in

ಕಮಲ ದೇವಾಲಯ ವಿಶೇಷತೆ

ಕಮಲ ದೇವಾಲಯ ವಿಶೇಷತೆ
ಕಮಲ ದೇವಾಲಯ ವಿಶೇಷತೆ

ಭಾರತದ, ದೆಹಲಿಯಲ್ಲಿ ಆರಾಧನೆಯ ಬಹಾಯಿ ಮನೆ ತನ್ನ ಹೂವಿನಂತಹ ಆಕಾರದ ಕಾರಣ ಕಮಲ ದೇವಾಲಯ ವೆಂದು ಜನಪ್ರಯವಾಗಿ ಹೆಸರಾದ, ಉಪಾಸನೆಯ ಒಂದು ಮನೆ ಹಾಗೂ ದೆಹಲಿಯಲ್ಲಿ ಒಂದು ಪ್ರಮುಖ ಆಕರ್ಷಣೆ.. ಈ ೧೯೮೬ ರಲ್ಲಿ ಅದು ಸಂಪೂರ್ವವಾಗಿ ಕಟ್ಟಿಮುಗಿಸಲಾಯತು ಮತ್ತು ಭಾರತ ಉಪಖಂಡದ ಮದರ್ ಟೆಂಪಲ್ ನಂತೆ ಸೇವೆ ಸಲ್ಲಿಸುತ್ತಿದೆ. ಹಲವು ಅನೇಕ ವಾಸ್ತುಶಿಲ್ಪೀಯ ಪ್ರಶಸ್ತಿಗಳು ಅದಕ್ಕೆ ಸಂದಿವೆ.

ಇಲ್ಲಿಯೂ ಸಹ ಬೇರೆ ಎಲ್ಲಾ ಬಹಾಯಿಗಳ ಪೂಜೆಯ ಆರಾಧನೆಯ ಕಟ್ಟಡದಂತೆ, ಬಹಾಯಿ ಧೆರ್ಮಗ್ರಂಥಗಳಲ್ಲಿ ಸ್ಪಷ್ಟವಾಗಿ ಒತ್ತಿ ಹೇಳಿದಂತೆ, ಯಾವುದೇ ಬೇರೆ ಧರ್ಮ ಅಥವ ಇತರೆ ವ್ಯತ್ಯಾಸವಿಲ್ಲದೆ ಕಮಲ ದೇವಾಲಯದಲ್ಲೂ ಸಹ ಎಲ್ಲಾರಿಗೂ ಮುಕ್ತವಾಗಿ ತೆರೆಯಲ್ಪಟ್ಟಿದೆ. ಇಲ್ಲ ಎಲ್ಲಾ ಧರ್ಮಗಳ ಜನತೆಯು ಪರಮಾತ್ಮನನ್ನು ಹೆಸರು, ಜಾತಿ, ಮತ, ಪಂಗಡ, ಬಿರುದು ಹಾಗೂ ಕಟ್ಟುಪಾಡುಗಳಿಲ್ಲದೆ ಪೂಜಿಸಬಹುದಾದ ಒಂದು ಸ್ಥಾನವಾಗಿರಬೇಕೆಂದು ಆರಾಧನಾ ಕಟ್ಟಡದ ನಿಜವಾದ ಅರ್ಥವೆಂದು ಬಹಾಯಿ ಕಾನೂನು ಸ್ಪಷ್ಟವಾಗಿ ನಿರೂಪಿಸುತ್ತದೆ, ಬಹಾಯಿ ಧರ್ಮದ ಹಾಗೂ ಇತರೆ ದೇವರ ಬೇರೆ ದರ್ಮಗಳ ಪವಿತ್ರ ಸನಾತನ ಧರ್ಮದ ಗ್ರಂಥಗಳನ್ನು ಮಾತ್ರ ಒಳಗಡೆ ಯಾವುದೇ ಭಾಷೆಗಳಲ್ಲಿ ಓದಬಹುದು ಅಥವಾ ಮಂತ್ರವನ್ನು ಪಠಿಸಬಹುದು.

