in ,

ಗ್ರೀನ್ ಟೀ ಕುಡಿಯುವುದರಿಂದ ಹಲವು ಲಾಭಗಳು

ಗ್ರೀನ್ ಟೀ
ಗ್ರೀನ್ ಟೀ

ಹಸಿರು ಚಹಾವು ಕ್ಯಾಮೆಲಿಯಾ ಸಿನೆನ್ಸಿಸ್ ಎಲೆಗಳು ಮತ್ತು ಮೊಗ್ಗುಗಳಿಂದ ತಯಾರಿಸಲ್ಪಟ್ಟ ಒಂದು ವಿಧದ ಚಹಾವಾಗಿದ್ದು, ಒಲಾಂಗ್ ಚಹಾಗಳು ಮತ್ತು ಕಪ್ಪು ಚಹಾಗಳನ್ನು ತಯಾರಿಸಲು ಬಳಸಲಾಗುವ ಅದೇ ಒಣಗುವಿಕೆ ಮತ್ತು ಉತ್ಕರ್ಷಣ ಪ್ರಕ್ರಿಯೆಗೆ ಒಳಗಾಗಿಲ್ಲ. ಹಸಿರು ಚಹಾವು ಚೀನಾದಲ್ಲಿ ಹುಟ್ಟಿಕೊಂಡಿತು ಮತ್ತು ಅಂದಿನಿಂದ ಅದರ ಉತ್ಪಾದನೆ ಮತ್ತು ತಯಾರಿಕೆಯು ಪೂರ್ವ ಏಷ್ಯಾದ ಇತರ ದೇಶಗಳಿಗೆ ಹರಡಿತು.

ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವ ವಿಟಮಿನ್ ಸಿ, ಫೋಲಿಕ್ ಆಮ್ಲ ಮತ್ತು ಮೆಗ್ನೀಷಿಯಂ ಅಂಶ ಸಾಕಷ್ಟು ಕಂಡುಬರುತ್ತದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳ ಮಹಾಪೂರವೇ ಅಡಗಿದೆ. ಇದರಲ್ಲಿ ಫೋಲಿಕ್ ಆಮ್ಲ ಮತ್ತು ಮೆಗ್ನೀಷಿಯಂ ಅಂಶ ಸಾಕಷ್ಟು ಕಂಡುಬರುತ್ತದೆ. 

“ಗ್ರೀನ್ ಟೀ ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವ ಮೂಲಕ ದೇಹದಲ್ಲಿನ ತೂಕವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಇದರರ್ಥ ಇದು ದೇಹದಲ್ಲಿ ಶಕ್ತಿಯನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ ಮತ್ತು ಅದನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತದೆ. ಗ್ರೀನ್ ಟೀ ದಲ್ಲಿರುವ ಎರಡು ಸಕ್ರಿಯ ಪದಾರ್ಥಗಳಾದ ಕೆಫೀನ್ ಮತ್ತು ಕ್ಯಾಟೆಚಿನ್ ಈ ಪರಿಣಾಮಕ್ಕೆ ಕಾರಣವಾಗಿದೆ. ಕೊಬ್ಬಿನ ಶೇಖರಣೆ ಮತ್ತು ಹೆಚ್ಚುವರಿ ಕೊಬ್ಬಿನ ವಿಘಟನೆಗೆ ಅವು ಸಹಾಯ ಮಾಡುತ್ತವೆ ಎಂದು ನಂಬಲಾಗಿದೆ”.

ಗ್ರೀನ್ ಟೀ ಕುಡಿಯುವುದರಿಂದ ಹಲವು ಲಾಭಗಳು
ಟೀ ಎಸ್ಟೇಟ್

ಗ್ರೀನ್ ಟೀ ಎಲೆಗಳನ್ನು ಕ್ಯಾಮೆಲಿಯಾ ಸಿನೆನ್ಸಿಸ್ ಸಸ್ಯದಿಂದ ಹೊರತೆಗೆಯಲಾಗುತ್ತದೆ. ಒಂದು ಕಪ್ ಹಸಿರು ಚಹಾವು ನರಗಳನ್ನು ಸಡಿಲಗೊಳಿಸುವುದಲ್ಲದೆ, ಮೆದುಳಿನ ಕಾರ್ಯ ನಿರ್ವಹಣೆಯನ್ನು ಹೆಚ್ಚಿಸುತ್ತದೆ. ಹಾಗೇ, ಇದು ಜೀವಕೋಶದ ಹಾನಿಯನ್ನು ಕಡಿಮೆ ಮಾಡುತ್ತದೆ.

