in

ಭಾರತದ ಶ್ರೇಷ್ಠ ಚಕ್ರವರ್ತಿಗಳಲ್ಲಿ ಒಬ್ಬ ಸಾಮ್ರಾಟ್ ಅಶೋಕ

ಸಾಮ್ರಾಜ್ಯದ ಅತ್ಯಂತ ಶಕ್ತಿಶಾಲಿ ದೊರೆ ಅಶೋಕ ಚಕ್ರವರ್ತಿ. ಅಶೋಕನ ಬಗ್ಗೆ ತಿಳಿಯುವ ಮುನ್ನ ಸ್ವಲ್ಪ  ಅವನ ವಂಶದ ಬಗ್ಗೆ ತಿಳಿಯೋಣ. ಮೌರ್ಯ ವಂಶ ಶುರುವಾಗುವ ಮೊದಲು ಇದ್ದದ್ದು ನಂದವಂಶ.  ನಂದ ವಂಶದವರು ಮಾಡಿದ ಅಪಮಾನಕ್ಕೆ ಯಾವ ರೀತಿ ಚಾಣಕ್ಯ ಸೇಡು ತೀರಿಸಿಕೊಂಡಿದ್ದರು ಅನ್ನೋ ವಿಚಾರ ಅನೇಕರಿಗೆ ಗೊತ್ತೇ ಇರುತ್ತೆ. ಒಂದು ದಿನ ಧನಾನಂದ ಮಗದದಲ್ಲಿ ದೊಡ್ಡ ಹೋಮವನ್ನು ಆಯೋಜನೆ ಮಾಡಿದ್ದರು. ಈ ಯಜ್ಞ ನಡೆಯುವಾಗ ಚಾಣಕ್ಯ ಅಲ್ಲಿ ಉಪಸ್ಥಿತರಿದ್ದರು. ಬಳಿಕ ಬ್ರಹ್ಮಭೋಜನಕ್ಕೆ ತೆರಳಿದ್ದರು. ಈ ವೇಳೆ ಬ್ರಹ್ಮಭೋಜನದ ಸ್ಥಳಕ್ಕೆ ತೆರಳಿದ್ದ ರಾಜ ಧನಾನಂದ ಚಾಣಾಕ್ಯನ ವೇಷ ಭೂಷಣವನ್ನ ನೋಡಿ ತುಂಬಿದ ಭವನದಲ್ಲಿ ಲೇವಡಿ ಮಾಡಿ ಹಾಸ್ಯಮಾಡಿ ಚಾಣಕ್ಯನನ್ನು ಅವಮಾನಿಸಿದ್ದರು. ಅಲ್ಲದೆ ಬ್ರಹ್ಮ ಭೋಜನದಿಂದ ಮಧ್ಯದಲ್ಲೇ ಎದ್ದೇಳುವಂತೆ ಆದೆಶ ನೀಡಿದರು. ಈ ಅವಮಾನದಿಂದ ಕೋಪಗೊಂಡ ಚಾಣಕ್ಯರು ತಕ್ಷಣವೇ ಸಿಟ್ಟಿನಲ್ಲಿ ತಾವು ಕಟ್ಟಿದ್ದ ಜಡೆಯನ್ನ ಬಿಚ್ಚಿ ಧನಾಂನಂದನಿಗೆ ಸವಾಲ್ ಹಾಕುತ್ತಾರೆ. ನಂದವಂಶದ ನಿರ್ಣಾಮ ಮಾಡುವವರೆಗೂ ತನ್ನ ಕೂದಲನ್ನು ಕಟ್ಟುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಅಲ್ಲಿಂದ ಹೊರಟು ಹೋಗುತ್ತಾರೆ. ಬಳಿಕ ನಂದ ವಂಶದ ಸಾಮ್ರಾಜ್ಯವನ್ನ ಉರುಳಿಸಿ ರಾಜನಾಗಿ ಆಡಳಿತ ನಡೆಸುವ ಯೋಗ್ಯತೆಯಿರುವ ವ್ಯಕ್ತಿಯ ಹುಡುಕಾಟದಲ್ಲಿ ಹೊರಟ ಚಾಣಕ್ಯನಿಗೆ ಅಂತಹ ಬಾಲಕ ಕೊನೆಗೂ ಸಿಕ್ಕಿದ್ದ. ಆತನೇ ಚಂದ್ರಗುಪ್ತ ಮೌರ್ಯ. ಇಲ್ಲಿಂದಲೇ ಚಾಣಕ್ಯನ ಜೀವನದ ಏಕಮಾತ್ರ ಉದ್ದೇಶ, ಗುರಿ ನಂದ ವಂಶದ ನಿರ್ಣಾಮ ಮಾಡಿ ತಾನು ಆಯ್ಕೆ ಮಾಡಿದವನನ್ನ ರಾಜನಾಗಿ ಮಾಡುವುದು.

