ಮುಖ ಅಂದ ಮೇಲೆ ನಗು ಮುಖ್ಯ, ಆದರೆ ಹಲ್ಲು ಹುಳುಕಾಗಿದ್ದರೆ, ಹಲ್ಲಿನ ಸೌಂದರ್ಯ ಇಲ್ಲದಿದ್ದರೆ ಮುಖದ ಮೇಲಿನ ನಗು ಕೂಡ ವ್ಯರ್ಥ. ಹಲ್ಲಿನ ಸ್ವಚ್ಛತೆಯನ್ನು ಸೂಕ್ತವಾಗಿ ನಿರ್ವಹಿಸದೆ ಇದ್ದಾಗ ಹಲ್ಲು ಬಹುಬೇಗ ಹುಳುಕಾಗುವುದು. ಮಲಗುವ ಮುನ್ನ ಹಲ್ಲಿನ ಸ್ವಚ್ಛತೆಯನ್ನು ನಿರ್ಲಕ್ಷಿಸುವುದರಿಂದ ಹಲ್ಲಿನಲ್ಲಿ ಆಹಾರದ ಕಣಗಳು ಉಳಿದುಕೊಳ್ಳುತ್ತವೆ. ಅವು ಹಲ್ಲಿನಲ್ಲಿಯೇ ಉಳಿದುಕೊಂಡಾಗ ಕೊಳೆಯುವುದು. ಜೊತೆಗೆ ಹಲ್ಲಿನ ಆರೋಗ್ಯವನ್ನು ಹಾಳು ಮಾಡುವುದು. ಹಲ್ಲಿನ ಹುಳುಕು ಬೇರಿನ ವರೆಗೆ ಮುಂದುವರಿದಾಗ ಗಂಭೀರವಾಗಿ ನೋವು ಕಾಣಿಸಿಕೊಳ್ಳುವುದು. ನೋವು 2-3 ದಿನಗಳ ಕಾಲ ಮುಂದುವರಿದಿದೆ ಎಂದಾಗ ದಂತ ವೈದ್ಯರಲ್ಲಿ ಸೂಕ್ತ ತಪಾಸಣೆ ನಡೆಸಬೇಕು.
ಸ್ವಲ್ಪ ಪೋಷಣೆ ಮಾಡುವುದು ಹೆಚ್ಚು ಕಡಿಮೆ ಆದರೂ ಸಹ ಹಲ್ಲನ್ನು ಕಳೆದುಕೊಳ್ಳಬೇಕಾಗತ್ತೇ. ಹಲ್ಲು ನೋವು ಬಂದರೆ ತಡೆದುಕೊಳ್ಳಲು ಆಗದಷ್ಟು ಬಾಧೆ ಅನುಭವಿಸಲೇ ಬೇಕು. ದೊಡ್ಡವರಿಗೆ ಆದರೆ ಹೇಗೋ ತಡೆದುಕೊಳ್ಳಬಹುದು ಆದರೆ ಚಿಕ್ಕ ಮಕ್ಕಳಿಗೇ ಏನಾದ್ರು ಹಲ್ಲು ನೋವು ಬಂದರೆ ಹಲ್ಲು ಪೂರ್ತಿ ಹಾಳಾಗಿ ಹೋಗತ್ತೆ ಹಾಗೇ ನೋವು ಕೂಡ ತಡಿಯೋಕೆ ಆಗಲ್ಲ. ಹಾಗಾಗಿ ಹಲ್ಲಿನ ವಿಷಯಗಳಲ್ಲಿ ಸ್ವಲ್ಪ ಹೆಚ್ಚು ಕ್ಲೀನ್ ಆಗಿ ಇರಬೇಕು. ಸಿಕ್ಕ ಸಿಕ್ಕ ತಿಂಡಿಗಳನ್ನ ತಿನ್ನೋದು ಕುಡಿಯೋದು ಮಾಡಬಾರದು. ಕ್ಲೀನ್ ಇಲ್ಲದೇ ಹೋದರೆ ಹಲ್ಲು ಬೇಗ ಹಾಳಾಗತ್ತೆ ಹಾಗಾಗಿ ದೊಡ್ಡವರು ಇರಬಹುದು ಅಥವಾ ಚಿಕ್ಕವರು ಎಲ್ಲರೂ ಪ್ರತೀ ದಿನ ಎರಡು ಬಾರಿ ಹಲ್ಲುಜ್ಜಲೇ ಬೇಕು.
ಹಲ್ಲಿನಲ್ಲಿ ಕ್ಯಾಲ್ಸಿಯಂ ಕಡಿಮೆಯಾದಾಗ ನೋವು ಕಾಣಿಸಿಕೊಳ್ಳುತ್ತದೆ. ಇದರ ಜೊತೆಗೆ ಹಲ್ಲು ಶುಚಿಯಾಗದೆ ಇದ್ದಾಗ ಹುಳುಕಾಗಿ ನೋವು ಹೆಚ್ಚಾಗುತ್ತದೆ. ಹಲ್ಲು ನೋವು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಭೇಟಿ ಮಾಡುವ ಮೊದಲು ಮನೆಯಲ್ಲೇ ನೋವಿಗೆ ಪರಿಹಾರವನ್ನು ಕಂಡುಕೊಳ್ಳಬಹುದು.