ಗ್ರೀನ್ ಟೀಯಲ್ಲಿ ಇರುವಂತಹ ಕ್ಯಾಟಿಚಿನ್ ಎನ್ನುವ ಅಂಶವು ಬ್ಯಾಕ್ಟೀರಿಯಾ ಮತ್ತು ವೈರಸ್ ನ್ನು ಕೊಲ್ಲುವುದು ಮತ್ತು ಇದರಿಂದಾಗಿ ಸೋಂಕಿನ ಅಪಾಯ ಕಡಿಮೆ ಮಾಡುವುದು. ಇದು ಹಲ್ಲಿನಲ್ಲಿ ಪದರ ನಿರ್ಮಾಣ, ದಂತಕುಳಿ ಮತ್ತು ಒಸಡಿನ ಸಮಸ್ಯೆ ಉಂಟು ಮಾಡುವಂತಹ ಸ್ಟ್ರೆಪ್ಟೋಕೊಕಸ್ ಮ್ಯುಟಾನ್ಸ್ ಎನ್ನುವ ಬ್ಯಾಕ್ಟೀರಿಯಾದ ಬೆಳವಣಿಗೆ ತಡೆಯುವುದು.

ಕೊಲೆಸ್ಟ್ರಾಲ್ ರಕ್ತದ ಸಾಂದ್ರತೆಯು ಕಡಿಮೆಯಾಗುತ್ತದೆ ಮತ್ತು ಕೊಲೆಸ್ಟ್ರಾಲ್ ಅಥವಾ ಟ್ರೈಗ್ಲಿಸರೈಡ್‌ಗಳ ಸಾಂದ್ರತೆಯ ಮೇಲೆ ಪರಿಣಾಮ ಬೀರುವುದಿಲ್ಲ. 

ಆಕ್ಸಿಡೇಟಿವ್ ಒತ್ತಡವನ್ನು ತಡೆಗಟ್ಟುವುದು, ಪ್ರತಿಯಾಗಿ, ಹಲವಾರು ದೀರ್ಘಕಾಲದ ಅಸ್ವಸ್ಥತೆಗಳನ್ನು ದೂರವಿಡುತ್ತದೆ ಎಂದು ಅವರು ಹೇಳಿದರು. “ಆದರೆ, ಹೆಚ್ಚು ಹೆಚ್ಚು ಗ್ರೀನ್ ಟೀ ಯನ್ನು ಸೇವಿಸುವುದರಿಂದ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಮತ್ತು ಬಯಸುವ ಪ್ರಯೋಜನಗಳನ್ನು ಪಡೆಯಲು ನಿಮಗೆ ಸಾಧ್ಯವಾಗದಿರಬಹುದು.

ಗ್ರೀನ್ ಟೀ ಕುಡಿಯುವುದರಿಂದ ಹಲವು ಲಾಭಗಳು
ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವುದು

ದಿನನಿತ್ಯ ವ್ಯಾಯಾಮ ಮಾಡುವುದಾದರೆ ಆ ವ್ಯಾಯಾಮ ಮಾಡುವುದಕ್ಕೂ ಮುಂಚೆ ಗ್ರೀನ್ ಟೀಯನ್ನು ಸೇವಿಸಿ. ಗ್ರೀನ್ ಟೀಯನ್ನು ರಾತ್ರಿ ಮಲಗುವ ಎರಡು ಗಂಟೆಗಳ ಮುನ್ನ ಸೇವಿಸಿ. ಗ್ರೀನ್ ಟೀಯನ್ನು ಖಾಲಿ ಹೊಟ್ಟೆಯಲ್ಲಿ ಅಥವಾ ಬೆಳಗ್ಗೆ ಎದ್ದ ಕೂಡಲೇ ಸೇವಿಸಬಾರದು. ಇದರಲ್ಲಿರುವ ಹೆಚ್ಚಿನ ಕೆಫೇನ್ ಯಕೃತ್ ಗೆ ಅಪಾಯಕಾರಿಯಾಗುತ್ತದೆ.

ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳ ಆಧಾರದ ಮೇಲೆ “ಕೋಶ ಹಾನಿ” ತಡೆಯುವ ಮೂಲಕ ಕ್ಯಾನ್ಸರ್ ಬೆಳವಣಿಗೆ ಮತ್ತು ಬೆಳವಣಿಗೆಯನ್ನು ತಡೆಯಬಹುದು.

ಗ್ರೀನ್ ಟೀಯು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವುದು ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುವುದು. ಇದು ಹೃದಯವನ್ನು ಆಘಾತ ಮತ್ತು ಹೃದಯದ ಕಾಯಿಲೆಗಳಿಂದ ರಕ್ಷಣೆ ಮಾಡುವುದು. ಅಧ್ಯಯನಗಳ ಪ್ರಕಾರ ಗ್ರೀನ್ ಟೀ ಸೇವನೆ ಮಾಡುವುದರಿಂದ ಹೃದಯದ ಕಾಯಿಲೆಯನ್ನು ಶೇ.31ರಷ್ಟು ಕಡಿಮೆ ಮಾಡಬಹುದು.