ಅಲ್ಲಿ ಬಹಾಯಿ ಧರ್ಮದ ನಂಬಿಕೆ ವಾಚನಗಳು ಹಾಗೂ ಪ್ರಾರ್ಥನೆಗಳನ್ನು ವೃಂದ ಗಾಯನದವರಿಂದ ಸಂಗೀತಕ್ಕೆ ಅಳವಡಿಸಬಹುದು, ಆದರೆ ಯಾವುದೇ ಸಂಗೀತವಾದ್ಯಗಳನ್ನು ಒಳಗಡೆ ಬಾರಿಸುವುದಾಗಲಿ ಅಥವಾ ನುಡಿಸುವಂತಿಲ್ಲ. ಅದೂ ಅಲ್ಲದೆ ಯಾವುದೇ ಧರ್ಮ ಪ್ರವವಚನಗಳನ್ನು ಮಾಡುವಂತಿಲ್ಲ, ಮತ್ತು ಮತ್ಯಾವುದೇ ಧಾರ್ಮಿಕ ಕ್ರಿಯೆಗಳು, ಆಚಾರ ವಿಧಿ – ವಿಧಾನಗಳನ್ನು ಬಳಕೆ ಮಾಡುವಂತಿಲ್ಲವೆಂದು ಬಹಾಯಿ ಕಾನೂನು ಸ್ಪಷ್ಟವಾಗಿ ವಿದಿಶಮಾಡಿ ತಿಳಿಸಿದೆ. ಮತ್ತೆ ಅಲ್ಲಿ ಪ್ರವವಚನಗಳನ್ನು ವಾಚನಗಳನ್ನು ನೀಡುವಂತಿಲ್ಲ, ಮತ್ತು ಅಲ್ಲಿ ಯಾವುದೇ ಧಾರ್ಮಕ ಪದ್ಧತಿಯನ್ನು ಕಾರ್ಯಕಟ್ಟಲೆಗಳನ್ನು ಸಮಾರಂಭಗಳನ್ನು ಆಚರಿಸುವಂತಿಲ್ಲ.

ಕಮಲ ದೇವಾಲಯವೂ ಸೇರಿದಂತೆ, ಎಲ್ಲಾ ಬಹಾಯಿ ಪೂಜೆಯ ಮನೆಗಳೂ, ಕೆಲವು ವಾಸ್ತಶಿಲ್ಪದ ಮೂಲ ವಸ್ತುಗಳನ್ನು ಹಂಚಿಕೊಳ್ಳುತ್ತವೆ, ಮತ್ತು ಬಹಾಯಿಗಳಿಗೆಂದೇ ವಿಶೇಷವಾಗಿ ಬರೆದಿಟ್ಟ ಕಾನೂನುಗಳನ್ನು ಅನುಸರಿಸುತ್ತವೆ. ಅವುಗಳಲ್ಲಿ ಕೆಲವು ಬಹಾಯಿ ಧರ್ಮ ಗ್ರಂಥಗಳಲ್ಲಿ ನಿಖರವಾಗಿ ನಮೂದಿಸಲ್ಪಟ್ಟಿವೆ. ಅದು ಒಂಭತ್ತು ಭಾಗಗಳುಳ್ಳ ವೃತ್ತಾಕಾರ ಆಕಾರವನ್ನು ಹೊಂದಿರುವುದು ಅವಶ್ಯವೆಂದು, ಅದು ಆರಾಧನೆಯ ಮನೆಯ ಅಗತ್ಯವಾದ ವಾಸ್ತುಶಿಲ್ಪದ ಗುಣ ಲಕ್ಷಣವೆಂದು, ಆ ಧರ್ಮದ ಸಂಸ್ಥಾಪಕರ ಮಗ ಅಬ್ದುಲ್-ಬಹಾಯಿ ಗೊತ್ತು ಪಡಿಸಿದ್ದಾರೆ.

