in

ರಾಷ್ಟ್ರೀಯ ಸುರಕ್ಷತಾ ದಿನವನ್ನು ಪ್ರತಿ ವರ್ಷ ಮಾರ್ಚ್ 4 ರಂದು ಆಚರಿಸಲಾಗುತ್ತದೆ

ರಾಷ್ಟ್ರೀಯ ಸುರಕ್ಷತಾ ದಿನ
ರಾಷ್ಟ್ರೀಯ ಸುರಕ್ಷತಾ ದಿನ

ರಾಷ್ಟ್ರೀಯ ಸುರಕ್ಷತಾ ದಿನವನ್ನು ಆಚರಿಸಲಾಗುತ್ತದೆ ಏಕೆಂದರೆ ಈ ದಿನದಂದು ಭಾರತದ ರಾಷ್ಟ್ರೀಯ ಸುರಕ್ಷತಾ ಮಂಡಳಿ ಅನ್ನು ಸ್ಥಾಪಿಸಲಾಯಿತು.

ರಾಷ್ಟ್ರೀಯ ಸುರಕ್ಷತಾ ಮಂಡಳಿಯು ರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಲಾಭರಹಿತ ಮತ್ತು ಸ್ವ-ಹಣಕಾಸು ಸಂಸ್ಥೆಯಾಗಿದೆ. ಸುರಕ್ಷತಾ ಪ್ರೋಟೋಕಾಲ್‌ಗಳು ಮತ್ತು ಯಾವುದೇ ರೀತಿಯ ಅಪಘಾತಗಳು ಅಥವಾ ದುರ್ಘಟನೆಗಳನ್ನು ತಪ್ಪಿಸಲು ಗಂಭೀರವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಇದು ಹೊಂದಿದೆ.

ರಾಷ್ಟ್ರೀಯ ಸುರಕ್ಷತಾ ದಿನವನ್ನು ಪ್ರತಿ ವರ್ಷ ಮಾರ್ಚ್ 4ರಂದು ಆಚರಿಸಲಾಗುತ್ತದೆ. ಕೆಲಸದ ಸ್ಥಳದಲ್ಲಿ ದುರ್ಘಟನೆಗಳನ್ನು ತಪ್ಪಿಸಲು ಸುರಕ್ಷತಾ ನಿಯಮಗಳು ಮತ್ತು ಕ್ರಮಗಳನ್ನು ಅನುಸರಿಸುವ ಪ್ರಾಮುಖ್ಯತೆಯನ್ನು ಹೈಲೈಟ್ ಮಾಡುವ ಗುರಿಯನ್ನು ಈ ದಿನದ ಆಚರಣೆ ಹೊಂದಿದೆ. ಸುರಕ್ಷತೆಯ ಕುರಿತು ಜಾಗೃತಿ ಮೂಡಿಸುವುದು ಮುಖ್ಯ ಉದ್ದೇಶ ಹಾಗೂ ಬದ್ಧತೆ. ಸುರಕ್ಷತಾ ತತ್ವಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಭಾರತ ಸರಕಾರ ರಾಷ್ಟ್ರೀಯ ಸುರಕ್ಷತಾ ಮಂಡಳಿಯ ರಚನೆ ಮಾಡಿದೆ. ಇದರ ಕಾರ್ಯಗಳಲ್ಲಿ ರಸ್ತೆ ಸುರಕ್ಷತೆ, ಕೆಲಸದ ಸ್ಥಳದ ಸುರಕ್ಷತೆ, ಮಾನವ ಆರೋಗ್ಯ ಮತ್ತು ಪರಿಸರ ಸುರಕ್ಷತೆಯ ಜಾಗೃತಿಯೂ ಸೇರಿದೆ. ರಾಷ್ಟ್ರೀಯ ಸುರಕ್ಷತಾ ಮಂಡಳಿಯು ರಾಷ್ಟ್ರೀಯ ಮಟ್ಟದ ಸಂಸ್ಥೆ ಹಾಗೂ ಇದೊಂದು ಎನ್‌ಜಿಒ- ಲಾಭರಹಿತ ಸಂಸ್ಥೆಯಾಗಿದೆ. ಪ್ರತಿ ವರ್ಷ ಈ ದಿನವನ್ನು ಒಂದೊಂದು ಥೀಮ್‌ನಲ್ಲಿ ಆಚರಿಸಲಾಗುತ್ತದೆ. 

2022ರ ರಾಷ್ಟ್ರೀಯ ಸುರಕ್ಷತಾ ದಿನದ ಥೀಮ್ ‘ಯುವ ಮನಸ್ಸುಗಳನ್ನು ಪೋಷಿಸಿ- ಸುರಕ್ಷತಾ ಸಂಸ್ಕೃತಿಯನ್ನು ಬೆಳೆಸಿಕೊಳ್ಳಿ’ ಎಂಬುದಾಗಿದೆ.

