in ,

ಇನ್ಫೋಸಿಸ್ ಎನ್. ಆರ್. ನಾರಾಯಣ ಮೂರ್ತಿ

ಎನ್. ಆರ್. ನಾರಾಯಣ ಮೂರ್ತಿ
ಎನ್. ಆರ್. ನಾರಾಯಣ ಮೂರ್ತಿ

ಎನ್.ಆರ್.ನಾರಾಯಣ ಮೂರ್ತಿ,ನಾಗವಾರ ರಾಮರಾವ್ ನಾರಾಯಣಮೂರ್ತಿ.ಭಾರತದ ಉದ್ಯಮಿ ಹಾಗು ಹೆಸರಾಂತ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾದ ಇನ್ಫೋಸಿಸ್‌ನ ಸಹ ಸಂಸ್ಥಾಪಕರು. ಸುಮಾರು ಇಪ್ಪತ್ತು ವರ್ಷಗಳ ಕಾಲ ಆ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ನಿರ್ವಹಿಸಿದ ಇವರು, ಈಗ ಇನ್ಫೋಸಿಸ್ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ, ಹಾಗು ಹಿತಚಿಂತಕ ಅಧಿಕಾರಿಯಾಗಿದ್ದಾರೆ. ಭಾರತವು ವಿಶ್ವ ಮಾಹಿತಿ ತಂತ್ರಜ್ಞಾನ ಭೂಪಟದಲ್ಲಿ ಪ್ರಕಟವಾಗುವಂತೆ ಮಾಡಿದವರಲ್ಲಿ ಅಗ್ರಜರು ಎಂದು ಕರೆಯಲ್ಪಡುವ ಇವರು, ಹಲವಾರು ಉದ್ಯಮ ಸಂಸ್ಥೆಗಳು ಸರ್ಕಾರಿ ಸಂಸ್ಥೆಗಳು ಮತ್ತು ಉನ್ನತ ವಿದ್ಯಾಸಂಸ್ಥೆಗಳ ನಿರ್ವಾಹಕ ಮಂಡಳಿಗಳ ಸದಸ್ಯರಾಗಿದ್ದಾರೆ.

