in

ಮೈಸೂರು ಅರಸರಿಗೆ ಮಕ್ಕಳಾಗದಿರುವ ಅಲಮೇಲಮ್ಮನ ಶಾಪ

ಅಲಮೇಲಮ್ಮನ ಶಾಪ
ಅಲಮೇಲಮ್ಮನ ಶಾಪ

ಮೈಸೂರು ಅರಮನೆಯಲ್ಲಿ ನವರಾತ್ರಿಯ ಅಷ್ಟು ದಿನವೂ ಖಾಸಗಿ ದರ್ಬಾರ್ ಜತೆಯಲ್ಲಿ ವಿವಿಧ ಪೂಜೆಗಳನ್ನು, ಧಾರ್ಮಿಕ ವಿಧಿ ವಿಧಾನದಂತೆ ನಡೆಸಲಾಗುತ್ತದೆ. ಇಂತಹ ಪೂಜೆಗಳ ನಡುವೆ ಶಾಪ ವಿಮೋಚನೆಗಾಗಿ ಅಲಮೇಲಮ್ಮನಿಗೂ ಪೂಜೆ ನಡೆಸುತ್ತಾ ಬಂದಿದ್ದಾರೆ.

ಈಗಲೂ ಮೈಸೂರು ದಸರಾ ವೈಭವದಲ್ಲಿ ರಾಜಮನೆತನದ ದತ್ತು ಪುತ್ರರು ಮಾತ್ರ ಪೂಜೆಯಲ್ಲಿ ಕುಳಿತುಕೊಳ್ಳುತ್ತಾರೆ. ಮೈಸೂರು ಭಾಗದಲ್ಲಿ ಮೈಸೂರು ಮಹಾರಾಜರು ಮತ್ತು ಅಲಮೇಲಮ್ಮನ ಬಗೆಗೆ ಗೊತ್ತೇ ಇರುತ್ತದೆ. ಹೊರಗಿನ ಹೆಚ್ಚಿನ ಜನಕ್ಕೆ ಇದು ಅರಿವಿಗೆ ಬಂದಿರುವುದಿಲ್ಲ. ಇಷ್ಟಕ್ಕೂ ಅಲಮೇಲಮ್ಮನಿಗೆ ಏಕೆ ಪೂಜೆ ನಡೆಯುತ್ತದೆ ಎಂಬುದನ್ನು ನೋಡುವುದಾದರೆ, ಅದಕ್ಕೊಂದು ಚಾರಿತ್ರಿಕ ಹಿನ್ನಲೆ ಸಿಗುತ್ತದೆ.

ಮೈಸೂರು ಅರಸರಿಗೆ ಮಕ್ಕಳಾಗದಿರುವ ಅಲಮೇಲಮ್ಮನ ಶಾಪ
ರಾಜಮನೆತನದ ದತ್ತು ಪುತ್ರ

ತಲಕಾಡಿಗೆ ಓಡಿಹೋದ ಶ್ರೀರಂಗರಾಯ
ವಿಜಯನಗರದ ಅರಸರ ಪ್ರತಿನಿಧಿಯಾಗಿ ಶ್ರೀರಂಗಪಟ್ಟಣ ಪ್ರದೇಶವನ್ನು ಆಳುತ್ತಿದ್ದ ರಾಜ ಶ್ರೀರಂಗರಾಯನ ಪತ್ನಿಯೇ ಅಲಮೇಲಮ್ಮ. ಮೈಸೂರಿನ ರಾಜ ಒಡೆಯರು ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡ ನಂತರ ಅಲ್ಲಿದ್ದ ಶ್ರೀರಂಗರಾಯ ತಲಕಾಡಿಗೆ ಓಡಿಹೋಗಿ ಅಲ್ಲಿಯೇ ಪತ್ನಿಯೊಡನೆ ವಾಸಿಸುತ್ತಿರುತ್ತಾನೆ. ಕೆಲದಿನಗಳ ನಂತರ ಶ್ರೀರಂಗರಾಯ ಮರಣ ಹೊಂದುತ್ತಾನೆ. ಆ ಸಮಯದಲ್ಲಿ ನವರಾತ್ರಿ ಉತ್ಸವಕ್ಕೆ ಶ್ರೀರಂಗನಾಥ ಸ್ವಾಮಿಯನ್ನು ಅಲಂಕರಿಸಲು ತಲಕಾಡಿನಲ್ಲಿದ್ದ ಅಲಮೇಲಮ್ಮನಿಗೆ ಅವಳಲ್ಲಿದ್ದ ಒಡವೆಗಳನ್ನು ತಂದು ತಮಗೊಪ್ಪಿಸುವಂತೆ ರಾಜಾಜ್ಞೆ ಮಾಡಲಾಗುತ್ತದೆ. ಆದರೆ ಅಲಮೇಲಮ್ಮ ರಾಜಾಜ್ಞೆಯನ್ನು ತಿರಸ್ಕರಿಸುತ್ತಾಳೆ. ಆಗ ಆಕೆಯಿಂದ ಬಲವಂತವಾಗಿ ಒಡವೆಗಳನ್ನು ಕಿತ್ತುಕೊಂಡು ಬರುವಂತೆ ರಾಜಒಡೆಯರು ಅಪ್ಪಣೆ ಮಾಡುತ್ತಾರೆ. ಆಗ ರಾಜಧಾನಿ ಶ್ರೀರಂಗಪಟ್ಟಣದಿಂದ ರಾಜಭಟರು ಅಲಮೇಲಮ್ಮ ವಾಸವಿದ್ದ ತಲಕಾಡಿನತ್ತ ಹೊರಡುತ್ತಾರೆ.

