ಡಾ. ರಾಜ್ ಕುಟುಂಬದ ಎಲ್ಲರೂ ಸೇರಿ ‘ಪುನೀತ ಪರ್ವ’ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಶಿವರಾಜ್ಕುಮಾರ್, ಗೀತಾ ಶಿವರಾಜ್ಕುಮಾರ್, ಅಶ್ವಿನಿ ಪುನೀತ್ ರಾಜ್ಕುಮಾರ್ ಸೇರಿದಂತೆ ಎಲ್ಲರೂ ಇದರಲ್ಲಿ ಭಾಗಿ ಆಗಿದ್ದಾರೆ.
ಬಹಳ ಅದ್ದೂರಿಯಾಗಿ ‘ಪುನೀತ ಪರ್ವ’ಕಾರ್ಯಕ್ರಮ ನಡೆದಿದೆ. ಡಾ. ರಾಜ್ಕುಮಾರ್ ಕುಟುಂಬದ ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಎಲ್ಲರೂ ಸೇರಿ ‘ಬೊಂಬೆ ಹೇಳುತೈತೆ..’ ಗೀತೆಯನ್ನು ಹೇಳುವ ಮೂಲಕ ಪುನೀತ್ ರಾಜ್ಕುಮಾರ್ಗೆ ನಮನ ಸಲ್ಲಿಸಿದರು. ಈ ವೇಳೆ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಕಣ್ಣೀರು ಹಾಕಿದರು. ಇಡೀ ವಾತಾವರಣ ತುಂಬ ಭಾವುಕವಾಗಿತ್ತು. ಅ.28 ರಂದು ಚಿತ್ರಮಂದಿರದಲ್ಲಿ ‘ಗಂಧದ ಗುಡಿ’ ಸಾಕ್ಷ್ಯಚಿತ್ರ ಬಿಡುಗಡೆ ಆಗಲಿದೆ.
ಪುನೀತ್ ರಾಜ್ಕುಮಾರ್ ಅವರಿಗೆ ‘ಪುನೀತ ಪರ್ವ’ ಕಾರ್ಯಕ್ರಮದಲ್ಲಿ ಗೌರವ ಸಲ್ಲಿಸಲಾಯಿತು. ಸೂರ್ಯ, ಅಖಿಲ್ ಅಕ್ಕಿನೇನಿ, ರಾಣಾ ದಗ್ಗುಬಾಟಿ, ಸಿದ್ದಾರ್ಥ್ ಸೇರಿದಂತೆ ಅನೇಕ ನಟರ ಈ ಕಾರ್ಯಕ್ರಮಕ್ಕೆ ಹಾಜರಿ ಹಾಕಿದರು. ಕಮಲ್ ಹಾಸನ್ ಮತ್ತು ಅಮಿತಾಭ್ ಬಚ್ಚನ್ ಅವರು ವಿಡಿಯೋ ಮೂಲಕ ಶುಭ ಹಾರೈಸಿದರು. ರಮ್ಯಾ, ಪ್ರಭುದೇವ, ಶಿವರಾಜ್ಕುಮಾರ್ ಮುಂತಾದವರು ವೇದಿಕೆ ಮೇಲೆ ಡ್ಯಾನ್ಸ್ ಮಾಡಿ ಪುನೀತ್ಗೆ ನಮನ ಸಲ್ಲಿಸಿದರು. ಲಕ್ಷಾಂತರ ಅಭಿಮಾನಿಗಳು ಇದರಲ್ಲಿ ಭಾಗಿ ಆದರು. ತುಂಬ ಅಚ್ಚುಕಟ್ಟಾಗಿ ದೊಡ್ಮನೆ ಕುಟುಂಬದವರು ಈ ಕಾರ್ಯಕ್ರಮ ನಡೆಸಿಕೊಟ್ಟರು.