ಇನ್ಫೋಸಿಸ್ ಎನ್. ಆರ್. ನಾರಾಯಣ ಮೂರ್ತಿ
ಎನ್. ಆರ್. ನಾರಾಯಣ ಮೂರ್ತಿ

೨೦ನೇ ಆಗಸ್ಟ್ ೧೯೪೬ರಲ್ಲಿ ಮೈಸೂರಿನಲ್ಲಿ ಜನಿಸಿದರು. ೧೯೬೭ರಲ್ಲಿ ಮೈಸೂರಿನ ರಾಷ್ಟ್ರೀಯ ತಂತ್ರಜ್ಞಾನ ವಿದ್ಯಾಸಂಸ್ಥೆ,ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಲಕ್ಟ್ರಿಕಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದ ಅವರು ತದನಂತರ ೧೯೬೯ರಲ್ಲಿ ಕಾನ್ಪುರದ ಭಾರತೀಯ ತಂತ್ರಜ್ಞಾನ ವಿದ್ಯಾಸಂಸ್ಥೆ,ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಸ್ನಾತಕೋತ್ತರ ಪದವಿ ಪಡೆದರು. ಶ್ರೀಯುತರು ತಮ್ಮ ಸೇವಾಕೆಲಸವನ್ನು ಪುಣೆಯ ಪಾಟ್ನಿ ಕಂಪ್ಯುಟರ್ ಸಿಸ್ಟಮ್ಸ್‌ನಲ್ಲಿ ಪ್ರಾರಂಭಿಸಿದರು. ಪುಣೆಯಲ್ಲಿರುವಾಗಲೆ ಇವರ ಸಂಪರ್ಕ ತಮ್ಮ ಭಾವಿ ಪತ್ನಿ ಸುಧಾರೊಂದಿಗೆ ಖ್ಯಾತ ಬರಹಗಾರ್ತಿ ಹಾಗು ಸಮಾಜ ಸೇವಕಿಯೊಂದಿಗೆ ಸ್ನೇಹ ಬೆಳೆಯಿತು. ೨ನೇ ಜುಲೈ ೧೯೮೧ರಲ್ಲಿ ನಾರಾಯಣಮೂರ್ತಿ ಅವರು ಇತರ ಐವರೊಡನೆ ನಂದನ್ ನಿಲೇಕಣೆ , ಕ್ರಿಸ್ ಗೋಪಾಲಕೃಷ್ಣನ್, ಶಿಬುಲಾಲ್, ದಿನೇಶ್, ಮೋಹನದಾಸ್ ಪೈ ಸೇರಿ ಕೇವಲ ೧೦,೦೦೦ ರುಪಾಯಿ ಬಂಡವಾಳದೊಂದಿಗೆ ಇನ್ಫೋಸಿಸ್ ಸ್ಥಾಪಿಸಿದರು. ಇಂದು ಇನ್ಫೋಸಿಸ್ ೧,೦೦,೦೦೦ಕ್ಕೂ ಮೇಲ್ಪಟ್ಟು ಉದ್ಯೊಗಿಗಳು ಮತ್ತು ಹಲವು ರಾಷ್ಟ್ರಗಳಲ್ಲಿ ಕಛೇರಿಗಳು ಹೊಂದಿ, ವಿಶ್ವಾದಾದ್ಯಂತ ಮಾಹಿತಿ ತಂತ್ರಜ್ಞಾನ ಮತ್ತು ಸಂಬಂಧಿತ ಸೇವೆಗಳನ್ನು ಒದಗಿಸುತ್ತಿದೆ. ನಾರಾಯಣಮೂರ್ತಿಯವರ ದೂರದೃಷ್ಟಿ, ಉತ್ತಮ ನಿರ್ವಾಹಣಾ ನೈಪುಣ್ಯ ಮತ್ತು ದಿಟ್ಟ ನಾಯಕತ್ವ ಇನ್ಫೋಸಿಸ್ ಈ ಮಟ್ಟಕ್ಕೆ ಬೆಳೆಯಲು ಕಾರಣ ಅಂದರೆ ತಪ್ಪಾಗಲಾರದು. ಮಾರ್ಚ್ ೨೦೦೨ರವರೆಗೂ ಇನ್ಫೋಸಿಸ್ ಸಂಸ್ಥೆಯ ಕಾರ್ಯಾಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಗಿದ್ದ ನಾರಾಯಣಮೂರ್ತಿ ತದನಂತರ ಅಧಿಕಾರವನ್ನು ನಂದನ್ ನಿಲೇಕಣಿಯವರಿಗೆ ಹಸ್ತಾಂತರಿಸಿ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಮತ್ತು ಹಿತಚಿಂತಕ ಅಧಿಕಾರಿಯ ಹುದ್ದೆ ಅಲಂಕರಿಸಿದ್ದರು. ಆಗಸ್ಟ್ ೧೯ ೨೦೧೧ ರಂದು ತಮ್ಮ ೬೫ನೆ ವರ್ಷದಂದು ಅದ್ಯಕ್ಷ ಸ್ಥಾನದಿಂದ ನಿವೃತ್ತಿ ಹೊಂದಿದರು

