in

ಗಿಡಮೂಲಿಕೆಗಳ ಔಷಧಿ ಪದ್ಧತಿ ಹಿಂದಿನಿಂದಲೂ ಚಾಲ್ತಿಯಲ್ಲಿತ್ತು

ಗಿಡಮೂಲಿಕೆಗಳ ಔಷಧಿ ಪದ್ಧತಿ
ಗಿಡಮೂಲಿಕೆಗಳ ಔಷಧಿ ಪದ್ಧತಿ

ವನಸ್ಪತಿಯು ಸಾಂಪ್ರದಾಯಿಕ ಅಥವಾ ಜಾನಪದ ಔಷಧ ಪ್ರಕಾರವಾಗಿದ್ದು, ಇದು ಸಸ್ಯ ಮತ್ತು ಸಸ್ಯಜನ್ಯ ಸಾರ, ಸತ್ವಗಳ ಬಳಕೆಯನ್ನವಲಂಭಿಸಿದೆ. ಈ ವನಸ್ಪತಿಯು ಸಸ್ಯಗಳ ಔಷಧಿ, ಔಷಧೀಯ ವನಸ್ಪತಿ, ಗಿಡಮೂಲಿಕೆಗಳ ಔಷಧಿ, ಮೂಲಿಕಾಶಾಸ್ತ್ರ ಮತ್ತು ಮೂಲಿಕಾ ಚಿಕಿತ್ಸೆ ಎಂಬ ಹೆಸರುಗಳಿಂದಲೂ ಕರೆಯಲ್ಪಡುತ್ತದೆ.

ಗಿಡಮೂಲಿಕೆಗಳ ಔಷಧಿಯ ವ್ಯಾಪ್ತಿಯು ಕೆಲವೊಮ್ಮೆ ಶಿಲೀಂಧ್ರಗಳು ಮತ್ತು ಜೇನುಹುಳುಗಳ ಉತ್ಪನ್ನಗಳಿಗೂ ಹರಡಿದ್ದು, ಖನಿಜಾಂಶಗಳು, ಚಿಪ್ಪುಗಳು ಹಾಗೂ ಕೆಲವು ಪ್ರಾಣಿಗಳ ದೇಹದ ಭಾಗಗಳನ್ನೂ ಒಳಗೊಂಡಿರುತ್ತವೆ. ಔಷಧ ವಿಜ್ಞಾನ ಶಾಸ್ತ್ರವು ನೈಸರ್ಗಿಕ ಮೂಲಗಳಿಂದ ದೊರೆಯುವ ಔಷಧಗಳ ಬಗೆಗಿನ ಅಧ್ಯಯನವಾಗಿದೆ.

ಔಷಧಗಳ ಸಾಂಪ್ರದಾಯಿಕ ಬಳಕೆಯು ಭವಿಷ್ಯದ ಔಷಧಗಳ ಸಾಮರ್ಥ್ಯವನ್ನು ತಿಳಿದುಕೊಳ್ಳುವ ಒಂದು ದಾರಿಯೆಂದು ಗುರುತಿಸಲ್ಪಟ್ಟಿದೆ. 2001ರಲ್ಲಿ ಸಂಶೋಧಕರು ಸುಮಾರು 122 ಸಂಯುಕ್ತಗಳನ್ನು ಪ್ರಚಲಿತ ಔಷಧಗಳ ಮುಖ್ಯವಾಹಿನಿಯಲ್ಲಿ ಬಳಸಿದ್ದು, ಇವೆಲ್ಲವೂ ಔಷಧ “ಜನಾಂಗೀಯಸಸ್ಯಗಳ” ಮೂಲಗಳಿಂದ ಪಡೆದವುಗಳಾಗಿವೆ. ಇವುಗಳಲ್ಲಿ ಶೇಕಡಾ 80 ಸಂಯುಕ್ತಗಳು ಇದೇ ರೀತಿಯ ಬಳಕೆಗೆ ಅಥವಾ ಇದಕ್ಕೆ ಸಂಬಂಧಿಸಿದ ಸಾಂಪ್ರದಾಯಿಕ ಔಷಧ ಜನಾಂಗೀಯ ಬಳಕೆಯಲ್ಲಿ ಉಪಯೋಗಿಸಲ್ಪಡುತ್ತವೆ.

ಹಲವು ಸಸ್ಯಗಳು ಮಾನವರಲ್ಲಿ ಮತ್ತು ಇತರ ಪ್ರಾಣಿಗಳಲ್ಲಿ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಬಳಸಬಹುದಾದಂತಹ ದ್ರವ್ಯಗಳನ್ನು ಉತ್ಪಾದಿಸುತ್ತವೆ. ಇವು ಸುವಾಸನಾಯುಕ್ತ ದ್ರವ್ಯಗಳಾಗಿದ್ದು ಇವುಗಳಲ್ಲಿ ಹೆಚ್ಚಿನವುಗಳು ಫೀನಾಲ್‌ಗಳು ಮತ್ತು ಇವುಗಳ ಆಕ್ಸಿಜನ್ ಪರಮಾಣುಗಳ ಆದೇಶವನ್ನು ಹೊಂದಿದ ಉತ್ಪನ್ನಗಳಾದ ಟ್ಯಾನಿನ್‌ಗಳು. ಹೆಚ್ಚಿನವುಗಳು ಚಯಾಪಚಯ ಕ್ರಿಯೆಯಲ್ಲಿ ಪಾಲ್ಗೊಳ್ಳುವ ಎರಡನೇ ದರ್ಜೆಯ ವಸ್ತುಗಳಾಗಿದ್ದು ಕೇವಲ 12,000 ದ್ರವ್ಯಗಳನ್ನು ಈವರೆಗೆ ಪತ್ತೆಹಚ್ಚಲಾಗಿದ್ದು, ಇವುಗಳನ್ನು ಒಟ್ಟು ಪರಿಮಾಣದ ಶೇಕಡಾ 10ರಷ್ಟು ಮಾತ್ರ ಎಂದು ಅಂದಾಜುಗೊಳಿಸಲಾಗಿದೆ.

