ಕೋಲಾರ ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ಇಲ್ಲಿರುವ ಚಿನ್ನದ ಗಣಿಗಳು ಮತ್ತು ಚಿನ್ನದ ಗಣಿಗಾರಿಕೆಗೆ ಕೋಲಾರ ಜಿಲ್ಲೆ ಪ್ರಸಿದ್ಧ. ಕೋಲಾರ ನಗರ ಈ ಜಿಲ್ಲೆಯ ಕೇಂದ್ರಸ್ಥಾನ. ಕೋಲಾರ ಗಂಗರ ರಾಜಧಾನಿಯಾಗಿತ್ತು ಇದನ್ನು ಮೊದಲು ಕುವಲಾಲಪುರ ಅಂತಲೂ ಕರೆಯುತ್ತಿದ್ದರು. ಕಾಲ ಕ್ರಮೇಣ ಕೋಲಾರವಾಯಿತು. ಗಂಗರು ಕಟ್ಟಿಸಿದಂತ ಹಲವಾರು ಸ್ಥಳಗಳು ಕೋಲಾರದಲ್ಲಿ ಮತ್ತು ಕೋಲಾರ ಜಿಲ್ಲೆಯಲ್ಲಿವೆ ಅದರಲ್ಲೂ ಮುಖ್ಯವಾಗಿ ಗಂಗರು ಕಟ್ಟಿಸಿದ ಕೋಲಾರಮ್ಮ ದೇವಾಲಯ ಜಿಲ್ಲೆಯಲ್ಲಿಯೆ ಪ್ರಸಿದ್ದಿಯನ್ನು ಪಡೆದಿದೆ.
ಕೋಲಾರ ಜಿಲ್ಲೆಯು ರಾಜ್ಯದ ದಕ್ಷಿಣ ಭಾಗದಲ್ಲಿದೆ ಹಾಗು ರಾಜ್ಯದ ಪೂರ್ವ ಜಿಲ್ಲೆಯಾಗಿದೆ. ಕೋಲಾರ ಜಿಲ್ಲೆಯನ್ನು ಅನೇಕ ಹೆಸರುಗಳಿಂದ ಕರೆಯುತ್ತಿದ್ದರು. ಕೋಲಾಹಲ, ಕುವಲಾಲ, ಕೋಲಾಲ,ಇತ್ಯಾದಿ.ಮಧ್ಯ ಯುಗದಲ್ಲಿ ಕೋಲಾರನ್ನು ಕೋಲಾಹಲಪುರ ಎಂದು ಕರೆಯುತ್ತಿದ್ದರು, ಇದರ ಅರ್ಥ ಹಿಂಸಾತ್ಮಕ ನಗರ. ಕೋಲಾರ ಜಿಲ್ಲೆಯು ಅರೆ ಹೊಣ ಹಾಗು ಬರ ಪೀಡಿತ ಪ್ರದೇಶ. ಕೋಲಾರವನ್ನು ಚಿನ್ನದ ಗಣಿ ಎಂದು ಕರೆಯುತ್ತಾರೆ. ಕೋಲಾರ ರೇಷ್ಮೆ, ಹಾಲು ಹಾಗು ಬಂಗಾರಕ್ಕೆ ಹೆಸರುವಾಸಿಯಾಗಿದೆ. ಕರಗ ಹಾಗು ತೆಪ್ಪೋತ್ಸವವನ್ನು ತುಂಬ ಚೆನ್ನಾಗಿ ಆಚರಿಸುತ್ತಾರೆ.

ಕೋಲಾರದ ಪ್ರವಾಸದ ಸ್ಥಳಗಳೆಂದರೆ: ಅಂತರಗಂಗೆ, ಕೋಲಾರಮ್ಮ ದೇವಸ್ಥಾನ, ಸೋಮೇಶ್ವರ ದೇವಸ್ಥಾನ, ಮಾರ್ಕಂಡೇಯ ದೇವಸ್ಥಾನ, ತೇರಹಳ್ಳಿ. ಕೋಟಿಲಿಂಗೇಶ್ವರ, ಇತ್ಯಾದಿ. ಅಂತರಗಂಗೆ ಬೆಟ್ಟ ಕೋಲಾರದ ಮೊದಲ ಪ್ರವಾಸ ಸ್ಥಳವಾಗಿದೆ. ಅಂತರಗಂಗೆ ಬೆಟ್ಟವು ಶತಶ್ರುಂಗ ಪರ್ವತ ಶ್ರೇಣಿಯಲ್ಲಿದೆ.ಈ ಬೆಟ್ಟವು ಕೋಲಾರದಿಂದ ಮೂರು ಕಿ. ಮೀ. ದೂರದಲ್ಲಿದೆ.ಇದು ದೇವಸ್ಥಾನವಿರುವ ಪವಿತ್ರ ಸ್ಥಳವಾಗಿದೆ. ಅಂತರಗಂಗೆ ಬೆಟ್ಟವು ಅನನ್ಯ ನೈಸರ್ಗಿಕ ಸೌಂದರ್ಯದಿಂದ ಆಶೀರ್ವದಿಸಲಾಗಿದೆ.
