in

ಕನ್ನಡ ವ್ಯಾಕರಣ : ಕನ್ನಡ ಸಂಧಿಗಳು : ಭಾಗ 1

ಕನ್ನಡ ವ್ಯಾಕರಣ : ಕನ್ನಡ ಸಂಧಿಗಳು : ಭಾಗ 1

ಸಂಧಿ ಎಂದರೇನು?

ಎರಡು ಅಕ್ಷರಗಳ ನಡುವೆ ಕಾಲ ವಿಳಂಬವಿಲ್ಲದಂತೆ ಮತ್ತು ಅರ್ಥಕ್ಕೆ ವ್ಯತ್ಯಯ ಬಾರದಂತೆ ಸೇರಿಸಿ ಉಚ್ಛರಿಸುವುದು ಸಂಧಿ ಎನಿಸುವುದು.

*ಸಂಧಿಗಳಲ್ಲಿ ಮೂಲಭೂತವಾಗಿ ಕನ್ನಡಸಂಧಿ ಮತ್ತು ಸಂಸ್ಕೃತಸಂಧಿ ಎಂದು ಎರಡು ವಿಭಾಗಗಳಿವೆ.

ಕನ್ನಡ ಪದಗಳೇ ಸೇರಿ ಅಥವಾ ಕನ್ನಡ ಮತ್ತು ಸಂಸ್ಕೃತ ಪದಗಳು ಸೇರಿ ಸಂಧಿಯಾದರೆ ‘ಕನ್ನಡಸಂಧಿ’ ಎಂತಲೂ ಸಂಸ್ಕೃತ ಪದಗಳು ಸೇರಿ ಸಂಧಿಯಾದರೆ ‘ ಸಂಸ್ಕೃತ ಸಂಧಿ’ ಎಂತಲೂ ಕರೆಯಲ್ಪಡುತ್ತವೆ.

*ಸಂಸ್ಕೃತ ಸಂಧಿಗಳು 

*ಸ್ವರಸಂಧಿ

ಸವರ್ಣದೀರ್ಘ ಸಂಧಿ

ಗುಣಸಂಧಿ

ವೃದ್ಧಿಸಂಧಿ

ಯಣ್‌ಸಂಧಿ

*ವ್ಯಂಜನ ಸಂಧಿ

ಜಶ್ತ್ವ ಸಂಧಿ

ಶ್ಚುತ್ವಸಂಧಿ

ಅನುನಾಸಿಕಸಂಧಿ

ಕನ್ನಡ ವ್ಯಾಕರಣ : ಕನ್ನಡ ಸಂಧಿಗಳು : ಭಾಗ 1

ಸವರ್ಣದೀರ್ಘ, ಗುಣ, ವೃದ್ಧಿ, ಯಣ್, ಜಶ್ತ್ವ, ಶ್ಚುತ್ವ, ಅನುನಾಸಿಕ ಸಂಧಿಗಳನ್ನು ಸಂಸ್ಕೃತ ಸಂಧಿಗಳೆಂದು ಕರೆಯಲಾಗುವುದು.

*ಲೋಪ, ಆಗಮ, ಆದೇಶ ಸಂಧಿಗಳನ್ನು ಕನ್ನಡ ಸಂಧಿಗಳೆಂದು ಕರೆಯಲಾಗಿದೆ.

*ಸವರ್ಣದೀರ್ಘ, ಗುಣ, ವೃದ್ಧಿ ಮತ್ತು ಯಣ್ ಸಂಧಿಗಳು ಸ್ವರಸಂಧಿಗಳೆಂತಲೂ,

* ಜಶ್ತ್ವ, ಶ್ಚುತ್ವ, ಅನುನಾಸಿಕ ಸಂಧಿಗಳು ವ್ಯಂಜನ ಸಂಧಿಗಳೆಂತಲೂ ಕರೆಯಲ್ಪಡುತ್ತವೆ.

 *ಸ್ವರ ಸಂಧಿ: ಸಂಧಿಯಾಗುವಾಗ ಸ್ವರದ ಮುಂದೆ ಸ್ವರ ಇದ್ದು ಸಂಧಿಯಾದರೆ ಅದು ಸ್ವರಸಂಧಿ.

*ವ್ಯಂಜನ ಸಂಧಿ: ಸ್ವರದ ಮುಂದೆ ವ್ಯಂಜನ ಅಥವಾ ವ್ಯಂಜನದ ಮುಂದೆ ಸ್ವರ ಅಥವಾ ವ್ಯಂಜನದ ಮುಂದೆ ವ್ಯಂಜನ ಇದ್ದು ಸಂಧಿಯಾದರೆ ಅದು ವ್ಯಂಜನ ಸಂಧಿ.

ಕನ್ನಡ ಸಂಧಿಗಳಲ್ಲಿ ಲೋಪ, ಆಗಮ, ಆದೇಶ ಎಂದು ಮೂರು ಇವೆ.