ಹೆಚ್ಚಿನ ಸಂದರ್ಭಗಳಲ್ಲಿ, ಅಲ್ಕಲೋಯ್ಡ್‌ಗಳಂತಹ ದ್ರವ್ಯಗಳು ಸಸ್ಯಗಳಲ್ಲಿ ಪರಭಕ್ಷಕ ಸೂಕ್ಷಾಣುಜೀವಿಗಳಿಂದ, ಕೀಟಗಳಿಂದ ಮತ್ತು ಸಸ್ಯಾಹಾರಿ ಪ್ರಾಣಿಗಳಿಂದ ರಕ್ಷಣೆಯನ್ನೊದಗಿಸುವ ಪ್ರಕ್ರಿಯೆಗಳಾಗಿ ಬಳಸಲ್ಪಡುತ್ತವೆ. ಗಿಡಮೂಲಿಕೆಗಳಲ್ಲಿ ಹೆಚ್ಚಿನ ಸಸ್ಯಗಳು ಮತ್ತು ಸಸ್ಯವರ್ಗಗಳು ತಮ್ಮ ಸಮೃದ್ಧಿಕಾಲದಲ್ಲಿ ಔಷಧೀಯ ಸಂಯುಕ್ತಗಳನ್ನೊದಗಿಸುವ ಆಹಾರವಾಗಿ ಮನುಷ್ಯರಿಂದ ಬಳಸಲ್ಪಡುತ್ತವೆ.

ಗಿಡಮೂಲಿಕೆಗಳ ಔಷಧಿ ಪದ್ಧತಿ ಹಿಂದಿನಿಂದಲೂ ಚಾಲ್ತಿಯಲ್ಲಿತ್ತು
ಗಿಡಮೂಲಿಕೆಗಳ ಔಷಧಿ ಸಸ್ಯ

ಸೂಚಿಸಿದ ಔಷಧಿಗಳಂತೆಯೇ, ಅನೇಕ ಗಿಡಮೂಲಿಕೆಗಳೂ ಕೂಡಾ ಅರೋಗ್ಯದ ಮೇಲೆ ದುಷ್ಪರಿಣಾಮಗಳನ್ನುಂಟುಮಾಡುವಂತಹುದು ಎಂದು ತಿಳಿಯಲಾಗಿದೆ. ಅದಕ್ಕಿಂತ ಹೆಚ್ಚಾಗಿ, ಕಲಬೆರಕೆ, ತಯಾರಿಕೆಯಲ್ಲಿ ಅಸಮರ್ಪಕ ಸೂತ್ರಗಳ ಬಳಕೆ ಅಥವಾ ಸಸ್ಯ ಮತ್ತು ಔಷಧಿಗಳ ಪರಸ್ಪರ ವರ್ತನೆಗಳ ಬಗ್ಗೆ ತಪ್ಪು ತಿಳುವಳಿಕೆಯು ಕೆಲವೊಮ್ಮೆ ದೇಹಕ್ಕೆ ಅಪಾಯ ತರಬಲ್ಲ ಮಾರಕವಾದ ಪ್ರತಿಕೂಲ ಪರಿಸ್ಥಿತಿಯನ್ನು ತಂದೊದಗಿಸಬಲ್ಲುದು.

ಆದರೂ, ಅಂತಹ ಪ್ರತಿಕೂಲ ಔಷಧೀಯ ಘಟನೆಗಳು ರೂಢಿಯಲ್ಲಿರುವ ಔಷಧಿಗಳ ಎಡಿಆರ್ ಕಾರಣದಿಂದುಂಟಾದ ತನಿಖೆಗೆ ಹೋಲಿಸಿದಾಗ ಬಹಳ ಸಣ್ಣ ಪ್ರಮಾಣದ್ದಾಗಿದೆ. ಅಥವಾ ಆಸ್ಪತ್ರೆಯ ದಾಖಲಾತಿಯ 6 – 7% ಪ್ರಮಾಣವು ಎಡಿಆರ್‌ ಕಾರಣದಿಂದ ನಡೆಯುತ್ತವೆ. ಉತ್ತಮ ವಿಧಾನಗಳಿಂದ ತಯಾರಿಸಲ್ಪಟ್ಟ ಗಿಡಮೂಲಿಕಾ ಉತ್ಪನ್ನಗಳು ಇತರ ಔಷಧಿಗಳಲ್ಲಿರುವುದಕ್ಕಿಂತ ಅತೀಸಣ್ಣ ಪ್ರಮಾಣದ ಎಡಿಆರ್‌ಗಳನ್ನು ಮತ್ತು/ಅಥವಾ ಅಡ್ಡಪರಿಣಾಮಗಳನ್ನು ಹೊಂದಿದೆ.

