in ,

ಕಪ್ಪಾಗಲಿ ಬಿಳಿಯಾಗಲಿ ಎಳ್ಳಿನಲ್ಲಿ ಇದೆ ಆರೋಗ್ಯದ ಗುಣ

ಎಳ್ಳು
ಎಳ್ಳು

ಎಳ್ಳು , ಸೆಸಮಮ್ ಪಂಗಡದಲ್ಲಿನ ಒಂದು ಹೂಬಿಡುವ ಸಸ್ಯ. ಆಫ್ರಿಕಾದಲ್ಲಿ ಅಸಂಖ್ಯಾತ ಪ್ರಮಾಣದಲ್ಲಿ ಮತ್ತು ಭಾರತದಲ್ಲಿ ಸಣ್ಣಸಂಖ್ಯೆಯಲ್ಲಿ ಕಾಡುಸಂಬಂಧಿಗಳು ಕಾಣುತ್ತವೆ. ವಿಶ್ವದಾದ್ಯಂತ ಉಷ್ಣವಲಯದ ಪ್ರದೇಶಗಳಲ್ಲಿ ಅದು ವ್ಯಾಪಕವಾಗಿ ದೇಶೀಕರಣಗೊಂಡಿದೆ ಮತ್ತು ಬೀಜಕೋಶಗಳಲ್ಲಿ ಬೆಳೆಯುವ ಅದರ ಖಾದ್ಯ ಬೀಜಗಳಿಗಾಗಿ ಬೇಸಾಯಮಾಡಲಾಗುತ್ತದೆ.

ಎಳ್ಳಿನ ಎಣ್ಣೆಯನ್ನು ಹೆಚ್ಚಾಗಿ ಅಡಿಗೆಗೆ ಉಪಯೋಗಿಸುತ್ತಾರೆ. ಎಣ್ಣೆ ಬೇಗ ಕಮಟು ಹಿಡಿಯದು, ಕಟುವಾದ ಯಾವ ವಾಸನೆಯೂ ಇಲ್ಲ. ತನ್ನೊಡನೆ ಬೆರೆತ ಇತರ ವಸ್ತುಗಳ ಪರಿಮಳವನ್ನು ಇದು ಸುಲಭವಾಗಿ ಹೀರಿಕೊಳ್ಳುತ್ತದೆ. ಕಿತ್ತಳೆ, ನಿಂಬೆ, ಮಲ್ಲಿಗೆ ಮತ್ತು ಇತರ ಹೂವಿನ ಸುಗಂಧವನ್ನು ತಯಾರಿಸಲು ಇದನ್ನು ಮಾಧ್ಯಮವಾಗಿ ಬಳಸುತ್ತಾರೆ. ಯುರೋಪಿನಲ್ಲಿ ಆರು ಲೀಟರ್ ಎಣ್ಣೆಗೆ ಒಂದು ಕಿಗ್ರಾಂ ಹೂವನ್ನು ಬೆರೆಸಿ, ನಲವತ್ತು ಗಂಟೆ ಇಟ್ಟು ಸುಗಂಧವನ್ನು ತಯಾರಿಸುತ್ತಾರೆ

ಎಳ್ಳಿನಲ್ಲಿ ಕ್ಯಾಲ್ಸಿಯಂ ಅಂಶ ಅಧಿಕವಾಗಿರುವುದರಿಂದ ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು. ಹಾಗೆಯೇ ಡಿಎನ್‌ಎ ಕಣಗಳಿಗೆ ಹಾನಿಯಾಗದಂತೆ ರಕ್ಷಣೆ ಮಾಡುತ್ತದೆ. ಕ್ಯಾನ್ಸರ್‌ ಶಮನಕಾರಿ ಪ್ರತಿದಿನ 100 ಮಿ.ಗ್ರಾಂ. ಎಳ್ಳು ತಿನ್ನುವುದರಿಂದ ಕರುಳಿನ ಕ್ಯಾನ್ಸರ್‌ ತಡೆಯಬಹುದು. ಎಳ್ಳೆಣ್ಣೆಯಲ್ಲಿ ಆ್ಯಂಟಿಆಕ್ಸೆ„ಡ್‌ ಅಂಶವಿರುವುದರಿಂದ ಎದೆ ಉರಿ ಮುಂತಾದ ಹೃದಯ ಸಂಬಂಧಿ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ.