ರಾಜಭಟರು ತಲಕಾಡಿನತ್ತ ಬರುತ್ತಿರುವ ವಿಷಯ ತಿಳಿದ ಅಲಮೇಲಮ್ಮ, ಅವರಿಂದ ತಪ್ಪಿಸಿಕೊಳ್ಳುವ ಸಲುವಾಗಿ ತಲಕಾಡಿನಿಂದ ಮಾಲಂಗಿಯತ್ತ ಓಡಿಹೋಗುತ್ತಾಳೆ. ಆದರೆ ರಾಜಭಟರು ಅವಳ ಬೆನ್ನಟ್ಟುತ್ತಾರೆ. ಆಗ ಅವಳಿಗೆ ಅವರಿಂದ ತಪ್ಪಿಸಿಕೊಂಡು ಮುಂದೆ ಸಾಗಲು ಸಾಧ್ಯವಾಗುವುದಿಲ್ಲ. ಬೇರೆ ದಾರಿ ಕಾಣದ ಆಕೆ ಕೋಪದಿಂದ ‘ಮಾಲಂಗಿ ಮಡುವಾಗಿ, ತಲಕಾಡು ಮರಳಾಗಿ, ಮೈಸೂರು ಅರಸರಿಗೆ ಮಕ್ಕಳಾಗದಿರಲಿ’ ಎಂದು ಶಾಪ ನೀಡಿ ತನ್ನಲಿದ್ದ ಒಡವೆ ಗಂಟನ್ನು ಉಡಿಯಲ್ಲಿ ಕಟ್ಟಿಕೊಂಡು ಮಾಲಂಗಿ ಸಮೀಪದ ಕಾವೇರಿ ನದಿಗೆ ಹಾರಿ ಪ್ರಾಣ ಬಿಡುತ್ತಾಳೆ.