ನಟನಾಗಿ ಮಾತ್ರವಲ್ಲದೇ ಸಾಮಾಜಿಕ ಕಾರ್ಯಗಳ ಮೂಲಕವೂ ಪುನೀತ್ ರಾಜ್ಕುಮಾರ್ ಅವರು ಜನರ ಆಶೀರ್ವಾದ ಪಡೆದಿದ್ದರು. ಅವರು ಮಾಡಿದ ಕಾರ್ಯಗಳು ಎಲ್ಲರಿಗೂ ಮಾದರಿ ಆಗಿವೆ. ಅವರನ್ನೇ ಸ್ಫೂರ್ತಿಯಾಗಿ ಇಟ್ಟುಕೊಂಡು ಅನೇಕರು ಹಲವು ಜನಪರ ಕಾರ್ಯಗಳನ್ನು ಮಾಡುತ್ತಾ ಇದ್ದಾರೆ. ಅದೇ ರೀತಿ ನಟ ಪ್ರಕಾಶ್ ರೈ ಅವರು ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಆಂಬ್ಯುಲೆನ್ಸ್ ಸೇವೆ ನೀಡಲು ತೀರ್ಮಾನಿಸಿದರು. ಅದಕ್ಕಾಗಿ ದೊಡ್ಮನೆ ಕುಟುಂಬ ಕೂಡ ಸಾಥ್ ನೀಡಿದೆ. ಶಿವರಾಜ್ಕುಮಾರ್ ಫ್ಯಾಮಿಲಿಯಿಂದ ಒಂದು ಆಂಬ್ಯುಲೆನ್ಸ್ ನೀಡಲಾಗಿದೆ. ಅದೇ ರೀತಿ ‘ಮೆಗಾ ಸ್ಟಾರ್’ ಚಿರಂಜೀವಿ, ಕಾಲಿವುಡ್ ನಟ ಸೂರ್ಯ ಕೂಡ ಆಂಬ್ಯುಲೆನ್ಸ್ ನೀಡುವ ಮೂಲಕ ತಮ್ಮ ಸಹಾಯ ಹಸ್ತ ಚಾಚಿದ್ದಾರೆ. ‘ಪುನೀತ ಪರ್ವ’ ಕಾರ್ಯಕ್ರಮದ ವೇಳೆ ಯಶ್ ಕೂಡ ಇದಕ್ಕೆ ತಮ್ಮ ಸಹಕಾರ ಇದೆ ಎಂಬುದನ್ನು ಘೋಷಿಸಿದರು.
ಅಪ್ಪು ಹೆಸರಿನಲ್ಲಿ ರಾಜ್ಯಾದ್ಯಂತ ಆಂಬ್ಯುಲೆನ್ಸ್ ಸೇವೆ; ಕೈ ಜೋಡಿಸಿದ ಯಶ್, ಸೂರ್ಯ, ಪ್ರಕಾಶ್ ರೈ
ಬಡವರಿಗಾಗಿ ಕರ್ನಾಟಕದಾದ್ಯಂತ ‘ಅಪ್ಪು ಎಕ್ಸ್ಪ್ರೆಸ್ ಆಂಬ್ಯುಲೆನ್ಸ್’ ಓಡಾಡಲಿದೆ. ಅದಕ್ಕಾಗಿ ಯಶ್, ಪ್ರಕಾಶ್ ರೈ, ಸೂರ್ಯ, ಚಿರಂಜೀವಿ, ಶಿವಣ್ಣ ಮುಂತಾದವರು ಕೈ ಜೋಡಿಸಿದ್ದಾರೆ.
ಪುನೀತ್ ರಾಜ್ಕುಮಾರ್ ಬಗ್ಗೆ ಬರೀ ಮಾತನಾಡುವುದಲ್ಲ. ಏನಾದರೂ ಮಾಡಬೇಕು ಎಂಬುದು ಪ್ರಕಾಶ್ ರಾಜ್ ಅವರು ಆಶಯ. ಅದರ ಫಲವಾಗಿಯೇ ಕಾರ್ಯರೂಪಕ್ಕೆ ಬಂದಿರುವುದು ಅಪ್ಪು ಹೆಸರಿನ ಆಂಬ್ಯುಲೆನ್ಸ್ ಸೇವೆ. ಅದಕ್ಕೆ ಅನೇಕ ಸ್ಟಾರ್ ನಟರ ಕೈ ಜೋಡಿಸಿರುವುದು ಶ್ಲಾಘನೀಯ. ‘ಬಡವರಿಗೋಸ್ಕರ ಕರ್ನಾಟದಲ್ಲಿ ಅಪ್ಪು ಎಕ್ಸ್ಪ್ರೆಸ್ ಎಂಬ ಆಂಬ್ಯುಲೆನ್ಸ್ ಓಡಬೇಕು ಎಂಬ ಆಸೆ ನನ್ನದು ಎಂದು ಶಿವಣ್ಣನ ಬಳಿ ಹೇಳಿದೆ. ಅವರ ಕುಟುಂಬದ ಕಡೆಯಿಂದ ಒಂದು ಆಂಬ್ಯುಲೆನ್ಸ್ ನೀಡಿದರು’ ಎಂದಿದ್ದಾರೆ ಪ್ರಕಾಶ್ ರೈ.