ಕಪ್ಪಾಗಲಿ ಬಿಳಿಯಾಗಲಿ ಎಳ್ಳಿನಲ್ಲಿ ಇದೆ ಆರೋಗ್ಯದ ಗುಣ
ಎಳ್ಳು

ಎಳ್ಳಿನ ಬೀಜವನ್ನು ದಿನನಿತ್ಯವೂ ಸೇವಿಸುವುದರಿಂದ ವಿಶೇಷವಾಗಿ ಬೆಳೆಯುತ್ತಿರುವ ಮಕ್ಕಳು, ಹದಿಹರೆಯದವರು, ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರು ಮತ್ತು ಸಸ್ಯಾಹಾರಿಗಳಿಗೆ ಹೆಚ್ಚಿನ ಪ್ರೋಟೀನ್‌ ಸಿಗಲಿದೆ.ಇದು ತನ್ನಲ್ಲಿ ಅಗಾಧವಾದ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಇತರ ಹಲವಾರು ಪೋಷಕಾಂಶಗಳನ್ನು ಹೊಂದಿರುವ ಕಾರಣ ಅದು ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಆಸ್ಟಿಯೊಪೊರೋಸಿಸ್ ಬೆಳವಣಿಗೆಯನ್ನು ತಡೆಯುತ್ತದೆ.

ಉಸಿರಾಟದ ತೊಂದರೆ ಇರುವವರು ಎಳ್ಳು ತಿನ್ನುವುದರಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಇದರಲ್ಲಿ ಮ್ಯಾಗ್ನೇಷಿಯಂ ಅಂಶ ಇರುವುದರಿಂದ ದೇಹದಲ್ಲಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಆದ್ದರಿಂದ ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಬಳಸಿಕೊಳ್ಳುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಶ್ವಾಸಕೋಶವನ್ನು ಶುದ್ಧೀಗೊಳಿಸುವಲ್ಲಿ ಎಳ್ಳಿನ ಪಾತ್ರ ಮುಖ್ಯವಾದದ್ದು.

ಎಳ್ಳಿನಲ್ಲಿರುವ ಹೆಚ್ಚಿನ ಫೈಬರ್‌ ಅಂಶ ಆಹಾರ ಬೇಗನೇ ಜೀರ್ಣವಾಗುವಂತೆ ಮಾಡುತ್ತದೆ. ಇದರಿಂದ ದೇಹದ ಕ್ರಿಯೆಗಳು ಸರಾಗವಾಗಿ ನಡೆಯಲು ಸಹಕರಿಸುತ್ತದೆ. ಎಳ್ಳು ಸೇವನೆಯಿಂದ ಸುಸ್ತು ಕಡಿಮೆಯಾಗುವುದಲ್ಲದೆ, ದೇಹದ ಶಕ್ತಿ ಹೆಚ್ಚುತ್ತದೆ.

ದೇಹದಲ್ಲಿನ ಅಧಿಕ ಬೊಜ್ಜು ಹಾಗೂ ಕೊಬ್ಬಿನಾಂಶವನ್ನು ಕಡಿಮೆಗೊಳಿಸಲು ಎಳ್ಳು ಸಹಕಾರಿ. ಚರ್ಮ, ಮೂಳೆ, ನರಮಂಡಲ, ಮಾಂಸಖಂಡಗಳನ್ನು ಪೋಷಿಸುತ್ತದೆ. ಎಳ್ಳಿನಲ್ಲಿ ಸಾಕಷ್ಟು ಪ್ರಮಾಣದ ನಾರಿನಾಂಶವಿದ್ದು ಮಲಬದ್ಧತೆ, ಮೂಲವ್ಯಾಧಿಯಂತಹ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ.

ಹೊಟ್ಟೆ ಉರಿ, ಅಸಿಡಿಟಿ ಸಮಸ್ಯೆ ಇರುವವರು, ಎಳ್ಳಿನ ಜ್ಯೂಸ್ ಸೇವಿಸುವುದು ಆರೋಗ್ಯಕ್ಕೆ ಉತ್ತಮ. ಇದಕ್ಕೆ ಮಧುಮೇಹ ನಿಯಂತ್ರಿಸುವ ಗುಣವೂ ಇದೆಯಂತೆ. ಎಳ್ಳಿನಲ್ಲಿರುವ ಮ್ಯಾಗ್ನಿಷಿಯಂ ಅಂಶ ರಕ್ತದೊತ್ತಡವನ್ನು ನಿಯಂತ್ರಿಸುತ್ತದಂತೆ.