ಇನ್ನೊಂದು ಪ್ರಕಾರ
ಈವರೆಗೂ ಶಾಪ ವಿಮೋಚನೆ ಆಗಿಲ್ಲ. ಹೀಗಾಗಿ ತಲೆತಲಾಂತರಗಳಿಂದ ದತ್ತು ಪುತ್ರರ ಮೂಲಕ ವಂಶ ಮುಂದುವರೆಯುತ್ತಿದೆ ಎನ್ನಲಾಗಿದೆ.ಮೈಸೂರು ಪ್ರಾಂತ್ಯದಲ್ಲಿ ಜನಜನಿತವಾಗಿರುವ ಕತೆಯ ಪ್ರಕಾರ, ಹಿಂದೆ ವಿಜಯನಗರದ ಪ್ರತಿನಿಧಿಯಾಗಿ ಶ್ರೀರಂಗಪಟ್ಟಣದಲ್ಲಿ ರಾಜ್ಯಭಾರ ಮಾಡುತ್ತಿದ್ದ ಶ್ರೀರಂಗರಾಯನಿಗೆ ಬೆನ್ನುಪಣಿ ಎಂಬ ರೋಗ ಬಂದಿತ್ತು. ಇದರ ನಿವಾರಣೆಗೆ ಶ್ರೀರಂಗರಾಯ ತನ್ನ ಪತ್ನಿ ಅಲಮೇಲಮ್ಮ ಜತೆ ತಲಕಾಡಿನ ವೈದ್ಯನಾಥೇಶ್ವರ ದೇವಸ್ಥಾನಕ್ಕೆ ಹೋಗಿದ್ದ. ಆ ವೇಳೆ ಶ್ರೀರಂಗಪಟ್ಟಣ ವಶಪಡಿಸಿಕೊಳ್ಳುವುದು ಸುಲಭ ಎಂದು ಮೈಸೂರಿನ ರಾಜ ಮನೆತನದ ಒಡೆಯರು ದಾಳಿ ನಡೆಸಿ ಶ್ರೀರಂಗಪಟ್ಟಣವನ್ನು ವಶಪಡಿಸಿಕೊಳ್ಳುತ್ತಾರೆ. ಆಗ ಶ್ರೀರಂಗರಾಯ ತಲಕಾಡಿನಲ್ಲೇ ಮೃತಪಡುತ್ತಾನೆ. ಬಳಿಕ ಮಾಲಂಗಿಯಲ್ಲಿ ನೆಲೆಸುವ ಅಲಮೇಲಮ್ಮನ ಮೇಲೆ ದಂಡೆತ್ತಿ ಹೋಗಲು ಒಡೆಯರ್ ನಿರ್ಧರಿಸುತ್ತಾರೆ. ಅದನ್ನು ತಿಳಿದು ‘ತಲಕಾಡು ಮರಳಾಗಿ, ಮಾಲಂಗಿ ಮಡುವಾಗಿ, ಮೈಸೂರು ರಾಜರಿಗೆ ಮಕ್ಕಳಾಗದಿರಲಿ’ ಎಂದು ಅಲಮೇಲಮ್ಮ ಶಾಪ ನೀಡಿ ಕಾವೇರಿ ನದಿಗೆ ಹಾರಿದ್ದಾಳೆ ಎನ್ನಲಾಗುತ್ತದೆ.

ಮೈಸೂರು ಅರಸರಿಗೆ ಮಕ್ಕಳಾಗದಿರುವ ಅಲಮೇಲಮ್ಮನ ಶಾಪ
ಅಲಮೇಲಮ್ಮ

ಅಲಮೇಲಮ್ಮನ ಶಾಪದ ಪ್ರಭಾವ ಎನ್ನುವಂತೆ ಅಂದಿನಿಂದ ಇಂದಿನ ತನಕವೂ ತಲಕಾಡು ಮರಳು ತುಂಬಿದ ಪ್ರದೇಶವಾಗಿದೆ. ಹಾಗೆಯೇ ಇದರ ಸಮೀಪದ ಮಾಲಂಗಿ ಕೂಡ ಮಡುವಾಗಿ ಭಯಂಕರ ಪ್ರಪಾತವಾಗಿದೆ. ಅಷ್ಟೇ ಅಲ್ಲ ಆ ಕಾಲದಿಂದಲೂ ಮೈಸೂರು ಅರಸರಿಗೆ ಮಕ್ಕಳಾಗದೆ ಅವರು ದತ್ತು ಪಡೆದವರಿಗೆ ಮಾತ್ರ ಸಂತಾನ ಪ್ರಾಪ್ತವಾಗುವುದು ನಡೆದುಕೊಂಡು ಬರುತ್ತಿದೆ. ಈ ಘಟನೆ ನಡೆದ ಬಳಿಕ ಮಹಾರಾಜರು ಅಲಮೇಲಮ್ಮನ ಶಾಪ ನಿವಾರಣೆಗಾಗಿ ಅಲಮೇಲಮ್ಮನ ಚಿನ್ನದ ವಿಗ್ರಹವೊಂದನ್ನು ಮಾಡಿಸಿ ಅವರ ಕಾಲದಿಂದಲೇ ನವರಾತ್ರಿ ಹಬ್ಬದಲ್ಲಿ ಅದಕ್ಕೆ ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯ ಜಾರಿಗೆ ತಂದರು ಎನ್ನಲಾಗಿದ್ದು, ಅಲ್ಲಿಂದ ಇಲ್ಲಿವರೆಗೂ ನಿರಂತರವಾಗಿ ಪೂಜೆ ನಡೆದುಕೊಂಡು ಬಂದಿದೆ.

