in

ಮಹಿಳಾ ಕ್ರಿಕೆಟ್ ನ ರಾಜ ಮಿಥಾಲಿ ರಾಜ್

ಮಿಥಾಲಿ ರಾಜ್
ಮಿಥಾಲಿ ರಾಜ್

ಮಿಥಾಲಿರಾಜ್ ಭಾರತೀಯ ಮಹಿಳಾ ಕ್ರಿಕೆಟ್ ನ ಅನರ್ಘ್ಯ ರತ್ನ. ತಮ್ಮ ೨೩ ವರ್ಷಗಳ ಸುದೀರ್ಘ ವೃತ್ತಿ ಬದುಕಿನಲ್ಲಿ ಭಾರತದ ಭವ್ಯ ಕ್ರಿಕೆಟ್ ಪರಂಪರೆಗೆ ಕಳಶ ಇಟ್ಟ ಧೀರ ಮಹಿಳೆ. ನಿರಂತರ ಎರಡು ದಶಕಗಳಿಗೂ ಹೆಚ್ಚು ಕಾಲ ಫಿಟ್ನೆಸ್ ಕಾಪಾಡಿಕೊಂಡು ವೃತ್ತಿ ಜೀವನದಲ್ಲಿ ಉತ್ತುಂಗಕ್ಕೇರಿದ ಕೆಲವೇ ಅಸಾಮಾನ್ಯರಲ್ಲಿ ಮಿಥಾಲಿ ರಾಜ್ ಒಬ್ಬರು. ಈಗ ೩೯ ನೇ ವಯಸ್ಸಿನಲ್ಲಿ ರಾಜಸ್ತಾನದ ಜೋಡಿಪುರ ಮೂಲದ ಈ ಕ್ರಿಕೆಟ್ ಚೆಲುವೆ ತಮ್ಮ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ್ದಾರೆ.
ಮಿಥಾಲಿ ತಮ್ಮ 10ನೇ ವಯಸ್ಸಿನಲ್ಲೇ ಕ್ರಿಕೆಟ್‌ನತ್ತ ಒಲವು ತೋರಿಸಿದರು. ಜೋಧ್‌ಪುರದಲ್ಲಿ ಹುಟ್ಟಿದರೂ ಮಿಥಾಲಿ ಬಾಲ್ಯ ಕಳೆದಿದ್ದು ತೆಲಂಗಾಣದಲ್ಲಿ. ಸಿಕಂದರಾಬಾದ್‌ನಲ್ಲಿ ಪ್ರಾಥಮಿಕ 3 ಮತ್ತು ಪ್ರೌಢ ಶಿಕ್ಷಣ ಪಡೆದ ಅವರು ಶಾಲಾ ದಿನಗಳಲ್ಲೇ ಕ್ರಿಕೆಟ್‌ನಲ್ಲಿ ಮಿಂಚುತ್ತಿದ್ದರು. ಪಿಯುಸಿಯನ್ನು ಸಿಕಂದರಾಬಾದ್‌ನಲ್ಲೇ ಮುಗಿಸಿದ ಅವರು ಬಳಿಕ ಕ್ರಿಕೆಟ್‌ನತ್ತ ಸಂಪೂರ್ಣ ಮುಖ ಮಾಡಿದರು.