ನಾರಾಯಣಮೂರ್ತಿ ಅಹ್ಮದಾಬಾದಿನ ಭಾರತೀಯ ವ್ಯವಸ್ಥಾಪನ ವಿದ್ಯಾಸಂಸ್ಥೆ ,ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಮತ್ತು ಬೆಂಗಳೂರಿನ ಭಾರತೀಯ ಮಾಹಿತಿ ತಂತ್ರಜ್ಞಾನ ವಿದ್ಯಾಸಂಸ್ಥೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್‍ಮೇಷನ್ ಟೆಕ್ನಾಲಜಿಗಳ ನಿರ್ವಾಹಕ ಮಂಡಳಿಯ ಅಧ್ಯಕ್ಷರು ಕೂಡ. ಇವಲ್ಲದೆ ಶ್ರೀಯುತರು ಪೆನ್ಸಿಲ್ವೇನಿಯ ವಿಶ್ವವಿದ್ಯಾಲಯದ ವಾರ್ಟನ್ ಶಾಲೆಯ ಉಸ್ತುವಾರಿ ಮಂಡಳಿಯ ಸದಸ್ಯರಾಗಿ, ಕಾರ್ನೆಲ್ ವಿಶ್ವವಿದ್ಯಾಲಯದ ವಿಶ್ವಸ್ತ ಮಂಡಳಿಯ ಸದಸ್ಯರಾಗಿ, ಸಿಂಗಪುರದ ಸಿಂಗಾಪುರ ವ್ಯವಸ್ಥಾಪನ ವಿಶ್ವವಿದ್ಯಾಲಯದ ವಿಶ್ವಸ್ಥ ಮಂಡಳಿಯ ಸದಸ್ಯರಾಗಿ, ಟಕ್ ಸ್ಕೂಲ್ ಆಫ್ ಬಿಜಿನೆಸ್ಸ್‌ನ ವಿಲಿಯಂ ಎಫ್. ಆಕ್ಟ್‌ಮೇಯರ್ ಜಾಗತಿಕ ನಾಯಕತ್ವ ಕೇಂದ್ರದ ಸಲಹೆಗಾರರ ಮಂಡಳಿಯ ಸದಸ್ಯರಾಗಿ, ಸ್ಟಾನ್‍ಫೊರ್ಡ್ ಗ್ರ್ಯಾಜುಯೆಟ್ ಸ್ಕೂಲ್ ಆಪ್ ಬಿಜಿನೆಸ್ಸ್‌ನ ಸಲಹೆಗಾರರ ಮಂಡಳಿಯ ಸದಸ್ಯರಾಗಿ ಮತ್ತು ಯಾಲೆ ವಿಶ್ವವಿದ್ಯಾಲಯದ ಅಧ್ಯಕ್ಷರ ಅಂತರಾಷ್ಟ್ರೀಯ ಚಟುವಟಿಕೆಗಳ ಮಂಡಳಿಯ ಸದಸ್ಯರಾಗಿಯೂ ಕೂಡ ಕಾರ್ಯ ನಿರ್ವಹಿಸುತ್ತಿದ್ದಾರೆ. ಭಾರತೀಯ ಪ್ರತಿಭೂತಿ ಮತ್ತು ವಿನಿಮಯ ಮಂಡಳಿ ನಿಯೋಜಿಸಿದ ನಿಗಮ ಆಡಳಿತ ಆಯೋಗದ ಅಧ್ಯಕ್ಷತೆಯನ್ನು ಒಮ್ಮೆ ಶ್ರೀಯುತರು ವಹಿಸಿದ್ದರು. ನಾರಾಯಣಮೂರ್ತಿಯವರು ಸಿಂಗಾಪುರದ ಡಿಬಿಎಸ್ ಬ್ಯಾಂಕಿನ ಸ್ವತಂತ್ರ ನಿರ್ದೇಶಕರು, ಭಾರತೀಯ ರಿಸರ್ವ್ ಬ್ಯಾಂಕಿನ ಕೇಂದ್ರ ಮಂಡಳಿಯಲ್ಲಿ ನಿರ್ದೇಶಕರಾಗಿ, ಭಾರತೀಯ-ಬ್ರಿಟೀಷ್ ಮೈತ್ರಿಕೂಟದ ಜಂಟಿ ಅಧ್ಯಕ್ಷರಾಗಿ, ಭಾರತದ ಪ್ರಧಾನ ಮಂತ್ರಿಗಳ ವಾಣಿಜ್ಯ ಮತ್ತು ಉದ್ಯಮ ಮಂಡಳಿಯ ಸದಸ್ಯರಾಗಿ, ಪ್ರಸಿದ್ದ ಟಿವಿ ಸಮಾಚಾರ ಬಿತ್ತರಿಸುವ ಸಂಸ್ಥೆಯಾದ ನ್ಯೂ ಡೆಲ್ಲಿ ಟೆಲಿವಿಜನ್ ನಿಯಮಿತ ಸಂಸ್ಥೆಯ ನಿರ್ದೇಶಕರಾಗಿ ಮತ್ತು ಅನೇಕ ಏಶಿಯಾದ ರಾಷ್ಟ್ರಗಳಿಗೆ ಮಾಹಿತಿ ತಂತ್ರಜ್ಞಾನ ಸಲಹೆಗಾರರಾಗಿಯೂ ಕೂಡ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇನ್ಫೋಸಿಸ್ ಎನ್. ಆರ್. ನಾರಾಯಣ ಮೂರ್ತಿ
ನಾರಾಯಣ ಮೂರ್ತಿ , ಸುಧಾಮೂರ್ತಿ