ರಾಷ್ಟ್ರೀಯ ಸುರಕ್ಷತಾ ದಿನವನ್ನು ಪ್ರತಿ ವರ್ಷ ಮಾರ್ಚ್ 4 ರಂದು ಆಚರಿಸಲಾಗುತ್ತದೆ
ಪ್ರತಿ ವರ್ಷ ಈ ದಿನವನ್ನು ಒಂದೊಂದು ಥೀಮ್‌ನಲ್ಲಿ ಆಚರಿಸಲಾಗುತ್ತದೆ

ರಾಷ್ಟ್ರೀಯ ಸುರಕ್ಷತಾ ದಿನವನ್ನು ಮೊದಲ ಬಾರಿಗೆ 1972 ರಲ್ಲಿ ರಾಷ್ಟ್ರೀಯ ಸುರಕ್ಷತಾ ಮಂಡಳಿಯ ಸಂಸ್ಥಾಪನಾ ದಿನದಂದು ಆಚರಿಸಲಾಯಿತು. ಇದನ್ನು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು 4 ಮಾರ್ಚ್ 1965 ರಂದು ಸುರಕ್ಷತೆ, ಆರೋಗ್ಯ ಮತ್ತು ಪರಿಸರದ ಮೇಲೆ ಸ್ವಯಂಪ್ರೇರಿತ ದಿನಚರಿಯನ್ನು ಅಭಿವೃದ್ಧಿಪಡಿಸಲು ಮತ್ತು ಆಚರಣೆಗೆ ತರಲು ಸ್ಥಾಪಿಸಿತು.

ನ್ಯಾಷನಲ್ ಸೇಫ್ಟಿ ಕೌನ್ಸಿಲ್ ಆಫ್ ಇಂಡಿಯಾ ಎಂಬುದು ನಾಗರಿಕರ ಆರೋಗ್ಯ ಮತ್ತು ಸುರಕ್ಷತೆಗಾಗಿ ಸ್ಥಾಪಿತವಾದ ಲಾಭರಹಿತ ಸಂಸ್ಥೆ. 1966ರ ಮಾರ್ಚ್ 4ರಂದು ರಾಷ್ಟ್ರೀ ಯ ಸಂಪನ್ಮೂಲ ಗಳ ಸುರಕ್ಷತೆ, ಆರೋಗ್ಯ ಮತ್ತು ಪರಿಸರದ ಬಗ್ಗೆ ರಾಷ್ಟೀ ಯ ಮಟ್ಟದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಸಂಸ್ಥೆಯನ್ನು ಹುಟ್ಟು ಹಾಕಲಾಯಿತು. ಈ ಸಂಸ್ಥೆಯ ಕೇಂದ್ರ ಕಚೇರಿ ಮುಂಬೈಯಲ್ಲಿದ್ದು, ಕೈಗಾರಿಕಾ ಸಂಸ್ಥೆಗಳ ಬಗ್ಗೆ ಹೆಚ್ಚಿ ನ ಸುರಕ್ಷತೆ ಮತ್ತು ಭದ್ರತೆಯನ್ನು ಮೂಡಿಸುವ ಹೆಚ್ಚಿನ ಹೊಣೆಗಾರಿಕೆಯನ್ನು ಹೊಂದಿದೆ. ಜನರಲ್ಲಿ ರಾಷ್ಟ್ರೀಯ ಸಂಪನ್ಮೂಲಗಳ ಸುರಕ್ಷತೆ, ಕೈಗಾರಿಕೀಕರಣದಿಂದ ಆಗುವ ಆರೋಗ್ಯದ ಮೇಲಿನ ದುಷ್ಪರಿಣಾಮ ಮತ್ತು ಪರಿಸರದ ಮೇಲಾಗುವ ದೌರ್ಜನ್ಯದ ಬಗ್ಗೆ ಜಾಗೃತಿ ಮೂಡಿಸಿ, ಜನರಲ್ಲಿ ವೈಜ್ಞಾ ನಿಕ ಚಿಂತನೆ, ರೋಗ ತಡೆಗಟ್ಟುವ ಮಾನಸಿಕ ಸ್ಥಿತಿ ಮತ್ತು ವಿಪತ್ತುಗಳನ್ನು ಎದುರಿಸುವಲ್ಲಿ ರಚನಾತ್ಮಕ ಚಿಂತನೆಗಳನ್ನು ಮೂಡಿಸುವ ಮೂಲ ಉದ್ದೇಶವನ್ನು ರಾಷ್ಟ್ರೀಯ ಸುರಕ್ಷತಾ ಪರಿಷತ್ತು ಹೊಂದಿದೆ. ಈ ನಿಟ್ಟಿನಲ್ಲಿ ಮಾರ್ಚ್ 6ರಿಂದ 10ರ ವರೆಗೆ ರಾಷ್ಟ್ರದಾದ್ಯಂ ತ ರಾಷ್ಟ್ರೀ ಯ ಸುರಕ್ಷತಾ ಸಪ್ತಾಹ ಎಂದು ಆಚರಿಸಲಾಗುತ್ತದೆ.