ಗ್ರೀನ್ ಟೀಯು ಹೆಚ್ಚು ಸಂಸ್ಕರಿಸದೆ ಇರುವ ಪಾನೀಯವಾಗಿದ್ದು, ಇದನ್ನು ಒಂದು ಕಪ್ ಸೇವನೆ ಮಾಡಿದರೆ, ಅದರಿಂದ ಆಂಟಿಆಕ್ಸಿಡೆಂಟ್ ಮತ್ತು ಹಲವಾರು ಲಾಭಗಳು ಸಿಗಲಿದೆ.

ಗ್ರೀನ್ ಟೀಯು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಣೆ ಮಾಡುವುದು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವುದು ಎಂದು ಅಧ್ಯಯನಗಳು ಹೇಳಿವೆ. ಇನ್ನೊಂದು ಅಧ್ಯಯನದ ಪ್ರಕಾರ ಗ್ರೀನ್ ಟೀ ಸೇವಿಸುವಂತಹ ಶೇ. 18ರಷ್ಟು ಜನರಲ್ಲಿ ಮಧುಮೇಹದ ಅಪಾಯವು ಕಡಿಮೆ ಆಗಿದೆ.

ಗ್ರೀನ್ ಟೀಯಲ್ಲಿ ಆಂಟಿಆಕ್ಸಿಡೆಂಟ್ ಸಮೃದ್ಧವಾಗಿದ್ದು, ಇದು ಪ್ರತಿರೋಧಕ ಶಕ್ತಿ ವೃದ್ಧಿ ಮಾಡುವುದು ಮಾತ್ರವಲ್ಲದೆ, ಶೀತ ಮತ್ತು ಜ್ವರದಿಂದ ರಕ್ಷಣೆ ನೀಡುವುದು.

ಸಂಧಿವಾತ ಸಮಸ್ಯೆಯಿಂದ ನಿವಾರಣೆ ನೀಡುವುದು.

ಗ್ರೀನ್ ಟೀ ಕುಡಿಯುವುದರಿಂದ ಹಲವು ಲಾಭಗಳು
ತೂಕ ಇಳಿಸಲು ಇದು ಸಹಕಾರಿ

ಗ್ರೀನ್ ಟೀಯಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಪರಿಣಾಮವಾಗಿರುವಂತಹ ಇಜಿಸಿಜಿಯು ದೇಹದಲ್ಲಿ ಕೆಲವೊಂದು ರೀತಿಯ ಅಣುಗಳಿಂದಾಗಿ ಉಂಟಾಗುವಂತಹ ಉರಿಯೂತ ಮತ್ತು ಸಂಧಿವಾತದ ನೋವನ್ನು ಕಡಿಮೆ ಮಾಡುವುದು. ಅಧ್ಯಯನ ವರದಿಗಳ ಪ್ರಕಾರ ಗ್ರೀನ್ ಟೀಯಲ್ಲಿ ಇರುವಂತಹ ಇಜಿಸಿಜಿಯು ವಿಟಮಿನ್ ಇ ಮತ್ತು ವಿಟಮಿನ್ ಸಿಯಿಂದ ಶೇ.100ರಷ್ಟು ಹೆಚ್ಚು ಪರಿಣಾಮಕಾರಿ ಆಗಿದೆ.

ಗ್ರೀನ್ ಟೀ ಸೇವನೆ ಮಾಡಿದರೆ, ಅದರಿಂದ ಹೃದಯದ ಆರೋಗ್ಯ ಕಾಪಾಡಬಹುದು.

ಗ್ರೀನ್ ಟೀ ಸೇವಮೆ ಮಾಡಿದರೆ ಅದರಿಂದ ದೇಹದಲ್ಲಿನ ವಿಷಕಾರಿ ಅಂಶವನ್ನು ಹೊರಗೆ ಹಾಕಬಹುದು ಮತ್ತು ತೂಕ ಇಳಿಸಲು ಇದು ಸಹಕಾರಿ.

ಗ್ರೀನ್ ಟೀ ಸೇವಿಸುವವರು ದೀರ್ಘಕಾಲ ಬಾಳುತ್ತಾರೆ. ಎಲ್ಲಾ ಕಾರಣಗಳಿಂದ ಉಂಟಾಗುವಂತಹ ಸಾವಿನ ಪ್ರಮಾಣವು ಮಹಿಳೆಯರಲ್ಲಿ ಶೇ.23 ಮತ್ತು ಪುರುಷರಲ್ಲಿ ಶೇ.12,ಹೃದಯದ ಕಾಯಿಲೆಗಳಿಂದ ಆಗುವಂತಹ ಸಾವು ಮಹಿಳೆಯರಲ್ಲಿ ಶೇ.31 ಮತ್ತು ಪುರುಷರಲ್ಲಿ ಶೇ.22, ಪಾರ್ಶ್ವವಾಯುವಿನಿಂದ ಉಂಟಾಗುವ ಸಾವು ಮಹಿಳೆಯರಲ್ಲಿ ಶೇ.42 ಮತ್ತು ಪುರುಷರಲ್ಲಿ ಶೇ.35ರಷ್ಟು ಗ್ರೀನ್ ಟೀ ಸೇವನೆಯಿಂದ ಕಡಿಮೆ ಆಗಿದೆ ಎಂದು ವರದಿಗಳು ತಿಳಿಸಿವೆ.

