in

ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದ ನೀರಜ್ ಚೋಪ್ರಾ

ನೀರಜ್ ಚೋಪ್ರಾ
ನೀರಜ್ ಚೋಪ್ರಾ

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ನಂತರ ನೀರಜ್ ಚೋಪ್ರಾ ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದ್ದಾರೆ. ನೀರಜ್ ಡೈಮಂಡ್ ಲೀಗ್ ಫೈನಲ್ ಗೆದ್ದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡರು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ನಂತರ ನೀರಜ್ ಚೋಪ್ರಾ ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದ್ದಾರೆ. ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಜಾವೆಲಿನ್ ಸ್ಪರ್ಧೆಯಲ್ಲಿ ಮತ್ತೊಮ್ಮೆ ಅದ್ಭುತ ಪ್ರದರ್ಶನ ನೀಡುವ ಮೂಲಕ ಜ್ಯೂರಿಚ್​ನಲ್ಲಿ ನಡೆದ ಡೈಮಂಡ್ ಲೀಗ್ ಕೂಟದಲ್ಲಿ ಚಿನ್ನದ ಪದಕ ಗೆದ್ದರು. ಈ ಮೂಲಕ ಡೈಮಂಡ್ ಲೀಗ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಎಂಬ ಸಾಧನೆ ಮಾಡಿದರು. ಡೈಮಂಡ್ ಲೀಗ್ ಫೈನಲ್‌ನಲ್ಲಿ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಗೆದ್ದಿದ್ದಾರೆ. ಜ್ಯೂರಿಚ್‌ನಲ್ಲಿ ನಡೆದ ಫೈನಲ್‌ನಲ್ಲಿ ನೀರಜ್ 88.44 ಮೀಟರ್‌ ದೂರ ಎಸೆದು ಪದಕಕ್ಕೆ ಮುತ್ತಿಕ್ಕಿದರು.

ನೀರಜ್ ಚೋಪ್ರಾ ಒಬ್ಬ ಭಾರತೀಯ ಟ್ರ್ಯಾಕ್ ಮತ್ತು ಫ಼ೀಲ್ಡ್ ಕ್ರೀಡಾಪಟು. ಇವರು ಜಾವೆಲಿನ್ ಎಸೆತ ವಿಭಾಗದಲ್ಲಿ ಕ್ರೀಡಾಪಟುವಾಗಿದ್ದಾರೆ. ಇವರು ೨೦೨೦ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ೮೭.೫೮ ಮೀ. ದೂರ ಜಾವೆಲಿನ್ ಎಸೆಯುವ ಮೂಲಕ ಸ್ವರ್ಣ ಪದಕ ಗೆದ್ದರು. ಇದು ಒಲಿಂಪಿಕ್ಸ್‌ನ ಟ್ರಾಕ್ ಎಂಡ್ ಫೀಲ್ಡ್ ವಿಭಾಗದ ಇತಿಹಾಸದಲ್ಲಿ ಭಾರತವು ಗೆದ್ದ ಮೊದಲ ಸ್ವರ್ಣ ಪದಕವಾಗಿದೆ. ೨೦೧೮ರ ಏಷ್ಯನ್ ಗೇಮ್ಸ್ನಲ್ಲಿ ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿ ಸ್ವರ್ಣ ಪದಕ ಗೆದ್ದಿದ್ದಾರೆ. ಇವರು ೮೮.೦೬ ಮೀ. ದೂರ ಜಾವೆಲಿನ್ ಎಸೆದು ರಾಷ್ಟ್ರೀಯ ದಾಖಲೆ ಬರೆದಿದ್ದಾರೆ. ೨೦೧೮ರ ಕಾಮನ್ ವೆಲ್ತ್ ಗೇಮ್ಸ್ನಲ್ಲಿಯೂ ಬಂಗಾರದ ಪದಕ ಪಡೆದಿದ್ದರು. ೨೦೧೬ರ ಐಎಎಎಫ಼್ (ಇಂಟರ್ ನ್ಯಾಷನಲ್ ಅಸೋಸಿಯೇಶನ್ ಆಫ಼್ ಅತ್ಲೆಟಿಕ್ಸ್ ಫ಼ೆಡರೇಶನ್) ಕಿರಿಯರ ವಿಶ್ವ ಕ್ರೀಡಾಕೂಟದಲ್ಲಿ ಚಾಂಪಿಯನ್ ಆಗಿದ್ದರು, ಮಾತ್ರವಲ್ಲದೆ ಕಿರಿಯರ ಚಾಂಪಿಯನ್ ಶಿಪ್ ನಲ್ಲಿ ೮೬.೪೮ ಮೀ. ದೂರ ಜಾವೆಲಿನ್ ಎಸೆದು ವಿಶ್ವ ಜೂನಿಯರ್ ದಾಖಲೆ ಬರೆದರು. ೨೦೧೮ರ ಏಷ್ಯನ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಬಾವುಟ ಹಿಡಿದು ಭಾರತದ ಕ್ರೀಡಾಳುಗಳನ್ನು ಪ್ರತಿನಿಧಿಸಲು ಆಯ್ಕೆ ಮಾಡಲಾಗಿತ್ತು. ಇವರು ಐಎಎಎಫ಼್ ಡೈಮಂಡ್ ಲೀಗ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದ ನೀರಜ್ ಚೋಪ್ರಾ
ಡೈಮಂಡ್ ಲೀಗ್ ಫೈನಲ್ ಗೆದ್ದ ನೀರಜ್

ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ :
ನೀರಜ್ ಚೋಪ್ರಾ ಮತ್ತೊಮ್ಮೆ ಇತಿಹಾಸ ನಿರ್ಮಿಸಿದ್ದಾರೆ. ಡೈಮಂಡ್ ಲೀಗ್ ಫೈನಲ್‌ನಲ್ಲಿ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ 88.44 ಮೀಟರ್‌ ದೂರ ಎಸೆದು ಪದಕವನ್ನು ಗೆದ್ದು ಬೀಗಿದರು. 24 ವರ್ಷದ ನೀರಜ್ ಡೈಮಂಡ್ ಲೀಗ್ ಫೈನಲ್ ಗೆದ್ದ ಮೊದಲ ಭಾರತೀಯ ಎನಿಸಿಕೊಂಡರು. ಫೈನಲ್‌ನಲ್ಲಿ ಭಾರತದ ಆಟಗಾರ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಯಾಕುಬ್ ವಾಡ್ಲೆಡ್ಜ್ ಮತ್ತು ಜರ್ಮನಿಯ ಜೂಲಿಯನ್ ವೆಬರ್ ಅವರನ್ನು ಚೋಪ್ರಾ ಸೋಲಿಸಿದರು.

ನೀರಜ್ ಹರಿಯಾಣದ ಪಾಣಿಪತ್ ಸಮೀಪದ ಖಂಡಾರಾ ಗ್ರಾಮದ ನಿವಾಸಿ. ಅವರು ಆಗಸ್ಟ್ 27 ರಂದು ಡೈಮಂಡ್ ಲೀಗ್‌ನಲ್ಲಿ ಲುಸೇನ್ ಲೀಗ್‌ನಲ್ಲಿ ಪದಕವನ್ನು ಗೆದ್ದರು. ಆ ಬಳಿಕ ಎಲ್ಲರ ಕಣ್ಣು ಡೈಮಂಡ್ ಲೀಗ್‌ನತ್ತ ನೆಟ್ಟಿತ್ತು. ಅವರು ಈ ಹಿಂದೆ 2017 ಮತ್ತು 2018 ರಲ್ಲಿ ಫೈನಲ್‌ಗೆ ಆಡಿದ್ದರು. ಆದರೆ ಅವರು ಯಶಸ್ವಿಯಾಗಿರಲಿಲ್ಲ.

