in

ಶ್ರೀ ಸದ್ಗುರು ಸಿದ್ಧಾರೂಡ ಸ್ವಾಮೀಜಿ ರೈಲ್ವೆ ನಿಲ್ದಾಣದಲ್ಲಿ ನಿರ್ಮಾಣವಾಗಿರುವ 3ನೇ ಪ್ರವೇಶ ದ್ವಾರ ಉದ್ಘಾಟಿಸಲಾಯಿತು

ಹುಬ್ಬಳ್ಳಿ ಜಂಕ್ಷನ್ ರೈಲ್ವೇ ನಿಲ್ದಾಣ
ಹುಬ್ಬಳ್ಳಿ ಜಂಕ್ಷನ್ ರೈಲ್ವೇ ನಿಲ್ದಾಣ

ಹುಬ್ಬಳ್ಳಿ ಜಂಕ್ಷನ್ ರೈಲ್ವೇ ನಿಲ್ದಾಣ ಅಧಿಕೃತವಾಗಿ ಶ್ರೀ ಸಿದ್ಧಾರೋಧ ಸ್ವಾಮೀಜಿ ರೈಲ್ವೆ ನಿಲ್ದಾಣ – ಹುಬ್ಬಳ್ಳಿ. ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆ ವಲಯದ ಮುಖ್ಯ ಕಚೇರಿಯಿದೆ ಹಾಗೂ ಒಂದು ಶತಮಾನಕ್ಕೂ ಹಳೆಯದಾದ ರೈಲ್ವೆ ಕಾರ್ಯಾಗಾರವನ್ನು ಹೊಂದಿದೆ. ಅಮೇರಿಕದ ಜನರಲ್ ಮೋಟರ್ಸ್ ಕಂಪನಿಯಿಂದ ಆಮದು ಮಾಡಿಕೊಂಡಿರುವ ರೈಲ್ವೆ ಇಂಜಿನ್ನುಗಳ ನಿರ್ವಹಣೆ ಮತ್ತು ದುರಸ್ತಿಯ ಅತ್ಯಾಧುನಿಕ ಕಾರ್ಯಾಗಾರವನ್ನು ಸಹ ಹೊಂದಿದೆ.

ಶ್ರೀ ಸದ್ಗುರು ಸಿದ್ಧಾರೂಡ ಸ್ವಾಮೀಜಿ ರೈಲ್ವೆ ನಿಲ್ದಾಣದಲ್ಲಿ ನಿರ್ಮಾಣವಾಗಿರುವ 3ನೇ ಪ್ರವೇಶ ದ್ವಾರವನ್ನು ಮಂಗಳವಾರ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್‌ ಉದ್ಘಾಟಿಸಿದರು. ಜೊತೆಗೆ ಹುಬ್ಬಳ್ಳಿಯಿಂದ ದೆಹಲಿಯ ನಿಜಾಮುದ್ದೀನ್ ರೈಲಿಗೆ ಹಸಿರು ಬಾವುಟ ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ್ದಾರೆ. 115 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಮೂರನೇ ಪ್ರವೇಶ ದ್ವಾರವು ಇಲ್ಲಿಯ ಜನರ ಬಹು ದಿನದ ಬೇಡಿಕೆಯಾಗಿತ್ತು. ಅತ್ಯಂತ ಹೆಚ್ಚು ಸಂಖ್ಯೆಯ ಪ್ರಯಾಣಿಕರು ಪ್ರತಿ ದಿನ ಇಲ್ಲಿಗೆ ಭೇಟಿ ನೀಡುತ್ತಿದ್ದು, ಈ ಜನ ದಟ್ಟಣೆಯ ನಿಯಂತ್ರಣದಲ್ಲಿ ಈ ಹೊಸ ದ್ವಾರವು ಪ್ರಮುಖ ಪಾತ್ರ ವಹಿಸಲಿದೆ. ಬೆಂಗಳೂರು ಹಾಗೂ ಯಶವಂತಪುರ ರೈಲು ನಿಲ್ದಾಣ ಹೊರತುಪಡಿಸಿದರೆ, 3ನೇ ಪ್ರವೇಶದ್ವಾರ ತಲೆ ಎತ್ತಿರುವುದು ಹುಬ್ಬಳ್ಳಿಯಲ್ಲಿ ಮಾತ್ರ ಎಂಬುದು ಮತ್ತೊಂದು ವಿಶೇಷತೆಯಾಗಿದೆ.

