in

ದ್ರೌಪದಿ ಐವರು ಪತಿಯರನ್ನು ಪಡೆದೆದಿದ್ದು ಹೇಗೆ?

ದ್ರೌಪದಿ ಐವರು ಪತಿಯರನ್ನು ಪಡೆದೆದಿದ್ದು ಹೇಗೆ
ದ್ರೌಪದಿ ಐವರು ಪತಿಯರನ್ನು ಪಡೆದೆದಿದ್ದು ಹೇಗೆ

ಈಗಲೂ ಬಹುಪತಿತ್ವ ಇದೆ. ಒಬ್ಬಾಕೆಯನ್ನು ಹಲವು ಮಂದಿ ಸಹೋದರರು ಮದುವೆಯಾಗುವ ಪದ್ಧತಿ ಭಾರತದಲ್ಲಿ ಮೊದಲಿನಿಂದಲೂ ಇತ್ತು. ವಿಶೇಷವಾಗಿ, ಹಿಮಾಲಯದ ಟಿಬೆಟ್‌ನ ಕೆಲವು ಭಾಗಗಳಲ್ಲಿ, ಹಿಮಾಚಲ ಪ್ರದೇಶದ ಕಿನ್ನೌರ್‌- ಸ್ಪಿಟಿ ವಲಯದಲ್ಲಿ ಈ ಪದ್ಧತಿ ಇತ್ತು, ಈಗಲೂ ಕೆಲವು ಕಡೆ ಉಳಿದುಕೊಂಡಿದೆ. ಇಲ್ಲಿ ಹೆಣ್ಣು ಶಿಶುಗಳ ಪ್ರಮಾಣ ತುಂಬಾ ಕಡಿಮೆ. ಹೀಗಾಗಿ ಅಲ್ಲಿ ಗಂಡಸರ ಸಂಖ್ಯೆ ಹೆಚ್ಚಾಯಿತು. ಮದುವೆಗೆ ಹುಡುಗಿಯರು ಸಿಗಲಿಲ್ಲ. ಆಗ ಮನೆಯ ಹಿರಿಯಣ್ಣನಿಗೆ ಮದುವೆ ಮಾಡಿ ತರುವ ಹೆಣ್ಣೇ ಉಳಿದ ಸಹೋದರರಿಗೂ ಪತ್ನಿ ಎನ್ನುವ ರೂಢಿ ಹುಟ್ಟಿಕೊಂಡಿತು ಎಂದು ಸಮಾಜ ಶಾಸ್ತ್ರಜ್ಞರು ಹೇಳುತ್ತಾರೆ.

ಹಲವು ಸಹೋದರರಿಗೆ ಹಲವು ಪತ್ನಿಯರಿದ್ದರೆ, ಕುಟುಂಬದ ಆಸ್ತಿ ಒಡೆದು ಚೂರಾಗುವ ಆತಂಕ ಇರುತ್ತದೆ. ಪತ್ನಿ ಒಬ್ಬಳೇ ಆಗಿದ್ದರೆ ಆಗ ಮನೆ ಒಡೆಯುವ ಸಮಸ್ಯೆಯೇ ಇರುವುದಿಲ್ಲ. ಕುಂತಿ ಕೂಡ ದ್ರೌಪದಿ ಐವರ ಮಡದಿಯಾಗಲಿ ಎಂದದ್ದು ಪಾಂಡವರ ಒಗ್ಗಟ್ಟು ಒಡೆಯದಿರಲಿ ಎನ್ನುವ ಕಾರಣಕ್ಕಾಗಿಯೇ. ನೇಪಾಳದ ರಾಜೋ ವರ್ಮಾ ಎಂಬಾಕೆ ಮಹಿಳೆ ಐವರು ಗಂಡಂದಿರನ್ನು ಹೊಂದಿದ್ದು ಇವರೈವರೂ ಸಹೋದರರು. ಇವರ ನಡುವೆ ಜಗಳವಾಗಲೀ, ಅಸೂಯೆಯಾಗಲೀ ಇಲ್ಲ. ಅತ್ಯಂತ ಅಚ್ಚುಕಟ್ಟಾಗಿ ಹೊಂದಿಕೊಂಡಿರುವ ಇವರು ಅನೇಕ ಮಾನಶಾಸ್ತ್ರಜ್ಞರಿಗೂ ಅಧ್ಯಯನಕ್ಕೆ ವಸ್ತುವಾಗಿದ್ದಾರೆ.

