ಹೆಣ್ಣುಮಕ್ಕಳಿಗೆ ಪ್ರಮುಖ ಘಟ್ಟ ತಾಯ್ತನ. ಹಿಂದೆ ಯಾವುದೇ ತಿಂದರೂ ಆರೋಗ್ಯ ಏನು ಅಷ್ಟು ಹದಗೆಡುತ್ತಿರಲಿಲ್ಲ. ಆದರೆ ಈಗ ಯಾವುದೇ ಆಹಾರ ತಿನ್ನಬೇಕಾದ ನೋಡಿ ಯೋಚಿಸಿ ತಿನ್ನಬೇಕಾದ ಪರಿಸ್ಥಿತಿ.
ಗರ್ಭಿಣಿಯರಿಗೆ ತಮ್ಮ ಡಯಟ್‍ನಲ್ಲಿ ಯಾವ ರೀತಿಯ ಆಹಾರವನ್ನು ಸೇವಿಸಬೇಕು ಎನ್ನುವ ಗೊಂದಲ ಇದ್ದೇ ಇರುತ್ತೆ. ತಾಯ್ತನದ ಖುಷಿಯನ್ನು ಸವಿಯಲು ಕೆಲವೊಂದು ಆಹಾರ ಒಳ್ಳೆಯದು. ಹೌದು, ಗರ್ಭಾವಸ್ಥೆಯಲ್ಲಿ ಮಹಿಳೆಯರು ಯಾವ ರೀತಿ ಸಸ್ಯಹಾರಿ ಆಹಾರವನ್ನು ಸೇವಿಸಿದರೇ ಒಳ್ಳೆಯದು ಎನ್ನುವ ಒಂದೊಳ್ಳೆ ಆಹಾರಗಳ ಪಟ್ಟಿ ಇಲ್ಲಿದೆ. ಇದನ್ನು ಅನುಸರಿಸಿ ಉತ್ತಮ ಆರೋಗ್ಯವನ್ನು ಪಡೆಯಿರಿ.

ಕಿತ್ತಳೆ ಹಣ್ಣು:
ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ, ಕಬ್ಬಿಣ, ಸತು ಮತ್ತು ಫೋಲಿಕ್ ಆಮ್ಲವಿದೆ. ಗರ್ಭಾವಸ್ಥೆಯಲ್ಲಿ ಕಿತ್ತಳೆ ತಿನ್ನುವುದು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ, ಭ್ರೂಣದ ಮೆದುಳಿನ ಬೆಳವಣಿಗೆಯನ್ನು ಬಲಪಡಿಸುತ್ತದೆ ಮತ್ತು ಚರ್ಮದ ಟೋನ್ಗೆ ಪ್ರಯೋಜನಗಳನ್ನು ನೀಡುತ್ತದೆ.
ಒಣ ಹಣ್ಣು:
ಒಣ ದ್ರಾಕ್ಷಿ, ಗೋಡಂಬಿ, ಪಿಸ್ತಾ, ವಾಲ್‍ನಟ್, ಬಾದಾಮಿ ಇತ್ಯಾದಿಗಳಲ್ಲಿ ಹೆಚ್ಚಿನ ಪ್ರೊಟೀನ್ ಅಂಶ ಅಡಕವಾಗಿರುತ್ತದೆ. ಇವುಗಳ ಸೇವನೆಯಿಂದ ದೇಹಕ್ಕೆ ಅವಶ್ಯಕವಾಗಿರುವ ವಿಟಮಿನ್-ಇ ಅಂಶ ಸಿಗುತ್ತದೆ. ಹಾಗೆಯೇ ನಿಮ್ಮ ತೂಕವನ್ನು ಹೆಚ್ಚಿಸಿ ಉತ್ತಮ ಆರೋಗ್ಯ ನೀಡುತ್ತದೆ.
