in

ಕ್ರಿಕೆಟ್ ಆಟ ಈಗ ಒಂದು ಮನರಂಜನೆಯ ಆಟ ಎಂದರೆ ತಪ್ಪಾಗಲಾರದು

ಕ್ರಿಕೆಟ್
ಕ್ರಿಕೆಟ್

ಕ್ರಿಕೆಟ್ ಎಂಬುದು ಮತ್ತು ಚೆಂಡುಗಳ ಆಟ. ಬ್ಯಾಟ್ ಮತ್ತು ಚೆಂಡುಗಳಿಗೆ ಸಂಬಂಧಪಟ್ಟ ಪಂಗಡದ ಆಟವೆಂದೂ ಹಾಗೂ ೧೬ನೇ ಶತಮಾನದಲ್ಲಿ ದಕ್ಷಿಣ ಇಂಗ್ಲೆಂಡಿನಲ್ಲಿ ಆಡಲ್ಪಟ್ಟಿದ್ದು ಎಂಬ ಬಗ್ಗೆ ಆಧಾರವಿದೆ. ೧೮ನೇಯ ಶತಮಾನದ ಅಂತ್ಯದ ಸಮಯದಲ್ಲಿ ಕ್ರಿಕೆಟ್ ಇಂಗ್ಲೆಂಡಿನ ರಾಷ್ಟ್ರೀಯ ಕ್ರೀಡೆಯಾಗಿ ಅಭಿವೃದ್ಧಿ ಹೊಂದಿತ್ತು. ಬ್ರಿಟೀಷ್ ಸಾಮ್ರಾಜ್ಯದ ವಿಸ್ತರಣೆಯು ಸಮುದ್ರದಾಚೆಗಿನ ದೇಶಗಳೊಡನೆ ಕ್ರಿಕೆಟ್ ಅಡಲು ಅನುವು ಮಾಡಿಕೊಟ್ಟಿತು ಮತ್ತು ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ನಡೆಸಲಾಗಿತ್ತು. ಇಂದು ಆಟಗಳ ಆಡಳಿತಾತ್ಮಕ ಅಂಗವಾದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ೧೦೪ ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ.

ಕ್ರಿಕೆಟ್
ಕ್ರಿಕೆಟ್

ಒಂದೊಂದು ಪಂಗಡದಲ್ಲಿಯೂ ಹನ್ನೊಂದು ಜನ ಆಟಗಾರರು ಇರುವ ಎರಡು ಪಂಗಡಗಳ ನಡುವೆ ಆಡಿಸಲಾಗುತ್ತದೆ. ಬ್ಯಾಟಿಂಗ್ ಮಾಡುತ್ತಿರುವ ಪಂಗಡ ಔಟ್ ಆಗದೆ ಸಾಧ್ಯವಾದಷ್ಟು ರನ್ ಗಳಿಸಲು ಪ್ರಯತ್ನಿಸುತ್ತಿದ್ದರೆ ಬೌಲಿಂಗ್ ಮತ್ತು ಫೀಲ್ಡಿಂಗ್ ಮಾಡುತ್ತಿರುವ ಇನ್ನೊಂದು ಪಂಗಡ ಬ್ಯಾಟಿಂಗ್ ಮಾಡುತ್ತಿರುವ ಪಂಗಡದ ಬ್ಯಾಟ್ಸ್‌ಮನ್‌ಗಳನ್ನ ಚದುರಿಸಿ ಕಡಿಮೆ ಅಂಕಕ್ಕೆ ಮಿತಿಗೊಳಿಸಲು ಪ್ರಯತ್ನಿಸುತ್ತಿರುತ್ತದೆ.
ಯಾವಾಗ, ಬ್ಯಾಟಿಂಗ್ ಮಾಡುತ್ತಿದ್ದ ಪಂಗಡ ತನಗೆ ಲಭ್ಯವಿದ್ದ ಎಲ್ಲಾ ಒವರ್‌ಗಳನ್ನೂ ಬಳಸಿಕೊಂಡಿದ್ದು ಅಥವಾ ಎಲ್ಲಾ ಬ್ಯಾಟ್ಸ್‌ಮನ್‌ಗಳು ಔಟ್ ಆದ ನಂತರ ವ್ಯತಿರಿಕ್ತವಾಗಿ ಈಗ ಪ್ರತಿಸ್ಪರ್ಧಿಯ ಅಂಕಗಳನ್ನ ದಾಟುವುದು ಫೀಲ್ಡಿಂಗ್ ಮಾಡುತ್ತಿದ್ದ ಪಂಗಡದ ಸರದಿಯಾಗುತ್ತದೆ.