ಇದು ಸುಮಾರು ೭೦ ಕಿ.ಮೀ. ಬೆಂಗಳೂರು ಹಾಗು ೩೨ ಕಿ.ಮೀ.ಕೋಲಾರ್ ಗೋಲ್ಡ್ ಫೀಲ್ಡ್ಇಂದ ದೂರವಿದೆ. ನಗರವು ಕರ್ನಾಟಕ ದಕ್ಷಿಣ ಮೈದಾನ ಪ್ರದೇಶದಲ್ಲಿ ಇದೆ.ಉತ್ತರ ಕೊಡಿಕನ್ನೂರ್ ಟ್ಯಾಂಕ್ ನಗರದ ನೀರು ಸರಬರಾಜು ಮುಖ್ಯ ಮೂಲವಾಗಿದೆ. ಈ ಬೆಟ್ಟವು ನದಿಯಿಂದ ೧೨೨೯ ಮೀಟರ್ ಎತ್ತರದಲ್ಲಿದೆ ಹಾಗು ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಿಂದ ೭೦ ಕಿ.ಮೀ ದೂರದಲ್ಲಿದೆ.ಈ ಬೆಟ್ಟವನ್ನು ಟ್ರೆಕ್ಕಿಂಗ್ ಹಾಗು ಸಾಹಸ ಮಾಡುವವರಿಗೆ ಸ್ವರ್ಗದಂತೆ ಕಾಣುತ್ತದೆ. ಅಂತರಗಂಗೆ ಒಂದು ಅನನ್ಯವಾದ ಬೆಟ್ಟವಾಗಿದೆ. ದಟ್ಟವಾದ ಕಾಡುಗಳಿಂದ ಮುಚ್ಚಲಾಗಿದೆ.ಇಲ್ಲಿನ ಗುಹೆಗಳು ಪ್ರಯಾಣಿಕರನ್ನು ಆಕರ್ಷಿಸುತ್ತದೆ ಹಾಗು ವಿವಿಧ ಗಾತ್ರಗಳಲ್ಲಿವೆ. ಅಲ್ಲಿನ ಆಹ್ಲಾದಕರ ಹವಾಮಾನ ಜನರ ಮನಸೆಲೆಯುತ್ತದೆ. ಪ್ರವಾಸಿಗರ ನೆಚ್ಚಿನ ಸ್ಥಳವಾಗಿದ್ದು ಮನಸನ್ನು ಉಲ್ಲಾಸಮಯವಾಗಿಸುತ್ತದೆ.
ಕೋಲಾರದ ಇತಿಹಾಸ :
ಅಂತರಗಂಗೆ ಬೆಟ್ಟವನ್ನು ದಕ್ಷಿಣ ಕಾಶಿ ಕ್ಷೇತ್ರ ಎಂದು ಕರೆಯಲಾಗುತ್ತದೆ. ದೇವಾಲಯದಲ್ಲಿ ಬಸವನ ಬಾಯಿಯಿಂದ ನಿರಂತರವಾಗಿ ಹರಿಯುವ ನೆಲದಡಿಯ ನೀರು ಮೀರುವ ಒಂದು ಕೊಳ ಇದೆ. ಪರ್ವತದ ಮೇಲಕ್ಕೆ ಕಡಿದಾದ, ಇಕ್ಕಟ್ಟಾದ ಹಾದಿ ಇಲ್ಲ.ಈ ಪರ್ವತದ ಸುತ್ತ ತೇರಹಳ್ಳಿ, ಪಾಪನಾಯಕನ ಹಳ್ಳಿ, ಕೆಂಚೇಗೌಡನ ಹಳ್ಳಿ ಮತ್ತು ಹಲವಾರು ಇತರದ ಏಳು ಹಳ್ಳಿಗಳಿವೆ. ಹುಣ್ಣಿಮೆಯ ದಿನದ ಸಂದರ್ಭದಲ್ಲಿ ಸಾಂಸ್ಕೃತಿಕ ಸಂಘದವರು ಸಾಂಸ್ಕೃತಿಕ ಚಟುವಟಿಕೆಗಳನ್ನು ಏರ್ಪಡಿಸುತ್ತಾರೆ. ಕರ್ನಾಟಕ ಹಳ್ಳಿಗರು ಸಾರಿಗೆ ಸೌಲಭ್ಯ ಬೆಟ್ಟದ ಹಳ್ಳಿಗಳಲ್ಲಿ ಮತ್ತು ಪ್ರವಾಸಿಗರಿಗೆ ವಾಸಿಸಲು ಒದಗಿಸಲು ಒಂದು ರಸ್ತೆ ಹಾಕಿತು. ಇಲ್ಲಿ ದರ್ಗ ಸಹ ಕಾಣಬಹುದು.

