in

ಅಡಿಕೆ ಬೆಳೆ ಬೆಳೆಯುವ ವಿಧಾನಗಳು

ಅಡಿಕೆ ಬೆಳೆ
ಅಡಿಕೆ ಬೆಳೆ

ಅಡಿಕೆ ಒಂದು ತೋಟಗಾರಿಕ ಬೆಳೆ. ಇದರ ಮೂಲ ಮಲೇಷ್ಯಾ ದೇಶ. ದಕ್ಷಿಣ ಏಷಿಯಾ ಮತ್ತು ಆಫ್ರಿಕದ ಕೆಲವು ಪ್ರದೇಶಗಳಲ್ಲಿ ಬೆಳೆಯುತ್ತದೆ. ಕರ್ನಾಟಕದಲ್ಲಿ ಮಲೆನಾಡು ಮತ್ತು ಕರಾವಳಿಯಲ್ಲಿ ವ್ಯಾಪಕವಾಗಿ ಬೆಳೆಯುತ್ತಾರೆ. ಗುಜರಾತ್ ಅಡಿಕೆಯ ಮುಖ್ಯ ಮಾರುಕಟ್ಟೆ ರಾಜ್ಯವಾಗಿದೆ. ಅರಕಾಸಿಯೆಸಿ ಕುಟುಂಬಕ್ಕೆ ಸೇರಿದ ಸಸ್ಯ. ತಾಳೆ ಜಾತಿಗೆ ಸೇರಿದೆ. ಅಡಿಕೆಯನ್ನು ತಾಂಬೂಲದಲ್ಲಿ ವೀಳ್ಯದೆಲೆಯೊಂದಿಗೆ ತಿನ್ನಲು ಉಪಯೋಗಿಸುತ್ತಾರೆ. ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಧಾರ್ಮಿಕ ವಿಧಿ ವಿಧಾನಗಳಲ್ಲಿ ಆವಶ್ಯಕವಾದ ವಸ್ತುವಾಗಿದೆ. ಭಾರತದಲ್ಲಿ ಮೊಟ್ಟ ಮೊದಲು ಶಿವಮೊಗ್ಗದ ಸೊರಬ ತಾಲ್ಲೂಕಿನ ಕ್ಯಾಸನೂರು ಗ್ರಾಮದಲ್ಲಿ ಅಡಿಕೆಯನ್ನ ಕಾಳು ಮೆಣಸು ಬೆಳೆಯಲು ಬೆಳೆಸಲಾಯಿತು. ಇಲ್ಲಿ ಅಡಿಕೆ ಬಹಳ ಪ್ರಸಿದ್ಧವಾದ ಉತ್ತಮ ತಳಿ ಹಾಗೂ ಅಧಿಕ ಇಳುವರಿ ಬರುವ ಮರಗಳು ಇಲ್ಲಿವೆ. ಅಡಿಕೆಯ ಮೂರು / ನಾಲ್ಕು ಅಡಿ ಎತ್ತರದ ಎರಡು ವರ್ಷದ ಸಸಿಯನ್ನು ।½×।½×।½ ಗುಂಡಿತೆಗೆದು ಎಂಟು ಅಡಿಗಳ ದೂರದಲ್ಲಿ 14,16 ಅಡಿ ಅಗಲದ ಪಾತಿಗಳಲ್ಲಿ ಎರಡು ಸಾಲಿನಲ್ಲಿ ನೆಡಲಾಗುವುದು. ಅದು ಸುಮಾರು 5-6 ವರ್ಷಗಳಲ್ಲಿ 14-16 ಅಡಿಗಳ ಎತ್ತರ ಬೆಳೆದು ಚಿಕ್ಕ ಗೊನೆಯ ಫಸಲು ಕೊಡುವುದು; 10–12ವರ್ಷಗಳ ನಂತರ ಉತ್ತಮ ಫಸಲು ಬರುವುದು.