ಕಮಲ ದೇವಾಲಯ ವಿಶೇಷತೆ
ಕಮಲ ದೇವಾಲಯ

ಕಮಲ ಪುಷ್ಪದಿಂದ ಸ್ಪೂರ್ತಿಗೊಂಡು, ಅದರ ವಿನ್ಯಾಸವು ಒಂಭತ್ತು ಭಾಗಗಳುಳ್ಳ ಮೂರರ ಗುಂಪುಗಳಲ್ಲಿ ಜೋಡಿಸಿರುವ ೨೭ – ಸ್ವತಂತ್ರವಾಗಿ – ನಿಂತಿರುವ ಅಮೃತಶಿಲೆ ಆಚ್ಛಾದಿತ ‘ದಳಗಳು’ ರಚಿತವಾಗಿವೆ. ಪ್ರಚಲಿತ ಎಲ್ಲಾ ಬಹಾಯಿ ಆರ್ಚನೆಯ ಕಟ್ಟಡಗಳು ಒಂದು ಗುಮ್ಮಟವನ್ನು ಹೊಂದಿದ್ದರೂ ಅವು ಅವರ ವಾಸ್ತುಶಿಲ್ಪದ ಒಂದು ಅತ್ಯಗತ್ಯ ಭಾಗವೆಂದು ಪರಿಗಣಿಸಲ್ಪಟ್ಟಿಲ್ಲ. ಉಪಾಸನೆಯ ಮನೆಯ ಒಳಗಡೆ ಯಾವುದೇ ಚಿತ್ರಗಳು, ಪ್ರತಿಮೆಗಳು ಅಥವ ಮೂರ್ತಿಗಳನ್ನು ಪ್ರದರ್ಶಿಸ ಬಾರದೆಂದು ಸಹ ಬಹಾಯಿ ಧರ್ಮ ಗ್ರಂಥಗಳು ತಿಳಿಸುತ್ತವೆ ಹಾಗೂ ಯಾವುದೇ ಪ್ರವವಚನ ಪೀಠ ಅಥವ ಪವಿತ್ರ ಸ್ಥಾನವನ್ನು ವಾಸ್ತುಶಿಲ್ಪದ ವೈಶಿಷ್ಠ್ಯವನ್ನಾಗಿ ಸಂಯೋಜಿಸಬಾರದು ವಾಚಕರು ಸಾಧಾರಣವಾಗಿ ಒಯ್ಯುಬಹುದಾದ ಭಾಷಣದ ಸ್ಟಾಂಡುಗಳ ಹಿಂದೆ ನಿಲ್ಲಬಹುದು. ಸುಮಾರು ೨,೫೦೦ ರರಷ್ಟು ಜನಗಳನ್ನು ತನ್ನಲಿ ಹೊಂದುವ ಸಾರ್ಥ್ಯವಿರುವ ಒಂದು ಕೇಂದ್ರ ಹಜಾರಕ್ಕೆ ಪ್ರತಿಯೊಂದು ದಳಗಳಂತಹ ಕಮಲದ ದಳಗಳಂತಹವು ಕಮಲ ದೇವಾಲಯದ ಒಂಭತ್ತು ಬಾಗಿಲುಗಳು ತೆರೆದುಕೊಳ್ಳುತ್ತವೆ. ಆ ಕಮಲದ ದೇವಸ್ಥಾನದ ಒಳಗಡೆ ಒಂದು ಕೇಂದ್ರ ಹಜಾರವು ೪೦ ಮೀಟರುಗಳಿಗಿಂತ ಸ್ವಲ್ಪ ಹೆಚ್ಚು ಎತ್ತರವಾಗಿದೆ ಹಾಗೂ ಅದರ ಮೇಲ್ಮೈ ಬಿಳಿ ಅಮೃತಶಿಲೆಯಿಂದ ಮಾಡಲ್ಪಟ್ಟಿದೆ. ಅಲ್ಲಿ ಉಪಯೋಗಿಸಿರುವ ಬಿಳಿಯ ಅಮೃತಶಿಲೆಗಳು ಗ್ರೀಸ್ ನಲ್ಲಿನ ಪೆಂಟಲಿ ಪರ್ವತದಿಂದ ತರಲ್ಪಟ್ಟಿವೆ, ಅದೇ ಶಿಲೆಯ ಸ್ಥಳದಿಂದಲೇ ವಿವಿಧ ಅನೇಕ ಪುರಾತನ ಸ್ಮಾರಕಗಳು ಹಾಗೂ ಇತರ ಬಹಾಯಿ ದೇವಾಲಯಗಳೂ ಸಹ ಕಟ್ಟಲ್ಪಟ್ಟಿವೆ. ಇಲ್ಲಿನ ಆರಾಧನೆಯ ಕಟ್ಟಡ, ಜೊತೆಗೆ ಒಂಭತ್ತು ಸುತ್ತುವರಿದಿರುವ ಕೊಳಗಳು ಹಾಗೂ ಅದರ ಸುತ್ತಲೂ ೨೬ ಎಕರೆ ತೋಟಗಳು ಇವೆ.
೧೦೫,೦೦೦ ಚದುರ ಮೀಟರ್, ೧೦.೫ ಹೆಕ್ಟೇರ್ಸ್.