ಈ ಬೆಟ್ಟವು ಪರಶುರಾಮ ಹಾಗು ಜಮದಗ್ನಿಗೆ ಸಂಬಂಧಿಸಿದೆ. ಹಿಂದೂ ಪುರಾಣದ ಪ್ರಕಾರ ಕರ್ತವೀರ್ಯಾರ್ಜುನನನ್ನು ಪರಶುರಾಮನು ಕೊಂದಿದ್ದಾನೆ, ನಂತರ ಜಮದಗ್ನಿಯ ಸಾವು ಹಾಗು ರೇಣುಕಾ ಸ್ವಯಂ ಬಲಿ ಈ ಬೆಟ್ಟದ ಮೇಲೆ ನಡೆದಿದೆ. ಪರಶುರಾಮನು ಕ್ಷತ್ರಿಯ ವರ್ಗದವರನ್ನು ಕೊಲ್ಲಲು ಈ ಬೆಟ್ಟದ ಮೇಲೆ ಶಪಥ ಮಾಡಲಾಗಿದೆ. ಕಾಶಿ ವಿಶ್ವೇಶ್ವರ ದೇವಾಲಯದ ನೀರು ಬಸವನ ಬಾಯಿಂದ ಬರುವ ಅಂತರಗಂಗೆ ಎಂಬ ಜಲವೆಂದು ಭಕ್ತರ ನಂಬಿಕೆ.
ಕೋಲಾರ ಚಿಕ್ಕ ಜಿಲ್ಲೆಯಾಗಿದ್ದರು ಇಲ್ಲಿರುವ ಪ್ರವಾಸ ಸ್ಥಳಗಳ ಸೌಂದರ್ಯ ಹೇಳಲಾಗದು. ಇದರಿಂದ ಹಳೆಯ ಇತಿಹಾಸವನ್ನು ನೋಡಬಹುದು ಹಾಗು ಆ ಕಾಲದ ಶಾಸನಗಳು, ಅರಸರ ಬಗ್ಗೆ ಸಹ ತಿಳಿಯಬಹುದು. ಇಂತಹ ಪುಣ್ಯ ಕ್ಷೇತ್ರವು ನಮ್ಮ ನಾದೀನಲ್ಲಿ ನೆಲೆಸಿ, ನಮ್ಮ ನಾಡಿನ ಸಂಪತ್ತನ್ನು ಹೆಚ್ಚಿಸಿದೆ. ಕೋಲಾರ ಚಿನ್ನದ ಗಣಿ ಎಂದು ಹೆಸರುವಾಸಿಯಾಗಿದೆ ಹಾಗು ಈ ಜಿಲ್ಲೆಯಲ್ಲಿ ಅಂತರಗಂಗೆ ಬೆಟ್ಟ ಇರುವುದರಿಂದ ಹಾಗು ಕೋಲಾರಮ್ಮ ದೇವಸ್ಥಾನ, ಸೋಮನಾಥೇಶ್ವರ ದೇವಸ್ಥಾನ ಗಳಿಂದ ಅನೇಕ ವಿದೇಶಿ ಜನರು ಬರುತ್ತಾರೆ ಹಾಗು ಕೋಲಾರ ಒಂದು ಪ್ರವಾಸ ಸ್ಥಾನವಾಗಿದೆ. ಈ ಬೆಟ್ಟದಿಂದ ಕೋಲಾರದ ವಾತಾವರಣವು ವಿಶಾಲವಾಗಿ, ಅದ್ಭುತವಾಗಿದೆ.