ಅಡಿಕೆ ಬೆಳೆ ಬೆಳೆಯುವ ವಿಧಾನಗಳು
ಅಡಿಕೆ ಬೆಳೆ

ಅಡಿಕೆ ಮರವು ಸುಮಾರು 40–60ಅಡಿಗಳಷ್ಟು ಎತ್ತರ ಬೆಳೆಯುವುದು. ಅದು ಗಟ್ಟಿಯಾದ ನಾರಿನ ಎಳೆಗಳಿಂದ ಆಗಿದ್ದು ।½ ಅಡಿಯಿಂದ 2ಅಡಿ ಸುತ್ತಳತೆಯ ವರೆಗೂ ಇರುವುದು. ಅಡಿಕೆ ಕೊಯಿದು ಇಳಿಸುವುದು ಕಷ್ಟ. ಕೊಯ್ಯುವವರು ಮರ ಹತ್ತಿ ಹತ್ತಿರದ ಮರದ ತುದಿಯನ್ನು ದೋಟಿಯಿಂದ ಎಳೆದು, ಕತ್ತಿಯಿಂದ ಕೊನೆಯ ಕಿವುರು ಕತ್ತರಿಸಿ ಕೈಯಿಂದ ಕೊನೆಯನ್ನು ಕಿತ್ತು ತೆಗೆದು ತಮ್ಮ ಸೊಂಟಕ್ಕೆ ಕಟ್ಟಿಕೊಂಡ ಹಗ್ಗದ ಮೇಲಿಂದ ಜಾರಿಸಿ ಕೆಳಕ್ಕೆ ಬಿಡುವರು. ಅದನ್ನು ಕೆಳಗೆ ಹಗ್ಗವನ್ನು ಹಿಡಿದುನಿಂತಿರುವವರು, ಎಚ್ಚರಿಕೆಯಿಂದ ಹಿಡಿದು ರಾಶಿ ಹಾಕುವರು. ಕೆಲವುಕಡೆ ಹಾಗೆಯೇ ಕೊನೆಯನ್ನು ನೆಲಕ್ಕೆ ಹಾಕುವರು.
ಅಡಿಕೆ ಮರವು ತುಂಬಾ ಗಟ್ಟಿಯಾಗಿದ್ದು ಹಲವು ಉಪಯೋಗಗಳಿಗೆ ಬರುವುದು. ಮನೆ ಕಟ್ಟಲು ಹಿಂದೆ ಎರಡು ಹೋಳುಮಾಡಿದ ತುಂಡನ್ನು ಮನೆಯ ಮಾಡಿಗೆ ಪಕಾಶಿಯ ಬದಲಿಗೆ ಬಳಸುವರು ಅದರ ಎರಡು ಇಂಚು ಸಿಗಿದ ಪಟ್ಟಿಯನ್ನು ಹಂಚುಹಾಕುವ ಅಥವಾ ಹುಲ್ಲು ಹೊದೆಸುವ ರೀಪು ಪಟ್ಟಿಗೆ ಬಳಸುವರು. ಬೇಲಿಗೆ ಅಡ್ಡ ಪಟ್ಟಿಗೆ ಬಳಸುವರು. ಚಪ್ಪರ ಹಾಕಲು ಅಡಿಕೆ ಒಣಗಿಸುವ ಪಟ್ಟಿಗಳನ್ನು ಹತ್ತಿರ ಹತ್ತಿರ ಜೋಡಿಸಿದ ಚಪ್ಪರ ಹಾಕಲು ಉಪಯೋಗಿಸುವರು. ಒಣಗಿ ಲಡ್ಡಾದರೆ ಸೌದೆ.
ತಾಂಬೂಲದಲ್ಲಿ ಸೇವಿಸುವ ಅಡಿಕೆ ತಯಾರಿಸಲು ಅದಕ್ಕೆ ಅನೇಕ ಬಗೆಯ ಸಂಸ್ಕರಣೆ ಮಾಡಬೇಕಾಗುವುದು. ಒಂದು ಮರದಿಂದ ಕೊಯಿದ ಸಿಪ್ಪೆ ಸಹಿತ ಅಡಿಕೆ ಸುಮಾರು 2 -4 ಸೆಂ ಮೀ.ಉದ್ದ 3-4/5ಸೆಂ.ಮೀ. ಸುತ್ತಳತೆ ಇರುವುದು. ಮರದಿಂದ ಕೊಯಿದು ತಂದ ಹಸಿರು ಅಡಿಕೆಯನ್ನು ಸುಲಿದು ಬೇಯಿಸಿ 8-10 ದಿನ ಬಿಸಿಲಲ್ಲಿ ಒಣಗಿಸಿದರೆ ಕೆಂಪು ಅಡಿಕೆ ಸಿದ್ಧವಾಗುತ್ತದೆ. ಇದು ರಾಶಿ ಅಡಿಕೆ. ಅದರಲ್ಲಿ ಬೆಳೆದಿರುವ ಸಿಪ್ಪೆ ಬಿಟ್ಟ ದುಂಡು ಗಟ್ಟಿ ಅಡಿಕೆ : ಬೆಟ್ಟೆ ಸಿಪ್ಪೆ ಪೂರ್ಣ ಬಿಡದ ಅಡಿಕೆ ,ಕೆಂಪುಗೋಟು, ನೆರಿ-ನೆರಿ ಇರುವ ಬೆಳೆದ ಅಡಿಕೆ :ನುರಿಅಡಿಕೆ, ಸುರಿಟಿಕೊಂಡ ಎಳೆಯ ಅಡಿಕೆ : ಚಿಕಣಿ, ಪೂರ್ತಿ ಬೆಳೆಯದ ಮೆತ್ತನೆಯ ಅಡಿಕೆ-ಒಣಗಿ ಚಪ್ಪಟೆಯಾದ ಅಡಿಕೆ :ಆಪಿಅಡಿಕೆ, ಹೀಗೆ ಬೇರೆ ಬೇರೆ ವಿಧಗಳ ಅಡಿಕೆಯನ್ನು ಆಯ್ದು ಬೇರ್ಪಡಿಸಲಾಗುವುದು. ಶಿವಮೊಗ್ಗ ಮತ್ತು ಕೆಲವು ಕಡೆ ಎಳೆಹಸಿ ಅಡಿಕೆಯನ್ನು ಎರಡು ಅಥವಾ ನಾಲ್ಕೈದು ಸೀಳು ಮಾಡಿ ಬೇಯಿಸಿ ಒಣಗಿಸಲಾಗುವುದು; ಇದಕ್ಕೆ ‘ಸರಕು’ ಅಥವಾ ಹೋಳು ಅಡಿಕೆ ಎನ್ನುವರು.