ರಾಷ್ಟ್ರೀಯ ಕೇಂದ್ರಾಡಳಿತ ಪ್ರದೇಶವಾದ ದೆಹಲಿಯಲ್ಲಿ, ಬಹಾಪುರ್ ಎಂಬ ಹಳ್ಳಿಯಲ್ಲಿ ಆ ಕಮಲದ ದೇವಸ್ಥಾನದ ತಾಣವಿದೆ. ಈಗ ಕೆನಡಾದಲ್ಲಿ ನೆಲೆಸಿ ವಾಸಿಸುತ್ತಿರುವ, ಫರಿಬೊರ್ಜ್ ಸಹ್ಜ ಎಂಬ ಹೆಸರಿನ, ಹಿಂದೆ ಇರಾನಿಯನ್ ಸಂಜಾತ ಈ ಕಟ್ಟಡದ ವಾಸ್ತುಶಿಲ್ಪಯಾಗಿದ್ದನು. ಅದನ್ನು ವಿನ್ಯಾಸ ಗೊಳಿಸಲು ಅವರನ್ನು ಭೇಟಿ ಮಾಡಲಾಯಿತು, ಮುಂದೆ ಅದರ ರಚನೆಯ ಮೇಲ್ವಿಚಾರಣೆಯನ್ನು ಅವರಾ ಮಾಡಿದರು ಹಾಗೂ ಯಾವ ಸ್ವದೇಶೀಯ ಗಿಡಗಳು ಮತ್ತು ಹೂವುಗಳು ಆ ಸ್ಥಳಕ್ಕೆ ಹೊಂದುತ್ತವೆ ಮತ್ತು ಆ ತಾಣಕ್ಕೆ ಸೂಕ್ತವಾದುದೆಂದು ಅಧ್ಯಯನ ಮಾಡಲು ಒಂದು ಹಸಿರು ಮನೆಯನ್ನು ನಿರ್ಮಿಸಲು ರಚನೆಯ ಬಡ್ಜೆಟ್ಟಿನಿಂದ ಹಣವನ್ನು ಅದಕ್ಕಿ ಉಳಿಸಿದರು. ೧೯೫೩ ರಲ್ಲಿ, ಹೆಚ್ಚಿನಭಾಗ ಈ ಭೂಮಿಯನ್ನು ಖರೀದಸಲು ಅಗತ್ಯವಾದ ಬಂಡವಾಳದ ಪ್ರಮುಖ ಭಾಗವನ್ನು ಹೈದ್ರಾಬಾದ್ ನಲ್ಲಿನ ಅರ್ದಶೀರ್ ರುಸ್ತುಂಪುರ್ ರವರು ತಮ್ಮ ಜೀವಮಾನದ ಸಂಪಾದನೆ ಮತ್ತು ಉಳಿತಾಯವನ್ನು ಈ ಕಾರ್ಯಕ್ಕಾಗಿ ಅವರು ದಾನ ರೂಪದಲ್ಲಿ ಕೊಟ್ಟರು.

