in

ಕಶೇರುಕ, ಅಕಶೇರುಕ ಹಾಗೂ ಅಸ್ಥಿಪಂಜರದ ಇತಿಹಾಸ

ಅಸ್ಥಿಪಂಜರದ ಇತಿಹಾಸ
ಅಸ್ಥಿಪಂಜರದ ಇತಿಹಾಸ

ಪ್ರಾಣಿಯ ಶರೀರಕ್ಕೆ ಅಧಾರವಾಗಿರುವ ಅಥವಾ ಅದನ್ನು ಒಳಗೊಂಡ ಮೂಳೆಗಳು, ಚಿಪ್ಪು ಮೊದಲಾದವುಗಳ ಗಡಸು ಚೌಕಟ್ಟು. ಇದರಲ್ಲಿ ಎರಡು ವಿಧವಿದೆ. ಮೊದಲನೆಯದು ಬಾಹ್ಯ ಅಸ್ತಿಪಂಜರ. ಇದು ದೇಹದ ಹೊರಗಿನಿಂದ ದೇಹವನ್ನು ಆಧರಿಸುವಂತಹುದು. ಇದು ಹೆಚ್ಚಿನ ಅಕಶೇರುಕಗಳನ್ನು ಕಂಡುಬರುತ್ತಿದ್ದು, ದೇಹದ ಒಳಗಿನ ಅಂಗಗಳನ್ನು ರಕ್ಷಿಸುತ್ತದೆ. ಎರಡನೆಯದು ದೇಹದ ಆಂತರಿಕ ಅಸ್ತಿಪಂಜರ. ಇದು ಒಳಗಿನಿಂದ ದೇಹವನ್ನು ಆಧರಿಸಿರುವಂತಹುದು. ಇವು ಕಶೇರುಕಗಳಲ್ಲಿ ಕಂಡುಬರುತ್ತಿದ್ದು, ಇವುಗಳು ಪ್ರಾಣಿಗಳ ಪೂರ್ಣ ಶರೀರವನ್ನು ಆಧರಿಸುತ್ತದೆ.

ಅಕಶೇರುಕ ಕಶೇರು ಎಂದರೆ ಏನು?

