in

ವಂದೇ ಭಾರತ್‌ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು

ವಂದೇ ಭಾರತ್‌ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
ವಂದೇ ಭಾರತ್‌ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ಗಾಂಧಿನಗರದ ರೈಲು ನಿಲ್ದಾಣದಲ್ಲಿ ವಂದೇ ಭಾರತ್‌ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಅದೇ ರೈಲಿನಲ್ಲಿ ಕಲುಪುರ್ ರೈಲು ನಿಲ್ದಾಣದವರೆಗೆ ಪ್ರಯಾಣ ಬೆಳೆಸಿದ್ದಾರೆ.

ಈ ನೂತನ ರೈಲು ದೆಹಲಿ ಮತ್ತು ವಾರಾಣಸಿ ನಡುವೆ ಚಲಿಸುತ್ತದೆ ಮತ್ತು ಇನ್ನೊಂದು ಹೊಸ ರೈಲು ದೆಹಲಿ ಮತ್ತು ಶ್ರೀ ಮಾತಾ ವೈಷ್ಣೋ ದೇವಿ ಕತ್ರಾವನ್ನು ಸಂಪರ್ಕಿಸುತ್ತದೆ.

ವಂದೇ ಭಾರತ್ ಸರಣಿಯ ಮೂರನೇ ರೈಲು ಇದಾಗಿದ್ದು, ಮೊದಲೆರೆಡು ಆವೃತ್ತಿಗಳಿಗಿಂತ ಈ ರೈಲು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿದೆ ಎಂದು ಭಾರತೀಯ ರೈಲ್ವೇ ಇಲಾಖೆ ಸ್ಪಷ್ಟಪಡಿಸಿದೆ.

ಫೆಬ್ರುವರಿ 15, 2019ರಂದು ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ನವದೆಹಲಿ – ಕಾನ್ಪುರ – ಅಲಹಾಬಾದ್ – ವಾರಾಣಸಿ ಮಾರ್ಗದಲ್ಲಿ ಈ ರೈಲು ಸಂಚರಿಸುತ್ತಿದೆ.

ವಂದೇ ಭಾರತ್‌ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು
ವಂದೇ ಭಾರತ್‌ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ

ವೇಗ, ಸುರಕ್ಷತೆ ಹಾಗೂ ಅತ್ಯುತ್ತಮ ಸೇವೆಗಳೇ ವಂದೇ ಭಾರತ್‌ ರೈಲುಗಳ ವಿಶೇಷತೆಯಾಗಿದೆ. ಚೆನ್ನೈನ ಕೋಚ್ ಫ್ಯಾಕ್ಟರಿಯಲ್ಲಿ ಈ ರೈಲುಗಳ ನಿರ್ಮಾಣ ಮಾಡಲಾಗುತ್ತಿದೆ. ವಂದೇ ಭಾರತ್ ರೈಲುಗಳು ಗರಿಷ್ಠ 160 ಕಿ. ಮೀ. ವೇಗದಲ್ಲಿ ಸಂಚರಿಸುತ್ತವೆ. ಇತರ ರೈಲುಗಳಿಗೆ ಹೋಲಿಸಿದರೆ ವಂದೇ ಭಾರತ್‌ ರೈಲುಗಳ ಪ್ರಯಾಣದ ಅವಧಿ ಶೇ.45ರಷ್ಟು ಕಡಿಮೆ ಎನ್ನುವುದು ಇದರ ವಿಶೇಷವಾಗಿದೆ.

ಎಲ್ಲಾ ಕೋಚ್‌ಗಳಲ್ಲೂ ಆಟೋ ಮ್ಯಾಟಿಕ್ ಡೋರ್‌, ಜಿಪಿಎಸ್ ಆಧಾರಿತ ಆಡಿಯೋ ವಿಶ್ಯುಯಲ್ಸ್, ಉಚಿತ ವೈಫೈ ವ್ಯವಸ್ಥೆ, ಆರಾಮದಾಯಕ ಆಸನಗಳು ಮತ್ತು ಪ್ರತಿ ಆಸನಕ್ಕೂ ಪ್ರತ್ಯೇಕ ಬೆಳಕನಿನ ವ್ಯವಸ್ಥೆ, ಬಯೋ ವ್ಯಾಕ್ಯೂಮ್ ಶೌಚಾಲಯಗಳು ಹೀಗೆ ವಂದೇ ಭಾರತ್‌ ರೈಲು ಹತ್ತು ಹಲವು ವಿಶೇಷತೆಗಳಿಂದ ಕೂಡಿದೆ.