‘ನಾರಾಯಣ ಮೂರ್ತಿ’ಯವರ ಪತ್ನಿ, ‘ಸುಧಾಮೂರ್ತಿ’, ಹುಬ್ಬಳ್ಳಿಯ ‘ಬಿ.ವಿ.ಭೂಮರೆಡ್ಡಿ ಕಾಲೇಜ್ ಆಫ್ ಇಂಜಿನಿಯರಿಂಗ್’ ನಿಂದ ಬಿ.ಇ. ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವೀಧರೆ. ಆ ಕಾಲೇಜಿನಿಂದ ಅವರು ಪ್ರಥಮರಾಗಿ ಉತ್ತೀರ್ಣಹೊಂದಿ, ಕರ್ನಾಟಕದ ಮುಖ್ಯಮಂತ್ರಿಗಳಿಂದ ‘ಚಿನ್ನದ ಪದಕ’ಗಳಿಸಿದರು. ಮುಂದೆ, ಬೆಂಗಳೂರಿನ ಪ್ರತಿಷ್ಠಿತ, ‘ಇಂಡಿಯನ್ ಇನ್ ಸ್ಟಿ ಟ್ಯೂಟ್ ಆಫ್ ಸೈನ್ಸ್’ ನಿಂದ ಎಮ್.ಇ.ಕಂಪ್ಯೂಟರ್ ಸೈನ್ಸ್ ನಲ್ಲಿ ಗಳಿಸಿದರು. ಅಲ್ಲೂ ತಮ್ಮ ಕಕ್ಷದಲ್ಲೇ ಪ್ರಥಮರಾಗಿ ಉತ್ತೀರ್ಣರಾದದ್ದಲ್ಲದೆ, ‘ಇಂಡಿಯನ್ ಇನ್ ಸ್ಟಿ ಟ್ಯೂಟ್ ಆಫ್ ಇಂಜಿನಿಯರ್ಸ್ ಸಂಸ್ಥೆ’ಯಿಂದ ‘ಚಿನ್ನದ ಪದಕ’ ಗಳಿಸಿದರು. ನಂತರ, ‘ಇನ್ಫೋಸಿಸ್ ಫಂಡೇಶನ್’ ವತಿಯಿಂದ ಸಾಮಾಜಿಕ ಕಾರ್ಯಕರ್ತೆಯಾಗಿ ದುಡಿಯುತ್ತಿದ್ದಾರೆ. ಸುಧಾ ಮೂರ್ತಿಯವರು, ಹಲವಾರು ಪುಸ್ತಕಗಳ ಲೇಖಕಿ. ಮೂರ್ತಿ ದಂಪತಿಗಳಿಗೆ ಇಬ್ಬರು ಮಕ್ಕಳು. ಡಾ. ರೋಹನ್ ಮೂರ್ತಿ, ಮಗ, ಅಕ್ಷತಾ ಮೂರ್ತಿ, ಮಗಳು, ರೋಹನ್, ‘ಹಾರ್ವರ್ಡ್ ವಿಶ್ವವಿದ್ಯಾಲಯದ ಸೊಸೈಟಿ ಆಫ್ ಫೆಲೋಸ್’, ‘ಜೂನಿಯರ್ ಫೆಲೊ’ ಆಗಿದ್ದಾರೆ. ೧ ಜೂನ್,೨೦೧೩, ರಲ್ಲಿ ಅವರು ‘ಬೆಂಗಳೂರಿನ ಇನ್ಫೋಸಿಸ್ ಸಂಸ್ಥೆ’ಗೆ, ತಂದೆಯವರಿಗೆ ‘ಸಹಾಯಕ ಎಕ್ಸಿ ಕ್ಯುಟೀವ್’ ಆಗಿ ಪಾದಾರ್ಪಣೆ ಮಾಡಿದರು. ೧೪, ಜೂನ್ ೨೦೧೪, ನಲ್ಲಿ ಕಂಪೆನಿಗೆ ರಾಜೀನಾಮೆ ನೀಡಿದರು. ಅಕ್ಷತಾ, ಅಮೆರಿಕದ, ‘ಸ್ಟಾನ್ಫರ್ಡ್ ಬಿಸಿನೆಸ್ ಸ್ಕೂಲ್’ ನಿಂದ, ‘ಎಮ್.ಬಿ.ಎ’. ಮುಗಿಸಿದ್ದಾರೆ.

