in

ತುಳಸಿ ಪೂಜೆ ಮಾಡುವ ಮಹತ್ವ

ತುಳಸಿ ಪೂಜೆ ಮಾಡುವ ಮಹತ್ವ
ತುಳಸಿ ಪೂಜೆ ಮಾಡುವ ಮಹತ್ವ

ತುಳಸಿ ಪೂಜೆ ಪ್ರತಿ ವರ್ಷ ದೀಪಾವಳಿಯ ಜೊತೆಗೂಡಿ ಬರುವ, ಆಚರಿಸಲಾಗುವ ಹಬ್ಬ. ಇದನ್ನಾಚರಿಸುವ ಉದ್ದೇಶ ವಿಷ್ಣು ಹಾಗೂ ತುಳಸಿಯ ಮದುವೆಯ ಆಚರಣೆಯಂತೆ. ಚಾಂದ್ರಮಾನ ಕಾರ್ತಿಕಮಾಸ ಶುಕ್ಲಪಕ್ಷದ ೧೨ನೇ ದಿನ ಅಂದರೆ ದ್ವಾದಶಿಯಂದು ಈ ಹಬ್ಬವನ್ನು ಉತ್ಥಾನ ದ್ವಾದಶಿ ಎಂದು ಆಚರಿಸಲಾಗುತ್ತದೆ. ತುಳಸಿಗಿಡದೊಂದಿಗೆ ಬೆಟ್ಟದನೆಲ್ಲಿಕಾಯಿ ಗಿಡವನ್ನೂ ನೆಟ್ಟು ಪೂಜಿಸುವ ರೂಢಿ ಇದೆ. ದೀಪಗಳಿಂದ ಬೃಂದಾವನವನ್ನು ಅಲಂಕರಿಸಲಾಗುತ್ತದೆ. ಈ ದಿನದಂದು ತುಳಸಿ ಕಟ್ಟೆಯನ್ನು ರಂಗೋಲೆ, ಹೂವು ಹಾಗೂ ಮಾವಿನ ಎಲೆಗಳಿಂದ ಅಲಂಕರಿಸಿ ಕೃಷ್ಣನ ಮೂರ್ತಿಯಿರಿಸಿ ಪೂಜಿಸಲಾಗುತ್ತದೆ. ದೀಪಾವಳಿಯಂತೆ ಈ ದಿನವೂ ಪಟಾಕಿಯ ಮಹಾಪೂರವೇ ಜರುಗುತ್ತದೆ.

ತುಳಸಿ, ಜಲಂಧರನ ಹೆಂಡತಿಯಾದ ವೃಂದ. ರಾಕ್ಷಸನಾದ ಜಲಂಧರನ ಕಿರುಕುಳ ತಾಳಲಾಗದೆ ದೇವತೆಗಳು ವಿಷ್ಣುವಿನ ಸಹಾಯಕ್ಕೆ ಮೊರೆ ಹೋದರು. ಪತಿವ್ರತೆಯಾದ ವೃಂದಳ ತಪೋಶಕ್ತಿಯಿಂದ ಜಲಂಧರನು ಅತ್ಯಂತ ಶಕ್ತಿಶಾಲಿಯಾದನು. ವಿಷ್ಣು ಜಲಂಧರನ ವೇಷ ಧರಿಸಿ ವೃಂದಳ ಪಾತಿವ್ರತ್ಯ ಶಕ್ತಿಯನ್ನು ಭಂಗ ಮಾಡಿದ. ಜಲಂಧರನು ರಣಭೂಮಿಯಲ್ಲಿ ಮಡಿದ. ವಿಷ್ಣುವಿಗೆ ಶಾಪ ನೀಡಿ ವೃಂದ ತನ್ನ ಪತಿಯ ಶವದೊಂದಿಗೆ ಬೂದಿಯದಳು. ಮುಂದೆ ಆ ವೃಂದಳೇ ತುಳಸಿಯಾಗಿ ಪಾರ್ವತಿ ತಯಾರಿಸಿದ ಬೃಂದಾವನದಲ್ಲಿ ಹುಟ್ಟಿದಳು.