ವನಸ್ಪತಿಯೊಂದಿಗೆ ಮಾನವ ಸಂಬಂಧಗಳು

ಎಲ್ಲಾ ಖಂಡದ ಸಾವಿರಾರು ಜನರು ಇತಿಹಾಸ ಪೂರ್ವಕಾಲದಿಂದಲೂ ಸ್ಥಳೀಯ ಸಸ್ಯವರ್ಗಗಳನ್ನು ತಮ್ಮ ಖಾಯಿಲೆಯ ಚಿಕಿತ್ಸೆಗಾಗಿ ಬಳಸುತ್ತಾ ಬಂದಿದ್ದಾರೆ. ಓಝ್‌ಟಲ್ ಆಲ್ಪ್ಸ್‌ನಲ್ಲಿ ಸುಮಾರು 5,300ವರ್ಷಗಳಿಗೂ ಹಿಂದೆ ಘನೀಕರಿಸಲ್ಪಟ್ಟ ಶರೀರ ಹೊಂದಿದ್ದ “ಓಟ್ಝಿ ದ ಐಸ್‌ಮ್ಯಾ ನ್” ನ ವೈಯಕ್ತಿಕ ಪರಿಣಾಮದಲ್ಲಿ ಹಲವಾರು ಔಷಧೀಯ ಮೂಲಿಕೆಗಳು ಕಂಡು ಬಂದಿವೆ. ಅವನ ಕರುಳಿನಲ್ಲಿ ಸೇರಿಕೊಂಡ ಪರಾವಲಂಬಿ ಜೀವಿಗಳ ಚಿಕಿತ್ಸೆಗಾಗಿ ಈ ಗಿಡ ಮೂಲಿಕೆಗಳು ಬಳಸಲ್ಪಟ್ಟವು ಎಂಬುದಾಗಿ ತಿಳಿದು ಬಂದಿದೆ.

ಪ್ರಾಣಿಗಳು ತಮ್ಮ ದೈಹಿಕ ಅಸ್ವಸ್ಥತೆಯ ಚಿಕಿತ್ಸೆಗಾಗಿ ಕಹಿಸತ್ವವುಳ್ಳ ಸಸ್ಯಗಳ ಭಾಗಗಳನ್ನು ಬಯಸುತ್ತವೆ ಎಂಬ ಸಿದ್ಧಾಂತವನ್ನು ಮಾನವಶಾಸ್ತ್ರಜ್ಞರು ಮಂಡಿಸಿದ್ದಾರೆ. ಸ್ವಾಭಾವಿಕ ವಾಗಿ ತಾವು ತಿನ್ನದೇ ಇದ್ದಂತಹ ಕಹಿ ಸತ್ವವುಳ್ಳ ಮೂಲಿಕೆಗಳನ್ನು ಕೊಂಚ ಕೊಂಚವಾಗಿ ಕಚ್ಚಿ ತಿನ್ನುವಲ್ಲಿಯವರೆಗೆ ಅಸ್ವಸ್ಥ ಪ್ರಾಣಿಗಳು ತಮ್ಮ ಆಹಾರಾಭ್ಯಾಸವನ್ನು ಬದಲಾಯಿಸಿ ಕೊಳ್ಳುತ್ತವೆ ಎಂಬುದಾಗಿ ಸ್ಥಳೀಯ ವೈದ್ಯರು ಪದೇ ಪದೇ ತಿಳಿಸಿಕೊಟ್ಟಿದ್ದಾರೆ. ಕ್ಷೇತ್ರ ಜೀವಶಾಸ್ತ್ರಜ್ಞರು ಚಿಂಪಾಂಜಿಗಳು, ಕೋಳಿಗಳು, ಕುರಿಗಳು ಮತ್ತು ಚಿಟ್ಟೆಗಳಂತಹ ವಿಭಿನ್ನ ಪ್ರಭೇಧದ ಪ್ರಾಣಿವರ್ಗಗಳಲ್ಲಿ ನಡೆಸಿದ ಪರಿವೀಕ್ಷಣೆಯ ಮೂಲಕ ದೃಢವಾದ ಸಾಕ್ಷಿಗಳನ್ನು ಇದಕ್ಕೆ ಒದಗಿಸಿಕೊಟ್ಟಿದ್ದಾರೆ. ತಗ್ಗು ಪ್ರದೇಶದ ಗೋರಿಲ್ಲಾಗಳು ತಮ್ಮ ಆಹಾರದಲ್ಲಿನ ಸುಮಾರು 90% ಭಾಗದಷ್ಟು ಶುಂಠಿ ಸಸ್ಯದ ಜಾತಿಯದ್ದೇ ಆದ ಅಫ್ರಮೋಮಮ್ ಮೆಲೆಗ್ವೆಟಾ ಸಸ್ಯದ ಹಣ್ಣುಗಳನ್ನು ಸೇವಿಸುತ್ತವೆ.