ಬೇಯಿಸದ ಹಣ್ಣು ಅಡಿಕೆಯನ್ನು ಸುಮಾರು ನಲವತ್ತು ದಿನ ಒಣಗಿಸಿದರೆ ಸಿಪ್ಪೆಕಳಚಿ ಕೊಬ್ಬರಿಯಂತಾಗುವುದು; ಅದನ್ನು ಸುಲಿದರೆ ‘ಚಾಲಿ’ ಅನ್ನುವ ಬಿಳಿ ಅಡಿಕೆ ಸಿಗುವುದು. ಅದನ್ನು ಮತ್ತೆ ಗುಣಕ್ಕೆ ತಕ್ಕಂತೆ ವಿಂಗಡಿಸಲಾಗುವುದು. ಇದಕ್ಕೆ ಕೆಂಪು ಅಡಿಕೆಗಿಂತ ಬೆಲೆ ಸಾಮಾನ್ಯವಾಗಿ ಸ್ವಲ್ಪ ಕಡಿಮೆ ಇರುವುದು.

ಅಡಿಕೆಯ ಪ್ರಮುಖ ತಳಿಗಳು :
ಕ್ಯಾಸನೂರು ಅಡಿಕೆ
ಸುಮಂಗಳಾ
ಸ್ವರ್ಣ ಮಂಗಳ
ಪಾಂಡವರ ಅಡಿಕೆ
ಇಂಟರ್ ಮಂಗಳ
ಮೋಹಿತ್ ನಗರ