ಜ್ಯೂರಿಚ್‌ನಲ್ಲಿ ನೀರಜ್‌ಗೆ ಉತ್ತಮ ಆರಂಭ ಸಿಗಲಿಲ್ಲ. ಮೊದಲ ಥ್ರೋ ಫೌಲ್ ಪಡೆಯಿತು. ಗಾಯದಿಂದ ಬಳಲುತ್ತಿದ್ದ ನೀರಜ್ ಛಲ ಬಿಡಲಿಲ್ಲ. ಅವರು ಮತ್ತೊಂದು ಪ್ರಯತ್ನ ಮಾಡಿದರು. ಎರಡನೆ ಯತ್ನ ಯಶಸ್ವಿಯಾದ ಅವರು ಎದುರಾಳಿ ಆಟಗಾರರನ್ನು ಧೂಳಿಪಟ ಮಾಡಿದರು. ಮೂರನೇ ಪ್ರಯತ್ನ ಇನ್ನೂ ಉತ್ತಮವಾಗಿತ್ತು. ಎರಡನೇ ಪ್ರಯತ್ನದಲ್ಲಿ ಅವರು ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದರು. ಜಿ 88.44 ಮೀ ದಾಖಲೆಯ ಎಸೆತವನ್ನು ಎಸೆದಿದ್ದರು. ಮುಂದಿನ 4ಎಸೆತಗಳಲ್ಲಿ 88.00ಮೀ, 86.11ಮೀ, 87.00ಮೀ ಮತ್ತು 83.60ಮೀ ಎಸೆಯುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.

ನೀರಜ್ ಚೋಪ್ರಾ ಜನಿಸಿದ್ದು ಡಿಸೆಂಬರ್ ೨೪ ೧೯೯೭ ರಂದು. ಇವರು ಹುಟ್ಟಿದ್ದು ಹರ್ಯಾಣದ ಪಾಣಿಪತ್ ನಗರದ ಖಂದ್ರಾ ಎಂಬ ಹಳ್ಳಿಯಲ್ಲಿ. ಅವರ ಶಿಕ್ಷಣ ಪಡೆದಿದ್ದು ಡಿಎವಿ ಕಾಲೇಜು ಚಂಡೀಗಡದಲ್ಲಿ. ಅವರು ಭಾರತೀಯ ಸೈನ್ಯದ ಜೂನಿಯರ್ ನಿಯೋಜಿತ ಅಧಿಕಾರಿ (ಜೂನಿಯರ್ ಕಮೀಷನ್ಡ್ ಆಫ಼ೀಸರ್) ಯಾಗಿ, ನಾಯಿಬ್ ಸುಬೇದಾರ್ ಶ್ರೇಣಿಯೊಂದಿಗೆ ೨೦೧೬ರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕಳೆದ ವರ್ಷ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನಂತರ ನೀರಜ್ ಚೋಪ್ರಾ ಪ್ರಪಂಚದಾದ್ಯಂತ ಚರ್ಚೆಯಾದರು. ಅಭಿನವ್ ವೃಂದಾ ನಂತರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಲ್ಲದೆ, ನೀರಜ್ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು. ಈ ವರ್ಷ ನೀರಜ್ ಮೂರು ದೊಡ್ಡ ದಾಖಲೆಗಳನ್ನು ಮುರಿದರು. ಜುಲೈ 24 ರಂದು ಯುಎಸ್‌ಎಯ ಯುಜೀನ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಅವರು ಬೆಳ್ಳಿ ಪದಕವನ್ನು ಗೆದ್ದರು. ಈ ಮಧ್ಯೆ, ನೀರಜ್ ಗಾಯಗೊಂಡ ಕಾರಣದಿಂದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಲಿಲ್ಲ.

ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದ ನೀರಜ್ ಚೋಪ್ರಾ
ನೀರಜ್ ಚೋಪ್ರಾ

ನೀರಜ್ ಚೋಪ್ರಾ ೨೦೧೬ರ ದಕ್ಷಿಣ ಏಷ್ಯನ್ ಕ್ರೀಡಾಕೂಟದಲ್ಲಿ ೮೨.೨೩ ಮೀ. ಜಾವೆಲಿನ್ ಎಸೆದು ಚಿನ್ನದ ಪದಕ ಪಡೆಯುವುದರೊಂದಿಗೆ ಭಾರತದ ರಾಷ್ಟ್ರೀಯ ದಾಖಲೆಯನ್ನು ಸರಿಗಟ್ಟಿದರು. ಪೋಲೆಂಡ್ ನಲ್ಲಿ ನಡೆದ ೨೦೧೬ರ ಐಎಎಎಫ಼್ ಕಿರಿಯರ ವಿಶ್ವ ಕ್ರೀಡಾಕೂಟ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅವರು ವಿಶ್ವ ಜೂನಿಯರ್ ದಾಖಲೆಯನ್ನು ಕೂಡ ಮಾಡಿದ್ದರು. ೨೦೧೭ರ ಏಷ್ಯನ್ ಅತ್ಲೆಟಿಕ್ ಚಾಂಪಿಯನ್ ಶಿಪ್ಸ್ ನಲ್ಲಿ ನೀರಜ್ ೮೫.೨೩ ಮೀ. ಜಾವೆಲಿನ್ ಎಸೆದು ಸ್ವರ್ಣ ಪದಕ ಪಡೆದರು. ೨೦೧೮ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ೮೬.೪೭ ಮೀ. ಜಾವೆಲಿನ್ ಎಸೆದು ಹೊಸ ದಾಖಲೆಯೊಂದನ್ನು ನೊಂದಾಯಿಸಿಕೊಂಡರು. ಇದರೊಂದಿಗೆ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಬಂಗಾರದ ಪದಕ ಗೆದ್ದ ಮೊದಲಿಗನಾಗಿ ಜಾವೆಲಿನ್ ಎಸೆತ ವಿಭಾಗದಲ್ಲಿ ಗುರುತಿಸಿಕೊಂಡರು. ೨೦೧೮ರ ಮೇ ತಿಂಗಳಲ್ಲಿ ನಡೆದ ದೋಹ ಡೈಮಂಡ್ ಲೀಗ್ ಪಂದ್ಯದಲ್ಲಿ ಭಾಗವಹಿಸಿ ೮೭.೪೩ ಮೀ. ಜಾವೆಲಿನ್ ಎಸೆಯುವುದರೊಂದಿಗೆ ಹಳೆಯ ರಾಷ್ಟ್ರೀಯ ದಾಖಲೆಯನ್ನು ಮುರಿದರು. ಪ್ರಸ್ತುತ ಇವರು ಉವ್ ಹೋನ್ ರಿಂದ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ೨೦೧೮ರ ಆಗಸ್ಟ್ ೨೭ರಂದು ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ನೀರಜ್ ೮೮.೦೬ ಮೀ. ಜಾವೆಲಿನ್ ಎಸೆತದೊಂದಿಗೆ ಪುರುಷರ ಜಾವೆಲಿನ್ ಎಸೆತ ವಿಭಾಗದಲ್ಲಿ ಸ್ವರ್ಣ ಪದಕ ಗೆಲ್ಲುವುದರೊಂದಿಗೆ ಅವರ ವೈಯಕ್ತಿಕ ಉತ್ತಮ ದಾಖಲೆಯನ್ನೂ ಕೂಡ ಮಾಡಿದರು.ಫಿನ್ ಲ್ಯಾಂಡಿನ ಲ್ಯಾಪಿನ್ಲಾಟಿಯಲ್ಲಿ ನಡೆದ “ಸಾವೋ ಗೇಮ್ಸ್‌’ನಲ್ಲಿ ನೀರಜ್‌ ಸ್ವರ್ಣ ಪದಕ ಪಡೆದರು. ಜಾವೆಲಿನ್ ಥ್ರೋ ಫೈನಲ್‌ನಲ್ಲಿ ನೀರಜ್ ಚೋಪ್ರಾ 87.58 ಮೀಟರ್ ಅತ್ಯುತ್ತಮ ಎಸೆತದಲ್ಲಿ ಮೇಲುಗೈ ಸಾಧಿಸಿ ಒಲಿಂಪಿಕ್ಸ್‌ನಲ್ಲಿ ಭಾರತದ ಮೊದಲ ಚಿನ್ನ ಗೆದ್ದರು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಜೀತ ಪದ್ಧತಿ

ಜೀತ ಪದ್ಧತಿ ವ್ಯವಸ್ಥೆಯ ಬಗ್ಗೆ

ಸಾಲಿಗ್ರಾಮ ಗುರು ನರಸಿಂಹ

ಸಾಲಿಗ್ರಾಮ : ನಾರದ ಮಹರ್ಷಿಗಳು ಇಲ್ಲಿ ಗುರು ನರಸಿಂಹನ ಮೂರ್ತಿಯನ್ನು ಸ್ಥಾಪಿಸಿದರು