ಕ್ರಿಕೆಟ್ ಆಟದ ಪರಿಧಿಯಲ್ಲಿ ಹಲವಾರು ರೀತಿಯ ಬದಲಾವಣೆಗಳಿವೆ. ವೃತ್ತಿಪರ ಕ್ರಿಕೇಟಿನಲ್ಲಿ ಈ ವ್ಯಾಪ್ತಿಯನ್ನು ಪ್ರತಿ ಭಾಗಕ್ಕೂ ೨೦ ಒವರುಗಳಿಗೆ ಸೀಮಿತಗೊಳಿಸಿ ಸೀಮಿತ ಒವರುಗಳ ಕ್ರಿಕೆಟ್ ಎಂದು ೫ ದಿನಗಳವರೆಗಿನ ಟೆಸ್ಟ್ ಕ್ರಿಕೇಟ್ ಆಡಿಸಲಾಗುತ್ತದೆ. ಆಡಿಸಲ್ಪಟ್ಟ ಆಟದ ಸ್ವರೂಪಕ್ಕೆ ಅನುಗುಣವಾಗಿ ವಿವಿಧ ರೀತಿಯ ನಿಯಮಮಗಳ ಮೂಲಕ ಆಟ ಗೆದ್ದಿದೆಯೊ, ಸೋತಿದೆಯೊ, ಸಮನಾಗಿದೆಯೊ ಅಥವಾ ತಡೆಹಿಡಿಯಲಾಗಿದೆಯೊ ಎಂದು ನಿರ್ಣಯಿಸಲಾಗುತ್ತದೆ.

ಕ್ರಿಕೆಟ್ ಪಂದ್ಯವನ್ನು ಒಂದೊಂದು ಪಂಗಡದಲ್ಲೂ ಹನ್ನೊಂದು ಆಟಗಾರರಿರುವಂತೆ ಎರಡು ಪಂಗಡಗಳ ನಡುವೆ ವಿವಿಧ ರೀತಿಯ ಗಾತ್ರ ಮತ್ತು ಆಕಾರದ ಮೈದಾನದಲ್ಲಿ ಆಡಿಸಲಾಗುತ್ತದೆ. ಮೈದಾನವು ಹುಲ್ಲುಗಳಿಂದ ಆವೃತವಾಗಿರುತ್ತದೆ ಮತ್ತು ಇದು ಮೈದಾನದ ಫಲವತ್ತತೆಯನ್ನು ನೋಡಿಕೊಳ್ಳುವ, ಕಟಾವು ಮಾಡುವ, ರೋಲಿಂಗ್ ಮಾಡುವ ಮತ್ತು ಮೇಲ್ಪದರವನ್ನು ಸಮಾನಗೋಳಿಸುವ ಕೆಲಸಗಾರರಿಂದ ರಚಿಸಲ್ಪಟ್ಟಿರುತ್ತದೆ. ಮೈದಾನದ ಪರಿಧಿಯನ್ನು ಬೌಂಡರಿ ಎಂದು ಕರೆಯಲಾಗುತ್ತದೆ ಮತ್ತು ಮೈದಾನದ ಹೊರಗಿನ ಬದಿಯನ್ನು ಕೆಲವೊಮ್ಮೆ ಬಣ್ಣದ ಮೂಲಕವೂ ಮತ್ತು ಕೆಲವೊಮ್ಮೆ ಹಗ್ಗದ ಮೂಲಕವೂ ಸುತ್ತುವರಿಯಲಾಗುತ್ತದೆ. ಮೈದಾನವು ಗೋಲಾಕಾರದಲ್ಲೂ, ಚೌಕಾಕಾರದಲೂ ಅಥವಾ ಮೊಟ್ಟೆಯಾಕಾರದಲ್ಲು ಇರಬಹುದು ದಿ ಒವೆಲ್ ಅನ್ನು ಕ್ರಿಕೇಟಿನ ಅತ್ಯಂತ ಪ್ರಸಿಧ್ದ ಸ್ಥಳವೆಂದು ಕರೆಯಲಾಗಿದೆ.

ಕ್ರಿಕೆಟ್ ಆಟ ಈಗ ಒಂದು ಮನರಂಜನೆಯ ಆಟ ಎಂದರೆ ತಪ್ಪಾಗಲಾರದು
ಕ್ರಿಕೆಟ್

ಆಟ ಪ್ರಾರಂಭವಾಗುವುದಕ್ಕೂ ಮೊದಲು, ಎರಡೂ ತಂಡದ ನಾಯಕರು ಕೂಡಿ ಯಾವ ತಂಡ ಮೊದಲು ಬ್ಯಾಟ್ ಅಥವಾ ಬೌಲ್ ಮಾಡಬೇಕು ಎಂಬುದನ್ನು ನಿರ್ಧರಿಸಲು ನಾಣ್ಯವನ್ನು ಟಾಸ್ ಮಾಡುವರು.ಟಾಸ್ ಗೆದ್ದ ನಾಯಕನು ಪ್ರಸ್ತುತ ಮತ್ತು ನಿರೀಕ್ಷಿತ ಮೈದಾನದ ವಿವರಗಳು ಮತ್ತು ಹವಾಮಾನ ಸ್ಥಿತಿಗಳನ್ನು ಒಳಗೊಂಡಂತೆ ಚತುರ ವಿವೇಚನೆಯ ಮೂಲಕ ತನ್ನ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ.

ಬ್ಯಾಟ್ಸ್‌ಮನ್ ತನ್ನ ಬ್ಯಾಟ್ ಮೂಲಕ ಚೆಂಡನ್ನು ಹೊಡೆದ ನಂತರ ಪಿಚ್‌ನ ಉದ್ದಕ್ಕೆ ಓಡಿದಾಗ ಮಾತ್ರ ಅಧಿಕ ರನ್‌ಗಳನ್ನು ಗಳಿಸಲು ಸಾಧ್ಯ. ಆದಾಗ್ಯೂ ಅಧಿಕ ರನ್ ಗಳಿಸುವ ಹಲವಾರು ವಿಧಾನಗಳನ್ನು ಕೆಳಗೆ ವಿವರಿಸಲಾಗಿದೆ.ಬ್ಯಾಟ್ಸ್‌ಮನ್ ಹೆಚ್ಚಿನ ಯಾವುದೇ ರನ್ ಗಳಿಸಲು ಪ್ರಯತ್ನಿಸದಿದ್ದರೆ, ಚೆಂಡನ್ನು ಡೆಡ್ ಎಂದು ಭಾವಿಸಿ ಅದನ್ನು ಬೌಲರ್‌ಗೆ ಮತ್ತೆ ಬೌಲ್ ಮಾಡಲು ಕೊಡುತ್ತಾರೆ.