ದ್ರೌಪದಿಗೆ ಹಿಂದಿನ ಜನ್ಮದ ಶಿವನ ವರ : 

ಆಕೆ ಒಬ್ಬಳು ಮುನಿಪುತ್ರಿ. ತನಗೆ ಮದುವೆಯಾಗದೆ ಇರುವುದರಿಂದ ಬೇಸರಗೊಂಡು ಮಹಾದೇವನನ್ನು ಕುರಿತು ತಪಸ್ಸು ಮಾಡುತ್ತಾಳೆ. ಶಿವ ಪ್ರತ್ಯಕ್ಷನಾದಾಗ ‘ಪತಿಂದೇಹಿ’ ಎಂದು ಐದು ಬಾರಿ ಕೇಳುತ್ತಾಳೆ. ಹಾಗೇ ಮಹಾಶಿವ ಆಕೆಗೆ ಐವರು ಗಂಡಂದಿರನ್ನು ಮುಂದಿನ ಜನ್ಮದಲ್ಲಿ ಕರುಣಿಸುತ್ತಾನೆ.

ಮುಂದಿನ ಜನ್ಮದಲ್ಲಿ ಅಗ್ನಿಕುಂಡದಲ್ಲಿ ಜನಿಸಿದ ದ್ರೌಪದಿ :

ದ್ರೌಪದಿ ಐವರು ಪತಿಯರನ್ನು ಪಡೆದೆದಿದ್ದು ಹೇಗೆ?
ಅಗ್ನಿಕುಂಡದಲ್ಲಿ ಜನಿಸಿದ ದ್ರೌಪದಿ

ಆಕೆಗೆ ಕೃಷ್ಣೆ ಎಂಬ ಹೆಸರೂ ಇದೆ. ಕೃಷ್ಣಾ ಎಂದರೆ ಕಪ್ಪು ವರ್ಣದವಳು. ಈಕೆಯ ಮೈಬಣ್ಣ ಕಪ್ಪು. ಕಪ್ಪಿನಲ್ಲಿ ಕಾಮನಬಿಲ್ಲಿನ ಎಲ್ಲ ಏಳು ಬಣ್ಣಗಳೂ ವಿಲೀನವಾಗುತ್ತವೆ ಎಂಬುದನ್ನು ನೀವು ತಿಳಿದಿರಬಹುದು. ಹಾಗೇ ಈ ಕೃಷ್ಣೆಯಲ್ಲಿ ಪಾಂಡವರು ವಿಲೀನರಾಗುತ್ತಾರೆ. ಪಾಂಡವರು ಪಂಚಭೂತಗಳ ಪ್ರತೀಕ. ಯಮಪುತ್ರ ಧರ್ಮರಾಯ, ಇಂದ್ರಪುತ್ರ ಅರ್ಜುನ, ವಾಯುಪುತ್ರ ಭೀಮ, ಅಶ್ವಿನಿ ದೇವತೆಗಳ ಮಕ್ಕಳಾದ ನಕುಲ ಸಹದೇವರ ದೇವಾಂಶ ಸಂಭೂತರು ಹಾಗೂ ಪೃಥ್ವಿ, ನೀರು, ಗಾಳಿ, ಆಕಾಶ, ಬೆಂಕಿ ಎಂಬ ಐದು ಪಂಚಭೂತಗಳ ಅಂಶದಿಂದ ಜನಿಸಿದವರು. ಪಂಚಭೂತಗಳು ಯಾವಾಗಲೂ ಆದಿಶಕ್ತಿಯ ಅಧೀ. ಇದನ್ನೇ ದ್ರೌಪದಿಯ ಸಂಸಾರ ಪ್ರತಿನಿಧಿಸುವುದು.