ವಂದೇ ಭಾರತ್ ರೈಲುಗಳು ಬುಲೆಟ್ ಟ್ರೈನ್ ಅನ್ನು ಮೀರಿಸುತ್ತಿವೆ. ಇತ್ತೀಚೆಗೆ, ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ರಾವ್ಸಾಹೇಬ್ ಪಾಟೀಲ್ ದನ್ವೆ ಅವರು ಈ ರೈಲು ಕೇವಲ 52 ಸೆಕೆಂಡುಗಳಲ್ಲಿ 100 ಕಿಮೀ / ಗಂ ವೇಗವನ್ನು ಸಾಧಿಸಿದೆ ಎಂದು ಟ್ವೀಟ್ ಮಾಡಿದ್ದರು. ಹೊಸ ವಂದೇ ಭಾರತ್ ರೈಲು ಗಂಟೆಗೆ 160 ಕಿಮೀ ವೇಗವನ್ನು 129 ಸೆಕೆಂಡುಗಳಲ್ಲಿ ತಲುಪುತ್ತದೆ, ಅದರ ಹಿಂದಿನದಕ್ಕಿಂತ ಸುಮಾರು 16 ಸೆಕೆಂಡುಗಳು ವೇಗವಾಗಿರುತ್ತದೆ.

ಹೊಸ ರೈಲುಗಳು ದೇಶೀಯವಾಗಿ ಅಭಿವೃದ್ಧಿಪಡಿಸಿದ ಕವಚ್ ತಂತ್ರಜ್ಞಾನವನ್ನು ಹೊಂದಿವೆ, ಇದು ರೈಲು ಘರ್ಷಣೆ ತಪ್ಪಿಸುವ ವ್ಯವಸ್ಥೆಯಾಗಿದ್ದು ಇದಕ್ಕೆ ಹಿಂದಿನ ರೈಲುಗಳು ಈ ತಂತ್ರಜ್ಞಾನವನ್ನು ಹೊಂದಿದ್ದವು.

ಸಂಪೂರ್ಣ ‘ಮೇಡ್ ಇನ್ ಇಂಡಿಯಾ’ ಈ ರೈಲುಗಳು ಸಂಪೂರ್ಣವಾಗಿ ಭಾರತದಲ್ಲಿಯೇ ತಯಾರಾಗುತ್ತವೆ. ಈ ರೈಲುಗಳು ಕೇವಲ ಶೇಕಡಾ 15 ರಷ್ಟು ಸಲಕರಣೆಗಳನ್ನು ಮಾತ್ರ ಆಮದು ಮಾಡಿಕೊಳ್ಳಲಾಗುತ್ತದೆ.

ವಂದೇ ಭಾರತ್ ರೈಲುಗಳಿಗೆ ಇಂಜಿನ್ ಅಗತ್ಯವಿರುವುದಿಲ್ಲ, ಏಕೆಂದರೆ ಅವು ಡಿಸ್ಟ್ರಿಬ್ಯೂಟ್ ಟ್ರಾಕ್ಷನ್ ಪವರ್ ಸಿಸ್ಟಮ್‌ನಲ್ಲಿ ಚಲಿಸುತ್ತವೆ. ಪ್ರಸ್ತುತ ಅಭಿವೃದ್ಧಿ ಹಂತದಲ್ಲಿರುವ ಮುಂದಿನ ಪೀಳಿಗೆಯ ವಂದೇ ಭಾರತ್ ರೈಲುಗಳು ಸ್ಲೀಪರ್ ಕ್ಲಾಸ್ ಮತ್ತು ಎಸಿ-1, ಎಸಿ-2 ಮತ್ತು ಎಸಿ-3 ಟೈಯರ್ ಕೋಚ್‌ಗಳನ್ನು ಹೊಂದಿರುತ್ತವೆ.

ವಂದೇ ಭಾರತ್ ರೈಲಿನ ವಿಶೇಷತೆ ಏನು?