ತಲಕಾಡು ಮರಳಾಗಿ, ಮಾಲಂಗಿ ಮಡುವಾಗಿ, ಮೈಸೂರು ರಾಜರಿಗೆ ಮಕ್ಕಳಾಗದಿರಲಿ’ ಎಂದು ಅಲಮೇಲಮ್ಮ ಮೈಸೂರು ಅರಸರಿಗೆ ಶಾಪ ನೀಡಿದ್ದಳು. ಇದರ ವಿಮೋಚನೆಗೆ ಪ್ರತಿ ದಸರಾ ಉತ್ಸವದಲ್ಲೂ ಅಲಮೇಲಮ್ಮ ಮೂರ್ತಿಗೆ ಯದುವಂಶಸ್ಥರು ಪೂಜೆ ಮಾಡುತ್ತಾರೆ.

ಅಲಮೇಲಮ್ಮನ ಈ ಅತಿರೇಕದ ಹೆಜ್ಜೆಯನ್ನು ಕೇಳಿದ ರಾಜ ಒಡೆಯರ್ ನಿಜವಾಗಿಯೂ ಪಶ್ಚಾತ್ತಾಪಪಟ್ಟರು. ಅವರು ಆಭರಣವನ್ನು ದೇವಸ್ಥಾನಕ್ಕೆ ಹಿಂದಿರುಗಿಸಲು ಬಯಸಿದ್ದರು ಮತ್ತು ಅದನ್ನು ತಮ್ಮ ಸ್ವಂತ ಬಳಕೆಗಾಗಿ ಮುಟ್ಟುಗೋಲು ಹಾಕಿಕೊಳ್ಳುವುದಿಲ್ಲ. ಅವನ ದುಃಖದಲ್ಲಿ ಅವನು ಅಲಮೇಲಮ್ಮನ ವಿಗ್ರಹವನ್ನು ಚಿನ್ನದಲ್ಲಿ ಮಾಡಿದನು, ಅದನ್ನು ಅರಮನೆಯಲ್ಲಿ ಸ್ಥಾಪಿಸಿದನು ಮತ್ತು ಅದನ್ನು ದೇವತೆಯಾಗಿ ಪೂಜಿಸಿದನು. ಅವಳ ಕೂದಲಿನ ಅವಶೇಷವನ್ನು ಪೆಟ್ಟಿಗೆಯಲ್ಲಿ ಸಂರಕ್ಷಿಸಲಾಗಿದೆ. ಇಂದಿಗೂ ಮೈಸೂರು ಅರಮನೆಯೊಳಗೆ ಅಲಮೇಲಮ್ಮನ ವಿಗ್ರಹವನ್ನು ಕಾಣಬಹುದು ಮತ್ತು ರಾಜಮನೆತನದಿಂದ ಪೂಜಿಸಲಾಗುತ್ತದೆ. ಇಂದು ರಂಗನಾಯಕಿ ಮತ್ತು ಅಲಮೇಲಮ್ಮ ದೇವಿಯನ್ನು ಅಲಂಕರಿಸುತ್ತಿರುವ ಅದೇ ಬೃಹತ್ ಮುತ್ತಿನ ಮೂಗುತಿಯನ್ನು ನೋಡಬಹುದು.
ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಇಂದು ಭಯಂಕರ ಶುಕ್ರವಾರ 7 ರಾಶಿಯವರಿಗೆ ಮುಟ್ಟಿದೆಲ್ಲಾ ಚಿನ್ನ! ಲಕ್ಷ್ಮೀಪುತ್ರರಾಗುತ್ತೀರಾ ದುಡ್ಡಿನ ಸುರಿಮಳೆ!

ಇಂದು ಭಯಂಕರ ಶುಕ್ರವಾರ 7 ರಾಶಿಯವರಿಗೆ ಮುಟ್ಟಿದೆಲ್ಲಾ ಚಿನ್ನ! ಲಕ್ಷ್ಮೀಪುತ್ರರಾಗುತ್ತೀರಾ ದುಡ್ಡಿನ ಸುರಿಮಳೆ!

ಕನ್ಯಾ ರಾಶಿಯ ಮೇ ತಿಂಗಳ ರಾಶಿ ಭವಿಷ್ಯ

ಕನ್ಯಾ ರಾಶಿಯ ಮೇ ತಿಂಗಳ ರಾಶಿ ಭವಿಷ್ಯ