in ,

ಮಾನವನಿಂದ ಬಳಸಲ್ಪಡುವ ಇಂಧನಗಳು ಹಂತ ಹಂತವಾಗಿ ಬದಲಾಯಿತು

ಮಾನವನಿಂದ ಬಳಸಲ್ಪಡುವ ಇಂಧನಗಳು
ಮಾನವನಿಂದ ಬಳಸಲ್ಪಡುವ ಇಂಧನಗಳು

ಸೌದೆಯು ಮೊಟ್ಟ ಮೊದಲ ಬಾರಿಗೆ ಮಾನವನಿಂದ ಬಳಸಿದ ಇಂಧನವಾಗಿದ್ದು ಅದು ಈಗಲೂ ವಿಶ್ವದೆಲ್ಲೆಡೆ ಪ್ರಮುಖ ಇಂಧನ ಶಕ್ತಿಯ ಮೂಲವಾಗಿ ಬಳಕೆಯಾಗುತ್ತದೆ. ಇಂಧನವು ಒಂದು ಉರಿಯುವ ವಸ್ತು ಇದರ ಪರಿವರ್ತನೆಯಿಂದ ಶಕ್ತಿಯನ್ನು ಪಡೆಯಬಹುದಾಗಿದೆ. ಇದನ್ನು ಕಾಯಿಸಲು ಅಥವಾ ವಸ್ತುಗಳನ್ನು ಚಲಿಸುವಂತೆ ಮಾಡಲು ಇಂಧನವು ರಾಸಾಯನಿಕ ಪ್ರತಿಕ್ರಿಯೆಗಳ ಮೂಲಕ ಶಕ್ತಿ ಬಿಡುಗಡೆ ಮಾಡುತ್ತದೆ; ಉದಾಹರಣೆಗೆ ದಹಿಸುವ ಅಥವಾ ಪರಮಾಣು ಮಾಧ್ಯಮ ಅಂದರೆ ಪರಮಾಣುಗಳ ವಿಭಜನೆ ಇಲ್ಲವೇ ಪರಮಾಣುಗಳು ಪರಿವರ್ತನೆ ಮೂಲಕ ಶಕ್ತಿ ಬಿಡುಗಡೆ ಇದರ ಮಾಧ್ಯಮವಾಗಿದೆ. ಉಪಯುಕ್ತ ಇಂಧನದ ಮಹತ್ವದ ಅಂಶವೆಂದರೆ ಅದರಲ್ಲಿನ ಶಕ್ತಿಯನ್ನು ಶೇಖರಿಸಿ ಅವಶ್ಯ ಬಿದ್ದಾಗ ಮಾತ್ರ ಬಳಸಿಕೊಳ್ಳಬಹುದು, ಅಷ್ಟೇ ಅಲ್ಲದೇ ಈ ಇಂಧನ ಶಕ್ತಿಯನ್ನು ನಿಯಂತ್ರಿಸಿ ಉತ್ತಮ ರೀತಿಯಲ್ಲಿ ಕೆಲಸ ಮಾಡಿಸಿಕೊಳ್ಳಬಹುದಾಗಿದೆ. ಉದಾಹರಣೆಗೆ : ಮಿಥೇನ್, ಪೆಟ್ರೊಲ್ ಮತ್ತು ತೈಲ. ಎಲ್ಲಾ ಇಂಗಾಲ ಮೂಲದ ಜೈವಿಕತೆ ಸೃಷ್ಟಿಗಳು ಅತ್ಯಂತ ಸೂಕ್ಷ್ಮ ಜೀವಾಣುಗಳಿಂದ ಅಂದರೆ ಪ್ರಾಣಿಗಳು ಮತ್ತು ಮಾನವರು ತಮ್ಮಕಾರ್ಯಗಳಿಗೆ ಇಂಧನ ಬಳಸಿಕೊಂಡು ಶಕ್ತಿಯನ್ನು ಬಿಡುಗಡೆ ಮಾಡಿಕೊಳ್ಳುತ್ತವೆ. ಅವುಗಳ ಕೋಶಗಳು ಎಂಜೈಮ್ ಗಳು ರಾಸಾಯನಿಕ ಪ್ರತಿಕ್ರಿಯೆಯೊಂದಿಗೆ ಜೈವಿಕ ಪರಿವರ್ತನೆಗೆ ಒಡ್ದಿಕೊಳ್ಳುತ್ತವೆ. ಈ ಕ್ರಿಯೆಯು ಆಹಾರ ಅಥವಾ ಬೆಳಕಿನಿಂದ ಶಕ್ತಿ ಪಡೆದುಕೊಂಡು ತನ್ನ ಬದುಕಿನ ಚಕ್ರ ಸಾಗುವಂತೆ ಮಾಡುತ್ತದೆ. ಇನ್ನೂ ಹೆಚ್ಕೆಂದರೆ ಮಾನವರು ಹಲವಾರು ತಂತ್ರಜ್ಞಾನಗಳನ್ನು ಅಳವಡಿಸಿ ಒಂದು ಪ್ರಕಾರದ ಇಂಧನವನ್ನು ಇನ್ನೊಂದು ಪ್ರಮಾಣದ, ಪ್ರಕಾರದ ಇಂಧನಕ್ಕೆ ಬದಲಾಯಿಸಿಕೊಳ್ಳುವ ಸಾಮರ್ಥ್ಯ ಪಡೆದಿದ್ದಾರೆ. ಮನುಷ್ಯನ ಶರೀರಕ್ಕೆ ಅಗತ್ಯವಿರುವ ಇಂಧನ ಶಕ್ತಿ ಅಷ್ಟೇ ಅಲ್ಲ ಇನ್ನುಳಿದ ಉದ್ದೇಶಗಳಿಗೆ ಬೇಕಾದ ಹಾಗೆ ಶಕ್ತಿಯನ್ನು ಉಪಯೋಗಿಸಿಕೊಳ್ಳುತ್ತಾರೆ. ಇಂಧನದಿಂದ ಬಿಡುಗಡೆಗೊಂಡ ಶಕ್ತಿಯು ವಿಭಿನ್ನ ಅಳವಡಿಕೆಗೆ ಉಪಯೋಗವಾಗುತ್ತದೆ. ಕಾಯಿಸುವುದರಿಂದ ಹಿಡಿದು ಅಡುಗೆ ಮಾಡಲು, ಶಸ್ತ್ರಾಸ್ತ್ರ, ಆಯುಧದಲ್ಲಿನ ಶಕ್ತಿಗೆ ಇಂಧನ ದಹಿಸುವಿಕೆಯು ಶಕ್ತಿ ಬಿಡುಗಡೆ ಮಾಡಿದರೆ ವಿದ್ಯುತ್ ಉತ್ಪಾದನೆಗೂ ಅನುಕೂಲ ಮಾಡಿ ಅದನ್ನೂ ಇಂಧನದ ಶಕ್ತಿಮೂಲವನ್ನಾಗಿಸುತ್ತದೆ.

