in

ಕನ್ನಡ ಕಲಾರಸಿಕರ ಮನದರಸಿ ಜಯಂತಿ

ಅಭಿನಯ ಶಾರದೆ ಜಯಂತಿ
ಅಭಿನಯ ಶಾರದೆ ಜಯಂತಿ

ಜಯಂತಿಯವರು ಕನ್ನಡ ಚಿತ್ರರಂಗದ ಪ್ರಮುಖ ನಾಯಕ ನಟಿಯಲ್ಲಿ ಒಬ್ಬರು. ಒಟ್ಟು ಆರು ಭಾಷೆಯ ಸಿನೆಮಾಗಳಲ್ಲಿ ಅಭಿನಯಿಸಿರುವ ಜಯಂತಿ ಕನ್ನಡದ ೧೯೦ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ೧೯೬೮ರಲ್ಲಿ ತೆರೆ ಕಂಡ ವೈ.ಅರ್. ಸ್ವಾಮಿ ನಿರ್ದೇಶನದ “ಜೇನು ಗೂಡು ” ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಜಯಂತಿಯವರ ಮೂಲ ಹೆಸರು ‘ಕಮಲ ಕುಮಾರಿ’. ಅದಕ್ಕಿಂತ ಮುನ್ನ ‘ಜಗದೇಕ ವೀರನ ಕಥೆ’ ಚಿತ್ರದಲ್ಲಿ ಸಣ್ಣ ಪಾತ್ರವೊಂದರಲ್ಲಿ ಅಭಿನಯಿಸಿದ್ದರು. ನಿರ್ಮಾಪಕಿಯೂ ನಿರ್ದೇಶಕಿಯೂ ಆಗಿರುವ ಇವರು ೧೯೬೫ರ ‘ಮಿಸ್ ಲೀಲಾವತಿ’ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ‘ಎರಡು ಮುಖ’ ‘ಮನಸ್ಸಿನಂತೆ ಮಾಂಗಲ್ಯ,ಧರ್ಮ ದಾರಿ ತಪ್ಪಿತು’ಮಸಣದ ಹೂವು,’ಆನಂದ್’ ಚಿತ್ರಗಳ ಅಭಿನಯಕ್ಕಾಗಿ ಐದು ಬಾರಿ ರಾಜ್ಯ ಪ್ರಶಸ್ತಿ ಗಳಿಸಿದ್ದಾರೆ. ‘ಎಡಕಲ್ಲು ಗುಡ್ಡದ ಮೇಲೆ’ ಚಿತ್ರದಲ್ಲಿ ಜಯಂತಿಯವರು ವಿಶಿಷ್ಟ ಅಭಿನಯ ನೀಡಿದ್ದಾರೆ.

೭೬ ವರ್ಷ ವಯಸ್ಸಿನ ಜಯಂತಿಯವರು ತಮ್ಮ ಬೆಂಗಳೂರಿನ ನಿವಾಸದಲ್ಲಿ ಸೋಮವಾರ, ೨೬ ಜುಲೈ ೨೦೨೧ ರಂದು ನಿಧನರಾದರು. ಸ್ವಲ್ಪದಿನಗಳಿಂದ ಅವರು ಅಸ್ವಸ್ಥತೆಯಿಂದ ಬಳಲುತ್ತಿದ್ದರು.

ಕನ್ನಡ ಕಲಾರಸಿಕರ ಮನದರಸಿ ಜಯಂತಿ
ಅಭಿನಯ ಶಾರದೆ ಜಯಂತಿ

ಕನ್ನಡ ಚಿತ್ರರಂಗದಲ್ಲಿ ಅಭಿನಯ ಶಾರದೆ ಎಂದೇ ಕರೆಯಲ್ಪಡುವ ಜಯಂತಿ ದಕ್ಷಿಣ ಭಾರತ ಚಿತ್ರರಂಗದ ಮೇರು ನಟಿ.
ಕನ್ನಡ,ತೆಲಗು,ತಮಿಳು,ಮಲಯಾಳಂ,ಹಿಂದಿ ಮತ್ತು ಮರಾಠಿ ಭಾಷೆಗಳೆಲ್ಲ ಸೇರಿ ಸುಮಾರು 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