ಈ ಹಣ್ಣುಗಳು ಸೂಕ್ಷ್ಮಾಣುಜೀವಿ ವಿರೋಧಿ ಗುಣಗಳನ್ನು ಹೊಂದಿದ್ದು ಶಿಗೆಲ್ಲೋಸಿಸ್ ಮತ್ತು ಇಂತಹ ಹಲವಾರು ಸೋಂಕುಗಳನ್ನು ಸ್ಪಷ್ಟವಾಗಿ ತಡೆಯುವುದು ಗಮನಿಸಲ್ಪಟ್ಟಿವೆ. ಬಂಧನದಲ್ಲಿರಿಸಿದ ಪ್ರಾಣಿಗಳಲ್ಲಿ ಕಂಡುಬರುವ ಮಾರಕ ರೋಗಗಳಂತಹ ಕಾರ್ಡಿಯೋಮಯೋಪಥಿ ಊತಗಳಿಂದ ಗೊರಿಲ್ಲಾಗಳನ್ನು ಈ ಸಸ್ಯವರ್ಗಗಳು ರಕ್ಷಿಸುವ ಸಾಧ್ಯತೆಯ ಬಗ್ಗೆ ಈಗಿನ ಸಂಶೋಧನೆಗಳು ಕೇಂದ್ರಿಕೃತವಾಗಿವೆ.

ಕೆಲವೊಂದು ಪಕ್ಷಿಗಳು ಹಾನಿಕಾರಕ ಬ್ಯಾಕ್ಟೀರಿಯಾಗಳಿಂದ ತಮ್ಮ ಮರಿಗಳನ್ನು ಸಂರಕ್ಷಿಸುವ, ಸೂಕ್ಷ್ಮಾಣುಜೀವಿ ವಿರೋಧಿ ಜೀವಿಗಳನ್ನು ಯಥೇಚ್ಚವಾಗಿ ಹೊಂದಿರುವ ಪರಿಕರಗಳನ್ನೇ ಗೂಡುಕಟ್ಟಲು ಬಳಸುತ್ತವೆ ಎಂಬುದನ್ನು ಒಹಾಯೋ ವೆಸ್ಲೆಯನ್ ವಿಶ್ವವಿದ್ಯಾನಿಲಯದ ಸಂಶೋಧಕರು ಕಂಡು ಹಿಡಿದಿದ್ದಾರೆ. ಅನಾರೋಗ್ಯ ಹೊಂದಿರುವ ಪ್ರಾಣಿಗಳು ಟ್ಯಾನಿನ್ ಮತ್ತು ಅಲ್ಕಲಾಯಿಡ್‌ಗಳಂತಹ ಚಯಾಪಚಯಕ್ರಿಯೆಯಲ್ಲಿ ದ್ವಿತೀಯ ದರ್ಜೆಯಲ್ಲಿ ಜೀರ್ಣಗೊಳ್ಳುವ ಅಂಶಗಳು ಯಥೇಚ್ಛವಿರುವ ಸಸ್ಯವರ್ಗಗಳನ್ನು ಮೇಯಲಾರಂಭಿಸುತ್ತವೆ. ಈ ಸಸ್ಯರಾಸಾಯನಿಕಗಳು ವೈರಸ್ ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ, ಫಂಗಸ್ ವಿರೋಧಿ ಮತ್ತು ಜಂತುರೋಗ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಕಾಡಿನಲ್ಲಿನ ಪ್ರಾಣಿಗಳು ಅವುಗಳನ್ನು ತಿನ್ನುವ ಮೂಲಕ ಸ್ವಯಂ-ಔಷಧಿಗಳನ್ನು ಬಳಸುವಂತಹದ್ದು ಸಾಧ್ಯವಾಗುತ್ತಿರಬೇಕು.

ಗಿಡಮೂಲಿಕೆಗಳ ಔಷಧಿ ಪದ್ಧತಿ ಹಿಂದಿನಿಂದಲೂ ಚಾಲ್ತಿಯಲ್ಲಿತ್ತು
ಪೂರ್ವಕಾಲದಿಂದಲೂ ಸ್ಥಳೀಯ ಸಸ್ಯವರ್ಗಗಳನ್ನು ತಮ್ಮ ಖಾಯಿಲೆಯ ಚಿಕಿತ್ಸೆಗಾಗಿ ಬಳಸುತ್ತಾ ಬಂದಿದ್ದಾರೆ

ವಿಶೇಷವಾಗಿ ಕೆಲವು ಸಸ್ಯಜನ್ಯ ವಿಷವಸ್ತುಗಳನ್ನು(ಪ್ಲಾಂಟ್ ಟಾಕ್ಸಿನ್) ಜೀರ್ಣಿಸಬಲ್ಲಂತಹ ಮಾರ್ಪಾಟು ಹೊಂದಿರುವ ಜೀರ್ಣಾಂಗವ್ಯೂಹವನ್ನು ಕೆಲವು ಪ್ರಾಣಿಗಳು ಹೊಂದಿವೆ. ಉದಾಹರಣೆಗೆ, ಹೆಚ್ಚಿನ ಪ್ರಾಣಿಗಳಿಗೆ ಅಪಾಯವನ್ನೊದಗಿಸುವ ಯೂಕಲಿಪ್ಟಸ್ ಸಸ್ಯದ ಎಲೆಗಳನ್ನು ಮತ್ತು ಚಿಗುರುಗಳನ್ನೇ ತಿಂದು ಕೋಲಾ ಬದುಕುತ್ತದೆ. ನಿರ್ದಿಷ್ಟ ಪ್ರಾಣಿಯೊಂದಕ್ಕೆ ಅಪಾಯರಹಿತವಾದ ಸಸ್ಯವು ಮನುಷ್ಯರಿಗೆ ಸೇವಿಸಲು ಸುರಕ್ಷಿತ ಆಹಾರವಾಗಿರಲಾರದು. ಈ ಆವಿಷ್ಕಾರಗಳು ಸ್ಥಳೀಯ ಸಮುದಾಯಕ್ಕೆ ಸೇರಿದ ವೈದ್ಯಕೀಯ ವೃತ್ತಿನಿರತರಿಂದ ಸಾಂಪ್ರದಾಯಿಕವಾಗಿ ಸಂಗ್ರಹಿಸಲ್ಪಟ್ಟು ನಂತರದಲ್ಲಿ ರಕ್ಷಣಾತ್ಮಕ ಮಾಹಿತಿ ಮತ್ತು ಎಚ್ಚರಿಕೆಗಳನ್ನು ಇವರು ನೀಡಿದರು ಎಂಬ ತರ್ಕಬದ್ಧ ಕಲ್ಪನೆಯು ಪ್ರಚಲಿತದಲ್ಲಿದೆ.

