in

ಪುನೀತ್ ನಮ್ಮನ್ನಗಲಿ ಇಂದಿಗೆ ಒಂದು ವರ್ಷ, ಆದರೆ ಗಂಧದ ಗುಡಿ ನೋಡಿದಾಗ ಮತ್ತೆ ಕಣ್ಣಮುಂದೆ ಬಂದಹಾಗೆ ಅನ್ನಿಸುತ್ತೆ

ಪುನೀತ್ ನಮ್ಮನ್ನಗಲಿ ಇಂದಿಗೆ ಒಂದು ವರ್ಷ
ಪುನೀತ್ ನಮ್ಮನ್ನಗಲಿ ಇಂದಿಗೆ ಒಂದು ವರ್ಷ

ಗಂಧದ ಗುಡಿ ( ಅನುವಾದ. ಸ್ಯಾಂಡಲ್‌ವುಡ್‌ನ  ವಾಸಸ್ಥಾನ ) ಅಮೋಘವರ್ಷ ಜೆಎಸ್ ನಿರ್ದೇಶಿಸಿದ 2022 ರ ಭಾರತೀಯ ಕನ್ನಡ ಭಾಷೆಯ ಡಾಕ್ಯುಡ್ರಾಮಾ ಚಲನಚಿತ್ರವಾಗಿದೆ. ಇದು ಸ್ವತಃ ಮತ್ತು ಪುನೀತ್ ರಾಜ್‌ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ನಟ ಪುನೀತ್ ರಾಜ್‌ಕುಮಾರ್ ಅವರ ಅಂತಿಮ ನೋಟವನ್ನು ಒಳಗೊಂಡಿದೆ. ಚಲನಚಿತ್ರವು 28 ಅಕ್ಟೋಬರ್ 2022 ರಂದು ಬಿಡುಗಡೆಯಾಯಿತು.

ಪುನೀತ್ ರಾಜ್‌ಕುಮಾರ್ ಅತ್ಯಾಸಕ್ತಿಯ ಪ್ರವಾಸ ಮತ್ತು ಸಾಹಸ ಪ್ರಿಯರು, ಕರ್ನಾಟಕದ ಶ್ರೀಮಂತ ಜೈವಿಕ ವೈವಿಧ್ಯತೆಯನ್ನು ಅನ್ವೇಷಿಸಲು ನಿರ್ಧರಿಸಿದರು, ಇದಕ್ಕಾಗಿ ಅವರು ಪ್ರಶಸ್ತಿ ವಿಜೇತ ವನ್ಯಜೀವಿ ಚಲನಚಿತ್ರ ನಿರ್ಮಾಪಕ ಅಮೋಘವರ್ಷ ಜೆಎಸ್ ಅವರೊಂದಿಗೆ ಕೈಜೋಡಿಸಿದರು. ಒಟ್ಟಾಗಿ, ಅವರು ರಾಜ್ಯದ ಉದ್ದ ಮತ್ತು ಅಗಲದಾದ್ಯಂತ ಪ್ರಯಾಣವನ್ನು ಪ್ರಾರಂಭಿಸುತ್ತಾರೆ, ಅಲ್ಲಿ ಅವರು ಗುಪ್ತ ರತ್ನಗಳ ದೃಶ್ಯವನ್ನು ಕಾಣುತ್ತಾರೆ.

ಪುನೀತ್ ನಮ್ಮನ್ನಗಲಿ ಇಂದಿಗೆ ಒಂದು ವರ್ಷ, ಆದರೆ ಗಂಧದ ಗುಡಿ ನೋಡಿದಾಗ ಮತ್ತೆ ಕಣ್ಣಮುಂದೆ ಬಂದಹಾಗೆ ಅನ್ನಿಸುತ್ತೆ
ಅಪ್ಪು ಸಮಾಧಿ ಬಳಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು

ಪುನೀತ್ ರಾಜ್‌ಕುಮಾರ್ ಅಗಲಿ ಇಂದಿಗೆ ಒಂದು ವರ್ಷ. ಇಡೀ ದೊಡ್ಮನೆ ಕುಟುಂಬ ಇಂದು ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ರಾಜ್‌ಕುಮಾರ್ ಸಮಾಧಿಗೆ ಭೇಟಿ ನೀಡಿ ಪೂಜೆ ಮಾಡಿದೆ.ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಮಗಳು ವಂದಿತಾ, ಶಿವರಾಜ್ ಕುಮಾರ್, ಗೀತ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಅವರ ಕುಟುಂಬ ಇನ್ನೂ ಹಲವು ಕುಟುಂಬ ಸದಸ್ಯರು ಆಗಮಿಸಿ ಅಪ್ಪು ಸಮಾಧಿಗೆ ಪೂಜೆ ಮಾಡಿ ನಮಿಸಿದರು. ಗಾಜನೂರಿನಿಂದಲೂ ಅನೇಕ ಬಂಧುಗಳು ಆಗಮಿಸಿ ಸಮಾಧಿಗೆ ಭೇಟಿ ನೀಡಿದ್ದಾರೆ. ಅಪ್ಪುಗಾಗಿ ಅವರಿಷ್ಟದ ತಿಂಡಿ-ತಿನಿಸುಗಳನ್ನು ಇಟ್ಟು ನಮಿಸಲಾಯಿತು.

ಈ ವೇಳೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸೇರಿದಂತೆ ಹಲವರು ಕಣ್ಣೀರು ಹಾಕಿದರು. ಬಳಿಕ ಅನ್ನಸಂತರ್ಪಣೆಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಚಾಲನೆ ನೀಡಿದರು. ರಾತ್ರಿಯಿಂದಲೇ ನಡೆಯುತ್ತಿರುವ ಅಪ್ಪು ಗೀತನಮನ ಕಾರ್ಯಕ್ರಮದಲ್ಲಿ ಶಿವಣ್ಣ ಎರಡು ಹಾಡುಗಳನ್ನು ಹಾಡಿದರು. ರಾಜ್ಯದ ಮೂಲೆ-ಮೂಲೆಗಳಿಂದ ಜನ ಆಗಮಿಸಿದ್ದು, ಪುನೀತ್ ಸಮಾಧಿಗೆ ನಮಿಸುತ್ತಲೇ ಇದ್ದಾರೆ. ಭಾರಿ ಸಂಖ್ಯೆಯ ಜನ ಸಮಾಧಿಯ ಬಳಿ ಸೇರಿದ್ದು, ಅಪ್ಪುಗಾಗಿ ಹಾರಗಳು, ಅವರಿಗಿಷ್ಟದ ತಿಂಡಿ-ತಿನಿಸುಗಳನ್ನು ಜನ ತಂದಿದ್ದಾರೆ. ಪುನೀತ್ ರಾಜ್ ಕುಮಾರ್ ನಟನೆಯ ಗಂಧದ ಗುಡಿ ಡಾಕ್ಯುಡ್ರಾಮಾ ಚಿತ್ರ ಇಂದು ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಈ ಚಿತ್ರದ ವಿಶೇಷ ಅಂದರೆ, ಅಪ್ಪು ಅಪ್ಪು ಆಗಿಯೇ ಕಾಣಿಸಿಕೊಂಡಿದ್ದಾರೆ. ಯಾವುದೇ ಮೇಕಪ್ ಇಲ್ಲದೇ, ಡೈಲಾಗ್ ಹೊಡೆಯದೇ ಸರಳವಾಗಿ ಹಾಗೂ ಸಹಜವಾಗಿದ್ದಾರೆ. ಹಾಗಾಗಿ ಪುನೀತ್ ಮತ್ತಷ್ಟು ಹತ್ತಿರವಾಗುತ್ತಾರೆ.

