in

ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಶೋ ನಲ್ಲಿ ಕಾಣಿಸಿಕೊಂಡಿದ್ದ ಕೋಳಿ ರಮ್ಯ ಏನಾದರೂ ಗೊತ್ತಾ.

ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಶೋ ನಲ್ಲಿ ಕಾಣಿಸಿಕೊಂಡಿದ್ದ ಕೋಳಿ ರಮ್ಯ ಏನಾದರೂ ಗೊತ್ತಾ.

ಕನ್ನಡ ರಿಯಾಲಿಟಿ ಶೋಗಳ ಮೂಲಕ ಬಣ್ಣದ ಪ್ರಪಂಚಕ್ಕೆ ಎಂಟ್ರಿಕೊಡುವ ಸಾಕಷ್ಟು ಹುಡುಗಿಯರು ನಂತರದ ದಿನಗಳಲ್ಲಿ ಕಿರುತೆರೆ ಮತ್ತು ಬೆಳ್ಳಿತೆರೆಯ ಬಾರಿ ಫೇಮಸ್ ಆಗಿರುವ ಸಾಕಷ್ಟು ಕಲಾವಿದರನ್ನು ನೋಡಿದ್ದೇವೆ. ಇದೇ ರೀತಿ ಪ್ಯಾಟೆ ಹುಡುಗೀರ್ ಹಳ್ಳಿ ಲೈಫು ರಿಯಾಲಿಟಿ ಶೋ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು

ಇಂದು ಬಹಳ ಖ್ಯಾತಿ ಪಡೆದು ಕಿರುತೆರೆಯಲ್ಲಿ ಬಹಳ ಬೇಡಿಕೆಯನ್ನು ಸೃಷ್ಟಿಸಿಕೊಂಡ ಕೋಳಿ ರಮ್ಯಾ ಅವರ ಬಗ್ಗೆ ನಿಮಗೆ ಗೊತ್ತಿಲ್ಲದ ಹಲವು ವಿಚಾರಗಳನ್ನು ತಿಳಿಸಿಕೊಡುತ್ತೇವೆ ನೋಡಿ. ರಮ್ಯಾ ಅವರಿಗೆ ಕೋಳಿ ಅನ್ನುವ ಹೆಸರು ಬರಲು ಕಾರಣವಿದೆ. ರಮ್ಯಾ ಅವರು ಟಿವಿಯಲ್ಲಿ ಮೊದಲಿಗೆ ಕಾಣಿಸಿಕೊಂಡಿದ್ದು

ಅಂದಿನ ಸುವರ್ಣವಾಹಿನಿಯ ಪ್ಯಾಟೆ ಹುಡ್ಗೀರು ಹಳ್ಳಿ ಲೈಫು ರಿಯಾಲಿಟಿ ಶೋನಲ್ಲಿ. ಈ ಶೋನಲ್ಲಿ ನೀಡಿದ್ದ ಕೋಳಿ ಹಿಡಿಯುವ ಟಾಸ್ಕ್ ನಲ್ಲಿ ಅತಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಕೋಳಿಗಳನ್ನು ಹಿಡಿದು ಟಾಸ್ಕ್ ವಿನರ್ ಆಗಿದ್ದರು ರಮ್ಯ. ಇದೇ ಕಾರಣದಿಂದ ಅವರಿಗೆ ಕೋಳಿ ರಮ್ಯ ಎನ್ನುವ ಹೆಸರು ಬಂದಿತ್ತು.

ಪ್ಯಾಟೆ ಹುಡ್ಗೀರು ಹಳ್ಳಿ ಲೈಫು ಶೋ ನಲ್ಲಿ ಎರಡನೆಯ ಸ್ಥಾನ ಪಡೆಯುವ ಮೂಲಕ ಕೋಳಿ ರಮ್ಯಾ ಅವರಿಗೆ ಶೋ ನಂತರ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರಲು ಆರಂಭಿಸಿದವು. ಇದು ಅವರ ಸಕ್ಸಸ್ ನ ಆರಂಭವಾದರೆ ಇದರ ಹಿಂದಿನ ಕಥೆ ಬಹಳ ನೋವಿನಿಂದ ಕೂಡಿದೆ. ಕೋಳಿ ರಮ್ಯಾ ಅವರ ಕುಟುಂಬ ಮೂಲತಹ. ಭದ್ರಾವತಿ ಯವರು.