ಬ್ಯಾಟಿಂಗ್ ತಂಡ ಸಂಪೂರ್ಣ ಆಲ್ ಔಟ್ ಆಗುವವರೆಗೂ ಬೌಲಿಂಗ್ ತಂಡ ವಿವಿಧ ವಿಧಾನಗಳ ಮೂಲಕ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಲು ಪ್ರಯತ್ನಿಸುತ್ತಿರುತ್ತದೆ, ಆನಂತರದಲ್ಲಿ ಮೊದಲು ಬೌಲಿಂಗ್ ಮಾಡುತ್ತಿದ್ದ ತಂಡ ಸರದಿಯಂತೆ ಬ್ಯಾಟಿಂಗ್ ಮತ್ತು ಮೊದಲು ಬ್ಯಾಟಿಂಗ್ ಮಾಡುತ್ತಿದ್ದ ತಂಡ ಫೀಲ್ಡಿಂಗ್ ಮಾಡಬೇಕಾಗುತ್ತದೆ.

ಬ್ಯಾಟ್ಸ್‌ಮನ್‌ಗಳ “ಸುರಕ್ಷಿತ ಪ್ರದೇಶ”ವನ್ನು ಗುರುತಿಸಲು ಮತ್ತು ಬೌಲರ್‌ಗಳ ಪ್ರವೇಶವನ್ನು ಮಿತಿಗೊಳಿಸಲು ಪಿಚ್ ಮೇಲೆ ವಿಕೇಟ್‍ನ ಸುತ್ತಲು ಬಣ್ಣದಿಂದ ರಚಿಸಲ್ಪಟ್ಟಿರುವ ನಾಲ್ಕು ರೇಕೆಗಳನ್ನು ಕ್ರೀಸ್ ಎಂದು ಕರೆಯಲಾಗುತ್ತದೆ. ಇವುಗಳನ್ನು “ಪಾಪಿಂಗ್” ಕ್ರೀಸ್, “ಬೌಲಿಂಗ್” ಕ್ರೀಸ್ ಮತ್ತು ಎರಡು “ರಿಟರ್ನ್” ಕ್ರೀಸ್ ಎಂದು ಕರೆಯುವರು.

ಬೌಲರ್ ಚೆಂಡನ್ನು ಎಸೆಯುವಾಗ ಆತನ ಹಿಂದಿನ ಕಾಲಿನ ಪಾದ “ಡೆಲಿವರಿ ಸ್ಟ್ರೈಡ್” ಮೇಲೆ, ಎರಡೂ ರಿಟರ್ನ್ ಕ್ರೀಸ್‌ನ ಒಳಗಡೆ ಮತ್ತು ಆತನ ಮುಂದಿನ ಕಾಲಿನ ಪಾದ ಪಾಪಿಂಗ್ ಕ್ರೀಸ್‌‍ನ ಮೇಲೆ ಅಥವಾ ಹಿಂದೆ ಇರಲೇಬೇಕು. ಒಂದು ವೇಳೆ ಬೌಲರ್ ಈ ನಿಯಮವನ್ನು ಮುರಿದರೆ ತೀರ್ಪುಗಾರರು ಆ ಎಸೆತವನ್ನು “ನೊ ಬಾಲ್” ಎಂದು ನಿರ್ಣಯಿಸುವರು. ಪಾಪಿಂಗ್ ಕ್ರೀಸ್‌ನಿಂದ ದಾಂಡಿಗನಿಗಾಗುವ ಪ್ರಯೋಜನವೆಂದರೆ, ಇದು ಸ್ಟಂಪ್ಡ್ ಅಥವಾ ರನ್ ಔಟ್ ಅಗಬಹುದಾದ ಆತನ ಅಪಾಯಕಾರಿ ಪರಿಧಿಯ ಮಿತಿಯನ್ನು ಸೂಚಿಸುತ್ತದೆ. ಒಂದು ವೇಳೆ “ಆತನು ಪರಿಧಿಯ ಹೊರಗಡೆ” ಇರುವನು ಎಂದಾದರೆ ತನ್ನ ವಿಕೇಟ್ ಕಳೆದುಕೊಳ್ಳುತ್ತಾನೆ.

