in

ನಿನ್ನನು ಪಡೆದ ನಾವೇ ಪುನೀತರು, ಪುನೀತ್ ರಾಜಕುಮಾರ

ಪುನೀತ್ ರಾಜ್‍ಕುಮಾರ್
ಪುನೀತ್ ರಾಜ್‍ಕುಮಾರ್

ಯಾರಿಗೆ ಗೊತ್ತಿಲ್ಲ ಪುನೀತ್ ಹೆಸರು? ನಾವು ಕಳೆದುಕೊಂಡ ರತ್ನ, ಮತ್ತೆ ಪಡೆಯಲಾರದ ಭಾಗ್ಯ. ದೇವರಿಗೆ ಕೋಟಿ ಕೋಟಿ ಅಭಿಮಾನಿಗಳ ಪ್ರಶ್ನೆ ಯಾಕೆ?

ಪುನೀತ್ ರಾಜ್‍ಕುಮಾರ್ ಕಾಲಾವಧಿ 13,ಮಾರ್ಚ್1975- 29 ಅಕ್ಟೋಬರ್ 2021, ಭಾರತೀಯ ಚಿತ್ರನಟ, ಹಿನ್ನೆಲೆ ಗಾಯಕ ಮತ್ತು ದೂರದರ್ಶನ ನಿರೂಪಕ ಮತ್ತು ಸಿನಿಮಾ ನಿರ್ಮಾಪಕ. ಇವರು 29 ಕನ್ನಡ ಚಲನಚಿತ್ರಗಳಲ್ಲಿ ನಾಯಕ ನಟನಾಗಿ ನಟನೆ ಮಾಡಿದ್ದಾರೆ. ಬಾಲ್ಯದಲ್ಲಿ ತನ್ನ ತಂದೆ ರಾಜಕುಮಾರ್ ಅಭಿನಯದ ಚಿತ್ರಗಳಲ್ಲಿ ಬಾಲನಟನಾಗಿ ಕಾಣಿಸಿಕೊಂಡಿದ್ದರು. ವಸಂತ ಗೀತ, ಭಾಗ್ಯವಂತ,ಚಲಿಸುವ ಮೋಡಗಳು ,ಎರಡು ನಕ್ಷತ್ರಗಳು , ಭಕ್ತ ಪ್ರಹ್ಲಾದ, ಯಾರಿವನು ಮತ್ತು ಬೆಟ್ಟದ ಹೂವು, ಚಿತ್ರಗಳಲ್ಲಿ ನಟನೆಗೆ ಮೆಚ್ಚುಗೆ ಪಡೆದರು. ಅವರ ಬೆಟ್ಟದ ಹೂವು ಚಿತ್ರದ ‘ರಾಮು’ ಪಾತ್ರಕ್ಕೆ ಅತ್ಯುತ್ತಮ ಬಾಲ ಕಲಾವಿದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಪಾತ್ರರಾಗಿದ್ದರು. ಚಲಿಸುವ ಮೋಡಗಳು ಮತ್ತು ಎರಡು ನಕ್ಷತ್ರಗಳು ಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಅತ್ಯುತ್ತಮ ಬಾಲ ಕಲಾವಿದ ಪ್ರಶಸ್ತಿಯನ್ನು ಪಡೆದರು. ಪುನೀತ್ ಅವರು 2002ರಲ್ಲಿ ಅಪ್ಪು ಚಿತ್ರದಲ್ಲಿ ಮೊದಲ ಬಾರಿಗೆ ನಾಯಕನಟನಾಗಿ ಅಭಿನಯಿಸಿದರು.