ಮಾನವನಿಂದ ಬಳಸಲ್ಪಡುವ ಇಂಧನಗಳು ಹಂತ ಹಂತವಾಗಿ ಬದಲಾಯಿತು
ಸೌದೆಯು ಮೊಟ್ಟ ಮೊದಲ ಬಾರಿಗೆ ಮಾನವನಿಂದ ಬಳಸಿದ ಇಂಧನ

ಶಕ್ತಿ ಮೂಲಗಳು

ಸದ್ಯದ ಬಹಳಷ್ಟು ಇಂಧನಗಳು ತಮ್ಮ ಮೂಲ ಶಕ್ತಿಯನ್ನು ಅತ್ಯಂತ ಕಡಿಮೆ ಪ್ರಮಾಣದ ಮೂಲಗಳಿಂದ ಪಡೆಯುತ್ತಿವೆ. ಬಹಳಷ್ಟು ರಾಸಾಯನಿಕ ಶಕ್ತಿಯು ಜೀವ ಅಥವಾ ಜೈವಿಕ ಮೂಲಗಳಿಂದ ಉತ್ಪಾದಿಸಲಾಗುತ್ತದೆ. ಉದಾಹರಣೆಗೆ ಪಳೆಯುಳಿಕೆ ಅಥವಾ ಭೂಮಿಯಲ್ಲಿ ಅಡಗಿದ ಇಂಧನಗಳು, ಸೌರಶಕ್ತಿಮೂಲಕ ಮತ್ತು ದ್ಯುತಿಸಂಶ್ಲೇಷಣೆ ಮೂಲಕ ಸಸ್ಯವರ್ಗವು ತನ್ನ ಬದುಕಿಗೆ ಬೇಕಾದ ಶಕ್ತಿಯನ್ನು ಒಟ್ಟುಗೂಡಿಸುತ್ತದೆ. ಸೌರ ಶಕ್ತಿಯನ್ನು ವೇಗೋತ್ಕರ್ಷದ ಶಾಖೋತ್ಪನ್ನದ ಸಂಸ್ಕರಣೆ ಮೂಲಕ ಸೂರ್ಯನನ್ನು ನೇರವಾಗಿ ಇಲ್ಲಿ ಬಳಸಿಕೊಳ್ಳಲಾಗುತ್ತದೆ. ವಿಕಿರಣಗಳ ಸಮಕ್ಷೇತ್ರದ ಎಸೊಟೊಪೆಗಳನ್ನು ಪರಮಾಣುಗಳನ್ನು ಸ್ಥಾವರಗಳನ್ನು ಉತ್ತೇಜಿಸಲು ಅವುಗಳಿಗೆ ಶಕ್ತಿ ಮೂಲ ಒದಗಿಸಲು ಸುಪರ್ ನೊವಾ ಸ್ಪೋಟಕಗಳಂತೆ ಬಳಸಲಾಗುತ್ತದೆ. ಪ್ರಾಣಿಗಳು ಮತ್ತು ಮಾನವರಿಗೆ ಆಹಾರವೇ ಅಗತ್ಯ ಇಂಧನದ ಶಕ್ತಿಮೂಲವಾಗಿದೆ.