ವಂದೇ ಭಾರತ್‌ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು
ವಂದೇ ಭಾರತ್ ರೈಲಿನ ವಿಶೇಷತೆ

ವೇಗ, ಸುರಕ್ಷತೆ ಹಾಗೂ ಅತ್ಯುತ್ತಮ ಸೇವೆಗಳೇ ಈ ರೈಲಿನ ವಿಶೇಷತೆ. ಚೆನ್ನೈನ ಕೋಚ್ ಫ್ಯಾಕ್ಟರಿಯಲ್ಲಿ ಈ ರೈಲುಗಳು ತಯಾರಾಗುತ್ತಿವೆ. ವಂದೇ ಭಾರತ್ ರೈಲು ಗರಿಷ್ಠ 160 ಕಿ. ಮೀ. ವೇಗದಲ್ಲಿ ಸಂಚರಿಸುತ್ತವೆ. ಶತಾಬ್ದಿಯಷ್ಟೇ ವೇಗವಾಗಿ ಸಂಚರಿಸುತ್ತವಾದರೂ ಪ್ರಯಾಣದ ಅನುಭವ ಚನ್ನಾಗಿರುತ್ತದೆ. ಇತರ ರೈಲುಗಳಿಗೆ ಹೋಲಿಸಿದರೆ ಪ್ರಯಾಣದ ಅವಧಿ ಶೇ. 45ರಷ್ಟು ಕಡಿತ ಆಗುತ್ತದೆ.

ಎಲ್ಲಾ ಕೋಚ್‌ಗಳಲ್ಲೂ ಆಟೋ ಮ್ಯಾಟಿಕ್ ಡೋರ್‌ಗಳು ಇರುತ್ತವೆ. ಜಿಪಿಎಸ್ ಆಧಾರಿತ ಆಡಿಯೋ ವಿಶ್ಯುಯಲ್ಸ್ ಪ್ರಯಾಣಿಕ ಮಾಹಿತಿ ವ್ಯವಸ್ಥೆ ಇರುತ್ತದೆ. ಉಚಿತ ವೈಫೈ ವ್ಯವಸ್ಥೆ ಇರುತ್ತದೆ. ಸೀಟ್‌ಗಳು ಆರಾಮದಾಯವಾಗಿ ಇರುತ್ತವೆ. ಟಾಯ್ಲೆಟ್‌ಗಳು ಬಯೋ ವ್ಯಾಕ್ಯೂಮ್ ತಂತ್ರಜ್ಞಾನ ಆಧಾರಿತವಾಗಿರುತ್ತವೆ. ಪ್ರತಿ ಸೀಟ್‌ಗೂ ಪ್ರತ್ಯೇಕ ಲೈಟ್ ವ್ಯವಸ್ಥೆ ಇರುತ್ತದೆ.

ಪ್ರತಿ ಕೋಚ್‌ನಲ್ಲೂ ಪ್ಯಾಂಟ್ರಿ ಇರುತ್ತದೆ. ಪ್ರಯಾಣಿಕರಿಗೆ ಬಿಸಿ ಬಿಸಿ ಆಹಾರ ವಿತರಣೆ ಮಾಡಲಾಗುತ್ತದೆ. ಬಿಸಿ ಹಾಗೂ ತಂಪು ಪಾನೀಯಗಳು ಲಭ್ಯವಾಗುತ್ತವೆ. ರೈಲು ಸಾಗುವಾಗ ಪ್ರಯಾಣಿಕರಿಗೆ ಹೆಚ್ಚಿನ ಶಬ್ಧ ಕೇಳಿ ಬರೋದಿಲ್ಲ. ಪ್ರತಿಯೊಂದು ವಂದೇ ಭಾರತ್ ರೈಲಿನಲ್ಲಿ 1,128 ಪ್ರಯಾಣಿಕರು ಪ್ರಯಾಣ ಮಾಡಬಹುದಾಗಿದೆ.
ಎಲ್ಲಕ್ಕಿಂತಾ ಹೆಚ್ಚಾಗಿ ವಂದೇ ಭಾರತ್ ರೈಲಿನಲ್ಲಿ ಅಪಘಾತ ತಡೆ ವ್ಯವಸ್ಥೆಗೆ ತುಂಬಾನೇ ಸುಧಾರಿತ ತಂತ್ರಜ್ಞಾನ ಬಳಸಲಾಗಿದೆ. ಪ್ರತಿ ಕೋಚ್‌ನಲ್ಲೂ ತುರ್ತು ನಿರ್ಗಮನ ಕಿಟಕಿ ಇರುತ್ತದೆ. ಪ್ರತಿ ಕೋಚ್‌ನಲ್ಲೂ ಸಿಸಿಟಿವಿ ಕ್ಯಾಮರಾ ಇರುತ್ತದೆ. ಅಗ್ನಿ ಅನಾಹುತ ತಡೆಯುವ ವ್ಯವಸ್ಥೆ ಕೂಡಾ ಸುಧಾರಿತವಾಗಿದೆ.