1950 ರಲ್ಲಿ ಕರ್ನಾಟಕದ ಬಳ್ಳಾರಿಯಲ್ಲಿ ಜನಿಸದ ಜಯಂತಿಯ ಮೂಲಹೆಸರು ಕಮಲಾ ಕುಮಾರಿ. ತಂದೆ ಬಾಲಸುಬ್ರಹ್ಮಣ್ಯಂ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಪಕರಾಗಿ ಕಾರ್ಯನಿರ್ವಹಿಸುತ್ತಿದ್ದರೆ, ತಾಯಿ ಸಂತಾನಲಕ್ಷ್ಮೀ ಗೃಹಿಣಿ. ಮನೆಯಲ್ಲಿ ಹಿರಿಯ ಪುತ್ರಿಯಾಗಿ ಜನಿಸಿದ ಜಯಂತಿಗೆ ಇಬ್ಬರು ಕಿರಿಯ ಸಹೋದರರಿದ್ದಾರೆ. ಇವರ ತಂದೆ- ತಾಯಿಗಳು ವಿಚ್ಚೇದನ ಪಡೆದ ಕಾರಣ ಜಯಂತಿ ತಮ್ಮ ತಾಯಿಯ ಜೊತೆ ಮದ್ರಾಸ್‌ನಲ್ಲಿ ಬೆಳೆದರು.

ಜಯಂತಿಯ ತಾಯಿಯವರಿಗೆ ಇವರನ್ನು ಶಾಸ್ತ್ರೀಯ ನೃತ್ಯಗಾರ್ತಿಯನ್ನಾಗಿ ಮಾಡಬೇಕೆಂಬ ಬಯಕೆ ಇದ್ದುದ್ದರಿಂದ ಚಂದ್ರಕಲಾರವರ ನೃತ್ಯಶಾಲೆಗೆ ಸೇರಿಸಿದರು. ಇಲ್ಲಿ ಜಯಂತಿಯವರ ಸಹಪಾಠಿಯಾಗಿದ್ದ ಮನೋರಮಾರವರು ಮುಂದೆ ಪ್ರಖ್ಯಾತ ತಮಿಳು ನಟಿಯಾದರು.

ಕನ್ನಡ ನಿರ್ದೇಶಕ ವೈ.ಆರ್.ಪುಟ್ಟಸ್ವಾಮಿಯವರು ಒಂದು ನೃತ್ಯಾಭ್ಯಾಸದಲ್ಲಿ ಜಯಂತಿಯವರನ್ನು ನೋಡಿ ತಮ್ಮ `ಜೇನು ಗೂಡು’ ಚಿತ್ರದಲ್ಲಿ ನಟಿಸುವ ಅವಕಾಶ ಕೊಟ್ಟರು. ಇಲ್ಲಿಂದ ಜಯಂತಿಯವರ ಅದೃಷ್ಟವೇ ಬದಲಾಯಿತು. ಕಮಲಾ ಕುಮಾರಿಗೆ ಜಯಂತಿ ಎಂದು ನಾಮಕರಣ ಮಾಡಿದ್ದು ಪುಟ್ಟಸ್ವಾಮಿಯವರೇ. ತಮ್ಮ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ, ಫಿಲ್ಮ್ ಫೇರ್ ಪ್ರಶಸ್ತಿ ಮತ್ತು ಆರು ಬಾರಿ ಕರ್ನಾಟಕ ರಾಜ್ಯ ಪ್ರಶಸ್ತಿ, ಪಡೆದಿದ್ದು ಜಯಂತಿಯವರ ಹೆಗ್ಗಳಿಕೆ.

ಕನ್ನಡದಲ್ಲಿ ನೂರಾರು ಚಿತ್ರಗಳಲ್ಲಿ ಅಭಿನಯಿಸಿದ ಇವರು ಡಾ.ರಾಜ್ ಜೊತೆ ದಾಖಲೆಯ 45 ಚಿತ್ರಗಳಲ್ಲಿ ನಟಿಸಿದ್ದಾರೆ.

ಕನ್ನಡ ಚಿತ್ರರಂಗದ ಮೊದಲ ಗ್ಲಾಮರಸ್ ನಟಿ ಎಂದೇ ಖ್ಯಾತಿ ಪಡೆದವರು ಜಯಂತಿ. ಕನ್ನಡ ಚಿತ್ರಗಳಲ್ಲಿ ಮೊದಲ ಬಾರಿಗೆ ತೆರೆಮೇಲೆ ಸ್ಕರ್ಟ್, ಸ್ವಿಮ್ ಸೂಟ್ ಸೇರಿದಂತೆ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡವರು ಜಯಂತಿ. ಬೋಲ್ಡ್ ಪಾತ್ರಗಳಲ್ಲಿ ಅಮೋಘ ಅಭಿನಯ ನೀಡಿದ ಜಯಂತಿ ಅವರ ಬಗ್ಗೆ ಅನೇಕರಿಗೆ ಹೊಟ್ಟೆಕಿಚ್ಚು ಇತ್ತು.