ಬಳಿಕ ರೈಲ್ವೇಸ್‌ ಪರ ದೇಸಿ ಕ್ರಿಕೆಟ್‌ ಆಡಲು ಶುರು ಮಾಡಿದ ಮಿಥಾಲಿ ನಂತರ ಹಿಂತಿರುಗಿ ನೋಡಲಿಲ್ಲ. ಅಂಜುಮ್‌ ಚೋಪ್ರಾ, ಪೂರ್ಣಿಮಾ ರಾವ್‌, ಅಂಜು ಜೈನ್‌ ಜೊತೆ ಕ್ರಿಕೆಟ್‌ ಆಡುತ್ತಾ ಬೆಳೆದ ಮಿಥಾಲಿ 1997ರಲ್ಲೆ, ಅಂದರೆ ತಮ್ಮ 14ನೇ ವಯಸ್ಸಿನಲ್ಲೇ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಆಡುವ ಬಳಗದಲ್ಲಿ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಬಳಿಕ 1999ರಲ್ಲಿ ತಮ್ಮ 16ನೇ ವಯಸ್ಸಿನಲ್ಲಿ ಅವರು ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಐರ್ಲೆಂಡ್‌ ವಿರುದ್ಧ ಆಡಿದರು. ಮೊದಲ ಪಂದ್ಯದಲ್ಲೇ 114 ರನ್‌ ಸಿಡಿಸಿ ಎಲ್ಲರ ಹುಬ್ಬೇರಿಸಿದ್ದರು. ಮಿಥಾಲಿ ನಿವೃತ್ತಿ , ಆಶ್ಚರ್ಯ ಅಥವಾ ಅನಿರೀಕ್ಷಿತವೇನಲ್ಲ.
ಕ್ರಿಕೆಟ್ ಜೀವನದಲ್ಲಿ ಹಲವು ಏರಿಳಿತಗಳನ್ನು ಅನುಭವಿಸಿದರು ಅವರಲ್ಲಿನ ಛಲ ಎಂಥದ್ದೆಸವಾಲುಗಳನ್ನು ಮೆಟ್ಟಿ ನಿಲ್ಲುವನಂತೆ ಮಾಡಿತು. ಜೋಧಪುರದ ಈ ಕುವರಿ ಕ್ರಿಕೆಟ್ನಲ್ಲಿನ ಅನೇಕ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಮಿಥಾಲಿ ರಾಜ್ ಕ್ರಿಕೆಟ್ಗಾಗಿ ತಮ್ಮ ಜೀವನವನ್ನೇ ಸಮರ್ಪಿಸಿಕೊಂಡಿದ್ದಾರೆ. ಮದುವೆ ಬಂಧನವಾಗುತ್ತದೆ ಎಂಬ ಕಾರಣಕ್ಕೆ ಅವಿವಾಹಿತರಾಗಿಯೇ ಉಳಿದರು. ಕೇವಲ ೧೨ನೇ ತರಗತಿಯವರೆಗೆ ಮಾತ್ರ ಓದಿದ್ದಾರೆ. ಕ್ರಿಕೆಟ್ ಅವರ ಪಾಲಿಗೆ ವಿಶ್ವವಿದ್ಯಾಲಯವಾಯಿತು.