ಗ್ರೀನ್ ಟೀಯನ್ನು ನಿಯಮಿತವಾಗಿ ಸೇವನೆ ಮಾಡಿದರೆ, ಅದರಿಂದ ಚರ್ಮ ಮತ್ತು ಕೂದಲಿನ ಆರೋಗ್ಯ ವೃದ್ಧಿಸುವುದು.

ಚರ್ಮದ ಉರಿಯೂತ ಕಾಯಿಲೆ ತಗ್ಗಿಸುವುದು.

ಗ್ರೀನ್ ಟೀಯನ್ನು ಚರ್ಮದ ಸಮಸ್ಯೆಯಾಗಿರುವಂತಹ ಹೊಟ್ಟು ಮತ್ತು ಸೋರಿಯಾಸಿಸ್ ನ ನಿವಾರನೆ ಬಳಸಬಹುದು. ಗ್ರೀನ್ ಟೀ ಸೇವನೆ ಮಾಡಿದರೆ ಅದರಿಂದ ಚರ್ಮವು ಒಡೆದಿರುವುದು, ಒಣ ಮತ್ತು ಎದ್ದು ಬಂದಿರುವ ಚರ್ಮದ ಸಮಸ್ಯೆಯು ನಿವಾರಣೆ ಆಗುವುದು.

ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ – ಗ್ರೀನ್ ಟೀ ಕುಡಿಯುವುದಿಂದ ದೇಹ ತೂಕ ಕಡಿಮೆ ಆಗುವುದರೊಂದಿಗೆ ದೇಹದ ಕಾಂತಿ ಹೆಚ್ಚುಸುತ್ತದೆ, ಹಾಗೂ ನಿಮ್ಮ ತ್ವಚೆಯ ಸಮಸ್ಯೆಗಳಿಗೂ ಇದರಿಂದ ಪರಿಹಾರವನ್ನು ಕಂಡುಕೊಳ್ಳ ಬಹುದಾಗಿದೆ.

ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ – ನಮ್ಮ ದೇಹದಲ್ಲಿ ಒಳಪ್ರವೇಶಿಸಿ ವಿಶೇಷವಾಗಿ ಹಲ್ಲು ಮತ್ತು ಗಂಟಲಿನೊಳಗೆ ಮನೆ ಮಾಡಿಕೊಂಡಿರುವ ವಿವಿಧ ಕೆಟ್ಟ ಬ್ಯಾಕ್ಟೀರಿಯಾಗಳನ್ನು ಕೊಲ್ಲುವಲ್ಲಿಯೂ ಗ್ರೀನ್ ಟೀ ಸಹಾಯ ಮಾಡುತ್ತದೆ.

ಹೊಟ್ಟೆ ನೋವಿನ ಶಮನ ಮಾಡುತ್ತದೆ – ಗ್ರೀನ್ ಟೀಯೊಂದಿಗೆ ಸಣ್ಣ ತುಂಡು ಶುಂಠಿಯನ್ನು ಬೆರೆಸಿ ಸೇವಿಸುವುದು ಹೊಟ್ಟೆ ನೋವನ್ನು ಹೋಗಲಾಡಿಸುತ್ತದೆ ಮತ್ತು ಆರೋಗ್ಯಕ್ಕೆ ಉತ್ತಮ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಶಿವನನ್ನು ಲಿಂಗ ರೂಪದಲ್ಲಿ ಯಾಕೆ ಪೂಜಿಸುತ್ತಾರೆ

ಶಿವನನ್ನು ಲಿಂಗ ರೂಪದಲ್ಲಿ ಯಾಕೆ ಪೂಜಿಸುತ್ತಾರೆ ಮತ್ತು ಕಾರಣ ಏನಿರಬಹುದು?

ವಿಷ್ಣುವರ್ಧನ್ ನಮ್ಮನ್ನು ಬಿಟ್ಟುಹೋದ ದಿನ

ಡಿಸೆಂಬರ್ 30, ನಮ್ಮ ರಾಮಾಚಾರಿ ಅಂದರೆ, ಡಾ. ವಿಷ್ಣುವರ್ಧನ್ ನಮ್ಮನ್ನು ಬಿಟ್ಟುಹೋದ ದಿನ