ಪಿಚ್‌ನ ಸಾಂದ್ರತೆಯಲ್ಲಿ ಬದಲಾವಣೆಗಳಿರುತ್ತವೆ, ಈ ಬದಲಾವಣೆ ಬೌಲರ‍್ಗೆ ಚೆಂಡನ್ನು ಪುಟಿದೇಳಿಸಲು, ತಿರುಗಿಸಲು ಮತ್ತು ಎರಡೂ ವಿಧಾನವನ್ನು ಒಮ್ಮೆಗೆ ಬಳಸಿ ಬೌಲ್ ಮಾಡಲು ಲಭ್ಯವಾಗುತ್ತದೆ.ಗಡುಸಾದ ಪಿಚ್ ಸಾಮಾನ್ಯಾಗಿ ಎತ್ತರದ ಆದರೆ ಸಮರೂಪದ ಪುಟಿಯುವಿಕೆಯ ಕಾರಣದಿಂದಾಗಿ ಬ್ಯಾಟ್ ಮಾಡಲು ಅನುಕೂಲಕರವಾಗಿರುತ್ತದೆ. ಬಹುವಾಗಿ ಏಳುವ ಬಿರುಕುಗಳಿಂದಾಗಿ ಒಣಗಿದ ಪಿಚ್‌ಗಳು ಬ್ಯಾಟಿಂಗ್‌ಗೆ ಅನಾನುಕೂಲಕರವಾಗುತ್ತವೆ, ಮತ್ತು ಈ ಸ್ಥಿತಿ ಸಂಭವಿಸಿದಾಗಲೆಲ್ಲ ಸ್ಪಿನ್ನ್ನರ್‌ಗಳು ಪ್ರಮುಖ ಪಾತ್ರವಹಿಸಬಹುದಾಗಿದೆ. ತೇವವಿರುವ ಪಿಚ್‌ಗಳು ಅಥವಾ ಹುಲ್ಲಿನಿಂದ ಆವೃತವಾಗಿರುವ ಪಿಚ್‌ಗಳು ಒಳ್ಳೆಯ ವೇಗದ ಬೌಲರ್‌ಗಳಿಗೆ ಹೆಚ್ಚಿನ ಪುಟಿತವನ್ನು ಹೊರತೆಗೆಯಲು ಅವಕಾಶಮಾಡಿಕೊಡುತ್ತವೆ. ಈ ತರಹದ ಪಿಚ್‌ಗಳು ಪಂದ್ಯದುದ್ದಕ್ಕೂ ವೇಗದ ಬೌಲರ್‌ಗಳಿಗೆ ಸಹಾಯವಕಾಶ ನೀಡುತ್ತವೆ, ಆದರೆ ಆಟ ಮುಂದುವರಿದಂತೆ ಬ್ಯಾಟಿಂಗ್‌ಗೆ ಉತ್ತಮ ಅನುಕೂಲಕರವಾಗುವ ರೀತಿಯಲ್ಲಿ ಬದಲಾಗುತ್ತದೆ.

ಮೈದಾನದ ಆಟ ಇಬ್ಬರು ಅಂಪೈರ್‌ಗಳಿಂದ ನಿಯಂತ್ರಿಸಲ್ಪಡುತ್ತದೆ, ಅವರಲ್ಲಿ ಒಬ್ಬ ಬೌಲರ್‌ನ ತುದಿಯ ವಿಕೇಟ್‌ನ ಹಿಂಬಾಗದಲ್ಲಿ ನಿಂತಿದ್ದರೆ ಇನ್ನೊಬ್ಬ ಆನ್ ಸ್ಟ್ರೈಕ್ ಬ್ಯಾಟ್ಸ್‌ಮನ್‌ ಬದಿಯಿಂದ ಸ್ಕೇಯರ್ ಲೆಗ್ ಎಂದು ಕರೆಯಲಾಗುವ ಪ್ರದೇಶದಲ್ಲಿ ಸುಮಾರು ೧೦–೧೨ ಮೀಟರುಗಳಷ್ಟು ದೂರದಲ್ಲಿ ನಿಂತಿರುತ್ತಾನೆಬೌಲರ್ ಬೋಲನ್ನು ಎಸೆಯುವ ಸಮಯದಲ್ಲಿ ಅಂಪೈರ್ ವಿಕೇಟ್‌ನ ಬದಿಯಲ್ಲಿ ಬೌಲರ್ ಮತ್ತು ನಾನ್ ಸ್ಟ್ರೈಕರ್‌ನ ನಡುವೆ ನಿಂತಿರುತ್ತಾನೆ.ಆಡುವ ಸ್ಥಿತಿಗಳಲ್ಲಿ ಏನಾದರೂ ಅನುಮಾನಗಳಿದ್ದಲ್ಲಿ ಅಂಪೈರ್‌ಗಳು ಅದರ ಕುರಿತು ಸಮಾಲೋಚಿಸುತ್ತಾರೆ ಮತ್ತು ಅವರು ಅಗತ್ಯವಿದ್ದ ಸಂದರ್ಭದಲ್ಲಿ ಆಟಗಾರರನ್ನು ಮೈದಾನದಿಂದ ಹೊರಹೋಗುವಂತೆ ಮಾಡಿ ಪಂದ್ಯವನ್ನು ಮುಂದೂಡಬಹುದಾಗಿದೆ, ಉದಾಹರಣೆಗೆ ಮಳೆ ಅಥವಾ ಬೆಳಕಿನ ಅಭಾವವಿರುವ ಸಂದರ್ಭದಲ್ಲಿ.