ಶ್ರೀ ಸದ್ಗುರು ಸಿದ್ಧಾರೂಡ ಸ್ವಾಮೀಜಿ ರೈಲ್ವೆ ನಿಲ್ದಾಣದಲ್ಲಿ ನಿರ್ಮಾಣವಾಗಿರುವ 3ನೇ ಪ್ರವೇಶ ದ್ವಾರ ಉದ್ಘಾಟಿಸಲಾಯಿತು
ಉದ್ಘಾಟನಾ ವಿಶೇಷ

1505 ಮೀಟರ್ ಉದ್ದದ ಪ್ಲಾಟ್‌ ಫಾರಂ ಹೊಂದುವ ಮೂಲಕ ವಿಶ್ವದ ಅತ್ಯಂತ ಉದ್ದನೆಯ ಪ್ಲಾಟ್‌ ಫಾರಂ ಹೊಂದಿರುವ ಖ್ಯಾತಿಗೆ ಕೂಡ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣ ಪಾತ್ರವಾಗಿದೆ. ಇದೀಗ 3ನೇ ಪ್ರವೇಶದ್ವಾರದಿಂದ ನೇರವಾಗಿ ಈ ನಿಲ್ದಾಣಕ್ಕೆ ಪ್ರವೇಶ ಪಡೆಯುಬಹುದಾಗಿದ್ದು, ಉದ್ದನೆಯ ಈ ಪ್ಲಾಟ್‌ ಫಾರಂ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ. ಪ್ಲಾಟ್‌ ಫಾರಂ ಸಂಖ್ಯೆಗಳು ಕೂಡ 5ರಿಂದ 8ಕ್ಕೆ ಏರಿದೆ ಹಾಗೂ 7 ಮತ್ತು 8 ನೇ ಪ್ಲಾಟ್ ಫಾರಂ ಸಂಪರ್ಕಿಸಲು ಸಬ್ ವೇ ನಿರ್ಮಿಸಲಾಗಿದೆ.

ಶ್ರೀ ಸದ್ಗುರು ಸಿದ್ಧಾರೂಡ ಸ್ವಾಮೀಜಿ ಹೆಸರು ಬರಲು ದಶಕದ ಹೋರಾಟ :
ಇಲ್ಲಿನ ರೈಲ್ವೆ ನಿಲ್ದಾಣಕ್ಕೆ ಆರೂಢರ ಹೆಸರಿಡಬೇಕೆನ್ನುವುದು ದಶಕದ ಹೋರಾಟ. 2010ರಿಂದಲೇ ಭಕ್ತರು, ಜನಪ್ರತಿನಿಧಿಗಳು, ಮಠದ ಟ್ರಸ್ಟ್‌ ಕಮಿಟಿ ಎಲ್ಲರೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದರು. ರೈಲ್ವೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್‌. ಮುನಿಯಪ್ಪ, ಸುರೇಶ ಪ್ರಭು, ಈಗಿನ ಪಿಯೂಷ ಗೋಯಲ್‌ ಎಲ್ಲರಿಗೂ ಮನವಿ ಸಲ್ಲಿಸಲಾಗಿತ್ತು.

ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿ. ಸುರೇಶ ಅಂಗಡಿ ಮಠದ ಭಕ್ತರು ಆಗಿದ್ದರು. ಅವರು ಸಚಿವರಾದ ಮೇಲೆ ಇದಕ್ಕೆ ಹೆಚ್ಚಿನ ಒತ್ತಾಯ ಕೇಳಿಬಂದಿತ್ತು. ಅದಕ್ಕೆ ತಕ್ಕಂತೆ ಸುರೇಶ ಅಂಗಡಿ ಇದಕ್ಕಾಗಿ ಸಾಕಷ್ಟುಪ್ರಯತ್ನ ಪಟ್ಟಿದ್ದರು. ಅದರಿಂದಾಗಿ 2020 ರ ಸೆ. 9 ರಂದು ಕೇಂದ್ರ ಸರ್ಕಾರ ರೈಲ್ವೆ ನಿಲ್ದಾಣಕ್ಕೆ ಆರೂಢರ ಹೆಸರಿಡಲು ಒಪ್ಪಿಗೆ ಸೂಚಿಸಿ ನೋಟಿಪೀಕೇಶನ್‌ ಹೊರಡಿಸಲು ಸೂಚನೆ ನೀಡಿತ್ತು.

ನಿಜಾಮುದ್ದೀನ್‌ ಎಕ್ಸ್‌ಪ್ರೆಸ್‌ಗೆ ಚಾಲನೆ :

ಶ್ರೀ ಸದ್ಗುರು ಸಿದ್ಧಾರೂಡ ಸ್ವಾಮೀಜಿ ರೈಲ್ವೆ ನಿಲ್ದಾಣದಲ್ಲಿ ನಿರ್ಮಾಣವಾಗಿರುವ 3ನೇ ಪ್ರವೇಶ ದ್ವಾರ ಉದ್ಘಾಟಿಸಲಾಯಿತು
ಹಸಿರು ನಿಶಾನೆ ತೋರಿಸಿ ಚಾಲನೆ


ಹಿಂದೆ ಇದ್ದ ಹುಬ್ಬಳ್ಳಿ-ನಿಜಾಮುದ್ದೀನ್ ಲಿಂಕ್ ರೈಲನ್ನು ಸ್ಥಗಿತಗೊಳಿಸಿದ್ದರಿಂದ ಅವಳಿ ನಗರದ ರೈಲು ಪ್ರಯಾಣಿಕರಿಗೆ ತೊಂದರೆಯಾಗಿತ್ತು, ಅಂದಿನಿಂದ ಈ ಮಾರ್ಗದ ರೈಲು ಪುನರಾರಂಭಿಸುವಂತೆ ರೈಲ್ವೇ ಸಚಿವಾಲಯಕ್ಕೆ ಒತ್ತಾಯಿಸಲಾಗಿತ್ತು. ಈಗ ಬಹುದಿನಗಳ ಬೇಡಿಕೆಯಾಗಿದ್ದ ಹುಬ್ಬಳ್ಳಿ-ನಿಜಾಮುದ್ದೀನ್ ಎಕ್ಸ್ಪ್ರೆಸ್ ರೈಲಿಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಹಸಿರು ನಿಶಾನೆ ತೋರಿಸಿದ್ದಾರೆ. ಹುಬ್ಬಳ್ಳಿಯಿಂದ ನೇರವಾಗಿ ನವದೆಹಲಿಗೆ ಪ್ರಯಾಣಿಸಲು ಸಾರ್ವಜನಿಕರಿಗೆ ಅನುಕೂಲವಾಗಲಿದೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಶಾಸಕರಾದ ಪ್ರಸಾದ್ ಅಬ್ಬಯ್ಯ, ಅರವಿಂದ ಬೆಲ್ಲದ, ಪ್ರದೀಪ್ ಶೆಟ್ಟರ್ ಸೇರಿದಂತೆ ಇತರರು ಭಾಗವಹಿಸುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಶ್ರೀ ತ್ಯಾಗರಾಜರು

ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರು ಶ್ರೀ ತ್ಯಾಗರಾಜರು

ಜೋಳದ ಬೆಳೆ

ಎಲ್ಲರಿಗೂ ಇಷ್ಟವಾಗುವ ಜೋಳದ ಬೆಳೆ