ಮಹಿಳಾ ಕ್ರಿಕೆಟ್ ನ ರಾಜ ಮಿಥಾಲಿ ರಾಜ್
ಮಿಥಾಲಿ ರಾಜ್

ಬಾಲ್ಯದಲ್ಲಿ ಭರತನಾಟ್ಯದತ್ತ ಒಲವು ತೋರಿದ್ದ ಮಿಥಾಲಿ ರಾಜ್, ಆ ಬಳಿಕ ಕ್ರಿಕೆಟ್ ದಂತಕಥೆಯಾಗಿ ಬೆಳೆದುನಿಂತಿದ್ದೇ ಒಂದು ಅಚ್ಚರಿ. ಮಿಥಾಲಿ ರಾಜ್ 1982ರಲ್ಲಿ ರಾಜಸ್ಥಾನದ ಜೋಧ್‌ಪುರದಲ್ಲಿ ದೊರೈ ರಾಜ್‌-ಲೀಲ್‌ ರಾಜ್‌ ದಂಪತಿಯ ಪುತ್ರಿಯಾಗಿ ಜನಿಸಿದರು. ದೊರೈ ಅವರು ಭಾರತೀಯ ಏರ್‌ಫೋರ್ಸ್‌ ಉದ್ಯೋಗಿಯಾಗಿದ್ದರು. ಬಾಲ್ಯದಲ್ಲಿ ಭರತನಾಟ್ಯ ಡ್ಯಾನ್ಸರ್‌ ಆಗಬೇಕೆಂದು ಕನಸು ಕಂಡಿದ್ದ ಮಿಥಾಲಿ ತಮ್ಮ 10ನೇ ವಯಸ್ಸಿನಲ್ಲೇ ಕ್ರಿಕೆಟ್‌ನತ್ತ ಒಲವು ತೋರಿಸಿದರು. ಜೋಧ್‌ಪುರದಲ್ಲಿ ಹುಟ್ಟಿದರೂ ಮಿಥಾಲಿ ಬಾಲ್ಯ ಕಳೆದಿದ್ದು ತೆಲಂಗಾಣದಲ್ಲಿ. ಸಿಕಂದರಾಬಾದ್‌ನಲ್ಲಿ ಪ್ರಾಥಮಿಕ 3ಮತ್ತು ಪ್ರೌಢ ಶಿಕ್ಷಣ ಪಡೆದ ಅವರು ಶಾಲಾ ದಿನಗಳಲ್ಲೇ ಕ್ರಿಕೆಟ್‌ನಲ್ಲಿ ಮಿಂಚುತ್ತಿದ್ದರು. ಪಿಯುಸಿಯನ್ನು ಸಿಕಂದರಾಬಾದ್‌ನಲ್ಲೇ ಮುಗಿಸಿದ ಅವರು ಬಳಿಕ ಕ್ರಿಕೆಟ್‌ನತ್ತ ಸಂಪೂರ್ಣ ಮುಖ ಮಾಡಿದರು.
ಮಿಥಾಲಿ ಮಿತಭಾಷಿ. ಭಾವಾವೇಶಕ್ಕೆ ಒಳಗಾಗದೆ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುತ್ತಿದ್ದರು, ಮಿಥಾಲಿ ರಾಜ್‌ 6 ಬಾರಿ ವಿಶ್ವಕಪ್‌ನಲ್ಲಿ ಆಡಿದ ಪ್ರಪ್ರಥಮ ಮಹಿಳಾ ಕ್ರಿಕೆಟರ್‌ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. 39 ವರ್ಷದ ಮಿಥಾಲಿ 2000, 2005, 2009, 2013, 2017 ಹಾಗೂ 2022ರ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಒಟ್ಟಾರೆ ಮಿಥಾಲಿ ಕ್ರಿಕೆಟ್‌ ಇತಿಹಾಸದಲ್ಲಿ 6 ವಿಶ್ವಕಪ್‌ ಆಡಿದ 3ನೇ ಕ್ರಿಕೆಟರ್‌ ಎನಿಸಿಕೊಂಡಿದ್ದಾರೆ.
ಇದು ಟಿ ೨೦ ಜಾಯಮಾನ. ಈ ವೇಗದಾಟಕ್ಕೆ ಹೊಂದಿಕೊಳ್ಳುವುದು ಸ್ವಲ್ಪ ಕಷ್ಟವಾಗಿದ್ದೇನೋ ನಿಜ. ಅದಕ್ಕೆ ವಯಸ್ಸು ಕೂಡ ಕಾರಣವಾಗಿರಬಹುದು. ಒಟ್ಟು ೮೯ ಟಿ ೨೦ ಪಂದ್ಯ ಆಡುವ ಮೂಲಕ ಯಾವುದೇ ಮಾದರಿಯ ಪಂದ್ಯಾವಳಿಗೂ ತಾವು ಸೈ ಎಂಬುದನ್ನು ಸಾಬೀತುಪಡಿಸಿದರು. ಕೇವಲ ಕ್ರೀಡೆ ಅಷ್ಟೇ ಅಲ್ಲ ಯಾವುದೇ ಕ್ಷೇತ್ರವಿರಲಿ ಮಿಥಾಲಿ ರಾಜ್ ಎಲ್ಲರಿಗೂ ರೋಲ್ ಮಾಡೆಲ್. ಮಿಥಾಲಿ ರಾಜ್ ಭಾರತೀಯ ಮಹಿಳಾ ಕ್ರಿಕೆಟಿನ ತೆಂಡೂಲ್ಕರ್ ಎಂದೇ ಕರೆಯುತ್ತಾರೆ. ತನ್ನ ವೃತ್ತಿ ಜೀವನದಲ್ಲಿ 232 ಏಕದಿನ ಪಂದ್ಯಗಳನ್ನು ಆಡಿರುವ ಮಿಥಾಲಿ 7805 ರನ್ ಗಳಿಸಿದ್ದಾರೆ. ಮಿಥಾಲಿ ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮಹಿಳಾ ಕ್ರಿಕೆಟಿಗರಾಗಿದ್ದಾರೆ. 50.68 ಸರಾಸರಿಯಲ್ಲಿ ರನ್ ಗಳಿಸಿರುವ ಮಿಥಾಲಿ ತನ್ನ ಇಡೀ ವೃತ್ತಿಜೀವನದಲ್ಲಿ 7 ಶತಕ ಮತ್ತು 64 ಅರ್ಧ ಶತಕಗಳನ್ನು ಗಳಿಸಿದ್ದಾರೆ.

