ದಿನ ಬೆಳಗಾದ್ರೆ ಹೆಚ್ಚಾಗಿ ಎಲ್ಲರ ಮನೇಲೂ ಗಮ್ ಅನ್ನೋ ಕಾಫಿ ಪರಿಮಳ ಬರದೇ ಇರಲ್ಲ. ಕರ್ನಾಟಕದಲ್ಲಿ ಕಾಫಿ ಮತ್ತು ಟೀ ಎರಡನ್ನು ಅಭ್ಯಾಸ ಮಾಡ್ಕೊಂಡಿದೀವಿ.ಕೆಲವರು ಕಾಫಿ ಕುಡುದ್ರೆ ಇನ್ನು ಕೆಲವರ ಮನೇಲಿ ಟೀ ಅಭ್ಯಾಸ ಇರುತ್ತೆ.ಹಾಗಾದ್ರೆ ಈ ಕಾಫಿ ನಮ್ಮ ಕರ್ನಾಟಕಕ್ಕೆ ಬಂದಿದ್ದಾದ್ರೂ ಹೇಗೆ? ಪರಿಚಯ ಹೇಗಾಯ್ತು ಅಂತ ನಿಮಗೆಲ್ಲ ಗೊತ್ತ?

ಸರಿ ಸುಮಾರು ೪೦೦ ವರ್ಷಗಳ ಹಿಂದೆ ಬಾಬಾ ಬುಡನ್ ಎನ್ನುವ ಮುಸ್ಲಿಂ ಯಾತ್ರಿಕ ಕಾಫಿ ಬೀಜವನ್ನು ಚಿಕ್ಕಮಗಳೂರಿನಲ್ಲಿ ನೆಟ್ಟಿದ್ದರು. ನಂತರ ಅವರು ಕಾಫಿ ಬೀಜಗಳನ್ನು ನೆಟ್ಟ ಜಾಗಕ್ಕೆ ಬಾಬಾ ಬುಡನ್ ಗಿರಿ ಎಂದು ಹೆಸರಿಡಲಾಯಿತು. ಹಾಗೆ ನೆಟ್ಟ ಕಾಫಿಯ ಪರಿಮಳ ಈಗ ಬಹುತೇಕ ಚಿಕ್ಕಮಗಳೂರು,ಹಾಸನ,ಮಡಿಕೇರಿ ಪ್ರಾಂತ್ಯದಲ್ಲಿ ಪ್ರಮುಖ ಬೆಳೆಯನ್ನಾಗಿಸಿದೆ . ಕಾಫಿ ಉತ್ಪಾದನೆಯಲ್ಲಿ ಭಾರತ ಪ್ರಪಂಚದಲ್ಲಿ ೬ನೇ ಸ್ಥಾನದಲ್ಲಿದೆ.ಉತ್ಪಾದಿಸಿದ ಸುಮಾರು ೭೦% ಕಾಫಿಯನ್ನು ನಾವು ರಫ್ತುಮಾಡುತ್ತೇವೆ.
ಕಾಫಿಯಲ್ಲಿ ಎರಡು ವೈವಿಧ್ಯ ತಳಿಗಳಿವೆ ರೊಬಸ್ಟಾ ಮತ್ತು ಅರೇಬಿಕಾ. ಕಾಫಿ ಬೆಳೆಯಲು ಹೆಚ್ಚಿನ ನೆರಳು ಬೇಕಾಗಿರುವುದರಿಂದ ಪಶ್ಚಿಮ ಘಟ್ಟಗಳಲ್ಲಿ ಮರಗಳ ನೆರಳಿನಲ್ಲಿ ಕಾಫಿ ಬೆಳೆಯಲು ಸಹಕಾರಿಯಾಗಿದೆ. ಕಾಫಿ ವಾರ್ಷಿಕ ಬೆಳೆಯಾಗಿದ್ದು ಯಾವುದೇ ಯಂತ್ರದ ಬಳಕೆಯಿಲ್ಲದೆ ಕಾಫಿ ಹಣ್ಣನ್ನು ಕೈಯಲ್ಲಿ ಕೀಳುತ್ತಾರೆ. ಪೂರ್ತಿ ಮಾಗಿದ ಹಣ್ಣನು ಕುಯ್ದು ತಿರುಳನ್ನು ಬೇರ್ಪಡಿಸಲಾಗುತ್ತದೆ. ನಂತರ ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಬೇಕು. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತವು ಹೆಚ್ಚು ನೈಸರ್ಗಿಕ ಪ್ರಕ್ರಿಯೆಯನ್ನು ಅನುಸರಿಸಿತ್ತದೆ.

ಹೀಗೆ ತೊಳೆದು ಒಣಗಿಸಿದ ಅರೇಬಿಕಾ ಕಾಫಿ ಬೀಜವನ್ನು ಪ್ಲಾಂಟೇಶನ್ ಕಾಫಿ ಮತ್ತು ರೊಬಸ್ಟಾ ಬೀಜವನ್ನು ಫಾರ್ಚ್ಮೆಂಟ್ ಕಾಫಿ ಎಂದು ಕರೆಯುತ್ತೇವೆ.
ಹೀಗೆ ಕರ್ನಾಟಕದಲ್ಲಿ ಶುರುವಾದ ಕಾಫಿಯ ಪ್ರಯಾಣ, ಕರ್ನಾಟಕದ ಜನರನ್ನು ಕಾಫಿ ಪ್ರಿಯರಾಗಿಸಿದೆ. ನಮ್ಮ ಕಾಫಿಯ ಕಂಪು ದೇಶ ಮತ್ತು ವಿದೇಶದಲ್ಲೂ ಪಸರಿಸಿದೆ.
GIPHY App Key not set. Please check settings