ಪ್ರತಿ ಮನೆಯಲ್ಲೂ ಬೆಳ್ಳಿ ಸಾಮಾನುಗಳು, ಚಿನ್ನದ ಆಭರಣಗಳು ಇದ್ದೆ ಇರುತ್ತದೆ. ಅವುಗಳನ್ನು ಕೂಡ ಸ್ವಚ್ಛತೆಯನ್ನು ಮಾಡಲೇಬೇಕು. ಅದಕ್ಕೆ ಅಂತ ಅಂಗಡಿಗಳಲ್ಲಿ ಸಿಗುವ ವಸ್ತುಗಳೇ ಬೇಕಾಗಿಲ್ಲ, ಮನೆಯಲ್ಲಿಯೇ ಇರುವ ಕೆಲವು ವಸ್ತುಗಳಿಂದ ಸ್ವಚ್ಚ ಮಾಡಬಹುದು.
ಬೆಳ್ಳಿ ಪೂಜಾ ಸಾಮಗ್ರಿಗಳನ್ನು ತೊಳೆಯಲು ಇದನ್ನು ಬಳಕೆ ಮಾಡಲಾಗುತ್ತದೆ. ಒಂದು ಲಿಂಬೆಯ ರಸ ಮತ್ತು ಅದಕ್ಕೆ ಮೂರು ಚಮಚ ಉಪ್ಪು ಮತ್ತು ನೀರು ಹಾಕಿ.
ಇದರಲ್ಲಿ ಐದು ನಿಮಿಷ ಕಾಲ ಆಭರಣವನ್ನು ಮುಳುಗಿಸಿ ಇಡಿ. ಇದು ಆದ ಕೂಡಲೇ ಅದನ್ನು ಮೆತ್ತಗಿನ ಬಟ್ಟೆಯಿಂದ ಉಜ್ಜಿಕೊಳ್ಳಿ. ಇದರಿಂದ ಕಲೆಯು ಮಾಯವಾಗುವುದು.
ವಿನೆಗರ್, ನೀರು ಮತ್ತು ಅಡಿಗೆ ಸೋಡಾ ಒಟ್ಟಿಗೆ ಬೆಳ್ಳಿ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ನೀವು 1/2 ಕಪ್ ಬಿಳಿ ವಿನೆಗರ್ ಅನ್ನು 2 ಟೇಬಲ್ಸ್ಪೂನ್ ಅಡಿಗೆ ಸೋಡಾದೊಂದಿಗೆ ಬೆಚ್ಚಗಿನ ನೀರಿನಲ್ಲಿ ಮಿಶ್ರಣ ಮಾಡಿ. ಅದರಲ್ಲಿ ಬೆಳ್ಳಿಯನ್ನು ಎರಡರಿಂದ ಮೂರು ಗಂಟೆಗಳ ಕಾಲ ನೆನೆಯಲು ಬಿಟ್ಟು, ನಂತರ ತೊಳೆಯಿರಿ.
ಕರೆಗಟ್ಟಿದ ಬೆಳ್ಳಿ ಪಾತ್ರೆಗಳಿಗೆ ಶೈನಿಂಗ್ ತಂದುಕೊಡುವ ಒಂದು ಬಗೆಯ ವಸ್ತು ಟೊಮೋಟೊ ಕೆಚಪ್ ಎಂದು ಹೇಳಬಹುದು. ಆದರೆ ಕಡಿಮೆ ಬೆಳ್ಳಿ ಪಾತ್ರೆಗಳು ಇದ್ದರೆ ಒಳ್ಳೆಯದು.. ಇದಕ್ಕಾಗಿ ಸ್ವಲ್ಪ ಕೆಚಪ್ ನ್ನು ಪೇಪರ್ ಟವೆಲ್ ಮೇಲೆ ಹಾಕಿಕೊಳ್ಳಿ ಮತ್ತು ಕಲೆಯಾಗಿರುವ ಭಾಗಕ್ಕೆ ಸರಿಯಾಗಿ ಉಜ್ಜಿ. ಬೆಳ್ಳಿ ಪಾತ್ರೆಯು ಸರಿಯಾಗಿ ಶುಚಿಯಾಗದೆ ಇದ್ದರೆ ಆಗ ನೀವು 15-20 ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ಮೆತ್ತಗಿನ ಬಟ್ಟೆಯಿಂದ ಉಜ್ಜಿ ಮತ್ತು ಶುಚಿ ಮಾಡಿ.
ಲಾಂಡ್ರಿ ಡಿಟರ್ಜೆಂಟ್ ಕೂಡ ಕಪ್ಪು ಕಲೆಯನ್ನು ತೆಗೆದುಹಾಕಲು ಹಳೆಯ ಪರಿಹಾರವಾಗಿದೆ. ನೀವು ಕೇವಲ ಒಂದು ಸಣ್ಣ ಕಪ್ ಡಿಟರ್ಜೆಂಟ್ ಅನ್ನು ಬಿಸಿನೀರಿನ ಬಟ್ಟಲಿಗೆ ಹಾಕಿ, ಬೆಳ್ಳಿಯ ಆಭರಣಗಳನ್ನು ಅದರ ಒಳಗೆ ಇಡಬೇಕು. 5 ರಿಂದ 7 ನಿಮಿಷಗಳ ಕಾಲ ಬಿಡಿ, ನಂತರ ತೆಗೆದುಹಾಕಿ ಮತ್ತು ಬಟ್ಟೆಯಿಂದ ಉಜ್ಜಿ.