ನಂತರ ಇವಳು ರುಕ್ಮಿಣಿಯಾಗಿ ಜನ್ಮ ಪಡೆದು ಕಾರ್ತಿಕ ಶುದ್ಧ ದ್ವಾದಶಿಯಂದು ಕೃಷ್ಣನನ್ನು ಮದುವೆಯಾದಳೆಂದು ಪ್ರತೀತಿಯಿದೆ. ಇನ್ನೊಂದು ಪುರಾಣದ ಪ್ರಕಾರ ದೇವತೆಗಳೂ, ದಾನವರೂ ಕ್ಷೀರಸಾಗರವನ್ನು ಕಡೆದಾಗ ಕೊನೆಯಲ್ಲಿ ಅಮೃತಕಲಶ ಬಂತು. ಅದನ್ನು ಕೈಗೆ ತೆಗೆದುಕೊಂಡ ವಿಷ್ಣುವಿನ ಕಣ್ಣುಗಳಿಂದ ಬಂದ ಆನಂದಬಾಷ್ಪಗಳು ಆ ಕಲಶದಲ್ಲಿ ಬಿದ್ದು ಅದರಿಂದ ಒಂದು ಸಣ್ಣ ಗಿಡ ಹುಟ್ಟಿತು. ಅದಕ್ಕೆ ತುಲನೆ ಇಲ್ಲವಾದ್ದರಿಂದ, ತುಳಸಿ ಎಂದು ಹೆಸರಿಟ್ಟು, ಲಕ್ಷ್ಮಿಯೊಂದಿಗೆ ತುಳಸಿಯನ್ನೂ ವಿಷ್ಣುವು ಮದುವೆಯಾದನು.

ತುಳಸಿ ಪೂಜೆ ಮಾಡುವ ಮಹತ್ವ
ತುಳಸಿ ವಿಷ್ಣು ಮದುವೆ

ಆಷಾಢಮಾಸ ಶುಕ್ಲ ಪಕ್ಷದ ಏಕಾದಶಿಯಲ್ಲಿ ಕ್ಷೀರಸಾಗರದಲ್ಲಿ ಶೇಷಶಾಯಿಯಾದ ಭಗವಂತನನ್ನು ಈ ದಿನ ರಾತ್ರಿಯಲ್ಲಿ ಏಳಿಸುವುದರಿಂದ ಈ ದ್ವಾದಶಿಗೆ ಭಗವಂತೋತ್ಥಾನ ರೂಪವಾದ ಉತ್ಥಾನದ್ವಾದಶೀ ಎಂದು ಹೆಸರು ಬಂದಿದೆ. ಆಷಾಢ ಶುಕ್ಲಪಕ್ಷದಲ್ಲಿ ಪ್ರಾರಂಭಿಸಿದ ಚಾತುರ್ಮಾಸ್ಯ ವ್ರತವನ್ನು ಈ ದಿವಸ ಮುಕ್ತಾಯಗೊಳಿಸಬೇಕು.

