in

‘ಗೌರಿ’ಗೆ ಟೊರೆಂಟೊದಲ್ಲಿ ನಡೆದ ಮಹಿಳಾ ಚಲನಚಿತ್ರೋತ್ಸವದಲ್ಲಿ ‘ಬೆಸ್ಟ್‌ ಹ್ಯೂಮನ್‌ ರೈಟ್ಸ್‌’ ಪ್ರಶಸ್ತಿ ಲಭಿಸಿದೆ

‘ಬೆಸ್ಟ್‌ ಹ್ಯೂಮನ್‌ ರೈಟ್ಸ್‌’ ಪ್ರಶಸ್ತಿ
‘ಬೆಸ್ಟ್‌ ಹ್ಯೂಮನ್‌ ರೈಟ್ಸ್‌’ ಪ್ರಶಸ್ತಿ

ಗೌರಿ ಲಂಕೇಶ್(29 ಜನವರಿ 1962 – 5 ಸೆಪ್ಟೆಂಬರ್ 2017) ಅವರು ಭಾರತೀಯ ಪತ್ರಕರ್ತೆ – ಸಾಮಾಜಿಕ ಕಾರ್ಯಕರ್ತೆ, ಇವರು ಬೆಂಗಳೂರು, ಕರ್ನಾಟಕದಲ್ಲಿ ನೆಲೆಸಿದ್ದರು. ಇವರು ಕನ್ನಡದಲ್ಲಿ ಲಂಕೇಶ್ ಪತ್ರಿಕೆ ಮತ್ತು ವಾರಕ್ಕೊಮ್ಮೆ “ಗೌರಿ ಲಂಕೇಶ್ ಪತ್ರಿಕೆ” ಎಂಬ ಹೆಸರಿನ ಪತ್ರಿಕೆ ನಡೆಸುತ್ತಿದ್ದರು. ಅವರು ಸೆಪ್ಟೆಂಬರ್ 5, 2017 ರಂದು ರಾಜರಾಜೇಶ್ವರಿ ನಗರ ನಲ್ಲಿರುವ ತನ್ನ ಮನೆಯ ಹೊರಗೆ ಅಜ್ಞಾತ ಆಕ್ರಮಣಕಾರರಿಂದ ಸಾವನ್ನಪ್ಪಿದರು. ಬಲಪಂಥೀಯ ಹಿಂದೂ ಉಗ್ರವಾದದ ವಿರುದ್ಧ ಮಾತನಾಡಿದ್ದಕ್ಕಾಗಿ, ಮಹಿಳಾ ಹಕ್ಕುಗಳಿಗಾಗಿ ಪ್ರಚಾರ ಮಾಡಿದ ಮತ್ತು ಜಾತಿ ಆಧಾರಿತ ತಾರತಮ್ಯವನ್ನು ವಿರೋಧಿಸಿದ್ದಕ್ಕಾಗಿ ಅವರಿಗೆ ಅನ್ನಾ ಪೊಲಿಟ್‌ಕೋವ್ಸ್ಕಯಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪತ್ರಕರ್ತೆ ದಿವಂಗತ ಗೌರಿ ಲಂಕೇಶ್‌ ಅವರ ಕುರಿತ ಸಾಕ್ಷ್ಯಚಿತ್ರ ‘ಗೌರಿ’ಗೆ ಟೊರೆಂಟೊದಲ್ಲಿ ನಡೆದ ಮಹಿಳಾ ಚಲನಚಿತ್ರೋತ್ಸವದಲ್ಲಿ ‘ಬೆಸ್ಟ್‌ ಹ್ಯೂಮನ್‌ ರೈಟ್ಸ್‌’ ಪ್ರಶಸ್ತಿ ಲಭಿಸಿದೆ.