ಅಡಿಕೆ ಬೆಳೆ ಬೆಳೆಯುವ ವಿಧಾನಗಳು
ಅಡಿಕೆ ಬೆಳೆ

ಕ್ಯಾಸನೂರು ಅಡಿಕೆ ತಳಿ ಬಹಳ ಪ್ರಸಿದ್ಧ. ಇಲ್ಲಿಯ ಸಸಿಗಳನ್ನ ಕೊಂಡು ಬೆಳೆದವರು ಬಹಳ ಬೇಗ ಶ್ರೀಮಂತರಾಗಿದ್ದಾರೆ. ರಾಶಿಗೆ, ಚಾಲಿಗೆ, ಚಿಕಣಿ ಅಡಿಕೆಗೆ ಹೇಳಿ ಮಾಡಿಸಿದಂತ ತಳಿ. ಯಾವ ರೋಗ ಬಾದೆಗೂ ಸುಲಭಕ್ಕೆ ತುತ್ತಾಗದ ಅಧಿಕ ರೋಗನಿರೋಧಕ ಶಕ್ತಿ ಇರುವ ಎಲ್ಲ ಪ್ರದೇಶದಲ್ಲೂ ಅಧಿಕ ಶಾಖ ಮಳೆ ಚಳಿ ಬರಕ್ಕೂ ಜಗ್ಗದ ಈ ತಳಿ ಸಾಮಾನ್ಯ ಕೃಷಿಗೂ ಅಧಿಕ ಇಳುವರಿ ಕೊಡುವ ಜಾತಿ ಇದು.

ಶಿವಮೊಗ್ಗ ಜಿಲ್ಲೆಯಲ್ಲಿ ಮೊದಲು ಇದ್ದ ೨೦,೦೦೦ ಹೆಕ್ಟೇರ್ ಪ್ರದೇಶ ಈಗ ೪೭ ಹೆಕ್ಟೇರ್ ಪ್ರದೇಶಕ್ಕೆ ವಿಸ್ತಾರಗೊಂಡಿದೆ. ಈ ಜಿಲ್ಲೆಯ ವಾರ್ಷಿಕ ಸರಾಸರಿ ಉತ್ಪಾದನೆ ಒಂದು ಲಕ್ಷ ಟನ್ ದಾಟಿದೆ. ರಾಜ್ಯದ ಅಡಿಕೆ ಉತ್ಪಾದನೆಯಲ್ಲಿ ಈ ಜಿಲ್ಲೆಯ ಉತ್ಪಾದನೆ ಶೇ.೨೮ ಕ್ಕೂ ಮೀರುತ್ತದೆ. ಇಲ್ಲಿ ಕ್ಯಾಸನೂರು ಎಂಬ ಗ್ರಾಮದ ಅಡಿಕೆ ತಳಿ ತುಂಬಾ ಪುರಾತನ ಇತಿಹಾಸ ಇರುವುದು. ಅಧಿಕ ಇಳುವರಿ ಮತ್ತು ಭಾರ ಹೆಚ್ಚು ಎಲ್ಲ ಅಡಿಕೆ ತಳಿಗಿಂತ ಇದು ಉತ್ತಮ ತಳಿ.

೨೦೧೪/2014 ,ಜೂನ್ – ಇತಿಹಾಸದಲ್ಲೇ ಇದೇ ಮೊದಲ ಬಾರಿ ಅಡಿಕೆಗೆ ಚಿನ್ನದ ಬೆಲೆ ಬಂದಿದ್ದು, ಎರಡು ತಿಂಗಳಿನಿಂದ ನಾಗಾಲೋಟದಲ್ಲಿ ಮೇಲೇರುತ್ತಾ ಸಾಗಿರುವ ಅಡಿಕೆ ಧಾರಣೆ ಪ್ರಸಕ್ತ ತಿಂಗಳು ಕೆಂಪು ಅಡಿಕೆ, (ಬೇಯಿಸಿ ಒಣಗಿಸಿದ ಪ್ರಥಮ ದರ್ಜೆ ಅಡಿಕೆ) ಕ್ವಿಂಟಲ್ ಗೆ ರೂ. 50 ಸಾವಿರದ ಗಡಿ ಸಮೀಪಿಸುತ್ತಿದೆ. ಅದೇ 2013 ಜೂನ್ ನಲ್ಲಿ ಉತ್ತಮ ಅಡಿಕೆ ಕ್ವಿನ್ಟಲ್ ಗೆ ರೂ.14,000-ದಿಂದ 20,000 ಇತ್ತು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಪಾರ್ವತಿ ಪುತ್ರ ಗಣೇಶ

ಪಾರ್ವತಿ ಪುತ್ರ ಗಣೇಶ

ವಿಶ್ವಾಮಿತ್ರ ಮಹರ್ಷಿ

ವಿಶ್ವಾಮಿತ್ರ ಮಹರ್ಷಿ, ಬ್ರಹ್ಮರ್ಷಿ