ಚಂದ್ರಗುಪ್ತ ಮೌರ್ಯ ( ಈತನನ್ನು ಚಂದ್ರಗುಪ್ತ ಎಂದಷ್ಟೇ ಕರೆಯುವದೂ ಉಂಟು). ಇವನು ಮೌರ್ಯ ಸಾಮ್ರಾಜ್ಯದ ಸ್ಥಾಪಕನು. ಇವನು ಭಾರತ ಉಪಖಂಡದ ಬಹುಭಾಗವನ್ನು ಒಗ್ಗೂಡಿಸುವದರಲ್ಲಿ ಯಶಸ್ವಿಯಾದನು. ಈ ಕಾರಣಕ್ಕಾಗಿ ಇವನನ್ನು ಭಾರತವನ್ನು ಒಗ್ಗೂಡಿಸಿದ ಮೊದಲ ವ್ಯಕ್ತಿ ಮತ್ತು ಭಾರತದ ಮೊದಲ ನಿಜವಾದ ಸಾಮ್ರಾಟ್ ಎಂದು ಪರಿಗಣಿಸುತ್ತಾರೆ . ಕೇವಲ ಇಪ್ಪತ್ತು ವರ್ಷದವನಿರುವಗಲೇ ಅಲೆಕ್ಸಾಂಡರನ ಸೈನ್ಯವನ್ನು ಸೋಲಿಸಿ ನಂದ ಸಾಮ್ರಾಜ್ಯವನ್ನು ಗೆದ್ದಿದ್ದು, ಸೆಲ್ಯೂಕಸ್ ನಿಕೇಟರ್ ನನ್ನು ಸೋಲಿಸಿದ್ದು ಮತ್ತು ದಕ್ಷಿಣ ಏಶಿಯಾದಾದ್ಯಂತ ಕೇಂದ್ರೀಕೃತ ಆಳಿಕೆಯನ್ನು ನೆಲೆಗೊಳಿಸಿದ್ದು – ಈ ಘಟನೆಗಳು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವಂಥವು ಆಗಿವೆ. ಚಂದ್ರಗುಪ್ತನು ತನ್ನ ಜೀವನದ ಕೊನೆಗಾಲದಲ್ಲಿ ಸಿಂಹಾಸನವನ್ನು ತ್ಯಜಿಸಿ ಜೈನಧರ್ಮಕ್ಕೆ ಸೇರಿ ಸಂನ್ಯಾಸಿಯಾಗಿ ಕರ್ನಾಟಕದಲ್ಲಿರುವ ಶ್ರವಣಬೆಳಗೊಳದಲ್ಲಿ ತನ್ನ ಕೊನೆಯ ದಿನಗಳನ್ನು ಕಳೆದನು. ಚಂದ್ರಗುಪ್ತ ಮೌರ್ಯನ ಮರಣದ ನಂತರ ಅವನ ಮಗನಾದ ಬಿಂದುಸಾರನು ಮಗಧ ಸಿಂಹಾಸನವನ್ನೇರಿದನು. ಮಹಿಷಿ ಧರ್ಮಾ ಎಂಬವಳಿಂದ ಅಶೋಕ ಜನಿಸಿದನೆಂದು ದೀಪವಂಶ ಮತ್ತು ಮಹಾವಂಶ ಗ್ರಂಥಗಳಿಂದ ತಿಳಿದುಬಂದರೆ ಬೇರೆ ಕೆಲವು ಗ್ರಂಥಗಳ ಪ್ರಕಾರ ಅಶೋಕ ಬಿಂದುಸಾರನ ಗ್ರೀಕ್ ಪತ್ನಿಯಿಂದ ಜನಿಸಿದವನೆಂದೂ ಹೇಳಲಾಗಿದೆ.

