in

ಲಾಲ್ ಎಂದರೆ ಕೆಂಪು, ಬಾಗ್ ಎಂದರೆ ತೋಟ, ಒಟ್ಟಿಗೆ ಕರೆಯುವುದೇ ನಮ್ಮ ಲಾಲ್ ಬಾಗ್

‌ಲಾಲ್‌ಬಾಗ್‌
‌ಲಾಲ್‌ಬಾಗ್‌

ಬೆಂಗಳೂರನ್ನು ಉದ್ಯಾನನಗರಿ ಎಂದು ಕರೆಯುವುದೇ ಇಂತಹ ಪ್ರಮುಖ ಹಸಿರು ಉದ್ಯಾನಗಳನ್ನು ನೋಡಿ. ಬೆಂಗಳೂರು ಎಂತ ಕ್ಷಣ ಮೊದಲಿಗೆ ನೆನಪಾಗುವುದೇ ಲಾಲ್ ಬಾಗ್ ಕಬ್ಬನ್ ಪಾರ್ಕ್. ಬೆಂಗಳೂರಿಗೆ ವಿಹಾರಕ್ಕೆ ಅಂತ ಬಂದವರು ಲಾಲ್ಬಾಗ್ ಉದ್ಯಾನವನಕ್ಕೆ ಹೋಗದೆ ಇರುವವರು ಯಾರು ಇಲ್ಲ ಅಂತ ಅನಿಸುತ್ತೆ.

ಲಾಲ್‌ಬಾಗ್,ಕೆಂಪು ತೋಟ, ಅಥವಾ ಲಾಲ್‌ಬಾಗ್ ಸಸ್ಯೋದ್ಯಾನ, ವರ್ಣರಂಜಿತ ಫಲ-ಪುಷ್ಪ-ಹಣ್ಣು-ಕಾಯಿಗಳಿಗೆ ಪ್ರಸಿದ್ಧವಾದ ಸಸ್ಯೋದ್ಯಾನ, ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿದೆ. ಈ ಉದ್ಯಾನವನವನ್ನು ನಿರ್ಮಿಸಲು ಮೈಸೂರಿನ ಆಡಳಿತ ನಡೆಸುತ್ತಿದ್ದ ಹೈದರಾಲಿ ಸೂಚಿಸಿದ್ದನು. ಪ್ರಸಿದ್ಧ ಗಾಜಿನ ಮನೆಯನ್ನು ಹೊಂದಿದ್ದು ಪ್ರತಿ ವರ್ಷ ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ ಸಮಯದಲ್ಲಿ ಫಲ ಪುಷ್ಪ ಪ್ರದರ್ಶನ ಏರ್ಪಡಿಸಲಾಗುತ್ತದೆ. ಇದಲ್ಲದೇ ಮತ್ಸ್ಯಾಗಾರ ಮತ್ತು ಕೆರೆಯನ್ನು ಹೊಂದಿದ್ದು ಬೆಂಗಳೂರಿನಲ್ಲಿರುವ ಒಂದು ಪ್ರವಾಸಿಗರ ಆಕರ್ಷಣೆಯ ತಾಣವಾಗಿದೆ.

ಲಾಲ್ ಎಂದರೆ ಕೆಂಪು, ಬಾಗ್ ಎಂದರೆ ತೋಟ, ಒಟ್ಟಿಗೆ ಕರೆಯುವುದೇ ನಮ್ಮ ಲಾಲ್ ಬಾಗ್
ಲಲ-ಎದರ-ಕಪ-ಬಗ-ಎದರ-ತಟ-ಒಟಟಗ-ಕರಯವದ-ನಮ್ಮ ಲಾಲ್ ಬಾಗ್ಲಲ-ಎದರ-ಕಪ-ಬಗ-ಎದರ-ತಟ-ಒಟಟಗ-ಕರಯವದ-