ಕನ್ನಡ ಕಲಾರಸಿಕರ ಮನದರಸಿ ಜಯಂತಿ
ಜಯಂತಿ

ಶಾಲೆಯಲ್ಲಿ ಜಯಂತಿ ಬ್ರಿಲ್ಲಿಯೆಂಟ್ ಸ್ಟೂಡೆಂಟ್ ಆಗಿದ್ದರು. ಆದರೆ, ಲೆಕ್ಕದಲ್ಲಿ ಮಾತ್ರ ಹಿಂದೆಬಿದ್ದಿದ್ದರು. ಚಿಕ್ಕವಯಸ್ಸಿನಲ್ಲಿ ಪರೀಕ್ಷೆಯ ಸಂದರ್ಭದಲ್ಲಿ ಜಯಂತಿ ಅವರಿಗೆ ಕಾಪಿ ಮಾಡೋಕೂ ಬರ್ತಿರ್ಲಿಲ್ವಂತೆ. ಇಂತಿಪ್ಪ ಜಯಂತಿ ಓದಿರುವುದು ಎಂಟನೇ ಕ್ಲಾಸ್‌ವರೆಗೆ ಮಾತ್ರ.
ಪತಿಯಿಂದ ದೂರಾದ ಬಳಿಕ ಸಂತಾನಲಕ್ಷ್ಮೀ ಮಕ್ಕಳೊಂದಿಗೆ ಚೆನ್ನೈಗೆ ಬಂದರು. ಬಾಲಕಿ ಕಮಲಾ ಕುಮಾರಿಗೆ ಸಿನಿಮಾ ಅಂದ್ರೆ ಹುಚ್ಚು. ಆದರೆ, ಮಗಳು ಒಳ್ಳೆಯ ಡ್ಯಾನ್ಸರ್ ಆಗಬೇಕೆಂಬ ಆಸೆ ತಾಯಿ ಸಂತಾನಲಕ್ಷ್ಮೀಗಿತ್ತು. ಹೀಗಾಗಿ, ಚೆನ್ನೈನಲ್ಲಿ ಚಂದ್ರಕಲಾ ಎಂಬ ಸಿನಿಮಾ ಡ್ಯಾನ್ಸರ್ ಬಳಿ ನೃತ್ಯ ಕಲಿಯಲು ಕಮಲಾ ಕುಮಾರಿಯನ್ನ ತಾಯಿ ಸಂತಾನಲಕ್ಷ್ಮೀ ಸೇರಿಸಿದರು. ಅದೇ ಡ್ಯಾನ್ಸ್ ಕ್ಲಾಸ್‌ನಲ್ಲಿ ಕಮಲಾ ಕುಮಾರಿಗೆ ತಮಿಳು ನಟಿ ಮನೋರಮಾ ಪರಿಚಯವಾಯಿತು. ಹೇಳಿ ಕೇಳಿ ಕಮಲಾ ಕುಮಾರಿ ನೃತ್ಯ ಕಲಿಯುತ್ತಿದ್ದದ್ದು ಸಿನಿಮಾ ಡ್ಯಾನ್ಸರ್ ಚಂದ್ರಕಲಾ ಬಳಿ. ಹೀಗಾಗಿ ಚಂದ್ರಕಲಾ ಸಿನಿಮಾ ಶೂಟಿಂಗ್‌ಗಾಗಿ ಸ್ಟುಡಿಯೋಗೆ ಹೋದಾಗೆಲ್ಲಾ ಕಮಲಾ ಕುಮಾರಿ ಕೂಡ ಜೊತೆಯಲ್ಲೇ ಹೋಗುತ್ತಿದ್ದರು. ಅಲ್ಲಿಂದಲೇ ಅವರಿಗೆ ಸಿನಿಮಾ ನಂಟು ಶುರುವಾಯಿತು.

‘ಜೇನುಗೂಡು’ ಚಿತ್ರದಲ್ಲಿ ಪಂಡರಿಬಾಯಿ ಹಾಗೂ ಚಂದ್ರಕಲಾ ನಟಿಸುತ್ತಿದ್ದರು. ಈ ಸಿನಿಮಾಕ್ಕೆ ಮೂರನೇ ಹೀರೋಯಿನ್‌ಗಾಗಿ ನಿರ್ದೇಶಕ ವೈ.ಆರ್.ಸ್ವಾಮಿ ಹುಡುಕಾಟ ನಡೆಸುತ್ತಿದ್ದರು. ಆಗ ವೈ.ಆರ್.ಸ್ವಾಮಿ ಕಣ್ಣಿಗೆ ಬಿದ್ದವರೇ ‘ಕಮಲಾ ಕುಮಾರಿ’. ‘ಜೇನುಗೂಡು’ ಚಿತ್ರದಲ್ಲಿ ನಟಿಸುವಂತೆ ಕಮಲಾ ಕುಮಾರಿಗೆ ವೈ.ಆರ್.ಸ್ವಾಮಿ ಆಫರ್ ನೀಡಿದರು. ಅವರೇ ಕಮಲಾ ಕುಮಾರಿಗೆ ‘ಜಯಂತಿ’ ಎಂದು ನಾಮಕರಣ ಮಾಡಿದರು.