ರಾಸಾಯನಿಕ

ರಾಸಾಯನಿಕ ಇಂಧನಗಳ ವಸ್ತುಗಳು ತಮ್ಮ ಸುತ್ತಮುತ್ತಲಿರುವ ವಸ್ತುಗಳೊಂದಿಗೆ ಪ್ರತಿಕ್ರಿಯಿಸುವುದರೊಂದಿಗೆ ಶಕ್ತಿ ಬಿಡುಗಡೆ ಮಾಡುವುದಲ್ಲದೇ ಆಕ್ಷಿಡೇಶನ್ (ಆಮ್ಲಜನಕ ಸೇರ್ಪಡೆ) ಕಾರ್ಯವಿಧಾನದ ಮೂಲಕ ಶಕ್ತಿ ಹೊರಹೊಮ್ಮುತ್ತದೆ. ಈ ವಸ್ತುಗಳು ಮಾನವರು ಮೊದಲು ಇಂಧನ ಶಕ್ತಿ ತೆಗೆಯಲು ಬಳಸಿದ ರಾಸಾಯನಿಕ ಪ್ರಕ್ರಿಯೆ ಇದಾಗಿದೆ. ಅಂದರೆ ಇನ್ನೂ ಕೂಡಾ ಪ್ರಧಾನವಾಗಿ ಈ ರಾಸಾಯನಿಕ ಪ್ರತಿಕ್ರಿಯೆಯನ್ನೇ ಬಹಳಷ್ಟು ಸಲ ಉಪಯೋಗಿಸಲಾಗುತ್ತದೆ.

ಜೈವಿಕ ಇಂಧನಗಳು

ಮಾನವನಿಂದ ಬಳಸಲ್ಪಡುವ ಇಂಧನಗಳು ಹಂತ ಹಂತವಾಗಿ ಬದಲಾಯಿತು
ಜೈವಿಕ ಇಂಧನ, ಸ್ಯ-ಜನ್ಯ ವಸ್ಸ್ತುಗಳನ್ನು ಜೈವಿಕ ಇಂಧನಗಳ ಉತ್ಪಾದನೆಗಾಗಿ ಬಳಕೆ ಮಾಡಲಾಗುತ್ತದೆ

ಜೈವಿಕ ಇಂಧನಗಳನ್ನು ವಿಶಾಲ ಅರ್ಥದಲ್ಲಿ ಘನ,ದೃವ ಅಥವಾ ಅನಿಲ ರೂಪದ ಇಂಧನಗಳನ್ನು ಬಯೊಮಾಸ್ ಅಥವಾ ಸೂಕ್ಷ್ಮ ಜೀವಿಗಳ ಮೂಲದಿಂದ ಪಡೆಯಲಾಗುತ್ತದೆ ಎಂದು ವ್ಯಾಖ್ಯಾನಿಸಲಾಗುತ್ತದೆ. ಬಯೊಮಾಸ್ ನ್ನು ನೇರವಾಗಿ ಶಾಖಕ್ಕಾಗಿ ಇಲ್ಲವೇ ಕಾಯಿಸಲು ಇಲ್ಲವೇ ಬಯೊಮಾಸ್ ಇಂಧನ ಶಕ್ತಿಯನ್ನಾಗಿ ಬಳಸಲಾಗುತ್ತದೆ. ಜೈವಿಕ ಇಂಧನವನ್ನು ಇಂಗಾಲದ ಬೃಹತ ಮೂಲಗಳಿಂದ ಪಡೆದುಕೊಳ್ಳಬಹುದಲ್ಲದೇ ಇದು ಪುನ: ಪಡೆದುಕೊಳ್ಳಬಹುದಾದ ಇಂಧನ ಮೂಲವಾಗಿದೆ.