ಗಿಡಮೂಲಿಕೆಗಳನ್ನು ಮತ್ತು ಅವುಗಳ ಪ್ರಬೇಧಗಳನ್ನು ಅಡಿಗೆಮನೆಯಲ್ಲಿ ಬಳಸುವುದು ಆಹಾರಜನ್ಯ ರೋಗಕಾರಕಗಳಿಂದ ಒದಗುವ ಅಪಾಯದ ವಿರುದ್ಧ ನೀಡಿದ ಜವಾಬ್ಧಾರಿಯುತ ಪ್ರತಿಕ್ರಿಯೆಯಾಗಿದೆ. ರೋಗಕಾರಕ ಜೀವಿಗಳು ಹೇರಳವಾಗಿ ಕಂಡುಬರುವಂತಹ ಉಷ್ಣವಾತಾವರಣದ ಪ್ರದೇಶಗಳ ಮೇಲಿನ ಅಧ್ಯಯನವು ಚಿಕಿತ್ಸಾಸಲಹೆಗಳು ಸಾಂಬಾರ ಪದಾರ್ಥಗಳನ್ನು ಅಧಿಕಪ್ರಮಾಣದಲ್ಲಿ ಒಳಗೊಂಡಿವೆ ಎಂಬುದನ್ನು ತೋರಿಸಿಕೊಟ್ಟಿವೆ. ಅಷ್ಟೇ ಅಲ್ಲದೇ, ಸಾಂಬಾರ ಪದಾರ್ಥಗಳಲ್ಲಿ ಹೆಚ್ಚು ಕ್ರಿಮಿನಾಶಕವಾದಂತಹ ಪದಾರ್ಥಗಳನ್ನೇ ಆಯ್ಕೆಮಾಡಿಕೊಳ್ಳಲಾಗುತ್ತದೆ. ಎಲ್ಲಾ ಸಂಸ್ಕೃತಿಗಳಲ್ಲೂ ತರಕಾರಿಗಳಿಗೆ ಮಾಂಸಕ್ಕಿಂತ ಕಡಿಮೆ ಮಸಾಲೆಯನ್ನು ಹಾಕಲಾಗುತ್ತದೆ, ಏಕೆಂದರೆ ಸಸ್ಯಗಳು ಸಹಜವಾಗಿಯೇ ಆಹಾರ ಹಳಸದಂತೆ ತಡೆಯುತ್ತವೆ.

ಔಷಧಿಗಳಾಗಿ ಸಸ್ಯಗಳ ಬಳಕೆಯನ್ನು ಮಾನವ ಇತಿಹಾಸಕ್ಕಿಂತಲೂ ಮುನ್ನವೇ ಬರೆದಿಡಲಾಗಿದೆ. 60,000 ವರ್ಷ ಪುರಾತನವಾದ ಉತ್ತರ ಇರಾಖ್‌ನ ನಿಯಾಂಡರ್ತಾಲ್ ಸಮಾಧಿ ಸ್ಥಳ, ಶಾನಿದರ್-4 ಸುಮಾರು ಎಂಟು ಸಸ್ಯ ಪ್ರಬೇಧಗಳಿಂದ ಸಂಗ್ರಹಿಸಿದ ಬೃಹತ್ ಪ್ರಮಾಣದ ಪರಾಗಗಳನ್ನು ನೀಡಿವೆ, ಇವುಗಳಲ್ಲಿ ಏಳು ಪ್ರಬೇಧಗಳು ಇಂದು ಗಿಡಮೂಲಿಕಾ ಔಷಧಿಗಳಾಗಿ ಬಳಕೆಯಾಗುತ್ತಿವೆ.