೧೭೬೦ರಲ್ಲಿ ಹೈದರಾಲಿಯು ಈ ಸಸ್ಯೋದ್ಯಾನವನ್ನು ನಿರ್ಮಿಸಲು ಸೂಚಿಸಿದ್ದನು. ಆದರೆ ಇದನ್ನು ಈತನ ಮಗ ಟಿಪ್ಪು ಸುಲ್ತಾನ್ ಪೂರ್ಣಗೊಳಿಸಿದನು. ಹೈದರಾಲಿಯು ಆತನ ಅಧಿಕಾರಾವಧಿಯಲ್ಲಿ ಪ್ರಖ್ಯಾತಿಯನ್ನು ಪಡೆದಿದ್ದ ಮೊಘಲ್ ಉದ್ಯಾನಗಳ ಮಾದರಿಯಲ್ಲಿ ಈ ಉದ್ಯಾನವನ್ನು ನಿರ್ಮಿಸಲು ನಿರ್ಧರಿಸಿದ್ದನು. ಹೈದರಾಲಿ ಈ ಪ್ರಸಿದ್ಧ ಸಸ್ಯೋದ್ಯಾನಗಳ ಯೋಜನೆಯನ್ನು ನಿರ್ಮಿಸುವ ಯೋಜನೆ ಹಮ್ಮಿಕೊಂಡಿದ್ದನು ಮತ್ತು ಇವನ ಮಗ ಹಲವಾರು ದೇಶಗಳಿಂದ ಸಸ್ಯಗಳು ಮತ್ತು ಮರಗಳನ್ನು ಆಮದು ಮಾಡಿಕೊಂಡು ತೋಟಗಾರಿಕೆಯ ಸಂಪತ್ತನ್ನು ಹೆಚ್ಚಿಸಿದನು. ಹೈದರಾಲಿಯು ತೋಟಗಾರಿಕೆಯಲ್ಲಿ ಉತ್ತಮ ತಿಳಿವಳಿಕೆಹೊಂದಿದ್ದ ತಿಗಳ ಸಮುದಾಯದ ಜನರನ್ನು ಈ ಕೆಲಸಕ್ಕಾಗಿ ನೇಮಿಸಿದ್ದನು.
೧೮ನೇಯ ಶತಮಾನದಿಂದ ಲಾಲ್‌ಬಾಗ್ ಉದ್ಯಾನವನ್ನು ನಿರ್ಮಿಸಲು ಪ್ರಾರಂಭಿಸಲಾಗಿತ್ತು ಮತ್ತು ವರ್ಷಗಳ ನಂತರ ಭಾರತ ದ ಮೊದಲ ಹುಲ್ಲಿನ-ಗಡಿಯಾರ ಮತ್ತು ಈ ಉಪಖಂಡಗಳಲ್ಲಿದ್ದಂತಹ ಅಪರೂಪದ ಮರಗಳ ದೊಡ್ಡದಾದ ಸಂಗ್ರಹವನ್ನು ಹೊಂದಿತು. ೧೮೭೪ರಲ್ಲಿ, ಲಾಲ್‌ಬಾಗ್ ಪ್ರದೇಶವನ್ನು ಹೊಂದಿತ್ತು. ೧೮೮೯ರಲ್ಲಿ, ಪೂರ್ವ ಭಾಗಕ್ಕೆ ೩೦ ಎಕರೆ ಸೇರ್ಪಡೆಯಾಯಿತು. ೧೮೯೧ರಲ್ಲಿ ಕೆಂಪೆಗೌಡ ಗೋಪುರ ಹೊಂದಿರುವ ಬಂಡೆಯ ಜೊತೆಗೆ ೧೩ ಎಕರೆ ಮತ್ತು ೧೮೯೪ರಲ್ಲಿ ಹೆಚ್ಚುವರಿಯಾಗಿ ಪೂರ್ವದ ಬಂಡೆಯ ಕೆಳಗಿನ ೯೪ ಎಕರೆ ಸೇರಿಕೊಂಡು ಒಟ್ಟು ೧೮೮ ಹೊಂದಿತ್ತು.
ಗಾಜಿನ ಮನೆ ನಿರ್ಮಾಣಕ್ಕೆ ಲಂಡನ್ನಿನ ಕ್ರಿಸ್ಟಲ್ ಪ್ಯಾಲೇಸ್ ಮಾದರಿಯಾಗಿದ್ದು, ಇದಕ್ಕೆ ನವೆಂಬರ್ ೩೦ ೧೮೯೮ರಂದು ರಾಜಕುಮಾರ ಅಲ್ಬರ್ಟ್ ವಿಕ್ಟರ್ ಅಡಿಗಲ್ಲು ಹಾಕಿದರು. ಲಾಲ್‌ಬಾಗಿನ ನಂತರದ ಮೇಲ್ವಿಚಾರಕ ಜೇಮ್ಸ್ ಕ್ಯಾಮರಾನ್ ಇದನ್ನು ನಿರ್ಮಿಸಿದರು.