ಮಲ ಬದ್ಧತೆ ಅಥವಾ ಇನ್ನಿತರ ಬಹಿರ್ದೆಶೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಎಳ್ಳಿನ ನೀರು ಉತ್ತಮ ಔಷಧ. ಇದರಲ್ಲಿರುವ ನಾರಿನಂಶ, ಜೀರ್ಣಕ್ರಿಯೆಗೆ ಸಹಕಾರಿ. ಇನ್ನು ಚರ್ಮದ ಕಾಂತಿಗೆ, ಚರ್ಮ ಸುಕ್ಕುಗಟ್ಟುವುದಕ್ಕೆ ಹಾಗೂ ತಲೆಗೂದಲಿನ ಸಮಸ್ಯೆಗೂ ಎಳ್ಳು ಸುಲಭ ಮನೆ ಔಷಧ.

ಚರ್ಮದ ಸೋಂಕನ್ನು ಉಂಟು ಮಾಡುವ ಕೀಟಗಳಿಗೆ ಔಷಧಿಯಾಗಿ ಕೆಲಸ ಮಾಡುತ್ತದೆ. ಒಟ್ಟಾರೆಯಾಗಿ ನಮ್ಮ ದೇಹದಲ್ಲಿ ಎಳ್ಳಿನ ಅಂಶಗಳು ಅಡಗಿದ್ದರೆ ಹೊರಗಿನ ವಾತಾವರಣದ ನಕಾರಾತ್ಮಕ ಪ್ರಭಾವಗಳಿಂದ ಸಮಗ್ರವಾಗಿ ಮತ್ತು ಸಂಪೂರ್ಣವಾಗಿ ನಮ್ಮ ರಕ್ಷಣೆ ಮಾಡುತ್ತದೆ ಎಂದು ಹೇಳಬಹುದು. ನಿಮ್ಮ ಸೌಂದರ್ಯವನ್ನು ಹೆಚ್ಚು ಮಾಡುವಲ್ಲಿ ಸಹ ಎಳ್ಳು ತನ್ನದೇ ಆದ ರೀತಿಯಲ್ಲಿ ಕೆಲಸ ಮಾಡುತ್ತದೆ.

ತಲೆ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಮತ್ತು ತಲೆ ಕೂದಲಿನ ಬೇರುಗಳಿಗೆ ಪೌಷ್ಟಿಕಾಂಶಗಳನ್ನು ಒದಗಿಸುವಲ್ಲಿ ಎಳ್ಳು ಕೆಲಸ ಮಾಡಲಿದೆ.
ಎಳ್ಳಿನಲ್ಲಿ ಕಂಡುಬರುವ ಒಮೆಗಾ 3 ಫ್ಯಾಟಿ ಆಸಿಡ್ ಅಂಶಗಳು ತಲೆಕೂದಲಿನ ಆರೋಗ್ಯವನ್ನು ಉತ್ತೇಜಿಸುತ್ತವೆ. ನೆತ್ತಿಯ ಭಾಗಕ್ಕೆ ಮಾಯಿಶ್ಚರೈಸಿಂಗ್ ಗುಣಲಕ್ಷಣಗಳನ್ನು ಒದಗಿಸಿ ರಕ್ತಸಂಚಾರವನ್ನು ಹೆಚ್ಚು ಮಾಡುವಲ್ಲಿ ಎಳ್ಳು ನಮ್ಮ ದೇಹದಲ್ಲಿ ಪ್ರಮುಖವಾಗಿ ಕೆಲಸ ಮಾಡುತ್ತದೆ.

ಕಪ್ಪಾಗಲಿ ಬಿಳಿಯಾಗಲಿ ಎಳ್ಳಿನಲ್ಲಿ ಇದೆ ಆರೋಗ್ಯದ ಗುಣ
ಆರೋಗ್ಯದಲ್ಲಿ ಹೆಚ್ಚು ಪ್ರಯೋಜನಕಾರಿ

ಅಧ್ಯಯನಗಳು ಹೇಳುವಂತೆ ಎಳ್ಳಿನಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳು ಹೆಚ್ಚು ಕಂಡುಬರುವ ಕಾರಣ ಪುರುಷರ ಲೈಂಗಿಕ ಆರೋಗ್ಯದಲ್ಲಿ ಹೆಚ್ಚು ಪ್ರಯೋಜನಕಾರಿ ಎಂದು ಹೇಳಬಹುದು.
ವೀರ್ಯಾಣುಗಳ ಗುಣಮಟ್ಟವನ್ನು ಹೆಚ್ಚು ಮಾಡುವಲ್ಲಿ ಎಳ್ಳು ಪ್ರಮುಖವಾಗಿ ಕೆಲಸ ಮಾಡುತ್ತದೆ. ಹಾಗಾಗಿ ಪುರುಷರ ಫಲವತ್ತತೆಯ ವಿಚಾರದಲ್ಲಿ ಎಳ್ಳು ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ.
ಎಳ್ಳಿನಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚು ಸಿಗುವುದರಿಂದ ಆಸ್ಟಿಯೋಪೋರೋಸಿಸ್ ಸಮಸ್ಯೆಯ ವಿರುದ್ಧ ಹೋರಾಡುವಲ್ಲಿ ಇದು ಕೆಲಸ ಮಾಡಲಿದೆ. ಮುಖ್ಯವಾಗಿ ದೇಹದ ವಾತ ದೋಷವನ್ನು ಸಮತೋಲನ ಮಾಡಿ ಆಸ್ಟಿಯೋಪೋರೋಸಿಸ್ ಮತ್ತು ಮೂಳೆಗಳಿಗೆ ಸಂಬಂಧಪಟ್ಟಂತೆ ಇರುವ ಸಮಸ್ಯೆಗಳ ನಿವಾರಣೆ ಮಾಡುತ್ತದೆ. ಮೂಳೆಗಳಲ್ಲಿ ಖನಿಜಾಂಶಗಳನ್ನು ಇರುವಂತೆ ನೋಡಿಕೊಂಡು ಮೂಳೆಗಳ ಸವೆತ ಇಲ್ಲದಂತೆ ಮಾಡುತ್ತದೆ.

ಎಳ್ಳಿನಲ್ಲಿ ಮೊದಲೇ ಹೇಳಿದಂತೆ ಆಂಟಿ ಆಕ್ಸಿಡೆಂಟ್ ಅಂಶಗಳು ಹೆಚ್ಚಾಗಿರುವ ಕಾರಣ ಕ್ಯಾನ್ಸರ್ ಸಮಸ್ಯೆಯ ವಿರುದ್ಧ ರಕ್ಷಣೆ ನೀಡುತ್ತದೆ. ಹಾರ್ಮೋನುಗಳ ಪ್ರಭಾವದಿಂದ ಉಂಟಾಗುವ ಕ್ಯಾನ್ಸರ್ ಸಮಸ್ಯೆಯನ್ನು ಎಳ್ಳು ಸುಲಭವಾಗಿ ನಿವಾರಣೆ ಮಾಡುತ್ತದೆ.
ಮಹಿಳೆಯರಲ್ಲಿ ಕಂಡುಬರುವ ಸ್ತನ ಕ್ಯಾನ್ಸರ್ ಸಮಸ್ಯೆಗೆ ಎಳ್ಳಿನಲ್ಲಿ ಪರಿಹಾರವಿದೆ. ಕ್ಯಾನ್ಸರ್ ಜೀವಕೋಶಗಳ ಅಭಿವೃದ್ಧಿಯನ್ನು ಎಳ್ಳು ತಡೆ ಹಾಕುತ್ತದೆ.

ಹೃದಯದ ಆರೋಗ್ಯದ ರಕ್ಷಣೆಯಲ್ಲಿ ಎಳ್ಳು ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಅಂಶವನ್ನು ಹೆಚ್ಚು ಮಾಡಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುವ ಗುಣವನ್ನು ಎಳ್ಳು ಪಡೆದಿದೆ. ಲಿಪಿಡ್ ಅಂಶವನ್ನು ಸಹ ಅತ್ತ್ಯುತ್ತಮವಾಗಿ ನಿಯಂತ್ರಣ ಮಾಡುವಲ್ಲಿ ಎಳ್ಳು ಕೆಲಸ ಮಾಡುತ್ತದೆ.

ಧನ್ಯವಾದಗಳು.

What do you think?

-1 Points
Upvote Downvote

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ತಾಜ್ ಮಹಲ್

ಜಗತ್ತಿನಾದ್ಯಂತ ಹೆಸರುವಾಸಿಯಾದ ತಾಜಮಹಲ್

ಇವತ್ತು ಸೋಮವಾರ ಅಶ್ವಿನಿ ಮೇಡಂ ಫುಲ್ ಬಿಜಿ ನೋಡಿ.

ಇವತ್ತು ಸೋಮವಾರ ಅಶ್ವಿನಿ ಮೇಡಂ ಫುಲ್ ಬಿಜಿ ನೋಡಿ.