ಕೆಲವೊಂದು ಸರಳ ಪರಿಹಾರಗಳು ಹಲ್ಲಿನ ಆರೋಗ್ಯಕ್ಕೆ :
1. ಹಲ್ಲು ನೋವನ್ನು ನಿವಾರಿಸಲು ಕೋಲ್ಡ್ ಕಂಪ್ರೆಸರ್ ಉತ್ತಮ ಪರಿಹಾರ ಆಗುವುದು. ಮಂಜುಗಡ್ಡೆ ಅಥವಾ ಐಸ್ ಅನ್ನು ನೋವು ಇರುವ ಪ್ರದೇಶದಲ್ಲಿ ಇಟ್ಟುಕೊಳ್ಳುವುದರಿಂದ ನೋವನ್ನು ನಿವಾರಿಸಬಹುದು. ಅತಿಯಾದ ತಂಪು ನೋವನ್ನು ಮರಗಟ್ಟುವಂತೆ ಅಥವಾ ಕಡಿಮೆ ಆಗುವಂತೆ ಮಾಡುವುದು. ತ್ವರಿತವಾದ ಶಮನವನ್ನು ಪಡೆಯಬಹುದು.
2. ಉಪ್ಪುನೀರು ಅತ್ಯಂತ ಪರಿಣಾಮಕಾರಿಯಾಗಿ ಚಿಕಿತ್ಸೆಯಾಗುವುದು. ಉಪ್ಪು ನೀರಿನಿಂದ ಬಾಯಿ ಮುಕ್ಕುಳಿಸುವುದು ಅಥವಾ ಸ್ವಲ್ಪ ಸಮಯ ಉಪ್ಪು ನೀರನ್ನು ಬಾಯಲ್ಲಿ ಇಟ್ಟುಕೊಳ್ಳುವುದರಿಂದ ಹಲ್ಲು ನೋವನ್ನು ಸುಲಭವಾಗಿ ನಿವಾರಿಸಬಹುದು. ಒಂದು ಗ್ಲಾಸ್ ನೀರಿಗೆ ಒಂದು ಟೀ ಚಮಚ ಉಪ್ಪನ್ನು ಸೇರಿಸಿ, ಮಿಶ್ರಗೊಳಿಸಬೇಕು. ನಂತರ ಉಪ್ಪು ಮಿಶ್ರಿತ ನೀರಿನಿಂದ ಬಾಯಿ ಮುಕ್ಕಳಿಸಬಹುದು. ಉಪ್ಪು ನೈಸರ್ಗಿಕವಾಗಿಯೇ ಸೋಂಕು ನಿವಾರಕ ಗುಣವನ್ನು ಒಳಗೊಂಡಿದೆ. ಇದನ್ನು ನೀರಿನಲ್ಲಿ ಬೆರೆಸಿ ಬಾಯಿ ಮುಕ್ಕಳಿಸುವುದರಿಂದ ಬಾಯಲ್ಲಿ ಇರುವ ಕೊಳೆ ಮತ್ತು ರೋಗಾಣುಗಳು ನಾಶವಾಗುತ್ತವೆ.
3. ಪುದೀನಾ ಚಹಾ ಚೀಲವು ಹಲ್ಲಿನ ನೋವಿಗೆ ಉತ್ತಮ ಪರಿಹಾರ ನೀಡುವುದು. ಹಲ್ಲು ನೋವು ಬಂದಾಗ ನೋವಿರುವ ಸ್ಥಳದಲ್ಲಿ ಉಗುರು ಬೆಚ್ಚಗಿನ ಚಹಾ ಚೀಲವನ್ನು ಇಟ್ಟುಕೊಳ್ಳಬೇಕು. ಇದು ನೋವನ್ನು ತಣ್ಣಗಾಗಿಸುವುದು. ಜೊತೆಗೆ ಉತ್ತಮ ಶಮನ ನೀಡುವುದು.