ಇವುಗಳಲ್ಲಿ ಲೋಪ ಮತ್ತು ಆಗಮ ಸಂಧಿಗಳು ಕನ್ನಡದ ಸ್ವರಸಂದಿಗಳು, ಆದೇಶ ಸಂಧಿಯನ್ನು ಕನ್ನಡದ ವ್ಯಂಜನ ಸಂಧಿಯೆಂದು ಕರೆಯುತ್ತಾರೆ.

ಕನ್ನಡ ವ್ಯಾಕರಣ : ಕನ್ನಡ ಸಂಧಿಗಳು : ಭಾಗ 1

1. ಲೋಪಸಂಧಿ :

ಎರಡು ಸ್ವರಾಕ್ಷರಗಳ ನಡುವೆ ಸಂಧಿ ಕಾರ್ಯ ನಡೆಯುವಾಗ ಪೂರ್ವ ಪದದ ಅಂತ್ಯದಲ್ಲಿರುವ ಸ್ವರವು ಅರ್ಥ ಕೆಡದಿರುವ ಸಂದರ್ಭದಲ್ಲಿ ಇಲ್ಲವಾಗುವುದನ್ನು ‘ಲೋಪಸಂಧಿ’ ಎಂದು ಕರೆಯಲಾಗುತ್ತದೆ.

ಸಂಧಿಕ್ರಿಯೆ ಆಗುವಾಗ ಸ್ವರದ ಮುಂದೆ ಸ್ವರ ಬಂದು ಪೂರ್ವಪದದ ಸ್ವರ ಲೋಪವಾದರೆ ಅದು ಲೋಪಸಂಧಿ.

ಉದಾ :

ತುಪ್ಪಳದ + ಅಂತೆ = ತುಪ್ಪಳದಂತೆ – ಅ ಕಾರ ಲೋಪ

ಅಲ್ಲಿ + ಇದ್ದೇನೆ = ಅಲ್ಲಿದ್ದೇನೆ – ಇ ಕಾರ ಲೋಪ

ಇವನು + ಒಬ್ಬ = ಇವನೊಬ್ಬ – ಉ ಕಾರ ಲೋಪ

ಬೆಳ್ಳಗೆ + ಆಗಿ = ಬೆಳ್ಳಗಾಗಿ – ಎ ಕಾರ ಲೋಪ

ಪೂರ್ವಪದ + ಉತ್ತರಪದ = ಸಂಧಿಪದ

ಮಾತು + ಇಲ್ಲ = ಮಾತಿಲ್ಲ

ಬೇರೆ + ಒಬ್ಬ = ಬೇರೊಬ್ಬ

ನಿನಗೆ + ಅಲ್ಲದೆ = ನಿನಗಲ್ಲದೆ

2. ಆಗಮ ಸಂಧಿ :

ಲೋಪ ಸಂಧಿ ಮಾಡಿದರೆ ಅರ್ಥ ಕೆಡುವಂತಿದ್ದರೆ, ಆ ಎರಡು ಸ್ವರಗಳ ನಡುವೆ ‘ಯ್’ ಇಲ್ಲವೆ ‘ವ್’ ಅಕ್ಷರವನ್ನು ಹೊಸದಾಗಿ ಸೇರಿಸಿ ಸಂಧಿ ಮಾಡಿದರೆ ಅದನ್ನು ‘ಆಗಮ ಸಂಧಿ’ ಎಂದು ಕರೆಯುತ್ತಾರೆ.

‘ಯ್’ ಅಕ್ಷರ ಬಂದಲ್ಲಿ ಯಕಾರಾಗಮ ಸಂಧಿ ಎಂತಲೂ, ‘ವ್’ ಅಕ್ಷರ ಬಂದಲ್ಲಿ ವಕಾರಾಗಮ ಸಂಧಿ ಎಂತಲೂ ಎರಡು ವಿಧಗಳನ್ನು ಗುರುತಿಸಲಾಗುತ್ತದೆ.

ಸ್ವರದ ಮುಂದೆ ಸ್ವರಬಂದು ಸಂಧಿಯಾಗುವಾಗ ‘ಯ’ ಕಾರ ಅಥವಾ ‘ವ’ ಕಾರವು ಈ ಸ್ವರಗಳ ಮಧ್ಯೆ ಹೊಸದಾಗಿ ಸೇರಿದರೆ ಅದು ಆಗಮಸಂಧಿ.