ವ್ಯಾಸ ಭಾರತದಲ್ಲಿ ಅರ್ಜುನ ಗೆದ್ದು ತಂದ ಹೆಣ್ಣನ್ನು ನೋಡಿ ಉಳಿದ ನಾಲ್ವರೂ ಪಾಂಡವರು ಮೋಹಿತರಾಗುತ್ತಾರೆ. ಇದನ್ನು ಗಮನಿಸಿದ ತಾಯಿ ಕುಂತಿದೇವಿ, ದ್ರೌಪದಿಯ ಕಾರಣದಿಂದ ಪಾಂಡವರಲ್ಲಿ ಒಡಕು ಸೃಷ್ಟಿಯಾಗುವುದು ಬೇಡ ಎಂಬ ಕಾರಣದಿಂದ ದ್ರೌಪದಿ ಐವರ ಹೆಂಡತಿಯಾಗಲಿ ಎಂದು ಹೇಳಿ ಆಕೆಯ ಮನವೊಲಿಸುತ್ತಾಳೆ. ಮರುದಿನ, ಪರಿಣಯದ ಸಂದರ್ಭದಲ್ಲಿ ಐವರೂ ಪಾಂಡವರು ಮದುಮಕ್ಕಳಾಗಿ ಅಲಂಕೃತರಾಗಿ ಹಸೆಮಣೆಗೆ ಬಂದುದನ್ನು ನೋಡಿ ದ್ರುಪದ ರಾಜ ಕಂಗಾಲಾಗುತ್ತಾನೆ. ಇದು ಅಸಹ್ಯ ಕ್ರಮ, ಇದು ಸಾಧ್ಯವಿಲ್ಲ ಎನ್ನುತ್ತಾನೆ. ಆಗ ಅಲ್ಲಿಗೆ ಮಹರ್ಷಿಗಳಾದ ವೇದವ್ಯಾಸರು ಆಗಮಿಸಿ, ಒಬ್ಬಾಕೆಯನ್ನು ಐವರೂ ಮದುವೆಯಾಗುವುದು ರೂಢಿಯಲ್ಲಿದೆ, ಇದು ಶಾಸ್ತ್ರಸಮ್ಮತ, ಇದಕ್ಕೆ ಅಂಜಬೇಕಿಲ್ಲ ಎಂದು ಘೋಷಿಸುತ್ತಾರೆ. ವೇದವ್ಯಾಸರು ಹೇಳಿದ ಬಳಿಕ ಲೋಕವೇ ಇದನ್ನು ಒಪ್ಪಿಕೊಳ್ಳುತ್ತದೆ. ಇದಕ್ಕೆ ಅವರು ಒಂದು ಪೂರ್ವಜನ್ಮದ ಕತೆಯನ್ನೂ ಹೇಳುತ್ತಾರೆ.

ದ್ರೌಪದಿ ಐವರು ಪತಿಯರನ್ನು ಪಡೆದೆದಿದ್ದು ಹೇಗೆ?
ಪಾಂಡವರು ಮತ್ತು ದ್ರೌಪದಿ ( ಪ್ರಮುಖ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಯ ಪಾತ್ರಧಾರಿಗಳು)

ಮಹಾಭಾರತದಲ್ಲಿ ಅರಗಿನ ಅರಮನೆಯಲ್ಲಿ ಸುಟ್ಟುಹೋಗದೆ ಪಾರಾದ ಪಾಂಡವರು, ಕುಂತಿಯ ಸಮೇತ ಏಕಚಕ್ರನಗರದಲ್ಲಿ ವಾಸಿಸುತ್ತಾರೆ. ಅಲ್ಲಿಗೆ ದ್ರೌಪದಿಯ ಸ್ವಯಂವರದ ಸುದ್ದಿ ಬರುತ್ತದೆ. ಐವರೂ ಪಾಂಡವರು ಬ್ರಾಹ್ಮಣ ವೇಷದಿಂದ ಅಲ್ಲಿಗೆ ಧಾವಿಸುತ್ತಾರೆ. ಸ್ವಯಂವರದಲ್ಲಿ ಎಲ್ಲ ಕ್ಷತ್ರಿಯರೂ ಸೇರುತ್ತಾರೆ. ಧುರ್ಯೋಧನ, ಕರ್ಣ ಮೊದಲಾದವರೂ ಅಲ್ಲಿಗೆ ಬಂದಿರುತ್ತಾರೆ. ಆದರೆ ಅವರೆಲ್ಲಾ ಬಿಲ್ಲನ್ನು ಎತ್ತಿ ಬಾಣ ಜೋಡಿಸಿ ಮತ್ಸ್ಯಯಂತ್ರ ಛೇದನ ಮಾಡಲಾಗದೆ ಸೋಲುತ್ತಾರೆ. ಆಗ ಮಹಾರಾಜ ದ್ರುಪದ, ಕ್ಷತ್ರಿಯರಲ್ಲದೆ ಇತರರೂ ಈ ಪ್ರಯತ್ನ ಮಾಡಬಹುದು ಎಂದು ಘೋಷಿಸುತ್ತಾನೆ. ಆಗ ಅರ್ಜುನ ಬಿಲ್ಲಿಗೆ ಬಾಣ ಜೋಡಿಸಿ ಲೀಲಾಜಾಲವಾಗಿ ಮತ್ಸ್ಯಯಂತ್ರವನ್ನು ಭೇದಿಸುತ್ತಾನೆ. ನಂತರ ಅರ್ಜುನ ದ್ರೌಪದಿಯನ್ನು ಕರೆದುಕೊಂಡು ಬಂದು, ಮನೆಯೊಳಗಿದ್ದ ತಾಯಿಗೆ, ಅಮ್ಮಾ ಭಿಕ್ಷೆ ತಂದಿದ್ದೇವೆ ಅನ್ನುತ್ತಾನೆ. ಆಗ ಕುಂತಿ ಐವರೂ ಹಂಚಿಕೊಳ್ಳಿ ಎನ್ನುತ್ತಾಳೆ. ತಾಯಿಯ ಮಾತನ್ನು ಪಾಲಿಸಲು ಪಾಂಡವರು ಐವರೂ ಆಕೆಯನ್ನು ಮದುವೆಯಾಗುತ್ತಾರೆ.