ಆಮ್ಲಾ / ನೆಲ್ಲಿ ಕಾಯಿ
ಆಮ್ಲಾ ನೀರಿನ ಅಂಶದಿಂದ ಸಮೃದ್ಧವಾಗಿದೆ ಮತ್ತು ದೇಹದಲ್ಲಿನ ಜಲಸಂಚಯನವನ್ನು ತುಂಬಲು ಸಹಾಯ ಮಾಡುತ್ತದೆ. ಇದರ ಸೇವನೆಯು ಗರ್ಭಿಣಿ ಮಹಿಳೆಯರಲ್ಲಿ ಆರೋಗ್ಯಕರ ರಕ್ತದೊತ್ತಡವನ್ನು ಕಾಪಾಡಿಕೊಳ್ಳುತ್ತದೆ. ಅಲ್ಲದೇ, ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಕಾಲು ಮತ್ತು ಕೈಗಳ ಸುತ್ತಲೂ ಊತ ಸಮಸ್ಯೆಯನ್ನು ಆಮ್ಲಾ ಸೇವಿಸುವುದರಿಂದ ನಿಯಂತ್ರಿಸಬಹುದು
ತೆಂಗಿನಕಾಯಿ:
ಇದರಲ್ಲಿ ಆರೋಗ್ಯಕರ ಕೊಬ್ಬಿನ ಅಂಶ ಹೇರಳವಾಗಿರುತ್ತದೆ. ದೇಹಕ್ಕೆ ಬೇಕಾಗುವ ಶಕ್ತಿಯನ್ನು ತೆಂಗಿನಕಾಯಿ ತಿನ್ನುವುದರಿಂದ ಪಡೆಯಬಹುದು. ಇದನ್ನು ನೀವು ನೇರವಾಗಿಯು ತಿನ್ನಬಹುದು, ಇಲ್ಲದಿದ್ದರೆ ಇದರಿಂದ ಚಟ್ನಿ ತಯಾರಿಸಿ ಬೇರೆ ಡಿಶ್ ಗಳ ಜೊತೆಗೆ ಸವಿಯಬಹುದು.
ಹಾಲು ಮತ್ತು ಮೊಸರು :

ಹಾಲು ಹಾಗೂ ಮೊಸರಿನಲ್ಲಿ ಕ್ಯಾಲ್ಸಿಯಂ ಅಂಶವಿರುತ್ತದೆ. ಇದು ಮಗುವಿನ ಮೂಳೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೊದಲ ತ್ರೈಮಾಸಿಕದಲ್ಲಿ ಗರ್ಭಿಣಿಯರ ದೇಹದಲ್ಲಿ ಪ್ಯಾರಾ ಥೈರಾಯ್ಡ್ ಹಾರ್ಮೋನ್ ಕಡಿಮೆಯಾಗುವುದು. ಏಕೆಂದರೆ ದೇಹದಲ್ಲಿರುವ ಕ್ಯಾಲ್ಸಿಯಂ ಅನ್ನು ಹೀರಿಕೊಂಡು ಭ್ರೂಣವು ಬೆಳೆಯುತ್ತದೆ. ಹಾಗಾಗಿ ಕ್ಯಾಲ್ಸಿಯಂ ಕೊರತೆ ಉಂಟಾಗದಿರಲು ಗರ್ಭಿಣಿಯರು ತಪ್ಪದೆ ಹಾಲು, ಮೊಸರು ಸೇವನೆ ಮಾಡಬೇಕು.
ಧಾನ್ಯಗಳು:
ಧಾನ್ಯಗಳು ಹಾಗೂ ಬೇಳೆಕಾಳುಗಳಲ್ಲಿ ಹೆಚ್ಚಿನ ಪ್ರೊಟೀನ್ ಇರುತ್ತದೆ. ಇವುಗಳನ್ನು ತಾವು ಸೇವಿಸುವ ಆಹಾರಗಳಲ್ಲಿ ಬಳಸುವುದರಿಂದ ಗರ್ಭಿಣಿಯರಿಗೆ ಉತ್ತಮ ಪ್ರೊಟೀನ್ ದೊರೆಯುತ್ತದೆ.
ಬೆರ್ರಿ ಹಣ್ಣುಗಳು :
ಬೆರ್ರಿ ಹಣ್ಣುಗಳಲ್ಲಿ ನೀರು, ಆರೋಗ್ಯಕರ ಕಾರ್ಬೋಹೈಡ್ರೇಟ್, ವಿಟಮಿನ್ ಸಿ, ಫೈಬರ್ ಇರುತ್ತದೆ. ಬೆರ್ರಿಗಳು ತುಲನಾತ್ಮಕವಾಗಿ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಮೌಲ್ಯವನ್ನು ಹೊಂದಿವೆ. ಬೆರ್ರಿ ಹಣ್ಣುಗಳು ಸಹ ಉತ್ತಮವಾದ ತಿಂಡಿಗಳಾಗಿವೆ, ಏಕೆಂದರೆ ಅವುಗಳು ನೀರು ಮತ್ತು ಫೈಬರ್ ಎರಡನ್ನೂ ಒಳಗೊಂಡಿರುತ್ತವೆ. ಅವುಗಳು ಸಾಕಷ್ಟು ಸುವಾಸನೆ ಮತ್ತು ಪೌಷ್ಟಿಕಾಂಶವನ್ನು ಒದಗಿಸುತ್ತವೆ. ಗರ್ಭಾವಸ್ಥೆಯಲ್ಲಿ ತಿನ್ನಲು ಉತ್ತಮವಾದ ಬೆರಿಗಳಲ್ಲಿ ಕೆಲವು ಬೆರಿಹಣ್ಣುಗಳು, ಗೋಜಿ ಹಣ್ಣುಗಳು, ಸ್ಟ್ರಾಬೆರಿಗಳು ಮತ್ತು ಅಕೈ ಹಣ್ಣುಗಳಾಗಿವೆ.
