in

ಭಾರತದ ಪ್ರೇಕ್ಷಣೀಯ ಸ್ಥಳಗಳು

ಭಾರತದ ಪ್ರೇಕ್ಷಣೀಯ ಸ್ಥಳಗಳು
ಭಾರತದ ಪ್ರೇಕ್ಷಣೀಯ ಸ್ಥಳಗಳು

ನಮ್ಮ ಭಾರತ ದೇಶವು ಶ್ರೀಮಂತ ಪರಂಪರೆಯನ್ನು ಹೊಂದಿದ್ದು, ತನ್ನದೇ ಆದ ವಾಸ್ತುಶಿಲ್ಪ ಶೈಲಿ, ವಿಭಿನ್ನವಾದ ಸಂಸ್ಕೃತಿ, ವಿವಿಧ ಭಾಷೆಗಳಿಂದ ದೇಶ, ವಿದೇಶಗಳಲ್ಲಿ ಜನಪ್ರಿಯತೆಯನ್ನು ಹೊಂದಿದೆ. ಇಲ್ಲಿನ ಪ್ರವಾಸೋದ್ಯಮವು ವಿಶ್ವ ವಿಖ್ಯಾತ ಹೊಂದಿದ್ದು, ವಿದೇಶಗಳಿಂದಲೂ ಹೆಗ್ಗಳಿಕೆ ಗಳಿಸಿದೆ.

ಜೋಧಪುರ
ನೀಲಿ ನಗರವೆನಿಸಿರುವ ಜೋಧಪುರಕ್ಕೆ ಜೈಪುರದಿಂದ ಹೆಚ್ಚು ದೂರವಿಲ್ಲ. ಈ ಸ್ಥಳಕ್ಕೆ ತನ್ನದೇ ಆದ ಕಥೆಯಿದೆ. ಮೇಲ್ಜಾತಿಯ ಬ್ರಾಹ್ಮಣ ಸಮುದಾಯದ ಜನರು ತಮ್ಮನ್ನು ಹಾಗೂ ತಮ್ಮ ಸಂಪ್ರದಾಯಗಳನ್ನು ಇತರರಿಗಿಂತ ಭಿನ್ನವಾಗಿ ತೋರಿಸಿಕೊಳ್ಳಲು ತಮ್ಮ ಮನೆಗಳಿಗೆ ನೀಲಿ ಬಣ್ಣದಿಂದ ಚಿತ್ರಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಈ ಸ್ಥಳವು ಇನ್ಸ್ಟಾಗ್ರಾಂ ಪುಟಕ್ಕೆ ಯೋಗ್ಯವಾದ ಸ್ಥಳವೆನಿಸಿದೆ.

ತಾಜ್ ಮಹಲ್
ಚಕ್ರವರ್ತಿ ಷಹಜಹಾನ್, ತನ್ನ ನೆಚ್ಚಿನ ಪತ್ನಿಯಾದ ಮುಮ್ತಾಜ್ ಳ ನೆನಪಿಗಾಗಿ ಈ ಸುಂದರವಾದ ಸಮಾಧಿಯನ್ನು ೧೬೪೮ ರಲ್ಲಿ ನಿರ್ಮಿಸಲಾಯಿತು. ಇದೊಂದು ಪ್ರೀತಿಯ ಪ್ರತೀಕದ ಸ್ಮಾರಕ ಎಂದೇ ಪ್ರಖ್ಯಾತಿಯನ್ನು ಪಡೆದಿದೆ. ದಿನನಿತ್ಯ ಸಾವಿರಾರು ಮಂದಿ ಪ್ರವಾಸಿ ಹಾಗು ಇತಿಹಾಸ ಪ್ರೇಮಿಗಳಿ ಭೇಟಿ ನೀಡುತ್ತಿರುತ್ತಾರೆ.

ವಾರಣಾಶಿ

ಭಾರತದ ಪ್ರೇಕ್ಷಣೀಯ ಸ್ಥಳಗಳು
ವಾರಣಾಶಿ

ಹಿಂದೂಗಳ ಪವಿತ್ರವಾದ ಯಾತ್ರಾ ಕೇಂದ್ರವೆಂದರೆ ವಾರಾಣಸಿ. ಈ ಸುಂದರವಾದ ಸ್ಥಳದಲ್ಲಿ ಕಾಶಿ ವಿಶ್ವನಾಥನಾಗಿ ಪರಮೇಶ್ವರನು ಲಿಂಗ ಸ್ವರೂಪಿಯಾಗಿ ನೆಲೆಸಿದ್ದಾನೆ. ಇದೊಂದು ಪವಿತ್ರವಾದ ಕ್ಷೇತ್ರ ಎಂದೇ ಹಿಂದೂಗಳು ನಂಬುತ್ತಾರೆ. ಜೀವನದಲ್ಲಿ ಒಮ್ಮೆಯಾದರು ಈ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಲೇಬೇಕು.