ಗೌರಿ ಲಂಕೇಶ್‌ ಅವರ ಹತ್ಯೆ ಪ್ರಕರಣ ದೇಶದಾದ್ಯಂತ ಆಕ್ರೋಶವನ್ನು ಹುಟ್ಟುಹಾಕಿತ್ತು. ಈ ಸಾಕ್ಷ್ಯಚಿತ್ರವು ಭಾರತದಲ್ಲಿ ಪತ್ರಕರ್ತರು ಪ್ರತಿದಿನ ಎದುರಿಸುತ್ತಿರುವ ಮೌಖಿಕ ಮತ್ತು ದೈಹಿಕ ದಾಳಿಗಳ ವಿಷಯಗಳನ್ನು ತೆರೆದಿಟ್ಟಿದೆ. ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ 200ಕ್ಕೂ ಹೆಚ್ಚು ಪತ್ರಕರ್ತರ ಮೇಲೆ ದಾಳಿಗಳಾಗಿವೆ. ಕಳೆದ ದಶಕದಲ್ಲಿ 30ಕ್ಕೂ ಹೆಚ್ಚು ಪತ್ರಕರ್ತರನ್ನು ಹತ್ಯೆ ಮಾಡಲಾಗಿದೆ. ಮಾತ್ರವಲ್ಲ, ಗೌರಿ ಲಂಕೇಶ್‌ ಪ್ರಕಟಿಸಿದ ವರದಿಗಳ ಪರಿಣಾಮವಾಗಿ ಅವರು 80ಕ್ಕೂ ಹೆಚ್ಚು ಪ್ರಕರಣಗಳನ್ನು ರಾಜ್ಯದ ವಿವಿಧ ಕೋರ್ಟ್‌ಗಳಲ್ಲಿ ಎದುರಿಸಬೇಕಾಗಿ ಬಂತು. ಇಂಥ ಗಂಭೀರ ವಿಷಯದ ಸುತ್ತ ಸಾಕ್ಷ್ಯಚಿತ್ರ ಸ್ಪಂದಿಸಿದೆ’ ಎಂದಿದ್ದಾರೆ ಚಿತ್ರದ ನಿರ್ದೇಶಕಿ ಕವಿತಾ ಲಂಕೇಶ್‌.

‘ಈ ಸಾಕ್ಷ್ಯಚಿತ್ರ ಮಾಂಟ್ರಿಯಲ್‌ನ ದಕ್ಷಿಣ ಏಷ್ಯಾ ಫಿಲಂ ಫೆಸ್ಟಿವಲ್‌, ಡಾಕ್‌ ನ್ಯೂಯಾರ್ಕ್‌, ಆಮ್‌ಸ್ಟರ್‌ಡ್ಯಾಮ್‌ನ ಅಂತರರಾಷ್ಟ್ರೀಯ ಸಾಕ್ಷ್ಯಚಿತ್ರ ಉತ್ಸವ, ಸನ್‌ಡಾನ್ಸ್‌ ಚಿತ್ರೋತ್ಸವಗಳಿಗೂ ಆಯ್ಕೆಯಾಗಿದೆ’ ಎಂದು ಕವಿತಾ ತಿಳಿಸಿದ್ದಾರೆ. ಆ್ಯಮ್‌ಸ್ಟರ್‌ಡ್ಯಾಂನ ಫ್ರೀ ಪ್ರೆಸ್‌ ಅನ್‌ಲಿಮಿಟೆಡ್‌ ‘ಗೌರಿ’ ಸಾಕ್ಷ್ಯಚಿತ್ರವನ್ನು ನಿರ್ಮಿಸಿದೆ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರ ತಪ್ಪುಗಳ ಬಗ್ಗೆ ಅವರು ಬರೆದಿದ್ದಾರೆ.

ಭಾರತೀಯ ಜನತಾ ಪಕ್ಷ (ಬಿಜೆಪಿ)ವನ್ನು ವಿರೋಧಿಸಿದರು, ಮತ್ತು ಪ್ರಕಾಶ್ ಬೆಳವಡಿಯವರು ೨೦೧೪ರ ಚುನಾವಣೆಯಲ್ಲಿ ಭಾಜಪದ ಮಾಧ್ಯಮ ಸಲಹೆಗಾರರಾದಾಗ, ಅವರ ಜೊತೆಗಿನ 35 ವರ್ಷದ ಸ್ನೇಹವನ್ನು ಗೌರಿ ಮುರಿದರು.

‘ಗೌರಿ’ಗೆ ಟೊರೆಂಟೊದಲ್ಲಿ ನಡೆದ ಮಹಿಳಾ ಚಲನಚಿತ್ರೋತ್ಸವದಲ್ಲಿ ‘ಬೆಸ್ಟ್‌ ಹ್ಯೂಮನ್‌ ರೈಟ್ಸ್‌’ ಪ್ರಶಸ್ತಿ ಲಭಿಸಿದೆ
ಗೌರಿ ಲಂಕೇಶ್