ಅವರಿಗೆ ಅಭಿಮಾನಿಗಳು “ಪವರ್‌ಸ್ಟಾರ್” ಎಂದು ಕರೆಯುತ್ತಾರೆ. ಅವರು ನಟಿಸಿದ ಅಭಿ, ವೀರಕನ್ನಡಿಗ,ಮೌರ್ಯ,ಆಕಾಶ್, ಅಜಯ್, ಅರಸು, ಮಿಲನ, ವಂಶಿ, ರಾಮ್ ,ಪೃಥ್ವಿ,ಜಾಕಿ, ಹುಡುಗರು, ಅಣ್ಣಾ ಬಾಂಡ್ , ಪವರ್ , ರಣವಿಕ್ರಮ , ದೊಡ್ಮನೆ ಹುಡುಗ , ರಾಜಕುಮಾರ , ಯುವರತ್ನ ಸೇರಿದಂತೆ ಇತರ ಹಲವು ಚಲನಚಿತ್ರಗಳು ಯಶಸ್ವಿಯಾಗಿ ಪ್ರದರ್ಶನಗೊಂಡವು. ಅವರು ಕನ್ನಡ ಚಿತ್ರರಂಗದ ಪ್ರಮುಖ ಹಾಗೂ ಅತ್ಯಂತ ಯಶಸ್ವಿ ನಾಯಕನಟರಾಗಿದ್ದರು. ಅವರು ಪ್ರಸಿದ್ಧ ಟಿವಿ ಆಟದ ಕಾರ್ಯಕ್ರಮ ಕನ್ನಡದ ಕೋಟ್ಯಧಿಪತಿಯ ನಿರೂಪಣೆ ಮಾಡಿದ್ದಾರೆ. ಕರ್ನಾಟಕ ರಾಜ್ಯಸರ್ಕಾರದ ವಿವಿಧ ಯೋಜನೆಗಳ ರಾಯಭಾರಿಯಾಗಿ, ಸಾಮಾಜಿಕ ಜಾಗೃತಿಯ ಪ್ರಚಾರಕರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.

ಪುನೀತ್ ರವರ ಮೊದಲ ಹೆಸರು ಲೋಹಿತ್, ಡಾ.ರಾಜ್‌ಕುಮಾರ್ ಮತ್ತು ಪಾರ್ವತಮ್ಮ ರಾಜ್‌ಕುಮಾರ್ ದಂಪತಿಗೆ ಚೆನ್ನೈನಲ್ಲಿ ಜನಿಸಿದರು. ಇವರು ರಾಜಕುಮಾರ್ ದಂಪತಿಯ ಐದನೇ ಮತ್ತು ಕಿರಿಯ ಮಗ. ಇವರ ಸಹೋದರರಾದ ಶಿವರಾಜ್‍ಕುಮಾರ್ ಮತ್ತು ರಾಘವೇಂದ್ರ ರಾಜ್‍ಕುಮಾರ್ ಅವರು ಜನಪ್ರಿಯ ನಟರು. ಪುನೀತ್ ಆರು ವರ್ಷ ವಯಸ್ಸಿನವನಾಗಿದ್ದಾಗ, ಅವರ ಕುಟುಂಬ ಮೈಸೂರಿಗೆ ಸ್ಥಳಾಂತರಗೊಂಡಿತು. ಅವರು ಹತ್ತು ವರ್ಷ ವಯಸ್ಸಿನವನಾಗುವವರೆಗೂ ಅವರ ತಂದೆ ಅವರನ್ನು ಮತ್ತು ಅವರ ಸಹೋದರಿ ಪೂರ್ಣಿಮಾರನ್ನು ಚಲನಚಿತ್ರದ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಪುನೀತ್ 1 ಡಿಸೆಂಬರ್ 1999ರಂದು ಚಿಕ್ಕಮಗಳೂರಿನ ಅಶ್ವಿನಿ ರೇವಂತ್ ರನ್ನು ವಿವಾಹವಾದರು. ಇವರಿಗೆ ಇಬ್ಬರು ಪುತ್ರಿಯರಿದ್ದಾರೆ.

