in

ಬ್ಲಡ್ ಪ್ರೆಷರ್( ಬಿ ಪಿ) ಸರ್ವೇ ಸಾಮಾನ್ಯ ರೋಗ

ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುವ ಆರೋಗ್ಯದ ಸಮಸ್ಯೆಗಲ್ಲಿ ಬಿ ಪಿ ಕೂಡ ಒಂದು. ಇದಕ್ಕೆ ವಯಸ್ಸಿನ ವಯೋಮಿತಿಯಿಲ್ಲ. ಕೆಲವರಲ್ಲಿ ಲೋ ಬಿಪಿ ಕಂಡುಬಂದರೆ ಇನ್ನು ಕೆಲವರಲ್ಲಿ ಹೈ ಬಿಪಿ ಹೀಗೆ ಎರಡು ಹಂತದಲ್ಲಿ ಕಾಣಬಹುದು. ಯಾವಾಗ ನಮ್ಮ ಅಪಧಮನಿಯ ಗೋಡೆಗಳ ವಿರುದ್ಧ ರಕ್ತ ಸಂಚಾರ ಹೆಚ್ಚು ವೇಗವಾಗಿರುತ್ತದೆ ಇದನ್ನೇ ಬ್ಲಡ್ ಪ್ರೆಷರ್ ಎನ್ನುವುದು. ಬಿಪಿ ಹೆಚ್ಚಾದರೆ ಕಣ್ಣಿನ ಸಮಸ್ಯೆ, ಕಿಡ್ನಿಯ ಸಮಸ್ಯೆ, ಹೃದಯದ ತೊಂದರೆ, ಹೃದಯಾಘಾತ,ಸ್ಟ್ರೋಕ್ ಮತ್ತು ಹಲವು ಆರೋಗ್ಯದ ಸಮಸ್ಯೆಗಳು ಬರುತ್ತವೆ. ಅಧಿಕ ರಕ್ತದೊತ್ತಡವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ಮೊದಲನೆಯದು ಪ್ರಾಥಮಿಕ ರಕ್ತದೊತ್ತಡ.90-95% ಜನರಲ್ಲಿ ಈ ಬಗೆಯ ರಕ್ತದೊತ್ತಡ ಕಂಡುಬರುತ್ತದೆ. ದ್ವಿತೀಯ ರಕ್ತದೊತ್ತಡ 5-10% ಜನರಲ್ಲಿ ಮಾತ್ರ ಕಂಡುಬರುತ್ತದೆ. ಪ್ರಾಥಮಿಕ ರಕ್ತದೊತ್ತಡ ಕಂಡುಬರಲು ಮುಖ್ಯ ಕಾರಣ ಅನುವಂಶೀಯ ಅಂಶಗಳು ಮತ್ತು ನಮ್ಮ ಜೀವನ ಶೈಲಿ.

ಹೆಚ್ಚು ಉಪ್ಪಿರುವ ಆಹಾರ ಸೇವನೆ, ಧೂಮಪಾನ ಮತ್ತು ಮಧ್ಯಪಾನ ಸೇವನೆಯಿಂದ ಪ್ರಾಥಮಿಕ ರಕ್ತದೊತ್ತಡದ ಅಪಾಯಗಳು ಹೆಚ್ಚಾಗುತ್ತವೆ. ಹೆಚ್ಚು ಗರ್ಭನಿರೋಧಕ ಗುಳಿಗೆಗಳ ಸೇವನೆಯಿಂದ ದ್ವಿತೀಯ ರಕ್ತದೊತ್ತಡ ಬರುವ ಸಂಭವಗಳಿವೆ. ಒತ್ತಡ ಮತ್ತು ಖಿನ್ನತೆಯಿಂದಲೂ ಸಹ ಅಧಿಕ ರಕ್ತದೊತ್ತಡ ಬರುತ್ತದೆ. ತಲೆತಿರುಗುವಿಕೆ ಮತ್ತು ತಲೆನೋವು ಕೂಡ ಇದರ ಒಂದು ಲಕ್ಷಣಗಳು. ನಮ್ಮ ಜೀವನ ಶೈಲಿಯು ನಿರ್ಣಾಯಕವಾಗಿದೆ ಹಾಗಾಗಿ ನಮ್ಮ ದೇಹದ ಆರೋಗ್ಯ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಗಮನ ವಹಿಸಬೇಕು. 120/80mm hg ಇರುವ ರಕ್ತದೊತ್ತಡವನ್ನು ಸಾಮಾನ್ಯವೆಂದು ಮತ್ತು 130/80mm hg  ಇರುವುದನ್ನು ಎತ್ತರಿಸಿದ ರಕ್ತದೊತ್ತಡವೆಂದು ಕರೆಯುತ್ತಾರೆ. ಎತ್ತರಿಸಿದ ರಕ್ತದೊತ್ತಡವನ್ನು ನಮ್ಮ ಜೀವನಶೈಲಿಯನ್ನು ಬದಲಾಯಿಸಿ ಕೊಳ್ಳುವುದರ ಮೂಲಕ ಯಾವುದೇ ಔಷದಿಯ ಸಹಾಯವಿಲ್ಲದೆ ನಿಯಂತ್ರಿಸಿಕೊಳ್ಳಬಹುದು. ಬಿಪಿ ನಿಯಂತ್ರಣದಲ್ಲಿಡುವುದರ ಬಗ್ಗೆ ತಿಳಿದುಕೊಳ್ಳೋಣ,