ಮೈದಾನದ ಹೊರಗೆ ಮತ್ತು ದೂರದರ್ಶನ ಸೇವೆ ಇರುವ ಪಂದ್ಯಗಳಲ್ಲಿ, ಯಾವಾಗಲೂ ಕೆಲವು ಘಟನೆಗಳ ವೀಡಿಯೋ ಸಾಕ್ಷಿಗಳ ಮೂಲಕ ನಿರ್ಧಾರ ತೆಗೆದುಕೊಳ್ಳಬಹುದಾದ ಒಬ್ಬ ಥರ್ಡ್ ಅಂಪೈರ್ ಇರುತ್ತಾನೆ. ಎರಡು ಐ ಸಿ ಸಿ ಖಾಯಂ ಸದಸ್ಯ ರಾಷ್ಟ್ರಗಳ ನಡುವೆ ನಡೆಸಲ್ಪಟ್ಟ ಟೆಸ್ಟ್ ಪಂದ್ಯಗಳು ಮತ್ತು ಅಂತಾರಾಷ್ಟ್ರೀಯ ಸೀಮಿತ ಒವರುಗಳ ಪಂದ್ಯಗಳಲ್ಲಿ ಆಟದ ನಿಯಮಗಳ ಪ್ರಕಾರ ಥರ್ಡ್ ಅಂಪೈರ್ ಕಡ್ಡಾಯವಾಗಿ ಇರಲೇಬೇಕು. ಈ ಪಂದ್ಯಗಳು, ಆಟ ಕ್ರಿಕೆಟ್‌ನ ನಿಯಮಗಳ ಪರಿಧಿಯ ಒಳಗೆ ಇದೆಯೋ ಎಂಬುದನ್ನು ನಿರ್ಧರಿಸುವ ಮತ್ತು ಆಟದ ಹುರುಪಿನ ಬಗ್ಗೆ ಖಚಿತಪಡಿಸುವ ಕೆಲಸ ನಿರ್ವಹಿಸುವ ಒಬ್ಬ ಮ್ಯಾಚ್ ರೆಫರಿಯನ್ನೂ ಕೂಡ ಒಳಗೊಂಡಿರುತ್ತವೆ.

ಮೈದಾನದ ಹೊರಗೆ, ಪ್ರತಿ ತಂಡವನ್ನು ಪ್ರತಿನಿಧಿಸುವ ಇಬ್ಬರು ಕಛೇರಿಯ ಸ್ಕೋರರ್‌ಗಳ ಮೂಲಕ ರನ್‌ಗಳು ಮತ್ತು ಔಟ್ ಆದ ಬ್ಯಾಟ್ಸ್‌ಮನ್‌ಗಳನ್ನೊಳಗೊಂಡಂತೆ ಪಂದ್ಯದ ವಿವರಗಳನ್ನ ದಾಖಲಿಸಲಾಗುತ್ತದೆ ಸ್ಕೋರರ್‌ಗಳು ಅಂಪೈರ್‌ಗಳ ಕೈ ಸಂಜ್ಞೆಯ ಮೂಲಕ ನಿರ್ದೇಶನ ಪಡೆಯುತ್ತಾರೆ. ಕ್ರಿಕೆಟ್‌ನ ನಿಯಮಗಳ ಪ್ರಕಾರ, ಬೌಲ್ ಮಾಡಲಾದ ಒವರ್‌ಗಳನ್ನು, ತೆಗೆದುಕೊಂಡ ವಿಕೆಟ್‌‌ಗಳನ್ನು ಮತ್ತು ಗಳಿಸಿದ ರನ್‌ಗಳನ್ನು ದಾಖಲಿಸಬೇಕಾದರೆ ಸ್ಕೋರರ್‌ಗಳು ಅವಶ್ಯವಾಗಿ ಇರಲೇಬೇಕು.ಪ್ರ್ಯಾಯೋಗಿಕವಾಗಿ, ಅವರು ರನ್ ರೇಟ್ ಮತ್ತು ಬೌಲಿಂಗ್‌ನ ವಿಶ್ಲೇಷಣೆಯಂತಹ ಹೆಚ್ಚುವರಿ ದತ್ತಾಂಶಗಳನ್ನು ಕೂಡ ಸಂಗ್ರಹಿಸುತ್ತಾರೆ.

ಕ್ರಿಕೆಟ್ ಆಟ ಈಗ ಒಂದು ಮನರಂಜನೆಯ ಆಟ ಎಂದರೆ ತಪ್ಪಾಗಲಾರದು
ಕ್ರಿಕೆಟ್

ಒಂದು ವೇಳೆ ಹತ್ತೂ ಬ್ಯಾಟ್ಸ್‌ಮನ್‌ಗಳು ಔಟ್ ಆಗುವುದಕ್ಕಿಂತ ಮುನ್ನವೆ ಒಂದು ಇನ್ನಿಂಗ್ಸ್ ಮುಕ್ತಾಯವಾದರೆ ಆಗ ಇಬ್ಬರು “ನಾಟ್ ಔಟ್” ಬ್ಯಾಟ್ಸ್‌ಮನ್‌ಗಳು ಉಳಿಯುತ್ತಾರೆ. ಒಂದು ಇನ್ನಿಂಗ್ಸ್ ಮೂರು ಕಾರಣಗಳಿಂದಾಗಿ ಮುಂಚಿತವಾಗಿಯೇ ಕೊನೆಗೊಳ್ಳಬಹುದು: ಬ್ಯಾಟಿಂಗ್ ತಂಡದ ನಾಯಕ ಇನ್ನಿಂಗ್ಸ್ ಮುಕ್ತಾಯಗೊಂಡಿದೆ ಎಂದು ನಿರ್ಣಯಿಸಿದ್ದರೆ ಅಥವಾ ಬ್ಯಾಟಿಂಗ್ ತಂಡ ತನ್ನ ಗುರಿಯನ್ನು ಮುಟ್ಟಿ ಆಟವನ್ನು ಗೆದ್ದಿದ್ದರೆ, ಅಥವಾ ಆಟ ಹವಾಮಾನ ವೈಪರಿತ್ಯ ಅಥವಾ ಸಮಯದ ಅಭಾವದಿಂದ ಮುಂಚಿತವಾಗಿಯೆ ಕೊನೆಗೊಂಡಿದ್ದರೆ.ಸೀಮಿತ ಒವರುಗಳ ಕ್ರಿಕೆಟ್‌ನಲ್ಲಿ, ನೀಡಲ್ಪಟ್ಟ ಕೊನೆಯ ಒವರು ಬೌಲ್ ಮಾಡುವವರೆಗೂ ಇಬ್ಬರು ಬ್ಯಾಟ್ಸ್‌ಮನ್‌ಗಳು ಮೈದಾನದಲ್ಲಿ ಇರಬಹುದಾಗಿದೆ.