ಭಾರತದ ಶ್ರೇಷ್ಠ ಚಕ್ರವರ್ತಿಗಳಲ್ಲಿ ಒಬ್ಬ ಸಾಮ್ರಾಟ್ ಅಶೋಕ

ಅಶೋಕನು ಮೌರ್ಯ ಸಾಮ್ರಾಜ್ಯದಲ್ಲೇ ಅತ್ಯಂತ ಪ್ರಸಿದ್ಧ ಚಕ್ರವರ್ತಿ ಕ್ರಿ.ಪೂ 273 ರಿಂದ ಕ್ರಿ.ಪೂ 232 ರವರಿಗೆ ಪ್ರಾಚೀನ ಭಾರತದಲ್ಲಿ ಅತಿ ದೊಡ್ಡ ರಾಜ್ಯವನ್ನಾಳಿದ ಕೆಲವೇ ಕೆಲವು ರಾಜರಲ್ಲಿ ಸಾಮ್ರಾಟ್ ಅಶೋಕನ ಹೆಸರು ಮೂಡಿ ಬರುತ್ತದೆ. ದೇವನಾಂಪ್ರಿಯ ಮತ್ತು ಪ್ರಿಯದರ್ಶಿ ಎಂಬ ಬಿರುದುಗಳಿಂದ ಖ್ಯಾತನಾಗಿದ್ದಾನೆ. ಬೌದ್ಧ ಸಂಪ್ರದಾಯದ ಪ್ರಕಾರ ಅವನು ಬೌದ್ಧ ಧರ್ಮದ ಸಂರಕ್ಷಣೆ ಮತ್ತು ಪ್ರಸಾರದಲ್ಲಿ ತನ್ನನ್ನು ತೊಡಗಿಸಿಕೊಂಡನು. ಅಶೋಕ ಎಂದರೆ ಸಂಸ್ಕೃತ ದಲ್ಲಿ ದುಃಖವಿಲ್ಲದವನು ಎಂದರ್ಥ. ರಾಜ ಬಿಂದುಸಾರನಿಗೆ ಅವನ ರಾಣಿಯರಲ್ಲೊಬ್ಬಳಾದ ಸುಭದ್ರಾಂಗಿ ಎಂಬಾಕೆಯಿಂದ ಹುಟ್ಟಿದವನೇ ಅಶೋಕ. ಈ ಸುಭದ್ರಾಂಗಿ ರಾಣಿಯು, ಬಡಬ್ರಾಹ್ಮಣನೊಬ್ಬನ ಮಗಳೆಂದೂ, ಅವಳಿಗೆ ಹುಟ್ಟುವ ಮಗ ಮಹಾರಾಜನಾಗುತ್ತಾನೆ ಎಂಬ ಭವಿಷ್ಯ ತಿಳಿದ ಅವಳ ತಂದೆ, ಅವಳನ್ನು ಬಿಂದುಸಾರನ ಅಂತಃಪುರಕ್ಕೆ ಸೇರಿಸಿದ ಎಂದು ಕಥೆಯಿದೆ. ಧರ್ಮಾ ಬ್ರಾಹ್ಮಣಳಾದರೂ, ರಾಜವಂಶದವಳಲ್ಲ ಎಂಬ ಕಾರಣಕ್ಕೆ ಅಂತಃಪುರದಲ್ಲಿ ಅವಳಿಗೆ ನೀಚ ಸ್ಥಾನವಿತ್ತು.