ಈ ದ್ವಾದಶಿಯಲ್ಲಿ ಕ್ಷೀರಾಬ್ಧಿಶಯನ ವ್ರತವನ್ನು ಆಚರಿಸುತ್ತಾರೆ. ತುಳಸಿ ಸಹಿತ ಧಾತ್ರೀ ಲಕ್ಷ್ಮೀನಾರಾಯಣ ಪ್ರೀತ್ಯರ್ಥವಾಗಿ ಈ ವ್ರತವನ್ನು ಮಾಡುವುದು ಇಂದಿಗೂ ರೂಢಿಯಲ್ಲಿದೆ. ಇದರ ದ್ಯೋತಕವಾಗಿ ಉತ್ಥಾನ ದ್ವಾದಶೀ ದಿವಸ ಬೆಳಗ್ಗೆ ಬೃಂದಾವನದಲ್ಲಿ ಧಾತ್ರಿಯನ್ನು ಕಾಯಿಸಹಿತವಾದ ನೆಲ್ಲಿಗಿಡವನ್ನು ನೆಟ್ಟು ಅಲ್ಲಿ ಭಗವಂತನನ್ನು ಕೂರಿಸಿ ನೀರಾಜನಾದಿಗಳಿಂದ ಪುಜಿಸುತ್ತಾರೆ. ರಾತ್ರಿಯಲ್ಲಿ ಬೃಂದಾವನವನ್ನು ಪುಷ್ಪಾದಿಗಳಿಂದಲಂಕರಿಸಿ ಭಗವಂತನನ್ನು ಆ ಬೃಂದಾವನದಲ್ಲಿಟ್ಟು ಉತ್ಸವಮಾಡುತ್ತಾರೆ. ಮನೆಗಳಲ್ಲಿ ಬೃಂದಾವನವನ್ನು ಪೂಜಿಸಿ ದೀಪಗಳಿಂದ ಅಲಂಕರಿಸಿ ಪುಜಿಸುತ್ತಾರೆ. ರಾತ್ರಿ ಭಗವಂತನಿಗೆ ಕ್ಷೀರಾನ್ನ ನಿವೇದನ ಒಂದು ವಿಶೇಷ. ಹೊಸ ನೆಲ್ಲಿಕಾಯನ್ನು ಈ ದ್ವಾದಶಿಯಿಂದ ಉಪಯೋಗಿಸಲು ಪ್ರಾರಂಭಿಸುತ್ತಾರೆ. ಕ್ಷೀರಾಬ್ಧಿಯಲ್ಲಿ ಶಯನಿಸಿದ ಭಗವಂತ ಈ ದ್ವಾದಶಿಯಲ್ಲಿ ತುಳಸಿ ಆವಾಸವಾದ ಬೃಂದಾವನದಲ್ಲಿ ತುಳಸಿ ಲಕ್ಷ್ಮಿಯರೊಡನೆ ಏಳುವುದರ ಸಂಕೇತವಾಗಿ ಈ ಪೂಜೆ ಇಂದಿಗೂ ನಡೆಯುವ ರೂಢಿಯಿದೆ. ಈ ದಿವಸದಲ್ಲಿ ದೀಪೋತ್ಸವ ವಿಶೇಷ ಪುಣ್ಯಪ್ರದ. ಈ ದ್ವಾದಶಿಯಲ್ಲಿ ಧಾತ್ರೀ ತುಳಸೀ ಸಹಿತ ಲಕ್ಷ್ಮೀನಾರಾಯಣನನ್ನು ಪುಜಿಸುವುದರಿಂದ ಸರ್ವವಿಧವಾದ ಪಾತಕಗಳೂ ನಶಿಸುತ್ತವೆ-ಎಂದು ವ್ರತಮಹಾತ್ಮ್ಯೆ ತಿಳಿಸುತ್ತದೆ.