ಬೌಲರ್ ಆರು ಎಸೆತಗಳ ಒಂದು ಗುಂಪನ್ನು ಬೌಲ್ ಮಾಡುತ್ತಾನೆ.ಆ ಆರು ಬಾಲುಗಳ ಪ್ರತೀ ಗುಂಪನ್ನು ಒಂದು ಒವರ್ ಎಂದು ಕರೆಯುವರು. ತೀರ್ಪುಗಾರ “ಒವರ್” ಎಂದು ಹೇಳಿದಾಗ ಅದು ಕೊನೆಗೊಳ್ಳುತ್ತದೆ. ಯಾವಾಗ ಈ ಆರು ಬಾಲುಗಳನ್ನೂ ಬೌಲ್ ಮಾಡಲಾಗುತ್ತದೆಯೊ ಆಗ ಮತ್ತೊಬ್ಬ ಬೌಲರ್ ಇನ್ನೊಂದು ತುದಿಯಿಂದ ಬೌಲ್ ಮಾಡಲು ತಯಾರಾಗುತ್ತಾನೆ ಮತ್ತು ಕ್ಷೇತ್ರ ರಕ್ಷಣಾ ತಂಡ ಬೌಲಿಂಗ್ ತುದಿಯನ್ನು ಬದಲಾಯಿಸುತ್ತಿರುತ್ತದೆ.ಒಬ್ಬ ಬೌಲರ್ ಒಂದೇ ಬಾರಿಗೆ ಅನುಕ್ರಮವಾಗಿ ಎರಡು ಒವರುಗಳನ್ನು ಬೌಲ್ ಮಾಡುವಹಾಗಿಲ್ಲ, ಅದಾಗ್ಯೂ ಒಬ್ಬ ಬೌಲರ್ ಹಲವಾರು ಒವರುಗಳನ್ನು ಪಿಚ್‌ನ ಒಂದೇ ತುದಿಯಿಂದ ಎಸೆಯಬಹುದಾಗಿದೆ.

ಒಂದು ತಂಡ ಹನ್ನೊಂದು ಜನ ಆಟಗಾರರನ್ನು ಒಳಗೊಂಡಿರುತ್ತದೆ. ಆತನ ಅಥವಾ ಅವಳ ಪ್ರಾಥಮಿಕ ಕುಶಲತೆಗೆ ಅನುಗುಣವಾಗಿ ಆಟಗಾರರನ್ನು ಪರಿಣತ ಬ್ಯಾಟ್ಸ್‌ಮನ್ ಅಥವಾ ಬೌಲರ್ ಎಂದು ವರ್ಗೀಕರಿಸಲಾಗುತ್ತದೆ.ಒಂದು ಉತ್ತಮ ಸಮತೋಲನ ಇರುವ ತಂಡವು ಸಾಮಾನ್ಯವಾಗಿ ಐದು ಅಥವಾ ಆರು ಪರಿಣತ ಬ್ಯಾಟ್ಸ್‌ಮನ್‌ಗಳನ್ನು ಮತ್ತು ನಾಲ್ಕು ಅಥವಾ ಐದು ಪರಿಣತ ಬೌಲರ್‌ಗಳನ್ನು ಹೊಂದಿರುತ್ತದೆ.

ಫೀಲ್ಡಿಂಗ್ ಸ್ಥಿತಿಯ ಪ್ರಾಮುಖ್ಯತೆಯ ಕಾರಣದಿಂದಾಗಿ ತಂಡ ಸಾಮಾನ್ಯವಾಗಿ ಒಬ್ಬ ಪರಿಣತ ವಿಕೇಟ್ ಕೀಪರ್‌ನನ್ನೂ ಕೂಡ ಒಳಗೊಂಡಿರುತ್ತದೆ. ಪ್ರತಿಯೊಂದು ತಂಡಕ್ಕೂ ಒಬ್ಬ ನಾಯಕನಿದ್ದು ಚತುರ ನಿರ್ಧಾರ ತೆಗೆದುಕೊಳ್ಳುವಲ್ಲಿ ಅಂದರೆ ಬ್ಯಾಟಿಂಗ್ ಸರತಿಯನ್ನು ನಿರ್ಧರಿಸುವ, ಫೀಲ್ಡರ್‌ಗಳನ್ನು ಸೀಮಿತ ಸ್ಥಳಕ್ಕೆ ನಿಯೋಗಿಸುವ ಮತ್ತು ಬೌಲರ್‌ಗಳ ಸರತಿಯನ್ನು ಬದಲಾಯಿಸುವ ಸಂಪೂರ್ಣ ಜವಾಬ್ಧಾರಿಯನ್ನು ಹೊಂದಿರುತ್ತಾನೆ.

ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಪರಿಣತಿಯನ್ನು ಹೊಂದಿರುವ ಆಟಗಾರನನ್ನು ಆಲ್ ರೌಂಡರ್ ಎಂದು ಕರೆಯಲಾಗುತ್ತದೆ. ಬ್ಯಾಟಿಂಗ್ ಹಾಗೂ ವಿಕೇಟ್ ಕೀಪಿಂಗ್‌ ಎರಡರಲ್ಲೂ ಪರಿಣತಿಯನ್ನು ಹೊಂದಿರುವ ಆಟಗಾರನನ್ನು “ವಿಕೇಟ್ ಕೀಪರ್/ಬ್ಯಾಟ್ಸ್‌ಮನ್” ಅಥವಾ ಕೆಲವೊಮ್ಮೆ ಒಂದು ರೀತಿಯಲ್ಲಿ ಆಲ್ ರೌಂಡರ್ ಎಂದೂ ಕರೆಯಲಾಗುತ್ತದೆ.

ನಿಜವಾದ ಆಲ್ ರೌಂಡರ್‌ಗಳು ಕಡಿಮೆ ಸಂಖ್ಯೆಯಲ್ಲಿದ್ದಾರೆ, ಕಾರಣ ಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯ ಆಟಗಾರರು ಬ್ಯಾಟಿಂಗ್ ಅಥವಾ ಬೌಲಿಂಗ್ ಒಂದರಲ್ಲಿಯೇ ಕೌಶಲ್ಯತೆಯನ್ನು ಹೊಂದಿರುತ್ತಾರೆ.
ರನ್-ಅಪ್‌ ವಿಧಾನದ ಮೂಲಕ ಬೌಲರ್ ತನ್ನ ಎಸೆತವನ್ನು ಪೂರ್ಣಗೊಳಿಸುತ್ತಾನೆ, ಆದಾಗ್ಯೂ ಕೆಲವು ನಿಧಾನಗತಿಯ ಬೌಲರ್‌ಗಳು ಎರಡು ಹೆಜ್ಜೆಗಿಂತ ಹೆಚ್ಚಿಗೆ ಇಲ್ಲದ ದೂರದಿಂದ ಬೌಲ್ ಮಾಡುತ್ತಾರೆ.

ಫೀಲ್ಡಿಂಗ್ ವಿಭಾಗದಲ್ಲಿ ತಂಡದ ನಾಯಕ ಅತ್ಯಂತ ಪ್ರಮುಖ ಸದಸ್ಯನಾಗಿರುತ್ತಾನೆ, ಯಾರು ಬೌಲ್ ಮಾಡಬೇಕು ಎಂಬುದನ್ನು ಒಳಗೊಂಡಂತೆ ಎಲ್ಲಾ ವಿಧದ ಕೌಶಲ್ಯವನ್ನು ಈತನೇ ನಿರ್ಧರಿಸುತ್ತಾನೆ. ಸಾಮಾನ್ಯವಾಗಿ ಬೌಲರ್‌ ಜೊತೆಗಿನ ಸಮಾಲೋಚನೆಯ ಮೂಲಕ “ಫೀಲ್ಡ್ ಸಂಯೋಜನೆಯನ್ನು” ಮಾಡುವ ಸಂಪೂರ್ಣ ಜವಾಬ್ಧಾರಿಯನ್ನು ಈತನೆ ಹೊಂದಿರುತ್ತಾನೆ. ಕ್ರಿಕೆಟ್‌ನ ಎಲ್ಲಾ ವಿಧಾನಗಳಲ್ಲಿ, ಒಂದು ವೇಳೆ ಪಂದ್ಯದ ಸಮಯದಲ್ಲಿ ಫೀಲ್ಡ್‌ರ್ ಗಾಯಕ್ಕೊಳಗಾದರೆ ಅಥವಾ ಅಸ್ವಸ್ಥನಾದರೆ ಆತನ ಬದಲಿಗೆ ಒಬ್ಬ ಸಬ್ಸ್ಟಿಟ್ಯೂಟ್ ಫೀಲ್ಡ್ ಮಾಡಲು ಅವಕಾಶ ನೀಡಲಾಗುವುದು. ಸಬ್ಸ್ಟಿಟ್ಯೂಟ್ ಫೀಲ್ಡ್ ಮಾಡುವಂತಿಲ್ಲ, ಈತನು ನಾಯಕನ ಹಾಗೆ ಕಾರ್ಯನಿರ್ವಹಿಸಬಹುದು ಅಥವಾ ವಿಕೇಟ್ ರಕ್ಷಣೆ ಮಾಡಿಕೊಳ್ಳಬಹುದಾಗಿದೆ. ಗಾಯಗೊಂಡ ಆಟಗಾರ ಸಂಪೂರ್ಣ ಗುಣಗೊಂಡು ಆಟಕ್ಕೆ ಮತ್ತೆ ಹಿಂತಿರುಗಿದಾಗ ಸಬ್ಸ್ಟಿಟ್ಯೂಟ್ ಮೈದಾನವನ್ನು ಬಿಟ್ಟು ಹೋಗಬೇಕಾಗುತ್ತದೆ.