1. ಸರಿಯಾದ ವ್ಯಾಯಾಮ: ದಿನದಲ್ಲಿ ಒಂದರಿಂದ ಎರಡು ತಾಸು  ಸರಿಯಾದ ವ್ಯಾಯಾಮ ಮಾಡುವುದರಿಂದ ನಮ್ಮ ಹೃದಯದ ಬಡಿತ ಜಾಸ್ತಿಯಾಗುತ್ತದೆ. ಇದರಿಂದ ನಮ್ಮ ಹೃದಯ ಬಲವಾಗಿ ಅತಿ ಕಡಿಮೆ ಪ್ರಯತ್ನದಿಂದ ರಕ್ತವನ್ನು ಪಂಪ್ ಮಾಡುತ್ತದೆ. ನಿರಂತರವಾಗಿ  ವ್ಯಾಯಾಮ ಮಾಡಲು ಆಗದೆ ಇದ್ದಲ್ಲಿ ದಿನಕ್ಕೆ 20 ನಿಮಿಷಗಳ ಬ್ರೇಕ್ನಂತೆ  ಮಾಡುವ ಅಭ್ಯಾಸ ರೂಢಿಸಿಕೊಳ್ಳುವುದು ಉತ್ತಮ. ಬರಿ ವ್ಯಾಯಾಮ ಮಾಡಬೇಕೆಂದೇನೂ ಇಲ್ಲ ನಾವು ಲಿಫ್ಟ್ ಬಳಸುವುದರ ಬದಲು ಮೆಟ್ಟಿಲು ಹತ್ತುವು ಅಭ್ಯಾಸ ಮಾಡಿಕೊಳ್ಳಬೇಕು, ಹತ್ತಿರವೇ ಇರುವು ಮಾರ್ಕೆಟ್ ಹೋಗುವಾಗ ಕಾರ್ ಬಳಸುವುದರ ಬದಲು ನಡೆಯುವು ಅಭ್ಯಾಸ, ಕೈತೋಟದಲ್ಲಿ ಸಮಯಕಳೆಯುವುದು, ಸೈಕಲ್ ಪ್ರಯಾಣ, ಮನಸಿಗೆ ಇಷ್ಟವಾಗುವ ಕ್ರೀಡೆ ಇವುಗಳನ್ನು ಕೂಡ ಮಾಡಬಹುದು.

2ಕಾರ್ಬೋಹೈಡ್ರೇಟ್ ಮತ್ತು ಸಕ್ಕರೆಯ ನಿಯಮಿತ ಬಳಕೆ: ಸಕ್ಕರೆ ಹಾಗೂ  ಕಾರ್ಬೋಹೈಡ್ರೇಟ್ ಆಹಾರವನ್ನು ನಿವಮಿತವಾಗಿ ಉಪಯೋಗಿಸುವುದರಿಂದ ನಮ್ಮ ದೇಹದ ತೂಕ ಕಡಿಮೆಯಾಗಿ ಬಿಪಿ ನಿಯಂತ್ರಣದಲ್ಲಿಡಬಹುದು. ಕಾರ್ಬೋಹೈಡ್ರೇಟ್ ಆಹಾರಗಳಾದ ಹಾಲು, ಮೊಸರು, ಬ್ರೆಡ್, ಅನ್ನ,ಆಲೂಗಡ್ಡೆ ಇವುಗಳನ್ನು ಆದಷ್ಟು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು. ಸಿಹಿ ಪದಾರ್ತಗಳನ್ನು ಕಡಿಮೆ ಮಾಡಬೇಕು. ಹೀಗೆ ಆಹಾರದಲ್ಲಿ ಇವುಗಳ ನಿಯಮಿತ ಸೇವನೆಯಿಂದ ಬಿಪಿ ಕಡಿಮೆಯಾಗುತ್ತದೆ.

3. ಸಂಸ್ಕರಿಸಿದ ಆಹಾರ ಸೇವನೆ ತಪ್ಪಿಸಿ: ನಮ್ಮ ಮನೆಯಲ್ಲಿ ತಯಾರಾಗುವ ಆಹಾರಕ್ಕೆ ಹೋಲಿಸಿದರೆ ಅಂದರೆ ಹೊರಗಿನ ರೆಸ್ಟೋರೆಂಟ್ಗಳಲ್ಲಿ ಸಿಗುವ ಆಹಾರದಲ್ಲಿ ಉಪ್ಪಿನ ಬಳಕೆ ಹೆಚ್ಚಿರುತ್ತದೆ. ಆದ್ದರಿಂದ ಆದಷ್ಟು ಮನೆಯ ಊಟವನ್ನೇ ಮಾಡಿ.

4.ಧೂಮಪಾನ: ಧೂಮಪಾನದಿಂದ ನಮ್ಮ ಹೃದಯದ ಅಪಧಮನಿಗಳ ಮೇಲೆ ಕೊಬ್ಬಿನ ವಸ್ತುಗಳು ಶೇಖರಣೆಯಾಗಿ ರಕ್ತದ ಒತ್ತಡವನ್ನು ಹೆಚ್ಚು ಮಾಡುತ್ತದೆ.

ಆರೋಗ್ಯವೇ ಭಾಗ್ಯ ಎನ್ನುವ ಹಿರಿಯರ ಮಾತು ಸುಳ್ಳಲ್ಲ. ನಮ್ಮ ಆರೋಗ್ಯ ನಮ್ಮ ಜವಾಬ್ಧಾರಿ..

This post was created with our nice and easy submission form. Create your post!

What do you think?

Written by Nischala

One Comment

Leave a Reply

  One Ping

  1. Pingback:

  ನಿಮ್ಮದೊಂದು ಉತ್ತರ

  ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

  ದೀಪಾವಳಿ ಹಬ್ಬದ ದಿನ ಮತ್ತು ನಂತರ

  ಕೊರೊನಾ ವೈರಸ್ ನಿಂದ ರಕ್ಷಣೆ..