ನಮಸ್ಕಾರ ವೀಕ್ಷಕರೇ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ ರಿಯಾಲಿಟಿ ಶೋ ಈಗಾಗಲೇ ಯಶಸ್ವಿಯಾಗಿ ಜನಮನ ಗೆದ್ದಿದೆ. ಸ್ಪರ್ಧಿಗಳು ಉತ್ತಮ ರೀತಿಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ಇದೀಗ ಇದೀಗ ಗ್ರಾಂಡ್ ಪಿನಾಲೆ ಹಂತಕ್ಕೆ ತಲುಪಿರುವ ಈ ಶೋಗೆ ಸ್ಪೆಷಲ್ ಗೆಸ್ಟ್ ಆಗಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿಯವರು ಈಗಾಗಲೇ ಪ್ರೊಮೋ ಕೂಡ ಬಿಟ್ಟಿದ್ದಾರೆ.14 ಸೆಲೆಬ್ರಿಟಿಗಳು ವೃತ್ತಿಪರ ಡ್ಯಾನ್ಸರ್ ಜೊತೆಯಾಗಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಧಾರಾವಾಹಿಗಳಲ್ಲಿ ನಟಿಸಿದ ನಟ-ನಟಿಯರು ಇಲ್ಲಿ ಸೆಲೆಬ್ರಿಟಿ ಡ್ಯಾನ್ಸರ್ ಗಳಾಗಿ ಸ್ಪರ್ಧಿಸಿದ್ದಾರೆ. ಇದೀಗ ಫೈನಲ್ ಹಂತಕ್ಕೆ ತಲುಪಿರುವ ಈ ಶೋ ನಲ್ಲಿ ಗ್ರಾಂಡ್ ಫಿನಾಲೆಗೆ ಐದು ಜೋಡಿಗಳು ಆಯ್ಕೆಯಾಗಿವೆ.
ಡ್ಯಾನ್ಸಿಂಗ್ ಚಾಂಪಿಯನ್ ವೇದಿಕೆಗೆ ಆರಂಭದಿಂದಲೂ ಪ್ರತಿವಾರ ಒಬ್ಬರು ಸೆಲೆಬ್ರೆಟಿ ಬಂದು ಕಾರ್ಯಕ್ರಮಕ್ಕೆ ಮೆರುಗನ್ನು ನೀಡುತ್ತಿದ್ದರು. ಅದೇ ರೀತಿ ಡಾ. ಶಿವ ರಾಜ್‍ಕುಮಾರ್ ಕೂಡ ಈ ಕಾರ್ಯಕ್ರಮಕ್ಕೆ ಭಾಗವಹಿಸಿ ನಾಲ್ಕು ದಿನದ ಪುಟ್ಟ ಮಗುವಿಗೆ ನಾಮಕರಣ ಕೂಡ ಮಾಡಿದ್ದರು.ವಿಶೇಷ ಎಂದರೆ ಡ್ಯಾನ್ಸಿಂಗ್ ಚಾಂಪಿಯನ್ ಫಿನಾಲೆ ಯನ್ನು ನಟ ಪುನೀತ್ ರಾಜಕುಮಾರ್ ಅವರಿಗೆ ಅರ್ಪಿಸಿ ಕಾರ್ಯಕ್ರಮ ನಡೆಸುತ್ತಿರುವುದು ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗನ್ನು ನೀಡುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.
ಕರುನಾಡ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿಕೆ ನಂತರ ಅಶ್ವಿನಿ ಪುನೀತ್ ರಾಜಕುಮಾರ್ ತಮ್ಮ ಪತಿ ಹೆಸರು ಉಳಿಸುವುದಕ್ಕಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಇದೇ ಮೊದಲ ಬಾರಿಗೆ ಅವರು ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ವೇದಿಕೆಯಲ್ಲಿ ಅಶ್ವಿನಿ ಅವರು ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹೇಳಿರುವುದು ಪ್ರೋಮೋ ದಲ್ಲಿ ಕಾಣಿಸುತ್ತಿದೆ. ಇನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವೇದಿಕೆಗೆ ಗ್ರಾಂಡ್ ಎಂಟ್ರಿ ಕೊಟ್ಟು ಪೊಗರು ಸಿನಿಮಾದ ಹಾಡಿಗೆ ಸಖತ್ ಆಗಿ ಸ್ಟೆಪ್ ಕೂಡ ಹಾಕಿದ್ದಾರೆ.ರಿಯಾಲಿಟಿ ಶೋನ ಪಟಾಕಿಗಳು ಎಂದು ಪ್ರೀತಿಯಿಂದ ಕರೆಯಲ್ಪಡುವ ಆರಾಧ್ಯ ಮತ್ತು ನಿವೇದಿತಾ ತಮ್ಮ ಅಪ್ರತಿಮ ಪ್ರತಿಭೆಯಿಂದ ಇತರ ಸ್ಪರ್ಧಿಗಳಿಗೆ ಕಠಿಣ ಸ್ಪರ್ಧೆಯನ್ನು ನೀಡಿದ್ದಾರೆ. ರಿಯಾಲಿಟಿ ಶೋನಲ್ಲಿ ಕಿರಿಯ ಸ್ಪರ್ಧಿಗಳಲ್ಲದೆ, ಚಿಕ್ಕ ಹುಡುಗಿಯರು ಯಾವಾಗಲೂ ತಮ್ಮ ಮೋಡಿ ಮತ್ತು ಮುಗ್ಧತೆಯಿಂದ ಜನಮನವನ್ನು ಕದ್ದಿದ್ದಾರೆ.
купить диплом в красноярске [url=https://1oriks-diplom199.ru/]1oriks-diplom199.ru[/url] .
Легальные способы покупки диплома о среднем полном образовании
prodamus промокод [url=www.severussnape.borda.ru/?1-4-0-00000385-000-0-0-1734553080/]www.severussnape.borda.ru/?1-4-0-00000385-000-0-0-1734553080[/url] .