ಸಾಮಾನ್ಯವಾಗಿ ಎಲ್ಲಾ ಮಂಗಳ ಕಾರ್ಯಗಳೂ ತುಳಸಿ ಪೂಜೆಯಿಂದ, ಗಣೇಶನ ಪೂಜೆಯಿಂದ ಆರಂಭವಾಗುತ್ತದೆ. ಕನ್ಯಾ ಸಂತೋಷದಿಂದ ಅಂದರೆ ಹೆಣ್ಣು ಮಗುವಿಲ್ಲದೆ ವಂಚಿತರಾದವರು, ಈ ದಿನದಂದು ತುಳಸಿ ವಿವಾಹವನ್ನು ಅಥವಾ ತುಳಸಿ ಪೂಜೆಯನ್ನು ಮಾಡಬೇಕು, ಇದರಿಂದ ಅವರು ಕನ್ಯಾದಾನದ ಫಲವನ್ನು ಪಡೆಯಬಹುದು ಎಂದು ನಂಬಲಾಗಿದೆ. ಕಾರ್ತಿಕ ತಿಂಗಳ ಶುಕ್ಲ ಪಕ್ಷದ ನವಮಿ ದಿನಾಂಕವನ್ನು ತುಳಸಿ ವಿವಾಹವೆಂದು ಅನೇಕ ಜನರು ಪರಿಗಣಿಸಿದ್ದರೂ, ಕೆಲವರು ತುಳಸಿ ಪೂಜೆಯನ್ನು ಏಕಾದಶಿಯಿಂದ ಪೂರ್ಣಿಮಾವರೆಗೆ ಮಾಡುತ್ತಾರೆ ಮತ್ತು ಐದನೇ ದಿನ ತುಳಸಿ ವಿವಾಹವನ್ನು ಆಯೋಜಿಸುತ್ತಾರೆ.

ತುಳಸಿ ಪೂಜೆ ತಯಾರಿ ಹೀಗೆ:

ತುಳಸಿ ಪೂಜೆ ಮಾಡುವ ಮಹತ್ವ
ತುಳಸಿ ಪೂಜೆ ತಯಾರಿ

ತುಳಸಿ ಮದುವೆಗಾಗಿ, ಮುಂಜಾನೆ ಬೇಗ ಎದ್ದು, ಮೊದಲು ತುಳಸಿ ಕಟ್ಟೆಯನ್ನು ಮತ್ತು ಗಿಡವನ್ನು ಶುದ್ಧಗೊಳಿಸಿ.

ತುಳಸಿ ಕಟ್ಟೆಯ ಮುಂದೆ ನೀರು ಅಥವಾ ಸಗಣಿ ನೀರನ್ನು ಹಾಕಿ, ನಂತರ ರಂಗೋಲಿಯನ್ನು ಬಿಡಿಸಿ.
ನಂತರ ಅದರ ಸುತ್ತಲೂ ಕಬ್ಬಿನ ಮೇಲಾವರಣವನ್ನು ಮಾಡಿ.

ತುಳಸಿಯ ಮೇಲೆ, ಕೆಂಪು, ಹಸಿರು ಮತ್ತು ಹಳದಿ ಬಣ್ಣದ ಬಟ್ಟೆಗಳನ್ನು ಸುಮಂಗಲಿಯ ಸಂಕೇತವಾಗಿ ಇರಿಸಿ.
ಇದು ತುಳಸಿ ಸಸ್ಯದ ಮೇಲೆ ಚಳಿಗಾಲದ ಪರಿಣಾಮವನ್ನು ಕಡಿಮೆ ಮಾಡುತ್ತದೆ ಮತ್ತು ಅದು ಹಸಿರಾಗಿರುತ್ತದೆ.

ಸೀರೆ ಉಡಿಸಿ ವಧುವಿನಂತೆ ಅಲಂಕರಿಸಬಹುದು ಮತ್ತು ತುಳಸಿಗೆ ಆಭರಣಗಳನ್ನು ಕೂಡ ಹಾಕಿ ಅಲಂಕರಿಸಬಹುದು.