ಲಾಲ್‌ಬಾಗ್ ೨೪೦ ಎಕರೆ ಪ್ರದೇಶವನ್ನು ಹೊಂದಿರುವ ಉದ್ಯಾನವಾಗಿದ್ದು ದಕ್ಷಿಣ ಬೆಂಗಳೂರಿನಲ್ಲಿದೆ. ಹಲವಾರು ಸಂಖ್ಯೆಯಲ್ಲಿ ಪುಷ್ಪ ಪ್ರದರ್ಶನ ನಡೆಸುತ್ತಿದ್ದು, ಗಣರಾಜ್ಯ ದಿನದಂದು (ಜನವರಿ ೨೬) ವಿಶೇಷ ಪ್ರದರ್ಶನವಿರುತ್ತದೆ. ಈ ಉದ್ಯಾನವು ೧,೦೦೦ಕ್ಕಿಂತ ಹೆಚ್ಚಿನ ಫ್ಲೋರಾ ಜಾತಿಯ ಗಿಡಗಳನ್ನು ಹೊಂದಿದೆ. ಇದಲ್ಲದೇ ಉದ್ಯಾನವು ೧೦೦ಕ್ಕಿಂತ ಹೆಚ್ಚು ವರ್ಷ ವಯಸ್ಸಾದ ಮರಗಳನ್ನು ಹೊಂದಿದೆ.