ಬೀನ್ಸ್:
ಬೀನ್ಸ್ ಪ್ರೊಟೀನ್ ಜೊತೆಗೆ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಪ್ರತಿದಿನ ಬೀನ್ಸ್ ಸೇವನೆಯಿಂದ ನಮಗೆ ಉತ್ತಮ ಫೈಬರ್ ಅಂಶ ದೊರೆಯುತ್ತದೆ. ಸ್ಟ್ರಿಂಗ್ ಬೀನ್ಸ್, ಹಸಿರು ಬೀನ್ಸ್, ಫಾವಾ ಬೀನ್ಸ್ ಮುಂತಾದ ವಿವಿಧ ಬಗೆಯ ಬೀನ್ಸ್‍ಗಳನ್ನು ಸೇವಿಸಬಹುದು. ಬೀನ್ಸ್, ಕಿಡ್ನಿ ಬೀನ್ಸ್, ಸೋಯಾಬೀನ್, ಕಡಲೆ ಇವುಗಳನ್ನು ತಿನ್ನಬೇಕು. ಇನ್ನು ಗರ್ಭಿಣಿಯರಿಗೆ ನಾರಿನಂಶ, ಕ್ಯಾಲ್ಸಿಯಂ, ಪ್ರೊಟೀನ್, ಕಬ್ಬಿಣದಂಶ , ಫೋಲೆಟ್ ಇವುಗಳ ಅವಶ್ಯಕತೆ ಹೆಚ್ಚಿದ್ದು, ಇದು ಸಸ್ಯಮೂಲ ಆಹಾರಗಳಲ್ಲಿ ದೊರೆಯುತ್ತದೆ. ಗರ್ಭಿಣಿಯರಿಗೆ ಫೋಲೆಟ್ ಅಂಶದ ಕೊರತೆ ಉಂಟಾದರೆ ಮಗುವಿನ ಮೆದುಳು ಹಾಗೂ ಬೆನ್ನು ಮೂಳೆಯ ಬೆಳವಣಿಗೆಗೆ ಹೊಡೆತ ಉಂಟಾಗುವುದು. ಧಾನ್ಯಗಳಲ್ಲಿ ಫೋಲೆಟ್ ಅಂಶವಿರುತ್ತದೆ. ಗರ್ಭಾವಸ್ಥೆಯಲ್ಲಿ 600mcgಯಷ್ಟು ಫೋಲೆಟ್ ಅವಶ್ಯಕ.
ಕ್ಯಾರೆಟ್ :
ಕ್ಯಾರೆಟ್ ವಿಟಮಿನ್-ಎ ಅಂಶವನ್ನು ಹೊಂದಿರುತ್ತದೆ. ಇದನ್ನು ಗರ್ಭಿಣಿಯರು ತಮ್ಮ ಆಹಾರದಲ್ಲಿ ಬಳಸುವುದು ಒಳ್ಳೆಯದು. ಕ್ಯಾರೇಟ್ ಸೇವನೆಯಿಂದ ನಿಮ್ಮ ಕಣ್ಣುಗಳ ದೃಷ್ಟಿ ಮಾತ್ರವಲ್ಲದೆ ಮಗುವಿನ ದೃಷ್ಟಿಯು ಉತ್ತಮವಾಗುತ್ತದೆ.