ಸ್ಯಾನಿಟೈಸರ್ ಕೀಟಾಣುಗಳನ್ನು ದೂರ ಮಾಡುವುದು.
ಆದರೆ ಇದನ್ನು ಬೆಳ್ಳಿ ಆಭರಣಗಳನ್ನು ಶುಚಿ ಮಾಡಲು ಕೂಡ ಬಳಿಕೆ ಮಾಡಬಹುದು. ಒಣ ಬಟ್ಟೆಗೆ ಸ್ವಲ್ಪ ಸ್ಯಾನಿಟೈಸರ್ ಹಾಕಿ ಮತ್ತು ಇದರಿಂದ ಬೆಳ್ಳಿ ಪಾತ್ರೆಗಳನ್ನು ಉಜ್ಜಿಕೊಳ್ಳಿ.
ಸ್ವಲ್ಪ ಅಲ್ಯುಮಿನಿಯಂ ಹಾಳೆಯನ್ನು ತೆಗೆದುಕೊಂಡು ಅದನ್ನು ಒಂದು ಪಾತ್ರೆಯಲ್ಲಿ ಹರಡಿಬಿಡಿ. ಇದರಲ್ಲಿ ಬೆಳ್ಳಿ ಆಭರಣಗಳನ್ನು ಹಾಕಿಕೊಂಡು ಅದಕ್ಕೆ ಸ್ವಲ್ಪ ಅಡುಗೆ ಸೋಡಾ ಸಿಂಪಡಿಸಿ. ಉಗುರುಬೆಚ್ಚಗಿನ ನೀರಿಗೆ ಆಭರಣಗಳನ್ನು ಹಾಕಿ. ನೀರು ಹೆಚ್ಚು ಬಿಸಿ ಇದ್ದರೆ ಆಭರಣಗಳ ಬಣ್ಣವು ಹಾಳೆಗೆ ಹೋಗಬಹುದು. ಆಭರಣ ಬಣ್ಣ ಹಾಗೆ ಉಳಿದುಕೊಳ್ಳಲು ಹಲವಾರು ಸಲ ಹೀಗೆ ಮಾಡಿಕೊಳ್ಳಿ. ಬೆಳ್ಳಿ ಹಾಗೂ ಬಂಗಾರದ ಆಭರಣಗಳನ್ನು ತೊಳೆಯಲು ಇದು ಕೆಲವೊಂದು ವಿಧಾನಗಳು.
ಪಾತ್ರೆ ತೊಳೆಯುವ ಪುಡಿ ಹಾಗೂ ಲಿಕ್ವಿಡ್
ಪ್ರತಿಯೊಂದು ಮನೆಗಳಲ್ಲೂ ಪಾತ್ರೆ ತೊಳೆಯಲು ಸಾಮಾನ್ಯವಾಗಿ ಪಾತ್ರೆ ತೊಳೆಯುವ ಹುಡಿ ಅಥವಾ ಲಿಕ್ವಿಡ್ ಅನ್ನು ಬಳಸುವುದನ್ನು ನೋಡುತ್ತೇವೆ. ಇದೇ ಹುಡಿಯನ್ನು ಬಳಸಿಕೊಂಡು ಬಂಗಾರದ ಆಭರಣಗಳನ್ನು ಸ್ವಚ್ಛ ಮಾಡಬಹುದು.
ಸ್ವಲ್ಪ ಹಲ್ಲುಜ್ಜುವ ಪೇಸ್ಟ್ ತೆಗೆದುಕೊಂಡು ಬಂಗಾರದ ಆಭರಣದ ಮೇಲೆ ಹಾಕಿಕೊಳ್ಳಿ. ಹಳೆಯ ಹಲ್ಲುಜ್ಜುವ ಬ್ರಶ್ ತೆಗೆದುಕೊಂಡು ಆಭರಣದ ಅಂಚು ಹಾಗೂ ಸಂಧುಗಳನ್ನು ಸರಿಯಾಗಿ ಉಜ್ಜಿಕೊಳ್ಳಿ. ಹೆಚ್ಚು ರಾಸಾಯನಿಕವಿಲ್ಲದಂತಹ ಪೇಸ್ಟ್ ಬಳಸಿದರೆ ಬಂಗಾರಕ್ಕೆ ಯಾವುದೇ ಹಾನಿಯಾಗದು. ಇದರ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಐದು ನಿಮಿಷ ಕಾಲ ಆಭರಣಗಳನ್ನು ಹಾಕಿಡಿ. ಬಳಿಕ ಬಟ್ಟೆಯಿಂದ ಒರೆಸಿಕೊಳ್ಳಿ.