ಡಿಸೆಂಬರ್ ೧೯೮೬ ರಲ್ಲಿ, ಅದರ ಉದ್ಘಾಟನೆಯಾದಾಗಿನಿಂದ ಸಾರ್ವಜನಿಕ ಪೂಜೆಗೆ, ದೆಹಲಿಯ ಬಹಾಯಿ ಉಪಾಸನೆಯ ಕಟ್ಟಡವು, ೨೦೦೨ ನೇ ಇಸವಿಯ ಕೊನೆಯ ಹೊತ್ತಿಗೆ, ಇಡೀ ವಿಶ್ವದಲ್ಲೇ ಅತ್ಯಂತ ಅತಿಹೆಚ್ಚು ಪರ್ಯಟಕರು ಭೇಟಿಕೊಟ್ಟ ಕಟ್ಟಡದಲ್ಲಿ ಒಂದೆಂದು ಪರಿಗಣಿತವಾಗಿ, ೫೦ ಮಿಲಿಯನ್ ಗಿಂತಲೂ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಿದೆ. ಆ ವರ್ಷಗಳ ಅವಧಿಯಲ್ಲಿ ಅದಕ್ಕೆ ಭೇಟಿಕೊಟ್ಟ ಪರ್ಯಟಕರ ಸಂಖ್ಯೆಯು ವಿಶ್ವದ ಇತರೆ ಪ್ರಖ್ಯಾತ ಐಫೆಲ್ ಟವರ್ ಹಾಗೂ ತಾಜ್ ಮಹಲ್‌ಗಳಿಗಿಂತಲೂ ಮೇರೆ ಮೀರಿಸಿ ನಿಂತಿತ್ತು. ಅದು ಹಿಂದೂ ಪವಿತ್ರ ದಿನಗಳಲ್ಲಿ, ಅದು ೧೫೦,೦೦೦ ರಷ್ಟು ಜನಗಳನ್ನು ತನ್ನತ್ತ ಆಕರ್ಶಿಸಿದೆ ; ಅದು ಪ್ರತಿ ವರ್ಷವೂ ನಾಲ್ಕು ಮಿಲಿಯನ್ ಪ್ರವಾಸಿಗಳನ್ನು ತನ್ನಲ್ಲಿಗೆ ಸ್ವಾಗತಿಸುತ್ತದೆ. ಪ್ರತಿ ದಿನವೂ ಸುಮಾರು ೧೩,೦೦೦ ಅಥವ ಪ್ರತಿ ನಿಮಷವೂ ೯ ಜನಗಳು.

ಈ ಉಪಾಸನೆಯ ಕಟ್ಟಡವನ್ನು ಸಾಮಾನ್ಯವಾಗಿ “ಕಮಲದ ದೇವಸ್ಥಾನ” ಎಂದು ಸಾಧಾರಣವಾಗಿ ಕರೆಯಲಾಗುತ್ತದೆ. ಭಾರತದಲ್ಲಿ ಹಿಂದು ಉತ್ಸವ ಮತ್ತು ಪೂಜಾ ಕಾಲದಲ್ಲಿ ದುರ್ಗಾ ಪೂಜೆಯ ಸಂದರ್ಭದಲ್ಲಿ, ಕಮಲ ದೇವಾಲಯದ ಅನೇಕ ಪಟ್ಟುಗಳ ಒಂದು ಪ್ರತಿಕೃತಿಯು ಒಂದು ಚಪ್ಪರದಂತೆ ಮಾಡಲ್ಪಟ್ಟಿತ್ತು, ದುರ್ಗಾ ಮಾತೆಯನ್ನು ಪೂಜಿಸಲು ಒಂದು ತಾತ್ಕಾಲಿಕ ರಚನೆಯು ಸ್ಥಾಪಿಸಲ್ಪಟ್ಟಿತು. ಸಿಕ್ಕಿಂನಲ್ಲಿ ಶಿವನಿಗೆ ಸಮರ್ಪಿಸಲ್ಪಟ್ಟ, ಹಿಂದು ಸಮಾರೋಹೋತ್ಸದ ಪೆಂಡಾಲ್ ಮಂದಿರವು ಶಾಶ್ವತವಾದ ಪ್ರತಿಕೃತಿಯಾಗಿದೆ.

ಕಮಲ ದೇವಾಲಯ ವಿಶೇಷತೆ
ಆರಾಧನೆಯ ಮಂದಿರ

ದೇವಾಲಯವು ವೃತ್ತಿಪರ ವಾಸ್ತುಶಿಲ್ಪ ಕಲೆ, ಕುಶಲ ಕಲೆ, ಧಾರ್ಮಿಕ, ಸರ್ಕಾರಿ ಹಾಗೂ ಇತರೆ ಸ್ಥಳಗಳಲ್ಲಿ ಗಮನದ ವಿಶಾಲ ವ್ಯಾಪ್ತಿಯನ್ನು ಗಳಿಸಿದೆ ಹಾಗೂ ನಮ್ಮ ಕಾರ್ಮಗಾರಿ ಜನರ ಅದ್ಭುತ ಕುಶಲ ಕೈಗಾರಿಕೆಯ ಬಗ್ಗೆ ತಿಳಿಯುತ್ತದೆ.