ಪುನೀತ್ ನಮ್ಮನ್ನಗಲಿ ಇಂದಿಗೆ ಒಂದು ವರ್ಷ, ಆದರೆ ಗಂಧದ ಗುಡಿ ನೋಡಿದಾಗ ಮತ್ತೆ ಕಣ್ಣಮುಂದೆ ಬಂದಹಾಗೆ ಅನ್ನಿಸುತ್ತೆ
ಪುನೀತ್ ಮನೆಯಲ್ಲಿ

ಈ ಚಿತ್ರದಲ್ಲಿ ಪುನೀತ್ ಕಾಡಿನ ಮಧ್ಯೆ ಹೋದಾಗ, ವಿಷ ಸರ್ಪಗಳನ್ನು ಕಾಣುತ್ತಾರೆ. ಹುಲಿ, ಚಿರತೆಗಳನ್ನು ನೋಡುತ್ತಾರೆ. ಈ ಸಂದರ್ಭದಲ್ಲಿ ಅವರು ಮಾತೊಂದನ್ನು ಆಡುತ್ತಾರೆ. ಆ ಮಾತು ನೋಡುಗನನ್ನು ಭಾವುಕನಾಗಿಸುತ್ತದೆ. ಕಾಡಿನೊಳಗೆ ವಿಷದ ಹಾವು ಕಾಣುತ್ತಾ, ನಿರ್ದೇಶಕ ಅಮೋಘ ವರ್ಷ ಜೊತೆ ತಮಾಷೆಯಾಗಿ ಮಾತನಾಡಿದರೂ ಅದೀಗ ಪ್ರೇಕ್ಷಕರನ್ನು ಕಣ್ಣೀರು ಹಾಕಿಸುತ್ತದೆ. ಹಾವು ನೋಡುತ್ತಾ, ‘ಹೆಂಡ್ತಿ ಮಕ್ಕಳನ್ನು ಮನೇಲಿ ಬಿಟ್ಟು ಬಂದಿದ್ದೀನಿ. ಸೇಫ್ ಆಗಿ ಮನೆ ಸೇರ್ತೀನಿ ತಾನೆ?’ ಎಂದು ಪ್ರಶ್ನೆ ಮಾಡುತ್ತಾರೆ. ಅಂದು ಸೇಫ್ ಆಗಿಯೇ ಮನೆಗೆ ಬಂದ ಪುನೀತ್ ರಾಜ್ ಕುಮಾರ್, ಆ ನಂತರ ಆಸ್ಪತ್ರೆಗೆ ಹೋದವರು ಮತ್ತೆ ಸೇಫ್ ಆಗಿ ಬರಲಿಲ್ಲ ಎನ್ನುವುದು ನೋವಿನ ಸಂಗತಿ. ಈ ಮಾತು ಕೇಳುತ್ತಿದ್ದಂತೆಯೇ ಕಣ್ಣೀರು ಬರುವುದು ಸತ್ಯ.ಕರ್ನಾಟಕದ ಅರಣ್ಯ ಸಂಪತ್ತು ಮತ್ತು ವನ್ಯಜೀವಿ ಜಗತ್ತನ್ನು ಕಣ್ಣಿಗೆ ಕಟ್ಟುವಂತೆ ‘ಗಂಧದ ಗುಡಿ’ ತೆರೆದಿಟ್ಟಿದೆ. ಅತ್ಯುತ್ತಮವಾದ ಛಾಯಾಗ್ರಹಣದಿಂದ ಬೇರೊಂದು ಲೋಕವನ್ನೇ ನೋಡಿದಂತಹ ಅನುಭವ ಎಲ್ಲರಿಗೂ ಆಗುತ್ತಿದೆ. ಕರ್ನಾಟಕದ ಪ್ರಕೃತಿ ಸೌಂದರ್ಯವನ್ನು ದೊಡ್ಡ ಪರದೆಯಲ್ಲಿ ಪ್ರೇಕ್ಷಕರು ಕಣ್ತುಂಬಿಕೊಳ್ಳುತ್ತಿದ್ದಾರೆ. ಪುನೀತ್​ ಅವರನ್ನು ನೋಡಿ ಫ್ಯಾನ್ಸ್​ ಕಣ್ಣುಗಳು ತೇವ ಆಗುತ್ತಿವೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ನಂದಾವರ ಶ್ರೀ ವಿನಾಯಕ ಶಂಕರನಾರಾಯಣ

ನಂದಾವರ ಶ್ರೀ ವಿನಾಯಕ ಶಂಕರನಾರಾಯಣ

ನಾಥಮುನಿ

ನಾಥಮುನಿ ವೈಷ್ಣವ ಆಚಾರ್ಯರಲ್ಲಿ ಮೊದಲನೆಯವರು