4. ಲವಂಗ ನಮ್ಮ ಹಲ್ಲಿಗೆ ತುಂಬಾ ಒಳ್ಳೆಯದು. ಇದು ಹಲ್ಲಿನಲ್ಲಿರುವ ಬ್ಯಾಕ್ಟೀರಿಯಗಳನ್ನು ನಾಶ ಮಾಡತ್ತೆ. ಲವಂಗವನ್ನು ಕುಟ್ಟಿ ಪುರಿ ಮಾಡಿಕೊಂಡು ಅದಕ್ಕೆ ಕಾಲು ಚಮಚ ನಿಂಬೆ ರಸ ಸೇರಿಸಿ ಮಿಕ್ಸ್ ಮಾಡಿಕೊಂಡು ಹತ್ತಿಯಲ್ಲಿ ಅಡ್ಡಿಕೊಂಡು ಹುಳುಕು ಆದ ಹಲ್ಲಿನ ಮೇಲೆ ಇದನ್ನು ಇಡಬಹುದು ಅಥವಾ ಹಾಗೆ ಕೈಯ್ಯಲ್ಲಿ ತೆಗೆದುಕೊಂಡು ಹಲ್ಲು ಹುಳುಕು ಆದ ಜಾಗದಲ್ಲಿ ತುಂಬಬೇಕು. ನಂತರ ಅದರ ಮೇಲೆ ಹತ್ತಿ ಇಟ್ಟುಕೊಂಡು ಬರುತ್ತಿರುವ ಎಂಜಲನ್ನು ಉಗಿಯಬೇಕು. ಇದರಿಂದ ಬೇಗ ಹಲ್ಲು ನೋವು ಕಡಿಮೆ ಆಗತ್ತೆ.
5. ಬೆಳ್ಳುಳ್ಳಿ ನೈಸರ್ಗಿಕ ಜೀವ ವಿರೋಧಿ ಗುಣವನ್ನು ಒಳಗೊಂಡಿದೆ. ಇದನ್ನು ಹಲ್ಲು ನೋವು ನಿವಾರಣೆಗೆ ಸುಲಭವಾಗಿ ಬಳಸಬಹುದು. ಬೆಳ್ಳುಳ್ಳಿಯನ್ನು ಜಜ್ಜಿಕೊಂಡು ನೋವಿನ ಸ್ಥಳದಲ್ಲಿ ಇಡಬೇಕು. ಬೆಳ್ಳುಳ್ಳಿಯನ್ನು ನೋವಾದ ಹಲ್ಲಿನಲ್ಲಿ ಜಗೆಯುವುದರಿಂದ ಆ ಸ್ಥಳದಲ್ಲಿ ನೋವು ನಿವಾರಣೆಯಾಗುವುದು. ಬೆಳ್ಳುಳ್ಳಿ ಎಣ್ಣೆಯನ್ನು ಹಲ್ಲಿಗೆ ಹಚ್ಚುವುದರಿಂದಲೂ ನೋವು ನಿವಾರಣೆಯಾಗಿ ಬಹುಬೇಗ ಉಪಶಮನ ದೊರೆಯುವುದು.
6. ಪೆಪ್ಪರ್ ಮಿಂಟ್ಪೆಪ್ಪರ್ ಮಿಂಟ್ ನೈಸರ್ಗಿಕವಾಗಿ ಬಾಯಿಯ ಉರಿಯೂತವನ್ನು ಗುಣಪಡಿಸಬಹುದು ಮತ್ತು ನೋವನ್ನು ಕಡಿಮೆ ಮಾಡಬಹುದು. ಹಲ್ಲು ನೋವುಗಳನ್ನು ನಿವಾರಿಸಲು ಅಗತ್ಯವಾದ ಎಣ್ಣೆಯನ್ನು ಇದರಲ್ಲಿ ಒಳಗೊಂಡಿದ್ದು, ಇದು ಹಲ್ಲುನೋವುಗಳನ್ನು ನಿವಾರಿಸುತ್ತದೆ.
7. ವೆನಿಲ್ಲಾ ಸಾರ ಆಲ್ಕೋಹಾಲ್ ಅನ್ನು ಹೊಂದಿರುತ್ತದೆ. ಇದು ನೋವು ಶಮನಗೊಳಿಸಲು ಸಹಾಯ ಮಾಡುತ್ತದೆ. ವೆನಿಲ್ಲಾ ಸಾರವನ್ನು ನಿಮ್ಮ ಬೆರಳಿಗೆ ಅಥವಾ ಹತ್ತಿ ಚೆಂಡಿನ ಮೇಲೆ ಸ್ವಲ್ಪ ಹಾಕಿಕೊಂಡು ನೋವಿನ ಜಾಗಕ್ಕೆ ನೇರವಾಗಿ ಹಾಕಬೇಕು. ಇದನ್ನು ದಿನಕ್ಕೆ 3 ರಿಂದ 4 ಬಾರಿ ಮಾಡಿದರೆ ಬೇಗ ನೋವು ಕಡಿಮೆಯಾಗುತ್ತದೆ.
8. ವಿಟಮಿನ್ ಇ ಯಿಂದ ಕೂಡಿರುವ ಅಲೋವೆರಾ ಹಲ್ಲಿನ ನೋವನ್ನು ಕಡಿಮೆಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಅಲೋವೆರಾ ಜೆಲ್ ಅನ್ನು ಒಂದು ಬಟ್ಟಲಿಗೆ ಹಾಕಿಕೊಂಡು ನೋವಿರುವ ಹಲ್ಲಿಗೆ ಮಸಾಜ್ ಮಾಡಬೇಕು. ಇದರಿಂದು ನೋವು ಶಮನವಾಗುತ್ತದೆ.
ಧನ್ಯವಾದಗಳು.
GIPHY App Key not set. Please check settings