ಐತಿಹಾಸಿಕವಾಗಿ ಕೋಲಾರವು ೨ ನೇ ಶತಮಾನದಲ್ಲಿಯೇ ಗಂಗರ ರಾಜಧಾನಿಯಾಗಿದ್ದು, ನಂತರ ಚೋಳರ ಆಳ್ವಿಕೆಗೆ ಒಳಪಟ್ಟಿದೆ. ೪ ರಿಂದ ೧೯ ನೇ ಶತಮಾನದವರೆಗೆ ಕದಂಬ, ಗಂಗ, ಪಲ್ಲವ, ಚೋಳ, ಚಾಲುಕ್ಯ, ಹೊಯ್ಸಳ, ರಾಷ್ಟ್ರಕೂಟ ಅರಸರು, ಮೈಸೂರಿನ ಅರಸರು, ಪಾಳೇಗಾರರು ಹೈದರಾಲಿ ಹಾಗೂ ಟಿಪ್ಪು ಸುಲ್ತಾನರ ಆಳ್ವಿಕೆಗೆ ಒಳಪಟ್ಟಿತ್ತು.

ಕೋಲಾರಮ್ಮ ದೇವಸ್ಥಾನ: ಪಟ್ಟಣದ ಪ್ರಧಾನ ದೇವತೆ ಕೋಲಾರಮ್ಮ ದೇವತೆ (ಎಂಟು ಶಸ್ತ್ರಸಜ್ಜಿತ ದುರ್ಗಾ ದೇವತೆಗೆ ಮತ್ತೊಂದು ಹೆಸರು). ಈ ದೇವಾಲಯವು ಗಂಗಾ ಕಾಲದ ಹಿಂದಿನದು ಮತ್ತು ಈ ದೇವಾಲಯದ ಮೇಲೆ ಶಿಖರವಿಲ್ಲ. ಸುಮಾರು 11 ನೇ ಶತಮಾನದಲ್ಲಿ, ಚೋಳರು ಹಲವಾರು ನವೀಕರಣಗಳನ್ನು ಮತ್ತು ಸೇರ್ಪಡೆಗಳನ್ನು ಮಾಡಿದರು. ದೇವಾಲಯವು ಸುಂದರವಾಗಿ ಕೆತ್ತಿದ ಪ್ರತಿಮೆಗಳು ಮತ್ತು ವಿನ್ಯಾಸಗಳನ್ನು ಲಭ್ಯವಿರುವ ಗ್ರಾನೈಟ್ ಕಲ್ಲುಗಳನ್ನು ಬಳಸಿ ಮಾಡಲಾಗಿದೆ. ಈ ದೇವಾಲಯವು ಅನೇಕ ವಿಷಯಗಳಲ್ಲಿ ವಿಶಿಷ್ಟವಾಗಿದೆ. ಇಲ್ಲಿರುವ ದೇವತೆಯನ್ನು ಎಷ್ಟು ಶಕ್ತಿಯುತವೆಂದು ಪರಿಗಣಿಸಲಾಗಿದೆಯೆಂದರೆ, ಆಕೆಯ ವಿಗ್ರಹವನ್ನು ಭಕ್ತರಿಗೆ ನೇರ ವೀಕ್ಷಣೆಗಾಗಿ ಇರಿಸಲಾಗಿಲ್ಲ ಆದರೆ ಗರ್ಭಗೃಹದ ಒಂದು ಮೂಲೆಯಲ್ಲಿ ಇಡಲಾಗಿದೆ. ಭಕ್ತರಿಗೆ ದೇವಿಯ ದರ್ಶನವಾಗಲು ವಿಗ್ರಹದ ಎದುರು ಕನ್ನಡಿಯನ್ನು ಇಡಲಾಗಿದೆ ಚೇಳು ಕಚ್ಚುವಿಕೆಯನ್ನು ಗುಣಪಡಿಸುತ್ತದೆ ಎಂದು ನಂಬಲಾದ ಕಲಾಭೈರವ ದೇವ (ಚೆಳನಿಯಮ್ಮ) ದೇವಾಲಯವೂ ಈ ದೇವಾಲಯದಲ್ಲಿದೆ. ಇಲ್ಲಿ ಪ್ರಾರ್ಥಿಸುವುದರಿಂದ ಒಬ್ಬ ವ್ಯಕ್ತಿಯನ್ನು ಚೇಳಿನ ಕಚ್ಚುವಿಕೆಯಿಂದ ರಕ್ಷಿಸಲಾಗುತ್ತದೆ ಎಂದು ನಂಬಲಾಗಿದೆ.
ಧನ್ಯವಾದಗಳು.
GIPHY App Key not set. Please check settings