ಉದಾಹರಣೆಗೆ : ಸಸ್ಯಜನ್ಯಗಳು. ಹಲವಾರು ವಿಭಿನ್ನಸಸ್ಯಗಳು ಮತ್ತು ಸಸ್ಯ-ಜನ್ಯ ವಸ್ಸ್ತುಗಳನ್ನು ಜೈವಿಕ ಇಂಧನಗಳ ಉತ್ಪಾದನೆಗಾಗಿ ಬಳಕೆ ಮಾಡಲಾಗುತ್ತದೆ. ಬಹುತೇಕ ಮೊದಲ ಬಾರಿಗೆ ಮನುಷ್ಯ ಕಂಡುಕೊಂಡ ಇಂಧನವೆಂದರೆ ಅದೂ ಸೌದೆಯೇ ಆಗಿರಬಹುದು. ಸಾಕ್ಷಿಗಳು ದೊರೆತ ಪ್ರಕಾರ 1.5ದಶಲಕ್ಷ ವರ್ಷಗಳ ಹಿಂದೆ ಸ್ವರ್ತಕ್ರನ್ಸ್ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಇವುಗಳ ಬಳಕೆ ಮಾಡಿದ್ದನ್ನು ಉಲ್ಲೇಖಿಸಬಹುದಾಗಿದೆ. ಕೆಲವೊಂದು ವರ್ಷಗಳ ಹಿಂದೆ ಮನುಷ್ಯರ ವಂಶಕ್ಕೆ ಸೇರಿದ ಜೀವಸಂಕುಲಗಳು ಮೊದಲ ಬಾರಿಗೆ ಬೆಂಕಿಯನ್ನು ಬಳಸಿದ್ದನ್ನು ಪುರಾವೆಗಳ ಮೂಲಕ ತಿಳಿಯಬಹುದಾಗಿದೆ. ಇದರಲ್ಲಿ ಆಸ್ಟೃಲೊಪಿಥೆಕಸ್ ಮತ್ತು ಇದಕ್ಕಿಂತ ಮೊದಲಿನ ಜೀವಿಗಳಾದ ಹೊಮೊ ಗಳು ಈ ಪ್ರದೇಶದಲ್ಲಿ ಇದ್ದವೆಂದೂ ಇಂದಿಗೂ ಪಳೆಯುಳಿಕೆಗಳೂ  ದೊರೆಯುತ್ತವೆ. ಸೌದೆಯು ಇಂದಿನ ದಿನದಲ್ಲೂ ಒಂದು ಇಂಧನವಾಗಿ ಜನಪ್ರಿಯವಾಗಿದೆ. ಇದು ಇನ್ನಿತರ ಇಂಧನ ಶಕ್ತಿಮೂಲಗಳನ್ನು ಹಿಂದೆ ಹಾಕಿರುವ ಮರದ ಮೂಲವು ಸಾಮಾನ್ಯವಾಗಿದೆ. ಮರ ಅಥವಾ ಸೌದೆಯು ಶಕ್ತಿ ಸಾಂದ್ರತೆಯ ಗುಣ ಹೊಂದಿದೆ. ಇದು10–20 MJ/kg.ಗೆ ಸಮನಾಗಿದೆ. ಜೈವಿಕ ಇಂಧನವನ್ನು ಇಂದು ಮೋಟಾರು ವಾಹನಗಳಲ್ಲಿ ಬಳಕೆಯಾಗುವಂತೆ ಅಭಿವೃದ್ಧಿಪಡಿಸಲಾಗಿದೆ.

ಪಳೆಯುಳಿಕೆ ಅಥವಾ ಹೂತಿಟ್ಟ ಇಂಧನಶಕ್ತಿ

ಪಳೆಯುಳಿಕೆಯ ಇಂಧನಗಳು ಮುಖ್ಯವಾಗಿ ಹೈಡ್ರೊಕಾರ್ಬನ್ ಗಳು, ಪ್ರಮುಖವಾಗಿ ಕಲ್ಲಿದ್ದಲು ಮತ್ತು ಪೆಟ್ರೊಲಿಯಮ್ ದೃವ ರೂಪದ ಪೆಟ್ರೊಲಿಯಮ್ ಅಥವಾ ನೈಸರ್ಗಿಕ ಅನಿಲ, ಇವುಗಳನ್ನು ಸತ್ತ ಜೀವಿಗಳ, ಸಸ್ಯಗಳ ಕೊಳೆತ ತ್ಯಾಜ್ಯ ಅಥವಾ ಉಳಿದ ಪಳೆಯುಳಿಕೆಗಳಿಂದ ಪಡೆಯಲಾಗುತ್ತದೆ.ಇಲ್ಲಿ ಶಾಖಕ್ಕೆ ಒಡ್ಡಿಕೊಳ್ಳುವ ಮೂಲಕ ಭೂಮಿಯ ಮೇಲ್ಪದರಿನಲ್ಲಿ ನೂರಾರು, ಮಿಲಿಯನ್ ವರ್ಷಗಳಿಂದ ಹೂತು ಅಡಗಿರುವ ಖನಿಜ ಸಂಪತ್ತಿನಮೂಲಕ ಇಂಧನ  ಪಡೆಯಲಾಗುತ್ತದೆ. ಸಾಮಾನ್ಯವಾಗಿ ಇವುಗಳೆಲ್ಲದರ ಅರ್ಥವೆಂದರೆ ಪಳೆಯುಳಿಕೆ ಎಂಬ ಪದವು ಪಳೆಯುಳಿಕೆಯ ಇಂಧನವು ಹೈಡ್ರೊನ್ ಕಾರ್ಬನಯುಳ್ಳ ನೈಸರ್ಗಿಕ ಸಂಪನ್ಮೂಲಗಳನ್ನು ನೇರವಾಗಿ ಜೀವಶಾಸ್ತ್ರೀಯ ಮೂಲಗಳ ಮೂಲಕ ಪಡೆಯಲಾರದು, ಉದಾಹರಣೆಯೆಂದರೆ ಟಾರ್ ಸ್ಯಾಂಡ್ಸ್ ಇದಕ್ಕೆ ಉತ್ತಮ ನಿದರ್ಶನವಾಗಿದೆ. ಇಂತಹ ಸಂಪನ್ಮೂಲಗಳನ್ನು ಬಹುಮುಖ್ಯವಾಗಿ ಖನಿಜ ಇಂಧನಗಳೆ ನ್ನುತ್ತಾರೆ ಆಧುನಿಕ ಬೃಹತ್ ಕೈಗಾರಿಕಾ ಅಭಿವೃದ್ಧಿಯು ಮುಖ್ಯವಾಗಿ ಪಳೆಯುಳಿಕೆ ಇಂಧನವನ್ನು ಅವಲಂಬಿಸಿದೆ. ಜಲಸಂಪನ್ಮೂಲ, ಹಾಗು ದಹನದ ಮೂಲಕ ಇಂಧನ ಉತ್ಪಾದನೆ (ಸೌದೆ ಅಥವಾ ಸಸ್ಯದ ಇದ್ದಿಲನ್ನು ಶಾಖದ) ಉತ್ಪಾದನೆಗೆ ಬಳಸಲಾಗುತ್ತದೆ. 

