in

ಗಂಡ-ಹೆಂಡತಿ ಸಂಬಂಧ ಈ ಕಾರಣಕ್ಕೆ ಹಾಳಾಗುವುದು.

ಗಂಡ-ಹೆಂಡತಿ ಸಂಬಂಧ ಈ ಕಾರಣಕ್ಕೆ ಹಾಳಾಗುವುದು.

ಚಾಣಕ್ಯನು ಸಂಬಂಧಕ್ಕೆ ಅದರಲ್ಲೂ ಪತಿ-ಪತ್ನಿಯ ನಡುವಿನ ಸಂಬಂಧಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿದ್ದನು. ಚಾಣಕ್ಯನ ಪ್ರಕಾರ ಯಾವ ವಿಷಯಗಳು ಪತಿ-ಪತ್ನಿಯರ ನಡುವಿನ ಸಂಬಂಧವನ್ನು ಹಾಳು ಮಾಡುತ್ತದೆ. ಈ ವಿಷಯಗಳು ಪತಿ-ಪತ್ನಿಯರ ನಡುವೆ ಇದ್ದರೆ ಸಂಬಂಧ ಗಟ್ಟಿಯಾಗಿರುತ್ತದೆ. ಅವು ಯಾವುವು ಎಂದು ಈ ಮಾಹಿತಿಯಲ್ಲಿ ನೋಡೋಣ.

ಚಾಣಕ್ಯ ನೀತಿಯ ಪ್ರಕಾರ ಸಮಾಜದಲ್ಲಿನ ಸಂಬಂಧಗಳಲ್ಲಿ ಪತಿ ಮತ್ತು ಪತ್ನಿಯ ಸಂಬಂಧ ವು ಅತ್ಯಂತ ಪ್ರವಿತ್ರ ಸಂಬಂಧವಾಗಿದೆ. ಈ ಸಂಬಂಧವು ಪ್ರೀತಿ ಮತ್ತು ಸಮರ್ಪಣೆಯನ್ನು ಆದರಿಸುತ್ತದೆ. ಈ ಸಂಬಂಧವನ್ನು ಎಂದಿಗೂ ದುರ್ಬಲಗೊಳಿಸಲು ಬಿಡಬಾರದು.ಈ ಸಂಬಂಧ ವನ್ನು ಬಲಪಡಿಸಲು ಚಾಣಕ್ಯನು ಕೆಲವು ಪ್ರಮುಖ ವಿಷಯಗಳನ್ನು ಹೇಳಿದ್ದಾನೆ. ಈ ವಿಷಯಗಳನ್ನು ಎಲ್ಲರೂ ತಿಳಿದುಕೊಂಡಿರಬೇಕು.

ಮೊದಲನೆಯದಾಗಿ ಪ್ರೀತಿ. ಚಾಣಕ್ಯ ನೀತಿಯ ಪ್ರಕಾರ ಪ್ರೀತಿಯು ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧದಲ್ಲಿ ಪ್ರಮುಖ ಕೊಂಡಿಯಾಗಿದೆ. ಈ ಸಂಬಂಧದಲ್ಲಿ ಎಂದಿಗೂ ಪ್ರೀತಿಯ ಕೊರತೆ ಆಗಿರಬಾರದು.ಪ್ರೀತಿ ಕಡಿಮೆಯಾಗಲು ಪ್ರಾರಂಭಿಸಿದಾಗ ಈ ಸಂಬಂಧವು ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ.ಪ್ರೀತಿಯು ಈ ಸಂಬಂಧದಲ್ಲಿ ಮಾಧುರ್ಯವನ್ನು ಬೆಳೆಸುತ್ತದೆ.

ಎರಡನೆಯದಾಗಿ ಸಮರ್ಪಣೆ. ಚಾಣಕ್ಯ ನೀತಿಯ ಪ್ರಕಾರ ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧದಲ್ಲಿ ಸಮರ್ಪಣೆಗೆ ವಿಶೇಷ ಮಹತ್ವವಿದೆ. ಯಾವುದೇ ಸಂಬಂಧದಲ್ಲಿ ಸಮರ್ಪಣಾಭಾವ ಇಲ್ಲದಿದ್ದರೆ ಆ ಸಂಬಂಧ ಕೊನೆಯವರೆಗೂ ಗಟ್ಟಿಯಾಗುವುದಿಲ್ಲ. ಸಮರ್ಪಣಾ ಮನೋಭಾವ ಪರಸ್ಪರ ಸಹಕರಿಸಲು ಪ್ರೇರೇಪಿಸುತ್ತದೆ. ಈ ಭಾವನೆಯು ಈ ಸಂಬಂಧವನ್ನು ಬಲಪಡಿಸುತ್ತದೆ.

ಇನ್ನು ಮೂರನೆಯದಾಗಿ ಗೌರವ. ಗಂಡ ಹೆಂಡತಿಯ ನಡುವಿನ ಸಂಬಂಧದಲ್ಲಿ ಗೌರವ ಮತ್ತು ಕೃತಜ್ಞತೆ ಬಹಳ ಮುಖ್ಯವಾದ ಕೊಡುಗೆಯನ್ನು ಹೊಂದಿದೆ ಎಂದು ಚಾಣಕ್ಯನೀತಿ ಹೇಳುತ್ತದೆ. ಪರಸ್ಪರ ಒಬ್ಬರಿಗೊಬ್ಬರನ್ನು ಗೌರವಿಸಬೇಕು. ಪತಿ-ಪತ್ನಿ ಇಬ್ಬರೂ ಪರಸ್ಪರ ಶಕ್ತಿಯಾಗಬೇಕು. ಈ ರೀತಿ ಮಾಡುವುದರಿಂದ ಪತಿ-ಪತ್ನಿಯರು ಸಂಬಂಧ ಗಟ್ಟಿಯಾಗಿ ಇರುತ್ತದೆ. ಪರಸ್ಪರ ಅತ್ಯುತ್ತಮ ಕೆಲಸವನ್ನು ಸಾಗಿಸಬೇಕು. ಒಬ್ಬರಿಗೊಬ್ಬರು ಎಂದಿಗೂ ನಿಂದಿಸಬಾರದು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಈಗುಪ್ತ ಲಕ್ಷ್ಮಿ ಮಂತ್ರವನ್ನು ಕೇವಲ ಕೇಳಿದ್ದರು ಸಹ ಬಡ ವ್ಯಕ್ತಿ ಶ್ರೀಮಂತ ಆಗುವನು.

ಈಗುಪ್ತ ಲಕ್ಷ್ಮಿ ಮಂತ್ರವನ್ನು ಕೇವಲ ಕೇಳಿದ್ದರು ಸಹ ಬಡ ವ್ಯಕ್ತಿ ಶ್ರೀಮಂತ ಆಗುವನು.

ಶಿವಗಂಗೆ ಬೆಟ್ಟ

ಒಂದು ಒಳ್ಳೆಯ ವಾರಾಂತ್ಯದ ವೀಕ್ಷಣಿಯ ಜಾಗ ಶಿವಗಂಗೆ ಬೆಟ್ಟ