ನವೆಂಬರ್ 2014 ರಲ್ಲಿ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರವು ಹಿಂಸೆಯನ್ನು ತ್ಯಜಿಸಿ ಶರಣಾಗುವಂತೆ ನಕ್ಸಲೀಯರ ಮನವೊಲಿಸುವ ಉದ್ದೇಶದಿಂದ ರಚಿಸಿದ ಸಮಿತಿಯ ಸದಸ್ಯರಾಗಿ ಗೌರಿಯವರನ್ನು ನೇಮಿಸಿತು. ಬಿಜೆಪಿ ನಾಯಕರ ನಿಯೋಗ ಅವರು ನಕ್ಸಲ್ ಅನುಯಾಯಿಗಳ ಬಗೆಗೆ ಸಹಾನುಭೂತಿಯುಳ್ಳವರಾಗಿದ್ದಾರೆ ಎಂದು ಆರೋಪಿಸಿ ಸಮಿತಿಯಿಂದ ಅವರನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿದರು. ಆದಾಗ್ಯೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬೇಡಿಕೆಯನ್ನು ತಿರಸ್ಕರಿಸಿದರು.

ಅವರು ಜಾತಿ ಪದ್ಧತಿಯನ್ನು ಬಹಿರಂಗವಾಗಿ ಟೀಕಿಸಿದರು. 2015 ರ ಶ್ರವಣಬೆಳಗೊಳದಲ್ಲಿ ನಡೆದ 81 ನೇ ಕನ್ನಡ ಸಾಹಿತ್ಯ ಸಮ್ಮೇಳನ (ಕನ್ನಡ ಸಾಹಿತ್ಯ ಸಮ್ಮೇಳನ) ಸಮಯದಲ್ಲಿ, ಗೌರಿ ಕೆಳ-ಜಾತಿ ಲೇಖಕ ಪೆರುಮಾಳ್ ಮುರುಗನ್ ಅವರನ್ನು ಮಕ್ಕಳನ್ನು ಹೊಂದಲು ಮದುವೆ ಹೊರಗೆ ಒಮ್ಮತದ ಲೈಂಗಿಕ ಆಚರಣೆಗಳಲ್ಲಿ ಪಾಲ್ಗೊಳ್ಳುವ ಮಕ್ಕಳಿಲ್ಲದ ಹಿಂದೂ ದಂಪತಿಗಳನ್ನು ಚಿತ್ರಿಸಿರುವುದನ್ನು ಬಲಪಂಥೀಯ ಹಿಂದೂ ಗುಂಪುಗಳು ಟೀಕಿಸಿರುವುದನ್ನು ಟೀಕಿಸಿದ್ದಾರೆ.
ಬ್ರಾಹ್ಮಣ ಕಾದಂಬರಿಕಾರ ಎಸ್. ಎಲ್. ಭೈರಪ್ಪ ಅವರು ಕೂಡಾ ಹಿಂದೂ ಮಹಾಕಾವ್ಯ ಮಹಾಭಾರತದ ಕಥೆಯನ್ನು ಪುನಃ ಹೊಸದಾಗಿ ಹೇಳುವ ಪರ್ವ ಎಂಬ ಕಾದಂಬರಿಯಲ್ಲಿ ಇದೇ ರೀತಿಯ ನಿಯೋಗ ಆಚರಣೆಯನ್ನು ಚಿತ್ರಿಸಿದ್ದಾರೆ ಎಂದು ಅವರು ಗಮನಸೆಳೆದರು.

ಈ ಇಬ್ಬರೂ ಬರಹಗಾರರನ್ನು ತಾನು ಬೆಂಬಲಿಸುತ್ತಿರುವುದಾಗಿ ಅವರು ಸ್ಪಷ್ಟಪಡಿಸಿದರು. ಪೆರುಮಾಳ್ ಮುರುಗನ್ ರಿಂದ ಉಲ್ಲಂಘಿಸಲ್ಪಟ್ಟಿರುವ ನೀತಿಯನ್ನು ಹಿಂದೂ ಗುಂಪುಗಳು ಟೀಕಿಸಿದ್ದು, ಭೈರಪ್ಪನವರನ್ನು ಏಕೆ ಟೀಕಿಸಲಿಲ್ಲ ಎಂದು ಪ್ರಶ್ನಿಸಿದರು. 19 ಫೆಬ್ರವರಿ 2015 ರಂದು ಹಾಸನ ಜಿಲ್ಲಾ ಬ್ರಾಹ್ಮಣ ಸಭೆಯಿಂದ (“ಹಾಸನ ಜಿಲ್ಲೆ ಬ್ರಾಹ್ಮಣ ಅಸೋಸಿಯೇಷನ್ “) ಅವಳ ವಿರುದ್ಧ ಒಂದು ರ್ಯಾಲಿಯನ್ನು ಸಂಘಟಿಸಿ, ಅವಳ ವಿರುದ್ಧ ಮೊದಲ ಮಾಹಿತಿ ವರದಿಯ(FIR) ಮೊಕದ್ದಮೆ ನೋಂದಾಯಿಸಲು ಪೊಲೀಸರಲ್ಲಿ ಒತ್ತಾಯಿಸಿದರು.