ಮಾನವನಿಂದ ಬಳಸಲ್ಪಡುವ ಇಂಧನಗಳು ಹಂತ ಹಂತವಾಗಿ ಬದಲಾಯಿತು
ಕಲ್ಲಿದ್ದಲು

ಇತ್ತೀಚಿನ 20 ಮತ್ತು 21 ಶತಮಾನದಲ್ಲಿನ ಜಾಗತಿಕ ಆಧುನೀಕರಣದೊಂದಿಗೆ ಪಳೆಯುಳಿಕೆಗಳ ಮೂಲಕ ಇಂಧನ ಉತ್ಪಾದನೆ ವಿಶೇಷವಾಗಿ ಗ್ಯಾಸೊಲೈನ್ ನ್ನು ತೈಲದ ಮೂಲದಿಂದ ಪಡೆಯುವ ಬಗ್ಗೆ ಪ್ರಮುಖ ಪ್ರಾದೇಶಿಕ ಮತ್ತು ಜಾಗತಿಕ ವಲಯದಲ್ಲಿ ಘರ್ಷಣೆಗಳು ಮತ್ತು ಪರಿಸರ ರಕ್ಷಣೆ ಕುರಿತ ವಿವಾದಗಳು ಸಾಕಷ್ಟು ಹುಟ್ಟಿಕೊಂಡಿವೆ. ಹೆಚ್ಚುತ್ತಿರುವ ಜಾಗತಿಕ ಮಟ್ಟದ ಇಂಧನ ಬೇಡಿಕೆಯನ್ನು ಪೂರೈಸಲು ಪುನರ್ ನವೀಕರಿಸಲ್ಪಡುವ ಇಂಧನ ಮೂಲಗಳ ಹುಡುಕಾಟ ಚಾಲ್ತಿಯಲ್ಲಿದೆ. ಪಳೆಯುಳಿಕೆಯ ಇಂಧನ ಮೂಲಗಳನ್ನು ಮಾನವರು ಇಂಧನ ಪಡೆಯಲು ದಹಿಸುವುದರಿಂದ ದೊಡ್ಡ ಪ್ರಮಾಣದ ಇಂಗಾಲದ ಡೈಆಕ್ಷೈಡ್ ಮಾಲಿನ್ಯವು ವಾತಾವರಣದಲ್ಲಿ ಜಮಾಯಿಸುತ್ತದೆ. ಇದು ಹಸಿರು ಮನೆಯ ಅನಿಲಗಳಲ್ಲಿ ಒಂದಾಗಿದ್ದು ಇದರಿಂದಾಗಿ ವಿಕಿರಣತೆಯು ಅಧಿಕಗೊಂಡು ಭೂಮಿ ಬಿಸಿಯಾಗುವ ಅಪಾಯಕ್ಕೆ ಗುರಿಯಾಗಬೇಕಾಗುತ್ತದೆ. ವಾತಾವರಣದಲ್ಲಿ CO2 ಪ್ರಮಾಣವು ಏರಿಕೆಯಾಗುತ್ತಿದೆ, ಇದು ಹಸಿರು ಮನೆ ಅನಿಲ ಹೆಚ್ಚಳವು ಸೂರ್ಯನ ಶಕ್ತಿಯಿಂದ ಸೌರ ಇಂಧನ ಹೆಚ್ಚು ಬಳಸುವಂತೆ ಪರೋಕ್ಷವಾಗಿ ಒತ್ತಡ ಉಂಟಾಗಿದೆ. ಇದರಿಂದಾಗಿ ವಾಡಿಕೆಯ ಭೂಮಿ ಮೇಲಿನ ಉಷ್ಣತೆಯು ಇದಕ್ಕನುಗುಣವಾಗಿ ಅಧಿಕಗೊಳ್ಳುತ್ತದೆ.