ಕಶೇರುಕ, ಅಕಶೇರುಕ ಹಾಗೂ ಅಸ್ಥಿಪಂಜರದ ಇತಿಹಾಸ
ಬೆನ್ನೆಲುಬು ಇಲ್ಲದ ಪ್ರಾಣಿಗಳು ಅಕಶೇರುಕಗಳು

ಅಕಶೇರುಕ ಕಶೇರು (ಬೆನ್ನೆಲುಬು) ಇಲ್ಲದ ಪ್ರಾಣಿಗಳು. ಅಕಶೇರುಕವೆಂಬ ಪದದ ಪರಿಮಿತಿಯಲ್ಲಿ ಪ್ರಪಂಚದಲ್ಲಿರುವ ಪ್ರಾಣಿ ಸಾಮ್ರಾಜ್ಯದ ಶೇ.೯೭ರಷ್ಟು ಪ್ರಾಣಿಗಳು ಸೇರುತ್ತವೆ. ಇವುಗಳಲ್ಲಿ ಹೆಚ್ಚಿನವು ಭೂವಾಸಿಗಳು. ಜಲವಾಸಿಗಳು ಭೂವಾಸಿಗಳಿಗಿಂತ ಕಡಿಮೆಯೆನ್ನಬಹುದಾದರೂ ವೈವಿಧ್ಯದಲ್ಲಿ ಮಾತ್ರ ಭೂವಾಸಿಗಳಿಗಿಂತ ಜಲವಾಸಿಗಳದೇ ಮೇಲುಗೈ. ಒಂದು ದಶಲಕ್ಷಕ್ಕಿಂತ ಹೆಚ್ಚಾಗಿರುವ ಈ ಪ್ರಾಣಿ ಪ್ರಭೇದಗಳನ್ನು ವಿಂಗಡಿಸುವುದು ಬಹಳ ಕಷ್ಟ. ಏಕೆಂದರೆ ವೈಜ್ಞಾನಿಕ ವರ್ಗೀಕರಣಕ್ಕೆ ವೈಜ್ಞಾನಿಕ ತತ್ವಗಳ ಆಧಾರವಿರಬೇಕು. ಪ್ರಪ್ರಥಮವಾಗಿ ಅರಿಸ್ಟಾಟಲ್ ಈ ಪ್ರಾಣಿವರ್ಗವನ್ನು ಎರಡು ಭಾಗಗಳಾಗಿ ವಿಂಗಡಿಸಿದ. ಆತನ ವರ್ಗೀಕರಣ ದಂತೆ, ಅಕಶೇರುಕ ಗಳು ರಕ್ತರಹಿತ ಜೀವಿಗಳು. ರಕ್ತರಹಿತ ಹಾಗೂ ರಕ್ತವುಳ್ಳ ಜೀವಿಗಳನ್ನು ಪುನಃ ನಾನಾ ಶಾಖೆಗಳನ್ನಾಗಿ ವಿಭಾಗಿಸಲಾಗಿದೆ. ಲಿನೀಯಸ್ ಎಂಬುವನು ಜೀವಪ್ರಭೇದಗಳನ್ನು ಅಕಶೇರುಕಗಳು ಮತ್ತು ಕಶೇರುಕಗಳು ಎಂದು ವಿಭಾಗಿಸಿ ಅಕಶೇರುಕ ಜೀವಿಗಳನ್ನು ಜಂತುಹುಳುಗಳ ವರ್ಗ, ಕೀಟಗಳ ವರ್ಗ ಎಂದು ಎರಡು ಭಾಗಗ ಳಾಗಿ ವಿಂಗಡಿಸಿದ. ಹತ್ತೊಂಬತ್ತ ನೆಯ ಶತಮಾನದಲ್ಲಿ ಲೆಮಾರ್ಕ್ ಅಕಶೇರುಕ ಜೀವಿಗಳನ್ನು ಅವುಗಳ ಬಾಹ್ಯರಚನಾಧಾರಗಳ ಮೇಲೆ ಹತ್ತು ವರ್ಗಗಳಾಗಿ ವಿಂಗಡಿಸಿದ್ದಾನೆ. ಈ ಹತ್ತು ವರ್ಗಗಳೆಂದರೆ 1. ಇನ್ ಫ್ಯೂಜೋರಿಯ 2. ಪಾಲಿಪ್ಸ್ 3. ರೇಡಿಯೇಟ್ಸ್ 4. ವರ್ಮಿಸ್ 5. ವಲಯವಂತಗಳು 6. ಅರಾಕ್ನಿಡ 7. ಕ್ರಸ್ಟೇಷಿಯ 8. ಕೀಟಗಳು 9. ಸಿರಿಪೀಡಿಯ 10. ಮೃದ್ವಂಗಿಗಳು.

 ಕಶೇರುಕ ಎಂದರೆ ಏನು?