೧೯೮೭ ರಲ್ಲಿ, ಇರಾನಿ ಸಂಜಾತ ಮಿ. ಫರಿಬೊರ್ಜ್ ಸಹ್ಬ ಬಹಾಯಿಗಳ ಆರಾಧನೆಯ ಮಂದಿರದ ವಾಸ್ತುಶಿಲ್ಪಿಗೆ ಒಂದು ಪುಷ್ಪದ ಸೌಂದರ್ಯವನ್ನು ಮೀರಿಸಲು ಯತ್ನಿಸಿದರೂ ಹಾಗೂ ಅದರ ದೃಷ್ಟಿಯ ಪ್ರಭಾವದಲ್ಲಿ ಅಷ್ಟು ಅದ್ಭುತವಾದ ಒಂದು ಕಟ್ಟಡವನ್ನು ನಿರ್ಮಿಸಿದ್ದಕ್ಕೆ ಯು ಕೆ – ಆಧಾರಿತ ವಿನ್ಯಾಸಗಾರ ಇಂಜಿನೀರ್ ಗಳ ಸಂಸ್ಥೆಯಿಂದ “ಅ ಕಟ್ಟಡವು ಒಂದು ಪುಷ್ಪದ ಸೌಂದರ್ಯವನ್ನು ಮತ್ತು ನಮ್ಮ ದೃಷ್ಟಿಗೆ ನೇರವಾಗಿ ತಲುಪುವಂತಹ ಸೊಬಗನ್ನು ನಿರ್ಮಿಸಿದ್ದಾರೆ” ಹಾಗೂ ಧಾರ್ಮಿಕ ಕಲೆ ಹಾಗೂ ವಾಸ್ತುಶಿಲ್ಪದಲ್ಲಿ ಉತ್ಕೃಷ್ಠತೆಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

೧೯೮೭ ರಲ್ಲಿ, ನವ ದೆಹಲಿ ಬಳಿಯ ಬಹಾಯಿಗಳ ಪೂಜೆಯ ಕಟ್ಟಡದ ವಿನ್ಯಾಸಕ್ಕಾಗಿ ಮಿ. ಎಫ್. ಸಹ್ಬ ರವರಿಗೆ ೧೯೮೭ ರ “ಎಕ್ಸಲೆನ್ಸ್ ಇನ್ ರಿಲಿಜಿಯಿಸ್ ಆರ್ಟ್ ಅಂಡ್ ಆರ್ಕಿಟೆಕ್ಚರ್” ವಾಶಿಂಗ್ಟನ್ ಡಿ.ಸಿ ಯ ಧರ್ಮ, ಕಲೆ ಮತ್ತು ಶಿಲ್ಪ ಕಲೆಯ ಇಂಟರ್ಫೇಯ್ತ್ ಫೂರಂ ಸಂಯೋಜನೆ ಮಾಡಿದ ಶಿಲ್ಪ ಕಲೆಗಾರರ ಅಮೇರಿಕಾದ ಸಂಸ್ಥೆಯು ತಮ್ಮ ಮೊದಲ ಗೌರವದ ಪ್ರಶಸ್ತಿಯನ್ನು ನೀಡಿ ಅವರನ್ನು ಗೌರವಿಸಿದರು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ನವರಾತ್ರಿ ನವದೇವಿಗಳ ಪೂಜಾ ವಿಶೇಷತೆ

ನವರಾತ್ರಿ ನವದೇವಿಗಳ ಪೂಜಾ ವಿಶೇಷತೆ

ಚಿನ್ನ ಮಹಿಳೆಯರ ಅಚ್ಚುಮೆಚ್ಚು

ಹಳದಿ ಲೋಹ ಚಿನ್ನ ಮಹಿಳೆಯರ ಅಚ್ಚುಮೆಚ್ಚು