ಬಾಲ ನಟನಾಗಿ :

ನಿನ್ನನು ಪಡೆದ ನಾವೇ ಪುನೀತರು, ಪುನೀತ್ ರಾಜಕುಮಾರ
ಪುನೀತ್ ರಾಜ್‍ಕುಮಾರ್


ನಿರ್ದೇಶಕ ವಿ. ಸೋಮಶೇಖರ್ ರವರ ಚಿತ್ರ ಪ್ರೇಮದ ಕಾಣಿಕೆ ಚಿತ್ರದಲ್ಲಿ ಪುನೀತ್ ಅವರು ಆರು ತಿಂಗಳ ಮಗುವಾಗಿದ್ದಾಗ ಕಾಣಿಸಿಕೊಂಡಿದ್ದು.
ವಿ. ಸೋಮಶೇಖರ್ ನಿರ್ದೇಶಿಸಿದ ಚಿತ್ರ ಮತ್ತು ಅವರ ತಂದೆ ನಟಿಸಿದ ಚಿತ್ರ. ಎರಡು ವರ್ಷಗಳ ನಂತರ, ನಿರ್ದೇಶಕ ದೊರೈ-ಭಗವಾನ್ ಪುನೀತ್ ಅವರನ್ನು ವಸಂತಗೀತೆನಲ್ಲಿ ಶ್ಯಾಮ್ ಪಾತ್ರದಲ್ಲಿ ಹಾಕಿದರು. ಇದರ ನಂತರ ಕೆ. ಎಸ್. ಎಲ್. ಸ್ವಾಮಿಯವರ ಪೌರಾಣಿಕ ನಾಟಕ ಭೂಮಿಗೆ ಬಂದ ಭಗವಂತ ಕೃಷ್ಣನಾಗಿ ಕಾಣಿಸಿಕೊಂಡರು ಮತ್ತು ಬಿ. ಎಸ್. ರಂಗ ಅವರ ಭಾಗ್ಯವಂತದಲ್ಲಿ, ಅವರು ಟಿ. ಜಿ. ಲಿಂಗಪ್ಪ ಸಂಯೋಜಿಸಿದ ತಮ್ಮ ಮೊದಲ ಜನಪ್ರಿಯ ಗೀತೆ “ಬಾನ ದಾರಿಯಲ್ಲಿ ಸೂರ್ಯ” ವನ್ನು ಧ್ವನಿಮುದ್ರಿಸಿದರು. ಅದೇ ವರ್ಷ, ಅವರು ತಮ್ಮ ತಂದೆಯೊಂದಿಗೆ ಎರಡು ಜನಪ್ರಿಯ ಚಿತ್ರಗಳಲ್ಲಿ ಚಲಿಸುವ ಮೋಡಗಳು ಮತ್ತು ಹೊಸ ಬೆಳಕು ಚಿತ್ರಗಳಲ್ಲಿ ಕಾಣಿಸಿಕೊಂಡರು. ಚಲಿಸುವ ಮೋಡಗಳು ಮತ್ತು ಹೊಸ ಬೆಳಕು ಚಿತ್ರಕ್ಕಾಗಿ ಅವರು ತಮ್ಮ ಮೊದಲ ಅತ್ಯುತ್ತಮ ಬಾಲ ಕಲಾವಿದ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು. ಅವರು ಎರಡು ಪೌರಾಣಿಕ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು ಭಕ್ತ ಪ್ರಹ್ಲಾದ ದಲ್ಲಿ ಮುಖ್ಯಪಾತ್ರವಾದ ಪ್ರಹ್ಲಾದನಾಗಿ ಮತ್ತು ಎರಡು ನಕ್ಷತ್ರಗಳು ಚಿತ್ರಕ್ಕಾಗಿ ತಮ್ಮ ಎರಡನೇ ಅತ್ಯುತ್ತಮ ಬಾಲ ಕಲಾವಿದ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು.