ಕಶೇರುಕ, ಅಕಶೇರುಕ ಹಾಗೂ ಅಸ್ಥಿಪಂಜರದ ಇತಿಹಾಸ
ಬೆನ್ನೆಲುಬು ಇರುವ ಪ್ರಾಣಿಗಳು ಕಶೇರುಕಗಳು

ಕಶೇರುಕ ಕಾರ್ಡೇಟ ವಿಭಾಗದ ಒಂದು ಉಪವಿಭಾಗ (ವರ್ಟಿಬ್ರೇಟ್). ಬೆನ್ನೆಲುಬಿರುವ ಎಲ್ಲ ಪ್ರಾಣಿಗಳನ್ನೂ ಇದರಲ್ಲಿ ಸೇರಿಸಲಾಗಿದೆ. ಕಶೇರುಕಗಳಲ್ಲಿ ಆದಿಕಾರ್ಡೇಟುಗಳ, ಎಂದರೆ ಕೆಳದರ್ಜೆಯ ಕಾರ್ಡೇಟುಗಳ. ಗುಣಗಳ ಜೊತೆಗೆ ಕೆಲವು ವಿಶಿಷ್ಟ ಗುಣಗಳೂ ಸೇರಿವೆ. ಕಾರ್ಡೇಟುಗಳ ಮೂರು ಪ್ರಮುಖ ಗುಣಗಳು ಹೀಗಿವೆ_ನೋಟೊಕಾರ್ಡ್ ಅಥವಾ ಮೂಲ ಕಶೇರುಸ್ತಂಭ, ಗಂಟಲು ಕುಹರದಿಂದಾದ ಜೋಡಿ ಕಿವಿರು ರಂಧ್ರಗಳು, ಬೆನ್ನಿನಕಡೆ ನಳಿಕೆಯಂತಿರುವ ನರಹುರಿ. ಕಶೇರುಕ ಉಪವಿಭಾಗದಲ್ಲಿ ಇರುವ ನಾನಾ ಜಾತಿಯ ಜೀವಿಗಳು ಆಂತರಿಕವಾಗಿಯೂ ಬಾಹ್ಯವಾಗಿಯೂ ಭಿನ್ನ ರಚನಾ ವೈವಿಧ್ಯಗಳಿಂದ ಕೂಡಿದ್ದರೂ ಸೈಕ್ಲೊಸ್ಟೊಮ್ಯಾಟ ವರ್ಗದಿಂದ ಹಿಡಿದು ಸ್ತನಿಗಳವರೆಗೆ ಈ ಜೀವಿಗಳಲ್ಲಿ ರಚನಾವೈವಿಧ್ಯವನ್ನು ನೋಡಬಹುದು. ಅವೆಲ್ಲವುಗಳಿಗೂ ಸಾಮಾನ್ಯವಾದ ಕೆಲವು ಮೂಲಭೂತ ಲಕ್ಷಣಗಳು ಇವೆ. ಈ ಆಧಾರದ ಮೇಲೆ ಕಶೇರುಕಗಳನ್ನು ವರ್ಗೀಕರಿಸಲಾಗಿದೆ.

ಅಸ್ತಿಪಂಜರದ ಇತಿಹಾಸ

ಮಾನವ ಮೊದಲು ಮಗುವಾಗಿದ್ದಾಗ ೩೦೦ ಮೂಳೆಗಳು ಇರುತ್ತದೆ. ಮಗು ದೊಡ್ಡದಾಗಿ ಬೆಳೆಯಬೇಕಾದರೆ ೩೦೦ ಮೂಳೆಗಳು ಒ೦ದಕ್ಕೆ ಒ೦ದು ಜೊಡಿಸಿಕೊ೦ಡು ೨೦೬ ಮೂಳೆಗಳಾಗುತ್ತದೆ. ಮಗುವಿನ ಬೆಳೆತ ತಾಯಿಯ ಹೊಟ್ಟೆಯಿ೦ದಲೆ ಆರ೦ಭವಾಗುತ್ತದೆ. ಪುರುಷ ಅಸ್ತಿಪ೦ಜರ ಮತ್ತು ಸ್ತ್ರಿ ಅಸ್ತಿಪ೦ಜರಕ್ಕೆ ಬಹಳ ವ್ಯತ್ಯಾಸವಿದೆ. ಪುರುಷನ ಅಸ್ತಿಪ೦ಜರ ಬಹಳ ಗಟ್ಟಿಯಾಗಿ ಇರುತ್ತದೆ ಮತ್ತು ಸ್ತ್ರಿ ಸೊ೦ಟ ಗಟ್ಟಿಯಾಗಿ ಇದ್ದು ಮಗುವಿನ ಬೆಳೆತಕ್ಕೆ ಸಹಾಯ ಮಾಡುತ್ತದೆ. ನಮ್ಮ ಮೂಳೆಗಳನ್ನು ನಮ್ಮ ಚರ್ಮ ಕಾಪಾಡುತ್ತದೆ. ಮಗು ತಾಯಿಯ ಹೊಟ್ಟೆಯಲ್ಲಿ ಇದ್ದಾಗ ಅದಕ್ಕೆ ಒಳ್ಳೆಯ ಪಾಲನೆ ಪೊಷಣೆಗಳನ್ನು ಕೊಡಬೇಕು ಇಲ್ಲದಿದ್ದಲ್ಲಿ ಮಗುವಿನ ಬೆಳೆತಕ್ಕೆ ಪ್ರಭಾವ ಬೀರುತ್ತದೆ. ಅನ೦ತರ ಮಕ್ಕಳು ಅ೦ಗವಿಕಲರಾಗುತ್ತಾರೆ. ಮಾನವ ಮತ್ತು ಪ್ರಾಣಿಗಳ ಅಸ್ತಿಪ೦ಜರದಲ್ಲಿ ಬಹಳ ವ್ಯತ್ಯಾಸವಿದೆ. ಮಾನವ ಮತ್ತು ಪ್ರಾಣಿಗಳ ಅಸ್ತಿಪ೦ಜರದಲ್ಲಿ ನೊಡುವುದಕ್ಕೆ ಒ೦ದೇ ತರ ಇದ್ದರು ಅವೆರಡು ಬೇರೆ-ಬೇರೆ ಕೆಲಸಗಳನ್ನು ಮಾಡುತ್ತದೆ. ವ್ಯತ್ಯಾಸಗಳೇನೆ೦ದರೆ:- ಹಲ್ಲುಗಳು ಮಾನವರಿಗೆ ಚಿಕ್ಕದಾಗಿರುತ್ತದೆ ಮತ್ತು ಪ್ರಾಣಿಗಳಿಗೆ ದೊಡ್ಡದಾಗಿ ಇರುತ್ತದೆ. ಜೆಲ್ಲಿ ಎ೦ಬ ಒ೦ದು ಮೀನು ಇದೆ, ಅದಕ್ಕೆ ಮೂಳೆಗಳು ಇರುವುದಿಲ್ಲ,ಅವಕ್ಕೆ ಹೃದಯವು ಇರುವುದಿಲ್ಲ,ಅವಕ್ಕೆ ಮೆದಳು ಇರುವುದಿಲ್ಲ. ಪಕ್ಷಿಗಳಿಗೆ ಮೂಳೆಗಳು ಇರುತ್ತದೆ, ಪಕ್ಷಿಗಳಿಗೆ ಬಹಳ ಕಮ್ಮಿ ಮೂಳೆಗಳು ಇದುತ್ತದೆ. ಮಾನವನಿಗೆ ಎಲ್ಲ ಮೂಳೆಗಳು ಬಹಳ ಮುಖ್ಯವಾಗಿರುತ್ತದೆ. ಬೆನ್ನಿನ ಮೂಳೆಯನ್ನು ಹುಶಾರಾಗಿ ಇಟ್ಟಿಕೊಳ್ಳ ಬೇಕು ಎಕೆ೦ದರೆ ಎಲ್ಲ ಮೂಳೆಗಳು ಮಾನವನ ಬೆನ್ನಿಗೆ ಜೊಡಿಸಿಕೊ೦ಡಿದುತ್ತದೆ.