ಹೇಗೆ ಆಚರಿಸಲಾಗುತ್ತದೆ?

ಸಾಮಾನ್ಯವಾಗಿ ಕೈಗಾರಿಕೆಗಳ ಸಾಂದ್ರತೆ ಜಾಸ್ತಿ ಇರುವಲ್ಲಿ ಸರಕಾರಿ ಮತ್ತು ಸರಕಾರೇತರ ಸಂಸ್ಥೆಗಳು ಒಂದುಗೂಡಿ, ಇತರ ಆರೋಗ್ಯ ಸಂಸ್ಥೆ ಗಳು, ಅಗ್ನಿಶಾಮಕದಳ, ಗೃಹರಕ್ಷಕದಳ, ಪೋಲಿಸ್ ಇಲಾಖೆ, ಅರಣ್ಯ ಇಲಾಖೆ, ಸಾರಿಗೆ ಇಲಾಖೆ ಮತ್ತು ಕೈಗಾರಿಕಾ ಸಂಘ ಸಂಸ್ಥೆಗಳೆಲ್ಲಾ ಒಟ್ಟು ಸೇರಿ ಈ ಆಚರಣೆ ಮಾಡುತ್ತವೆ. ಜನರಲ್ಲಿ ಮತ್ತು ಸಾರ್ವಜನಿಕರಲ್ಲಿ ಕೈಗಾರಿಕಾ ಅವಘಡಗಳನ್ನು ತಡೆಯುವುದು ಹೇಗೆ ಮತ್ತು ಅವಘಡ ನಡೆದಾಗ ಮಾನವ ಸಂಪನ್ಮೂಲ, ಸಾರ್ವಜನಿಕ ಆಸ್ತಿಪಾಸ್ತಿಗಳ ನಾಶವನ್ನು ಯಾವ ರೀತಿ ಕಡಿಮೆಮಾಡುವುದು ಎಂಬುದರ ಬಗ್ಗೆ ಮಾಹಿತಿ ವಿನಿಮಯ ನಡೆಸಲಾಗುತ್ತದೆ.

ರಸ್ತೆ ಸುರಕ್ಷತೆ 

ರಾಷ್ಟ್ರೀಯ ಸುರಕ್ಷತಾ ದಿನವನ್ನು ಪ್ರತಿ ವರ್ಷ ಮಾರ್ಚ್ 4 ರಂದು ಆಚರಿಸಲಾಗುತ್ತದೆ
ವಿರುದ್ಧ ದಿಕ್ಕಿನಲ್ಲಿ ಚಲಿಸುವುದು ಬಹಳ ಅಪಾಯಕಾರಿ

ಮುಖ್ಯವಾಗಿ ಬೆಂಗಳೂರಿನಂಥ ನಗರಗಳಲ್ಲಿ ಎಲ್ಲರೂ ಮುನ್ನೆಚ್ಚರಿಕೆ ವಹಿಸಬೇಕಾದ್ದು ರಸ್ತೆ ನಿಯಮಗಳ ಪಾಲನೆ ಬಗ್ಗೆ. ಇದರಿಂದ ತಕ್ಷಣದ ಬಹುತೇಕ ಅಪಾಯಗಳನ್ನು ತಡೆಯಬಹುದು.

1. ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ. ಶೇಕಡಾ 50ರಷ್ಟು ಅಫಘಾತಗಳಿಗೆ ಮುಖ್ಯ ಕಾರಣ ಮದ್ಯಪಾನ.

2. ವಾಹನ ಚಾಲನೆ ಮಾಡುವಾಗ ಎಲ್ಲರೂ ಕಡ್ಡಾಯವಾಗಿ ಸೀಟು ಬೆಲ್ಟು ಧರಿಸಬೇಕು.

3. ದ್ವಿಚಕ್ರ ವಾಹನ ಚಾಲಕರು ಮತ್ತು ಜೊತೆ ಪ್ರಯಾಣಿಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು.

4. ನಿಮ್ಮ ಮುಂದಿನ ವಾಹನಗಳಿಂದ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಿ

5. ವಾಹನ ಚಲಾವಣೆ ಮಾಡುವಾಗ ಯಾವುದೇ ಕಾರಣಕ್ಕೆ ಮೊಬೈಲ್ ಬಳಸಬೇಡಿ.