ಪರಮಾಣು

ಪರಮಾಣು ಅಥವಾ ಅಣುಶಕ್ತಿ ಇಂಧನವನ್ನು ಪರಮಾಣುಗಳ ವಿಭಜಿತ ಶಕ್ತಿಯಿಂದ ಪಡೆಯಲಾಗುವುದು ಇದನ್ನು ಅಣುಇಂಧನ ಎನ್ನುತ್ತೇವೆ. ತಂತ್ರಜ್ಞಾನದ ಮೂಲಕ ಯೋಚಿಸಿದರೆ ಪ್ರತಿಯೊಂದು ಅಣುವನ್ನು ಸಂಯುಕ್ತಗಳಿಂದ ಬೇರ್ಪಡಿಸಿ ಶಕ್ತಿ ಪಡೆದುಕೊಳ್ಳಬಹುದಾಗಿದೆ. ಯಾವುದೇ ವಸ್ತು ಸೂಕ್ತ ವಾತಾವರಣದಲ್ಲಿ ಪ್ರಯೋಗಕ್ಕೆ ಒಳಗಾದಾಗ ಅದರ ವಿಭಜಿತ ಸಾಮರ್ಥ್ಯದ ಮೇಲೆ ಪ್ರವಹಿಸುವ ಇಂಧನವನ್ನು ಬಳಕೆ ಮಾಡುವ ಅನೇಕ ಪ್ರಾತ್ಯಕ್ಷಿಕೆಗಳು ಇಂದು ನಮ್ಮ ಕಣ್ಣೆದುರಿಗಿವೆ. ಇಲ್ಲಿ ಅಣು ಶಕ್ತಿಯಿಂದ ಇಂಧನ ಉತ್ಪಾದಿಸುವ ಎಲ್ಲ ಸಾಧ್ಯತೆಗಳು ಕಂಡು ಬರುತ್ತವೆ.

ಪರಮಾಣು ಇಂಧನಗಳ ಕಣಗಳು ಅಣು ವಿದ್ಯುತ್ ಉತ್ಪಾದನೆಗೆ ಬಳಸಲಾಗುತ್ತದೆ.

ಅತ್ಯಂತ ಸಾಮಾನ್ಯವಾಗಿ ಪರಮಾಣನ್ನು ಇಂಧನವಾಗಿ ಬಳಸುವಲ್ಲಿ ಮಾನವರು ಸಫಲರಾಗಿದ್ದಾರೆ. ಅತ್ಯಧಿಕ ಭಾರದ ವಸ್ತುಗಳ ವಿಭಜಿತ ಅಣುಗಳನ್ನು ಪರಮಾಣು ಪ್ರಕ್ರಿಯೆಗೆ ಒಳಪಡಿಸುವ ಮೂಲಕ ಸರದಿ ಪ್ರತಿಕ್ರಿಯೆಗಳನ್ನು ವಿಭಜಿತ ಅಣುಗಳನ್ನು ರಿಯಾಕ್ಟರ್ ಸಹಾಯದಿಂದ ಇಂಧನ ಉತ್ಪಾದನೆಗೆ ಬಳಸಲಾಗುತ್ತದೆ.ಪರಮಾಣು ಇಂಧನವು ವಸ್ತು ಇಲ್ಲವೇ ಭೌತಿಕ ಪದಾರ್ಥಗಳು ವಿಭಜನೆ ಮೂಲಕ ಇಂಧನ ಪಡೆದುಕೊಳ್ಳಲಾಗುತ್ತದೆ. ಉದಾಹರಣೆಗೆ ಇಂಧನ ಕಟ್ಟುಗಳನ್ನು ಇಂಧನದ ಕಡ್ಡಿಗಳ ನಿರ್ಮಿಸಿ ಇವುಗಳು ನ್ಯೂಟ್ರಾನ್ ಪರಿವರ್ತಿತ ಅಥವಾ ನ್ಯೂಟ್ರಾನ್ ಹೊಂದಿದ ವಸ್ತುಗಳನ್ನು ಈ ಮೂಲಕ ಸಂಸ್ಕರಿಸಿ ಅವುಗಳ ರಚನೆಯಲ್ಲಿನ ಪರಮಾಣು ಇಂಧನ ಶಕ್ತಿ ಯನ್ನು ಉಪಯೋಗಿಸಿಕೊಳ್ಳಲಾಗುತ್ತದೆ. ಬಹುತೇಕ ಭಾರದ ವಸ್ತುಗಳ ಕಣದ ಪರಮಾಣು ಅಥವಾ ಅಣು ಇಂಧನಗಳು ಎಂದರೆ 235U ಮತ್ತು239Pu, ಹೀಗೆ ಗಣಿಗಾರಿಕೆ ಚಟುವಟಿಕೆಗಳು, ಶುದ್ದೀಕರಣ, ಸ್ವಚ್ಛಗೊಳಿಸುವಿಕೆ, ಉಪಯುಕ್ತತೆ ಹಾಗು ಕೊನೆಯಲ್ಲಿ ಈ ಎಲ್ಲಾ ಪ್ರಕ್ರಿಯೆಗಳನ್ನು ಒಂದು ಪರಮಾಣು ಇಂಧನ ಸರಣಿಯ ಕೊಂಡಿಯಂತೆ ನಡೆಸಲಾಗುತ್ತದೆ. ಇದು ಪರಮಾಣು ಶಕ್ತಿ ಮತ್ತು ಪರಮಾಣು ಅಸ್ತ್ರಗಳ ತಯಾರಿಕೆಯಲ್ಲಿ ಈ ಪ್ರಕ್ರಿಯೆಯು ಮಹತ್ವದ ಪಾತ್ರ ವಹಿಸುತ್ತದೆ.