ಪುನೀತ್, ರಾಜ್‌ಕುಮಾರ್ ಅವರೊಂದಿಗೆ ಥ್ರಿಲ್ಲರ್ ಯಾರಿವನು ಚಿತ್ರದಲ್ಲಿ ನಟಿಸಿದರು ಮತ್ತು ರಾಜನ್-ನಾಗೇಂದ್ರ ಬರೆದ “ಕಣ್ಣಿಗೆ ಕಾಣುವ” ಹಾಡನ್ನು ಹಾಡಿದರು. ಬಾಲನಟನಾಗಿ ಅವರಿಗೆ ದೊಡ್ಡ ಬ್ರೇಕ್ ಕೊಟ್ಟ ಎನ್. ಲಕ್ಷ್ಮೀನಾರಾಯಣ ನಿರ್ದೇಶಿಸಿದ ಮತ್ತು ಶೆರ್ಲಿ ಎಲ್. ಅರೋರಾ ಅವರ ವಾಟ್ ತೆನ್, ರಾಮನ್? ಕಾದಂಬರಿ ಆಧಾರಿತ ನಾಟಕ ಬೆಟ್ಟದ ಹೂವಿನಲ್ಲಿ ಮುಗ್ಧ ರಾಮು ಪಾತ್ರಕ್ಕಾಗಿ ಪುನೀತ್ ಅವರು ೩೩ ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಬಾಲ ಕಲಾವಿದ ಪ್ರಶಸ್ತಿಯನ್ನು ಪಡೆದರು. ಅವರ ಹದಿಹರೆಯದ ಆರಂಭದಲ್ಲಿ, ಅವರು ಶಿವ ಮೆಚ್ಚಿದ ಕಣ್ಣಪ್ಪನಲ್ಲಿ ತನ್ನ ಹಿರಿಯ ಸಹೋದರ ಶಿವರಾಜ್‍ಕುಮಾರ್ ನೊಂದಿಗೆ ಯುವ ಕಣ್ಣಪ್ಪನಾಗಿ ಕಾಣಿಸಿಕೊಂಡರು. ಪುನೀತ್ ಅವರು ಬಾಲನಟನಾಗಿ ಕೊನೆಯ ಪಾತ್ರವು ಪರಶುರಾಮ್ ಚಿತ್ರದಲ್ಲಿ ಅವರ ತಂದೆಯೊಂದಿಗೆ ಆಗಿತ್ತು.

ಅಪ್ಪು ಮೂಲಕ ಚಲನಚಿತ್ರಕ್ಕೆ ಪ್ರಮುಖ ಪಾತ್ರದಲ್ಲಿ ಪಾದಾರ್ಪಣೆ ಮಾಡಿದರು, ಅದು ನಟಿ ರಕ್ಷಿತಾ ಅವರ ಮೊದಲ ಚಲನಚಿತ್ರ ಕೂಡ ಆಗಿತ್ತು. ಇದರಲ್ಲಿ ಅವರು ಕಾಲೇಜು ಹುಡುಗನ ಪಾತ್ರವನ್ನು ನಿರ್ವಹಿಸಿದರು, ಬಾಕ್ಸ್ ಆಫೀಸ್‍ನಲ್ಲಿ ಯಶಸ್ವಿಯಾಯಿತು ಮತ್ತು ವಿಮರ್ಶಕರು ಅವರ ನೃತ್ಯ ಕೌಶಲ್ಯವನ್ನು ಶ್ಲಾಘಿಸಿದರು. ಈ ಸಿನಿಮಾದಲ್ಲಿ ಪುನೀತ್ ಅವರು ಉಪೇಂದ್ರ ಸಾಹಿತ್ಯದ ಮತ್ತು ಗುರುಕಿರಣ್ ಸಂಗೀತದ “ತಾಲಿಬಾನ್ ಅಲ್ಲಾ ಅಲ್ಲಾ” ಹಾಡನ್ನು ಹಾಡಿದ್ದಾರೆ.
ಪುನೀತ್ ನಂತರ ದಿನೇಶ್ ಬಾಬು ಅವರ ಅಭಿ ಚಿತ್ರದಲ್ಲಿ ತಾಯಿಗೆ ತಕ್ಕ ಮಗ ಹಾಗೂ ಕಾಲೇಜು ಹುಡುಗನಾಗಿ ಕಾಣಿಸಿಕೊಂಡರು. ಇದು ನೈಜ ಕಥೆಯನ್ನು ಆಧರಿಸಿದ ಮತ್ತು ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಿಸಿದ ಚಿತ್ರ, ಪುನೀತ್ ಅವರು ನಟಿ ರಮ್ಯಾ ಅವರೊಂದಿಗೆ ನಟಿಸಿದ್ದಾರೆ. ಇದು ನಟಿ ರಮ್ಯಾ ಅವರ ಮೊದಲ ಚಿತ್ರ.