6. ವಾಹನ ಚಲಾಯಿಸುವಾಗ ನಿಮ್ಮ ವೇಗದ ಮಿತಿಯನ್ನು ನಿಯಂತ್ರಣದಲ್ಲಿಡಿ. ಅವಸರವೇ ಅಫಘಾತಕ್ಕೆ ಕಾರಣ

7. ವಾಹನ ಚಲಾಯಿಸುವಾಗ ಯಾವತ್ತು ರಸ್ತೆಯ ಎಡಭಾಗದಲ್ಲಿ ಚಲಿಸಿ. ಬೇರೆ ವಾಹನಗಳು ನಿಮ್ಮನ್ನು ದಾಟಿ ಮುಂದೆ ಮುಂದೆ ಹೋಗಲು ಬಲಭಾಗದಲ್ಲಿ ಜಾಗವಿರಲಿ.

8. ಇನ್ನೊಂದು ವಾಹನವನ್ನು ಹಿಂದಕ್ಕೆ ಹಾಕಿ ಮುಂದೆ ಹೋಗುವಾಗ ಬಲಭಾಗದಿಂದಲೇ ಓವರ್‍ ಟೇಕ್ ಮಾಡಬೇಕು.

9. ಬಲಭಾಗಕ್ಕೆ ಅಥವಾ ಎಡಭಾಗಕ್ಕೆ ತಿರುಗುವಾಗ ಯಾವತ್ತೂ ಇಂಡಿಕೇಟರ್ ಸೂಚನೆ ಮೊದಲೇ ನೀಡತಕ್ಕದ್ದು.

10. ಹೈವೇಗಳಲ್ಲಿ ಚಲಿಸುವಾಗ ಲೇನ್‍ ಗಳನ್ನು ಕಾರಣವಿಲ್ಲದೆ ಬದಲಿಸಬೇಡಿ. ಲೇನ್ ಡಿಸಿಪ್ಲಿನ್ ಅಥವಾ ಶಿಸ್ತನ್ನು ಕಾಪಾಡಿಕೊಳ್ಳಿ.

11. ಏಕಮುಖ ರಸ್ತೆಗಳಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಿಸುವುದು ಬಹಳ ಅಪಾಯಕಾರಿ. ಯಾವತ್ತೂ ಈರೀತಿ ಮಾಡಬೇಡಿ.

12. ಸಿಗ್ನಲ್‌ ಗಳನ್ನು ಗೌರವಿಸಿ. ಸಿಗ್ನಲ್‌ಗಳನ್ನು ದಾಟಿ ಕಾನೂನು ಧಿಕ್ಕರಿಸುವುದು ಜೀವಕ್ಕೆ ಮಾರಕ.

ರಸ್ತೆ ಸುರಕ್ಷತಾ ನಿಯಮಗಳ ಪಾಲನೆಯಿಂದ ಯಾವುದೇ ಅಪಾಯಕ್ಕೆ ಆಹ್ವಾನ ನೀಡದಂತೆ ವಾಹನ ಚಾಲನೆ ಮಾಡಬಹುದು. ಅಲ್ಲದೆ, ನಿಯಮಗಳ ಪಾಲನೆ ಪಾದಚಾರಿಗಳ ಆರೋಗ್ಯಕ್ಕೆ ಕ್ಷೇಮಕರ. ನಿರ್ದಿಷ್ಟಪಡಿಸಿದ ನಿಯಮಗಳನ್ನು ಎಲ್ಲರೂ ಪಾಲಿಸುವುದರಿಂದ ಯಾರಿಗೂ ಹಾನಿಯಿಲ್ಲ. ಮನೆಯಿಂದ ಹೊರಟ ಹಾಗೇ ಮನೆಗೆ ಮರಳಬೇಕು ಎಂಬ ಇಚ್ಛೆ ಎಲ್ಲರಿಗೂ ಇರುತ್ತದೆ ಅಲ್ಲವೇ, ಈ ಕಾರಣಕ್ಕಾದರೂ ರಸ್ತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸೋಣ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕನ್ನಡ ವ್ಯಾಕರಣ : ಕನ್ನಡ ಸಂಧಿಗಳು : ಭಾಗ 1

ಕನ್ನಡ ವ್ಯಾಕರಣ : ಕನ್ನಡ ಸಂಧಿಗಳು : ಭಾಗ 1

ಹಾವುಗಳಿಲ್ಲದ ದೇಶ

ಜಗತ್ತಿನಲ್ಲಿ ಹಾವುಗಳಿಲ್ಲದ ದೇಶವೊಂದಿದೆ ಎಂದು ನಿಮಗೆ ತಿಳಿದಿದೆಯೇ?