ಹುಟ್ಟಿ ಬೆಳೆದದ್ದು ಅಲ್ಲಿಯೇ. 14 ವರ್ಷದ ಶಾಲಾ ಬಾಲಕಿಯಾಗಿ ತಂದೆಯನ್ನು ಕಳೆದುಕೊಳ್ಳುತ್ತಾರೆ. ಆಗಿನಿಂದಲೇ ಮನೆಯ ಜವಾಬ್ದಾರಿಯನ್ನು ಬೇಗ ತೆಗೆದುಕೊಳ್ಳಬೇಕು ಎನ್ನುವ ಒತ್ತಡ ಇವರ ಮೇಲೆ ಇರುತ್ತದೆ. ಹಾಗಾಗಿ ರಮ್ಯಾ ಅವರು ಚಿಕ್ಕವಯಸ್ಸಿನಲ್ಲಿ ಕೆಲಸ ಮಾಡಲು ಶುರುಮಾಡುತ್ತಾರೆ.

ಚಿತ್ರರಂಗಕ್ಕೆ ಬಹಳ ಬೇಗನೆ ಎಂಟ್ರಿ ಕೊಡುತ್ತಾರೆ. ರಮ್ಯಾ ಅವರಿಗೆ ಬಿಗ್ ಬ್ರೇಕ್ ತೆಗೆದುಕೊಂಡು ಬಂದಿದ್ದು ಪ್ಯಾಟೆ ಹುಡುಗೀರ್ ಹಳ್ಳಿ ಲೈಫು ರಿಯಾಲಿಟಿ ಶೋ. ಕೋಳಿ ರಮ್ಯಾ ಅವರನ್ನು ಹೆಚ್ಚು ಹುಡುಕಿಕೊಂಡು ಬಂದಿದ್ದು ವಿಲನ್ ಪಾತ್ರಗಳು. ನೆಗೆಟಿವ್ ಶೇಡ್ ಗಳಿರುವ ಪಾತ್ರಗಳಲ್ಲಿ ಅತಿ ಅದ್ಭುತವಾಗಿ ಅಭಿನಯಿಸುತ್ತಾರೆ ರಮ್ಯಾ.

ಇತ್ತೀಚಿಗೆ ಕಲರ್ಸ್ ಕನ್ನಡ ವಾಹಿನಿಯ ಮಿಥುನ ರಾಶಿ ಧಾರಾವಾಹಿ ಯಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದರು. ನಟಿಗೆ ಎನ್ನುವುದರ ಜೊತೆಗೆ ತನ್ನ ತನ್ನ ಒಂದು ಶೋ ಸಹ ನಿರೂಪಣೆ ಮಾಡಿ ನಿರೂಪಕಿಯಾಗಿಯೂ ಸಹ ಗುರುತಿಸಿಕೊಂಡಿದ್ದಾರೆ ರಮ್ಯಾ. ಇವರಿಗೆ ಹೆಚ್ಚು ಅವಕಾಶಗಳು ಸಿಗಲಿ ಕಷ್ಟದಿಂದ ಬಂದಿರುವ ಕೋಳಿ ರಮ್ಯಾ ಅವರ ಮುಂದಿನ ಭವಿಷ್ಯ ಚೆನ್ನಾಗಿರಲಿ ಅಂತ ನಾವು ನೀವು ಹಾರೈಸೋಣ.

What do you think?

-2 Points
Upvote Downvote

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

5 Comments

  1. Главные новости мира https://ua-vestnik.com и страны: политика, экономика, спорт, культура, технологии. Оперативная информация, аналитика и эксклюзивные материалы для тех, кто следит за событиями в реальном времени.

ದೊಡ್ಮನೆ ಯ ಮಗಳು ಧನ್ಯ ರಾಮ್ ಕುಮಾರ್ ವಿಚಾರವಾಗಿ ಹೊರಬಂತು ಸಿಹಿಸುದ್ದಿ.

ದೊಡ್ಮನೆ ಯ ಮಗಳು ಧನ್ಯ ರಾಮ್ ಕುಮಾರ್ ವಿಚಾರವಾಗಿ ಹೊರಬಂತು ಸಿಹಿಸುದ್ದಿ.

ವಿದ್ಯಾ ದೇವತೆ ಸರಸ್ವತಿ

ವಿದ್ಯಾ ದೇವತೆ ಸರಸ್ವತಿ