ಉದಾ :

ಪೂರ್ವಪದ + ಉತ್ತರಪದ = ಸಂಧಿಪದ

ಗುರು + ಅನ್ನು = ಗುರುವನ್ನು

ಪಿತೃ + ಅನ್ನು = ಪಿತೃವನ್ನು

ಕೈ + ಅಲ್ಲಿ = ಕೈಯಲ್ಲಿ

ಶಾಲೆ + ಇಂದ = ಶಾಲೆಯಿಂದ

ಹಳ್ಳಿ + ಅಲ್ಲಿ = ಹಳ್ಳಿಯಲ್ಲಿ

ಭಾವನೆ + ಉಂಟಾಯಿತು = ಭಾವನೆಯುಂಟಾಯಿತು

ಗುರು + ಅನ್ನು = ಗುರುವನ್ನು

ಸ್ವಾರಸ್ಯ + ಇಲ್ಲ = ಸ್ವಾರಸ್ಯವಿಲ್ಲ

3. ಆದೇಶ ಸಂಧಿ :

ಎರಡು ಅಕ್ಷರಗಳ ನಡುವೆ ಸಂಧಿಕಾರ್ಯ ನಡೆಯುವಾಗ ಉತ್ತರ ಪದದ ಆದಿಯಲ್ಲಿರುವ ‘ಕ್’ ‘ತ್’ ‘ಪ್’ ವ್ಯಂಜನಗಳಿಗೆ ಕ್ರಮವಾಗಿ ‘ಗ್’ ‘ದ್’ ‘ಬ್’ ವ್ಯಂಜನಗಳು ಬದಲಿಯಾಗಿ ಬರುವುದನ್ನು ‘ಆದೇಶ ಸಂಧಿ’ ಎಂದು ಕರೆಯಲಾಗುತ್ತದೆ.

ಕೆಲವೊಮ್ಮೆ ಉತ್ತರ ಪದದ ಆದಿಯ ಪ್, ಬ್, ಮ್ ವ್ಯಂಜನಗಳಿಗೆ ‘ವ’ ಕಾರವು ಆದೇಶವಾಗುವುದು.

ಸಂಧಿಕ್ರಿಯೆ ಆಗುವಾಗ ಪರಪದದ ಆದಿಯಲ್ಲಿರುವ ವ್ಯಂಜನದ ಬದಲಿಗೆ ಬೇರೊಂದು ವ್ಯಂಜನ ಬಂದು ಸೇರುವುದೇ ಆದೇಶಸಂಧಿ. ಕ ತ ಪ ಗಳಿಗೆ ಗ ದ ಬ ಗಳೂ ಕೆಲವೊಮ್ಮೆ ಪ ಬ ಮ ಗಳ ಬದಲಿಗೆ ವ ಕಾರವೂ ಆದೇಶವಾಗಿ ಬರುತ್ತವೆ.

ಉದಾ : ಪೂರ್ವಪದ + ಉತ್ತರಪದ = ಸಂಧಿಪದ

ತುದಿ + ಕಾಲಲ್ಲಿ (ಕ್>ಗ್) = ತುದಿಗಾಲಲ್ಲಿ

ಹುಲಿ + ತೊಗಲು (ತ್>ದ್) = ಹುಲಿದೊಗಲು

ಕಣ್ + ಪನಿ (ಪ್>ಬ್) = ಕಂಬನಿ

ನೀರ್ + ಪನಿ (ಪ್>ವ್) = ನರ‍್ವನಿ

ಕಡು + ಬೆಳ್ಪು (ಬ್>ವ್) = ಕಡುವೆಳ್ಪು

ಮೆಲ್ + ಮಾತು (ಮ್>ವ್) = ಮೆಲ್ವಾತು

ಮಳೆ + ಕಾಲ = ಮಳೆಗಾಲ

ಬೆಟ್ಟ + ತಾವರೆ = ಬೆಟ್ಟದಾವರೆ

ಹೂ + ಪುಟ್ಟಿ = ಹೂಬುಟ್ಟಿ

ಪ್ರಕೃತಿಭಾವ :

ಆ + ಆಡು

ಅಯ್ಯೋ + ಇದೇನು

ಓಹೋ + ಅಜ್ಜಿ ಬಂದರೇ

ಅಕ್ಕಾ + ಇತ್ತಬಾ

ಭಾಗ 2: ಸಂಸ್ಕೃತ ಸಂಧಿಗಳು 

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕಡಕ್ನಾಥ್ ಕೋಳಿ

ಕಡಕ್ನಾಥ್ ಕೋಳಿ ಆರೋಗ್ಯಕ್ಕೆ ಒಳ್ಳೆಯದು, ವ್ಯಾಪಾರ ಕೂಡ ಅಷ್ಟೇ ಲಾಭದಾಯಕ

ರಾಷ್ಟ್ರೀಯ ಸುರಕ್ಷತಾ ದಿನ

ರಾಷ್ಟ್ರೀಯ ಸುರಕ್ಷತಾ ದಿನವನ್ನು ಪ್ರತಿ ವರ್ಷ ಮಾರ್ಚ್ 4 ರಂದು ಆಚರಿಸಲಾಗುತ್ತದೆ