ಐಸಿಸಿ ಮಹಿಳಾ ಏಕದಿನ ಬ್ಯಾಟಿಂಗ್ ಶ್ರೇಯಾಂಕ

ಮಹಿಳಾ ಕ್ರಿಕೆಟ್ ನ ರಾಜ ಮಿಥಾಲಿ ರಾಜ್
ಮಿಥಾಲಿ ರಾಜ್

ಇತ್ತೀಚೆಗೆ ಬಿಡುಗಡೆಯಾದ ಐಸಿಸಿ ಮಹಿಳಾ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಮಿಥಾಲಿ ರಾಜ್ ಪ್ರಸ್ತುತ ಏಳನೇ ಸ್ಥಾನದಲ್ಲಿದ್ದಾರೆ. ಭಾರತ ಮಹಿಳಾ ಕ್ರಿಕೆಟ್‌ಗೆ ಸಲ್ಲಿಸಿರುವ ಅನನ್ಯ ಕೊಡುಗೆಗಾಗಿ ಮಿಥಾಲಿ ರಾಜ್‌ಗೆ ಹಲವಾರು ಪ್ರಶಸ್ತಿಗಳು ದೊರೆತಿವೆ. 2003ರಲ್ಲಿ ಅರ್ಜುನ ಪ್ರಶಸ್ತಿ, 2015ರಲ್ಲಿ ಭಾರತ ಸರಕಾರದಿಂದ ಪದ್ಮಶ್ರಿ ಪ್ರಶಸ್ತಿ, 2017ರಲ್ಲಿ ಬಿಬಿಸಿ 100 ಮಹಿಳೆಯರ ಸಾಲ್ಲಿ ಸ್ಥಾನ, 2017ರಲ್ಲಿ ವಿಶ್ವದ ಮುಂಚೂಣಿ ಮಹಿಳಾ ಕ್ರಿಕೆಟರ್‌, 2021ರಲ್ಲಿ ಖೇಲ್ ರತ್ನ ಪ್ರಶಸ್ತಿ ಪಡೆದಿದ್ದಾರೆ.
ಮಹಿಳೆ ಸಮಾಜದ ಶಕ್ತಿ ಕುಟುಂಬದ ಕಣ್ಣು. ಸಮಾಜ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆ ಪ್ರಮುಖ ಪಾತ್ರ ವಹಿಸಿದ್ದಾಳೆ. ಹಿಂದಿನ ಕಾಲದಲ್ಲಿ ಬೆರಳೆಣಿಕೆಯಷ್ಟು ಮಹಿಳೆಯರು ಮಾತ್ರ ಮನೆಯಿಂದ ಹೊರಗೆ ಬಂದು ದುಡಿಯುತ್ತಿದ್ದರು. ಆದ್ರೀಗ ಕಾಲ ಬದಲಾಗಿದೆ. ಮಹಿಳೆ ತಾನು ಎಲ್ಲವನ್ನೂ ನಿಭಾಯಿಸಬಲ್ಲೆ ಎಂಬುದನ್ನು ತೋರಿಸಿಕೊಟ್ಟಿದ್ದಾಳೆ. ಗಡಿ ಕಾಯುವುದ್ರಿಂದ ಹಿಡಿದು ಕುಟುಂಬದ ಪ್ರತಿಯೊಂದು ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಬಲ್ಲ ಶಕ್ತಿ, ತಾಳ್ಮೆ, ಉತ್ಸಾಹ, ಧೈರ್ಯ ಮಹಿಳೆಗಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಸೌತೆಕಾಯಿ

ಸೌತೆಕಾಯಿಯ ಔಷಧಿ ಗುಣಗಳು ಹಾಗೂ ಅಡುಗೆಯಲ್ಲೂ ಉಪಯೋಗ

ಸಾಮೆ ಅಕ್ಕಿ

ಸಿರಿಧಾನ್ಯ ಸಾಮೆ ಅಕ್ಕಿ