in

ಲಕ್ಷಿ ದೇವಿ ಜನಿಸಿದ್ದು ಹೇಗೆ? ಸಮುದ್ರ ಮಂಥನದಲ್ಲಿ ಲಕ್ಷ್ಮೀದೇವಿಯ ಜನನ ಹೇಗಾಯಿತು?

ಲಕ್ಷಿ ದೇವಿ ಜನಿಸಿದ್ದು ಹೇಗೆ? ಸಮುದ್ರ ಮಂಥನದಲ್ಲಿ ಲಕ್ಷ್ಮೀದೇವಿಯ ಜನನ ಹೇಗಾಯಿತು?

ಹಿಂದೂ ಧರ್ಮದಲ್ಲಿ ಕ್ಷೀರಸಮುದ್ರವನ್ನು ಕಡೆದ ಘಟನೆ ಪುರಾಣಗಳಲ್ಲಿ ಒಂದು ಅತ್ಯಂತ ಪ್ರಸಿದ್ದ ಪ್ರಸಂಗ ಹಾಗೂ ಇದನ್ನು ಅತ್ಯಂತ ವೈಭವದಿಂದ ೧೨ ವರ್ಷಗಳಿಗೊಮ್ಮೆ ಕುಂಭಮೇಳ ಎಂಬ ಹಬ್ಬವಾಗಿ ಆಚರಿಸಲಾಗುತ್ತದೆ.

ದೀಪಾವಳಿ ಸಂಭ್ರಮ ಆಚರಿಸುವ ಸಂದರ್ಭದಲ್ಲಿ, ದೀಪಾವಳಿಯ ಕಾರ್ತಿಕ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಅಮಾವಾಸ್ಯೆ ವೇಳೆ ಸಮುದ್ರ ಮಂಥನದ ವೇಳೆ ಲಕ್ಷ್ಮಿ ಜನಿಸಿದಳು. ಇದೇ ಕಾರಣಕ್ಕೆ ಅಂದು ಮಾತೆ ಲಕ್ಷ್ಮಿಯನ್ನು ಪೂಜಿಸಲಾಗುವುದು. ಸಂಪತ್ತಿನ ಅಧಿದೇವತೆಯಾಗಿರುವ ಲಕ್ಷ್ಮಿ ಪೂಜಿಸುವುದರಿಂದ ಅಂದು ಐಶ್ವರ್ಯ ವೃದ್ಧಿಯಾಗಿ ಮನೆಯಲ್ಲಿ ಸುಖ ಸಂಪತ್ತು ಹೆಚ್ಚುತ್ತದೆ. ಲಕ್ಷ್ಮಿ ಎಲ್ಲಿರುತ್ತಾಳೋ ಅಲ್ಲಿ ಹಣದ ಮತ್ತು ಆಹಾರದ ಕೊರತೆ ಇರುವುದಿಲ್ಲ. ಇದೇ ಕಾರಣಕ್ಕೆ ನಾಡಿನೆಲ್ಲೆಡೆ ಭಕ್ತಿಯಿಂದ ಲಕ್ಷ್ಮಿ ಪೂಜೆ ಮಾಡಲಾಗುವುದು. ಇನ್ನು ಈ ಸಮುದ್ರ ಮಂಥನದ ವೇಳೆ ಲಕ್ಷ್ಮಿಗಿಂತ ಮುಂಚೆ ಜನಿಸಿದ್ದು ಆಕೆಯ ಅಕ್ಕ ಅಲಕ್ಷ್ಮಿ ಈಕೆ ಇದ್ದೆಲ್ಲೆಡೆ ಬಡತನ ಇರುತ್ತದೆ ಎಂಬ ನಂಬಿಕೆ ಇದೆ.

ಸಾಗರ ಮಂಥನ ಸಮಯದಲ್ಲಿ 14 ರತ್ನಗಳು ಹೊರಹೊಮ್ಮಿದವು ಎಂದು ಹೇಳಲಾಗುತ್ತದೆ. ಅದೇ ರೀತಿ ಈ 6 ದೇವಾನೂ ದೇವತೆಗಳು ಕೂಡ ಸಮುದ್ರ ಮಂಥನದಲ್ಲಿ ಜನ್ಮವನ್ನು ತಾಳಿದ್ದಾರೆ. ಆ 6 ದೇವರುಗಳು ಯಾರು?