ಬರೆದಿಡಲಾದ ದಾಖಲೆಯ ಪ್ರಕಾರ, ಮೂಲಿಕಾ ಅಧ್ಯಯನವು ಲಾರೆಲ್, ಕಾರವೇ ಮತ್ತು ಥೈಮ್‌ಗಳಂತಹ ಸಸ್ಯಗಳ ಸುವ್ಯವಸ್ಥಿತವಾಗಿ ಬೇರೂರಿದ ಔಷಧೀಯ ಬಳಕೆಗಳನ್ನು ವಿವರಿಸಿದ ಸುಮೇರಿಯನ್ಸ್‌ರಿಗಿಂತಲೂ ಸುಮಾರು 5,000ವರ್ಷಗಳಷ್ಟು ಪುರಾತನವಾದುದು. ಕ್ರಿಸ್ತ ಪೂರ್ವ 1000ದ ಹಿಂದಿನ ಈಜಿಪ್ಟಿಯನ್ ಔಷಧಿಗಳು ಬೆಳ್ಳುಳ್ಳಿ, ಅಫೀಮು, ಹರಳೆಣ್ಣೆ, ಕೊತ್ತಂಬರಿ, ಪುದೀನಾ, ಇಂಡಿಗೋಫೆರ ಮತ್ತು ಇತರ ಗಿಡಮೂಲಿಕೆಗಳ ಬಳಕೆಯನ್ನು ಸೂಚಿಸಿವೆ ಮತ್ತು ಹಳೆಯ ಒಡಂಬಡಿಕೆಯು ಕೂಡಾ ಗಿಡಮೂಲಿಕೆಗಳ ಉಪಯೋಗವನ್ನು ಸೂಚಿಸಿದ್ದು, ರಕ್ತಬಿಂದು ಗಿಡ, ವೆಚ್ ಗಿಡ, ಕ್ಯಾರವೆ ಗಿಡ, ಗೋಧಿ, ಬಾರ್ಲಿ, ಮತ್ತು ಚಿಕ್ಕಗೋಧಿ ಸಸ್ಯಗಳ ಕೃಷಿಯನ್ನು ಮತ್ತು ಮೂಲಿಕೆಗಳ ಬಳಕೆಯನ್ನು ಸೂಚಿಸಿವೆ.

ಭಾರತೀಯ ಆಯುರ್ವೇದ ಔಷಧಿಯು ಅರಿಶಿನದಂತಹ ಹಲವು ಗಿಡಮೂಲಿಕೆಗಳನ್ನು ಸುಮಾರು ಕ್ರಿಸ್ತಪೂರ್ವ 1900ಕ್ಕಿಂತಲೂ ಮೊದಲೇ ವೈದ್ಯಕೀಯ ಚಿಕಿತ್ಸೆ ಯಲ್ಲಿ ಬಳಸಿವೆ. ಇನ್ನಿತರ ಹಲವು ಗಿಡಮೂಲಿಕೆಗಳು ಮತ್ತು ಖನಿಜಾಂಶಗಳೂ ಕೂಡಾ ಆಯುರ್ವೇದದಲ್ಲಿ ಬಳಸಲ್ಪಟ್ಟಿದ್ದು, ನಂತರದಲ್ಲಿ, ಕ್ರಿಸ್ತಪೂರ್ವ ಮೊದಲನೇ ಸಹಸ್ರವರ್ಷದಲ್ಲಿ ಇವು ಪುರಾತನ ಭಾರತೀಯ ಗಿಡಮೂಲಿಕಾ ಶಾಸ್ತ್ರಜ್ಞರಾದ ಚರಕ ಮತ್ತು ಸುಶ್ರುತರಿಂದ ವಿವರಿಸಲ್ಪಟ್ಟಿದೆ.

ಕ್ರಿಸ್ತಪೂರ್ವ 6ನೇ ಶತಮಾನದಲ್ಲಿ ಸುಶ್ರುತರಿಂದ ಬರೆಯಲ್ಪಟ್ಟುದು ಎನ್ನಲಾದ ಸುಶ್ರುತ ಸಂಹಿತವು ಸುಮಾರು 700 ಔಷಧೀಯ ಸಸ್ಯಗಳನ್ನು ವಿವರಿಸಿದ್ದು ಖನಿಜ ಮೂಲಗಳಿಂದ ಸುಮಾರು 64 ಪದಾರ್ಥಗಳು ಮತ್ತು ಪ್ರಾಣಿಗಳ ಮೂಲಗಳಿಂದ ತಯಾರಿಸಿದ ಸುಮಾರು 57 ಪದಾರ್ಥಗಳನ್ನು ವಿವರಿಸಿದೆ.

ಹಾನ್ ರಾಜವಂಶದ ಕಾಲದಲ್ಲಿ, ಅಂದರೆ, ಅದಕ್ಕೂ ಹಿಂದಿನ ಕಾಲದಲ್ಲಿ, ಕ್ರಿಸ್ತಪೂರ್ವ 2700 ವರ್ಷಗಳಿಗಿಂತಲೂ ಹಿಂದೆ ಸಂಕಲನ ಗೊಳ್ಳಲ್ಪಟ್ಟ ಮೊದಲ ಚೈನಾದ ಗಿಡಮೂಲಿಕಾ ಪುಸ್ತಕವಾದ ಶೆನ್ನಾಂಗ್ ಬೆಂಕಾವೊ ಜಿಂಗ್ ಆಧುನಿಕ ಔಷಧಕ್ಕೆ ಎಪಿಡ್ರಿನ್ ಎಂಬ ಔಷಧವನ್ನು ಪರಿಚಯಿಸಿದ ಮಾ-ಹುವಾಂಗ್ ಸಸ್ಯದ ಸಹಿತ ಸುಮಾರು 365 ಔಷಧೀಯ ಸಸ್ಯಗಳನ್ನು ಮತ್ತು ಅವುಗಳ ಉಪಯೋಗಗಳ ಪಟ್ಟಿಯನ್ನು ಮಾಡಿವೆ.