5 ಸೆಪ್ಟೆಂಬರ್ 2017ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿನ ಅವರ ಮನೆಯ ಮುಂದೆ ಅಪರಿಚಿತ ವ್ಯಕ್ತಿಗಳು ಗುಂಡು ಹೊಡೆದು ಕೊಲೆ ಮಾಡಿದರು. ಗೌರಿ ಲಂಕೇಶ್ ಇಚ್ಛೆಯಂತೆ ಅವರ ಕಣ್ಣುಗಳನ್ನು ಬೆಂಗಳೂರಿನ ಮಿಂಟೋ ಆಸ್ಪತ್ರೆಗೆ ದಾನ ಮಾಡಲಾಗಿದೆ.

ಚಾಮರಾಜ ಪೇಟೆಯಲ್ಲಿರುವ ಲಿಂಗಾಯತ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಹಿರಿಯ ಪತ್ರಕರ್ತೆ ಹಾಗೂ ಹೋರಾಟಗಾರ್ತಿ ಗೌರಿಲಂಕೇಶ್, ಬಸವನಗುಡಿಯಲ್ಲಿರುವ ತಮ್ಮ ಕಚೇರಿಯಿಂದ 7.45ರ ಸುಮಾರಿಗೆ ಮನೆ ಹತ್ತಿರ ಹೋಗಿದ್ದರು. ಗೌರಿಲಂಕೇಶ್ ಅವರತ್ತ ದುಷ್ಕರ್ಮಿಗಳು 14 ಸುತ್ತು ಗುಂಡು ಹಾರಿಸಿರುವುದು ಪೊಲೀಸ್ ತನಿಖೆಯಿಂದ ಪತ್ತೆಯಾಗಿದೆ. ದಿ.೬-೯-೨೦೧೭ ಬುಧವಾರ ರಾತ್ರಿ 12.45ರ ಸುಮಾರಿಗೆ ಪೊಲೀಸರು ಸ್ಥಳ ಮಹಜರು ಮಾಡಿದ್ದಾರೆ.

‘ಗೌರಿ’ಗೆ ಟೊರೆಂಟೊದಲ್ಲಿ ನಡೆದ ಮಹಿಳಾ ಚಲನಚಿತ್ರೋತ್ಸವದಲ್ಲಿ ‘ಬೆಸ್ಟ್‌ ಹ್ಯೂಮನ್‌ ರೈಟ್ಸ್‌’ ಪ್ರಶಸ್ತಿ ಲಭಿಸಿದೆ
ಗೌರಿ ಹತ್ಯೆಯ ದೃಶ್ಯಗಳು

ಅದರ ಪ್ರಕಾರ 7.65 ಪಿಸ್ತೂಲಿನಿಂದ ಹಾರಿಸಿರುವ 14 ಗುಂಡುಗಳಲ್ಲಿ, ಮೂರು ಗೌರಿ ಅವರ ದೇಹವನ್ನು ಹೊಕ್ಕರೆ, ಇನ್ನುಳಿದವು ಮನೆಯ ಗೋಡೆ, ಹೂವಿನ ಕುಂಡ ಹಾಗೂ ಕಾಂಪೌಂಡ್‌ಗೆ ಬಿದ್ದಿವೆ. 30ಸೆಕೆಂಡ್‌‍ನ ದೃಶ್ಯದಲ್ಲಿ ಗೌರಿ ಹತ್ಯೆಯ ದೃಶ್ಯಗಳು ಅವರ ಮನೆಯ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಆ ಸುಳಿವು ಆಧರಿಸಿ ತನಿಖೆ ಚುರುಕುಗೊಳಿಸಿದ್ದಾರೆ.
ಚಿತ್ರ ಅಸ್ಪಷ್ಟವಾಗಿದೆ. ‘ಜರ್ಕಿನ್, ಬ್ಯಾಗ್ ಹಾಗೂ ಕಪ್ಪು ಬಣ್ಣದ ಹೆಲ್ಮೆಟ್ ಧರಿಸಿದ್ದ ಸುಮಾರು 5.3 ಅಡಿ ಎತ್ತರದ 28 ವರ್ಷದ ಯುವಕನೊಬ್ಬ, ಗೇಟ್ ಮೂಲಕ ಮನೆಯೊಳಗೆ ಬಂದಿರುವ ಹಾಗೂ ಗುಂಡಿನ ದಾಳಿ ನಡೆಸಿರುವ ದೃಶ್ಯಗಳು ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿವೆ. ಆದರೆ, ಅದರ ಗುಣಮಟ್ಟ ಸರಿಯಿಲ್ಲ.