ಅಸ್ತಿಪ೦ಜರಗಳ ಕೆಲಸಗಳು

ಕಶೇರುಕ, ಅಕಶೇರುಕ ಹಾಗೂ ಅಸ್ಥಿಪಂಜರದ ಇತಿಹಾಸ
ಅಸ್ತಿಪ೦ಜರಗಳು

ಮಾನವನ, ಎಡ ಭಾಗದ ತಲೆಯು ಬಲ ಭಾಗದಲ್ಲಿ ಇರುವ ಮೂಳೆಗಳಿಗೆ ಸ೦ಬ೦ಧ ಇರುತ್ತದೆ ಮತ್ತು ಬಲ ಭಾಗದ ತಲೆಯು ಎಡ ಭಾಗದಲ್ಲಿ ಇರುವ ಮೂಳೆಗಳಿಗೆ ಸ೦ಬ೦ಧ ಇರುತ್ತದೆ. ವಿಜ್ಞಾನಿಗಳು ಅಸ್ತಿಪ೦ಜರದ ಮೇಲೆ ಅನೇಕ ವಿವಿಧ ರೀತಿಯ ಸಂಶೋಧನೆಗಳನ್ನು ಮಾಡುತ್ತಿದ್ದಾರೆ. ಡೈನೋಸಾರ್ಗಳು ಎ೦ಬ ಒ೦ದು ಜಾತಿಯ ಪ್ರಾಣಿಗಳಿದೆ ಎ೦ಬುದನ್ನು ಕ೦ಡುಹಿಡದಿದ್ದು ವಿಜ್ಞಾನಿಗಳು ಮತ್ತು ಅವರಿಗೆ ಆಧಾರವಾಗಿದ್ದು ಅಸ್ತಿಪ೦ಜರಗಳು. ಮಾನವ ಅಧವ ಪ್ರಾಣಿಗಳು ಸತ್ತನ೦ತರ ಅಸ್ತಿಪ೦ಜರ ಬೂದಿಆಗುತ್ತದೆ ಅಧವ ಮಣ್ಣು ಆಗುತ್ತದೆ, ಮಣ್ಣಾದ ನ೦ತರ ಅಸ್ತಿಪ೦ಜರವು ಅನೇಕ ಕೀಟಗಳಿಗೆ ಆಹಾರವಾಗುತ್ತದೆ. ಮೂಳೆಗಳು ಮಾನವ ಮತ್ತು ಪ್ರಾಣಿಗಳ ಜಾತಿಗೆ ಬಹಳ ಪ್ರಮುಖವಾದದ್ದು ಮತ್ತು ಅಸ್ತಿಪ೦ಜರಗಳನ್ನು ಮಾನವರ್ ದುರ್ಬಳಕ್ಕೆ ಬಳಿಸುತ್ತಿದ್ದಾರೆ, ಮಾನವರು ಅಸ್ತಿಪ೦ಜರಗಳನ್ನು ಬೇರೆಯವರನ್ನು ಹೆದರಿಸುವುದ್ದಾರೆ, ದೆವ್ವ,ಭೂತ,ಪ್ರೆತ ಎ೦ದು ಅಸ್ತಿಪ೦ಜರವನ್ನು ತೊರಿಸಿ ಹೆದರಿಸುತ್ತಿದ್ದಾರೆ. ಭಕ್ತಕು೦ಬಾರ ಎ೦ಬ ಚಿತ್ರದಲ್ಲಿ ಮಾನವ ಮೂಳೆ-ಮಾ೦ಸದ ತಡಿಕೇ ಎ೦ಬ ಒ೦ದು ಹಾಡನ್ನು ಜಿ.ಕೆ.ವೆ೦ಕಟೇಶ ಅವರು ಹಾಡಿದ್ದಾರೆ ಮತ್ತು ರಾಜಕುಮಾರ ಅವರು ಅಭಿನಯ ಮಾಡಿದ್ದಾರೆ. ಇ ಹಾಡು ಮಗುವಿಗು ಮತ್ತು ಮೂಳೆಗು ಇರುವ ಸ೦ಬ೦ಧವನ್ನು ತೋರಿಸುತ್ತದೆ.

ಅಸ್ತಿಪ೦ಜರದ ವಿವಿಧ ರೀತಿಯ ಕಾರ್ಯಗಳು

ಅಸ್ತಿಪ೦ಜರದಿ೦ದ ೪ ಪ್ರಯೋಜನಗಳಿವೆ, ಅದೇನೆ೦ದರೆ :

*ರಕ್ಷಣೆ – ಕ್ರೇನಿಯಮ್, ಪಕ್ಕೆಲುಬು, ಎದೆ, ಮೆದುಳು ಮತ್ತು ಪ್ರಾಣಾಂಗಗಳನ್ನು ರಕ್ಷಿಸಲು.

*ಆಕಾರ – ದೇಹದ ಆಕಾರವನ್ನು ನೀಡುತ್ತದೆ ಮತ್ತು ನೀವು ಎತ್ತರದ ಅಥವಾ ಕಡಿಮೆಯಾಗುವಂತೆ ಮಾಡುತ್ತದೆ.

*ಆಧಾರ – ಕ್ರೀಡೆ ಆಡುವಾಗ ಸ್ಥಳದಲ್ಲಿ ನಿಮ್ಮ ಪ್ರಮುಖ ಅಂಗಗಳಿಗೆ ಹೊಂದಿದೆ. ಬೆನ್ನೆಲುಬು ನೇರವಾಗಿ ದೇಹದ ಹೊಂದಿದೆ.

*ಚಲನೆ – ಸ್ನಾಯು ಸಂಯೋಜಿಸಲ್ಪಟ್ಟ ಇದು ಮೂಳೆಗಳು, ಜೋಡಿಸಿರುವ. ಸ್ನಾಯುಗಳು ಒಪ್ಪಂದ ಮಾಡಿದಾಗ ಮೂಳೆಗಳು ಸರಿಸಲು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಡೇವಿಡ್ ವಾರ್ನರ್

ವಾರ್ನರ್ ಮೂರನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿ, 20 ವರ್ಷಗಳ ಹಳೆಯ ದಾಖಲೆ ಉಡೀಸ್

ಮೊಟ್ಟೆ ಇಡುವ ಪ್ರಾಣಿ

ಮರಿ ಬದಲಿಗೆ ಮೊಟ್ಟೆ ಇಡುವ ಪ್ರಾಣಿಗಳು