ದಂತಕಥೆಯ ಪ್ರಕಾರ, ಪುರಾಣಗಳಲ್ಲಿ ಸಾಗರವನ್ನು ಮಥಿಸುವ ಪ್ರಕ್ರಿಯೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಬ್ರಹ್ಮಾಂಡದ ಸೃಷ್ಟಿಯನ್ನು ಸಂಘಟಿಸಲು ಸಾಗರ ಮಂಥನದ ಸಂಪೂರ್ಣ ಪ್ರಕ್ರಿಯೆಯನ್ನು ಮಾಡಲಾಗಿದೆ ಎನ್ನುವ ನಂಬಿಕೆಯಿದೆ. ಅದಕ್ಕಾಗಿಯೇ ಬ್ರಹ್ಮಾಂಡದ ಸೃಷ್ಟಿಯಲ್ಲಿ ಸಾಗರ ಮಂಥನವು ವಿಶೇಷ ಕೊಡುಗೆಯನ್ನು ನೀಡಿದೆ ಎಂದು ಹೇಳಲಾಗುತ್ತದೆ. ವಿವಿಧ ಪುರಾಣಗಳು ಸಮುದ್ರದ ಮಂಥನದಿಂದ ಉತ್ಪತ್ತಿಯಾಗುವ ವಿಭಿನ್ನ ಸಂಖ್ಯೆಯ ರತ್ನವನ್ನು ಉಲ್ಲೇಖಿಸುತ್ತವೆ. ಈ ಸಂಖ್ಯೆ ಒಂಬತ್ತರಿಂದ ಹದಿನಾಲ್ಕರವರೆಗೆ ಇರುತ್ತದೆ. ಸಮುದ್ರ ಮಂಥನದಲ್ಲಿ ಪ್ರಚೋಧಿಸಿದ ರತ್ನಗಳನ್ನು ಹೊರತುಪಡಿಸಿ ಯಾವೆಲ್ಲಾ ದೇವರುಗಳು ಪ್ರಚೋಧಿಸಿದ್ದರು? ದೇವಾನುದೇವತೆಗಳು ಸಮುದ್ರ ಮಂಥನ ಸಮಯದಲ್ಲಿ ಹೊರಹೊಮ್ಮಿದವರು.

ಲಕ್ಷ್ಮಿಯ ಹುಟ್ಟಿಗೆ ನಿಜವಾದ ಕಾರಣ

ಲಕ್ಷಿ ದೇವಿ ಜನಿಸಿದ್ದು ಹೇಗೆ? ಸಮುದ್ರ ಮಂಥನದಲ್ಲಿ ಲಕ್ಷ್ಮೀದೇವಿಯ ಜನನ ಹೇಗಾಯಿತು?

ಇಂದ್ರನು ಹೆಮ್ಮೆಯಿಂದ ಬೀಗುತ್ತಾ ಹೂವಿನ ಹಾರವನ್ನು ತನ್ನ ಐರಾವತ ಆನೆಯ ಸೊಂಡಿಲಿನ ಮೇಲಿಟ್ಟನು. ಆನೆಗೆ ಆ ಹೂವಿನ ಹಾರದಿಂದ ಹೊರಹೊಮ್ಮಿದ ಸುಮಾಸನೆಯು ಕಿರಿಕಿರಿಯನ್ನುಂಟು ಮಾಡುತ್ತದೆ ಹಾಗಾಗಿ ಆನೆ ತನ್ನ ಸೊಂಡಿಲಿನಲ್ಲಿದ್ದ ಹೂವಿನ ಹಾರವನ್ನು ನೆಲಕ್ಕೆ ಹಾಕುತ್ತದೆ. ಇದರಿಂದ ಕೋಪಗೊಂಡ ದುರ್ವಾಸ ಮುನಿಗಳು ಇಂದ್ರನು ತನಗೆ ಅವಮಾನ ಮಾಡಿದನೆಂದು ತಿಳಿದು ಇಂದ್ರ ಸೇರಿದಂತೆ ದೇವಲೋಕದಲ್ಲಿನ ಎಲ್ಲಾ ದೇವತೆಗಳ ಶಕ್ತಿ, ಸಾಮರ್ಥ್ಯ ಹಾಗೂ ವರಗಳು ನಾಶವಾಗಲಿ ಎಂದು ಶಾಪವನ್ನ ನೀಡಿದರು. ದುರ್ವಾಸ ಮುನಿಯ ಶಾಪದಿಂದಾಗಿ ಲಕ್ಷ್ಮಿ ದೇವಿಯು ಸ್ವರ್ಗವನ್ನು ಬಿಟ್ಟು ಹೋಗುತ್ತಾಳೆ.