ಸತಾರಾ
ಕಡಲತೀರಗಳು ಮತ್ತು ಬಾಲಿವುಡ್ ಇವೆಲ್ಲ ಸೇರಿ ಮಹಾರಾಷ್ಟ್ರಕ್ಕೆ ಇನ್ನೂ ಹೆಚ್ಚಿನ ಮೆರುಗನ್ನು ನೀಡುತ್ತದೆ. ಅಲ್ಲದೆ ಇಲ್ಲಿ ಕೃಷ್ಣ ನದಿ ಮತ್ತು ಅದರ ಉಪನದಿ ವೆನ್ನಾ ಸಂಗಮದ ಕಡೆಗೆ ಒಳನಾಡಿಗೆ ಹೋದರೆ, ಶೀಘ್ರದಲ್ಲೇ ನಂಬಲಾಗದ ಕಾಸ್ ಪ್ರಸ್ಥಭೂಮಿಯಲ್ಲಿನ್ನು ಕಾಣಬಹುದಾಅಗಿದೆ.

ಕೆಂಪು ಕೋಟೆ, ನವದೆಹಲಿ
ನಮ್ಮ ಭಾರತ ದೇಶದ ರಾಜಧಾನಿಯಾದ ನವದೆಹಲಿಯಲ್ಲಿ ಹಲವಾರು ಪ್ರವಾಸಿ ತಾಣಗಳಿದ್ದು, ಅವುಗಳಲ್ಲಿ ಭವ್ಯವಾದ ಕೆಂಪು ಕೋಟೆಯು ಪ್ರವಾಸಿಗರಿಗೆ ಅದ್ಭುತವಾದ ಅನುಭವವನ್ನು ಉಂಟು ಮಾಡುತ್ತದೆ. ನಮ್ಮ ಭಾರತದ ಕೆಂಪು ಕೋಟೆಯನ್ನು ಕಾಣಲು ದೇಶ, ವಿದೇಶಗಳಿಂದಲೂ ಪ್ರವಾಸಿಗರು ದೆಹಲಿಗೆ ಭೇಟಿ ನೀಡಿದಾಗ ತಪ್ಪದೇ ಸಂದರ್ಶಿಸುತ್ತಾರೆ.

ಎಲ್ಲೋರಾ ಗುಹೆ, ಔರಂಗಬಾದ್
ಪ್ರಸಿದ್ಧವಾದ ಎಲ್ಲೋರಾ ಗುಹೆಗಳನ್ನು ೫ ರಿಂದ ೧೦ ನೇ ಶತಮಾನಗಳ ನಡುವಿನಲ್ಲಿ ನಿರ್ಮಿಸಿದ್ದಾರೆ ಎಂದು ನಂಬಲಾಗಿದೆ. ಇಲ್ಲಿ ಬೌದ್ಧ, ಜೈನ ಹಾಗು ಹಿಂದೂ ಧರ್ಮದ ದೇವಾಲಯಗಳನ್ನು ಕಾಣಬಹುದು. ಇಲ್ಲಿನ ಸುಂದರವಾದ ಗುಹಾಲಯಗಳು ತನ್ನದೇ ಆದ ವಾಸ್ತುಶಿಲ್ಪ ಶೈಲಿಯನ್ನು ಹೊಂದಿದ್ದು, ಅತ್ಯಾಕರ್ಷಕವಾಗಿದೆ.

ಅಂಡಮಾನ್ ಮತ್ತು ನಿಕೋಬಾರ್
ದ್ವೀಪಗಳ ಬಣ್ಣಗಳು ಮತ್ತು ಮಳೆಬಿಲ್ಲುಗಳು ಸಮುದ್ರ ಮಟ್ಟಕ್ಕೆ ಸೀಮಿತವಾಗಿಲ್ಲ. ಆದುದರಿಂದ ದೂರದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕರಾವಳಿಯಲ್ಲಿ, ಅಸಾಧಾರಣ ಹವಳದ ಬಂಡೆಯ ಪರಿಸರ ವ್ಯವಸ್ಥೆಯು ಪ್ರಪಂಚದಾದ್ಯಂತದ ಸಾವಿರಾರು ಜನರನ್ನು ಆಕರ್ಷಿಸುತ್ತದೆ.