ಶಿವನಿಂದ ಸಿಕ್ಕಿರುವ ವರ ಆಗಿರುತ್ತದೆ ಅಂತ ಆತನಿಗೆ ಹೇಳುತ್ತಾರೆ. ಇದನ್ನು ಹೇಳಿದ ಮೇಲೆ ದ್ರುಪದ ಕೂಡ ಮದುವೆಗೆ ಒಪ್ಪುತ್ತಾನೆ. ಇದಾದ ನಂತರ ಇವರ ಮದುವೆ ಕಾರ್ಯಗಳು ಶುರು ಆಗುತ್ತದೆ. ಈ ಒಂದು ಸಮಯದಲ್ಲಿ ಯುದಿಷ್ಟರ ಜೊತೆಗೆ ಮದುವೆ ಆಗುತ್ತದೆ. ಆಮೇಲೆ ಆಕೆಯು ತನ್ನ ಪತ್ನಿ ಧರ್ಮವನ್ನು ನಿಭಾಯಿಸುತ್ತಾಳೆ. ಅದೇ ಮುಂದಿನ ದಿನ ಭೀಮನ ಜೊತೆಗೆ ಮದುವೆ ಆಗುತ್ತದೆ. ಆತನ ಜೊತೆಗೆ ಕೂಡ ಪತ್ನಿ ಧರ್ಮವನ್ನು ನಿಭಾಯಿಸುತ್ತಾರೆ. ಆದಾದ ಮೇಲೆ ಅರ್ಜುನ ನಕುಲ ಸಹದೇವ ಓದೊಂದಾಗಿ ಮದುವೆ ಆಗುತ್ತಾರೆ ಅವರ ಜೊತೆಗೆ ಕೂಡ ದ್ರೌಪದಿ ಪತ್ನಿ ಧರ್ಮವನ್ನು ಬಿಟ್ಟು ಕೊಡುವುದಿಲ್ಲ ಚೆನ್ನಾಗಿ ನಿಭಾಯಿಸುತ್ತಾಳೆ ಇನ್ನೂ ಇದೆಲ್ಲವೂ ಹೇಗೆ ಸಾಧ್ಯ ಅಂತ ನೀವು ಕೇಳಬಹುದು. ಅಂದ್ರೆ ಶಿವನಿಂದ ದ್ರೌಪದಿಗೆ ಇನ್ನೊಂದು ವರ ಇರುತ್ತದೆ. ಇವಳು ತನ್ನ ಪತ್ನಿ ಧರ್ಮವನ್ನು ನಡೆಸಿದಂತಹ ಮಾರನೆಯ ದಿನ ಸ್ನಾನ ಮಾಡಿದ ನಂತರ ಈಕೆಗೆ ಮತ್ತೆ ಕನ್ಯತ್ವ ಬರುತ್ತದೆ. ಈಕೆಯೂ ಮತ್ತೆ ಮತ್ತೆ ಕನ್ಯೆ ಆಗುತ್ತಾಳೆ ಇದರಿಂದ ಯಾರಿಗೂ ಮೋಸ ಆಗುವ ಸಾಧ್ಯತೆ ಇರುವುದಿಲ್ಲ ಅಂತ ಹೇಳಬಹುದು. ಈ ರೀತಿ ದ್ರೌಪದಿ ತನ್ನ ಐದು ಗಂಡಂದಿರ ಜೊತೆಗೆ ತನ್ನ ಪತ್ನಿ ಧರ್ಮವನ್ನು ನಿಭಾಯಿಸುತ್ತಾಳೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಬೇಳೆಕಾಳುಗಳನ್ನು ತಿನ್ನುವುದರಿಂದ ಏನು ಪ್ರಯೋಜನ

ಬೇಳೆಕಾಳುಗಳನ್ನು ತಿನ್ನುವುದರಿಂದ ಏನು ಪ್ರಯೋಜನ?

ನಮ್ಮ ನೆಚ್ಚಿನ ಬೇಬಿ ಅಂದರೆ ನಟಿ ಲಕ್ಷ್ಮಿ ಹುಟ್ಟಿದ ಹಬ್ಬ

ಇಂದು ನಮ್ಮ ನೆಚ್ಚಿನ ಬೇಬಿ ಅಂದರೆ ನಟಿ ಲಕ್ಷ್ಮಿ ಹುಟ್ಟಿದ ಹಬ್ಬ