ತಂಡದ ನಾಯಕನಿಂದ ನಿರ್ಧರಿಸಲ್ಪಟ್ತ, ಬ್ಯಾಟಿಂಗ್ ಸರತಿಯಂತೆ ಬ್ಯಾಟ್ಸ್‌ಮನ್‌ಗಳು ಬ್ಯಾಟ್ ಮಾಡಲು ಮೈದಾನಕ್ಕೆ ಇಳಿಯುತ್ತಾರೆ. ಮೊದಲ ಇಬ್ಬರು ಬ್ಯಾಟ್ಸ್‌ಮನ್‌ಗಳು -“ಆರಂಭಿಕ ಆಟಗಾರರು”- ಸಾಮಾನ್ಯವಾಗಿ ಹೊಸ ಬಾಲನ್ನು ಬಳಸುವ ಅತ್ಯಂತ ವೇಗದ ಬೌಲರ್‌ನಿಂದ ಹೆಚ್ಚು ಪ್ರತಿಕೂಲವಾದ ಎಸೆತವನ್ನು ಎದುರಿಸುತ್ತಾರೆ. ಬ್ಯಾಟಿಂಗ್‌ನ ಮೇಲಿನ ಸ್ಥಳವನ್ನು ಸಾಮಾನ್ಯವಾಗಿ ತಂಡದಲ್ಲಿನ ಅತ್ಯಂತ ಸಮರ್ಥ ಬ್ಯಾಟ್‌ಮನ್‌ಗಳಿಗೆ ನೀಡಲಾಗುತ್ತದೆ, ಮತ್ತು ಹೆಚ್ಚು ಪರಿಣತರಲ್ಲದ ಬ್ಯಾಟ್ಸ್‌ಮನ್‌ಗಳು ಲಕ್ಷಣಿಕವಾಗಿ ಕೊನೆಯಲ್ಲಿ ಬ್ಯಾಟ್ ಮಾಡುತ್ತಾರೆ. ಮೊದಲೇ ಘೋಷಿಸಲ್ಪಟ್ಟ ಬ್ಯಾಟಿಂಗ್ ಸರತಿ ಖಡ್ಡಾಯವಾಗಿರಬೇಕಿಲ್ಲ ಮತ್ತು ಯಾವಾಗ ತಂಡ ತನ್ನ ವಿಕೇಟ್‌ಗಳನ್ನು ಕಳೆದುಕೊಳ್ಳುವುದೊ ಆಗ ಇನ್ನೂ ಬ್ಯಾಟ್ ಮಾಡದೇ ಇರುವ ಯಾವ ಆಟಗಾರನನ್ನಾದರೂ ಬ್ಯಾಟ್ ಮಾಡಲು ಕಳುಹಿಸಬಹುದು.

ಒಬ್ಬ ನಿಪುಣ ಬ್ಯಾಟ್ಸಮನ್ ರಕ್ಷಣಾತ್ಮಕ ಮತ್ತು ಆಕ್ರಮಣಕಾರಿ ಎರಡೂ ರೀತಿಯಲ್ಲಿ ತನ್ನ ಬಲವಾದ ಹೊಡೆತಗಳನ್ನ ಬಳಸಿಕೊಳ್ಳಬಹುದು. ಇದರ ಉದ್ದೇಶವೆಂದರೆ,ಬ್ಯಾಟ್‌ನ ಚಪ್ಪಟೆ ಬಾಗದಿಂದ ಬಾಲನ್ನು ಹೆಚ್ಚು ಪರಿಣಾಮಕಾರಿಯಾಗಿ ಮೈದಾನದ ಮೇಲ್ಮೈಗೆ ಸಮತಲವಾಗಿ ಹೋಗುವಂತೆ ಹೊಡೆಯುವುದು. ಒಂದು ವೇಳೆ ಬಾಲ್ ಬ್ಯಾಟಿನ ಅಂಚಗೆ ತಾಗಿದರೆ ಅದನ್ನು “ಎಡ್ಜ್” ಎಂದು ಕರೆಯಲಾಗುವುದು. ಬ್ಯಾಟ್ಸ್‌ಮನ್ ಯಾವಾಗಲೂ ಬಾಲನ್ನು ಹೆಚ್ಚು ಬಲವಾಗಿ ಹೊಡೆಯಲು ಯತ್ನಿಸುವುದಿಲ್ಲ, ಮತ್ತು ಒಬ್ಬ ಒಳ್ಳೆಯ ಆಟಗಾರ ತನ್ನ ಮಣಿಕಟ್ಟನ್ನು ತಿರುಗಿಸಿ ಕೇವಲ ಚತುರ ಹೊಡೆತಗಳ ಮೂಲಕ, ಅಥವಾ ಸರಳವಾಗಿ ಬಾಲನ್ನು “ತಡೆದು” ಅದು ಫೀಲ್ಡರ್‌ನಿಂದ ದೂರ ಓಡುವತೆ ಮಾಡುವುದರ ರನ್‌ಗಳನ್ನು ತೆಗೆದುಕೊಳ್ಳಬಹುದು.ಇನ್ನೂ ಹಲವಾರು ನಿಯಮಗಳು ಇವೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕುವೆಂಪು

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ

ಹರಿ ಭಕ್ತ ಪ್ರಹ್ಲಾದ

ಹರಿ ಭಕ್ತ ಪ್ರಹ್ಲಾದ