ಅಮೇರ್ ಕೋಟೆ, ಜೈಪುರ
ಅಮೇರ್ ಅಥವಾ ಅಮೀರ್ ಕೋಟೆಯನ್ನು, ೧೫೯೨ ರಲ್ಲಿ ಮಹಾರಾಜ ಮಾನ್ ಸಿಂಗ್ ನಿರ್ಮಾಣ ಮಾಡಿಸಿದರು ಎಂದು ನಂಬಲಾಗಿದೆ. ಭಾರತದ ಜನಪ್ರಿಯ ತಾಣಗಳಲ್ಲಿ ಇದು ಕೂಡ ಒಂದು. ಈ ಕೋಟೆಯನ್ನು ಕಲಾತ್ಮಕ ಹಿಂದೂ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಪಿಂಕ್ ಸಿಟಿ ಎಂದೇ ಪ್ರಖ್ಯಾತಿ ಹೊಂದಿರುವ ಈ ತಾಣವು ಅನೇಕ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದೆ.

ಮಧುರೈ

ಭಾರತದ ಪ್ರೇಕ್ಷಣೀಯ ಸ್ಥಳಗಳು
ಮಧುರೈ

ಮಧುರೈ ಚೆನ್ನೈನಿಂದ ಸುಮಾರು 7 ತಾಸುಗಳ ರಸ್ತೆ ಮೂಲಕ ಪ್ರಯಾಣಿಸಿದಲ್ಲಿ ಸಿಗುವ ಒಂದು ಸಣ್ಣ ನಗರವಾಗಿದೆ. ಈ ಸ್ಥಳವು ವರ್ಣರಂಜಿತ ಹಾಗೂ ಸೌಂದರ್ಯತೆಯಿಂದ ಕೂಡಿದೆ. ಇಲ್ಲಿಯ ಪ್ರತಿಯೊಂದೂ ದೇವಾಲಯಗಳು ಹೊಳೆಯುವ ಬಣ್ಣಗಳ ಮಿಶ್ರಣದಿಂದ ಕೂಡಿದ್ದು, ಹಲವಾರು ಸಂಕೀರ್ಣಗಳನ್ನು ಹಲವಾರು ವರ್ಣರಂಜಿತ ಚಿತ್ರಗಳಿಂದ ಅಲಂಕರಿಸಲಾಗಿದೆ. ಒಮ್ಮೆ ಮಧುರೈನ ಪ್ರಾಚೀನ ಬೀದಿಗಳ ನಡುವೆ ಅಲೆದಾಡಿದರೆ, ಕಾಮನ ಬಿಲ್ಲಿನಂತೆ ಚಿತ್ರಿಸಿದ ಮೀನಾಕ್ಷಿ ಅಮ್ಮನ್ ದೇವಸ್ಥಾನಕ್ಕೆ ಭೇಟಿ ನೀಡಬಹುದು ಇದೆಲ್ಲವೂ ಕಣ್ಣಿಗೆ ಚಂದವಿದೆ.

ಬೀಚ್, ಗೋವಾ
ಗೋವಾ, ಸುಂದರವಾದ ಕಡಲತೀರಗಳಿಗೆ ನೆಲೆಯಾಗಿದೆ. ಪ್ರತಿಯೊಂದು ಬೀಚ್ ತನ್ನದೇ ಆದ ಆಕರ್ಷಣೆಗಳನ್ನು ಹೊಂದಿದೆ. ಗೋವಾದಲ್ಲಿ ಅಗೋಂಡಾ ಬೀಚ್ ಉತ್ತಮವಾದ ಆಯ್ಕೆಯಾಗಿದೆ. ವರ್ಷಾಂತ್ಯವನ್ನು ಆನಂದಿಸಲು ತಪ್ಪದೇ ಈ ಅದ್ಭುತವಾದ ರಾಜ್ಯಕ್ಕೆ ಪ್ರವಾಸಿ ಪ್ರೇಮಿಗಳು ಭೇಟಿ ನೀಡುತ್ತಾರೆ. ಇಲ್ಲಿ ಚರ್ಚ್, ಜಲಪಾತಗಳು, ಶಾಪಿಂಗ್ ಗಳನ್ನು ಕೂಡ ಆನಂದಿಸಬಹುದು.

ಕಚ್
ಬಹು-ಸಾಂಸ್ಕೃತಿಕ ಮತ್ತು ಬಹು -ವರ್ಣಮಯ ಇ. ಕಚ್
ಬಹು-ಸಾಂಸ್ಕೃತಿಕ ಮತ್ತು ಬಹು -ವರ್ಣಮಯ ಇವೆರಡನ್ನೂ ತನ್ನಲ್ಲಿ ಹೊಂದಿರುವ ಕಚ್ ಗುಜರಾತಿನ ಅತ್ಯಂತ ಆಕರ್ಷಣೀಯ ಜಿಲ್ಲೆಗಳಲ್ಲೊಂದೆನಿಸಿದೆ. ಕಚ್ ವಿಸ್ತಾರವಾದ ಬಿಳಿ ಮರುಭೂಮಿಯ ನೆಲೆಯಾಗಿದೆ. ಮತ್ತು ಈ ಬಿಳಿ ಮರುಭೂಮಿಯಲ್ಲಿ ಪ್ರತೀ ವರ್ಷ ನವೆಂಬರ್ ತಿಂಗಳಿನಿಂದ ಫ಼ೆಬ್ರವರಿ ತಿಂಗಳಗಳವರೆಗೆ ನಡೆಸಲಾಗುವ ರಾನ್ ಉತ್ಸವವು ಅತ್ಯಂತ ಹೆಸರುವಾಸಿಯಾಗಿದೆ ಅಲ್ಲದೆ ಇಲ್ಲಿ ಮನಮೋಹಕ ಸಾಂಸ್ಕೃತಿಕ ವೈಭವವನ್ನು ಮತ್ತು ವಿಸ್ಮಯಕಾರಿ ಇತಿಹಾಸವನ್ನು ಈ ವೇಳೆ ಪ್ರದರ್ಶಿಸಲಾಗುತ್ತದೆ