ಅಶೋಕನ ಬಾಲ್ಯ ಹಾಗೂ ಏಳಿಗೆಯ ಕುರಿತು ಬೌದ್ದ ಧರ್ಮ ಗ್ರಂಥಗಳಾದ ದೀಪವಂಶ ಹಾಗೂ ಮಹಾವಂಶಗಳು ಮಾಹಿತಿ ನೀಡುತ್ತವೆ. ಅವುಗಳ ಪ್ರಕಾರ ಬಿಂದುಸಾರನಿಗೆ 16 ಪತ್ನಿಯರು ಹಾಗೂ 101 ಮಕ್ಕಳು ಇದ್ದರು. ಸುಶೀಮ ಹಿರಿಯಮಗನಾಗಿದ್ದ ಅಶೋಕ ಎರಡನೆಯಮಗನಾಗಿದ್ದ. ಬಾಲ್ಯದಿಂದಲೂ ಅಶೋಕ ಅತ್ಯಂತ ಮೇಧಾವಿಯಾಗಿದ್ದರಿಂದ ಆತ ತಕ್ಷಶಿಲೆ ಹಾಗೂ ಉಜ್ಜಯಿನಿಯ ರಾಜ್ಯಪಾಲನಾಗಿ ನೇಮಕಗೊಂಡನು. ಅಶೋಕನ ಯಶಸ್ಸಿನಲ್ಲಿ ಮುಂದೆ ಚಕ್ರವರ್ತಿಯಾಗುವ ಮಹತ್ವಾಕಾಂಕ್ಷೆಯನ್ನು ಕಂಡ ಅವನ ಮಲ-ಸೋದರರು ಮತ್ತಷ್ಟುಅಸ್ವಸ್ಥರಾದರು. ಸುಶೀಮನ ಇನ್ನಷ್ಟು ಚಿತಾವಣೆಯಿಂದ, ಬಿಂದುಸಾರ, ಅಶೋಕನನ್ನು ರಾಜ್ಯಬಿಟ್ಟು ತೊಲಗಲು ಆದೇಶಿಸಿದ. ಅದರಂತೆ, ಕಳಿಂಗಕ್ಕೆ ಹೋಗಿ ಅಜ್ಙಾತವಾಗಿ ನೆಲೆಸಿದ ಅಶೋಕ. ಅಲ್ಲಿ ಪರಿಚಯವಾದ ಬೆಸ್ತರ ಹೆಂಗಸು ಮಹಾದೇವಿಯೊಡನೆ ಪ್ರೇಮದಲ್ಲಿ ಸಿಲುಕಿ ಆಕೆಯನ್ನು ಪ್ರೇಮ ವಿವಾಹವಾದನು. ಆಕೆ ದ್ವಿತೀಯ ಅಥವಾ ತೃತೀಯ ರಾಣಿಯಾದಳು.