ಮೊಸರು:
ಮೊಸರು ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಒಳ್ಳೆಯ ಬ್ಯಾಕ್ಟೀರಿಯಾ ಹಾಗೂ ಕ್ಯಾಲ್ಸಿಯಂನ ಒಂದೊಳ್ಳೆ ಮಿಶ್ರಣ ಎಂದರೆ ಮೊಸರು. ಗರ್ಭಿಣಿಯರಲ್ಲಿ ಹೆಚ್ಚಾಗಿ ಎದೆಯುರಿ ಕಾಣಿಸಿಕೊಳ್ಳುತ್ತದೆ. ಮೊಸರು ಸೇವಿಸುವುದರಿಂದ ಎದೆಯುರಿಯನ್ನು ಕಡಿಮೆ ಮಾಡಿಕೊಳ್ಳಬಹುದು.
ಪಾಲಾಕ್ :
ಗರ್ಭಿಣಿಯರು ಸೊಪ್ಪು ಹೆಚ್ಚು ತಿನ್ನಬೇಕು. ಇದರಿಂದ ದೇಹದಲ್ಲಿ ಕೆಂಪು ರಕ್ತಕಣಗಳು ಹೆಚ್ಚಾಗುವುದು. ರಕ್ತಕಣಗಳು ಕಡಿಮೆಯಾದರೆ ಮಗುವಿನ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತದೆ. ಗರ್ಭಿಣಿಯರಿಗೆ ಮೊದಲ ತ್ರೈಮಾಸಿಕದಲ್ಲಿ 137-589ng/mlನಷ್ಟು ಪೋಲೆಟ್ ಅವಶ್ಯಕವಾಗಿ ಸೇವಿಸಲೇಬೇಕು. 100 ಗ್ರಾಂ ಪಾಲಾಕ್‌ನಲ್ಲಿ 194mcg ಫೋಲೆಟ್ ಇರುತ್ತದೆ.
ದ್ವಿದಳ ಧಾನ್ಯಗಳು :
ಈ ಆಹಾರವು ಮಸೂರ, ಬಟಾಣಿ, ಬೀನ್ಸ್, ಗಜ್ಜರಿ, ಸೋಯಾಬೀನ್ ಮತ್ತು ಕಡಲೆಕಾಯಿಗಳನ್ನು ಒಳಗೊಂಡಿರುತ್ತದೆ. ದ್ವಿದಳ ಧಾನ್ಯಗಳು ಫೈಬರ್, ಪ್ರೋಟೀನ್, ಕಬ್ಬಿಣ, ಫೋಲೇಟ್ ಮತ್ತು ಕ್ಯಾಲ್ಸಿಯಂನ ಉತ್ತಮ ಸಸ್ಯ-ಆಧಾರಿತ ಮೂಲಗಳಾಗಿವೆ – ಇವೆಲ್ಲವೂ ಗರ್ಭಾವಸ್ಥೆಯಲ್ಲಿ ನಿಮ್ಮ ದೇಹಕ್ಕೆ ಹೆಚ್ಚು ಅಗತ್ಯವಿರುತ್ತದೆ.
ಮೊಟ್ಟೆ :

ಮೊಟ್ಟೆಗಳು ಕೋಲೀನ್‌ನ ಉತ್ತಮ ಮೂಲವಾಗಿದೆ, ಗರ್ಭಾವಸ್ಥೆಯಲ್ಲಿ ಪ್ರಮುಖ ಪೋಷಕಾಂಶವಾಗಿದೆ. ಇದು ಮಗುವಿನ ಮೆದುಳಿನ ಬೆಳವಣಿಗೆಯಲ್ಲಿ ಮುಖ್ಯವಾಗಿದೆ. ಮಗುವಿನ ಮೆದುಳು ಮತ್ತು ಬೆನ್ನುಮೂಳೆಯ ಬೆಳವಣಿಗೆಯ ವೈಪರೀತ್ಯಗಳನ್ನು ತಡೆಯಲು ಸಹಾಯ ಮಾಡುತ್ತದೆ. ಒಂದು ಸಂಪೂರ್ಣ ಮೊಟ್ಟೆಯು ಸರಿಸುಮಾರು 147 ಮಿಲಿಗ್ರಾಂ ಕೋಲೀನ್‌ನನ್ನು ಹೊಂದಿರುತ್ತದೆ. ಗರ್ಭಿಣಿಯಾಗಿದ್ದಾಗ ಶಿಫಾರಸು ಮಾಡಲಾದ ಕೋಲೀನ್ ಸೇವನೆಯ ದಿನಕ್ಕೆ 450 ಮಿಗ್ರಾಂನಷ್ಟಿದೆ.
ಧನ್ಯವಾದಗಳು.
GIPHY App Key not set. Please check settings