ಈಗಾಗಲೇ ದೇಶದಲ್ಲಿ 2 ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ. ಮೊದಲ ರೈಲು ದಿಲ್ಲಿಯಿಂದ ವೈಷ್ಣೋದೇವಿವರೆಗೆ ಇದ್ದರೆ, ಮತ್ತೊಂದು ರೈಲು ದಿಲ್ಲಿಯಿಂದ ವಾರಣಾಸಿಗೆ ಸಂಚರಿಸುತ್ತಿದೆ. ಇದೀಗ ಮೂರನೆ ರೈಲು ಗಾಂಧಿ ನಗರದಿಂದ ಮುಂಬೈಗೆ ಪ್ರಯಾಣ ಮಾಡಲಿದೆ. ಮುಂದಿನ 3 ವರ್ಷಗಳಲ್ಲಿ 400 ವಂದೇ ಭಾರತ್ ರೈಲುಗಳನ್ನು ಓಡಿಸುವ ಉದ್ದೇಶ ಸರ್ಕಾರಕ್ಕಿದೆ.

ಮುಂದಿನ ವರ್ಷ ಮಾರ್ಚ್ ಹೊತ್ತಿಗೆ ಬೆಂಗಳೂರು- ಹುಬ್ಬಳ್ಳಿ ನಡುವೆ ವಂದೇ ಭಾರತ್ ಹೈ ಸ್ಪೀಡ್ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ಆರಂಭಿಸಲಾಗುತ್ತದೆ ಎಂದು ಕರ್ನಾಟಕ ಬಿಜೆಪಿಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಭಾರತೀಯ ರೈಲ್ವೆಯನ್ನು ಹಿಂದೆಂದೂ ಕಾಣದ ರೀತಿಯಲ್ಲಿ ಅಭಿವೃದ್ಧಿಗೊಳಿಸಲು ಪ್ರಧಾನಿ ನರೇಂದ್ರ ಮೋದಿಯವರು ಬದ್ಧರಾಗಿದ್ದಾರೆ. ಅವರ ಆ ಪ್ರಯತ್ನದ ಭಾಗವಾಗಿ ಈ ಸೇವೆಯು ರಾಜ್ಯದ ಜನತೆಗೆ ಲಭ್ಯವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಮುಂದಿನ ವರ್ಷ ಆರಂಭಗೊಳ್ಳಲಿರುವ, ಬೆಂಗಳೂರು- ಹುಬ್ಬಳ್ಳಿ ನಡುವಿನ ವಂದೇ ಭಾರತ್ ಹೈ ಸ್ಪೀಡ್ ರೈಲು ಗಂಟೆಗೆ 130 ಕಿ.ಮೀ. ವೇಗದಲ್ಲಿ ಚಲಿಸಲಿದೆ ಎಂದು ಮೂಲಗಳು ತಿಳಿಸಿವೆ. ಸದ್ಯಕ್ಕೆ ಸಾಮಾನ್ಯ ಪ್ಯಾಸೆಂಜರ್ ರೈಲಿನಲ್ಲಿ ಈ ಎರಡೂ ನಗರಗಳ ನಡುವಿನ ಸಂಚಾರಕ್ಕೆ 7 ಗಂಟೆ ಬೇಕು. ಆದರೆ, ಹೈ ಸ್ಪೀಡ್ ರೈಲಿನಲ್ಲಿ ನಾಲ್ಕು ಗಂಟೆಗಳಲ್ಲಿ ಈ ಎರಡೂ ನಗರಗಳ ನಡುವೆ ರೈಲು ಸಂಚಾರ ಸಾಧ್ಯವಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಮೆದುಳಿನ ರಚನೆ

ಮೆದುಳಿನ ರಚನೆ

ಉಡ್ಡಯನ ಪ್ರಾಣಿಗಳು

ಉಡ್ಡಯನ ಪ್ರಾಣಿಗಳು ಎಂದರೇನು?