ಒಡೆಯದ, ಬಿರುಕು ಬಿಡದ ಒಂದು ತೆಂಗಿನಕಾಯಿಯನ್ನು, ವೀಳ್ಯದೆಲೆ, ಅಡಿಕೆಯನ್ನು ತುಳಸಿಯ ಮೇಲಿಟ್ಟು, ತುಳಸಿಗೆ ಸಿಂಧೂರವನ್ನು ಹಚ್ಚಿ. ಇದರ ನಂತರ, ಶಾಲಿಗ್ರಾಮವನ್ನು ವಿಷ್ಣುವಾಗಿ ಒಂದು ಆಸನದ ಮೇಲೆ ಇರಿಸಿ. ನಂತರ ಮದುವೆಯ ಸಮಯದಲ್ಲಿ ವಧುವಿನ ಕೈಗೆ ಅರಿಶಿನವನ್ನು ಹಚ್ಚಿದಂತೆಯೇ ಅವರಿಬ್ಬರಿಗೂ ಅರಿಶಿನ ಹಚ್ಚಿ. ನಂತರ ತುಳಸಿ ಗಿಡದ ಸುತ್ತ ಏಳು ಸುತ್ತುಗಳನ್ನು ಹಾಕಿ ನಂತರ ಅವೆರಡನ್ನೂ ಆರತಿ ಮಾಡಿ ಮದುವೆ ಮಾಡಿ. ಕೊನೆಯದಾಗಿ ವಿವಾಹದಲ್ಲಿ ಹಾಡುವಂತಹ ಸೋಬಾನೆ ಹಾಡುಗಳನ್ನು ಹಾಡಬೇಕು.

ತುಳಸಿ ಪೂಜೆ ಎಲ್ಲಾ ಆಸೆಗಳನ್ನು ಈಡೇರಿಸುತ್ತದೆ. ಈ ಘಟನೆಯ ನಂತರ, ವಿಷ್ಣು ನಾಲ್ಕು ತಿಂಗಳ ನಿದ್ರೆಯಿಂದ ಎಚ್ಚರಗೊಂಡಾಗ ತುಳಸಿಯೊಂದಿಗೆ ಮದುವೆ ನಡೆಯಿತು. ಈ ದಿನವನ್ನೇ ದೇವ ಉತ್ಥಾನ ಏಕಾದಶಿ ಎಂದು ಕರೆಯಲಾಗುತ್ತದೆ. ಕಾರ್ತಿಕ ತಿಂಗಳ ಶುಕ್ಲ ಪಕ್ಷದ ಏಕಾದಶಿಯಂದು, ತುಳಸಿ ಮತ್ತು ಶಾಲಿಗ್ರಾಮದಲ್ಲಿ ಭಕ್ತನು ಏನೇ ಬಯಸಿದರೂ ಅವರ ಎಲ್ಲಾ ಆಶಯಗಳು ಈಡೇರುತ್ತವೆ ಎಂದು ಧರ್ಮಗ್ರಂಥಗಳಲ್ಲಿ ತಿಳಿಸಲಾಗಿದೆ. ವಿಷ್ಣು ಮತ್ತು ಮಹಾಲಕ್ಷ್ಮಿ ಅವರ ಸಾಂಕೇತಿಕ ವಿವಾಹದಂತೆಯೇ ಶಾಲಿಗ್ರಾಮ ಮತ್ತು ತುಳಸಿಯ ವಿವಾಹವನ್ನು ಆಚರಿಸಲಾಗುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ನಾಳೆ ಜೂನ್ 24 ಶುಕ್ರವಾರ 3 ರಾಶಿಯವರಿಗೆ ಚಾಮುಂಡೇಶ್ವರಿ ಕೃಪೆ ಸಿಗಲಿದೆ.

ನಾಳೆ ಜೂನ್ 24 ಶುಕ್ರವಾರ 3 ರಾಶಿಯವರಿಗೆ ಚಾಮುಂಡೇಶ್ವರಿ ಕೃಪೆ ಸಿಗಲಿದೆ.

ಕೊಡಿ ಮಠ ಸ್ವಾಮಿಯ ಮತ್ತೊಂದು ಭವಿಷ್ಯ ಕೇಳಿ ಬೆಚ್ಚಿಬಿದ್ದ ಜನರು.

ಕೊಡಿ ಮಠ ಸ್ವಾಮಿಯ ಮತ್ತೊಂದು ಭವಿಷ್ಯ ಕೇಳಿ ಬೆಚ್ಚಿಬಿದ್ದ ಜನರು.