ಶಕ್ತಿಯ ಆಕರ

ಮಾನವನಿಂದ ಬಳಸಲ್ಪಡುವ ಇಂಧನಗಳು ಹಂತ ಹಂತವಾಗಿ ಬದಲಾಯಿತು
ಗಾಳಿ ಶಕ್ತಿ

ಪರಮಾಣು ಆಕರದಿಂದ ಪಡೆಯುವ ವಿವಿಧ ಇಂಧನಗಳ ಶಕ್ತಿ ದೊರೆಯುವ ಪರಕ್ರಿಯೆಯು ಕೇವಲ ಮನುಷ್ಯರಿಗಷ್ಟೆ ಅಲ್ಲ ಸದ್ಯ ನಕ್ಷತ್ರಗಳಿಗೆ ಇಂಧನ ಶಕ್ತಿ ನೀಡುವ ಮೂಲಕ ನಿಸರ್ಗದಲ್ಲಿ ಶಕ್ತಿ ಮೂಲಗಳೆನಿಸಿವೆ. ಸಂಯೋಜಿತ ಆಕರಗಳಿಂದ ಪಡೆದ ಇಂಧನಗಳು ಹಗುರ ವಸ್ತುಗಳ ಕಣಗಳ ಮೂಲದಿಂದ ಅಂದರೆ ಉದಾಹರಣೆಗೆ ಹೈಡ್ರೊಜೆನ್ ನಂತಹವುಗಳು ಕೂಡಲೇ ಸಂಯುಕ್ತಗಳಾಗಿ ಒಂದುಗೂಡುತ್ತವೆ. ಪರಮಾಣು ಅಥವಾ ಅಣು ಸಂಯೋಜನೆಗಳ ಮೂಲಕ ಬೆಳಗುವ ನಕ್ಷತ್ರಗಳಲ್ಲಿನ ಇಂಧನವು ಪರಮಾಣು ನ್ಯೂಕ್ಲಿಕ್ ನ್ನು ಒಳಗೊಂಡಿದ್ದು ಇದು ಪ್ರೊಟಾನ್ ನನ್ನು ಹೀರಿಕೊಂಡು ಇಲ್ಲವೇ ನ್ಯೂಟ್ರಾನ್ ನ್ನು ಬಳಸಿ ಇಂಧನ ನೀಡುತ್ತದೆ. ಬಹುತೇಕ ನಕ್ಷತ್ರ ಪುಂಜಗಳಲ್ಲಿ ಹೈಡ್ರೊಜೆನ್ ಮುಖಾಂತರ ಇಂಧನ ಪೂರೈಕೆಯಾಗುತ್ತದೆ. ಇದರಿಂದ ನಂತರ ಹೀಲಿಯಮ್ ನ ಸಂಯೋಜಕವಾಗಿ ಮಾರ್ಪಡುತ್ತದೆ.ಇದು ಪ್ರೊಟಾನ್ -ಪ್ರೊಟಾನ್ ಸರಣಿ ಪ್ರತಿಕ್ರಿಯೆಗಳ ಮೂಲಕ ಇಲ್ಲವೇ CNO ಸರಣಿ ಗಳಿಂದ ಇದು ಉಂಟಾಗುತ್ತದೆ. ಹೈಡ್ರೊಜೆನ್ ಇಂಧನ ದಹಿಸಿದ ನಂತರ ಪರಮಾಣು ಸಂಯೋಜನೆಯ ವಿಭಜನೆಯು ಭಾರದ ವಸ್ತುಗಳನ್ನು ಹೊರಬಿಡುವುದರೊಂದಿಗೆ ಮುಂದುವರೆಯುತ್ತದೆ. ಇಲ್ಲಿ ಬಿಡುಗಡೆಯಾದ ಶಕ್ತಿಯು ಕಡಿಮೆಯದ್ದಾಗಿರುತ್ತದೆ ಯಾಕೆಂದರೆ ಪರಮಾಣು ಕಟ್ಟುಗಳಲ್ಲಿ ಈ ಶಕ್ತಿ ಅಡಕವಾಗಿದ್ದರಿಂದ ಈ ಪ್ರಕ್ರಿಯೆಯು ಜರುಗುತ್ತದೆ. ಕಬ್ಬಿಣ-56 ಅಥವಾ ನಿಕೆಲ್ -56 ನ್ಯೂಕ್ಲಿಗಳು ಒಮ್ಮೆ ಉತ್ಪಾದನೆಯಾದಾಗ ಮತ್ತೆ ಶಕ್ತಿಯನ್ನು ಪುನ: ಪಡೆಯಲಾಗುವದಿಲ್ಲ ಯಾಕೆಂದರೆ ಇಲ್ಲಿ ಅತ್ಯಧಿಕ ಪರಮಾಣು ಶಕ್ತಿಯ ಬಿಗಿ ಕಟ್ಟುಗಳಿರುತ್ತವೆ.