ಉದ್ಯಾನವು ಬೆಂಗಳೂರಿನ ನಿರ್ಮಾತೃ ಕೆಂಪೆಗೌಡರ ಪ್ರತಿಮೆಯನ್ನು ಹೊಂದಿದೆ. ಉದ್ಯಾನವು ಪರ್ಷಿಯಾ, ಅಫಘಾನಿಸ್ತಾನ ಮತ್ತು ಫ್ರಾನ್ಸ್‌ನಿಂದ ತರಿಸಲ್ಪಟ್ಟ ಅಪರೂಪದ ಹಲವಾರು ಸಸ್ಯಗಳ ಜಾತಿಗಳನ್ನು ಹೊಂದಿದೆ. ನೀರಾವರಿಗಾಗಿ ಅನೇಕ ವಿಧವಾದ ವ್ಯವಸ್ಥೆ ಹೊಂದಿದ್ದು, ಉದ್ಯಾನವನ್ನು ಹುಲ್ಲುಹಾಸುಗಳು, ಹೂವಿನ ಪಾತಿಗಳು, ಕಮಲದ ಕೆರೆ ಮತ್ತು ಕಾರಂಜಿಗಳಿಂದ ತುಂಬಾ ಸದಭಿರುಚಿಯಿಂದ ವಿನ್ಯಾಸಗೊಳಿಸಲಾಗಿದೆ. ಹೆಚ್ಚಿನ ಎಲ್ಲಾ ದೇಶಗಳ ಹಳೆಯದಾದ ಮರಗಳನ್ನು ಗುರುತಿಸಲು ಸುಲಭವಾಗುವಂತೆ ಲೇಬಲ್‌ಗಳನ್ನು ಅಂಟಿಸಲಾಗಿದೆ. ಲಾಲ್‌ಬಾಗ್ ಬಂಡೆಯು ೩೦೦೦ ವರ್ಷ ಹಳೆಯದಾದ ಭೂಮಿಯ ಮೇಲಿರುವ ಬಂಡೆಯಾಗಿದೆ, ಇದು ಕೂಡ ಜನರಿಗೆ ಆಕರ್ಷಣೆಯ ತಾಣವಾಗಿದೆ.
ವಯಸ್ಸಾದವರಿಗೆ, ಮಕ್ಕಳಿಗೆ ಮತ್ತು ಅಂಗವಿಕಲರಿಗೆ ಲಾಲ್ ಬಾಗ್ ಸುತ್ತಲು, ‘ಎಲೆಕ್ಟ್ರಿಕ್ ಮೋಟಾರ್ ವ್ಯವಸ್ಥೆ’ ಇದೆ. ಒಂದು ಸುತ್ತಿಗೆ ೧೦೦/-ರೂ.ಟಿಕೆಟ್ ದರದ ಈ ವಾಹನ, ‘ಲಾಲ್ ಬಾಗ್ ಬೆಟ್ಟ’ದ ಬಳಿಯಿಂದ ಆರಂಭವಾಗಿ ‘ಗ್ಲಾಸ್ ಹೌಸ್’ ಮುಂಭಾಗದಿಂದ, ‘ಗುಲಾಬಿ ವನ ‘, ‘ಕೇದಿಗೆ ವನ’ವನ್ನು ಹಾದು, ‘ಲಾಲ್ ಬಾಗ್ ಕೆರೆಯ ಏರಿ’ಯ ಬಳಿ ನಿಲ್ಲುತ್ತದೆ. ಅಲ್ಲಿಂದ ಅತಿ ಹಳೆಯ ‘ಬೃಹದ್ ವೃಕ್ಷ’ಗಳ ಮುಖಾಂತರ ಲಾಲ್ ಬಾಗ್ ಮೇನ್ ಗೇಟ್ ಗೆ ಬಂದು ಅಲ್ಲಿಂದ ಪುನಃ ‘ಗ್ಲಾಸ್ ಹೌಸ್’ ತಲುಪಿ, ‘ಸ್ಟಾರ್ಟಿಂಗ್ ಜಾಗ’ವನ್ನು ತಲುಪುತ್ತದೆ. ಈ ವಾಹನದಲ್ಲಿ ‘ಗೈಡ್’ ಆಗಿ ಬರುವವರು, ಕನ್ನಡ, ಇಂಗ್ಲೀಷ್ ಭಾಷೆಗಳ ಜೊತೆಗೆ, ಸಾಕಷ್ಟು ಇತರ ಭಾರತೀಯ ಭಾಷೆಗಳ ಜ್ಞಾನ ಹೊಂದಿದ್ದು, ಲಾಲ್ ಬಾಗ್ ನ ಇತಿಹಾಸ, ವಿಶೇಷ ಸಸ್ಯಗಳು ಫಲ-ಪುಷ್ಪಗಳ ಬಗ್ಗೆ ಸಾಕಷ್ಟು ಜ್ಞಾನ ಹೊಂದಿರಬೇಕು. ಜನರಲ್ಲಿ ವಿವಿಧ ಬಗೆಯ ಹೂವು ಗಳ ಬಗ್ಗೆ ಪರಿಚಯಿಸಲು ಮತ್ತು ಸಸ್ಯ ಸಂರಕ್ಷಣೆಗೆ ಮತ್ತು ಗಿಡ ಬೆಳಸಲು ಸಾರ್ವಜನಿಕರಲ್ಲಿ ಆಸಕ್ತಿ ಉಂಟು ಮಾಡಲು ಪ್ರತಿವರ್ಷ ಪುಷ್ಫ ಪ್ರದರ್ಶನ ಏರ್ಪಡಿಸಲಾಗುತ್ತದೆ.