ಲಂಡನ್ ನಲ್ಲಿ ಸಂಸತ್ ಚೌಕದಲ್ಲಿ ಸ್ಥಾಪಿಸಲಾಗುವ ಮಹಾತ್ಮಗಾಂಧಿ ಪ್ರತಿಮೆಗೆ ಎನ್.ಆರ್.ನಾರಾಯಣಮೂರ್ತಿ ಪರಿವಾರದವರು, ೧.೮೫ ಕೋಟಿ ರೂಪಾಯಿಗಳ ದೇಣಿಗೆ ಕೊಟ್ಟಿದ್ದಾರೆ.ಒಟ್ಟಾರೆ ೭.೫ ಲಕ್ಷ ಪೌಂಡ್ ಖರ್ಚಿನಲ್ಲಿ ಸಿದ್ಧಪಡಿಸಲಾಗುವ ಪ್ರತಿಮೆಯ ಸ್ಥಾಪನೆಯ ಜವಾಬ್ದಾರಿಯನ್ನು ಟ್ರಸ್ಟ್ ನ ಧರ್ಮದರ್ಶಿ, ಅರ್ಥ ಶಾಸ್ತ್ರಜ್ಞ, ಲಾರ್ಡ್ ಮೇಘನಾದ್ ದೇಸಾಯಿ ವಹಿಸಿಕೊಂಡಿದ್ದಾರೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

13 Comments

ಅಪ್ಪು ಅವರ ಈ ಫೋಟೋ ಹಿಂದಿರುವ ಸತ್ಯ ಗೊತ್ತಾದ್ರೆ ನಿಮಗೂ ಕಣ್ಣೀರು ಬರುತ್ತೆ.

ಅಪ್ಪು ಅವರ ಈ ಫೋಟೋ ಹಿಂದಿರುವ ಸತ್ಯ ಗೊತ್ತಾದ್ರೆ ನಿಮಗೂ ಕಣ್ಣೀರು ಬರುತ್ತೆ.

ಡಾ. ರಾಜ್‌ಕುಮಾರ್

ಕನ್ನಡ ಎಂದ ತಕ್ಷಣ ನೆನಪಾಗುವುದು ಮೊದಲು ಡಾ. ರಾಜ್‌ಕುಮಾರ್