ಸಿಸಿ ಟಿವಿ ದೃಶ್ಯದ ವಿವರ

ರಾತ್ರಿ 7.45ಕ್ಕೆ ಮನೆ ಹತ್ತಿರ ಬರುವ ಗೌರಿ, ಹೊರಗೆ ಕಾರು ನಿಲ್ಲಿಸಿ ಕೆಳಗಿಳಿಯುತ್ತಾರೆ. ಆ ನಂತರ ಗೇಟ್ ತೆಗೆದು ಒಳಗೆ ಹೋಗಿ, ಮನೆ ಬೀಗ ತೆಗೆಯಲು ಮುಂದಾಗುತ್ತಾರೆ. ಇದೇ ಸಮಯದಲ್ಲಿ ಆಗಂತುಕನೊಬ್ಬ ಗೇಟ್ ಬಳಿ ಬಂದು ನಿಲ್ಲುತ್ತಾನೆ. ಅಪರಿಚಿತನನ್ನು ಕಂಡ ಕೂಡಲೇ ಗೌರಿ ಅವರು ಬೀಗ ತೆಗೆಯುವುದನ್ನು ಬಿಟ್ಟು ವಿಚಾರಿಸಲು ವಾಪಸ್ ಬರುತ್ತಾರೆ.
ಈ ವೇಳೆ ಅವನು ಬ್ಯಾಗ್‌ನಿಂದ ಪಿಸ್ತೂಲ್ ತೆಗೆಯುತ್ತಾನೆ. ಇದರಿಂದ ಹೆದರಿ ತಕ್ಷಣ ಅವರು ಮನೆ ಬಾಗಿಲಿನತ್ತ ಓಡುತ್ತಾರೆ. ಈ ಹಂತದಲ್ಲಿ ಹಂತಕ ಗೇಟ್ ಹತ್ತಿರ ನಿಂತುಕೊಂಡೇ ಮನಸೋ ಇಚ್ಛೆ ಗುಂಡಿನ ಮಳೆಗರೆಯುತ್ತಾನೆ. ಮೊದಲು ಹಾರಿಸಿದ ಗುಂಡುಗಳು ಮನೆ ಗೋಡೆ ಹಾಗೂ ಕಾಂಪೌಂಡ್‌ಗೆ ಬೀಳುತ್ತವೆ.
ತಕ್ಷಣ ಅವರ ಹತ್ತಿರ ಓಡುವ ಆತ, ಎರಡು ಮೀಟರ್ ಅಂತರದಲ್ಲಿ ನಿಂತು ಎದೆಗೆ ಎರಡು ಗುಂಡುಗಳನ್ನು ಹೊಡೆಯುತ್ತಾನೆ. ಇದರಿಂದ ಅವರು ಕುಸಿದು ಬೀಳುತ್ತಾರೆ. ಆಗ ವಾಪಸ್ ಹೊರಡುವ ಆತ, ಅವರತ್ತ ತಿರುಗಿ ಮತ್ತೊಂದು ಗುಂಡು ಹೊಡೆಯುತ್ತಾನೆ. ಅದು ಕಿಬ್ಬೊಟ್ಟೆಯನ್ನು ಹೊಕ್ಕುತ್ತದೆ. ನಂತರ ಗೇಟ್ ಮೂಲಕವೇ ಹೊರಗೆ ಓಡುತ್ತಾನೆ. ಹೀಗೆ, ಕೇವಲ 30 ಸೆಕೆಂಡ್‌ಗಳಲ್ಲಿ ಅವರ ಹತ್ಯೆ ನಡೆದು ಹೋಗುತ್ತದೆ.

ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್‌ ಹತ್ಯೆ ತನಿಖೆಗೆ ಗುಪ್ತದಳದ ಇನ್‌ಸ್ಪೆಕ್ಟರ್‌ ಜನರಲ್‌ ಆಫ್‌ ಪೊಲೀಸ್‌ ಬಿ.ಕೆ. ಸಿಂಗ್‌ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿತ್ತು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ದಕ್ಷ

ದಕ್ಷ : ದೈವಿಕ ರಾಜ-ಋಷಿಗಳಲ್ಲಿ ಒಬ್ಬರು

ಜೀತ ಪದ್ಧತಿ

ಜೀತ ಪದ್ಧತಿ ವ್ಯವಸ್ಥೆಯ ಬಗ್ಗೆ