ನಂತರ ದೇವರುಗಳು ಅಸುರರೊಂದಿಗೆ ಯುದ್ಧದಲ್ಲಿ ಸೋಲನಪ್ಪಿದರು. ಅಸುರರರಾಜ ಬಲಿ ಲೋಕವನ್ನು ತನ್ನ ವಶಕ್ಕೆ ತೆಗೆದುಕೊಂಡ. ದೇವರು ವಿಷ್ಣುವಿನ ಮೊರೆಹೋದರು. ವಿಷ್ಣು ರಾಜತಾಂತ್ರಿಕತೆಯಿಂದ ಅಸುರರೊಡನೆ ವ್ಯವಹರಿಸಲು ಹೇಳಿದ. ದೇವರು ಅಸುರರೊಂದಿಗೆ ಒಪ್ಪಂದ ಮಾಡಿಕೊಂಡು ಸಮುದ್ರವನ್ನು ಅಮೃತಕ್ಕಾಗಿ ಕಡೆದು ಅದನ್ನು ತಮಲ್ಲಿ ಹಂಚಿಕೊಳ್ಳಲು ಒಪ್ಪಿಕೊಂಡರು. ಆದರೆ ಅಮೃತವು ದೇವತೆಗಳಿಗೆ ಮಾತ್ರ ದಕ್ಕುವಂತೆ ಮಾಡುವುದಾಗಿ ವಿಷ್ಣು ದೇವತೆಗಳಿಗೆ ಹೇಳಿದ.

ಹೀಗೆ ಎಲ್ಲ ರೀತಿಯ ಗಿಡಮೂಲಿಕೆಯನ್ನು ಸಮುದ್ರದಲ್ಲಿ ಹಾಕಲಾಯಿತು ಹಾಗೂ ಹದಿನಾಲ್ಕು ರತ್ನಗಳು ಸಮುದ್ರದಿಂದ ಹೊರಬಂದವು, ಇದನ್ನು ದೇವತೆಗಳು ಹಾಗು ಅಸುರರು ಹಂಚಿಕೊಂಡರು.

ದೇವತೆಗಳು ಹಾಗೂ ಅಸುರರು ಸಮುದ್ರಮಂಥನ ಮಾಡುವಾಗ, ಒಂದು ಕೊಡ ವಿಷವು , ಹಾಲಾಹಲ, ಸಮುದ್ರದಿಂದ ಹೊರಬಂತು. ಇದರಿಂದ ದೇವತೆಗಳು ಹಾಗೂ ಅಸುರರು ಭಯಭೀತರಾದರು, ಏಕೆಂದರೆ ಈ ವಿಷವು ಸೃಷ್ಟಿಯನ್ನೇ ನಾಶ ಮಾಡುವಷ್ಟು ಪ್ರಭಾವಶಾಲಿ. ವಿಷ್ಣುವಿನ ಸಲಹೆಮೇಲೆ, ದೇವತೆಗಳು ಶಿವನ ಬಳಿ ರಕ್ಷಣೆ ಹಾಗೂ ಸಹಾಯಕೇಳಲು ಹೋದರು. ಜೀವಕೋಟಿಯ ಮೇಲಿನ ಅನುಕಂಪದಿಂದ ಶಿವ ವಿಷವನ್ನು ನುಂಗಿ ತನ್ನ ಕಂಠದಲ್ಲಿ ಹಿಡಿದಿಟ್ಟ. ಇದು ಎಷ್ಟು ತೀಕ್ಷ್ಣವಾದ ವಿಷವೆಂದರೆ ಶಿವನ ಕಂಠವು ನೀಲಿಯಾಗಿ ಹೋಯಿತು.

ಕ್ಷೀರಸಾಗರದ ಮಂಥನ ಒಂದು ಸುದೀರ್ಘವಾದ ಪ್ರಕ್ರಿಯೆ.  ಶನಿಯು ಇದರ ಮುಂದಾಳತ್ವ ವಹಿಸುತ್ತಾನೆ. ಕಡೆಗೋಲಾಗಿ ಮಂದರಾಚಲವನ್ನೂ, ಹಗ್ಗವಾಗಿ ಸರ್ಪಗಳ ರಾಜ ವಾಸುಕಿಯನ್ನೂ ಬಳಸಲಾಯಿತು. ದೇವತೆಗಳು ಹಾವಿನ ಬಾಲವನ್ನು ಮತ್ತು ಅಸುರರು ಹಾವಿನ ಹೆಡೆಯನ್ನು ಹಿಡಿದರು. ಹಾವನ್ನು ಒಮ್ಮೆ ಅಸುರರು ಒಮ್ಮೆ ದೇವತೆಗಳು ಎಳೆದರು. ಇದರಿಂದ ಬೆಟ್ಟವು ತಿರುಗತೊಡಗಿತು. ಸಮುದ್ರಮಂಥನ ಪ್ರಾರಂಭವಾಯಿತು. ಆದರೆ, ಬೆಟ್ಟವು ಸಾಗರದಲ್ಲಿ ಕುಸಿಯತೊಡಗಿತು. ವಿಷ್ಣು ಒಂದು ಆಮೆಯಾಗಿ ತನ್ನ ಎರಡನೇ ಅವತಾರವಾದ ಕೂರ್ಮನ ಅವತಾರ ತಾಳಿ ತನ್ನ ಬೆನ್ನಿನ ಮೇಲೆ ಬೆಟ್ಟವನ್ನು ಹೊತ್ತನು.