ಅಶೋಕನು ಬೌದ್ಧಧರ್ಮಕ್ಕೆ ಒಲಿಯಲು ಕಾರಣ

ಅಶೋಕನು ಬೌದ್ಧಧರ್ಮಕ್ಕೆ ಒಲಿಯಲು ಇನ್ನೊಂದು ಕಾರಣವಿತ್ತು. ಅಶೋಕನು ಗಲ್ಲಿಗೇರಿಸಿದ ಸೋದರರಲ್ಲೊಬ್ಬನ್ನನ್ನು ಮದುವೆಯಾಗಿದ್ದ ಮೌರ್ಯ ರಾಜಕುಮಾರಿಯೊಬ್ಬಳು ತನ್ನ ಗರ್ಭಸ್ಥ ಶಿಶುವಿನ ಜೀವವನ್ನು ಉಳಿಸುವದಕ್ಕೋಸ್ಕರ ಒಬ್ಬ ದಾಸಿಯೊಂದಿಗೆ ತನ್ನ ಅರಮನೆಯನ್ನು ಬಿಟ್ಟು ಓಡಿ ಹೋದಳು. ಸಾಕಷ್ಟು ದೂರ ಪ್ರಯಾಣದ ನಂತರ ಗರ್ಭಿಣಿ ರಾಜಕುಮಾರಿಯು ಅರಣ್ಯದಲ್ಲಿ ಒಂದು ಮರದ ಕೆಳಗೆ ಕುಸಿದಳು. ದಾಸಿಯು ಸಹಾಯಕ್ಕೆ ವೈದ್ಯನನ್ನೋ ಪೂಜಾರಿಯನ್ನೋ ಕರೆತರಲು ಹತ್ತಿರದ ಒಂದು ಆಶ್ರಮಕ್ಕೆ ಹೋದಳು. ಅಷ್ಟರಲ್ಲಿ ಆ ಮರದ ಕೆಳಗೆ ರಾಜಕುಮಾರಿಯು ಒಂದು ಗಂಡು ಮಗುವಿಗೆ ಜನ್ಮವಿತ್ತಳು. ಆಶ್ರಮದ ಬ್ರಾಹ್ಮಣರು ರಾಜಕುಮಾರನನ್ನು ಬೆಳೆಸಿ ವಿದ್ಯೆಯನ್ನು ಕಲಿಸಿದರು. ನಂತರ ಅವನಿಗೆ ಹದಿಮೂರು ವರ್ಷಗಳಾದಾಗ ಅಶೋಕನ ಕಣ್ಣಿಗೆ ಬಿದ್ದನು. ಅಷ್ಟು ಎಳೆಯ ಬಾಲಕನು ಮುನಿಯ ವೇಷದಲ್ಲಿರುವದನ್ನು ನೋಡಿ ಅಶೋಕನಿಗೆ ಆಶ್ಚರ್ಯವಾಯಿತು. ತನ್ನ ಪರಿಚಯವನ್ನು ಆ ಬಾಲಕನು ತಿಳಿಸಿದಾಗ ಅಶೋಕನಿಗೆ ಅಪರಾಧಭಾವನೆ ಉಂಟಾಗಿ, ವಾತ್ಸಲ್ಲ್ಯವುಕ್ಕಿ ಆ ಬಾಲಕನನ್ನೂ ಅವನ ತಾಯಿಯನ್ನೂ ಅರಮನೆಗೆ ಕರೆತರುತ್ತಾನೆ. ಬೌದ್ಧಳಾದ ರಾಣಿ ದೇವಿ, ಇದೇ ವೇಳೆಯಲ್ಲಿ, ತನ್ನ ಮಕ್ಕಳನ್ನು ಬೌದ್ಧಧರ್ಮದವರನ್ನಾಗಿಯೇ ಬೆಳೆಸುತ್ತಿದ್ದಳು. ಕಳಿಂಗದಲ್ಲಿ ಅಶೋಕನ ಕ್ರೌರ್ಯವನ್ನು ನೋಡಿ ಆಕೆ ಬಹುಶಃ ಅವನನ್ನು ತೊರೆದಳು. ಇದರಿಂದ ದುಃಖಗೊಂಡ ಅಶೋಕನನ್ನು ಅವನ ಸೋದರನ ಮಗ (ಆಶ್ರಮದಲ್ಲಿ ಬೆಳೆದು, ರಾಜಪುತ್ರ ಎನ್ನುವುದಕ್ಕಿಂತ ಸನ್ಯಾಸಿಯೋ ಎಂಬಂತಿದ್ದ ) ಅವನನ್ನು ಸಮಾಧಾನಿಸಿ, ಬೌದ್ಧ ಧರ್ಮವನ್ನು ಸೇರುವಂತೆಯೂ, ಯುದ್ಧದಿಂದ ಹಿಂದೆ ಸರಿಯುವಂತೆಯೂ ಪ್ರೇರೇಪಿಸಿದ. ರಾಣಿ ದೇವಿಯ ಮಕ್ಕಳಾದ ರಾಜಕುಮಾರ ಮಹೀಂದ್ರ ಮತ್ತು ಕುಮಾರಿ ಸಂಘಮಿತ್ರರು, ರಕ್ತಪಾತ ಮತ್ತು ಹಿಂಸೆಯನ್ನು ದ್ವೇಷಿಸುತ್ತಿದ್ದರೂ, ರಾಜವಂಶೀಯರಾದ ಕಾರಣ, ಅವು ತಮ್ಮ ಜೀವನದ ಅನಿವಾರ್ಯ ಅಂಗ ಎಂದು ಅರಿತಿದ್ದರು . ಅಶೋಕನು ಮರಣದ ನಂತರ ಬಂದ ಅವನ ಮಕ್ಕಳಾದ ಕುಣಾಲ, ಜಲೌಕ, ದಶರಥ, ಬಿಂದು, ಪಾಲಿತ, ಹಾಗೂ ಸಂಪ್ರತಿ ಅಸಮರ್ಥರಾಗಿದ್ದರು. ಇವರು ಸಾಮ್ರಾಜ್ಯವನ್ನು ಸರಿಯಾಗಿ ಆಳಲಿಲ್ಲ. ಬೃಹತರಥ ಈ ವಂಶದ ಕೊನೆಯ ದೊರೆ. ಈತನನ್ನು ಅವನ ಬ್ರಾಹ್ಮಣ ಸೇನಾನಿಯಾದ ಪುಶ್ಯಮಿತ್ರಶೃಂಗನು ಕೊಂದು ಶುಂಗ ವಂಶವನ್ನು ಆರಂಭಿಸಿದನು. ಅಲ್ಲಿಗೆ ಮೌರ್ಯಸಾಮ್ರಜ್ಯ ಅವನತಿಯಾಯಿತು.