ಮೆಹರ್ ರಮೇಶ್ ಅವರ ವೀರ ಕನ್ನಡಿಗ ಪುನೀತ್ ಅವರ ೨೦೦೪ ರಲ್ಲಿ ಬಿಡುಗಡೆ ಆದ ಮೊದಲ ಚಿತ್ರ. ಪುರಿ ಜಗನ್ನಾಥ್ ಬರೆದಿರುವ ಈ ಚಿತ್ರವನ್ನು ಏಕಕಾಲದಲ್ಲಿ ತೆಲುಗಿನಲ್ಲಿ ಆಂಧ್ರವಾಲಾ ಎಂಬ ಹೆಸರಿನಲ್ಲಿ ನಿರ್ಮಿಸಲಾಯಿತು, ಇದರಲ್ಲಿ ಎನ್. ಟಿ. ರಾಮರಾವ್ ಜೂನಿಯರ್ ರವರು ಪ್ರಮುಖ ಪಾತ್ರದಲ್ಲಿ ಇದ್ದರು. ಈ ಚಿತ್ರದಲ್ಲಿ ಚೊಚ್ಚಲ ನಟಿ ಅನಿತಾ ಜೋಡಿಯಾಗಿದ್ದರು. ಈ ಚಿತ್ರ ಅವರ ನೃತ್ಯ ಮತ್ತು ಸಾಹಸ ಕೌಶಲ್ಯಗಳನ್ನು ಪ್ರದರ್ಶಿಸಿತು. ಚಿತ್ರದ ಹಿಂಸಾಚಾರ ಮತ್ತು ಕಳಪೆ ಕಥಾವಸ್ತು ಬಗ್ಗೆ ಟೀಕಿಸಿದರೂ, ಅದು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ಪುನೀತ್ ನಂತರ ಎಸ್. ನಾರಾಯಣ್ ಅವರ ಕೌಟುಂಬಿಕ ನಾಟಕ ಮೌರ್ಯದಲ್ಲಿ ನಟಿಸಿದರು, ಇದು ರವಿತೇಜ ನಟಿಸಿದ ಮತ್ತು ಪೂರಿ ಜಗನ್ನಾಥ್ ಬರೆದ ತೆಲುಗಿನ ಅಮ್ಮಾ ನನ್ನ ಓ ತಮಿಳ ಅಮ್ಮಾಯಿಯ ರಿಮೇಕ್. ಈ ಚಿತ್ರ ಅವರನ್ನು ನಟನಾಗಿ ಖ್ಯಾತಿಯನ್ನು ಹೆಚ್ಚಿಸಿತು.