ಯಶ್ ಅವರು ಈ ಬಗ್ಗೆ ವೇದಿಕೆಯಲ್ಲೇ ಮಾತಾಡಿದರು. ‘ಇಡೀ ಕರುನಾಡಿಗೆ ಪ್ರಕಾಶ್ ರಾಜ್ ಅವರು ಆಂಬ್ಯುಲೆನ್ಸ್ ನೀಡಲು ಮುಂದಾಗಿರುವುದು ಈಗ ಗೊತ್ತಾಯಿತು. ಈಗ ಎಷ್ಟು ಆಂಬ್ಯುಲೆನ್ಸ್ ಆಗಿದೆಯೋ ಅದನ್ನು ಬಿಟ್ಟು ಇನ್ನುಳಿದ ಎಲ್ಲ ಜಿಲ್ಲೆಗೂ ನಾನು ಮತ್ತು ಕೆವಿಎನ್ ಪ್ರೊಡಕ್ಷನ್ನವರು ಜೊತೆ ಸೇರಿ ಆಂಬ್ಯುಲೆನ್ಸ್ ನೀಡುತ್ತೇನೆ’ ಎಂದು ಯಶ್ ಘೋಷಿಸಿದರು.
‘ಬೊಂಬೆ ಹೇಳುತೈತೆ..’ ಗೀತೆಯನ್ನು ಹೇಳುವ ಮೂಲಕ ಪುನೀತ್ ರಾಜ್ಕುಮಾರ್ಗೆ ನಮನ ಸಲ್ಲಿಸಿದರು. ಈ ವೇಳೆ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಕಣ್ಣೀರು ಹಾಕಿದರು.
ಸುಧಾಮೂರ್ತಿ ಅವರ ಬಗ್ಗೆ ಪುನೀತ್ ರಾಜ್ಕುಮಾರ್ ಅವರಿಗೆ ಅಪಾರ ಗೌರವ ಇತ್ತು. ಆ ಘಟನೆಗಳನ್ನು ‘ಪುನೀತ ಪರ್ವ’ ವೇದಿಕೆ ಮೇಲೆ ಸುಧಾಮೂರ್ತಿ ನೆನಪಿಸಿಕೊಂಡರು.
ಬಹುಭಾಷಾ ನಟ ಶರತ್ ಕುಮಾರ್ ಅವರಿಗೂ ಪುನೀತ್ ರಾಜ್ಕುಮಾರ್ ಜೊತೆ ಒಡನಾಟ ಇತ್ತು. ಅಪ್ಪು ಬಗ್ಗೆ ಅವರು ಕೂಡ ವೇದಿಕೆಯ ಮೇಲೆ ಪ್ರೀತಿಯ ಮಾತುಗಳನ್ನು ಆಡಿದರು. ಹಾಡಿನ ಮೂಲಕ ನಮನ ಸಲ್ಲಿಸಿದರು.
ಬಹುಭಾಷಾ ನಟ ಶರತ್ ಕುಮಾರ್ ಅವರಿಗೂ ಪುನೀತ್ ರಾಜ್ಕುಮಾರ್ ಜೊತೆ ಒಡನಾಟ ಇತ್ತು. ಅಪ್ಪು ಬಗ್ಗೆ ಅವರು ಕೂಡ ವೇದಿಕೆಯ ಮೇಲೆ ಪ್ರೀತಿಯ ಮಾತುಗಳನ್ನು ಆಡಿದರು. ಹಾಡಿನ ಮೂಲಕ ನಮನ ಸಲ್ಲಿಸಿದರು.
ಗಾಯಕ ವಿಜಯ್ ಪ್ರಕಾಶ್ ಅವರು ವೇದಿಕೆಯಲ್ಲಿ ಪುನೀತ್ ನೆನಪಿನಲ್ಲಿ ಕವಿತೆ ಓದಿದರು. ಬಳಿಕ ‘ಬೊಂಬೆ ಹೇಳುತೈತೆ..’ ಗೀತೆಯನ್ನು ಹಾಡಿ ಎಲ್ಲರನ್ನೂ ರಂಜಿಸಿದರು.
ಧ್ರುವ ಸರ್ಜಾ, ರಾಜ್ ಬಿ. ಶೆಟ್ಟಿ, ದುನಿಯಾ ವಿಜಯ್ ಮುಂತಾದ ಕಲಾವಿದರು ಕೂಡ ಪುನೀತ್ ರಾಜ್ಕುಮಾರ್ ಜೊತೆಗಿನ ನೆನಪುಗಳನ್ನು ಮೆಲುಕು ಹಾಕಿದರು. ಮಾತನಾಡುತ್ತ ದುನಿಯಾ ವಿಜಯ್ ಭಾವುಕರಾದರು.
ಧನ್ಯವಾದಗಳು.
GIPHY App Key not set. Please check settings