ಕಲಾವತಿ’ ಹಾಗೂ ‘ಮಿಸ್ ಲೀಲಾವತಿ’ ಚಿತ್ರಗಳಲ್ಲಿ ಬೋಲ್ಡ್ ಪಾತ್ರಗಳಲ್ಲಿ ಜಯಂತಿ ಅಭಿನಯಿಸಿದರು. ಅಸಲಿಗೆ, ‘ಮಿಸ್ ಲೀಲಾವತಿ’ ಚಿತ್ರದಲ್ಲಿ ಸಾಹುಕಾರ್ ಜಾನಕಿ ಅಭಿನಯಿಸಬೇಕಿತ್ತು. ಆದರೆ, ಸಿನಿಮಾದಲ್ಲಿ ಸ್ವಿಮ್ಮಿಂಗ್ ಕಾಸ್ಟ್ಯೂಮ್ ಧರಿಸಬೇಕಾಗಿದ್ರಿಂದ ಸಾಹುಕಾರ್ ಜಾನಕಿ ಈ ಆಫರ್‌ಅನ್ನು ರಿಜೆಕ್ಟ್ ಮಾಡಿದ್ದರು.

ಅಷ್ಟಕ್ಕೂ, ‘ಮಿಸ್ ಲೀಲಾವತಿ’ ಚಿತ್ರದಲ್ಲಿ ಜಯಂತಿಗೆ ಮೊದಲು ಸೆಕೆಂಡ್ ಹೀರೋಯಿನ್ ಪಾತ್ರ ಫಿಕ್ಸ್ ಆಗಿತ್ತು. ಆದರೆ, ಯಾವಾಗ ಸಾಹುಕಾರ್ ಜಾನಕಿ ಈ ಚಿತ್ರವನ್ನು ರಿಜೆಕ್ಟ್ ಮಾಡಿದ್ರೋ, ಆಗ ಮುಖ್ಯ ಪಾತ್ರ ಜಯಂತಿಯ ಪಾಲಾಯಿತು.

ಹೇಗಿದ್ರೂ, ಜಯಂತಿಗೆ ಸ್ವಿಮ್ಮಿಂಗ್, ಹಾರ್ಸ್ ರೈಡಿಂಗ್, ಫೈಟಿಂಗ್ ಬರ್ತಿತ್ತು. ಹೀಗಾಗಿ ‘ಮಿಸ್ ಲೀಲಾವತಿ’ ಚಿತ್ರದಲ್ಲಿ ಜಯಂತಿ ಬೋಲ್ಡ್ ಆಗಿ ಅಭಿನಯಿಸಿದರು. ಮೊದಲ ಬಾರಿಗೆ ತೆರೆಮೇಲೆ ಸ್ವಿಮ್ ಸೂಟ್, ಸ್ಕರ್ಟ್, ಟಿ-ಶರ್ಟ್, ಮಾರ್ಡನ್ ಡ್ರೆಸ್ ಧರಿಸಿದ ಜಯಂತಿ ಪ್ರೇಕ್ಷಕರ ಕಣ್ಣು ಕುಕ್ಕಿದ್ದರು. ಇದೇ ಚಿತ್ರದ ಮೂಲಕ ಜಯಂತಿ ‘ಕನ್ನಡ ಚಿತ್ರರಂಗದ ಗ್ಲಾಮರಸ್ ನಟಿ’ ಎಂದು ಪ್ರಖ್ಯಾತಿ ಪಡೆದರು.

ಜುಲೈ 26, 2021 ರ ಮುಂಜಾವಿನಲ್ಲಿ ಜಯಂತಿಯವರು ಇಹಲೋಕ ತ್ಯಜಿಸಿದರು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಬಿಪಿನ್‌ ಲಕ್ಷ್ಮಣ್‌ ಸಿಂಗ್ ರಾವತ್‌

ಜನರಲ್‌ ಬಿಪಿನ್‌ ಲಕ್ಷ್ಮಣ್‌ ಸಿಂಗ್ ರಾವತ್‌

ವಿಧಾನ ಸಭೆ

ವಿಧಾನಸಭೆ ಎಂದರೆ ಏನು? ಅದು ಏನು ಕಾರ್ಯ ನಿರ್ವಹಿಸುತ್ತದೆ?