ಭಾರತದ ಶ್ರೇಷ್ಠ ಚಕ್ರವರ್ತಿಗಳಲ್ಲಿ ಒಬ್ಬ ಸಾಮ್ರಾಟ್ ಅಶೋಕ

ವೀರ ಸಾಮ್ರಾಟ ಅಶೋಕನ ನೆನಪಿನಲ್ಲಿ ಅಶೋಕ ಚಕ್ರವು ಭಾರತೀಯ ಸೇನೆ ತನ್ನ ಯೋಧರಿಗೆ ನೀಡುವ ಶೌರ್ಯ ಪ್ರಶಸ್ತಿಯಾಗಿದೆ. ರಣರಂಗದ ಹೊರಗಡೆ ಯೋಧನೊಬ್ಬ ತನ್ನ ಅಪ್ರತಿಮ ಶೌರ್ಯ, ಸಾಹಸ ಮತ್ತು ತ್ಯಾಗಕ್ಕಾಗಿ ಪಡೆಯಬಹುದಾದ ಪದಕವಿದು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

107 Comments

ಮಹಾಭಾರತದಲ್ಲಿ ಬರುವ ಶಕುನಿ ಪಾತ್ರವೇ ಕುರುಕ್ಷೇತ್ರ ಯುದ್ಧಕ್ಕೆ ಪ್ರಮುಖ ಕಾರಣ

ಹೆರಿಗೆಯ ನಂತರ ನನಗೆ ಕೋಪ ಜಾಸ್ತಿ ಅಂತ ಹೇಳುವ ಹೆಣ್ಣು ಮಕ್ಕಳ ಕೋಪಕ್ಕೆ ಕಾರಣ ಏನಿರಬಹುದು?

ಹೆರಿಗೆಯ ನಂತರ ನನಗೆ ಕೋಪ ಜಾಸ್ತಿ ಅಂತ ಹೇಳುವ ಹೆಣ್ಣು ಮಕ್ಕಳ ಕೋಪಕ್ಕೆ ಕಾರಣ ಏನಿರಬಹುದು?