ರವಾಸಿಗರ ಅಚ್ಚು ಮೆಚ್ಚಿನ ತಾಣವಾಗಿದೆ. ಅಲ್ಲದೇ, ಕಡಿಮೆ ಬೆಲೆಯಲ್ಲಿ ನೀವು ಚಹಾ ಪುಡಿಯನ್ನು ಕೂಡ ಖರೀದಿಸಬಹುದು.

ಊಟಿಯಲ್ಲಿನ ಮತ್ತೊಂದು ಮನಮೋಹಕವಾದ ತಾಣಗಳಲ್ಲಿ ಕೆಟ್ಟಿ ಕಣಿವೆ ಕೂಡ ಒಂದು. ಇದು ವರ್ಷಪೂರ್ತಿ ಆಹ್ಲಾದಕರವಾದ ಹವಾಗುಣ ಸ್ಥಿತಿಯಿಂದಾಗಿ ಜನಪ್ರಿಯವಾಗಿದೆ. ಈ ಸುಂದರವಾದ ತಾಣವನ್ನು “ದಕ್ಷಿಣ ಭಾರತದ ಸ್ವಿಟ್ಜರ್ಲ್ಯಾಂಡ್” ಎಂದು ಕರೆಯಲಾಗುತ್ತದೆ. ಊಟಿಯಿಂದ ಕೂನೂರುಗೆ ತೆರಳುವ ದಾರಿಯಲ್ಲಿ ವ್ಯಾಲಿ ವ್ಯೂ ಎಂಬ ಒಂದು ವೀಕ್ಷಣಾ ಕೇಂದ್ರವಿದೆ.

ಅತ್ಯದ್ಭುತವಾದ ಡಾಲ್ಫಿನ್ಸ್ ನೋಸ್ ಕೂನೂರಿನಿಂದ ಸುಮಾರು ೧೨ ಕಿ.ಮೀ ದೂರದಲ್ಲಿದೆ. ಸಮುದ್ರ ಮಟ್ಟದಿಂದ ಸುಮಾರು ೧,೫೦೦ ಮೀಟರ್ ಎತ್ತರದಲ್ಲಿದೆ. ಈ ಬೃಹತ್ ಬಂಡೆಯ ಶಿಖರದ ತುದಿಯು ಡಾಲ್ಫಿನ್ ನ ಮೂಗನ್ನು ಹೋಲುತ್ತದೆ. ಊಟಿಗೆ ಭೇಟಿ ನೀಡಿದಾಗ ತಪ್ಪದೇ ಭೇಟಿ ನೀಡಲೇಬೇಕಾದ ಪ್ರವಾಸಿ ತಾಣಗಳಲ್ಲಿ ಇದು ಕೂಡ ಒಂದಾಗಿದೆ.

ಸುಂದರವಾದ ಗಿರಿಧಾಮ ಊಟಿ
ಪಿಕಾರ ಸರೋವರ

ಇಲ್ಲಿ ಸುಂದರವಾದ ಪಿಕಾರ ಸರೋವರ ಹಾಗು ಪಿಕಾರ ಜಲಪಾತವು ಇದೆ. ಪೈನ್ ಮರಗಳಿಂದ ಶ್ರೀಮಂತವಾಗಿದ್ದು, ಹಲವಾರು ಚಲನಚಿತ್ರದ ಚಿತ್ರೀಕರಣ ಈ ಕಾಡಿನಲ್ಲಿ ನಡೆದಿವೆ. ಕಾಮರಾಜ ಸಾಗರ ಸರೋವರವಿದೆ. ಪ್ರಾಣಿ ಸಂಪತ್ತಿಗೆ ನೆಲೆಯಾಗಿರುವ ಮದುಮಲೈ ರಾಷ್ಟ್ರೀಯ ಉದ್ಯಾನವಿದೆ. ಮರ್ಕುರ್ತಿ ರಾಷ್ಟ್ರೀಯ ಉದ್ಯಾನವಿದೆ. ಪಾರ್ಸನ್ಸ್ ಕಣಿವ್ ಜಲಾಶಯ ಮತ್ತು ಎಮರಾಲ್ಡ್ ಸರೋವರವಿದೆ.
ಅವಲಾಂಚ್ ಸರೋವರ, ಅಪ್ಪರ್ ಭವಾನಿ ಸರೋವರವಿದೆ. ಕ್ರಿಸ್ಮಸ್‌ ಅನ್ನು ಇಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ

​ಊಟಿ ತನ್ನದೇ ಆದ ವಿಮಾನ ನಿಲ್ದಾಣವನ್ನು ಹೊಂದಿಲ್ಲ. ಹಾಗಾಗಿ ಸಮೀಪದ ವಿಮಾನ ನಿಲ್ದಾಣವೆಂದರೆ, ತಮಿಳುನಾಡಿನ ಕೊಯಂಬತ್ತೂರು. ಇಲ್ಲಿಂದ ಊಟಿಗೆ ಸುಮಾರು ೧೦೦ ಕಿ.ಮೀ ದೂರದಲ್ಲಿದೆ. ಅಲ್ಲದೇ ಇದು ಭಾರತದ ಅನೇಕ ನಗರಗಳ ಜೊತೆ ಸಂಪರ್ಕವನ್ನು ಹೊಂದಿದೆ. ಚೆನ್ನೈ, ಬೆಂಗಳೂರು, ಮಧುರೈ ಮತ್ತು ಹೈದರಾಬಾದ್ ಸೇರಿದಂತೆ ದಕ್ಷಿಣ ಭಾರತದ ಅನೇಕ ನಗರಗಳೊಂದಿಗೆ ವಿಮಾನದ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ.

ಊಟಿಯಿಂದ ಸುಮಾರು ೪೭ ಕಿ.ಮೀ ದೂರದಲ್ಲಿರುವ ಮೆಟ್ಟು ಪಾಳ್ಯಂ ಹತ್ತಿರದ ರೈಲು ನಿಲ್ದಾಣವಾಗಿದೆ. ಕೊಯಮತ್ತೂರು ಮತ್ತು ಚೆನ್ನೈ ನಿಂದ ಮೆಟ್ಟುಪಾಳ್ಯಂಗೆ ನಿಯಮಿತ ರೈಲುಗಳು ಚಲಿಸುತ್ತವೆ.

ಊಟಿಯು ದಕ್ಷಿಣ ಭಾರತದ ಅನೇಕ ನಗರಗಳೊಂದಿಗೆ ರಸ್ತೆಯ ಮೂಲಕ ಉತ್ತಮವಾದ ಸಂಪರ್ಕವನ್ನು ಹೊಂದಿದೆ. ಇದು ಮೈಸೂರು, ಬೆಂಗಳೂರು, ಮಧುರೈ ಮತ್ತು ಕನ್ಯಾಕುಮಾರಿ ನಗರಗಳಿಂದ ನಿಯಮಿತವಾದ ಬಸ್ ಸೇವೆಗಳಿವೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ನಟ ರಾಘು ಹಾಗೂ ಅಮೃತಾ ರಾಮಮೂರ್ತಿ ರವರ ವಿವಾಹ ವಾರ್ಷಿಕೋತ್ಸವದ ಸಮಾರಂಭ.

ನಟ ರಾಘು ಹಾಗೂ ಅಮೃತಾ ರಾಮಮೂರ್ತಿ ರವರ ವಿವಾಹ ವಾರ್ಷಿಕೋತ್ಸವದ ಸಮಾರಂಭ.

ಶಂಕರನಾಗ್

ಆಟೋ ಶಂಕರ್ ಯಾರಿಗೆ ತಾನೇ ಗೊತ್ತಿಲ್ಲ?ನಟ, ನಿರ್ದೇಶಕ ಶಂಕರನಾಗ್