ಸ್ವಚ್ಚವಾದ ಗಾಳಿ, ವಿಶ್ರಾಂತಿ ಮತ್ತು ಕ್ರಮಬದ್ಧ ಆಹಾರಪದ್ಧತಿಯ ಜೊತೆಗೆ ಕೆಲವು ಸರಳವಾದ ಗಿಡಮೂಲಿಕಾ ಔಷಧಿಗಳ ಬಳಕೆಯನ್ನು ಹಿಪ್ಪೊಕ್ರಾಟಿಸ್ ಶಿಫಾರಸ್ಸು ಮಾಡಿದ್ದ. ಗ್ಯಾಲನ್ ಸಸ್ಯ, ಪ್ರಾಣಿ ಮತ್ತು ಖನಿಜಾಂಶಗಳನ್ನು ಒಳಗೊಂಡ ಔಷಧ ಮಿಶ್ರಣಗಳನ್ನು ದೊಡ್ಡ ಪ್ರಮಾಣದಲ್ಲಿ ನೀಡುವುದನ್ನು ಶಿಫಾರಸ್ಸು ಮಾಡಿದನು. ಗ್ರೀಕ್ ವೈದ್ಯರು ಔಷಧೀಯ ಸಸ್ಯಗಳ ಗುಣಲಕ್ಷಣಗಳನ್ನು ಮತ್ತು ಅವುಗಳ ಉಪಯೋಗಗಳ ಮೇಲೆ, ದ ಮೆಟೀರಿಯಾ ಮೆಡಿಕಾ ಎಂಬ ಮೊದಲ ಯುರೋಪಿನ ಗ್ರಂಥವನ್ನು ಸಂಕಲನಗೊಳಿಸಿತು.

ಮೊದಲ ಶತಮಾನದಲ್ಲಿ ಎಡಿಯಲ್ಲಿ ಡಯೋಸ್ಕೊರೈಡ್ಸ್ 17ನೇ ಶತಮಾನಕ್ಕೆ ಅಧಿಕೃತವಾದ ಸಂಬಂಧ ಹೊಂದಿಕೊಂಡಿರುವ ಸುಮಾರು 500ಕ್ಕಿಂತಲೂ ಹೆಚ್ಚು ಸಸ್ಯಗಳ ಬಗ್ಗೆ ಸಂಕ್ಷಿಪ್ತ ನಿರೂಪಣೆ ನೀಡಿದನು. ಇದೇ ರೀತಿ, ನಂತರದ ಶತಮಾನಗಳಲ್ಲಿ ಗಿಡಮೂಲಿಕಾ ಶಾಸ್ತ್ರಜ್ಞರು ಮತ್ತು ಸಸ್ಯಶಾಸ್ತ್ರಜ್ಞರಿಗೆ ಕ್ರಿಸ್ತಪೂರ್ವ 4ನೇ ಶತಮಾನದಲ್ಲಿ ಸಸ್ಯಶಾಸ್ತ್ರ ವಿಜ್ಞಾನದಲ್ಲಿ ಬರೆಯಲ್ಪಟ್ಟ ಗ್ರೀಕ್ ಪುಸ್ತಕ ಥಿಯಾಫ್ರಾಸ್ಟಸ್ ಹಿಸ್ಟೋರಿಯ ಪ್ಲಾಂಟಾರಮ್ ಅಗತ್ಯವಾಗಿ ಪರಿಣಮಿಸಿತು.

ಸಂಪೂರ್ಣ ಅರೇಬಿಯಾದ ಮೂಲಿಕಾ ಚಿಕಿತ್ಸೆಗಳನ್ನು ಒಳಗೊಂಡಿದ್ದು ೨೦೦ಹೊಸ ಗಿಡಮೂಲಿಕೆಗಳನ್ನು ಪರಿಚಯಿಸಿತು.

ಈ ಔಷಧಿಗಳ ವಿವರಗಳು ಕಾಜವಾರ, ಹುಣಸೆ, ವತ್ಸನಾಭಿ ಬೀಜಗಳನ್ನು ಒಳಗೊಂಡಿತ್ತು. ಅಬು ರೇಹಾನ್ ಬಿರುನಿಯವರು 11ನೇ ಶತಮಾನದಲ್ಲಿ ಬರೆದ ಮತ್ತು ೧೨ನೇ ಶತಮಾನದಲ್ಲಿ ಇಬ್ನ್ ಜುರ್ ಪುಸ್ತಕದಲ್ಲಿ ಇನ್ನಷ್ಟು ಔಷಧಿಗಳ ವಿವರಗಳು ಇದ್ದವು.