ಸಮುದ್ರ ಮಂಥನದಿಂದ ಬಂದ ರತ್ನಗಳು

ಹಾಲಾಹಲ, ಶಿವನು ನುಂಗಿದ ವಿಷ

ವರುನಿ ಅಥವಾ ಸುರ, ಮದ್ಯದ ದೇವತೆ. ಇವನ್ನು ದೇವತೆಗಳು ಕರೆದುಕೊಂಡಿದರಿಂದ, ಅವರನ್ನು ಸುರರೆಂದು ಹಾಗು ಇತರರನ್ನು ಅಸುರರೆಂದು ಕರೆಯಲಾಗುತ್ತದೆ.

ಉಚ್ಹೈಶ್ರವಸ್ಸು, 

ಅತಿಶ್ರೇಷ್ಠವಾದ ೭-ತಲೆಯುಳ್ಳ ಕುದರೆ

ಕೌಸ್ತುಭ, ಜಗತ್ತಿನ ಅತಿಶ್ರೇಷ್ಠ ರತ್ನಾಭರಣ, ಇದನ್ನು ವಿಷ್ಣು ಧರಿಸುತ್ತಾನೆ.

ಚಂದ್ರ

ಲಕ್ಷ್ಮಿ, ಭಾಗ್ಯ ಹಾಗು ಸಂಪತ್ತಿನ ದೇವತೆ -ವಿಷ್ಣುವಿನ ಪತ್ನಿ

ಅಪ್ಸರೆಯರು,ರಂಭಾ, ಮೇನಕ, ಪುನ್ಜಿಕಸ್ಥಳ ಇತರರು

ಕಾಮಧೇನು ಅಥವಾ ಸುರಭಿ, ಕೋರಿದುದನ್ನು ನೀಡುವ ಹಸು.

ಪಾರಿಜಾತ, ಅತಿಶ್ರೇಷ್ಠವಾದ ಹೂವಿನ ಮರ. ಇದರ ಮೊಗ್ಗು ಎಂದಿಗೂ ಬಾಡುವುದಿಲ್ಲ, ಇದನ್ನು ಕಲ್ಪವೃಕ್ಷದೊಂದಿಗೆ ಗುರುತಿಸಲಾಗುತ್ತದೆ.

ಐರಾವತ, ಇಂದ್ರನ ಆನೆ

ಧನ್ವಂತರಿ, ದೇವತೆಗಳ ವೈದ್ಯ ಅಮೃತದೊಂದಿಗೆ.

ಶಾರ್ಙ್ಗ,ವಿಷ್ಣುವಿನ ಬಿಲ್ಲು

ಶಂಖ ವಿಷ್ಣುವಿನ ಶಂಖ

ಜ್ಯೇಷ್ಠಾ -ದೌರ್ಭಾಗ್ಯದ ದೇವತೆ

ವರುಣನು ತೆಗೆದುಕೊಂಡ ಕೊಡೆ

ಅದಿತಿಯು ತನ್ನ ಮಗನಾದ ಇಂದ್ರನಿಗೆ ಕೊಟ್ಟ 

ಕಿವಿಯೋಲೆ

ತುಳಸಿ ಗಿಡ

ನಿದ್ರಾ ಅಥವಾ ಮೈಗಳ್ಳತನ

ಕೊನೆಯಲ್ಲಿ , ಧನ್ವಂತರಿ, ಸ್ವರ್ಗಲೋಕದ ವೈದ್ಯ, ಅಮೃತ ಉಳ್ಳ ಕೊಡದೊಂದಿಗೆ ಹೊರಬಂದ. ದೇವತೆಗಳು ಹಾಗು ಅಸುರರ ನಡುವೆ ಅಮೃತಕ್ಕಾಗಿ ಘೋರ ಯುದ್ಧವೇ ನಡೆಯಿತು.

ಹೀಗೆ ಸಮುದ್ರ ಮಂಥನದಿಂದ ಶ್ರೀಲಕ್ಷ್ಮೀಯ ಜನನ ವಾಯಿತು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

One Comment

ಗಾನಕೋಗಿಲೆ ಲತಾ ಮಂಗೇಷ್ಕರ್

ಗಾನಕೋಗಿಲೆ ಲತಾ ಮಂಗೇಷ್ಕರ್

ಅಣಬೆ (ಮಶ್ರೂಮ್) ಮಾಂಸಾಹಾರ ಅಥವಾ ಸಸ್ಯಾಹಾರ ಯಾವುದಕ್ಕೆ ಸೇರಿರುವುದು?

ಅಣಬೆ (ಮಶ್ರೂಮ್) ಮಾಂಸಾಹಾರ ಅಥವಾ ಸಸ್ಯಾಹಾರ ಯಾವುದಕ್ಕೆ ಸೇರಿರುವುದು?