ಪಾಂಡಿಚೇರಿ
ಹಳೆಯ ಫ್ರೆಂಚ್ ವಾಸ್ತುಶಿಲ್ಪವನ್ನು ಎತ್ತಿ ಹಿಡಿಯುವ ಪಾಂಡಿಚೆರಿ ನೀಲಿಬಣ್ಣದ ಚಿತ್ರದಂತೆ ಸುಂದರವಾಗಿದೆ. ರಸ್ತೆಮಾರ್ಗಗಳು ಸ್ಪಷ್ಟವಾಗಿ ಚಿತ್ರಿಸಿದ ಮನೆಗಳಿಂದ ಕೂಡಿದ್ದು, ಅವುಗಳು ಪಾದಾಚಾರಿಗಳು ಮತ್ತು ಆರೋಹಿಗಳಿಂದ ಕೂಡಿರುತ್ತದೆ. ಈ ಹಿನ್ನೆಲೆಯು ಸೇರಿದಂತೆ ಆಕಾಶ ನೀಲಿ ಸಮುದ್ರದ ಸುಂದರ ನೋಟವು ಸುಂದರ ನಗರಕ್ಕೆ ಇನ್ನೂ ಹೆಚ್ಚಿನ ಮೆರುಗನ್ನು ನೀಡುತ್ತದೆ.

ಲೇಹ್ ಲಡಾಖ್
ಲೇಹ್ ಮತ್ತು ಲಡಾಖ್‌ಗೆ ಹೋಗುವುದು ಈ ಪಟ್ಟಿಯಲ್ಲಿರುವ ಬೇರೆ ಸ್ಥಳಗಳಿಗಿಂತ ಹೆಚ್ಚಿನ ಪರಿಶ್ರಮ ಬೇಕಾಗಬಹುದು , ಆದರೆ ಪ್ರತಿಫಲವು ಅಷ್ಟೇ ಪ್ರವಾಸಕ್ಕೆ ಯೋಗ್ಯವಾದುದಾಗಿದೆ. ಸಮುದ್ರ ಮಟ್ಟದಿಂದ 4,000 ಮೀಟರ್ ಎತ್ತರದಲ್ಲಿರುವ ಲೇಹ್ ಮತ್ತು ಲಡಾಖ್‌ಗೆ ಹೋಗುವ ದಾರಿಯಲ್ಲಿ, ಹಿಮದಿಂದ ಆವೃತವಾದ ಹಿಮಾಲಯದ ಮಧ್ಯೆ ಬೀಸುತ್ತಿರುವ ಮಳೆಬಿಲ್ಲುಗಳು ಧ್ವಜಗಳಂತೆ ಪ್ರವಾಸಿಗರನ್ನು ಸ್ವಾಗತಿಸುತ್ತದೆ. ಇಷ್ಟೇ ಅಲ್ಲದೆ ಇಲ್ಲಿ ಪ್ರಸಿದ್ದ ಮಠಗಳು ಮತ್ತು ಪ್ರಾರ್ಥನೆ ಮಾಡುವ ಸ್ಥಳಗಳು ದಾರಿಯುದ್ದಕ್ಕೂ ಇದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ನಕುಲ ಸಹದೇವ

ಅಶ್ವಿನಿ ದೇವತೆಗಳ ವರಪ್ರಸಾದದಲ್ಲಿ ಹುಟ್ಟಿದ ಅವಳಿಗಳು ನಕುಲ ಸಹದೇವ

ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡ ಮತ್ತು ದಿವ್ಯಶ್ರೀ ರವರ ಮುದ್ದು ಮಗಳು ಹೇಗಿದ್ದಾಳೆ ನೋಡಿ

ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡ ಮತ್ತು ದಿವ್ಯಶ್ರೀ ರವರ ಮುದ್ದು ಮಗಳು ಹೇಗಿದ್ದಾಳೆ ನೋಡಿ