ಅವರು ೨೦೦೫ ರಲ್ಲಿ ಎರಡು ಚಲನಚಿತ್ರಗಳನ್ನು ಬಿಡುಗಡೆ ಮಾಡಿದರು. ಮಹೇಶ್ ಬಾಬು ಅವರ ಆಕಾಶ್, ಪುನೀತ್ ಮತ್ತು ರಮ್ಯಾ ಅವರನ್ನು ಮತ್ತೆ ಜೊತೆ ಸೇರಿಸಿತು ಮತ್ತು ಅವರು ವೀರ ಶಂಕರ್ ಅವರ ಸಾಹಸ ಚಿತ್ರ ನಮ್ಮ ಬಸವದಲ್ಲಿ ಗೌರಿ ಮುಂಜಾಲ್ ಅವರೊಂದಿಗೆ ಕಾಣಿಸಿಕೊಂಡರು. ಅವರು ಎರಡೂ ಚಿತ್ರಗಳಲ್ಲಿ ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ. ಅಜಯ್ ಮೆಹರ್ ರಮೇಶ್ ನಿರ್ದೇಶನದ ಮತ್ತು ರಾಕ್ಲೈನ್ ವೆಂಕಟೇಶ್ ನಿರ್ಮಿಸಿದ ೨೦೦೬ ರಲ್ಲಿ ಬಿಡುಗಡೆಯಾದ ಪುನೀತ್ ಅವರ ಏಕೈಕ ಚಿತ್ರ, ಇದು ೨೦೦೩ ರ ತೆಲುಗು ಒಕ್ಕಡು ಚಿತ್ರದ ರಿಮೇಕ್, ಅವರು ಈ ಚಿತ್ರದಲ್ಲಿ ವೃತ್ತಿಪರ ಕಬಡ್ಡಿ ಆಟಗಾರನ ಪಾತ್ರವನ್ನು ನಿರ್ವಹಿಸಿದರು, ಅವರು ಈ ಚಿತ್ರದಲ್ಲಿ ತಮ್ಮ ಚಿಕ್ಕಪ್ಪನಿಂದ ಅಪಾಯದಲ್ಲಿದ ಹುಡುಗಿಯನ್ನು ರಕ್ಷಿಸುತ್ತಾರೆ. ಈ ಚಿತ್ರಗಳ ಪರಿಣಾಮವಾಗಿ, ಪುನೀತ್ ಅವರನ್ನು ಸ್ಯಾಂಡಲ್‌ವುಡ್‌ನ ಪವರ್‌ಸ್ಟಾರ್ ಎಂದು ಕರೆಯಲಾಯಿತು.

ಅರಸು, ಅವರ ನಿರ್ಮಾಣದ, ಮಹೇಶ್ ಬಾಬು ನಿರ್ದೇಶಿಸಿದ ೨೦೦೭ ರಲ್ಲಿ ಬಿಡುಗಡೆಯಾದ ಮೊದಲ ಚಿತ್ರ, ಇದರಲ್ಲಿ ಅವರು ಹೊರದೇಶದಿಂದ ಬಂದ ಉದ್ಯಮಿಯಾಗಿ ನಟಿಸಿದರು, ಈ ಚಿತ್ರದಲ್ಲಿ ಅವರು ಪ್ರೀತಿಸುವ ಮಹಿಳೆಗಾಗಿ ತಮ್ಮ ಸಂಪತ್ತನ್ನು ತ್ಯಜಿಸುತ್ತಾರೆ. ಅವರ ಅಭಿನಯಕ್ಕಾಗಿ, ಅವರು ತಮ್ಮ ಮೊದಲ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. ಆ ವರ್ಷ ಪುನೀತ್‌ ಅವರ ಬಿಡುಗಡೆಯಾದ ಇನ್ನೊಂದು ಚಿತ್ರ, ಪ್ರಕಾಶ್‌ರ ಸಾಂಪ್ರದಾಯಿಕ ಕೌಟುಂಬಿಕ ಮೌಲ್ಯಗಳ ಚಿತ್ರ ಮಿಲನ. ನಟಿ ಪಾರ್ವತಿ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಅವರು ಆಕಾಶ್ ಎಂಬ ರೇಡಿಯೋ ಜಾಕಿಯಾಗಿ ನಟಿಸಿದ್ದಾರೆ. ಈ ಚಿತ್ರಕ್ಕಾಗಿ ಅವರು ತಮ್ಮ ಮೊದಲ ಅತ್ಯುತ್ತಮ ನಟ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು.

ಹೀಗೆ ಒಂದರ ಹಿಂದೆ ಒಂದು ಮಾಡಿದ ಎಲ್ಲಾ ಚಿತ್ರಗಳು ಪ್ರೇಕ್ಷಕರ ಮನಸ್ಸಿಗೆ ಮುಟ್ಟುವಂತೆ ಮಾಡಿತು.ಅಭಿಮಾನಿಗಳಿಗೆ ಯಾವುದೇ ರೀತಿಯ ಮೋಸ ಇರಲ್ಲಿಲ್ಲ.