ಲಾಲ್ ಎಂದರೆ ಕೆಂಪು, ಬಾಗ್ ಎಂದರೆ ತೋಟ, ಒಟ್ಟಿಗೆ ಕರೆಯುವುದೇ ನಮ್ಮ ಲಾಲ್ ಬಾಗ್
‌ಲಾಲ್‌ಬಾಗ್‌

ಪ್ರತಿ ತಿಂಗಳ ಎರಡನೆಯ ಮತ್ತು ನಾಲ್ಕನೆಯ ವಾರಾಂತ್ಯದಲ್ಲಿ (ಶನಿವಾರ ಮತ್ತು ಭಾನುವಾರ)” ಜನಪದ ಜಾತ್ರೆ”ಯನ್ನು ನಡೆಸಲಾಗುತ್ತದೆ. ಇದನ್ನು ಕರ್ನಾಟಕ ಸರ್ಕಾರವು ಆಯೋಜಿಸುತ್ತದೆ. ಜನಪದ ಜಾತ್ರೆಯಲ್ಲಿ ಕರ್ನಾಟಕದ ಎಲ್ಲಾ ಭಾಗಗಳಿಂದಲು ಬಂದ ತಂಡಗಳು ಮುಖ್ಯವಾಗಿ ಜಾನಪದ ನೃತ್ಯ, ಹಾಡು ಮತ್ತು ನಾಟಕಗಳನ್ನು ಪ್ರದರ್ಶಿಸುತ್ತಾರೆ. ಮುಖ್ಯವಾಗಿ ಈ ಪ್ರದರ್ಶನವು ಕರ್ನಾಟಕದ ಸಾಂಸ್ಕೃತಿಕ ಜಾನಪದ, ಸಾಂಪ್ರದಾಯಿಕ ತೊಡುಗೆಗಳು ಮತ್ತು ಸಂಗೀತ ವಾದ್ಯಗಳನ್ನು ಪ್ರದರ್ಶಿಸಲಾಗುತ್ತದೆ.

‌ಲಾಲ್‌ಬಾಗ್‌ನಲ್ಲಿರುವ ಕೆಂಪೆಗೌಡ ಗೋಪುರ
ಉದ್ಯಾನದಲ್ಲಿರುವ ಪೆನಿನ್ಸುಲಾರ್ ನೈಸ್ ರಚನೆಯಾಗಿರುವ ಭೌಗೋಳಿಕ ಸ್ಮಾರಕವು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಸ್ಮಾರಕವನ್ನು ಭಾರತೀಯ ಸರ್ವೇಕ್ಷಣಾ ಇಲಾಖೆಯು ಲಾಲ್‌ಬಾಗ್ ಬೆಟ್ಟದಲ್ಲಿ ೩೦೦೦ ಸಾವಿರ ಮಿಲಿಯನ್ ವರ್ಷ ಹಳೆಯ ಪೆನಿನ್ಸುಲರ್ ನೈಸ್ ಬಂಡೆಯ ಮೇಲೆ ನಿರ್ಮಿಸಿದೆ. 2ನೇಯ ಕೆಂಪೆಗೌಡರ ನಾಲ್ಕು ಪ್ರತಿಮೆಯಲ್ಲಿ ಇದು ಒಂದಾಗಿದೆ. ಇದು ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಒಂದು ಚಿತ್ರದಲ್ಲಿ ಯಶ್ ಪ್ರಭಾಸ್.

ಒಂದು ಚಿತ್ರದಲ್ಲಿ ಯಶ್ ಪ್ರಭಾಸ್.

ರಾಷ್ಟ್ರಕೂಟರು

ರಾಷ್ಟ್ರ ಎಂಬುದು ಪ್ರಾಂತ್ಯವಾಚಕ ಪದ, ಮತ್ತೆ ಅದು ರಾಷ್ಟ್ರಕೂಟ ಆಯಿತು