ಭಾರತದ ಶ್ರೀಮಂತ ರಾಜ್ಯಗಳಲ್ಲಿ ಕರ್ನಾಟಕವು ಒಂದು. ನಮ್ಮ ರಾಜ್ಯ ಶಿಕ್ಷಣ,ಉದ್ಯಮ,ಕೃಷಿ, ಸಾಹಿತ್ಯ, ಪ್ರವಾಸೋದ್ಯಮ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಬೆಂಗಳೂರು ನಮ್ಮ ಕರ್ನಾಟಕದ ರಾಜಧಾನಿ. ನಮ್ಮ ಕರ್ನಾಟಕ ರೂಪುಗೊಂಡಿದ್ದು ೧ನೇ ನವೆಂಬರ್ 1956 ರಲ್ಲಿ. ಆಗಿನ ಕಾಲದಲ್ಲಿ ಕರ್ನಾಟಕವನ್ನು ಮೈಸೂರು ರಾಜ್ಯವೆಂದು ಕರೆಯುತ್ತಿದ್ದರು. 1973 ರಲ್ಲಿ ಇದನ್ನು ಕರ್ನಾಟಕ ಎಂದು ನಾಮಕರಣ ಮಾಡಲಾಯಿತು.
ಹೀಗೆ ರಚನೆಯಾದ ಕರ್ನಾಟಕವನ್ನು ಪ್ರತಿ ವರ್ಷ ೧ನೇ ನವೆಂಬರ್ ನಂದು ಕನ್ನಡ ರಾಜ್ಯೋತ್ಸವವನ್ನಾಗಿ ಆಚರಣೆ ಮಾಡಲಾಗುತ್ತದೆ.ಭಾರತದಲ್ಲೇ ಕರ್ನಾಟಕ ಏಳನೇ ದೊಡ್ಡ ರಾಜ್ಯ. ಕರ್ನಾಟಕದಲ್ಲಿ ಒಟ್ಟು ೩೦ ರಾಜ್ಯಗಳಿದ್ದು ಗೋವಾ,ತಮಿಳುನಾಡು,ಆಂಧ್ರಪ್ರದೇಶ, ಕೇರಳ, ತೆಲಂಗಾಣ ಮತ್ತು ಮಹಾರಾಷ್ಟ್ರ ನಮ್ಮ ನೆರೆ ರಾಜ್ಯಗಳಾಗಿವೆ. ಕಾವೇರಿ,ಕಬಿನಿ,ಕೃಷ್ಣ ಮತ್ತು ತುಂಗಭಧ್ರಾ ನಮ್ಮ ರಾಜ್ಯದ ಪ್ರಮುಖ ನದಿಗಳು.ಉತ್ತರದಿಂದ ದಕ್ಷಿಣಕ್ಕೆ ಸುಮಾರು ೭೫೦ ಕ್ಮ, ಪೂರ್ವದಿಂದ ಪಶ್ಚಿಮಕ್ಕೆ ಸುಮಾರು ೪೦೦ ಕ್ಮ ಹಬ್ಬಿದೆ.
ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಕೃಷಿಯೇ ಪ್ರಮುಖ ಉದ್ಯಮ. ಹಾಗಾಗಿ ಧಾನ್ಯಗಳು, ಎಣ್ಣೆ ಕಾಳುಗಳು,ರಾಗಿ, ಭತ್ತ,ಜೋಳ ಇವು ನಮ್ಮ ಪ್ರಮುಖ ಬೆಳೆಗಳು. ಕಡಲೆ ಬೀಜ, ಸೂರ್ಯಕಾಂತಿ ಮತ್ತು ಎಳ್ಳು ಇವುಗಳನ್ನು ಎಣ್ಣೆ ಬೀಜಗಳಾಗಿ ಬೆಳೆಯಲಾಗುತ್ತದೆ.ರಾಜ್ಯದಿಂದ ಹೆಚ್ಚು ಕಾಫಿ,ಮಾವು ಮತ್ತು ಟೀ ರಫ್ತು ಮಾಡಲಾಗುತ್ತದೆ. ದೇಶದಲ್ಲಿನ ಸುಮಾರು ೫೫% ಕಚ್ಚಾ ರೇಷ್ಮೆ ನಮ್ಮ ರಾಜ್ಯದಲ್ಲಿ ಉತ್ಪದನೆಯಾಗುತ್ತಿದೆ..
ನಮ್ಮ ರಾಜ್ಯದ ಬಗ್ಗೆ ತಿಳಿದುಕೊಳ್ಳುವುದು ಇನ್ನೂ ಬೇಕಾದಷ್ಟಿದೆ..
ಮುಂದುವರೆಯುವುದು..
GIPHY App Key not set. Please check settings