ಮೊಟ್ಟ ಮೊದಲ ಬಾರಿಗೆ ಸೌದೆ ಅಥವಾ ಕಟ್ಟಿಗೆಗಳನ್ನು ಬಳಸಿ ಹೊಮೊ ಎರೆಕ್ಟಸ್ ಎಂಬ ಜನಾಂಗ 2 ದಶಲಕ್ಷ ವರ್ಷಗಳ ಹಿಂದೆ ಇಂಧನದ ಮೂಲವನ್ನಾಗಿ ಬಳಸಿತ್ತು. ಮಾನವನ ಇತಿಹಾಸದ ಕಾಲದಿಂದ ಇಂಧನ ಶಕ್ತಿಯನ್ನು ಸಸ್ಯಗಳು ಅಥವಾ ಪ್ರಾಣಿಗಳ ಕೊಬ್ಬಿನಿಂದ ಪಡೆಯಲಾಗುತಿತ್ತು. ಇವುಗಳ ಮಾತ್ರದಿಂದಲೇ ಮನುಷ್ಯ ತನ್ನ ಇಂಧನ ಬೇಡಿಕೆಯನ್ನು ಪೂರೈಕೆ ಮಾಡಿಕೊಳ್ಳುತ್ತಿದ್ದ. ಕಟ್ಟಿಗೆಯ ಇದ್ದಿಲನ್ನು ಸುಮಾರು 6,000ವರ್ಷಗಳ ಹಿಂದೆ ಲೋಹಗಳನ್ನು ಕರಗಿಸಲು ಈ ಕಟ್ಟಿಗೆ ಮೂಲದ ಇದ್ದಿಲನ್ನುಇಂಧನ ಶಕ್ತಿಯಾಗಿ ಬಳಸಲಾಗುತ್ತಿತ್ತು. ನಂತರ ಇದಕ್ಕಾಗಿ ಅರಣ್ಯಗಳು ಅವನತಿಯತ್ತ ಸಾಗಿದಾಗ ಇದಕ್ಕೆ ಪರ್ಯಾಯವಾಗಿ ಕೋಕ್ ನ್ನು ಬಳಸಿ ಇಂಧನ ಶಕ್ತಿ ಹೊರತೆಗೆಯಲಾಯಿತು. 18ನೆಯ ಶತಮಾನದಲ್ಲಿ ಇದರ ಉಪಯೋಗ ವ್ಯಾಪಕವಾಗಿದೆ. ಇಂದು ಸಾಮಾನ್ಯವಾಗಿ ಕಾವಲಿಯಲ್ಲಿ ಆಹಾರ ಬೇಯಿಸಲು ಸೌದೆ ಇದ್ದಲನ್ನು ಬಳಸಿ ಉರುವಲು ಇಂಧನ ಶಕ್ತಿಯನ್ನು  ಪಡೆಯಲಾಗುತ್ತದೆ. ಸುಮಾರು 1000BCE ಹಿಂದೆ ಕಲ್ಲಿದ್ದಲನ್ನು ಪ್ರಥಮಬಾರಿಗೆ ಚೀನಾದಲ್ಲಿ ಇಂಧನಕ್ಕಾಗಿ ಬಳಸಿದ ಉದಾಹರಣೆಗಳಿವೆ. ಇದರ ಜೊತೆ ಇಸವಿ 1769ರಲ್ಲಿ ಉಗಿಯಂತ್ರವನ್ನುಅಭಿವೃದ್ಧಿಪಡಿಸಿದ ನಂತರ ಕಲ್ಲಿದ್ದಲಿನ ಇಂಧನ ಶಕ್ತಿಯು ಸಾಮಾನ್ಯ ಮೂಲ ಬಳಕೆಯಾಗಿ ಬೆಳಕಿಗೆ ಬಂತು ನಂತರ ಕಲ್ಲಿದ್ದಲು ಇಂಧನವನ್ನು ಹಡಗು ಚಾಲನೆ ಮತ್ತು ಉಗಿಬಂಡಿಗಳನ್ನು ಓಡಿಸಲು ಬಳಸಲಾಯಿತು. ಸುಮಾರು 19ನೆಯ ಶತಮಾನದ ಹೊತ್ತಿಗೆ ಕಲ್ಲಿದ್ದಿಲಿಂದ ಹೊರತೆಗೆದ ಅನಿಲದ ಶಕ್ತಿಯಿಂದ ಲಂಡನ್ ನಲ್ಲಿನ ಬೀದಿದೀಪಗಳಿಗೆ ವಿದ್ಯುತ್ ಒದಗಿಸಲಾಯಿತು. ನಂತರ 20ನೆಯ ಶತಮಾನದಲ್ಲಿಕಲ್ಲಿದ್ದಿಲಿಂದ ತೆಗೆದ ವಿದ್ಯುತ್ ಶಕ್ತಿಯು ವಿಶ್ವದ ಬೇಡಿಕೆಯ 40%ರಷ್ಟು ಪೂರೈಕೆಗೆ ಸಮರ್ಥವಾಯಿತು. ಇದು 2005ರಲ್ಲಿ ಪ್ರಾಥಮಿಕವಾಗಿ ಕಂಡು ಬಂದ ಫಲಿತಾಂಶ ಇದಾಗಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಪರಾಂಬಿಕುಲಂ ವನ್ಯಜೀವಿಗಳ ಅಭಯಾರಣ್ಯ

ಪರಾಂಬಿಕುಲಂ ವನ್ಯಜೀವಿಗಳ ಅಭಯಾರಣ್ಯ

ಕಡಲೆಕಾಯಿ ಪರಿಷೆ

ಕಡಲೆಕಾಯಿ ಪರಿಷೆ ನಡೆಯುವುದಕ್ಕೆ ಐತಿಹಾಸಿಕ ಹಿನ್ನೆಲೆ ಇದೆ