ನಿನ್ನನು ಪಡೆದ ನಾವೇ ಪುನೀತರು, ಪುನೀತ್ ರಾಜಕುಮಾರ
ಪುನೀತ್ ರಾಜ್‍ಕುಮಾರ್

ಆದರೆ ಒಂದು ದಿನ ದೇವರಿಗೆ ಅತ್ಯಂತ ಪ್ರಿಯವಾದರು.ಹಠಾತ್ತಾಗಿ ಕಾಣಿಸಿಕೊಂಡ ಎದೆನೋವು ಮತ್ತು ತೀವ್ರ ಹೃದಯಾಘಾತದಿಂದಾಗಿ ೨೯ ಅಕ್ಟೋಬರ್ ೨೦೨೧ ರಂದು ಬೆಂಗಳೂರಿನ ವಿಕ್ರಮ ಆಸ್ಪತ್ರೆಯಲ್ಲಿ ನಿಧನರಾದರು. ಡಾ.ರಾಜ್‌ಕುಮಾರ್ ಅವರ ಇಡೀ ಕುಟುಂಬ ನೇತ್ರದಾನ ಮಾಡುವುದಕ್ಕೆ ಹಲವು ವರ್ಷಗಳ ಹಿಂದೆಯೇ ಸಹಿ ಮಾಡಿದ್ದರು. ಅಣ್ಣಾವ್ರು ಕೂಡ ನೇತ್ರದಾನ ಮಾಡಿ ಇಬ್ಬರಿಗೆ ಬೆಳಕಾಗಿ ಹೋದರು. ಹಾಗೆಯೇ ಪುನೀತ್ ಕೂಡ ನೇತ್ರದಾನ ಮಾಡಿದ್ದಾರೆ. ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಇಟ್ಟು ೩೧ ಅಕ್ಟೋಬರ್ ಭಾನುವಾರದಂದು ಕಂಠೀರವ ಸ್ಟುಡಿಯೋದ ಡಾ.ರಾಜ್ ಸ್ಮಾರಕದ ಆವರಣದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು. ಕುಟುಂಬದವರು ಮಾತ್ರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಕಂಠೀರವ ಸ್ಟುಡಿಯೋ ಹೊರಭಾಗದ ರಸ್ತೆಗಳಲ್ಲಿ ಸಾವಿರಾರು ಅಭಿಮಾನಿಗಳು ಕಣ್ಣೀರಿಡುತ್ತಾ ನೆಚ್ಚಿನ ನಟನಿಗೆ ಕಂಬನಿಯ ವಿದಾಯ ಹೇಳಿದರು.
ಆದರೆ ಇಂದಿಗೂ ನಂಬಲಾಗದ ಸ್ಥಿತಿ,ಮರೆಯಲಾಗದ ನೋವು ಎದೆಯಲ್ಲಿ ಖಂಡಿತಾ ಅಡಗಿದೆ ಪ್ರತಿಯೊಬ್ಬ ಕನ್ನಡಿಗನಲ್ಲಿ.ಮತ್ತೆ ಹುಟ್ಟಿ ಬರಲಿ ಅನ್ನುವ ಆಶಯ ಒಂದೇ ಉಳಿದಿರುವುದು.


ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಲಂಕಾದ ಅಧಿಪತಿ, ದಶಕಂಟ ರಾವಣ

ಲಂಕಾದ ಅಧಿಪತಿ, ದಶಕಂಟ ರಾವಣ

ಮೊಟ್ಟೆ ತಿಂದರೆ ಏನು ಪ್ರಯೋಜನ ಇದೆ?

ಮೊಟ್ಟೆ ತಿಂದರೆ ಏನು ಪ್ರಯೋಜನ ಇದೆ?