ಗಿಡಮೂಲಿಕೆಗಳ ಔಷಧಿ ಪದ್ಧತಿ ಹಿಂದಿನಿಂದಲೂ ಚಾಲ್ತಿಯಲ್ಲಿತ್ತು
ದಿ ಕೆನಾನ್ ಆಫ್ ಮೆಡಿಸಿನ್

ಅವಿಸೆನ್ನಾರವರು ಬರೆದ ’ದಿ ಕೆನಾನ್ ಆಫ್ ಮೆಡಿಸಿನ್ ’ ಸ್ಪೇನಿನ ಪೀಟರ್‌ರವರು ಬರೆದ ’ಕಮೆಂಟರಿ ಆನ್ ಇಸಾಕ್ ’ ಮತ್ತು ಅಮಾಂಡ್ಸ್‌ನ ಜಾನ್‌ರ ವರ ’ಕಮೆಂಟರಿ ಆನ್ ಅಟೆಂಡೆಟರಿ ಆಫ್ ನಿಕೊಲಾಸ್ ’ ಅವರಿಂದ ಬರೆಯಲ್ಪಟ್ಟ ವೈದ್ಯಕೀಯ ಶಾಸ್ತ್ರದ ಮೂಲವೂ ಕೂಡ ಮಧ್ಯಯುಗಕ್ಕಿಂತಲೂ ಹಳೆಯದಾಗಿದೆ. ಮುಖ್ಯವಾಗಿ ದಿ ಕೆನಾನ್ ವೈದ್ಯಕೀಯ ಪ್ರಯೋಗಗಳನ್ನೂ ರೋಗಗಳನ್ನು ಹತೋಟಿಯಲ್ಲಿಡಬಹುದಾದ ಕ್ರಮಗಳನ್ನೂ ಮತ್ತು ಕಾರ್ಯಕಾರಿತ್ವವನ್ನು ವಿವರಿಸಿತು.

ವಿಶ್ವ ವಿದ್ಯಾನಿಲಯಗಳ ಪದ್ಧತಿಗಳ ಜೊತೆ ಜೊತೆಯಾಗಿ ಜಾನಪದ ಔಷಧಗಳು ಮುಂದುವರೆದವು. 15ನೇ ಶತಮಾನದಲ್ಲಿ ಬಿಡುಗಡೆಯಾದ ನೂರಾರು ಔಷಧಿಗಳು ಮೂಲಿಕೆಯ ಪ್ರಾಮುಖ್ಯತೆಯ ನಿರಂತರತೆಯನ್ನು ಸಾರಿದವು. ಥಿಯೋಪ್ರಾಸ್ಟರವರ ’ಹಿಸ್ಟೋರಿಯಾ ಪ್ಲಾಂಟರಂ ’ ಇದು ಪ್ರಥಮವಾಗಿ ಮುದ್ರಿತವಾಗಿ ಪ್ರಕಟವಾದ ಪುಸ್ತಕವಾಗಿದೆ. ಆದರೆ ಡಿಸ್ಕೋರೈಡ್‌ರವರ ’ದೆ ಮಟೆರಿಯಾ ಮೆಡಿಕಾ ’ ಅವೆಸಿನ್ನಾರವರ ’ಕೆನಾನ್ ಆಫ್‌ ಮೆಡಿಸಿ ನ್ ಮತ್ತು ಅವೆಂಜೋರ್‌ರವರ ’ಫಾರ್ಮಾಕೋಪಿಯಾ’ ಗಳು ಕೂಡಾ ತುಂಬ ಹಳೆಯವುಗಳಲ್ಲ.

ಔಷಧಿಯ ಹೊಂದಾಣಿಕೆಗಳ ಸಾಮರ್ಥ್ಯವನ್ನು ಹೊಂದಿರುತ್ತದೆ.

ಇದಕ್ಕಾಗಿ ಒಬ್ಬ ರೋಗಿ ತನ್ನ ಸಾಂಪ್ರದಾಯಿಕ ಸೂಚಿ ಹಾಗೂ ಇತರ ಔಷಧೋಪಚಾರಗಳ ಸೇವನೆಯ ಬಗ್ಗೆ ಮೂಲಿಕೆ-ವ್ಯಾಪಾರಿಯನ್ನು ಸೂಚಿಸ ಬೇಕು. ಉದಾಹರಣೆಗೆ, ರಕ್ತದೊತ್ತಡವನ್ನು ಕಡಿಮೆಗೊಳಿಸುವ ಗಿಡಮೂಲಿಕೆಯ ಉಪಚಾರ ಹಾಗೂ ಅದೇ ಪ್ರಭಾವದ ಸೂಚಿಯ ಔಷಧಿಯ ಒಟ್ಟು ಸಂಯೋಜನೆಯಿಂದ ಅಪಾಯಕಾರಿ ಕಡಿಮೆ ರಕ್ತದ ಒತ್ತಡ ಪರಿಣಾಮಿಸಬಹುದು. ಆಂಟಿಕ್ವಾಗುಲೆಂಟ್ಸ್‌ಗಳ ಪರಿಣಾಮವನ್ನು ಕೆಲವು ಮೂಲಿಕೆಗಳು ವರ್ಧಿಸಬಹುದು. ಕೆಲವು ನಿರ್ಧಿಷ್ಟ ಮೂಲಿಕೆಗಳು ಅಲ್ಲದೆ ಸಾಮಾನ್ಯವಾದ ಹಣ್ಣು ಸೈಟೊಕ್ರೊಮ್ ಪಿ450 ಒಂದಿಗೆ ಹಸ್ತಕ್ಷೇಪ ಮಾಡುತ್ತದೆ, ಇದು ಹೆಚ್ಚು ಔಷಧಿಯ ಜೀವರಾಸಾಯನಿಕ ಕ್ರಿಯೆಗೆ ಮಹತ್ವದ ಕಿಣ್ವ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

45 Comments

ಆನೆಕಾಲು ಕಾಯಿಲೆ

ಭಾರತದಲ್ಲಿ ಆನೆಕಾಲು ಕಾಯಿಲೆ ಯೋಜನೆಗಳು

ಬೆನ್ನುಮೂಳೆ ರಚನೆ

ಬೆನ್ನುಮೂಳೆ ರಚನೆ