ಒಂದು ವೇಳೆ, ಬೆಳ್ಳಿಯ ಪಾತ್ರೆಗಳಲ್ಲಿ ಜಿಡ್ಡಿನ ಕಲೆಗಳು ಇದ್ದರೆ, ಅರ್ಧ ಟೇಬಲ್ ಬೇಕಿಂಗ್ ಸೋಡಾ ಅಥವಾ ಅಡುಗೆ ಸೋಡಾ ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರು ಹಾಕಿ ಪೇಸ್ಟ್ ರೀತಿ ಮಾಡಿಕೊಳ್ಳಿ.. ಆಮೇಲೆ ಈ ಪೇಸ್ಟ್ ನಿಂದ ಕಲೆಗಳಿರುವ ಜಾಗಕ್ಕೆ ಹಚ್ಚಿ, ಚೆನ್ನಾಗಿ ಸ್ವಚ್ಚ ಮಾಡಿಕೊಂಡರೆ, ಉತ್ತಮ ಫಲಿತಾಂಶವನ್ನು ಕಾಣ ಬಹುದಾಗಿದೆ.
ಬೆಳ್ಳಿಯ ಆಭರಣಗಳನ್ನು ತೊಳೆಯಲು ಉಪ್ಪು ನೀರು ತುಂಬಾ ಒಳ್ಳೆಯದು. ಸ್ವಲ್ಪ ಬಿಸಿ ನೀರಿಗೆ ಉಪ್ಪು ನೀರನ್ನು ಹಾಕಿಕೊಳ್ಳಿ. ಬೆಳ್ಳಿಯ ಆಭರಣಗಳನ್ನು ಇದರಲ್ಲಿ ಮುಳುಗಿಸಿ ಸ್ವಲ್ಪ ಸಮಯ ಹಾಗೆ ಬಿಡಿ. ಬ್ರಶ್ ತೆಗೆದುಕೊಂಡು ಬೆಳ್ಳಿ ಆಭರಣಗಳ ಬದಿ ಹಾಗೂ ಸಂಧುಗಳನ್ನು ತೊಳೆಯಿರಿ. ಬಳಿಕ ಸ್ವಚ್ಛ ನೀರಿಗೆ ಹಾಕಿ ತೆಗೆದು ಬಟ್ಟೆಯಿಂದ ಒರೆಸಿಕೊಳ್ಳಿ. ಬೆಳ್ಳಿ ಆಭರಣಗಳನ್ನು ಸ್ವಚ್ಛಗೊಳಿಸಲು ಇದು ತುಂಬಾ ಅಗ್ಗ ಹಾಗೂ ವೇಗದ ವಿಧಾನವಾಗಿದೆ.
ಸ್ವಲ್ಪ ಹುಣಸೆ ಹುಳಿ ತೆಗೆದುಕೊಂಡು ಅದನ್ನು, ಒಂದು ಸಣ್ಣ ಬೌಲ್‌ನ ನೀರಿನಲ್ಲಿ, ಸ್ವಲ್ಪ ಹೊತ್ತು ನೆನೆಯಲು ಹಾಕಿ. ಆಮೇಲೆ ಹುಣಸೆಯ ತಿರುಳನ್ನು ಬೆಳ್ಳಿಯ ಪಾತ್ರೆಗಳು ಅಥವಾ ಆಭರಣದ ಮೇಲೆ ಉಜ್ಜಿಕೊಳ್ಳಿ. ಕಲೆ ಇರುವ ಕಡೆ ಸ್ವಲ್ಪ ಜಾಸ್ತಿಯಾಗಿ ಉಜ್ಜಿಕೊಳ್ಳಿ, ಇದರಿಂದ ಕ್ರಮೇಣವಾಗಿ ಕಲೆಗಳು ಹೋಗಿಬಿಡುತ್ತವೆ. ಆ ಬಳಿಕ ನೀರಿನಿಂದ ತೊಳೆದುಕೊಳ್ಳಿ.
ಸ್ವಲ್ಪ ಉಗುರುಬೆಚ್ಚಗಿನ ನೀರಿಗೆ ಅಮೋನಿಯಾ ಹುಡಿಯನ್ನು ಹಾಕಿ. ಬಂಗಾರದ ಆಭರಣಗಳನ್ನು ಈ ಮಿಶ್ರಣದಲ್ಲಿ ಹಾಕಿ ಎರಡು ನಿಮಿಷ ಬಿಟ್ಟು ತೆಗೆಯಿರಿ. ಬ್ರಶ್ ನಿಂದ ಆಭರಣಗಳ ಅಂಚು ಹಾಗೂ ಸಂಧುಗಳನ್ನು ಉಜ್ಜಿಕೊಳ್ಳಿ. ಬಳಿಕ ಸ್ವಚ್ಛ ನೀರಿನಿಂದ ಆಭರಣಗಳನ್ನು ತೊಳೆಯಿರಿ. ಬಂಗಾರದ ಆಭರಣ ತೊಳೆಯಲು ಅಮೋನಿಯಾ ತುಂಬಾ ಉಪಯುಕ್ತ.
ಧನ್ಯವಾದಗಳು.
GIPHY App Key not set. Please check settings